ಪ್ಯಾರಿಸ್ ಒಲಿಂಪಿಕ್ಸ್‌ ಎಫೆಕ್ಟ್‌: ಟಾಪ್ಸ್‌ ಯೋಜನೆಗೆ ಕೇಂದ್ರದ ಕತ್ತರಿ?

By Kannadaprabha News  |  First Published Oct 29, 2024, 9:04 AM IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಸಾಧಾರಣ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಟಾಪ್ಸ್ ಯೋಜನೆಗೆ ಕತ್ತರಿ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ


ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತೀಯರು ಸಾಧಾರಣ ಪ್ರದರ್ಶನ ತೋರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷೆಯ ಟಾರ್ಗೆಟ್‌ ಒಲಿಂಪಿಕ್ಸ್‌ ಪೋಡಿಯಂ ಯೋಜನೆ(ಟಾಪ್ಸ್‌)ಗೆ ಹಣಕಾಸು ಸಹಾಯ ಕಡಿತಗೊಳಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಟಾಪ್ಸ್‌ ಯೋಜನೆಯನ್ನು ನಿಯಂತ್ರಿಸುವ ಮಿಷನ್‌ ಒಲಿಂಪಿಕ್‌ ಸೆಲ್‌(ಎಂಒಸಿ) ಸಮಿತಿಯು ಈ ಬಗ್ಗೆ ಚರ್ಚೆ ನಡೆಸುತ್ತಿದೆ. ಹಣಕಾಸು ಸಹಾಯ ಮಾತ್ರವಲ್ಲದೇ ಟಾಪ್ಸ್‌ ಯೋಜನೆಯಡಿ ಇರುವ ಕ್ರೀಡಾಪಟುಗಳ ಸಂಖ್ಯೆಯೂ ಅರ್ಧಕರ್ಧ ಕಡಿತಗೊಳಿಸುವ ಬಗ್ಗೆ ಎಂಒಸಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

Tap to resize

Latest Videos

undefined

ಮಯಾಂಕ್ ಅಗರ್‌ವಾಲ್ ಭರ್ಜರಿ ಶತಕ: ಬಿಹಾರ ಎದುರು ರಾಜ್ಯಕ್ಕೆ ಲೀಡ್

ಸದ್ಯ ಟಾಪ್ಸ್‌ ಯೋಜನೆಯಡಿ ದೇಶಾದ್ಯಂತ 300ಕ್ಕೂ ಹೆಚ್ಚು ಕ್ರೀಡಾಪಟುಗಳು ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಆದರೆ ಈ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸುವ ಸಾಧ್ಯತೆ ಇದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೂಟಗಳಲ್ಲಿ ನಿರ್ದಿಷ್ಟ ಮಾನದಂಡಕ್ಕೆ ಅನುಸಾರವಾಗಿ ಪ್ರದರ್ಶನ ನೀಡುವ ಅಥ್ಲೀಟ್‌ಗಳಿಗೆ ಮಾತ್ರ ಟಾಪ್ಸ್‌ ಯೋಜನೆಯಡಿ ಆರ್ಥಿಕ ಸಹಾಯ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಕಳೆದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ಕೇವಲ 6 ಪದಕ ಗೆದ್ದಿತ್ತು. 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 7 ಪದಕ ಗೆದ್ದಿದ್ದರೂ ಈ ಬಾರಿ ನಿರೀಕ್ಷಿತ ಪ್ರದರ್ಶನ ನೀಡಲು ಭಾರತ ವಿಫಲವಾಗಿತ್ತು.

ಪ್ರೊ ಕಬಡ್ಡಿ ಲೀಗ್: ಹರ್ಯಾಣ ಸ್ಟೀಲರ್ಸ್‌, ತೆಲುಗು ಟೈಟಾನ್ಸ್‌ಗೆ ಜಯ

ಅಹಮದಾಬಾದ್‌: 11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಸೋಮವಾರ ಹರ್ಯಾಣ ಸ್ಟೀಲರ್ಸ್‌ ಹಾಗೂ ತೆಲುಗು ಟೈಟಾನ್ಸ್‌ ಗೆಲುವು ಸಾಧಿಸಿದೆ.

ಆರಂಭಿಕ ಪಂದ್ಯದಲ್ಲಿ ದಬಾಂಗ್‌ ಡೆಲ್ಲಿ ವಿರುದ್ಧ ಹರ್ಯಾಣ 41-34 ಅಂಕಗಳಿಂದ ಜಯಗಳಿಸಿತು. ಮೊದಲಾರ್ಧದಲ್ಲಿ ಹರ್ಯಾಣ 24-13ರಲ್ಲಿ ಮುಂದಿತ್ತು. ಕೊನೆಯಲ್ಲಿ ಡೆಲ್ಲಿ ಪ್ರತಿರೋಧ ತೋರಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಡೆಲ್ಲಿಯ ಆಶು ಮಲಿಕ್‌(13 ಅಂಕ) ಹೋರಾಟ ವ್ಯರ್ಥವಾಯಿತು. ಹರ್ಯಾಣ ಪರ ಮೊಹಮದ್‌ರಜಾ ಶಾದ್ಲೂ 6 ರೈಡ್‌ ಅಂಕ, 4 ಟ್ಯಾಕಲ್‌ ಅಂಕ ಗಳಿಸಿ ಗೆಲುವಿನ ರೂವಾರಿಯಾದರು. ಶಿವಂ ಪಟರೆ 8 ಅಂಕ ಸಂಪಾದಿಸಿದರು.

ಮೆಗಾ ಹರಾಜಿಗೆ ಕಾಯುತ್ತಿರುವ ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್!

2ನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ವಿರುದ್ಧ ತೆಲುಗು ಟೈಟಾನ್ಸ್‌ 28-26 ಅಂಕಗಳ ಗೆಲುವು ಸಾಧಿಸಿತು. ಟೈಟಾನ್ಸ್‌ನ ಆಶಿಶ್‌ ನರ್ವಾಲ್‌ 9, ಪವನ್‌ ಶೆರವಾತ್‌ 5 ಅಂಕ ಗಳಿಸಿದರು.

ಇಂದಿನ ಪಂದ್ಯಗಳು

ಬೆಂಗಾಲ್‌-ಪುಣೇರಿ ಪಲ್ಟನ್‌, ರಾತ್ರಿ 8ಕ್ಕೆ

ಬೆಂಗಳೂರು ಬುಲ್ಸ್‌-ಡೆಲ್ಲಿ, ರಾತ್ರಿ 9ಕ್ಕೆ
 

click me!