Krishimela2021| 1 ಕೋಟಿಯ ಹಳ್ಳಿಕಾರ್‌ ಹೋರಿ ನೋಡಿ ನಿಬ್ಬೆರಗಾದ ಜನ..!

By Kannadaprabha NewsFirst Published Nov 12, 2021, 9:47 AM IST
Highlights

* ಕೃಷಿ ಮೇಳದಲ್ಲಿ ಕೋಟಿ ಹೋರಿಯ ಕೌತುಕ
* ಇದರ ವೀರ್ಯ ಸಂಗ್ರಹಕ್ಕೆ ಪ್ರತ್ಯೇಕ ಸಂವರ್ಧನ ಕೇಂದ್ರ ಸ್ಥಾಪಿಸಿದ ಮಂಡ್ಯದ ರೈತ
* ಡಾರ್ಪರ್‌ ಕುರಿಗೆ 5 ಲಕ್ಷ
 

ಬೆಂಗಳೂರು(ನ.12): ಜಿಕೆವಿಕೆಯಲ್ಲಿ(GKVK) ಆಯೋಜಿಸಿರುವ ಕೃಷಿ ಮೇಳಕ್ಕೆ(Krishimela) ಆಗಮಿಸಿದ್ದ 1 ಕೋಟಿ ಮೌಲ್ಯದ ಹಳ್ಳಿಕಾರ್‌ ಹೋರಿ(Hallikar Hori) ‘ಕೃಷ್ಣ’ನೇ ಚರ್ಚಾ ವಿಷಯವೂ ಆಗಿದ್ದು ವಿಶೇಷವಾಗಿತ್ತು. ಹೋರಿ ಎಲ್ಲಿದೆ ಎಂದು ಬಹುತೇಕರು ಹುಡುಕುತ್ತಿದ್ದುದು ಕಂಡುಬಂತು. ವಿದ್ಯಾರ್ಥಿಗಳು(Students), ರೈತರು(Farmers), ಮಾಧ್ಯಮದವರ ಕೇಂದ್ರ ಬಿಂದುವೂ ಆಗಿದ್ದ. ಒಂದು ಕೋಟಿ ರು. ಬೆಲೆಯ ಹೋರಿಯ ಮಾಲಿಕ ಮಂಡ್ಯ(Mandya) ಜಿಲ್ಲೆ ಮಳವಳ್ಳಿಯ ಬೋರೇಗೌಡ ಹೋರಿಯ ವೀರ್ಯ(Sperm) ಮಾರಾಟದ ಅಂಕಿ ಅಂಶ ನೀಡುತ್ತಿದ್ದಂತೆ ಅಬ್ಬಬ್ಬಾ ಎಂದು ಹುಬ್ಬೇರಿಸಿದರು.

