Koo Self Verification: ಟ್ವಿಟರ್‌ ಪ್ರತಿಸ್ಪರ್ಧಿ ಕೂನಲ್ಲಿ ಸಾಮಾನ್ಯ ಬಳಕೆದಾರರಿಗೂ ವೇರಿಫೈಡ್‌ ಅಕೌಂಟ್!

Published : Apr 06, 2022, 05:00 PM IST
Koo Self Verification: ಟ್ವಿಟರ್‌ ಪ್ರತಿಸ್ಪರ್ಧಿ ಕೂನಲ್ಲಿ ಸಾಮಾನ್ಯ ಬಳಕೆದಾರರಿಗೂ ವೇರಿಫೈಡ್‌ ಅಕೌಂಟ್!

ಸಾರಾಂಶ

ಸಾಮಾಜಿಕ ನೆಟ್‌ವರ್ಕಿಂಗ್ ಅಪ್ಲಿಕೇಶನ್ ಕೂ ಬುಧವಾರ ತನ್ನ ಎಲ್ಲಾ ಬಳಕೆದಾರರಿಗಾಗಿ ಸ್ವಯಂಪ್ರೇರಿತ ಸ್ವಯಂ-ಪರಿಶೀಲನೆಯನ್ನು ಪ್ರಾರಂಭಿಸಿದೆ ಎಂದು ಘೋಷಿಸಿದೆ

Koo Self Verification: ವಿದೇಶಿ ಮೂಲದ ಚುಟುಕು ಜಾಲತಾಣ (Micro Blogging) ಟ್ವೀಟರ್‌ಗೆ ಸೆಡ್ಡು ಹೊಡೆಯುತ್ತಿರುವ ಬೆಂಗಳೂರು ಮೂಲದ ‘ಕೂ’ ಇದೀಗ  ಬಳಕೆದಾರರಿಗೆ ತಮ್ಮ ಪ್ರೊಫೈಲ್‌ಗಳನ್ನು ಸ್ವಯಂ-ಪರಿಶೀಲಿಸಲು (Self Verification) ಅನುಮತಿಸುತ್ತಿದೆ. ಭಾರತೀಯ ಭಾಷೆಗಳಿಗಾಗಿ ಅಭಿವೃದ್ಧಿಪಡಿಸಲಾಗಿರುವ ಮೈಕ್ರೋಬ್ಲಾಗಿಂಗ್ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್ ಅಪ್ಲಿಕೇಶನ್ ಕೂ ಬುಧವಾರ ತನ್ನ ಎಲ್ಲಾ ಬಳಕೆದಾರರಿಗಾಗಿ ಸ್ವಯಂಪ್ರೇರಿತ ಸ್ವಯಂ-ಪರಿಶೀಲನೆಯನ್ನು ಪ್ರಾರಂಭಿಸಿದೆ ಎಂದು ಘೋಷಿಸಿದೆ. ಅಲ್ಲದೇ ಈ ವೈಶಷ್ಟ್ಯ ನೀಡುತ್ತಿರುವ ವಿಶ್ವದ ಮೊದಲ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. 

ಕೂನ ಬಳಕೆದಾರರು ತಮ್ಮ ಸರ್ಕಾರಿ ಐಡಿ ಸಂಖ್ಯೆಯನ್ನು ನಮೂದಿಸುವ ಮೂಲಕ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬೇಕಾಗುತ್ತದೆ ಮತ್ತು ಯಶಸ್ವಿ ದೃಢೀಕರಣದ ನಂತರ, 'ಗ್ರೀನ್ ಟಿಕ್' ನೀಡಲಾಗುತ್ತದೆ. ಪರಿಶೀಲನಾ ಬ್ಯಾಡ್ಜನ್ನು ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮತ್ತು ಇತರ ಪ್ರಭಾವಿಗಳು ಬಳಸುತ್ತಾರೆ ಮತ್ತು ಮತ್ತು ಇದನ್ನು ಪಡೆಯುವುದು ಕೊಂಚ ಕಷ್ಟಕರವಾಗಿರುತ್ತದೆ ಮತ್ತು ಈ ಪ್ರಕ್ರಿಕ್ರಿಯೆಗೆ ಕೆಲ ವಾರಗಳು ಅಥವಾ ತಿಂಗಳುಗಳ ಕಾಲ ಕಾಯಬೇಕಾಹಬಹುದು. 

