Published : Aug 28, 2026, 07:48 AM ISTUpdated : Aug 28, 2026, 11:42 PM IST

Karnataka News Live: ಶಿವಣ್ಣನ ‘ಬೇಲ್’ ಟೀಸರ್ ರಿಲೀಸ್‌ - ಪೊಲೀಸ್‌ ಆಫೀಸರ್‌ ಅವತಾರದಲ್ಲಿ ಖಡಕ್‌ ಎಂಟ್ರಿ, ಕಥೆ ಏನು?

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪಾದಯಾತ್ರೆಗೆ ಸಜ್ಜಾಗುತ್ತಿರುವ ನಡುವೆಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗುರುವಾರ ದೆಹಲಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಜೊತೆ ಮಹತ್ವದ ಮಾತುಕತೆ ನಡೆಸಿದರು. ಸುಮಾರು ಒಂದೂಕಾಲು ಗಂಟೆ ನಡೆದ ಮಾತುಕತೆ ವೇಳೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು, ಖಾಲಿ ಇರುವ ಸಚಿವ ಸ್ಥಾನ ತುಂಬುವುದು ಹಾಗೂ ಸಂಪುಟದಲ್ಲಿ ಬದಲಾವಣೆ ಮಾಡುವ ವಿಚಾರಗಳ ಕುರಿತು ಸುದೀರ್ಘ ಮಾತುಕತೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ರಾಜ್ಯ ಸರ್ಕಾರದಲ್ಲಿ ಖಾಲಿಯಿರುವ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಪಡೆಯಲುಲಾಬಿ ಮಾಡುವುದಕ್ಕೆ 10 ಶಾಸಕರು ಹಾಗೂ ಕಾಂಗ್ರೆಸ್ ನಾಯಕರು ದೆಹಲಿಗೆ ದಾಂಗುಡಿ ಇಟ್ಟಿದ್ದಾರೆ. ತಮಗೆ ನಿಗಮ ಮಂಡಳಿಗಳನ್ನಾದರೂ ದಯಪಾಲಿಸುವಂತೆ ಹೈಕಮಾಂಡ್ ಮುಂದೆ ಮೊರೆಯಿಟ್ಟಿದ್ದಾರೆ. ಆದರೆ, ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯಕ್ಕೆ ವಾಪಸ್ ಬಂದಿದ್ದು, ಮುಂದೆ ಯಾವ ಬದಲಾವಣೆ ಆಗಲಿದೆ ನಿರೀಕ್ಷಿಸಲಾಗಿದೆ.

11:42 PM (IST) Aug 28

ಶಿವಣ್ಣನ ‘ಬೇಲ್’ ಟೀಸರ್ ರಿಲೀಸ್‌ - ಪೊಲೀಸ್‌ ಆಫೀಸರ್‌ ಅವತಾರದಲ್ಲಿ ಖಡಕ್‌ ಎಂಟ್ರಿ, ಕಥೆ ಏನು?

ಶಿವರಾಜ್‌ಕುಮಾರ್‌ ಅಭಿನಯದ ‘ಬೇಲ್’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಪವನ್‌ ಒಡೆಯರ್‌ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್‌ 2ರಂದು ಸಿನಿಮಾ ರಿಲೀಸ್‌.

Read Full Story

09:39 PM (IST) Aug 28

ಮಂತ್ರಿಯಾದ 25 ದಿನಕ್ಕೆ ನಾಗೇಂದ್ರ ರಾಜೀನಾಮೆ, ವಿಯೇಂದ್ರ ನೇತೃತ್ವದ ಹೋರಾಟಕ್ಕೆ ಮಣಿದ ಕಾಂಗ್ರೆಸ್ ಸರ್ಕಾರ

ಪ್ರಮಾಣ ವಚನ ಸ್ವೀಕರಿಸಿದ 25 ದಿನಕ್ಕೆ ಬಿ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಡೆಸಿದ ಸತತ ಹೋರಾಟಕ್ಕೆ ಗೆಲುವು ಸಿಕ್ಕಿದೆ. ವಾಲ್ಮೀಕಿ ಹಗರಣದ ಆರೋಪ ಹೊತ್ತಿರುವ ನಾಗೇಂದ್ರ ರಾಜೀನಾಮೆ ಅಂಗೀಕಾರಗೊಂಡಿದೆ.