‘ವಾರಕ್ಕೆ ಎರಡು ಬಾರಿ ಕೃಷ್ಣನಿಂದ ವೀರ್ಯ ಸಂಗ್ರಹಿಸಲಾಗುತ್ತದೆ. ಇದರಲ್ಲಿ ಕಡಿಮೆ ಎಂದರೂ ಒಂದು ಸಲಕ್ಕೆ 300 ಸ್ಟಿಕ್‌ ವೀರ್ಯ ಸಂಗ್ರಹಿಸಿ ಕೆಡದಂತೆ ನೈಟ್ರೋಜನ್‌ ಕಂಟೈನರ್‌ನಲ್ಲಿ ಸಂಗ್ರಹಿಸಲಾಗುವುದು. ಇದಕ್ಕಾಗಿಯೇ ವೀರ್ಯ ಸಂವರ್ಧನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಹಳ್ಳಿಕಾರ್‌ ವೀರ್ಯ ಸಂವರ್ಧನ ಕೇಂದ್ರವನ್ನು ಖಾಸಗಿಯಾಗಿ ಪ್ರಪಂಚದಲ್ಲೇ(World) ಯಾರೂ ಸ್ಥಾಪಿಸಿಲ್ಲ ಎಂಬ ಹೆಗ್ಗಳಿಕೆ ಇದೆ. ಗುಜರಾತ್‌ನಿಂದ(Gujrath) ತಜ್ಞರನ್ನು ಕರೆಸಿ ಈಗಾಗಲೇ ಹಲವು ಬಾರಿ ವೀರ್ಯ ಪಡೆಯಲಾಗಿದೆ. ಒಂದು ಸ್ಟಿಕ್‌ ವೀರ್ಯವನ್ನು ಸಾವಿರ ರುಪಾಯಿಗೆ ಮಾರಾಟ ಮಾಡುತ್ತಿದ್ದೇನೆ. ವೀರ್ಯ ಸಂವರ್ಧನ ಕೇಂದ್ರ ಸ್ಥಾಪನೆ ಮತ್ತಿತರ ಕಾರ್ಯಗಳಿಗೆ ಈಗಾಗಲೇ 10 ಲಕ್ಷ ರುಪಾಯಿ ಖರ್ಚು ಮಾಡಿದ್ದು ಈ ವೆಚ್ಚ ವೀರ್ಯ ಮಾರಾಟದಿಂದ ವಾಪಾಸ್‌ ಬಂದಿದೆ. ಹೀಗಿರುವಾಗ ಈ ಹೋರಿ ಒಂದು ಕೋಟಿ ರುಪಾಯಿ ಬೆಲೆ ಬಾಳುವುದಿಲ್ಲವೇ’ ಎಂದು ಬೋರೇಗೌಡ ಪ್ರಶ್ನಿಸುತ್ತಾರೆ.

ಧಾರವಾಡ ಎಮ್ಮೆಗೆ ದೇಸಿ ತಳಿಯ ಮಾನ್ಯತೆ..!

ವೀರ್ಯ ಮಾರಾಟಕ್ಕೆ ಏಜೆನ್ಸಿ

ಇಂತಹ ದಷ್ಟಪುಷ್ಟವಾದ ಹಳ್ಳಿಕಾರ್‌ ತಳಿ ಎಲ್ಲೂ ಇಲ್ಲ. ಈ ಸಂತತಿ ನಶಿಸಿ ಹೋಗಬಾರದು ಎಂಬ ಉದ್ದೇಶದಿಂದ ಮೊದಲು ನೈಸರ್ಗಿಕವಾಗಿ ಹಸುಗಳಿಗೆ ವೀರ್ಯ ನೀಡುತ್ತಿದ್ದೆ. ಹೋರಿಯ ಮೌಲ್ಯ ಗೊತ್ತಾದ ನಂತರ ವೀರ್ಯ ಸಂಗ್ರಹಿಸಿ ಏಕೆ ಮಾರಾಟ ಮಾಡಬಾರದು ಎಂಬ ಯೋಚನೆ ಬಂತು. ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿ ಇಲ್ಲಿಯವರೆಗೂ ಒಂದು ಸಾವಿರಕ್ಕೂ ಅಧಿಕ ವೀರ್ಯದ ಸ್ಟಿಕ್‌ಗಳನ್ನು ಮಾರಾಟ ಮಾಡಿದ್ದು ಶೇ.95 ರಷ್ಟುಫಲಿತಾಂಶ ಕಂಡುಬರುತ್ತಿದೆ. 170 ಹಸುಗಳಿಗೆ(Cow) ನೇರವಾಗಿ ಕ್ರಾಸಿಂಗ್‌ ಮಾಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಈಗಾಗಲೇ ವೀರ್ಯ ಸ್ಟಿಕ್‌ ಮಾರಾಟ ಮಾಡಲು ಏಜೆನ್ಸಿ ನೀಡಿದ್ದು ಇದನ್ನು ಇನ್ನಷ್ಟುವಿಸ್ತರಿಸಲಾಗುವುದು ಎನ್ನುತ್ತಾರೆ ಬೋರೇಗೌಡ.

