54 ಲಕ್ಷ ಟ್ವಿಟ್ಟರ್ ಬಳಕೆದಾರರ ಮಾಹಿತಿಗೆ ಕನ್ನ: ಹ್ಯಾಕರ್‌ ಸಂಸ್ಥೆಗೆ ಮಾರಾಟ

By Anusha KbFirst Published Nov 28, 2022, 7:23 PM IST
Highlights

ಟ್ವಿಟ್ಟರ್ ಬಳಕೆದಾರರು ಗಾಬರಿಪಡುವ ವಿಚಾರವೊಂದು ಬೆಳಕಿಗೆ ಬಂದಿದ್ದು, ಬಳಕೆದಾರರು ಸಾರ್ವಜನಿಕಗೊಳಿಸಲು ಬಯಸದ ತಮ್ಮ ಖಾಸಗಿ ಮಾಹಿತಿಗಳಾದ ಫೋನ್ ನಂಬರ್, ಇ-ಮೇಲ್ ಅಡ್ರೆಸ್, ಇತರ ಕೆಲ ಖಾಸಗಿ ಮಾಹಿತಿಗಳು ಸೋರಿಕೆಯಾಗಿವೆ ಎಂದು ತಿಳಿದು ಬಂದಿದೆ.   

ಟ್ವಿಟ್ಟರನ್ನು ಎಲನ್ ಮಸ್ಕ್ ತನ್ನ ಸುಪರ್ದಿಗೆ ತೆಗೆದುಕೊಂಡ ಬಳಿಕ ಟ್ವಿಟ್ಟರ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಈಗ ಟ್ವಿಟ್ಟರ್ ಬಳಕೆದಾರರು ಗಾಬರಿಪಡುವ ವಿಚಾರವೊಂದು ಬೆಳಕಿಗೆ ಬಂದಿದ್ದು, ಬಳಕೆದಾರರು ಸಾರ್ವಜನಿಕಗೊಳಿಸಲು ಬಯಸದ ತಮ್ಮ ಖಾಸಗಿ ಮಾಹಿತಿಗಳಾದ ಫೋನ್ ನಂಬರ್, ಇ-ಮೇಲ್ ಅಡ್ರೆಸ್, ಇತರ ಕೆಲ ಖಾಸಗಿ ಮಾಹಿತಿಗಳು ಸೋರಿಕೆಯಾಗಿವೆ ಎಂದು ತಿಳಿದು ಬಂದಿದೆ.   

ಟ್ವಿಟರ್ ಈ ವರ್ಷ ಜುಲೈನಲ್ಲಿ ತನ್ನ ಕೋಡ್‌ನಲ್ಲಿನ ಸೂಕ್ಷ್ಮತೆಯು ಡಾಟಾ ಸೋರಿಕೆಗೆ ಕಾರಣವಾಯಿತು ಎಂದು ಒಪ್ಪಿಕೊಂಡಿತ್ತು. ಆದರೆ ಟ್ವಿಟ್ಟರ್‌ನಿಂದ ಲೀಕ್ ಆದ ಡಾಟಾವನ್ನು ಯಾರಾದರೂ ಬಳಸಿಕೊಂಡಿದ್ದಾರೆ ಎಂದು ಖಚಿತಪಡಿಸಿಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ಅದು ಹೇಳಿತ್ತು. ಆದರೆ ಈಗ ಬ್ಲೀಪಿಂಗ್ ಕಂಪ್ಯೂಟರ್ ವರದಿಯ ಪ್ರಕಾರ 5.4 ಮಿಲಿಯನ್‌ಗೂ ಹೆಚ್ಚು ಟ್ವಿಟ್ಟರ್ ಬಳಕೆದಾರ ದಾಖಲೆಗಳನ್ನು ಕೆಲವು ಹ್ಯಾಕರ್ ಸಂಸ್ಥೆಗಳಲ್ಲಿ ಉಚಿತವಾಗಿ ಹಂಚಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.  

