ಬೆಂಗಳೂರು ನಗರದಲ್ಲಿ ಇಂದು (ಜೂ.23) ವಿದ್ಯುತ್ ವ್ಯತ್ಯಯವಾಗುತ್ತಿದೆ. ತ್ರೈಮಾಸಿಕ ನಿರ್ವಹಣಾ ಕಾಮಾಗಾರಿಯಿಂದ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ರಾಜಾಜಿನಗರ ,ಗಾಯಿತ್ರಿನಗರ ಸುಬ್ರಮಣ್ಯನಗರ, ಕುಂಬಳಗೋಡು, ಮಂಜುನಾಥನಗರ, ಮೋದಿ ಹಾಸ್ಪಿಟಲ್, ಶಿವನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರೋಡ್ 1ನೇ ರಸ್ತೆ, ದೇಯಯ್ಯ ಪಾರ್ಕ್, ನಾಗಪ್ಪ ಬ್ಲಾಕ್, ಲಿಂಕ್ ರೋಡ್, ಶನಿಮಹಾತ್ಮಾ ಟೆಂಪಲ್, ಪ್ರಕಾಶನಗರ, ಗಾಯತ್ರಿ ನಗರ, ಸುಬ್ರಹ್ಮಣ್ಯನಗರ, ರಾಜಕುಮಾರ್ ರೋಡ್, ದಯಾನಂದ ಸಾಗರ, ಸಾಯಿ ಮಂದಿರ, ಹರಿಶ್ಚಂದ್ರ ಘಾಟ್ ಸೇರಿದಂತೆ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.

11:53 PM (IST) Jun 23
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕತಾರ್‌ನಲ್ಲಿರುವ ಅಮೆರಿಕದ ಅಲ್-ಉದೈದ್ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ದಾಳಿಯು ಅಮೆರಿಕದ ಪರಮಾಣು ಸೌಲಭ್ಯಗಳ ವಿರುದ್ಧದ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ನಡೆದಿದೆ ಎನ್ನಲಾಗಿದೆ.
11:26 PM (IST) Jun 23
11:16 PM (IST) Jun 23
ಇರಾನ್ ಯುದ್ಧ, ಇಸ್ರೇಲ್ ಕಾಳಗ, ಅಮೆರಿಕದ ಬಾಂಬ್ ಸೇರಿದಂತೆ ಇಲ್ಲಿಯವರೆಗಿನ ಎಲ್ಲಾ ಭವಿಷ್ಯದ ಬಗ್ಗೆ 2023ರಲ್ಲಷ್ಟೇ ತಿಳಿಸಿದ್ದ ಖ್ಯಾತ ಜ್ಯೋತಿಷಿ ಅಫ್ಶಿನ್ ಇಮ್ರಾನಿ ಭಾರತದ ಬಗ್ಗೆ ಹೇಳಿದ್ದೇನು?
10:38 PM (IST) Jun 23
10:29 PM (IST) Jun 23
ಆಸೆ ಧಾರಾವಾಹಿ ನಟಿ ಪ್ರಿಯಾಂಕಾ ಕಾಡು ಮೇಡು ಅಲೆಯುತ್ತಿದ್ದರೆ, ನಟ ನಿನಾದ್ ಹರಿತ್ಸ ಸೀರಿಯಲ್ ಗೆ ಬ್ರೇಕ್ ಕೊಟ್ಟು ಹೆಂಡ್ತಿ ಜೊತೆ ಶಾಂತಿ ಹರಸಿ ಹೊರಟಂತಿದೆ.
10:11 PM (IST) Jun 23
ಒಮಾನ್ ತನ್ನ ನಾಗರಿಕರ ಮೇಲೆ ಆದಾಯ ತೆರಿಗೆ ವಿಧಿಸುವ ಮೊದಲ ಗಲ್ಫ್ ರಾಷ್ಟ್ರವಾಗುವ ಯೋಜನೆಯನ್ನು ಪ್ರಕಟಿಸಿದೆ. ಜಿಸಿಸಿ ರಾಷ್ಟ್ರವು 42,000 ರಿಯಾಲ್‌ಗಳು ($109,000) ಅಥವಾ ಅದಕ್ಕಿಂತ ಹೆಚ್ಚಿನ ಆದಾಯದ ಮೇಲೆ 5% ತೆರಿಗೆ ವಿಧಿಸಲು ಯೋಜಿಸಿದೆ.
