ಬೆಂಗಳೂರು (ಜು.9): ಬೆಂಗಳೂರು, ಕೋಲಾರದ 5 ಕಡೆ ಎನ್‌ಐಎ ಭರ್ಜರಿ ದಾಳಿ ನಡೆಸಿದೆ. ಜೈಲಲ್ಲಿರುವ ಉಗ್ರರಿಗೆ ನೆರವು ನೀಡಿದ ಆರೋಪದಲ್ಲಿ ಜೈಲಿನ ವೈದ್ಯ, ಎಎಸ್‌ಐ ಸೇರಿ 3 ಜನರ ಬಂಧನವಾಗಿದೆ. ಕಾರಾಗೃಹದಿಂದಲೇ ಹೊರಗೆ ವಿಧ್ವಂಸಕ ಕೃತ್ಯ ಎಸಗುವ ಉಗ್ರರ ಸಂಚು ಪ್ರಕರಣ ಇದಾಗಿತ್ತು. ಜೈಲಿನಲ್ಲಿರುವ ಶಂಕಿತ ಉಗ್ರರೊಂದಿಗೆ ನಿರಂತರ ಸಂಪರ್ಕ, ನೆರವು ನೀಡಿದ ಆರೋಪದ ಅಡಿಯಲ್ಲಿ ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳ ಐದು ಸ್ಥಳಗಳ ಮೇಲೆ ಮಂಗಳವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎಸ್‌ಐಎ) ದಾಳಿ ಮಾಡಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್
11:33 PM (IST) Jul 09
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಕುರ್ಚಿ ಕಿತ್ತಾಟದಲ್ಲಿ ಜನರು ಮತ್ತು ರಾಜ್ಯವನ್ನು ಮರೆತಿದ್ದಾರೆ. ಈ ಸರ್ಕಾರವನ್ನು ಅಧಿಕಾರಕ್ಕೆ ತಂದಿರುವ ಜನ ಪಶ್ಚಾತಾಪ ಪಡುತ್ತಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
11:05 PM (IST) Jul 09
ಬಹುವರ್ಷದ ಬೇಡಿಕೆಯಾಗಿರುವ, ಬಯಲುಸೀಮೆ ಹಾಗೂ ಕರಾವಳಿಯನ್ನು ಸಂಪರ್ಕಿಸುವ ಕೊಂಡಿಯಾಗುವ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಗಾಗಿ ಶೀಘ್ರದಲ್ಲೇ ಹುಬ್ಬಳ್ಳಿಯಲ್ಲೇ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ನೇತೃತ್ವದಲ್ಲೇ ಸಭೆ ನಡೆಯಲಿದೆ.
10:38 PM (IST) Jul 09
ಸದಾ ನಗ್ನತೆಯಿಂದ ಹಾಗೂ ಕಾಂಟ್ರವರ್ಸಿ ಮೂಲಕ ಗುರುತಿಸಿಕೊಂಡಿರೋ ನಟಿ ಪೂನಂ ಪಾಂಡೆಗೆ ಯಾವ ರೀತಿಯ ಗಂಡ ಬೇಕು ಎನ್ನುವ ಕನಸನ್ನು ತೆರೆದಿಟ್ಟಿದ್ದಾರೆ ಅವರ ತಾಯಿ ವಿದ್ಯಾ. ಅವರು ಹೇಳಿದ್ದೇನು ಕೇಳಿ...
10:17 PM (IST) Jul 09
ಅಮೃತಧಾರೆ ಮಲ್ಲಿ ಉರ್ಫ್ ನಟಿ ಅನ್ವಿತಾ ಸಾಗರ್ ಅವರು ಸಕತ್ ಕೋಪಗೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಅಷ್ಟಕ್ಕೂ ನಟಿಗೆ ಆಗಿದ್ದೇನು?
10:10 PM (IST) Jul 09
10:02 PM (IST) Jul 09
ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಪುಟಾಣಿ ಮೀರಾ ಅರ್ಥಾತ್ ನಾಯಕಿ ತುಳಸಿಯ ಪುತ್ರಿ ಡೈಲಾಗ್ ಹೇಳಲು ಹೇಗೆ ರೆಡಿ ಆಗ್ತಾ ಇದ್ದಾಳೆ ಎನ್ನುವ ವಿಡಿಯೋ ಶೇರ್ ಮಾಡಲಾಗಿದೆ. ನೋಡಿ ಹೇಗಿದೆ...
