2036ರ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯಕ್ಕೆ ಭಾರತ ಅಧಿಕೃತವಾಗಿ ಆಸಕ್ತಿ!

By Kannadaprabha News  |  First Published Nov 6, 2024, 9:57 AM IST

2036ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲು ಭಾರತ ಅಧಿಕೃತವಾಗಿ ಆಸಕ್ತಿ ವ್ಯಕ್ತಪಡಿಸಿದೆ.ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ನವದೆಹಲಿ: 2036ರ ಒಲಿಂಪಿಕ್, ಪ್ಯಾರಾಲಿಂಪಿಕ್ ಕ್ರೀಡಾಕೂಟಗಳನ್ನು ಆಯೋಜಿಸಲು ಭಾರತದಿಂದ ಅಧಿಕೃತವಾಗಿ ಆಸಕ್ತಿ ವ್ಯಕ್ತವಾಗಿದೆ. ಕಳೆದೊಂದು ವರ್ಷದಿಂದ ಈ ಬಗ್ಗೆ ಮೌಖಿಕವಾಗಿ ಹೇಳುತ್ತಿದ್ದ ಭಾರತ, ಇದೀಗ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಗೆ ತಾನು ಆತಿಥ್ಯ ವಹಿಸಲು ಆಸಕ್ತಿ ಹೊಂದಿರುವುದಾಗಿ ಪತ್ರ ಬರೆದಿದೆ.

ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ)ಯು ಅ.1ರಂದು ಐಒಸಿಗೆ ಪತ್ರ ಬರೆದಿರುವುದಾಗಿ ಕ್ರೀಡಾ ಸಚಿವಾಲಯದ ಮೂಲಗಳು ಸುದ್ದಿ ಸಂಸ್ಥೆಯೊಂದಿಗೆ ಮಾಹಿತಿ ನೀಡಿದೆ. ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, 2036ರ ಒಲಿಂಪಿಕ್ ಆಯೋಜಿಸಲು ಭಾರತ ಸಜ್ಜಾಗುತ್ತಿದೆ ಎಂದು ಹೇಳಿದ್ದರು.

Latest Videos

undefined

ಕೆಲ ತಿಂಗಳುಗಳ ಹಿಂದೆ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ ನಡೆದಾಗ ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಸೇರಿ ಪ್ರಮುಖ ಆಡಳಿತಗಾರರು ತೆರಳಿ, ಭಾರತದ ಪರ ಲಾಬಿ ನಡೆಸಿದ್ದರು. ಜೊತೆಗೆ ಹಾಲಿ ಐಒಸಿ ಅಧ್ಯಕ್ಷ ಥಾಮಸ್‌ ಬಾಕ್ ಕೂಡ ಭಾರತದ ಯೋಜನೆಯನ್ನು ಬೆಂಬಲಿಸುತ್ತಿದ್ದಾರೆ. ಕೊನೆಯ ಬಾರಿಗೆ ಭಾರತ ಬಹುರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಿದ್ದು 2010ರಲ್ಲಿ. ನವದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆದಿತ್ತು.

ಪ್ಯಾರಿಸ್ ಒಲಿಂಪಿಕ್‌ ಚಿನ್ನ ಗೆದ್ದಿದ್ದ ಬಾಕ್ಸರ್‌ ಖೆಲಿಫ್‌ ಹೆಣ್ಣಲ್ಲ ಗಂಡು!

ಸೌದಿ ಸೇರಿ ಹಲವು ದೇಶಗಳಿಂದ ಪೈಪೋಟಿ

2036ರ ಒಲಿಂಪಿಕ್ಸ್ ಆತಿಥ್ಯ ಹಕ್ಕು ಪಡೆಯಲು ಸೌದಿ ಅರೇಬಿಯಾ, ಕತಾರ್, ಟರ್ಕಿ ಸಹ ಆಸಕ್ತಿ ತೋರಿದ್ದು, ಭಾರತಕ್ಕೆ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. 

