
ಟೋಕಿಯೋ(ಸೆ.03): ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಳೆದೆರಡು ದಿನ ಪದಕ ಗೆಲ್ಲಲು ವಿಫವಾಗಿದ್ದ ಭಾರತ, ಇದೀಗ ಶುಕ್ರವಾರ ಮುಂಜಾನೆ T64 ಹೈಜಂಪ್ ಸ್ಪರ್ಧೆಯಲ್ಲಿ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಜಯಿಸಿದ್ದಾರೆ. ಇದರೊಂದಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಕಳೆದ 11 ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಭಾರತ 11 ಪದಕಗಳನ್ನು ಜಯಿಸಿತ್ತು, ಇದೀಗ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವೊಂದರಲ್ಲಿ ಭಾರತ 11 ಪದಕಗಳನ್ನು ಜಯಿಸಿ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿದೆ.
ವಿಶ್ವದ ಮೂರನೇ ಶ್ರೇಯಾಂಕಿತ ಹೈಜಂಪ್ ಪ್ಯಾರಾಥ್ಲೀಟ್ ಪ್ರವೀಣ್ ಕುಮಾರ್ 2.07 ಮೀಟರ್ ಹೈಜಂಪ್ ಮಾಡುವ ಮೂಲಕ ಏಷ್ಯನ್ ದಾಖಲೆ ನಿರ್ಮಿಸುವುದರ ಜತೆಗೆ ದೇಶಕ್ಕೆ 11ನೇ ಪದಕದ ಕಾಣಿಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 18 ವರ್ಷದ ಯುವ ಪ್ಯಾರಾಥ್ಲೀಟ್ ಫೈನಲ್‌ನಲ್ಲಿ ಅಸಾಧಾರಣ ಪ್ರದರ್ಶನ ತೋರುವ ಮೂಲಕ ದೇಶದ ಕೀರ್ತಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.
Paralympics ಭಾರತದ ಪಾಲಿಗೆ ಗರಿಗೆದರಿದ ಮತ್ತಷ್ಟು ಪದಕ ನಿರೀಕ್ಷೆ
ಇನ್ನು ಜೋನಾಥನ್ ಎಡ್ವರ್ಡ್ಸ್ 2.10 ಮೀಟರ್ ಹೈಜಂಪ್ ಮಾಡುವ ಮೂಲಕ ಚಿನ್ನದ ಪದಕ ಜಯಿಸಿದ್ದಾರೆ. ಪ್ರವೀಣ್ ಕುಮಾರ್ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.