
ನವದೆಹಲಿ (ಆ.29): ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧ ಮಾಡಿದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸೋಮವಾರ ಈ ವಿಚಾರಣೆ ಆರಂಭವಾಗುತ್ತಿದ್ದಂತೆ, ಅರ್ಜಿದಾರರ ಪರ ವಕೀಲರು ಕೋರ್ಟ್‌ಗೆ ಪ್ರಕರಣವನ್ನು ಮುಂದೂಡುವಂತೆ ಮನವಿ ಮಾಡಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪೀಠ, ಸೆ. 5ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ವಿಚಾರಣೆ ಮುಂದೂಡಿಕೆ ಮಾಡುವ ಮುನ್ನ ಸುಪ್ರೀಂ ಕೋರ್ಟ್, ಪ್ರಕರಣದಲ್ಲಿ ತುರ್ತು ವಿಚಾರಣೆಯನ್ನು ಕೋರಿದ್ದ ಮುಸ್ಲಿಂ ಅರ್ಜಿದಾರರನ್ನು ನ್ಯಾಯಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣದಲ್ಲಿ ಅರ್ಜಿದಾರರು ತುರ್ತು ವಿಚಾರಣೆಯನ್ನು ಕೋರಿದ್ದಾರೆ. ಹಾಗಾಗಿ ತೀರಾ ದೂರದವರೆಗೆ ಮುಂದೂಡಿಕೆ ವರದಿಯನ್ನು ಕೋರ್ಟ್ ಸ್ವೀಕರಿಸುವುದಿಲ್ಲ. ಸೆ. 5 ರಿಂದ ಇದರ ವಿಚಾರಣೆಯನ್ನು ಆರಂಭಿಸಲಿದ್ದೇವೆ. ಅದಲ್ಲದೆ, ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಆ ಮೂಲಕ ಈ ವಿಷಯದಲ್ಲಿ ಅಫಿಡವಿಟ್ ಸಲ್ಲಿಸುವಂತೆ ಸೂಚನೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಈ ರೀತಿಯ ಫೋರಂ ಶಾಪಿಂಗ್‌ಗೆ ನಾವು ಅನುಮತಿ ನೀಡುವುದಿಲ್ಲ ಎಂದು ಅರ್ಜಿದಾರರಿಗೆ ತಿಳಿಸಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅರ್ಜಿಗಳ ಗುಂಪಿನಲ್ಲಿ ನೋಟಿಸ್ ಸ್ವೀಕರಿಸುವುದಾಗಿ ಹೇಳಿದರು ಮತ್ತು ಪ್ರತಿಕ್ರಿಯೆ ಅಫಿಡವಿಟ್ ಅಗತ್ಯವಿಲ್ಲ ಎಂದು ಹೇಳಿದರು. ಪ್ರಕರಣವು ಕಾನೂನಿನ ಶುದ್ಧ ಪ್ರಶ್ನೆಯನ್ನು ಒಳಗೊಂಡಿರುವುದರಿಂದ, ಕರ್ನಾಟಕ ಸರ್ಕಾರದಿಂದ (Karnataka Government ) ಯಾವುದೇ ಉತ್ತರ ಅಫಿಡವಿಟ್ ಅಗತ್ಯವಿಲ್ಲ ಎಂದು ಮೆಹ್ತಾ ಹೇಳಿದರು. ಎಸ್‌ಸಿ ಅರ್ಜಿದಾರರು ತುರ್ತು ವಿಚಾರಣೆಯನ್ನು ಕೋರಿ 6 ಬಾರಿ ಪ್ರಸ್ತಾಪಿಸಿದ್ದಾರೆ ಎಂದು ಅವರು ಹೇಳಿದರು. ಮೊಹಮ್ಮದ್ ನಿಜಾಮುದ್ದೀನ್ ಪಾಷಾ ಅವರ ಮೂಲಕ ಅರ್ಜಿದಾರರು ಪರೀಕ್ಷೆಗಳು ಸನಿಹದಲ್ಲಿರುವಾಗ ತುರ್ತು ವಿಚಾರಣೆಯನ್ನು ಕೋರಲಾಗಿದೆ ಎಂದು ಹೇಳಿದರು.
