ಬೆಂಗಳೂರು: ರಾಜ್ಯದ ಅಣೆಕಟ್ಟುಗಳಿಗೆ ಭದ್ರತೆ ಒದಗಿಸುವಂತೆ ರಾಜ್ಯ ಸರ್ಕಾರ ತುರ್ತು ಆದೇಶವನ್ನು ಹೊರಡಿಸಿದೆ. ರಾಷ್ಟ್ರದಲ್ಲಾಗುತ್ತಿರುವ ಪ್ರಸ್ತುತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳಿಗೆ ಭದ್ರತೆ ಒದಗಿಸಲು ನಿರ್ದೇಶನ ನೀಡಲಾಗಿದೆ. ರಾಜ್ಯ ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಹೆಚ್ಚಿನ ಭದ್ರತೆ ಒದಗಿಸಲು ಆದೇಶಿದೆ. ತಮ್ಮ ನಿಗಮ ಮತ್ತು ವಲಯ ವ್ಯಾಪ್ತಿಯಲ್ಲಿ ಬರುವ ಅಣೆಕಟ್ಟುಗಳಿಗೆ ಭದ್ರತೆ ನೀಡಬೇಕು ಮತ್ತು ತಕ್ಷಣ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನೇಮ ಮಾಡಿಕೊಳ್ಳಬೇಕು. ಒಂದು ವೇಳೆ ಭದ್ರತೆಯಲ್ಲಿ ಯಾವುದೇ ಚ್ಯುತಿಯಾದಲ್ಲಿ, ಸಂಬಂಧಪಟ್ಟ ಯೋಜನಾಧಿಕಾರಿ ಅಥವಾ ಅಣೆಕಟ್ಟು ಅಧಿಕಾರಿಗಳೇ ಹೊಣೆಗಾರರು ಎಂದು ಸೂಚನೆ ನೀಡಲಾಗಿದೆ. ತಕ್ಷಣದಿಂದಲೇ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.

11:38 PM (IST) May 08
ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಯಾವುದೇ ಸಾವುನೋವುಗಳಿಲ್ಲ. ಪಶ್ಚಿಮ ಭಾರತದ ಹಲವು ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಮತ್ತು ಭಾರತ ವಿರೋಧಿ ಪ್ರಚಾರ ಮಾಡುವ 8,000 ಎಕ್ಸ್ ಖಾತೆಗಳನ್ನು ನಿರ್ಬಂಧಿಸಲಾಗಿದೆ.
ಪೂರ್ತಿ ಓದಿ11:35 PM (IST) May 08
Google Layoff News: ಟೆಕ್ ಉದ್ಯಮದಲ್ಲಿ ಲೇಆಫ್‌ಗಳು ಹೆಚ್ಚುತ್ತಿವೆ, ಗೂಗಲ್ ತನ್ನ ಜಾಗತಿಕ ವ್ಯಾಪಾರ ಘಟಕದಲ್ಲಿ 200 ಉದ್ಯೋಗಿಗಳನ್ನು ಕಡಿತಗೊಳಿಸಿದೆ. AI ಮತ್ತು ಆಟೋಮೇಷನ್‌ನ ಹೆಚ್ಚಿನ ಬಳಕೆ ಲೇಆಫ್‌ಗಳಿಗೆ ಪ್ರಮುಖ ಕಾರಣವಾಗಿದೆ. ಇದು ಗೂಗಲ್‌ನ ಎರಡನೇ ಸುತ್ತಿನ ಉದ್ಯೋಗ ಕಡಿತವಾಗಿದ್ದು, ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ.
ಪೂರ್ತಿ ಓದಿ11:04 PM (IST) May 08
ಫಾಕಿಸ್ತಾನದ ಫೈಟರ್ ಜೆಟ್ ಹೊಡೆದುರುಳಿಸಿದ ಭಾರತ ಪೈಲೆಟನ್ನು ಜೀವಂತವವಾಗಿ ವಶಕ್ಕೆ ಪಡೆದಿದೆ. ಇದೀಗ
ಪೂರ್ತಿ ಓದಿ11:00 PM (IST) May 08
ಪಹಲ್ಗಾಮ್ ದಾಳಿಯನ್ನು ಕೇಂದ್ರ ಸರ್ಕಾರದ ಪೂರ್ವ ನಿಯೋಜಿತ ಕೃತ್ಯ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕೋಲಾರದ ಯುವಕನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಈತ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸುಳ್ಳು ಸುದ್ದಿ ಹಬ್ಬಿಸಿದ್ದ.