Read Full Story

09:20 PM (IST) Aug 28

ವಿಮರ್ಶೆ-ಟ್ರೋಲ್‌ಗಳ ನಡುವೆ ಯಶ್‌ಗೆ ಕಿಚ್ಚನ ಬೆಂಬಲ - ‘ಟಾಕ್ಸಿಕ್’ ಬಗ್ಗೆ ಸುದೀಪ್‌ ಹೇಳಿದ್ದೇನು?

ಯಶ್‌ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿರುವ ನಡುವೆ ಕಿಚ್ಚ ಸುದೀಪ್‌ ಮತ್ತು ಉಪೇಂದ್ರ ಚಿತ್ರತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಟಾಕ್ಸಿಕ್’ನ ವಿಭಿನ್ನ ಪ್ರಯತ್ನವನ್ನು ಸುದೀಪ್‌ ಮೆಚ್ಚಿಕೊಂಡಿದ್ದು, ಉಪೇಂದ್ರ ಕೂಡ ಸಿನಿಮಾ ನೋಡಿ ಹೊಸ ಅನುಭವ ಎಂದಿದ್ದಾರೆ.

Read Full Story

08:48 PM (IST) Aug 28

ಅಪ್ಪನ ಸಿನಿಮಾ ಸಂಪರ್ಕ ಬಳಸಲಿಲ್ಲ - ಈ ಕಾರಣಕ್ಕೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ವಿಯಾರಾ ವೃದ್ಧಿ

ಕನ್ನಡ ಚಿತ್ರರಂಗಕ್ಕೆ ಹೊಸ ಹೆಜ್ಜೆ ಇಡುತ್ತಿರುವ ವಿಯಾರಾ ವೃದ್ಧಿ, ತಮ್ಮ ತಂದೆಯ ಸಿನಿಮಾ ಸಂಪರ್ಕ ಬಳಸದೆ ಸ್ವಂತ ದಾರಿಯಲ್ಲಿ ಸಾಗಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ‘ಕೌಂತೇಯ’ ಮತ್ತು ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾಗಳ ಬಗ್ಗೆ ಹಾಗೂ ವಿಭಿನ್ನ ಪಾತ್ರಗಳ ಕನಸಿನ ಕುರಿತು ನಟಿ ಮಾತನಾಡಿದ್ದಾರೆ.

Read Full Story

08:16 PM (IST) Aug 28

ನಾಗೇಂದ್ರ ರಾಜೀನಾಮೆಗೆ ಹೋರಾಟ ಅಂತ್ಯವಾಗಲ್ಲ, ಸರ್ಕಾರಕ್ಕೆ ಬಿವೈ ವಿಜಯೇಂದ್ರ ಬಿಗ್ ವಾರ್ನಿಂಗ್

ವಾಲ್ಮೀಕಿ ಹಗರಣ ಆರೋಪ ಹೊತ್ತಿರುವ ಸಚಿವ ಬಿ ನಾಗೇಂದ್ರ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ನಡೆಸಿದ ಸತತ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಆದರೆ ನಾಗೇಂದ್ರ ರಾಜೀನಾಮೆಯಿಂದ ಬಿಜೆಪಿ ಹೋರಾಟ ಅಂತ್ಯಗೊಳ್ಳುತ್ತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

Read Full Story

08:01 PM (IST) Aug 28

'ನಾನು ಈಗಷ್ಟೇ ಶುರು ಮಾಡಿದ್ದೇನೆ' - 10 ವರ್ಷಗಳ ಸಿನಿ ಜರ್ನಿ ಬಗ್ಗೆ ಆಶಿಕಾ ರಂಗನಾಥ್‌ ಮಾತು

ಚಿತ್ರರಂಗದಲ್ಲಿ 10 ವರ್ಷ ಪೂರೈಸಿರುವ ಆಶಿಕಾ ರಂಗನಾಥ್‌, ತಮ್ಮ ಸಿನಿ ಜರ್ನಿ, ಸಿನಿಮಾ ಆಯ್ಕೆ, ವರ್ಕ್‌-ಲೈಫ್‌ ಬ್ಯಾಲೆನ್ಸ್‌ ಮತ್ತು ಹೊಸ ಪಾತ್ರಗಳ ಬಗ್ಗೆ ಮಾತನಾಡಿದ್ದಾರೆ. ಗಲ್‌-ನೆಕ್ಸ್ಟ್‌-ಡೋರ್‌ ಇಮೇಜ್‌ನಿಂದ ಹೊರಬಂದು ಆ್ಯಕ್ಷನ್‌, ಪೀರಿಯಡ್‌ ಡ್ರಾಮಾ ಹಾಗೂ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.