ಕಪ್ಪತ್ತಗುಡ್ಡದ ಮಣ್ಣು ತಿಂದು ಆರೋಗ್ಯ ಸುಧಾರಣೆ ಮಾಡಿಕೊಳ್ಳುತ್ತಿವೆ ಕುರಿ, ಮೇಕೆಗಳು..!

ಡಾರ್ಪರ್‌ ಕುರಿಗೆ 5 ಲಕ್ಷ

ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆ ಚಿಂತಾಮಣಿಯ(Chintamani) ಕುರುಬೂರಿನ ಚಂದನ ಕುರಿ(Sheep) ಮತ್ತು ಮೇಕೆ ಫಾರಂನ(Goat Farm) ಮಲ್ಲಿಕಾರ್ಜುನ ಅವರು ತಂದಿದ್ದ ದಕ್ಷಿಣ ಆಫ್ರಿಕಾ(South Africa) ಮೂಲದ ಡಾರ್ಪರ್‌ ಕುರಿಯ ಬೆಲೆ ಬರೋಬ್ಬರಿ 5 ಲಕ್ಷ. ಇದರಲ್ಲಿ ಎರಡು ವಿಧವಿದ್ದು ಒಂದು ಕಪ್ಪು ತಲೆ ಹೊಂದಿದ್ದರೆ, ಮತ್ತೊಂದು ಬಿಳಿ ತಲೆ ಹೊಂದಿದೆ. ಇದು ಮಾಂಸದ ತಳಿಯಾಗಿದ್ದು, ಮೂರ್ನಾಲ್ಕು ತಿಂಗಳಿನಲ್ಲೇ ದೇಹದ ತೂಕವನ್ನು 30ರಿಂದ 40 ಕೇಜಿಯಷ್ಟು ಗಳಿಸಿಕೊಳ್ಳುತ್ತದೆ. ಮರಿಗಳು 4ರಿಂದ 6 ಕೇಜಿ ತೂಕವಿದ್ದು, ವರ್ಷದಲ್ಲಿ ಒಂದು ಕ್ವಿಂಟಾಲ್‌ನಷ್ಟು ತೂಕ ಗಳಿಸುತ್ತವೆ.

ಅಧಿಕ ಹಾಲಿಗೆ ಮೇವಿನ ಅಲಸಂದೆ

ಸಾಮಾನ್ಯವಾಗಿ ಮೇವಿಗಾಗಿ ಬಳಸುವ ನೇಪಿಯಾರ್‌ ಹುಲ್ಲಿನಲ್ಲಿ ಶೇ.7ರಷ್ಟು ಪ್ರೋಟೀನ್‌ ಇದ್ದರೆ ಮಂಡ್ಯದ ವೀಸಿ ಫಾರಂನಲ್ಲಿ ಅಭಿವೃದ್ಧಿಪಡಿಸಿರುವ ಮೇವಿನ ಅಲಸಂದೆ ಎಂಎಫ್‌ಸಿ-09-3 ತಳಿಯಲ್ಲಿ ಶೇ.18ರಿಂದ 20ರಷ್ಟು ಪ್ರೋಟೀನ್‌ ಇದ್ದು, ರಾಸುಗಳು ಅಧಿಕ ಹಾಲು ನೀಡುತ್ತವೆ. ಇದು ಹೊಸ ತಳಿಯಾಗಿದ್ದು 90 ದಿವಸದಲ್ಲಿ ಕಟಾವು ಮಾಡಬಹುದು. ಅಲಸಂದೆ ಕಾಳು ಬರುವುದಕ್ಕಿಂತ ಮುಂಚೆಯೇ ಕತ್ತರಿಸಿ ರಾಸುಗಳಿಗೆ ಹಾಕಿದರೆ ಹೆಚ್ಚು ಹಾಲು ಕರೆಯಬಹುದು ಎಂದು ವೀಸಿ ಫಾರಂನ ಅಧಿಕಾರಗಳು ತಿಳಿಸಿದರು.
 

click me!