ಅನರ್ಹತೆ ಬೆನ್ನಲ್ಲೇ ಪ್ರಧಾನಿ ಮೋದಿ ಮಾಡಿದ ಕರೆ ಸ್ವೀಕರಿಸದ ವಿನೇಶ್; ನನಗೆ ಅದು ಇಷ್ಟವಿರಲಿಲ್ಲ ಅಂದಿದ್ದೇಕೆ ಫೋಗಟ್?

By Naveen Kodase  |  First Published Oct 2, 2024, 5:08 PM IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿ ಆ ಬಳಿಕ ತೂಕ ಹೆಚ್ಚಳ ಕಾರಣದಿಂದ ಅನರ್ಹರಾದ ವಿನೇಶ್ ಫೋಗಟ್, ಪ್ರಧಾನಿ ಮೋದಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ, ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ


ಚಂಡೀಗಢ: ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಟ್, ಇತ್ತೀಚೆಗಷ್ಟೇ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು 100 ಗ್ರಾಮ್ ತೂಕ ಹೆಚ್ಚಳದ ಕಾರಣದಿಂದ ಅನರ್ಹರಾಗಿದ್ದರು. ಇದರ ಬೆನ್ನಲ್ಲೇ ಬೇಸತ್ತು ವೃತ್ತಿಪರ ಕುಸ್ತಿಗೆ ವಿನೇಶ್ ಫೋಗಟ್ ನಿವೃತ್ತಿ ಘೋಷಿಸಿದ್ದರು. ತಾವು ಫೈನಲ್‌ಗೆ ಅನರ್ಹರಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಜತೆ ಮಾತನಾಡಲು ಬಯಸಿದ್ದರು. ಆದರೆ ನಾನು ಅವರ ಜತೆ ಮಾತನಾಡಲು ನಿರಾಕರಿಸಿದೆ ಎಂದು ವಿನೇಶ್ ಫೋಗಟ್ ಹೇಳಿದ್ದಾರೆ.

ಅಶ್ವಿನ್ ಹಿಂದಿಕ್ಕಿ ಮತ್ತೆ ನಂ.1 ಸ್ಥಾನಕ್ಕೇರಿದ ಜಸ್ಪ್ರೀತ್ ಬುಮ್ರಾ; ಹೊಸ ಎತ್ತರಕ್ಕೇರಿದ ಯಶಸ್ವಿ ಜೈಸ್ವಾಲ್!

Tap to resize

Latest Videos

undefined

ಪ್ಯಾರಿಸ್ ಒಲಿಂಪಿಕ್ಸ್‌ ಮುಗಿಸಿ ಭಾರತಕ್ಕೆ ವಾಪಸ್ಸಾದ ವಿನೇಶ್ ಫೋಗಟ್‌, ಕುಸ್ತಿಗೆ ಗುಡ್‌ ಬೈ ಹೇಳಿ ರಾಜಕೀಯದ ಮೂಲಕ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಸದ್ಯ ವಿನೇಶ್ ಫೋಗಟ್ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜುಲಾನಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ನನ್ನ ಭಾವನೆಗಳನ್ನು ಹಾಗೂ ನನ್ನ ಪದಕ ಗೆಲ್ಲುವ ಪ್ರಯತ್ನವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ ಎಂದು ವಿನೇಶ್ ಹೇಳಿದ್ದಾರೆ.

"ನನಗೆ ಪ್ರಧಾನಿಯಿಂದ ಕಾಲ್ ಬಂದಿತು, ಆದರೆ ನಾನು ಅವರ ಜತೆ ಮಾತನಾಡಲು ನಿರಾಕರಿಸಿದೆ. ಪ್ರಧಾನಿ ಮೋದಿಯವರಿಂದ ನನಗೆ ನೇರವಾಗಿ ಕರೆ ಬರಲಿಲ್ಲ, ಬದಲಾಗಿ ಕ್ರೀಡಾಗ್ರಾಮದಲ್ಲಿದ್ದ ಭಾರತೀಯ ಅಧಿಕಾರಿಗಳು ಮೋದಿ ನನ್ನ ಜತೆ ಮಾತನಾಡಲು ಬಯಸಿದ್ದಾರೆ ಎಂದು ತಿಳಿಸಿದರು. ನಾನು ಅದಕ್ಕೆ ಸರಿ ಎಂದು ಒಪ್ಪಿಕೊಂಡೆ. ಆಗ ಅವರು ಒಂದು ಷರತ್ತು ಹಾಕಿದರು. ಅದೇನೆಂದರೆ, "ನನ್ನ ತಂಡದ ಯಾರೊಬ್ಬರು ಆಗ ಜತೆಗಿರಬಾರದು. ಆದರೆ ಅವರ ಕಡೆಯ ಇಬ್ಬರು ನೀವು ಮಾತನಾಡುವುದನ್ನು ರೆಕಾರ್ಡ್ ಮಾಡಿಕೊಳ್ಳುತ್ತಾರೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ" ಎಂದು ಹೇಳಿದರು ಎಂದು ಲಲನ್‌ಟಾಪ್‌ನಲ್ಲಿನ ಸಂದರ್ಶನದಲ್ಲಿ ವಿನೇಶ್ ಫೋಗಟ್ ಆ ಘಟನೆಯನ್ನು ಮೆಲುಕು ಹಾಕಿದ್ದಾರೆ.

