Peak Bengaluru: ಒಂದೇ ಆಟೋ ಒಬ್ಬನೇ ಡ್ರೈವರ್, ಬೇರೆ ಬೇರೆ ಆ್ಯಪ್‌ನಲ್ಲಿ ವಿಭಿನ್ನ ಸ್ಥಳಗಳಿಗೆ ಆಟೋ ಬುಕ್

By Vinutha Perla  |  First Published Aug 10, 2023, 11:03 AM IST

ಬೆಂಗಳೂರಿನಲ್ಲಿ ಆಟೋಗಳಿಂದ ಆಗೋ ರಗಳೆಗಳು ಒಂದಾ ಎರಡಾ..ಎಲ್ಲಿಗೆ ಕೇಳಿದ್ರೂ ಬರಲ್ಲ, ಅಡ್ರೆಸ್ ಕೊಟ್ರೂ ಸುತ್ತಿ ಬಳಸಿ ಹೋಗ್ತಾರೆ, ಡಬಲ್ ಜಾರ್ಜ್ ಮಾಡ್ತಾರೆ ಹೀಗೆ ನಾನಾ ರೀತಿಯ ದೂರುಗಳಿವೆ. ಇದೆಲ್ಲದರ ಮಧ್ಯೆ ಇಲ್ಲೊಬ್ಬ ಆಟೋ ಡ್ರೈವರ್‌ ಒಂದೇ ಸಮಯಕ್ಕೆ ಬೇರೆಬೇರೆ ಸ್ಥಳಗಳಲ್ಲಿ ಆಟೋ ಬುಕ್ ಮಾಡಿರೋ ವಿಚಾರ ವೈರಲ್ ಆಗ್ತಿದೆ. 


ಭಾರತದ ಯಾವುದೇ ಪ್ರಮುಖ ನಗರದಲ್ಲಿ ಪೀಕ್ ಅವರ್‌ನಲ್ಲಿ ಕ್ಯಾಬ್ ಅಥವಾ ಆಟೋವನ್ನು ಹುಡುಕುವುದು ಕಷ್ಟಕರವಾದ ಕೆಲಸಗಳಲ್ಲಿ ಒಂದಾಗಿದೆ. ಡಬಲ್‌ ಚಾರ್ಜ್‌ ಮತ್ತು ಸುದೀರ್ಘವಾದ ವೈಟಿಂಗ್ ಟೈಮ್ ಎಂಥವರಲ್ಲೂ ಸಿಟ್ಟು ತರಿಸಿ ಬಿಡುತ್ತದೆ. ಆಟೋ, ಕ್ಯಾಬ್ ಸವಾರರು ಸಹ ಈ ಸಂದರ್ಭದಲ್ಲಿ ಸಮಯ ನೋಡಿ ಸರಿಯಾಗಿ ದುಡ್ಡು ಮಾಡ್ಬಹುದು ಎಂದು ಅಂದ್ಕೊಳ್ತಾರೆ. ಇದೆಲ್ಲದರ ಮಧ್ಯೆ ಇಲ್ಲೊಬ್ಬ ಆಟೋ ಡ್ರೈವರ್‌ ಒಂದೇ ಸಮಯಕ್ಕೆ ಬೇರೆಬೇರೆ ಸ್ಥಳಗಳಲ್ಲಿ ಆಟೋ ಬುಕ್ ಮಾಡಿರೋ ವಿಚಾರ ವೈರಲ್ ಆಗ್ತಿದೆ. ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಟ್ವಿಟರ್‌ ಬಳಕೆದಾರರೊಬ್ಬರು ಇತ್ತೀಚೆಗೆ ಒಂದೇ ಆಟೋ ಡ್ರೈವರ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಚಾಲಕ ಎರಡು ವಿಭಿನ್ನ ಅಪ್ಲಿಕೇಶನ್‌ಗಳಲ್ಲಿ ಎರಡು ವಿಭಿನ್ನ ರೈಡ್‌ಗಳನ್ನು ಆಸೆಪ್ಟ್ ಮಾಡಿರೋದನ್ನು ನೋಡಬಹುದು. 

Harsh.fig ಎಂಬ X (Twitter) ಖಾತೆದಾರರು, ಆಟೋ ಚಾಲಕರೊಬ್ಬರು (Auto driver) ಒಂದೇ ಸಮಯಕ್ಕೆ ಎರಡು ವಿಭಿನ್ನ ಆಪ್​​ಗಳಲ್ಲಿ ಎರಡು ವಿಭಿನ್ನ ಸ್ಥಳಗಳಲ್ಲಿ ಮತ್ತು ಎರಡು ಪ್ರತ್ಯೇಕ ಮೊಬೈಲ್​​ಗಳಲ್ಲಿ ಆಟೋ ರೈಡ್​ ಸ್ವೀಕರಿಸಿರುವ ಸ್ಕ್ರೀನ್ ಶಾಟ್​ ಹಂಚಿಕೊಂಡಿದ್ದಾರೆ. ಇದು ಎರಡೂ ಅಪ್ಲಿಕೇಶನ್‌ಗಳಲ್ಲಿ ಹೆಸರು (Name) ಮತ್ತು ಕಾರ್ ಸಂಖ್ಯೆಯಂತಹ ಅಂಶಗಳು ಒಂದೇ ಆಗಿವೆ ಎಂದು ತೋರಿಸಿದೆ. ಸ್ಕ್ರೀನ್‌ಶಾಟ್‌ಗಳಲ್ಲಿ, ಒಂದು ಸವಾರಿ ಎರಡು ನಿಮಿಷಗಳ ದೂರದಲ್ಲಿದ್ದರೆ ಇನ್ನೊಂದು ಸವಾರಿ (Raid) ನಾಲ್ಕು ನಿಮಿಷಗಳ ದೂರದಲ್ಲಿದೆ ಎಂದು ನೋಡಬಹುದು. 