ಬರಿ ಇಷ್ಟೇ ಅಲ್ಲದೇ ಟ್ವಿಟ್ಟರ್‌ನಿಂದ ಅಮಾನತುಗೊಂಡ (suspended users) ಕೆಲ ಬಳಕೆದಾರರಿಗೆ ಪೂರಕವಾದ 1.4 ಮಿಲಿಯನ್ ಟ್ವಿಟ್ಟರ್ ಖಾತೆಗಳನ್ನು ಬೇರೆಯವರಿಗೆ ವಿತರಿಸಲಾಗಿದೆ. ಅಲ್ಲದೇ ಇದೇ ರೀತಿಯೇ ಹೆಚ್ಚಿನ ಮಾಹಿತಿ ಸೋರಿಕೆ ಆಗಿರಬಹುದು ಎಂದು ತಿಳಿದು ಬಂದಿದೆ. ಹೀಗೆ ಸೋರಿಕೆಯಾದ ಮಾಹಿತಿಯಲ್ಲಿ ಸಾರ್ವಜನಿಕಗೊಳಿಸಲು ಬಯಸದ ಕೆಲ ಮಾಹಿತಿಗಳು, ಸಾರ್ವಜನಿಕವಾಗಿರಲು ಉದ್ದೇಶಿಸದ ಕೆಲ ಇಮೇಲ್‌ಗಳು, ದೂರವಾಣಿ ಸಂಖ್ಯೆಗಳನ್ನು ಒಳಗೊಂಡಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಸೆಪ್ಡೆಂಬರ್ ತಿಂಗಳಲ್ಲಿ ಹಾಗೂ ನವಂಬರ್ 24 ರಂದು ಮತ್ತೆ 5.4 ಮಿಲಿಯನ್ ಟ್ವಿಟ್ಟರ್ ಬಳಕೆದಾರರ ದಾಖಲೆಗಳನ್ನು ಹ್ಯಾಕಿಂಗ್ ಸಂಸ್ಥೆಗಳಲ್ಲಿ ಉಚಿತವಾಗಿ ಹಂಚಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. 

ಟ್ವಿಟರ್ ಖರೀದಿಸಿ ಸಂಭ್ರಮಿಸಿದ ಮಸ್ಕ್‌ಗೆ ಶಾಕ್, 2022ರಲ್ಲಿ ಪ್ರತಿ ದಿನ 2,500 ಕೋಟಿ ರೂ ಲಾಸ್!

ಬ್ರೀಚ್ಡ್ ಹ್ಯಾಕಿಂಗ್ ಫೋರಂ ಎಂಬ ಸಂಸ್ಥೆಯ ಮಾಲೀಕ  ಪೊಂಪೊಂಪುರಿನ್ (Pompompurin) ಎಂಬುವವರೇ ಬ್ಲೀಪಿಂಗ್ ಕಂಪ್ಯೂಟರ್‌ಗೆ (BleepingComputer) ಈ ವಿಚಾರವನ್ನು ಖಚಿತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಬ್ರೀಚ್ಡ್ ಹ್ಯಾಕಿಂಗ್ ಫೋರಂಗೆ ಈ ವರ್ಷದ ಆಗಸ್ಟ್‌ನಲ್ಲಿ ಮಾರಾಟವಾದ ದಾಖಲೆಗಳು ಸಿಕ್ಕಿದ್ದು, ಇದರಲ್ಲಿ 5,485,635 ಲಕ್ಷ ಟ್ವಿಟ್ಟರ್ ಬಳಕೆದಾರರ ಮಾಹಿತಿ ಒಳಗೊಂಡಿದೆ ಎಂದು ಪೊಂಪೊಂಪುರಿನ್ ಖಚಿತಪಡಿಸಿದ್ದಾರೆ. 

