ಟಾಟಾ ಮತ್ತು BSNL ಜಂಟಿಯಾಗಿ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. 120Hz AMOLED ಡಿಸ್‌ಪ್ಲೇ, 108MP ಕ್ಯಾಮೆರಾ ಮತ್ತು 6000mAh ಬ್ಯಾಟರಿಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ನವದೆಹಲಿ: ಭಾರತದಲ್ಲಿ ಕ್ಷಿಪ್ರವಾಗಿ ಬೆಳವಣಿಗೆ ಹೊಂದುತ್ತಿರುವ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಟಾಟಾ ಮತ್ತು ಬಿಎಸ್‌ಎನ್ಎಲ್ ಜೊತೆಯಾಗಿ ಮಹತ್ವದ ಹೆಜ್ಜೆಯನ್ನಿಡಲು ಮುಂದಾಗಿದೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಬಿಎಸ್ಎನ್ಎಲ್ ತನ್ನದೇ 5G ಸ್ಮಾರ್ಟ್‌ಫೋನ್ ತರಲಿದೆ ಎಂಬ ಸುದ್ದಿಗಳು ಪ್ರಕಟವಾಗದ್ದವು. ಇದೀಗ ಬಿಎಸ್‌ಎನ್‌ಎಲ್ ಗೆ ಟಾಟಾ ಸಂಸ್ಥೆ ಕೈ ಜೋಡಿಸಿದೆ ಎನ್ನಲಾಗಿದೆ.
ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್, 100 ನಿಟ್ಸ್ ಸಾಮರ್ಥ್ಯದ ಪ್ರಭಾವಶಾಲಿ ಬ್ರೈಟ್‌ನೆಸ್ ಜೊತೆಯಲ್ಲಿ ಪ್ರೀಮಿಯಂ 6.72- ಇಂಚ್ AMOLED ಡಿಸ್‌ಪ್ಲೇ ಹೊಂದಿರಲಿದೆ. ಡಿವೈಸ್‌ಗೆ ಪವರ್ ನೀಡು ಅಕ್ಟಾ-ಕೋರ್ ಚಿಪ್‌ಸೆಟ್ ಆಗಿದ್ದು, ಸುಗಮ ಕಾರ್ಯಕ್ಷಮತೆ ಮತ್ತು ಸಮರ್ಥ 5G ಸಂಪರ್ಕವನ್ನು ಭರವಸೆಯನ್ನು ಬಿಎಸ್ಎನ್ಎಲ್ ಮತ್ತು ಟಾಟಾ ನೀಡಲಿದೆ. ಬಿಎಸ್‌ಎನ್‌ಎಲ್‌ನ ಈ ನಿರ್ಧಾರ ಇತರೆ ಸ್ಮಾರ್ಟ್‌ಫೋನ್ ತಯಾರಿಕೆ ಕಂಪನಿಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ ಎಂದು ಊಹಿಸಲಾಗುತ್ತಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿ.
