ಮನು ಭಾಕರ್‌ ಮೈಮೇಲೆ ಇರುವ ರಹಸ್ಯ ಟ್ಯಾಟೂದಲ್ಲಿ ಏನಿದೆ? ಏನು ಅದರರ್ಥ?

Published : Sep 15, 2024, 07:12 PM ISTUpdated : Sep 16, 2024, 07:42 AM IST
ಮನು ಭಾಕರ್‌ ಮೈಮೇಲೆ ಇರುವ ರಹಸ್ಯ ಟ್ಯಾಟೂದಲ್ಲಿ ಏನಿದೆ? ಏನು ಅದರರ್ಥ?

ಸಾರಾಂಶ

ಭಾರತದ ಯುವ ಶೂಟಿಂಗ್ ಸೆನ್ಸೇಶನ್ ಅನು ಭಾಕರ್ ಮೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಎಲ್ಲಿದೆ ಈ ಹಚ್ಚೆ? ಏನಿದರ ಅರ್ಥ? ಇಲ್ಲಿದೆ ನೋಡಿ.  


ಯುವ ಭಾರತೀಯರ ಹೊಸ ನ್ಯಾಷನಲ್‌ ಕ್ರಷ್‌ ಮನು ಭಾಕರ್‌ ಇತ್ತೀಚೆಗೆ ಬೆನ್ನು ತಿರುಗಿಸಿ ಕ್ಯಾಮೆರಾಗೆ ಪೋಸ್‌ ಕೊಟ್ಟಾಗ ಆಕೆ ಹಾಕಿಸಿಕೊಂಡ ಹಚ್ಚೆ ಅಥವಾ ಟ್ಯಾಟೂ ಎಲ್ಲರ ಕಣ್ಣಿಗೆ ಬಿತ್ತು. ಆದರೆ ಕ್ಯಾಮೆರಾ ಜೂಮ್‌ ಮಾಡಿದಾಗಲಷ್ಟೇ ಅದು ವಿವರವಾಗಿ ಕಾಣಿಸುವಂತಿತ್ತು. ವಿಶೇಷ ಅಂದರೆ ಆ ಟ್ಯಾಟೂ ಆಕೆ ನೋಡುವಂತಿಲ್ಲ! ನಾವು ನೋಡಬಹುದಷ್ಟೇ. ಹಾಗಿದ್ದರೆ ಏನದು ಟ್ಯಾಟೂ? ಇದು ಆಕೆಯ ಪರಿಶ್ರಮ ಮತ್ತು ಗೆಲುವಿನ ಜರ್ನಿಯ ಕಥೆಯನ್ನೂ ಹೇಳುವಂತಿದೆ ಎನ್ನಬಹುದು. ಅದು ಅವಳ ಕುತ್ತಿಗೆಯ ಹಿಂಭಾಗದಲ್ಲಿದೆ. ಇಂಗ್ಲಿಷ್‌ನಲ್ಲಿ  "Still I Rise" ಎಂದು ಆಕೆ ಹಚ್ಚೆ ಬರೆಸಿಕೊಂಡಿದ್ದಾಳೆ. ಕ್ರೀಡಾಪಟುವಾಗಿ ಆಕೆಯ ಜರ್ನಿಯನ್ನು ಇದು ಬಿಂಬಿಸುವಂತಿದೆ. 

ಇದೊಂದು ಸ್ಪೂರ್ತಿದಾಯಕ ನುಡಿಗಟ್ಟು. ಮೂಲತಃ ಇದು ಮಾಯಾ ಏಂಜೆಲೋ ಎಂಬ ಆಫ್ರಿಕನ್‌ ಮಹಿಳಾ ಕವಿಯ ಕವಿತೆಯ ಮೊದಲ ಸಾಲು. "ನನ್ನನ್ನು ನೆಲಕ್ಕೆ ಹಾಕಿ ತುಳಿಯಿರಿ ಬೇಕಿದ್ದರೆ, ನಾನು ನೆಲದಿಂದ ಮೇಲೆದ್ದು ಬರುತ್ತೇನೆ" ಎಂಬರ್ಥದ ಸಾಲು ಅದು. 