ಇದನ್ನೂ ಓದಿ: Koo app:ಏಷ್ಯಾ ಪೆಸಿಫಿಕ್‌ ಹಾಟೆಸ್ಟ್ ಎಮರ್ಜಿಂಗ್ ಡಿಜಿಟಲ್ ಬ್ರಾಂಡ್‌ನಲ್ಲಿ ಸ್ಥಾನ ಪಡೆದ ಬೆಂಗಳೂರಿನ ಕೂ ಆ್ಯಪ್‌!

ಟ್ವೀಟರ್‌ ಮತ್ತು ಇನ್ಸ್ಟಾಗ್ರಾಮ್‌ನಂತಹ  ಸಾಮಾಜಿಕ ಮಾಧ್ಯಮದಲ್ಲಿ ಪರಿಶೀಲಿಸಿದ ಪ್ರೊಫೈಲ್‌ಗಳನ್ನು ಸಾಮಾನ್ಯವಾಗಿ ಪ್ರೊಫೈಲ್ ಹೆಸರಿನ ಪಕ್ಕದಲ್ಲಿ ಬ್ಯಾಡ್ಜ್ ಅಥವಾ ಟಿಕ್‌ನಿಂದ ಗುರುತಿಸಲಾಗುತ್ತದೆ. ಅಪ್ಲಿಕೆಶನ್ ವ್ಯಕ್ತಿಯ ಪ್ರೊಫೈಲನ್ನು ದೃಢಪಡಿಸಿರುವುದರಿಂದ ಈ ಟಿಕ್ ಬಳಕೆದಾರರ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ. 

ವೇರಿಫೈ ಹೇಗೆ?: ಟೈಗರ್ ಗ್ಲೋಬಲ್ ಮತ್ತು ಆಕ್ಸೆಲ್ ಬೆಂಬಲಿತ ಕೂ, ಬಳಕೆದಾರರಿಗೆ ಸ್ವಯಂ-ದೃಢೀಕರಣವನ್ನು ಅನುಮತಿಸುವ ಮೂಲಕ ಈ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ. ಹೊಸ ಪ್ರಕ್ರಿಯೆಯ ಅನ್ವಯ, ಬಳಕೆದಾರರು ತಮ್ಮ ಖಾತೆಗಳನ್ನು ಭಾರತೀಯ ಸರ್ಕಾರದ ಡಿಜಿಟಲ್ ಗುರುತಿನ ಡೇಟಾಬೇಸ್, ಆಧಾರ್‌ನಿಂದ ಬಯೋಮೆಟ್ರಿಕ್ ಸಂಖ್ಯೆಗೆ ಲಿಂಕ್ ಮಾಡಬೇಕು. 

ನಂತರ ಆ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಮೊಬೈಲ್ ಫೋನ್‌ಗೆ ಪಾಸ್‌ವರ್ಡ್ ಕಳುಹಿಸುವ ಮೂಲಕ ಪರಿಶೀಲನೆಯನ್ನು ಸಕ್ರಿಯಗೊಳಿಸಬಹುದು. ಇದು ಸಾಮಾನ್ಯವಾಗಿ ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

"ಮೈಕ್ರೋಬ್ಲಾಗಿಂಗ್ ಸೈಟ್‌ಗಳ ದೊಡ್ಡ ನಿಷೇಧವೆಂದರೆ ಸ್ವಯಂಚಾಲಿತ ಬಾಟ್‌ಗಳು, ನಕಲಿ ಖಾತೆಗಳು ಮತ್ತು ಅನಾಮಧೇಯ ಟ್ರೋಲಿಂಗ್" ಎಂದು ಕೂ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಪ್ರಮೇಯ ರಾಧಾಕೃಷ್ಣ ಝೋಮ್ ಮೂಲಕ ಹೇಳಿದ್ದಾರೆ. "ಈ ಸ್ವಯಂಪ್ರೇರಿತ ಸ್ವಯಂ-ಪರಿಶೀಲನೆಯ ವೈಶಿಷ್ಟ್ಯವು ಸಾಮಾಜಿಕ ಮಾಧ್ಯಮವನ್ನು ಸುರಕ್ಷಿತ ಮತ್ತು ಹೆಚ್ಚು ನೈಜವಾಗಿಸುವ ಕಡೆಗೆ" ಎಂದು ಹೆಜ್ಜೆ ಎಂದ ಅವರು ತಿಳಿಸಿದ್ದಾರೆ.

