ಮೋದಿ ಹೆಸರಲ್ಲಿ ಪೆಟ್ರೋಲ್ ಬೇಕಿರದ ಬೈಕ್ ಸಂಶೋಧಿಸಿದ ಮುಸ್ಲಿಂ ಯುವಕ

By Web DeskFirst Published Sep 13, 2018, 8:51 PM IST
Highlights

ಎಲ್ಲೆಡೆ ಪೆಟ್ರೋಲ್ ದರದ ಏರಿಕೆಯದ್ದೇ ಸುದ್ದಿ. ಆದರೆ ಇಲ್ಲೊಬ್ಬ ಮುಸ್ಲಿಂ ಯುವಕ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿಯೇ ಬೈಕ್ ಕಂಡುಹಿಡಿದಿದ್ದಾರೆ. ಅವರು ಕಂಡು ಹಿಡಿದ ಬೈಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗೆ ಓಡ್ತಿದೆ.

ಲಕ್ನೋ[ಸೆ.13] ಈ ಮುಸ್ಲಿಂ ಯುವಕನಿಗೆ ಪ್ರಧಾನಿ ನರೇಂದ್ರ ಮೋದಿ ಎಂದರೆ ಅಚ್ಚು ಮೆಚ್ಚು. ದೇಶಕ್ಕಾಗಿ ಏನನ್ನಾದರೂ ಸಾಧಿಸಬೇಕು ಎಂದು ಹಂಬಲಿಸುತ್ತಿದ್ದ ಯುವಕ ವಿದ್ಯುತ್ ಚಾಲಿತ ಬೈಕ್ ಕಂಡುಹಿಡಿದಿದ್ದಾರೆ.

ಉತ್ತರ ಪ್ರದೇಶದ ಮೀರತ್ ವಕಾರ್ ಅಹಮದ್ ಬೈಕ್ ನ ಸಂಶೋಧಕ. ಆಟೋ ಮೊಬೈಲ್ ಇಂಜಿನಿಯರಿಂಗ್ ಮಾಡುತ್ತಿದ್ದ ಯುವಕ ಕಂಡುಹಿಡಿದ ಬೈಕ್ ರಸ್ತೆಯಲ್ಲಿ ಸುತ್ತಾಡಿದೆ. ಪ್ರಧಾನಿ ಸಹ ಶಹಬ್ಬಾಸ್ ನೀಡಿದ್ದಾರೆ. ಈ ಬೈಕ್‌ ಗೆ  ಇಂಜಿನ್ ಇಲ್ಲ. ಲ್ಯಾಟ್ ಟಾಪ್ ಅಥವ ಮೊಬೈಲ್ ರೀತಿ ಜಾರ್ಜ್ ಹಾಕಬೇಕು.

ಮೂರು ಗಂಟೆ ಜಾರ್ಜ್  ಮಾಡಿದರೆ 150 ಕಿಮೀ ಸಂಚಾರ ಸಾಧ್ಯ. ಇದಕ್ಕೆ ಕೇವಲ  20 ರೂ. ಖರ್ಚು ತಗಲುತ್ತದೆ! ಅಂದರೆ 20 ರೂ. ನಲ್ಲಿ 150 ಕಿ ಮೀ ಪ್ರಯಾಣ. ಬೈಕ್ ದರ  70 ರಿಂದ 75 ಸಾವಿರ ರೂ. ಆಗಲಿದ್ದು ಮಾರುಕಟ್ಟೆಗೆ ತರುವ ಪ್ರಯತ್ನಗಳು ನಡೆಯುತ್ತಿದೆ. 

 

click me!