09:40 PM (IST) Jul 09
ಸಿಎಂ ಸಿದ್ದರಾಮಯ್ಯ ಕುರ್ಚಿ ಅಲುಗಾಡಿದಾಗ ಮಾತ್ರ ಜಾತಿ ಗಣತಿ ವಿಚಾರ ಮುಂದೆ ಬರುತ್ತದೆ. ಆದರೆ ಕೇಂದ್ರ ಸರ್ಕಾರ ಈ ಬಾರಿ 2027ಕ್ಕೆ ಜಾತಿ ಗಣತಿ ವರದಿ ನೀಡಲಿದೆ ಎಂದು ಸಂಸದ ಪಿ.ಸಿ.ಮೋಹನ್ ಹೇಳಿದರು.
09:33 PM (IST) Jul 09
ಬೆಳಗಾವಿ ಜಿಲ್ಲಾ ವಿಭಜನೆ ಪ್ರಸ್ತಾಪ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದು ಸರ್ಕಾರದ ಮಟ್ಟದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
09:24 PM (IST) Jul 09
ಎಲಾನ್ ಮಸ್ಕ್ ಮಾಲೀಕತ್ವದ ಎಕ್ಸ್ (ಟ್ವಿಟರ್)ನಲ್ಲಿ ತಳಮಳ ಶುರುವಾಗಿದೆ. ಎಕ್ಸ್‌ಗೆ ಹೊಸ ರೂಪ, ಹೊಸ ಬ್ಯೂಸಿನೆಸ್ ಮಾಡೆಲ್‌ಗೆ ನಾಂದಿ ಹಾಡಿದ ಸಿಇಒ ಲಿಂಡಾ ಯಕರಿನೋ ರಾಜೀನಾಮೆ ನೀಡಿದ್ದಾರೆ.
08:41 PM (IST) Jul 09
ಟೆಕ್ ದೈತ್ಯ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಇದೀಗ ಹೊಸ ಫೋಲ್ಡೇಬಲ್ ಫೋನ್ ಬಿಡುಗಡೆ ಮಾಡುತ್ತಿದೆ. ಹೊಸ ಫೋನ್ ಅತೀ ತೆಳ್ಳಗೆ, ಅತ್ಯಂತ ಹಗುರು ಮಾತ್ರವಲ್ಲ, ಸುದೀರ್ಘ ಬಾಳಿಕೆ ಫೋನ್ ಎಂದು ಕಂಪನಿ ಹೇಳಿದೆ. ಏನಿದರ ವಿಶೇಷತೆ
08:24 PM (IST) Jul 09
ಭಾರತದಲ್ಲಿ ಉದ್ಯಮಿ ಎಲಾನ್ ಮಸ್ಕ್ ಸ್ಯಾಟಲೈಟ್ ಆಧಾರಿತ ಸ್ಟಾರ್ ಲಿಂಕ್ ಇಂಟರ್ನೆಟ್ ಸೇವೆಗೆ ಇನ್ ಸ್ಪೇಸ್ ಅಂತಿಮ ಕ್ಲಿಯರೆನ್ಸ್ ನೀಡಿದ್ದು, ಶೀಘ್ರದಲ್ಲೇ ಹಳ್ಳಿ ಹಳ್ಳಿಗೆ 5 ಜಿ ವೇಗಕ್ಕಿಂತಲೂ ಹೆಚ್ಚಿನ ಇಂಟರ್ನೆಟ್ ಕನೆಕ್ಷನ್ ಸೌಲಭ್ಯ ಸಿಗಲಿದೆ.
08:23 PM (IST) Jul 09
ಕಾವೇರಿ ನಾಡಿನ ಜೀವ ನದಿ ಎನ್ನುತ್ತೇವೆ. ಆದರೆ ತವರು ಜಿಲ್ಲೆಯಲ್ಲೇ ಹುಟ್ಟಿ ಹರಿಯುವ ಜೀವನಾಡಿ ತವರು ಜಿಲ್ಲೆಯಲ್ಲೇ ಅವಾಂತರ ಸೃಷ್ಟಿಸುವುದು ಸರ್ವ ಸಾಮಾನ್ಯವಾಗಿ ಹೋಗಿದೆ.
