ವಿಜ್ಞಾನ ಟಿವಿ ಚಾನೆಲ್ ಆರಂಭಿಸಲಿದೆ ಇಸ್ರೋ

By Web DeskFirst Published Aug 13, 2018, 5:18 PM IST
Highlights

ಹಲವು ಮೊದಲುಗಳಿಗೆ ಈಗಾಗಲೇ ನಾಂದಿ ಹಾಡಿರುವ ಇಸ್ರೋ, ಭಾರತದಲ್ಲಿ ವೈಜ್ಞಾನಿಕ ಚಾನೆಲ್‌ವೊಂದನ್ನು ಆರಂಭಿಸಲು ಮುಂದಾಗಿದೆ. ಆ ಮೂಲಕ ಭಾರತದ ಮೊದಲ ವೈಜ್ಞಾನಿಕ ಚಾನೆಲ್ ಅನ್ನು ಆರಂಭಿಸಿದಲಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಇಸ್ರೋವಿನ ಈ ಕಾರ್ಯದ ಮುಖ್ಯ ಉದ್ದೇಶ.

ಬೆಂಗಳೂರು: ಜನರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸಲು ದೇಶದ ಪ್ರತಿಷ್ಠಿತ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಟಿವಿ ಚಾನೆಲ್‌ವೊಂದನ್ನು ಆರಂಭಿಸುತ್ತಿದೆ. ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಶಾಲಾ ಮಕ್ಕಳಲ್ಲಿ ವಿಜ್ಞಾನ ಪ್ರೀತಿಯನ್ನು ಹೆಚ್ಚಿಸಲು ಸಂಸ್ಥೆ ಪಣ ತೊಟ್ಟಿದೆ.

'ಪ್ರೌಢ ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಅರಿವು ಮೂಡಿಸಲು ಇಸ್ರೋ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ,' ಎಂದು ಸಂಸ್ಥೆಯ ಮುಖ್ಯಸ್ಥ ಕೆ.ಶಿವನ್ ಹೇಳಿದ್ದಾರೆ.

ಆಯ್ದ ವಿದ್ಯಾರ್ಥಿಗಳಿಗೆ 25-30 ದಿನಗಳ ಕಾಲ ತರಬೇತಿ ಶಿಬಿರವನ್ನು ಇಸ್ರೋ ಹಮ್ಮಿಕೊಳ್ಳಲ್ಲಿದೆ. ಅಲ್ಲದೇ ಈ ವಿದ್ಯಾರ್ಥಿಗಳಿಗೆ ತರಬೇತಿ ಪಡೆಯುವ ವಿದ್ಯಾರ್ಥಿಗಳು ಪ್ರಯೋಗಾಲಯಗಳಿಗೆ ಭೇಟಿ ನೀಡಬಹುದಲ್ಲದೇ, ತಮ್ಮದೇ ಪುಟ್ಟ ಉಪಗ್ರಹ ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸಲಾಗುವುದು, ಎಂದು ಶಿವನ್ ಹೇಳಿದ್ದಾರೆ.

ಇದುವರೆಗೂ ದೇಶದಲ್ಲಿ ವಿಜ್ಞಾನ ಕಾರ್ಯಕ್ರಮಗಳನ್ನು ಬಿತ್ತರಿಸುವಂಥ ಯಾವುದೇ ಟಿವಿ ಚಾನೆಲ್‌ಗಳಿಲ್ಲ. ಇಸ್ರೋ ಈ ಪ್ರಯತ್ನ ಜನರಲ್ಲಿ ವೈಜ್ಞಾನಿಕ ಅರಿವು ಹೆಚ್ಚಿಸಲಿದೆ. ಅಲ್ಲದೇ ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ ನವೋದ್ಯಮಗಳಿಗೆ ನೆರವು ನೀಡುವ ಕಾರ್ಯಕ್ಕೂ ಸಂಸ್ಥೆ ಹಲವು ಯೋಜನೆಗಳನ್ನು ಆರಂಭಿಸಲಿದೆ. ಈ ಕಂಪನಿಗಳು ಇಸ್ರೋಗೆ ನೆರವಾಗಬಹುದು, ಎಂದು ಶಿವನ್ ತಿಳಿಸಿದ್ದಾರೆ.

ಇಂಗ್ಲಿಷ್‌ನಲ್ಲಿ ಈ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

click me!