ಪಾಷಾ ಮತ್ತು ಇತರ ವಕೀಲರು ಪ್ರಕರಣದೊಂದಿಗೆ ಸಿದ್ಧರಾಗಬೇಕಾಗಿದೆ ಎಂದು ಹೇಳಿದರು. "ನೀವು ಪ್ರಕರಣಕ್ಕೆ ಸಿದ್ಧರಾಗದೆ ತುರ್ತು ವಿಚಾರಣೆಗೆ ಪ್ರಸ್ತಾಪಿಸುತ್ತಿದ್ದೀರಾ?" ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ. "ಸರ್ಕಾರಿ ಅಧಿಕಾರಿಗಳ ಮಲತಾಯಿ ವರ್ತನೆಯು ವಿದ್ಯಾರ್ಥಿಗಳ ನಂಬಿಕೆಯನ್ನು ಅಭ್ಯಾಸ ಮಾಡುವುದನ್ನು ತಡೆಯುತ್ತದೆ ಮತ್ತು ಅನಗತ್ಯ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಇದು ಕಾರಣವಾಯಿತು" ಎಂದು ಉನ್ನತ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಒಂದು ಮೇಲ್ಮನವಿಯಲ್ಲಿ ಹೇಳಲಾಗಿದೆ. ಕಳೆದ ಮಾರ್ಚ್‌ನಲ್ಲಿ ಈ ಕುರಿತಾಗಿ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ಹೇಳಿತ್ತು.
ಹಿಜಾಬ್ ವಿವಾದ: ಇಂದು ಮೊದಲ ಬಾರಿಗೆ ಸುಪ್ರೀಂನಲ್ಲಿ ವಿಚಾರಣೆ
ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ (Government PU College in Udupi) ಈ ವರ್ಷದ ಜನವರಿಯಲ್ಲಿ ಹಿಜಾಬ್ (Hijab Row) ವಿವಾದ ಆರಂಭವಾಗಿತ್ತು. ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ಕಾಲೇಜಿ ಆಡಳಿತ ಮಂಡಳಿ ಪ್ರವೇಶ ನಿರ್ಬಂಧ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಆರು ಬಾಲಕಿಯರು ಕಾಲೇಜಿನ ಹೊರಗಡೆ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಕೆಲವು ಮುಸ್ಲಿಂ ಸಂಘಟನೆಗಳು ಕೂಡ ಬೆಂಬಲ ನೀಡಿದ್ದವು. ಬಾಲಕಿಯರ ಪ್ರತಿಭಟನೆ ತೀವ್ರವಾಗುತ್ತಿದ್ದಂತೆ, ಉಡುಪಿಯ ಹಾಗೂ ಕರಾವಳಿ ಭಾಗದಲ್ಲಿ ಕೂಡ ಇದು ವ್ಯಾಪಿಸಿತು. ಕೇಸರಿ ಬಣ್ಣದ ಶಾಲು ಧರಿಸಿ ಹುಡುಗರು ಹಾಗೂ ಹುಡುಗಿಯರು ಕಾಲೇಜ್‌ಗೆ ಬರಲು ಆರಂಭಿಸಿದ್ದರು.
ಭಾರತ ಮಾತೆ ಕೈಯಲ್ಲಿ ಭಗವಾಧ್ವಜ: ಮಂಗಳೂರು ವಿವಿ ಕಾಲೇಜಿನಲ್ಲಿ ಮತ್ತೆ ವಿವಾದ!
ಕೆಲವೇ ದಿನಗಳಲ್ಲಿ ಇದು ರಾಜ್ಯದ ಹಲವು ಭಾಗಗಳಿಗೆ ವ್ಯಾಪಿಸಿತ್ತು. ಪ್ರತಿಭಟನೆಗಳು ತೀವ್ರವಾಗುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಕರ್ನಾಟಕ ಸರ್ಕಾರ, ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ಸಂಹಿತೆಯನ್ನು ಪಾಲಿಸಬೇಕು. ಹಿಜಾಬ್ ಹಾಗೂ ಕೇಸರಿ ಶಾಲುಗಳನ್ನು ಕಾಲೇಜುಗಳಲ್ಲಿ ಧರಿಸುವುದಕ್ಕೆ ನಿಷೇಧ ವಿಧಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