07:32 PM (IST) Jul 09
ಚಂದ್ರನ ಸ್ಥಾನದಿಂದ ಭೂಮಿ ತಿರುಗುವಿಗೆ ವೇಗ ಹೆಚ್ಚಾಗಿದೆ. ಇದರ ಪರಿಣಾಮ ಇಂದು ಅತೀ ಚಿಕ್ಕ ದಿನವಾಗಿದೆ. ಅಂದರೆ ಅತೀ ಬೇಗನೆ ಒಂದು ದಿನ ಮುಗಿಯಲಿದೆ. ವಿಶೇಷ ಅಂದರೆ ಇನ್ನೆರಡು ದಿನವೂ ಇದೇ ರೀತಿ ಶಾರ್ಟ್ ಡೇ ದಾಖಲಾಗಲಿದೆ.
06:59 PM (IST) Jul 09
06:37 PM (IST) Jul 09
ರೈಲ್ವೇ ಹಳಿಯಲ್ಲಿ ಮರಿಗೆ ಜನ್ಮ ನೀಡುತ್ತಿದ್ದ ತಾಯಿ ಆನೆಗಾಗಿ ಬರೋಬ್ಬರಿ 2 ಗಂಟೆ ರೈಲು ನಿಲ್ಲಿಸಿದ ಘಟನೆ ನಡೆದಿದೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಈ ವಿಡಿಯೋ ಹಂಚಿಕೊಂಡು ಮಾನವ ಹಾಗೂ ಪ್ರಾಣಿಗಳ ನಡುವೆ ಹೃದಯಸ್ಪರ್ಶಿ ಘಟನೆ ಎಂದಿದ್ದಾರೆ.
05:44 PM (IST) Jul 09
ನಿಶಾ ಯೋಗೇಶ್ವರ್ ಅಪ್ಪನ ವಿರುದ್ಧ ದೂರು ಕೊಟ್ಟಿದ್ದಾದರೂ ಏಕೆ? ಸಿನಿಮಾ, ರಾಜಕೀಯ, ಇತರೆ ಉದ್ಯಮಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದೇ ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳಲು ಕಾಂಗ್ರೆಸ್ ರಾಜ್ಯ ಉಸ್ಯವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಹಾಯ ಕೋರಿದ್ದಾರೆ. ನಿಶಾ ವೃತ್ತಿ, ಜೀವನ ಕುರಿತ ವಿವರ ಇಲ್ಲಿದೆ.
05:35 PM (IST) Jul 09
ಟ್ವಿಟರ್ ಸಹ ಸಂಸ್ಥಾಪಕ ಜ್ಯಾಕ್ ಡೋರ್ಸಿ, ಇಂಟರ್ನೆಟ್ ಇಲ್ಲದೆ ಬ್ಲೂಟೂತ್ ಮೂಲಕ ಮೆಸೇಜ್ ಕಳಿಸುವ BitChat ಆ್ಯಪ್ ಪರಿಚಯಿಸಿದ್ದಾರೆ. ಚೈನ್ ಕಮ್ಯುನಿಕೇಷನ್ ತಂತ್ರಜ್ಞಾನದ ಮೂಲಕ, ಹಲವು ಸಾಧನಗಳ ಮೂಲಕ ಮೆಸೇಜ್‌ಗಳು ಬಳಕೆದಾರರನ್ನು ತಲುಪುತ್ತವೆ. ಏನಿದು ಹೊಸ ಬಿಟ್‌ಚಾಟ್ ಆ್ಯಪ್
05:08 PM (IST) Jul 09
ಈಗಾಗಲೇ ಏರಿಕೆಯಲ್ಲಿದ್ದ ಕಂಪನಿ ಶೇರುಗಳು ‘ರಾಮಾಯಣ’ತುಣುಕು ಬಿಡುಗಡೆಯಾದ ಕೂಡಲೇ ದಾಖಲೆಯ ಏರಿಕೆ ಕಂಡವು. ಕಂಪನಿಯ ಒಂದು ಪ್ರತಿ ಷೇರಿನ ದರ ರು. 149.69ನಿಂದ ರು. 176ಕ್ಕೆ ಜಿಗಿಯಿತು.
04:52 PM (IST) Jul 09
ಐಎಂಡಿಬಿ 2025ರ ಈವರೆಗಿನ ಅತ್ಯಂತ ಜನಪ್ರಿ ಹಾಗೂ 2025ರ ಬಹು ನಿರೀಕ್ಷಿತ ಸಿನಿಮಾ ಪಟ್ಟಿ ಬಿಡುಗಡೆ ಮಾಡಿದೆ. ವೀಕ್ಷರು ಕೊಟ್ಟ ರೇಟಿಂಗ್ಸ್, ವೀಕ್ಷಣೆ ಸೇರಿದಂತೆ ಹಲವು ಮಾನದಂಡಗಳ ಆಧಾರದಲ್ಲಿ ಯಾವ ಸಿನಿಮಾ ಅತ್ಯಂತ ಪಾಪ್ಯುಲರ್, ಯಾವ ಸಿನಿಮಾಗಿ ಜನ ಕಾಯುತ್ತಿದ್ದಾರೆ.