10:00 PM (IST) Jun 23
12 ದೇಶಗಳಲ್ಲಿ ನೂರಕ್ಕೂ ಅಧಿಕ ಮಕ್ಕಳನ್ನು ಪಡೆದಿರುವ ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೋವ್ ಅಷ್ಟೂ ಮಕ್ಕಳಿಗೆ 13 ಲಕ್ಷ ಕೋಟಿ ಆಸ್ತಿ ಹಂಚಲು ನಿರ್ಧರಿಸಿದ್ದಾರೆ. ಏನಿದು ನೋಡಿ!
09:21 PM (IST) Jun 23
ಚಂದನವನದ ಹಲವು ನಟಿಯರು ತಮ್ಮ ಹುಟ್ಟು ಹೆಸರನ್ನು ಬದಲಾಯಿಸಿ ಸಿನಿಮಾಕ್ಕಾಗಿ ಬೇರೆ ಹೆಸರನ್ನಿಟ್ಟರು, ಹೀಗೆ ಹೆಸರು ಬದಲಾಯಿಸಿಕೊಂಡವರಲ್ಲಿ ಗೆದ್ದವರೇ ಹೆಚ್ಚು.
08:45 PM (IST) Jun 23
ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ರಿಷಭ್ ಪಂತ್ ಪಾತ್ರರಾಗಿದ್ದಾರೆ. ಹೆಡಿಂಗ್ಲಿಯಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 4 ನೇ ದಿನದಂದು ಅವರು ಈ ಸಾಧನೆ ಮಾಡಿದರು.
08:43 PM (IST) Jun 23
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಪ್ರತಿನಿತ್ಯವೂ ಸಾವಿರಾರು ಜನ ಕ್ಯೂನಲ್ಲಿ ಇರುತ್ತಾರೆ. ಆದರೆ ಈ ಮಹಿಳೆ ಮಾತ್ರ ರಾತ್ರೋರಾತ್ರಿ ಸಕತ್ ಫೇಮಸ್ ಆಗೋದ್ರು. ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರಾ!
08:29 PM (IST) Jun 23
ಆಂಧ್ರಪ್ರದೇಶದ ದಂಗೆಟಿ ಜಾಹ್ನವಿ 2029 ರಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ನಾಸಾದ ಅಂತರರಾಷ್ಟ್ರೀಯ ವಾಯು ಮತ್ತು ಬಾಹ್ಯಾಕಾಶ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಮಹಿಳೆ ಎನಿಸಿದ್ದಾರೆ.
08:21 PM (IST) Jun 23
07:52 PM (IST) Jun 23
07:49 PM (IST) Jun 23
ಕ್ಯಾನ್ಸರ್ ಪೀಡಿತ ಅಜ್ಜಿಯನ್ನು ಮೊಮ್ಮಗನೊಬ್ಬ ಕಸದ ರಾಶಿಯಲ್ಲಿ ಎಸೆದ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ.
07:46 PM (IST) Jun 23
ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 15 ವರ್ಷಗಳ ಬಾಂಡ್ ಬರೆಸಿಕೊಳ್ಳಲು ಒತ್ತಾಯಿಸಿ ನೌಕರರಿಗೆ ಕಿರುಕುಳ ನೀಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೆಲಸಕ್ಕೆ ಹಾಜರಾದರೂ ಕೆಲಸ ನೀಡದೆ, ಹೊರಗೆ ಕೂರಿಸಲಾಗುತ್ತಿದೆ ಎಂದು ನೊಂದ ಉದ್ಯೋಗಿಗಳು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
07:44 PM (IST) Jun 23
07:32 PM (IST) Jun 23
07:29 PM (IST) Jun 23
07:21 PM (IST) Jun 23
ಇರಾನ್ ಪರಮಾಣು ಕೇಂದ್ರದ ಮೇಲಿನ ಅಮೆರಿಕ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಡಾಲರ್ ಬಲಗೊಂಡು 5 ತಿಂಗಳ ಕನಿಷ್ಠ ಮಟ್ಟಕ್ಕೆ ರೂಪಾಯಿ ಮೌಲ್ಯ ಕುಸಿದಿದೆ. ತೈಲ ಬೆಲೆಯಲ್ಲೂ ಏರಿಳಿತ ಕಂಡುಬಂದಿದೆ.