undefined
ಕ್ಯಾಮೆರಾ ಮತ್ತು ಕೆನಕ್ಟಿವಿಟಿ
ಟಾಟಾ ಮತ್ತು ಬಿಎಸ್‌ಎನ್ಎಲ್ 5ಜಿ ಸ್ಮಾರ್ಟ್‌ಫೋನ್ ಗುಣಮಟ್ಟದ ಕ್ಯಾಮೆರಾ ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. 108MP ಪ್ರೈಮರಿ ಕ್ಯಾಮೆರಾ ಮತ್ತು 4K ವಿಡಿಯೋ ರೆಕಾರ್ಡ್ ಮಾಡುವ ಫೀಚರ್ ಜೊತೆ 10x ವರೆಗೆ ಝೂಮ್ ಮಾಡಬಹುದಾಗಿದೆ. ಸೆಲ್ಫಿ ಪ್ರಿಯರನ್ನು ಸಹ ಗಮನದಲ್ಲಿಟ್ಟುಕೊಂಡು 10MP ಸಾಮರ್ಥ್ಯದ ಪಂಚ್-ಹೋಲ್ ಫ್ರಂಟ್ ಕ್ಯಾಮೆರಾ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಖರೀದಿಸಿದ್ರೆ ಬಿಎಸ್‌ಎನ್ಎಲ್ ನೆಟ್‌ವರ್ಕ್‌ನಿಂದ 1 ವರ್ಷದವರೆಗೆ ಉಚಿತ ಇಂಟರ್‌ನೆಟ್ ಜೊತೆ ಇನ್ನಿತರ ಬೆನೆಫಿಟ್‌ಗಳು ಸಿಗಲಿವೆ ಎಂದು ವರದಿಯಾಗಿದೆ. ಉನ್ನತ ಮಟ್ಟದ ಫೋಟೋಗ್ರಾಫಿ ಸಾಮರ್ಥ್ಯಗಳು ಮತ್ತು ಅಧಿಕ ಡೇಟಾ ಕೊಡುಗೆಗಳನ್ನು ನೀಡಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ₹4300 ಕಡಿಮೆ ಬೆಲೆಯಲ್ಲಿ 108MP ಕ್ಯಾಮೆರಾವುಳ್ಳ OnePlus ಕಂಪನಿಯ 5G ಸ್ಮಾರ್ಟ್‌ಫೋನ್‌ನಲ್ಲಿವೆ ಈ ಫೀಚರ್ಸ್
ಬ್ಯಾಟರಿ, ಸ್ಟೋರೇಜ್ ಮತ್ತು ಬೆಲೆ
ಬಿಎಸ್ಎನ್ಎಲ್ ತನ್ನ ಸ್ಮಾರ್ಟ್‌ಫೋನ್ 6000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಯುಎಸ್‌ಬಿ ಟೈಪ್-ಸಿ ಕೇಬಲ್ 40 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸಿಸ್ಟಮ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಒಂದು 8GB RAM/128GB, ಮತ್ತೊಂದು ಹೆಚ್ಚುವರಿ ಪ್ರೀಮಿಯಂನ 12GB RAM/256GB ಸ್ಟೋರೇಜ್ ಇರಲಿದೆ. ಬಿಎಸ್ಎನ್ಎಲ್ ನ ಸ್ಮಾರ್ಟ್‌ಫೋನ್ ಬೆಲೆ 12,999 ರೂ.ಗಳಿಂದ ಆರಂಭವಾಗಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಮೂಲಕ ಬಿಎಸ್‌ಎನ್ಎಲ್ 5G ಬಳಕೆದಾರರನ್ನು ತಲುಪುವ ಗುರಿಯನ್ನು ಹೊಂದಿದೆ.
BSNL-Tata ಜಂಟಿಯಾಗಿ ತಯಾರಾಗುವ ಈ ಸ್ಮಾರ್ಟ್‌ಫೋನ್, ಭಾರತದಲ್ಲಿ 5G ತಂತ್ರಜ್ಞಾನದ ಮಾರುಕಟ್ಟೆಯಲ್ಲಿ ಮಹತ್ವದ ಹೆಜ್ಜೆಯಾಗಲಿದೆ. ಬಿಎಸ್‌ಎನ್ಎಲ್ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿರುವ ಕಾರಣ ಹೆಚ್ಚು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಹೈ ರೆಸಲ್ಯೂಶನ್ ಕ್ಯಾಮೆರಾ, ಹೈ ಕೆಪಾಸಿಟಿಯ ಬ್ಯಾಟರಿ, ಪ್ರೀಮಿಯಂ ಸ್ಟೋರೇಜ್ ಮತ್ತು ಆಕರ್ಷಕ ಲುಕ್ ಜೊತೆ ಬಜೆಟ್ ಫ್ರೆಂಡ್ಲಿ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲು ಬಿಎಸ್ಎನ್ಎಲ್-ಟಾಟಾ ಸಿದ್ಧತೆ ಮಾಡಿಕೊಂಡಿದೆ.
ಇದನ್ನೂ ಓದಿ: ಅತ್ಯಾಕರ್ಷದ ದರದಲ್ಲಿ Redmiಯ 200MP ಕ್ಯಾಮೆರಾ, 512GB ಸ್ಟೋರೇಜ್ ಇರೋ 5G ಸ್ಮಾರ್ಟ್‌ಫೋನ್