04:42 PM (IST) Jul 09
ಬಿಹಾರದಲ್ಲಿ 24 ವರ್ಷದ ಯುವಕನೊಬ್ಬ ತನ್ನ ಅತ್ತೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಮಾವನಿಂದ ಥಳಿತಕ್ಕೊಳಗಾಗಿ ಬಲವಂತವಾಗಿ ಅತ್ತೆಯನ್ನೇ ಮದುವೆಯಾದ ಘಟನೆ ನಡೆದಿದೆ.
04:35 PM (IST) Jul 09
ಲಾರ್ಡ್ಸ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಮಾರಕ ವೇಗಿ ಜೋಫ್ರಾ ಆರ್ಚರ್, ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
04:03 PM (IST) Jul 09
ಅರ್ಜೆಂಟಾಗಿ ವಿಡಿಯೋ ಮೀಟಿಂಗ್ ಕರೆದ ಕಂಪನಿ ಬಾಸ್, ನಮ್ಮಲ್ಲಿ ಕಾಸಿಲ್ವಮ್ಮಾ ಎಂದು ಒಂದೇ ಮಾತು ಹೇಳಿ ಕಂಪನಿಯ 19 ಉದ್ಯೋಗಿಗಳನ್ನು ಕಿತ್ತು ಹಾಕಿದ ಘಟನೆ ನಡೆದಿದೆ.
03:50 PM (IST) Jul 09
03:37 PM (IST) Jul 09
ಬೆಂಗಳೂರಿನ ದೊಡ್ಡನಾಗಮಂಗಲದ ಸಾಯಿ ಲೇಔಟ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆದಿದೆ. ಸ್ನೇಹಿತನ ಮನೆಯಲ್ಲಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
03:25 PM (IST) Jul 09
ಊಟಕ್ಕೆ ಮನೆಗೆ ಬರುತ್ತೇನೆ ಎಂದು ತಾಯಿಗೆ ಕರೆ ಮಾಡಿದ ವೈದ್ಯ ಎಷ್ಟು ಹೊತ್ತಾದರೂ ಮನೆಗೆ ಬರಲೇ ಇಲ್ಲ. ಆಗಲೇ ಗೊತ್ತಾಗಿದ್ದ ಯುವ ವೈದ್ಯ ಜನಪ್ರಿಯ ಅಟಲ್ ಸೇತುವೆಯಿಂದ ಹಾರಿ ಪ್ರಾಣ ಬಿಟ್ಟಿದ್ದಾನೆ.
02:48 PM (IST) Jul 09
ಇಲ್ಲಿಯವರೆಗೆ ಏರಿಕೆ ಕಂಡಿದ್ದ ಬಂಗಾರದ ಬೆಲೆ ಈಗ ಕಡಿಮೆಯಾಗುತ್ತಿದೆ. ಗಗನಕ್ಕೇರಿದ್ದ ಬಂಗಾರದ ಬೆಲೆಗಳು ಈಗ ಇಳಿಕೆ ಕಾಣುತ್ತಿವೆ. ಒಂದು ತೊಲ ಬಂಗಾರದ ಬೆಲೆ ₹660 ರಷ್ಟು ಕಡಿಮೆಯಾಗಿದೆ.
02:21 PM (IST) Jul 09
ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಜುಲೈ ತಿಂಗಳ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ದಿಗ್ಗಜ ಉದ್ಯಮಿಗಳು ಸ್ಥಾನ ಪಡೆದಿದ್ದಾರೆ. ಈ ಟಾಪ್ 10 ಪಟ್ಟಿಯಲ್ಲಿ ಏಕೈಕಾ ಮಹಿಳಾ ಉದ್ಯಮಿ ಸ್ಥಾನ ಪಡೆದಿದ್ದಾರೆ.