07:15 PM (IST) Jun 23
ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಕೆನ್ನೆಗೆ ಹೊಡೆಯೋದಕ್ಕೆ ಬಂದ ಜೈದೇವ್ ಗೆ ಕಪಾಳ ಮೋಕ್ಷ ಮಾಡಿ ಚೆನ್ನಾಗಿ ಬೆಂಡೆತ್ತಿದ್ದಾಳೆ ಭೂಮಿಕಾ.
07:15 PM (IST) Jun 23
ಅನ್ಯಧರ್ಮದ ಯುವಕನೊಂದಿಗೆ ಓಡಿಹೋದ ಯುವತಿಗೆ ಕುಟುಂಬಸ್ಥರು ತಿಥಿ ಮಾಡಿದ್ದಾರೆ.
07:03 PM (IST) Jun 23
06:54 PM (IST) Jun 23
ಕೊಲಂಬಿಯಾದಲ್ಲಿ ಶಾಂತಿ ಸ್ಥಾಪನೆಯ 10ನೇ ವಾರ್ಷಿಕೋತ್ಸವದಂದು ರವಿಶಂಕರ್ ಗುರೂಜಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದರು. ಶಾಂತಿ ಸಂಧಾನದಲ್ಲಿ ಗುರೂಜಿಗಳ ಪಾತ್ರವನ್ನು ಸ್ಮರಿಸಲಾಯಿತು ಹಾಗೂ ಯೋಗದ ಮಹತ್ವವನ್ನು ಒತ್ತಿ ಹೇಳಲಾಯಿತು.
06:44 PM (IST) Jun 23
ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಭಾರತ 1960ರ ಸಿಂಧೂ ನದಿ ಒಪ್ಪಂದವನ್ನು ಸ್ಥಗಿತಗೊಳಿಸಿತು.
06:04 PM (IST) Jun 23
Five state By election result: ಐದು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಗುಜರಾತ್‌ನ ಎರಡು ಕ್ಷೇತ್ರಗಳಲ್ಲಿ ಒಂದರಲ್ಲಿ ಬಿಜೆಪಿ ಮತ್ತು ಇನ್ನೊಂದರಲ್ಲಿ ಎಎಪಿ ಗೆಲುವು ಸಾಧಿಸಿದೆ.
05:58 PM (IST) Jun 23
05:52 PM (IST) Jun 23
05:51 PM (IST) Jun 23
05:21 PM (IST) Jun 23
ಕಾಗವಾಡ ಶಾಸಕ ರಾಜು ಕಾಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನುದಾನ ವಿಳಂಬ ಹಾಗೂ ಆಡಳಿತ ವೈಫಲ್ಯದಿಂದ ಬೇಸತ್ತಿರುವ ಅವರು, ಶೀಘ್ರವಾಗಿ ಎರಡು ದಿನಗಳಲ್ಲಿ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
05:15 PM (IST) Jun 23
ಬೆಂಗಳೂರು: ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಲವ್ ಸ್ಟೋರಿ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಜತೆಗೆ ರಿತಿಕಾ ಸಜ್ದೇಗೆ ಸಿನಿಮಾ ರೀತಿಯಲ್ಲಿ ಲವ್ ಪ್ರಪೋಸ್ ಮಾಡಿದ ಬಗ್ಗೆಯೂ ಹೇಳಿದ್ದಾರೆ.
05:08 PM (IST) Jun 23
ಗಾಳಿಪಟದ ಚೆಲುವೆ ಡೈಸಿ ಬೋಪಣ್ಣ, ನಟನೆಯಿಂದ ದೂರ ಇದ್ದು ವರ್ಷಗಳೇ ಕಳೆದಿದೆ. ಇದೀಗ ಬೈಕ್ ರೇಸಿಂಗ್ ಸಾಹಸಕ್ಕೆ ಕೈ ಹಾಕಿದ್ದು, ಅದರ ಜಲಕ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
05:07 PM (IST) Jun 23
ಮಂಗಳೂರಿನವರಾದ ರವೀಕ್ಷಾ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ನಟನೆಯ ಮೇಲಿನ ಆಸಕ್ತಿಯಿಂದ 'ಅ..ಆ..ಇ..ಈ' ಎಂಬ ತುಳು ಚಿತ್ರದಲ್ಲಿ ನಟಿಸಿದರೂ, ಆ ಚಿತ್ರವು ಬಿಡುಗಡೆಯಾಗಲಿಲ್ಲ. ಬಳಿಕ 'ಜೀವ' ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. 'ಪುರುಷೋತ್ತಮನ ಪ್ರಸಂಗ' ಅವಕಾಶ ಸಿಕ್ಕಿದ್ದು ಆಕಸ್ಮಿಕ.