Tap to resize

Latest Videos

2.5 ಕಿಮೀ ದೂರಕ್ಕೆ ₹400 ಕೇಳಿದ ಆಟೋ ಡ್ರೈವರ್; ಅಷ್ಟು ದುಡ್ಡು ಆಗಲ್ಲ ಅಂದಿದ್ದಕ್ಕೆ ಯುವಕನ ಮೊಬೈಲ್ ಕಸಿದು ಪರಾರಿ!

ಎರಡು ವಿಭಿನ್ನ ಫೋನ್‌ಗಳಲ್ಲಿ ಬುಕ್ಕಿಂಗ್ ಸ್ವೀಕರಿಸಿದ ಒಬ್ಬನೇ ಆಟೋ ಚಾಲಕ 
ಎರಡು ವಿಭಿನ್ನ ಸ್ಥಳಗಳಲ್ಲಿ, ಎರಡು ವಿಭಿನ್ನ ಅಪ್ಲಿಕೇಶನ್‌ಗಳಲ್ಲಿ, ಎರಡು ವಿಭಿನ್ನ ಫೋನ್‌ಗಳಲ್ಲಿ ಒಬ್ಬನೇ ಆಟೋ ಚಾಲಕ ಈ ರೈಡ್​ ಅನ್ನು ಸ್ವೀಕರಿಸಿದ್ದು ಹೇಗೆ? ಎಂದು ನೆಟ್ಟಿಗರು ಅಚ್ಚರಿ ಪಟ್ಟುಕೊಳ್ಳುತ್ತಿದ್ದಾರೆ, ದಶರಥ ಎಂದು ರೈಡರ್​​ನ ಹೆಸರನ್ನು ಮತ್ತು ಒಂದೇ ಆಟೋ ನಂಬರ್​ ಅನ್ನು ಈ ಆಪ್​ಗಳು ತೋರಿಸಿವೆ.

ಆಗಸ್ಟ್‌ 6ರಂದು ಹಂಚಿಕೊಂಡ ಈ ಪೋಸ್ಟ್​ ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ. ಇಲ್ಲಿಯ ತನಕ 380ಕ್ಕೂ ಹೆಚ್ಚು ಮಂದಿ ಈ ಪೋಸ್ಟ್‌ನ್ನು ನೋಡಿದ್ದಾರೆ. ಒಬ್ಬ ಬಳಕೆದಾರರು (User), 'ದಶರಥ ಬೇಗ ಶ್ರೀಮಂತನಾಗಲು ಹೊರಟಿರುವಂತೆ ಕಾಣುತ್ತಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಆಮೇಲೆ ಏನಾಯಿತು? ಈ ವಿಷಯವಾಗಿ ನೀವು ಅವರನ್ನು ವಿಚಾರಿಸಿದ್ರಾ, ಅವರ ಆಟೋದಲ್ಲಿ ಪ್ರಯಾಣಿಸಿದ್ರಾ, ಹಣವನ್ನು ಹೇಗೆ ಪಾವತಿ ಮಾಡಿದ್ದೀರಿ' ಎಂಬುದಾಗಿ ಪ್ರಶ್ನಿಸಿದರು. 

ಬೆಂಗಳೂರಿನ ಅಟೋ ಡ್ರೈವರ್ ಯೂಟ್ಯೂಬ್ ಚಾನೆಲ್ ನೋಡಿದ್ದೀರಾ? ಇದರಲ್ಲಿವೆ ಆರ್ಥಿಕ ಸಲಹೆಯ100ಕ್ಕೂ ಹೆಚ್ಚು ವಿಡಿಯೋಗಳು

ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು, ಇತ್ತೀಚೆಗೆ ನಗರದಲ್ಲಿ ಆಟೋವನ್ನು ಹೇಗೆ ಬುಕ್ ಮಾಡಿದ್ದೆ, ಮತ್ತು ಚಾಲಕ ಯಾವ ರೀತಿ ತೊಂದರೆ ನೀಡಿದ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಟೋ ಬುಕ್ ಮಾಡಿದಾಗ ಚಾಲಕ ಅದನ್ನು ರದ್ದುಗೊಳಿಸಿದನು. ಎಕ್ಸ್ಟ್ರಾ 100 ರೂಪಾಯಿ ಹೆಚ್ಚುವರಿ ಪಾವತಿಸಿದರೆ ಮಾತ್ರ ಕೊಂಡೊಯ್ಯುವುದಾಗಿ ತಿಳಿಸಿದನು ಎಂದು ತಿಳಿಸಿದ್ದಾರೆ. ಅದೇನೆ ಇರ್ಲಿ, ಬೆಂಗಳೂರು ಆಟೋ ಚಾಲಕರು, ಇಂಥಾ ಎಡವಟ್ಟಿನಿಂದಲೇ ಆಗಾಗ ಸುದ್ದಿಯಲ್ಲಿರೋದಂತೂ ನಿಜ.

2 different locations
2 different apps
2 different phones

Same auto
Same driver much? pic.twitter.com/JhhoBg7c2J

— harsh.fig 🐈 🍣 (@design_melon_)
click me!