02:08 PM (IST) Jul 09
02:01 PM (IST) Jul 09
01:55 PM (IST) Jul 09
ರಾಜಸ್ಥಾನದಲ್ಲಿ ಭಾರತೀಯ ವಾಯುಸೇನೆಗೆ ಸೇರಿದ ಫೈಟರ್ ಜೆಟ್ಟೊಂದು ಅಪಘಾತಕ್ಕೀಡಾಗಿದ್ದು, ಈ ದುರಂತದಲ್ಲಿ ಪೈಲಟ್ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
01:51 PM (IST) Jul 09
ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ನಾಲ್ಕು ಗುಂಪುಗಳಾಗಿ ಶಾಸಕರು, ಸಂಸದರು ಕಚ್ಚಾಡುತ್ತಿದ್ದಾರೆ. ಸರ್ಕಾರಿ ಕಚೇರಿಗಳು ಸಿದ್ದರಾಮಯ್ಯನವರ ವಸೂಲಿ ಕೇಂದ್ರಗಳಾಗಿವೆ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
01:39 PM (IST) Jul 09
01:38 PM (IST) Jul 09
ಖ್ಯಾತ ನಟಿ, ಮಾಡೆಲ್, ಸೋಶಿಯಲ್ ಮೀಡಿಯಾ ಮೂಲಕ ಭಾರಿ ಸದ್ದು ಮಾಡಿದ್ದ ಹುಮೈರಾ ಅಸ್ಗರ್ ಅಲಿ ಶವವಾಗಿ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದ್ದಾರೆ.
01:35 PM (IST) Jul 09
ಬೆಳಗಾವಿಯ ಜೋಷಿಮಾಲ್ ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
01:26 PM (IST) Jul 09
01:20 PM (IST) Jul 09
ಹಲ್ಲುಜ್ಜುವುದು, ಅದರ ಬ್ರಷ್ ಬಗ್ಗೆ ಗಮನ ಕೊಡುವುದು ಕೂಡ ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಅತಿದೊಡ್ಡ ಪಾತ್ರ ವಹಿಸುತ್ತದೆ. ಆದರೆ ಸಾಮಾನ್ಯವಾಗಿ ಎಲ್ಲರೂ ಮಾಡುವ ಬಹುದೊಡ್ಡ ತಪ್ಪಿನ ಕುರಿತು ಡಾ.ನಾ.ಸೋಮೇಶ್ವರ ಹೇಳಿದ್ದಾರೆ ನೋಡಿ...
01:07 PM (IST) Jul 09
ಸರ್ಕಾರಿ ನೌಕರ ಸಂಜು ಢಾಕುಳಗಿ ಮುಂಬಡ್ತಿ ನಿರಾಕರಣೆಯಿಂದ ನೊಂದು ಸಾಯುವುದಾಗಿ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದೆ. ನನಗೆ ಪ್ರಮೋಷನ್ ಕೊಡದೆ ಮೋಸ ಮಾಡಿದ್ದಾರೆ ಎಂದು ಡಿಕೆಶಿ ಆಪ್ತ ಕಾರ್ಯದರ್ಶಿ ಸೇರಿ ಮೂವರ ವಿರುದ್ಧ ಆರೋಪವನ್ನು ಮಾಡಿದ್ದಾರೆ.
12:50 PM (IST) Jul 09
ಅಮೃತಧಾರೆ ಗೌತಮ್ ಉರ್ಫ್ ರಾಜೇಶ್ ನಟರಂಗ ಅವರು ತಮ್ಮ ಮೊದಲ ಕ್ರಷ್ ಬಗ್ಗೆ ಹೇಳಿದ್ದಾರೆ. ಅವರು ಹೇಳಿದ್ದೇನು?
12:49 PM (IST) Jul 09
ಗೂಗಲ್ ಕ್ರೂಮ್ ಮೂಲರ ಬಹುತೇಕರು ಸರ್ಚ್ ಎಂಜಿನ್ ಬಳಸುತ್ತಾರೆ. ಪ್ರಮುಖವಾಗಿ ಏನೇ ಮಾಹಿತಿ ಬೇಕಿದ್ದರೂ, ಫೋಟೋ, ವೆಬ್‌ಸೈಟ್ ಏನೇ ಇದ್ದರೂ ಗೂಗಲ್ ಸರ್ಚ್ ಮೂಲಕ ಪಡೆಯುತ್ತೇವೆ. ಇದೀಗ ಗೂಗಲ್ ಸರ್ಚ್ ಅಷ್ಟಕ್ಕೆ ಸೀಮಿತವಾಗಿಲ್ಲ. ಬಳಕೆದಾರರಿಗೆ ಮತ್ತಷ್ಟು ನೆರವು ನೀಡುವಲ್ಲಿ ಗೂಗಲ್ ಎಐ ಮೊಡ್ ಸರ್ಚ್ ಆರಂಭಿಸಿದೆ.
12:38 PM (IST) Jul 09
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.