ಮುಘಲ್ ಚಕ್ರವರ್ತಿಯ ಪ್ರೀತಿಯ ಪತ್ನಿ ಮುಮ್ತಾಜ್ ತನ್ನ 14ನೇ ಪ್ರಸವದಲ್ಲಿ ಮೃತಪಟ್ಟಾಗ, ಮಗಳನ್ನೇ ಮದುವೆಯಾದ ಷಹಜಹಾನ್ ಕಟ್ಟಿರುವುದಾಗಿ ಹೇಳಲಾಗ್ತಿರೋ ತಾಜ್‌ಮಹಲ್ ನಿರ್ಮಾಣ ಆಗಿದ್ದು ಹೇಗೆ? ಎಐ ವಿಡಿಯೋ ವೈರಲ್
ಇದ್ದರೆ ಷಹಜಹಾನ್ನಂಥ ಗಂಡ ಇರಬೇಕು, ಪತ್ನಿಗಾಗಿ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್ ಕಟ್ಟಿದ ಎಂದು ಬಹುತೇಕ ಮಂದಿ ಅಂದುಕೊಂಡಿರುತ್ತಾರೆ. ಇದು ಪ್ರೀತಿಯ ದ್ಯೋತಕ, ಮುಘಲ್ ಚಕ್ರವರ್ತಿಯಾಗಿದ್ದ ಷಹಜಹಾನ್ ತನ್ನ ಮೃತ ಪತ್ನಿಯ ನೆನಪಿಗಾಗಿ ನಿರ್ಮಿಸಿರುವ ಪ್ರೇಮದ ಕೊಡುಗೆ ಇದು ಎಂದೆಲ್ಲಾ ಅಂದಿನಿಂದ ಇಂದಿನವರೆಗೂ ಓದುತ್ತಲೇ ಬಂದಿದ್ದೇವೆ, ಮುಂದಿನ ಮಕ್ಕಳೂ ಓದುತ್ತಲೇ ಇರುತ್ತಾರೆ ಎನ್ನಿ. 1632ರಲ್ಲಿ ಆರಂಭವಾಗಿದ್ದ ತಾಜ್‌ಮಹಲ್ 1653 ರಲ್ಲಿ ಪೂರ್ಣಗೊಂಡಿತು ಎನ್ನುತ್ತದೆ ಇತಿಹಾಸ. ಆದರೆ ತಾಜ್‌ಮಹಲ್ ಕುರಿತಾಗಿ ಇಂದಿಗೂ ಬಹಳ ಸಂದೇಹಗಳೇ ಉಳಿದುಕೊಂಡಿದ್ದು, ಇವು ಬಹಳ ಚರ್ಚೆಗೂ ಕಾರಣವಾಗಿದೆ. ಇದು 1632ಕ್ಕಿಂತಲೂ ಮುಂಚಿನವಾಗಿಯೇ ಇದ್ದ ದೇಗುಲ ಎಂಬೆಲ್ಲಾ ವಾದವೂ ಇದೆ.
ಅದೇನೇ ಇರಲಿ ಬಿಡಿ. ಷಹಜಹಾನ್ ಎಂದರೆ ಅದ್ಭುತ ಪ್ರೇಮಿ, ಪತ್ನಿಯನ್ನು ಅದೆಷ್ಟು ಪ್ರೀತಿಸುತ್ತಿದ್ದ ಎನ್ನುವ ಮಾತು ಕೇಳುತ್ತಲೇ ಬಂದಿದ್ದೇವೆ. ಬಹುಶಃ ನಮ್ಮ ಪಠ್ಯಪುಸ್ತಕದಲ್ಲಿ ಮುದ್ರಿಸದ ಇನ್ನೊಂದು ಸತ್ಯವೂ ಒಂದನ್ನು ಕೆಲವರು ಬಹಿರಂಗಗೊಳಿಸಿದ್ದಾರೆ. ಅದೇನೆಂದರೆ, ಷಹಜಹಾನ್ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಎನ್ನಲಾದ ಆತನ ಪತ್ನಿ ಮುಮ್ತಾಜ್ ಮೃತಪಟ್ಟಿದ್ದು, 14ನೇ ಮಗುವಿಗೆ ಜನ್ಮ ನೀಡುವಾಗ ಎನ್ನುವುದು. ಆಕೆ ಜೂನ್ 17, 1631ರಂದು ಮೃತಪಟ್ಟಾಗ ಅದಾಗಲೇ ಆಕೆ 14 ಮಕ್ಕಳ ಅಮ್ಮನಾಗಿದ್ದಳು. ಇನ್ನೂ ಒಂದು ಕುತೂಹಲದ ವಿಷಯ ಏನೆಂದರೆ, ಪತ್ನಿಯನ್ನು ಅದೆಷ್ಟರಮಟ್ಟಿಗೆ ಷಹಜಹಾನ್ ಪ್ರೀತಿಸುತ್ತಿದ್ದ ಎಂದರೆ, ಆಕೆಯ ನೆನಪಿಗಾಗಿ ಆಕೆಯನ್ನೇ ಹೋಲುವ ಕಾರಣದಿಂದ ತನ್ನ 17 ವರ್ಷದ ಸ್ವಂತ ಮಗಳು ಜಹಾನಾಳನ್ನೇ ಮದುವೆಯಾಗಿದ್ದ. ಈಕೆ ನೋಡಲು ಥೇಟ್ ಮುಮ್ತಾಜ್ ರೀತಿಯಲ್ಲಿ ಇದ್ದುದರಿಂದ ಆಕೆಯನ್ನೇ ವರಿಸಿದ ಎಂದು ಹೇಳಲಾಗುತ್ತದೆ. ಆದರೆ ಈ ಸುದ್ದಿ ಹೊರಗೆ ಹೋಗದಂತೆ ಆತ ನೋಡಕೊಂಡ, ಇದೇ ಕಾರಣಕ್ಕೆ ಯಾರಿಗೂ ಗೊತ್ತಾಗಬಾರದು ಎಂದು ಆಕೆಯ ಹೆಸರನ್ನು ಪಾದ್ಶಾ ಬೇಗಂ ಎಂದು ಇರಿಸಿದ ಎಂದು ಶಾಲಾ ಪಠ್ಯಪುಸ್ತಕ ಹೊರತಾದ ಇತಿಹಾಸ ತಿಳಿಸುತ್ತದೆ.