Read Full Story

04:33 PM (IST) Aug 28

ಸೆಪ್ಟೆಂಬರ್‌ನಲ್ಲಿ ಶಾಲೆ, ಕಾಲೇಜು, ಕಚೇರಿಗಳಿಗೆ ಸಾಲು ಸಾಲು ರಜೆ; ಲಾಂಗ್ ವೀಕ್ ಎಂಡ್ ಯಾವಾಗ ಸಿಗುತ್ತೆ?

2026ರ ಸೆಪ್ಟೆಂಬರ್ ತಿಂಗಳು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಸಾಲು ಸಾಲು ರಜೆಗಳನ್ನು ತರಲಿದೆ. ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿ ಹಬ್ಬಗಳು ವಾರಾಂತ್ಯದೊಂದಿಗೆ ಸೇರಿ ಎರಡು ಲಾಂಗ್ ವೀಕೆಂಡ್‌ಗಳನ್ನು ಸೃಷ್ಟಿಸುತ್ತವೆ. ಈ ತಿಂಗಳಿನಲ್ಲಿರುವ ಒಟ್ಟು ರಜೆಗಳ ಸಂಪೂರ್ಣ ವಿವರ ಇಲ್ಲಿದೆ.
Read Full Story

03:38 PM (IST) Aug 28

El Nino ಎಷ್ಟು ವರ್ಷ ಇರುತ್ತೆ? ಸೆಪ್ಟೆಂಬರ್‌ನಲ್ಲಿ ಆದರೂ ಮಳೆ ಬರುತ್ತಾ?

ದೇಶದಲ್ಲಿ ಎಲ್‌ ನಿನೋ ಪ್ರಭಾವ ತೀವ್ರವಾಗಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಇದರ ಪ್ರಭಾವ ಹೆಚ್ಚಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿಯೂ ನೀರಿನ ಶೇಖರಣೆ ಪ್ರಮಾಣ ಕಡಿಮೆಯಾಗಿದೆ. ಎಲ್ ನಿನೋ ಹೇಗೆ ಕಡಿಮೆಯಾಗುತ್ತದೆ?

Read Full Story

03:01 PM (IST) Aug 28

ಬಳ್ಳಾರಿಯಲ್ಲಿ ಇಮ್ಮಡಿ ಹರಿಹರನ ಕಾಲದ 2 ಅಪರೂಪದ ಜಿನ ಶಾಸನಗಳು ಪತ್ತೆ! ವಿಜಯನಗರ ಕಾಲದ ಭೂಮಿ ದಾನ ಉಲ್ಲೇಖ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೊಡ್ಡ ಅಂತಾಪುರ ಗ್ರಾಮದಲ್ಲಿ, 'ವಿಜಯನಗರ ತಿರುಗಾಟ' ಸಂಶೋಧನಾ ತಂಡವು ಇಮ್ಮಡಿ ಹರಿಹರನ ಕಾಲದ ಎರಡು ಅಪರೂಪದ, ಅಪ್ರಕಟಿತ ಜಿನ ಶಾಸನಗಳನ್ನು ಪತ್ತೆ ಮಾಡಿದೆ. ರೈತರ ಕೃಷಿ ಜಮೀನಿನಲ್ಲಿ ದೊರೆತ ಈ ಶಾಸನಗಳು, ಶ್ರೀ ಕುಂಥು ತೀರ್ಥಂಕರರಿಗೆ ಭೂಮಿಯನ್ನು ದಾನವಾಗಿ ನೀಡಿದ ಐತಿಹಾಸಿಕ ವಿವರಗಳನ್ನು ಒಳಗೊಂಡಿವೆ.
Read Full Story

02:40 PM (IST) Aug 28

ಬರಿದಾದ ಕೆರೆಗೆ ಜೀವಕಳೆ - ಎತ್ತಿನಹೊಳೆ ವ್ಯರ್ಥ ನೀರೇ ಆಸರೆ; ದೇಣಿಗೆ ಸಂಗ್ರಹಿಸಿ ಕೆರೆ ತುಂಬಿಸಿದ ಎರಡು ಗ್ರಾಮಸ್ಥರು..!

