'ಗೋಮಾತೆ ಕಸಾಯಿಖಾನೆಗೆ ಹೋಗಬಾರದು ಇದು ಬಿಜೆಪಿ ಸರ್ಕಾರದ ಸಂಕಲ್ಪ'

By Suvarna NewsFirst Published Jul 11, 2020, 1:59 PM IST
Highlights

ರಾಜ್ಯದಲ್ಲಿ ಗೋ ಹತ್ಯಾ ನಿಷೇಧ ಕಾಯ್ದೆಯನ್ನ ಜಾರಿಗೆಗೆ ತರಲು ಕ್ರಮ| ಇದು ನಮ್ಮ ಸರ್ಕಾರದ ಅಜೆಂಡಾ|  ಈಗಾಗಲೇ ಈ ಕಾಯಿದೆ ಅನೇಕ ರಾಜ್ಯಗಳಲ್ಲಿ ಇದೆ| ಕೊರೋನಾ ಕಡಿಮೆ ಆದ ಬಳಿಕ  ಮುಂದಿನ ಅಧಿವೇಶನದಲ್ಲಿ ಗೋ ಹತ್ಯಾ ಕಾಯಿದೆ ಜಾರಿಗೆ ಕ್ರಮಕೈಗೊಳ್ಳಲಾಗುವುದು|

ಬೆಂಗಳೂರು(ಜು.11): ತುಮಕೂರು ಜಿಲ್ಲೆಯ ಸಿರಾ ಬಳಿ 44 ಕೋಟಿ ರೂ. ವೆಚ್ಚದಲ್ಲಿ 20 ಎಕರೆ ವಿಸ್ತೀರ್ಣದಲ್ಲಿ ಪ್ರಾಣಿಗಳ ವಧಾಘರ್ ನಿರ್ಮಾಣವಾಗುತ್ತಿದೆ. ಇದು ರಾಜ್ಯದಲ್ಲಿಯೇ ಮೊದಲನೆಯ ವಧಾಘರ್ ಆಗಿದೆ. ಜಾನುವಾರಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಪ್ರತಿ ಜಿಲ್ಲೆಯ, ತಾಲೂಕಿನ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಹೇಳಿದ್ದಾರೆ.

ಇಂದು(ಶನಿವಾರ) ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಜಾನುವಾರಗಳಿಗೆ ಅಂಬ್ಯುಲೆನ್ಸ್ ಸೌಲಭ್ಯವನ್ನ ರಾಜ್ಯದ 16 ಜಿಲ್ಲೆಗಳಲ್ಲಿ ನೀಡಲಾಗುತ್ತಿದೆ. ಕೇವಲ 4 ಗಂಟೆಯಲ್ಲಿ ಅನಾರೋಗ್ಯಕ್ಕೆ ಸಿಲುಕಿದ  ಜಾನುವಾರು ಇರುವ ಸ್ಥಳವನ್ನ ವೈದ್ಯರು ತಲುಪುವ ಹಾಗೇ‌ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. 

'ಸಿದ್ದರಾಮಯ್ಯ ಮನಸ್ಸು ಗೋ ಹತ್ಯೆ ಪರವಿದೆ'

ಗೋವುಗಳು ಕಸಾಯಿಖಾನೆಗೆ ಹೋಗಬಾರದು. ಇದು ನಮ್ಮ ಸರ್ಕಾರದ ಸಂಕಲ್ಪವಾಗಿದೆ. ಕೊರೋನಾ‌ ಕಡಿಮೆ ಆದ ಮೇಲೆ ರಾಜ್ಯದಲ್ಲಿ ಗೋ ಹತ್ಯಾ ನಿಷೇಧ ಕಾಯ್ದೆಯನ್ನ ಜಾರಿಗೆಗೆ ತರಲು ಕ್ರಮಕೈಗೊಳ್ಳಲಾಗುತ್ತಿದೆ. ಇದು ನಮ್ಮ ಸರ್ಕಾರದ ಅಜೆಂಡಾ ಆಗಿದೆ.  ಈಗಾಗಲೇ ಈ ಕಾಯಿದೆ ಅನೇಕ ರಾಜ್ಯಗಳಲ್ಲಿ ಇದೆ. ಕೊರೋನಾ ಕಡಿಮೆ ಆದ ಬಳಿಕ  ಮುಂದಿನ ಅಧಿವೇಶನದಲ್ಲಿ ಗೋ ಹತ್ಯಾ ಕಾಯಿದೆ ಜಾರಿಗೆ ಕ್ರಮಕೈಗೊಳ್ಳಲಾಗುವುದು. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಬೇಕು. ಈ ಸಂಬಂಧ ಸಿಎಂ ಜೊತೆ ಚರ್ಚೆ ಮಾಡಿ ನಿಷೇಧ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಫೆಬ್ರುವರಿವರೆಗೂ ಹಾಲು ಪೂರೈಕೆದಾರರಿಗೆ ಪ್ರೋತ್ಸಾಹ ಧನ 12, 4900 ಲಕ್ಷ ರೂ. ವಿತರಣೆ ಮಾಡಲಿದ್ದೇವೆ. ಮಾರ್ಚ್‌ನಿಂದ ಜೂನ್‌ವರೆಗೆ 53,504 ಲಕ್ಷ ಪ್ರೋತ್ಸಾಹ ಧನ ರೈತರಿಗೆ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ ಅವರು ಹೇಳಿದ್ದಾರೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"

click me!