04:59 PM (IST) Jun 23
West Bengal By Election: ಪಶ್ಚಿಮ ಬಂಗಾಳದಲ್ಲಿ ಉಪಚುನಾವಣಾ ಮತ ಎಣಿಕೆ ವೇಳೆ ಬಾಂಬ್ ಸ್ಫೋಟ ಸಂಭವಿಸಿ 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
04:48 PM (IST) Jun 23
ಗುಜರಾತ್‌ನ ಕಾಂಡ್ಲಾ ಮತ್ತು ಮುಂದ್ರಾ ಬಂದರುಗಳಲ್ಲಿ ಸಾಗಣೆಗಳು ಪ್ರಾಥಮಿಕವಾಗಿ ಸಿಲುಕಿಕೊಂಡಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಇರಾನ್‌ಗೆ ಹೋಗುವ ಸರಕುಗಳಿಗೆ ಹಡಗುಗಳಿಗೆ ಯಾವುದೇ ವಿಮೆ ಲಭ್ಯವಾಗುತ್ತಿಲ್ಲ.
04:33 PM (IST) Jun 23
ಬೇಸಿಗೆ ಮತ್ತು ಮಳೆಗಾಲದಲ್ಲಿ ಕೊತ್ತಂಬರಿ ಸೊಪ್ಪು ಸಿಗುವುದು ಕಡಿಮೆ ಮತ್ತು ಬೇಗ ಹಾಳಾಗುತ್ತದೆ. ಈ ಲೇಖನದಲ್ಲಿ, ಕೊತ್ತಂಬರಿ ಸೊಪ್ಪನ್ನು ಫ್ರಿಡ್ಜ್ ಇಲ್ಲದೆ ಒಂದು ವರ್ಷ ಸ್ಟೋರ್ ಮಾಡುವ ಸರಳ ವಿಧಾನಗಳನ್ನು ವಿವರಿಸಲಾಗಿದೆ.
04:26 PM (IST) Jun 23
04:21 PM (IST) Jun 23
ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ದುರಂತದ ಹಿನ್ನೆಲೆಯಲ್ಲಿ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. 10 ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಬೆಂಗಳೂರು ಘಟನೆಯ ತನಿಖೆ ಮತ್ತು ರಾಜಕೀಯ ಆರೋಪಗಳು ಮುಂದುವರೆದಿವೆ.
04:18 PM (IST) Jun 23
ಕನ್ನಡದ ಖ್ಯಾತ ಟ್ರಾವೆಲ್ ಯೂಟ್ಯೂಬರ್ ಡಾ. ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ ಕಳೆದ ನಾಲ್ಕು ತಿಂಗಳಿಂದ ಹೊಸ ವಿಡಿಯೋ ಅಪ್ ಲೋಡ್ ಮಾಡಿಲ್ಲ, ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
04:17 PM (IST) Jun 23
NEET Examination: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಎಂದು ತಂದೆ ಹಿಗ್ಗಾಮುಗ್ಗಾ ಕೋಲಿನಲ್ಲಿ ಥಳಿಸಿದ ಪರಿಣಾಮ ವಿದ್ಯಾರ್ಥಿನಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸಾಂಗ್ಲಿ(Maharashtra’s Sangli) ಜಿಲ್ಲೆಯಲ್ಲಿ ನಡೆದಿದೆ.
04:00 PM (IST) Jun 23
ಬೆಂಗಳೂರು ಮೂಲದ ಟ್ರೇನಿ ಪೈಲಟ್ ಶರಣ್ ಕುಮಾರ್, ಇಂಡಿಗೋ ಏರ್‌ಲೈನ್ಸ್‌ನ ಮೂವರು ಅಧಿಕಾರಿಗಳ ವಿರುದ್ಧ ಜಾತಿ ಆಧಾರಿತ ಕಿರುಕುಳದ ಆರೋಪ ಮಾಡಿದ್ದಾರೆ. ಈ ಘಟನೆ ಗುರಗಾಂವ್‌ನಲ್ಲಿರುವ ಇಂಡಿಗೋ ಕಂಪನಿಯ ಕೇಂದ್ರ ಕಚೇರಿಯಲ್ಲಿ ನಡೆದಿದೆ.