ಈ ದಾಖಲೆಗಳು ಖಾಸಗಿ ಇಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆ ಮತ್ತು ಖಾತೆಯ ಟ್ವಿಟ್ಟರ್ ಐಡಿ (Twitter ID), ಪ್ರೊಫೈಲ್ ಇಮೇಜ್, ಹೆಸರು, ಪರಿಶೀಲಿಸಿದ ಸ್ಥಿತಿ (verified status), ಸ್ಥಳ, ಯುಆರ್‌ಎಲ್, ವಿವರಣೆ, ಫಾಲೋವರ್‌ಗಳ ಸಂಖ್ಯೆ, ಖಾತೆ ರಚನೆ ದಿನಾಂಕ, ಸ್ನೇಹಿತರ ಸಂಖ್ಯೆ, ಇಷ್ಟಪಟ್ಟಿರುವಂತಹ ವಿಚಾರ ಸೇರಿದಂತೆ ಸಾರ್ವಜನಿಕವಾಗಿ ಬಹಿರಂಗಗೊಳಿಸಬಾರದ ದಾಖಲೆಗಳನ್ನು ಒಳಗೊಂಡಿದೆ ಎಂದು ತಿಳಿದು ಬಂದಿದೆ. 

ಮತ್ತೆ ಟ್ವಿಟ್ಟರ್‌ನಲ್ಲಿ ಶುರುವಾಗಲಿದೆ ಡೊನಾಲ್ಡ್‌ ಟ್ರಂಪ್‌ ಹವಾ..! ಅಮೆರಿಕ ಮಾಜಿ ಅಧ್ಯಕ್ಷರು ಹೇಳಿದ್ದೇನು..?

ಇದಲ್ಲದೆ, ಪ್ರಮುಖ ಸೈಬರ್ ಭದ್ರತಾ ತಜ್ಞ (security expert) ಚಾಡ್ ಲೋಡರ್ (Chad Loder), ಟ್ವಿಟರ್ ಪೋಸ್ಟ್‌ನಲ್ಲಿ ಹೆಚ್ಚು ಗಂಭೀರವಾದ ಮಾಹಿತಿ ಉಲ್ಲಂಘನೆಯ ಬಗ್ಗೆ ಎಚ್ಚರಿಸಿದ್ದಾರೆ. ಆದರೆ, ಈಗ ಅವರ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಯುನೈಟೆಡ್ ಎಮಿರೇಟ್ಸ್‌ನಲ್ಲಿ ಹಾಗೂ ಅಮೆರಿಕಾದಲ್ಲಿ ಲಕ್ಷಾಂತರ ಟ್ವಿಟ್ಟರ್ ಖಾತೆಗಳ ಮೇಲೆ ಪರಿಣಾಮ ಬೀರುವ ದೊಡ್ಡ ಮಟ್ಟದ ಡಾಟಾ ಉಲ್ಲಂಘನೆಯ ಸಾಕ್ಷ್ಯಗಳನ್ನು (evidence) ನಾನು ಈಗಷ್ಟೇ ಸ್ವೀಕರಿಸಿದ್ದೇನೆ. ಅಲ್ಲದೇ ಡಾಟಾ ಉಲ್ಲಂಘನೆಗೊಳಗಾದ ಕೆಲವರನ್ನು ಸಂಪರ್ಕಿಸಿದಾಗ ಅವವರು ಅದು ನಿಖರವಾದ ಮಾಹಿತಿ ಎಂಬುದನ್ನು ಖಚಿತಪಡಿಸಿದ್ದಾರೆ ಎಂದು ಲೋಡರ್ ಟ್ವಿಟ್ ಮಾಡಿದ್ದು, ಇಷ್ಟು ದೊಡ್ಡ ಮಟ್ಟದ ಮಾಹಿತಿ ಉಲ್ಲಂಘನೆ ಇದುವರೆಗೆ ನಡೆದಿಲ್ಲ ಎಂದು ಅವರು ಹೇಳಿದ್ದಾರೆ. ಇವರ ಈ ಟ್ವಿಟ್ ಈಗ ಈ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ.
 

click me!