20 ವರ್ಷಗಳ ಸುದೀರ್ಘ ಪ್ರಯಾಣಕ್ಕೆ ಈ ಅಪ್ಲಿಕೇಶನ್ ವಿದಾಯ ಹೇಳಿದ್ದೇಕೆ?

First Published Jul 17, 2018, 10:26 PM IST
Highlights

ಆರ್ಕುಟ್ ನಂತೆ ಯಾಹೂ ಮೆಸೆಂಜರ್ ಸಹ ಇತಿಹಾಸದ ಪುಟ ಸೇರಿದೆ. ಇಂದಿನಿಂದ ಅಧಿಕೃತವಾಗಿ ಯಾಹೂ ಮೇಸೆಂಜರ್ ಸಂದೇಶ ರವಾನೆ ಕೆಲಸವನ್ನು ಬಂದ್ ಮಾಡಿದೆ. ಯಾಕೆ ಹೀಗಾಯ್ತು?

ಬೆಂಗಳೂರು[ಜು.17]  ವಾಟ್ಸಾಪ್, ಫೇಸ್ ಬುಕ್  ಎದುರು ನಿಲ್ಲಲಾಗದೆ ಯಾಹೂ ತನ್ನ ನೆಚ್ಚಿನ ಮೆಸೆಂಜರ್ ಸೇವೆಯನ್ನು ಇಂದಿನಿಂದ ಬಂದ್ ಮಾಡಿದೆ. ಗೂಗಲ್ ಚಾಟ್, ಫೇಸ್ ಬುಕ್ ಮೆಸೆಂಜರ್, ವಾಟ್ಸಾಪ್, ವಿಚಾಟ್, ಹೈಕ್ ಮುಂತಾದ ಚಾಟಿಂಗ್ ಅಪ್ಲಿಕೇಷನ್ ಗಳ ನಡುವೆ ಯಾಹೂ ತನ್ನ ಡೆಸ್ಕ್ ಟಾಪ್ ಹಾಗೂ ಮೊಬೈಲ್ ಆಪ್ಲಿಕೇಷನ್ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ಯಾಹೂ ಮೆಸೆಂಜರ್ ಬಂದ್ ಆಗುತ್ತಿರುವುದನ್ನು ಕಂಪನಿ ಪ್ರಕಟಣೆ ಮೂಲಕ ತಿಳಿಸಿದೆ, ಈ ಮೂಲಕ ತನ್ನ ಇಪ್ಪತ್ತು ವರ್ಷಗಳ ಪ್ರಯಾಣಕ್ಕೆ ಯಾಹೂ ಮೇಸೆಂಜರ್ ಅಂತ್ಯ ವಿದಾಯ ಹೇಳಿದೆ.ಯಾಹೂ ಮೆಸೆಂಜರ್ ಬಳಕೆದಾರರಿಗೆ 6 ತಿಂಗಳ ಅವಧಿ ನೀಡಲಾಗಿದ್ದು, ಈ ವೇಳೆಯಲ್ಲಿ ತಮ್ಮ ಚಾಟ್ ಹಿಸ್ಟರಿ ಸೇವ್ ಮಾಡಿಕೊಳ್ಳಬಹುದಾಗಿದೆ.

1998ರಲ್ಲಿ ಆರಂಭವಾದ ಯಾಹೂ ಸಂಸ್ಥೆಯ ಚಾಟ್ ಅಪ್ಲಿಕೇಷನ್ ಮೆಸೆಂಜರ್, ಭಾರತದಲ್ಲಿ ಅತ್ಯಂತ ಜನಪ್ರಿಯಗೊಂಡಿತ್ತು. 2001 ರಲ್ಲಿ ಯಾಹೂ 11 ಲಕ್ಷ ಯೂಸರ್ ಗಳನ್ನ ಹೊಂದಿತ್ತು. 2003ರಲ್ಲಿ 17 ಲಕ್ಷಕ್ಕೆ ಯೂಸರ್ ಗಳ ಸಂಖ್ಯೆ ಹೆಚ್ಚಾಗಿತ್ತು. ಆದರೆ ಇತ್ತೀಚೆಗೆ ಬಂದ ವಾಟ್ಸಪ್ ಎದುರು ಯಾಹೂ ತನ್ನ ವೈಭವ ಕಳೆದುಕೊಂಡಿತು.

click me!