2021 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಎದುರಿಸಿದ ಸವಾಲಿನ ಕ್ಷಣದ ನಂತರ ಮನುವಿನ ಜೀವನ ಬೇರೆ ದಾರಿ ಕಂಡುಕೊಂಡಿತು. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಕ್ಷಣದಲ್ಲಿ ಆಕೆಯ ಪಿಸ್ತೂಲ್ ಕೈಕೊಟ್ಟಿತು. ಇದು ಅವಳ ಪದಕದ ಭರವಸೆಯನ್ನು ಪುಡಿಮಾಡಿತು. ಮತ್ತು ಟೀಕೆಗಳಿಗೆ ಕಾರಣವಾಯಿತು. ಒತ್ತಡಕ್ಕೆ ಮಣಿಯುವ ಬದಲು ಮನು ಈ ಮಾತುಗಳನ್ನು ಸವಾಲಾಗಿ ಸ್ವೀಕರಿಸಿದಳು. ಟ್ಯಾಟೂ ಬಗ್ಗೆ ಆಕೆ ಹೇಳಿದ್ದು- "ಇವು ಯಾರ ಪದಗಳು ಎಂದು ನನಗೆ ತಿಳಿದಿಲ್ಲ. ಆದರೆ ಈಗ ಅವು ನನ್ನದು" ಎನ್ನುತ್ತಾಳೆ.

ಅಸಂಖ್ಯಾತ ವ್ಯಕ್ತಿಗಳಿಗೆ ಪ್ರೇರಣೆ ನೀಡಿದ ಏಂಜೆಲೋ ಅವರ ಕವಿತೆಯ ಸಾಲುಗಳು ಮನುವಿಗೆ ಭರವಸೆಯ ದಾರಿದೀಪವಾದವು. ಟ್ಯಾಟೂ ತಕ್ಷಣವೇ ಗೋಚರಿಸದ ಕತ್ತಿನ ಹಿಂಭಾಗವನ್ನು ಆರಿಸಿಕೊಂಡು ಜನವರಿ 2022 ರಲ್ಲಿ ಈ ಪದಗಳನ್ನು ಆಕೆ ಶಾಶ್ವತ ಟ್ಯಾಟೂ ಹಾಕಿಸಿಕೊಂಡಳು. ಕತ್ತಿನ ಹಿಂಭಾಗ ಇಟ್ಟುಕೊಂಡದ್ದು ಉದ್ದೇಶಪೂರ್ವಕವಂತೆ. ಯಾಕೆಂದರೆ ಪ್ರತಿದಿನ ತಾನು ಅದನ್ನು ನೋಡಬೇಕಿಲ್ಲ. ಅದು ಯಾವಾಗಲೂ ದೃಷ್ಟಿಯಲ್ಲಿದ್ದರೆ ಅದರ ಶಕ್ತಿಯುತ ಅರ್ಥ ಸವೆದುಹೋಗಬಹುದು ಎಂಬ ಆತಂಕ. ಬದಲಾಗಿ ಇದು ತನ್ನ ಶಕ್ತಿಯ ಮೂಲವಾಗಿ ಕಾರ್ಯನಿರ್ವಹಿಸುವಂತೆ.

ಹಚ್ಚೆ ಹಾಕಿಸಿದ ನಂತರವೂ ಆಕೆ ಕೆಲವು ನಿರಾಶೆಗಳನ್ನು ಎದುರಿಸಿದಳು. ಆಕೆ ಕಟುವಾದ ಟೀಕೆಗಳನ್ನು ಎದುರಿಸಿದಳು. 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯ ರಾಷ್ಟ್ರೀಯ ತಂಡದಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡಳು. ಆದರೆ ಈ ಹಿನ್ನಡೆಗಳು ಅವಳ ಧೈರ್ಯ ಕಸಿಯಲಿಲ್ಲ. ಮನು ಅವುಗಳನ್ನು ಮೀರಿ ಮೇಲೇರಿದಳು. "ಯಶಸ್ಸು ಮತ್ತು ವೈಫಲ್ಯ ಕ್ರೀಡಾಪಟುವಿನ ಜೀವನದ ಭಾಗ. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಸೋಲನ್ನು ಹೇಗೆ ಎದುರಿಸುತ್ತೀರಿ ಮತ್ತು ಹೇಗೆ ಹಿಂತಿರುಗುತ್ತೀರಿ ಎಂಬುದಾಗಿದೆ" ಎಂದು ಸಂದರ್ಶನವೊಂದರಲ್ಲಿ ಹೇಳಿದಳು.