ಚಿಕ್ಕಮಗಳೂರಿನ ಕಬ್ಬಳಿ-ಗುಣಸಾಗರ ಗ್ರಾಮಸ್ಥರು ಸರ್ಕಾರದ ಸಹಾಯವಿಲ್ಲದೆ, ದೇಣಿಗೆ ಸಂಗ್ರಹಿಸಿ ತಮ್ಮೂರಿನ ಕೆರೆಯನ್ನು ತುಂಬಿಸಿದ್ದಾರೆ. ಸಮಾನ ಮನಸ್ಕ ಯುವಕರ ನೇತೃತ್ವದಲ್ಲಿ, ವೇದಾವತಿ ನದಿಯ ಹೆಚ್ಚುವರಿ ನೀರನ್ನು ಪಂಪ್ ಮಾಡಿ, ಕೇವಲ ₹15 ಲಕ್ಷದಲ್ಲಿ ಈ ಯಶಸ್ವಿ ಯೋಜನೆ ಪೂರ್ಣಗೊಳಿಸಿ ಮಾದರಿಯಾಗಿದ್ದಾರೆ.
Read Full Story

01:17 PM (IST) Aug 28

ಟಾರ್ಗೆಟ್ 2028 ಟಾಸ್ಕ್, ಕುಮಾರಸ್ವಾಮಿ-ನಿಖಿಲ್‌ಗೆ ಹೊಸ ಜವಾಬ್ದಾರಿ! JDS ಪಾಳಯದಲ್ಲಿ ಸಂಚಲನ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರಿಗೆ 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಹೊಸ ಟಾಸ್ಕ್ ನೀಡಲಾಗಿದೆ. ಇದರ ಬೆನ್ನಲ್ಲೇ HDK ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಯುವಕರಿಗೆ ಕರೆ ನೀಡಿದ್ದಾರೆ.

Read Full Story

12:41 PM (IST) Aug 28

ವಾಲ್ಮೀಕಿ ಹಗರಣ - ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಕೊನೆಗೂ ರಾಜೀನಾಮೆ; ಹೈಕಮಾಂಡ್ ಸೂಚನೆ ಬೆನ್ನಲ್ಲೇ ನಿರ್ಧಾರ!

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪದ ಹಿನ್ನೆಲೆಯಲ್ಲಿ, ಸಚಿವ ಬಿ. ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ವಿರೋಧ ಪಕ್ಷಗಳ ತೀವ್ರ ಒತ್ತಡ ಮತ್ತು ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಅವರು ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಿಸಲಿದ್ದಾರೆ.

Read Full Story

12:06 PM (IST) Aug 28

200 ಕೋಟಿ ವೆಚ್ಚ, 18 ಅಂತಸ್ತು; ಬೆಂಗಳೂರಿನಲ್ಲಿ ಇಂದಿನಿಂದ ಬೃಹತ್ ಕಟ್ಟಡ ತೆರವು ಕಾರ್ಯ ಆರಂಭ

ಬೆಂಗಳೂರಿನ ಕೂಡ್ಲು ಬಳಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದ 200 ಕೋಟಿ ಮೌಲ್ಯದ 18 ಅಂತಸ್ತಿನ ಕಟ್ಟಡವನ್ನು ನೆಲಸಮಗೊಳಿಸಲಾಗುತ್ತಿದೆ. ಕಟ್ಟಡವು ಒಂದು ಬದಿಗೆ ವಾಲಿದ್ದರಿಂದ, ಸುರಕ್ಷತಾ ಕ್ರಮವಾಗಿ ಅಧಿಕಾರಿಗಳು ಈ ತೆರವು ಕಾರ್ಯಾಚರಣೆಯನ್ನು ನಿಯಂತ್ರಿತ ವಿಧಾನದಲ್ಲಿ ಆರಂಭಿಸಿದ್ದಾರೆ.
Read Full Story

11:49 AM (IST) Aug 28

ಕಲ್ಯಾಣ ಕರ್ನಾಟಕದಲ್ಲಿ ಭೀಕರ ಬರ - ಆದರೂ, ಸರ್ಕಾರದ ಆದೇಶ ಪಟ್ಟಿಯಲ್ಲಿಲ್ಲ ಬರಪೀಡಿತ ತಾಲೂಕುಗಳು!

