ವಿವೋದಿಂದ ಹೊಸ 5G ಸ್ಮಾರ್ಟ್‌ಫೋನ್; 128GB ಸ್ಫೋರೇಜ್ ಜೊತೆ ಸಿಗುತ್ತೆ DSLR ಗುಣಮಟ್ಟದ ಕ್ಯಾಮೆರಾ

By Mahmad Rafik  |  First Published Nov 21, 2024, 1:35 PM IST

ವಿವೋದಿಂದ ಬಿಡುಗಡೆಯಾಗಿರುವ ಹೊಸ 5G ಸ್ಮಾರ್ಟ್‌ಫೋನ್ Vivo T3X ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. 6000mAh ಬ್ಯಾಟರಿ, 128GB ಸ್ಟೋರೇಜ್ ಮತ್ತು DSLR ಗುಣಮಟ್ಟದ ಕ್ಯಾಮೆರಾವನ್ನು ಒಳಗೊಂಡಿದೆ.


ಇಂದು ನಾವು ವಿವೋ ಕಂಪನಿ ಬಿಡುಗಡೆ ಮಾಡಿರುವ ಹೊಸ 5G ಸ್ಮಾರ್ಟ್‌ಫೋನಿನ ಮಾಹಿತಿಯನ್ನು ಹೊತ್ತು ತಂದಿದ್ದೇವೆ. ಆಕರ್ಷದ ಬೆಲೆಯೊಂದಿಗೆ ಡಿಸ್ಕೌಂಟ್ ಸೇರ್ಪಡೆಯಾಗುವುದರಿಂದ ಕಡಿಮೆ ಬೆಲೆಯಲ್ಲಿ ವಿವೋ ಕಂಪನಿಯ 5G ಸ್ಮಾರ್ಟ್‌ಫೋನ್ ನಿಮ್ಮ ಕೈ ಸೇರಲಿದೆ. ಇದನ್ನು ಮಧ್ಯಮ ವರ್ಗದ ಪಾಕೆಟ್ ಫ್ರೆಂಡ್ಲಿ ಸ್ಮಾರ್ಟ್‌ಫೋನ್ ಎಂದು ವರ್ಣನೆ ಮಾಡಲಾಗುತ್ತಿದೆ. ಇಂದು ನಾವು Vivo T3X 5G Smartphone ಕುರಿತ ಮಾಹಿತಿಯನ್ನು ನೀಡುತ್ತಿದ್ದೇವೆ. 

ಈ ಸ್ಮಾರ್ಟ್‌ಫೋನ್ ವಿವಿಧ ಬಣ್ಣಗಳಲ್ಲಿ ಲಭ್ಯವಿದ್ದು, ನಿಮ್ಮಿಷ್ಟದ ಸೆಟ್ ಆಯ್ಕೆ ಮಾಡಿಕೊಳ್ಳಬಹುದು.  6000mAh ಪವರ್‌ಫುಲ್ ಸಾಮರ್ಥ್ಯದ ಬ್ಯಾಟರಿಯನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ. ಇದೆಲ್ಲದರೊಂದಿಗೆ Vivo T3X 5G ಫೋನ್ ಯಾವೆಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. 

Tap to resize

Latest Videos

undefined

Vivo T3X 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
Display:
ಇದು 6.72 ಇಂಚಿನ ದೊಡ್ಡ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, 120hz ರಿಫ್ರೆಶ್‌ ರೇಟ್‌ನೊಂದಿಗೆ ಬರಲಿದೆ. ಈ ಫೋನ್ 1000 ನಿಟ್ಸ್ ಪೀಕ್ ಬ್ರೈಟ್‌ನೆಸ್ ಒಳಗೊಂಡಿದೆ. 

Battery: ಸ್ಮಾರ್ಟ್‌ಫೋನ್‌ಗೆ ದೀರ್ಘ ಸಮಯದವರೆಗೆ ಬ್ಯಾಕ್‌ಅಪ್ ನೀಡುವ ಬ್ಯಾಟರಿ  6000mAh ಸಾಮರ್ಥ್ಯದಾಗಿದೆ. Vivo T3X ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿ 1 ಗಂಟೆ 30 ನಿಮಿಷದಲ್ಲಿ ಫುಲ್ ಜಾರ್ಜ್ ಆಗುತ್ತದೆ. 

ಇದನ್ನೂ ಓದಿ: ₹4300 ಕಡಿಮೆ ಬೆಲೆಯಲ್ಲಿ 108MP ಕ್ಯಾಮೆರಾವುಳ್ಳ OnePlus ಕಂಪನಿಯ 5G ಸ್ಮಾರ್ಟ್‌ಫೋನ್‌ನಲ್ಲಿವೆ ಈ ಫೀಚರ್ಸ್

RAM & ROM: ಮಾರುಕಟ್ಟೆಯಲ್ಲಿ ವಿವೋ ಕಂಪನಿಯ 5ಜಿ ಸ್ಮಾರ್ಟ್‌ಫೋನ್‌ಗಳು ಹಲವು ವೇರಿಯಂಟ್‌ಗಳಲ್ಲಿದ್ದು, ಇವುಗಳ ಆಧಾರದ ಮೇಲೆ ಬೆಲೆಯು ಸಹ ವ್ಯತ್ಯಾಸ ಆಗುತ್ತಿರುತ್ತದೆ. ಇಂದು ನಾವು 6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಸ್ಮಾರ್ಟ್‌ಪೋನ್ ಬಗ್ಗೆ ಹೇಳುತ್ತಿದ್ದೇವೆ. ಫೋನಿನ ಉತ್ತಮ ಮತ್ತು ಕ್ಷಿಪ್ರ ಕಾರ್ಯಕ್ಷಮತೆಗಾಗಿ snapdragon 6 Gen 1 ಪ್ರೊಸೆಸರ್ ನೀಡಲಾಗಿದೆ. 

Camera: Vivo T3X 5G ಸ್ಮಾರ್ಟ್‌ಫೋನಿನ ಆಕರ್ಷಕ ವಿಶೇಷತೆಯೇ ಇದರ ಕ್ಯಾಮೆರಾ ಆಗಿದೆ. ಪ್ರೈಮರಿ ಕ್ಯಾಮೆರಾ 50MP ಮತ್ತು ಸೆಕೆಂಡರಿ ಕ್ಯಾಮೆರಾ 2MP ಆಗಿದೆ. ಇನ್ನು 8MPಯ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

Price: ಈ ಸ್ಮಾರ್ಟ್‌ಫೋನಿನ ಬೆಲೆ 14,999 ರೂಪಾಯಿ ಆಗಿದೆ. ನೀವು ಆಕ್ಸಿಸ್ ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಾವತಿಸಿದ್ರೆ ನಿಮಗೆ 1,900 ರೂ.ಗಳಷ್ಟು ರಿಯಾಯ್ತಿ ಸಿಗಲಿದೆ. ದೀಪಾವಳಿ ಸಂದರ್ಭದಲ್ಲಿ  Vivo T3X 5G ಸ್ಮಾರ್ಟ್‌ಫೋನಿನ  ಬೆಲೆ 11,999 ರೂ.ವರೆಗೆ ಮಾರಾಟವಾಗಿದೆ. 

ಇದನ್ನೂ ಓದಿ: TATA-BSNL ಜೊತೆಯಾಗಿ ಲಾಂಚ್ ಮಾಡ್ತಿದೆ 108MP, 256GB ಸ್ಟೋರೇಜ್‌ವುಳ್ಳ 5G ಸ್ಮಾರ್ಟ್‌ಫೋನ್: ಬೆಲೆ ಎಷ್ಟು?

click me!