ಇತ್ತೀಚೆಗೆ ಶೂಟರ್ ಮನು ಭಾಕರ್‌ ಅಮಿತಾಭ್ ಬಚ್ಚನ್ ಜೊತೆಗೆ ಜನಪ್ರಿಯ ದೂರದರ್ಶನ ಕಾರ್ಯಕ್ರಮ ‌ʼಕೌನ್ ಬನೇಗಾ ಕರೋಡ್‌ಪತಿʼಯ ಸಂಚಿಕೆಯಲ್ಲಿ ಕಾಣಿಸಿಕೊಂಡಳು. ಕಾರ್ಯಕ್ರಮದಲ್ಲಿ ಆಕೆ ಮತ್ತು ಬಚ್ಚನ್‌ ಮಾತುಕತೆಯ ಕೆಲವು ಗ್ಲಿಂಪ್ಸ್‌ಗಳು ತಮಾಷೆಯಾಗಿದ್ದವು. 

ಕ್ರಿಕೆಟಿಗರನ್ನು ಮೀರಿಸಿದ ನೀರಜ್ ಚೋಪ್ರಾ ಬ್ರ್ಯಾಂಡ್‌ ವ್ಯಾಲ್ಯೂ..! ಮನು ಭಾಕರ್ ಬ್ರ್ಯಾಂಡ್‌ ವ್ಯಾಲ್ಯೂ ಭಾರೀ ಏರಿಕೆ..!
 

ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್‌- 2024ರಲ್ಲಿ ಎರಡು ಕಂಚಿನ ಪದಕ ಗೆದ್ದ ಬಳಿಕ ಒಲಂಪಿಕ್ ಗೇಮ್ಸ್ ಗ್ರಾಮದಿಂದ ಬಂ ಬಳಿಕ ಈಕೆಯನ್ನು ಭಾರತೀಯ ಮಾಧ್ಯಮಗಳು ಮುತ್ತಿಕೊಂಡಿವೆ. ಹಲವಾರು ಸಂದರ್ಶನಗಳಲ್ಲಿ ಆಕೆ ಪಾಲ್ಗೊಂಡಿದ್ದಾಳೆ. ಎಲ್ಲ ಸಂದರ್ಶನಗಳಲ್ಲೂ ಕಾಮನ್ ಆಗಿ ಕೇಳಿರುವ ಪ್ರಶ್ನೆ ಎಂದರೆ ಚಿನ್ನದ ಹುಡುಗ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಜೊತೆ ನಿನ್ನ ಕೆಮಿಸ್ಟ್ರಿ ಏನು ಅನ್ನುವುದು. ಅದಕ್ಕೆ ಕಾರಣ ಮನು ಮತ್ತು ನೀರಜ್ ಮಾತಾಡುತ್ತಾ ಇದ್ದ ವಿಡಿಯೋ ಬಹಿರಂಗ ಆದದ್ದು. ಇಬ್ಬರೂ ಅಥ್ಲೀಟ್‌ಗಳು ಒಲಿಂಪಿಕ್ಸ್ ನಂತರದ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡರು ಮತ್ತು ಅವರ ಆಪ್ತ ಸಂವಾದದ ವೀಡಿಯೊ ತ್ವರಿತವಾಗಿ ವೈರಲ್ ಆಯಿತು. ಅವರಿಬ್ಬರ ನಡುವಿನ ರೊಮ್ಯಾಂಟಿಕ್ ವದಂತಿಗಳನ್ನು ಹುಟ್ಟುಹಾಕಿತು.

Manu Bhaker: ಯಾರ ಜೊತೆಗೆ ಒಂದು ದಿನ ಕಳೆಯೋಕೆ ಇಷ್ಟಪಡ್ತೀರಾ ಎಂದು ಕೇಳಿದ್ದಕ್ಕೆ ಮನು ಭಾಕರ್ ನಾಚಿಕೆಯಿಂದ ಹೇಳಿದ ಹೆಸರು...
 

PREV
Read more Articles on
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