ರಾಜ್ಯ ಸರ್ಕಾರವು ಬೀದರ್ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ತೀವ್ರ ಮಳೆ ಕೊರತೆ ಎದುರಿಸುತ್ತಿರುವ ಭಾಲ್ಕಿ, ಔರಾದ್ ಸೇರಿದಂತೆ ಇತರೆ ನಾಲ್ಕು ತಾಲೂಕುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ಇದು ಬೆಳೆ ಒಣಗುತ್ತಿರುವುದರಿಂದ ಪರಿಹಾರ ವಂಚಿತರಾಗುವ ಭೀತಿಯಲ್ಲಿರುವ ಸ್ಥಳೀಯ ರೈತರಲ್ಲಿ ತೀವ್ರ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.
Read Full Story

11:34 AM (IST) Aug 28

ಮಂಡ್ಯ ಜನರ ಧೈರ್ಯ - ಪೊಲೀಸ್ ಠಾಣೆಯಿಂದ ಪರಾರಿ ಆಗ್ತಿದ್ದ ಕಳ್ಳನನ್ನ, ಕೈಲಿರೋ ಬೇಡಿ ನೋಡಿ ಅಟ್ಟಾಡಿಸಿ ಹಿಡಿದರು!

ಮಂಡ್ಯ ಗ್ರಾಮಾಂತರ ಠಾಣೆಯಿಂದ ಕೈಬೇಡಿ ಸಮೇತ ತಪ್ಪಿಸಿಕೊಂಡಿದ್ದ ಕಳ್ಳನನ್ನು ಗಾಂಧಿನಗರ ಬಡಾವಣೆಯ ಸಾರ್ವಜನಿಕರು ಬೆನ್ನಟ್ಟಿ ಹಿಡಿದಿದ್ದಾರೆ. ಪೊಲೀಸರ ಕಣ್ತಪ್ಪಿಸಿ ಓಡಿಬಂದಿದ್ದ ಆರೋಪಿಯನ್ನು ವಿಚಾರಿಸಿ, ಮತ್ತೆ ಪೊಲೀಸರಿಗೆ ಒಪ್ಪಿಸುವ ಮೂಲಕ ಸ್ಥಳೀಯರು ಸಮಯಪ್ರಜ್ಞೆ ಮೆರೆದಿದ್ದಾರೆ.
Read Full Story

09:32 AM (IST) Aug 28

ನಮ್ಮ ಮೆಟ್ರೋದಲ್ಲಿ ಸಿಂಪಲ್‌ ಆಗಿ ಪ್ರಯಾಣ ಮಾಡಿದ ಮೈಸೂರು ಎಕ್ಸ್‌ಪ್ರೆಸ್‌ ಜಾವಗಲ್‌ ಶ್ರೀನಾಥ್‌

ಟೀಮ್ ಇಂಡಿಯಾ ಮಾಜಿ ವೇಗಿ ಜಾವಗಲ್‌ ಶ್ರೀನಾಥ್‌ ಬೆಂಗಳೂರಿನ 'ನಮ್ಮ ಮೆಟ್ರೋ'ದಲ್ಲಿ ಸಾಮಾನ್ಯರಂತೆ ಪ್ರಯಾಣಿಸುತ್ತಿರುವ ಫೋಟೋ ವೈರಲ್ ಆಗಿದೆ. ಈ ಹಿಂದೆ ಮೈಸೂರು ರೈಲ್ವೆ ನಿಲ್ದಾಣದಲ್ಲೂ ಇದೇ ರೀತಿ ಸರಳವಾಗಿ ಕಾಣಿಸಿಕೊಂಡಿದ್ದ ಅವರ ನಡೆಗೆ ಅಭಿಮಾನಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Read Full Story

08:28 AM (IST) Aug 28

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ₹8.40 ಕೋಟಿ ಲೂಟಿ - ಕಿಂಗ್‌ಪಿನ್ ರವೀಂದ್ರಕುಮಾರ್ ಅರೆಸ್ಟ್!