ಮುಂದಿನ ವರ್ಷ ಆತಿಥ್ಯ ಹಕ್ಕಿನ ಬಗ್ಗೆ ಐಒಸಿ ಘೋಷಣೆ

ಆತಿಥ್ಯ ಹಕ್ಕು ಪಡೆಯುವ ದೇಶದ ಹೆಸರನ್ನು ಐಒಸಿ ಮುಂದಿನ ವರ್ಷ ನಡೆಯಲಿರುವ ತನ್ನ ಚುನಾವಣೆಯ ಬಳಿಕವಷ್ಟೇ ಘೋಷಿಸಲಿದೆ. ಆದರೆ, ಸದ್ಯ ಆಸಕ್ತಿ ತೋರಿ ಅಧಿಕೃತವಾಗಿ ಪತ್ರ ಬರೆಯುವ ಮೂಲಕ ಭಾರತ, ಆತಿಥ್ಯ ಹಕ್ಕು ಪಡೆಯುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. 

ಈ ಹಂತದಲ್ಲಿ ಐಒಸಿ ಕಾರ್ಯಸಾಧ್ಯತೆತೆಯ ಅಧ್ಯಯನವನ್ನು ನಡೆಸಲಿದೆ. ಭಾರತ, ಕ್ರೀಡಾಕೂಟವನ್ನು ಆಯೋಜಿಸಲು ಸಶಕ್ತವಾಗಿದೆಯೇ?, ಅಗತ್ಯ ಮೂಲಸೌಕರ್ಯಗಳು ಇವೆಯೇ?, ವಿದೇಶಿ ಕ್ರೀಡಾಪಟುಗಳಿಗೆ, ಪ್ರವಾಸಿಗರಿಗೆ ಸುರಕ್ಷತೆ ಇರಲಿದೆಯೇ?, ಸಾಮಾಜಿಕ ವ್ಯವಸ್ಥೆ ಹೇಗಿದೆ?, ಯಾವುದಾದರೂ ರಾಷ್ಟ್ರದ ಜೊತೆ ರಾಜತಾಂತ್ರಿಕ ಸಮಸ್ಯೆಗಳು ಇವೆಯೇ? ಇದ್ದರೆ, ಅದು ಕ್ರೀಡಾಕೂಟದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಬಹುದು ಹೀಗೆ ಹಲವು ವಿಷಯಗಳ ಬಗ್ಗೆ ಐಒಸಿಯ ಅಧಿಕಾರಿಗಳು ಪರಿಶೀಲನೆ ನಡೆಸಿ, ವರದಿ ಸಿದ್ಧಪಡಿಸಲಿದ್ದಾರೆ. 

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋತರೇ ರೋಹಿತ್ ಶರ್ಮಾ ಟೆಸ್ಟ್‌ ಕ್ರಿಕೆಟ್ ವೃತ್ತಿಬದುಕು ಅಂತ್ಯ!

ಈ ವರದಿಯಲ್ಲಿ ಭಾರತದ ಪರವಾದ ಅಂಶಗಳು ಇದ್ದರೆ, ಆಗ ಅರ್ಜಿ ಮುಂದಿನ ಹಂತಕ್ಕೆ ಹೋಗಲಿದೆ. ಆ ಹಂತದಲ್ಲಿ ಅಧಿಕೃತವಾಗಿ ಬಿಡ್‌ ಸಲ್ಲಿಕೆ ಮಾಡಬೇಕಾಗುತ್ತದೆ. ಐಒಸಿ ಸ್ಥಳ ಪರಿಶೀಲನೆ ನಡೆಸಿ, ವಸ್ತುಸ್ಥಿತಿಯ ಬಗ್ಗೆ ಅಧ್ಯಯನ ಮಾಡಿ ಆತಿಥ್ಯ ಹಕ್ಕು ಘೋಷಿಸಲಿದೆ.

click me!