30 ಮಿಲಿಯನ್ ಬಳಕೆದಾರರು:  ಮಾರ್ಚ್ 2020 ರಲ್ಲಿ ಪ್ರಾರಂಭವಾದ ಕೂ, ಸುಮಾರು 30 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಮತ್ತು ಸ್ವಯಂ-ಪರಿಶೀಲನಾ ವ್ಯವಸ್ಥೆಯು ಅವರು ಹಂಚಿಕೊಳ್ಳುವ ವಿಷಯಕ್ಕೆ ವಿಶ್ವಾಸಾರ್ಹತೆಯನ್ನು ನೀಡುತ್ತದೆ. ಭಾರತದ ಸಾಮಾಜಿಕ ಮಾಧ್ಯಗಳು ನಕಲಿ ಖಾತೆಗಳು, ಅಪಾಯಕಾರಿ ವಿಷಯಗಳು ಮತ್ತು ಟ್ವಿಟರ್ ಮತ್ತು ವಾಟ್ಸಾಪ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಡುವ ತಪ್ಪು ಮಾಹಿತಿಗಳಿಂದ ತುಂಬಿವೆ.

ಇದನ್ನೂ ಓದಿ: ಟ್ವೀಟರ್ ಎಡಿಟ್ ಬಟನ್ ಶೀಘ್ರದಲ್ಲೇ ಲಭ್ಯ: ಟೆಸ್ಲಾ ಸಿಇಓ ಎಲಾನ್‌ ಮಸ್ಕ್‌ ಟ್ವೀಟ್‌ ಫಲುಶ್ರುತಿ?

Bombinate Technologies Pvt. ಎಂದು ಕರೆಯಲ್ಪಡುವ ಬೆಂಗಳೂರು ಮೂಲದ ಸ್ಟಾರ್ಟಪ್, ಪ್ರಖ್ಯಾತ ಬಳಕೆದಾರರು ಮತ್ತು ಕ್ರಿಕೆಟಿಗರು, ಬಾಲಿವುಡ್ ತಾರೆಯರು ಮತ್ತು ಸರ್ಕಾರದ ಮಂತ್ರಿಗಳಿಗಾಗಿ ಪ್ರತ್ಯೇಕ ಹಳದಿ ಟಿಕ್ ವೈಶಿಷ್ಟ್ಯವನ್ನು ಹೊಂದಿದೆ.

ಅಪ್ಲಿಕೇಶನ್ 10 ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು ಹೆಚ್ಚಿನ ಪ್ರಾದೇಶಿಕ ಬಳಕೆದಾರ ಸಂಖ್ಯೆ ಹೆಚ್ಚಿದಂತೆ ಇನ್ನೂ ಹೆಚ್ಚಿನ ಭಾಷೆಗಳನ್ನು ಸೇರಿಸಲಾಗುತ್ತಿದೆ. ಆ್ಯಪ್ ನೈಜೀರಿಯಾದಲ್ಲಿಯೂ ಲಭ್ಯವಿದ್ದು, ವಿದೇಶದಲ್ಲಿ ಬಿಡುಗಡೆಗೆ ಪರೀಕ್ಷೆಗಳನ್ನು ನಡೆಸುತ್ತಿದೆ. 

ಈ ವಾರದ ನಂತರ ಕೂ ತನ್ನ ಅಲ್ಗಾರಿದಮ್‌ಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲು ಯೋಜಿಸಿದೆ. ಇದ ಬೆಳವಣಿಗೆ ಸಾಮಾಜಿಕ ಮಾಧ್ಯಮದಲ್ಲಿಇನ್ನೊಂದು ಮೈಲುಗಲ್ಲಾಗಿದೆ. ಕೂ ಬಳಕೆದಾರರು ತಮ್ಮ ಫೀಡನ್ನು ಹೇಗೆ ಪಡೆಯುತ್ತಾರೆ, ಯಾರನ್ನು ಅನುಸರಿಸಬೇಕು ಮತ್ತು ಅದು ಹ್ಯಾಶ್‌ಟ್ಯಾಗ್ ಟ್ರೆಂಡ್‌ಗಳನ್ನು ಹೇಗೆ ನಿರ್ಮಿಸುತ್ತದೆ ಎಂಬುದನ್ನು ಅದು ಹೇಗೆ ಶಿಫಾರಸು ಮಾಡುತ್ತದೆ ಎಂಬುದರ ಕುರಿತ ಒಳನೋಟಗಳನ್ನು ನೀಡಲಿದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