ಈ ದಿನಾಂಕದಂದು ಹುಟ್ಟಿದವರಿಗೆ ಎರಡು ಮದುವೆ ಇಲ್ಲವೇ ಮತ್ತೊಂದು ಸಂಬಂಧ ಹೆಚ್ಚು! ಯಾವುದದು ಸಂಖ್ಯೆ?
ಇದು ಒಂದೆಡೆಯಾದರೆ, ಇದೀಗ ತಂತ್ರಜ್ಞಾನದ ಯುಗ. ಆದ್ದರಿಂದ ಜಗತ್ತಿನ ಅದ್ಭುತಗಳಲ್ಲಿ ಒಂದಾಗಿರುವ ಈ ತಾಜ್‌ಮಹಲ್ ನಿರ್ಮಿಸಿದ್ದು ಹೇಗೆ? ಅದಕ್ಕೆ ಪಟ್ಟ ಕಷ್ಟ ಎಂಥದ್ದು ಎಂಬುದನ್ನು ತಿಳಿಸುವ ಕೃತಕ ಬುದ್ಧಿಮತ್ತೆಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 1632ರಿಂದ 1653 ರವರೆಗೆ ನಡೆದ ನಿರ್ಮಾಣ ಕಾರ್ಯ ಹೇಗಿತ್ತು ಎನ್ನುವ ಬಗ್ಗೆ ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಆನೆಗಳ ಸಹಾಯದಿಂದ, ಕಟ್ಟಡ ಸಾಮಗ್ರಿಗಳನ್ನು ತಂದು ಹೇಗೆ ಅದನ್ನು ನಿರ್ಮಾಣ ಮಾಡಲಾಗಿತ್ತು ಎನ್ನುವುದನ್ನು ತೋರಿಸಲಾಗಿದೆ.
ಅಂದಹಾಗೆ ತಾಜ್‌ಮಹಲ್ ಬಗ್ಗೆ ಇನ್ನೂ ಒಂದು ಕುತೂಹಲದ ವಿಷಯವಿದೆ. ಅದೇನೆಂದರೆ, ಅಂದಿನ ಬ್ರಿಟಿಷ್ ಸರ್ಕಾರ 1831ರಲ್ಲಿ ತಾಜ್‌ಮಹಲ್‌ನ ಹಲವು ಭಾಗಗಳನ್ನು ಮಾರಲು ನಿರ್ಧಾರ ಮಾಡಿತ್ತು ಎನ್ನುವುದು. ಗವರ್ನರ್ ಆಗಿದ್ದ ಲಾರ್ಡ್ ವಿಲಿಯಮ್ ಬೆಂಟಿಕ್ ಈ ದುಸ್ಸಾಹಸಕ್ಕೆ ಕೈಹಾಕಿದ್ದ. ಅದಕ್ಕಾಗಿ ಮಾರ್ಬಲ್ಗಳನ್ನೂ ಕಿತ್ತಲಾಗಿತ್ತು ಎನ್ನಲಾಗುತ್ತಿದೆ. ಈಗಲೂ ತಾಜ್ ಮಹಲ್ನಲ್ಲಿ ಧ್ವಂಸಗೊಂಡಿರುವ ಕೆಲವು ಮಾರ್ಬಲ್ಗಳಿದ್ದು, ಇದು ಅಂದು ಹರಾಜಿಗೆ ಇಡಲು ಮಾಡಿದ ಕುಕೃತ್ಯ ಎನ್ನಲಾಗುತ್ತಿದೆ. ಇದನ್ನುಲಕ್ಷ್ಮೀ ಚಂದ್ ಎಂಬಾತ ಕೊಂಡುಕೊಳ್ಳಲು ಮುಂದಾಗಿದ್ದ. ಮೊದಲಿಗೆ 2 ಲಕ್ಷಕ್ಕೆ ಬಿಡ್ ಮಾಡಲಾಗಿತ್ತು. ಆದರೆ ಬೆಲೆ ಕಡಿಮೆ ಎಂದಾಗ ಏಳು ಲಕ್ಷಕ್ಕೆ ಕೊಳ್ಳಲು ಮುಂಗಿದ್ದ (ಇದು 1831 ಏಳು ಲಕ್ಷ ರೂಪಾಯಿ!) ಆದರೆ ಕೊನೆಗೆ ಅಲ್ಲಿ ಕೆಲವರಿಂದ ವಿರೋಧ ವ್ಯಕ್ತವಾಗಿ ಸ್ಥಗಿತಗೊಳಿಸಲಾಗಿತ್ತು ಎಂದು ಹೇಳಲಾಗುತ್ತದೆ.
ಮನೆಕೆಲಸಕ್ಕೆ ಜನ ಸಿಕ್ತಿಲ್ಲಾ ಎನ್ನೋ ಕೊರಗಾ? 15 ನಿಮಿಷದಲ್ಲೇ ಮನೆಬಾಗಿಲಿಗೆ- ಗಂಟೆಗೆ ಕೇವಲ 49 ರೂ!