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (KUDA) ಸೇರಿದ ₹8.40 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ರವೀಂದ್ರಕುಮಾರ್ ಹಾಗೂ ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. 20 ದಿನಗಳಿಂದ ತಲೆಮರೆಸಿಕೊಂಡಿದ್ದ ದಂಪತಿಯನ್ನು ವಶಕ್ಕೆ ಪಡೆದು, ಹಗರಣದ ಕುರಿತು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
Read Full Story

07:50 AM (IST) Aug 28

6 ವರ್ಷಗಳ ಬಳಿಕ ಧಾರವಾಡಕ್ಕೆ ಶಾಸಕ ವಿನಯ್ ಕುಲಕರ್ಣಿ ಎಂಟ್ರಿ, ಆದ್ರೆ ಮೊದಲ ಆಯ್ಕೆ ಮನೆಯಲ್ಲ!

ಧಾರವಾಡ (ಆ.28): ಕಳೆದ ಆರು ವರ್ಷಗಳಿಂದ ಸ್ವಕ್ಷೇತ್ರಕ್ಕೆ ಪ್ರವೇಶವಿಲ್ಲದೆ ದೂರವೇ ಉಳಿದಿದ್ದ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಅವರಿಗೆ ಕೊನೆಗೂ ರಿಲೀಫ್ ಸಿಕ್ಕಿದ್ದು, ಇಂದು (ದಿನಾಂಕ) ಅಧಿಕೃತವಾಗಿ ಧಾರವಾಡ ಜಿಲ್ಲೆಗೆ ಪ್ರವೇಶಿಸಿದ್ದಾರೆ. ಆದರೆ, ಧಾರವಾಡಕ್ಕೆ ಬಂದಿಳಿದ ತಕ್ಷಣ ಅವರು ತಮ್ಮ ಮನೆಗೆ ತೆರಳದೆ, ನೇರವಾಗಿ ದೇವರ ದರ್ಶನ ಹಾಗೂ ಮಠಾಧೀಶರ ಆಶೀರ್ವಾದ ಪಡೆಯಲು 'ಟೆಂಪಲ್ ರನ್' (Temple Run) ಆರಂಭಿಸಿದ್ದಾರೆ.

Read Full Story

07:49 AM (IST) Aug 28

ಎಲ್ಲಾ ತ್ಯಾಗಕ್ಕೆ ನಾಗೇಂದ್ರ ಸಿದ್ಧ, ಆತ ಪಕ್ಷನಿಷ್ಠ ನಾಯಕ: ಡಿಕೆಶಿ

ವಾಲ್ಮೀಕಿ ಹಗರಣದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಡ ಹೆಚ್ಚಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ರಾಹುಲ್ ಗಾಂಧಿ ಜೊತೆ ಚರ್ಚಿಸಿದ್ದಾರೆ. ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.

ವಾಲ್ಮೀಕಿ ಹಗರಣದ ಆರೋಪಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪಾದಯಾತ್ರೆಗೆ ಸಜ್ಜಾಗುತ್ತಿರುವ ನಡುವೆಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗುರುವಾರ ದೆಹಲಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಜೊತೆ ಮಹತ್ವದ ಮಾತುಕತೆ ನಡೆಸಿದರು.

ಸುಮಾರು ಒಂದೂಕಾಲು ಗಂಟೆ ನಡೆದ ಮಾತುಕತೆ ವೇಳೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು, ಖಾಲಿ ಇರುವ ಸಚಿವ ಸ್ಥಾನ ತುಂಬುವುದು ಹಾಗೂ ಸಂಪುಟದಲ್ಲಿ ಬದಲಾವಣೆ ಮಾಡುವ ವಿಚಾರಗಳ ಕುರಿತು ಸುದೀರ್ಘ ಮಾತುಕತೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ. ಬಳಿಕ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಜೊತೆಗೂ ಅವರು ಮಾತುಕತೆ ನಡೆಸಿದರು. ಈ ಮಧ್ಯೆ, ಸಚಿವ ನಾಗೇಂದ್ರ ಕೂಡ ದೆಹಲಿಗೆ ಆಗಮಿಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

Read Full Story

More Trending News