ಪ್ಯಾರಿಸ್‌ನಲ್ಲಿ ಸಾಧನೆ ಮಾಡಿದ ಪ್ಯಾರಾ ಅಥ್ಲೀಟ್ಸ್‌ಗೆ ಪಿಎಂ ಮೋದಿ ಪ್ರೀತಿಯ ಆತಿಥ್ಯ

"ಆಗ ನನಗೆ ನನ್ನ ಭಾವನೆಗಳನ್ನು ಹಾಗೂ ಕಠಿಣ ಪರಿಶ್ರಮದ ಹೋರಾಟವನ್ನು ತಮಾಷೆಗೆ ಬಳಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಇಷ್ಟವಿರಲಿಲ್ಲ" ಎಂದು ಫೋಗಟ್ ಹೇಳಿದ್ದಾರೆ. 

"ಒಂದು ವೇಳೆ ಅವರಿಗೆ ನಿಜವಾಗಿಯೂ ಅಥ್ಲೀಟ್‌ಗಳ ಬಗ್ಗೆ ಕಾಳಜಿಯಿದ್ದರೇ, ಅವರು ರೆಕಾರ್ಡ್‌ ಮಾಡಿಕೊಳ್ಳದೆಯೂ ಮಾತನಾಡಬಹುದಿತ್ತು. ಷರತ್ತು ಹಾಕದಿದ್ದರೇ ಖಂಡಿತವಾಗಿಯೂ ನಾನು ಅವರ ಜತೆ ಮಾತನಾಡುತ್ತಿದ್ದೆ". ಮೋದಿಯವರು ಕಂಡೀಷನ್ ಹಾಕಿದ್ದು ತಮಗೆ ಬೇಕಾದಂತೆ ಪರಿಸ್ಥಿತಿಯನ್ನು ಬಿಂಬಿಸಿಕೊಳ್ಳಬೇಕೆಂದಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಎರಡು ವರ್ಷಗಳ ಬಗ್ಗೆ ನಾನು ಮಾತನಾಡಬಹುದೇನೋ ಎಂದು ಬಹುಶಃ ಅವರಿಗೆ ಅನಿಸಿರಬೇಕು. ಅದಕ್ಕಾಗಿಯೇ ನನ್ನ ಕಡೆಯವರು ಯಾರಾದರೂ ಜತೆಗಿದ್ದು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಾರೆ ಎನ್ನುವ ಉದ್ದೇಶದಿಂದ ಯಾರು ಇರಬಾರದು ಎಂದು ಷರತ್ತು ಹಾಕಿರಬೇಕು. ನನ್ನ ಕಡೆಯಿಂದ ಯಾರು ರೆಕಾರ್ಡ್ ಮಾಡಿಕೊಳ್ಳದಿದ್ದರೇ, ಅವರು ಅವರಿಗೆ ಬೇಕಾದ್ದನ್ನು ಮಾತ್ರ ಎಡಿಟ್ ಮಾಡಿ ಹಾಕಿಕೊಳ್ಳುತ್ತಿದ್ದರು. ನಮ್ಮ ಕಡೆಯವರು ರೆಕಾರ್ಡ್ ಮಾಡಿಕೊಂಡರೇ, ಒರಿಜಿನಲ್ ವಿಡಿಯೋ ಎಲ್ಲಾದರೂ ಹಂಚಿಕೊಳ್ಳಬಹುದು ಎನ್ನುವ ಕಾರಣಕ್ಕಾಗಿ ಷರತ್ತು ಹಾಕಿದ್ದರು ಎಂದು ವಿನೇಶ್ ಫೋಗಟ್ ಹೇಳಿದ್ದಾರೆ.

click me!