ಪೂರ್ತಿ ಓದಿ10:39 PM (IST) May 08
ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ದಾಳಿಗಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆಯು ಲಾಹೋರ್‌ನಲ್ಲಿ ಡ್ರೋನ್ ದಾಳಿ ನಡೆಸಿದೆ. ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಸ್ ಸಯೀದ್‌ನ ಮನೆ ಗುರಿಯಾಗಿದೆ ಎನ್ನಲಾಗಿದೆ. ರಕ್ಷಣಾ ಸಚಿವರು ತುರ್ತು ಸಭೆ ನಡೆಸಿದ್ದಾರೆ ಮತ್ತು ಪ್ರಧಾನಿ ಮೋದಿಗೆ ಮಾಹಿತಿ ನೀಡಲಾಗಿದೆ.
ಪೂರ್ತಿ ಓದಿ10:39 PM (IST) May 08
ಗಡಿಯಲ್ಲಿ ಸಂಘರ್ಷ ತೀವ್ರಗೊಳಿಸಿರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಇಂದೇ ರಾತ್ರಿ ಆಗುವ ಸಾಧ್ಯತೆ ದಟ್ಟವಾಗಿದೆ. ಗಡಿ ಭಾಗದಿಂದ ಮಾತ್ರವಲ್ಲ ಕಾಶ್ಮೀರ ಟಾರ್ಗೆಟ್ ಮಾಡಿದ್ದ ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗಗಳಿಂದ ಮಕ್ಕಳನ್ನು ಈಗಾಗಲೇ ಸೇನೆ ಸ್ಥಳಾಂತರ ಮಾಡಿದ್ದು, ಇತರರನ್ನೂ ತಕ್ಷಣವೇ ಬೇರೆಡೆಗೆ ತೆರಳಲು ಸೂಚಿಸಿದೆ.
ಪೂರ್ತಿ ಓದಿ10:11 PM (IST) May 08
ಆಪರೇಷನ್ ಸಿಂದೂರ್‌ನ ಯಶಸ್ಸಿನ ಹಿನ್ನೆಲೆಯಲ್ಲಿ ಸೈನಿಕರಿಗೆ ಶಕ್ತಿ ತುಂಬಲು ವಕ್ಫ್‌ಗೆ ಸೇರಿದ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಸಚಿವ ಜಮೀರ್ ಅಹ್ಮದ್ ಖಾನ್ ಸೂಚಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ.
ಪೂರ್ತಿ ಓದಿ10:00 PM (IST) May 08
ಪಾಕಿಸ್ತಾನ ಗಡಿಯಲ್ಲಿ ನಡೆಸುತ್ತಿರುವ ಸತತ ಮಿಸೈಲ್ ಹಾಗೂ ಡ್ರೋನ್ ದಾಳಿಯಿಂದ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಡೆಲ್ಲಿ ನಡುವಿನ ಪಂದ್ಯ ರದ್ದಾಗಿದೆ. ಸೇನೆ ಸೂಚನೆ ಮೇರೆಗೆ ತಕ್ಷಣವೇ ಲೈಟ್ ಆಫ್ ಮಾಡಲಾಗಿದೆ.
ಪೂರ್ತಿ ಓದಿ09:44 PM (IST) May 08
ಬುರ್ಖಾ ಧರಿಸಿ ಬಂದ ಮಹಿಳೆಯೊಬ್ಬಳನ್ನು ಅನುಮಾನದಿಂದ ಲೇಡಿ ಪೊಲೀಸರು ಬಟ್ಟೆ ಬಿಚ್ಚಿಸಿದ್ದಾಗ ಕಂಡಿದ್ದು ಮಾತ್ರ ನಂಬಲಸಾಧ್ಯವಾದ ವಸ್ತುಗಳು!
ಪೂರ್ತಿ ಓದಿ09:21 PM (IST) May 08
ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನದ ಡ್ರೋನ್ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಜಮ್ಮು ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲು ಪಾಕಿಸ್ತಾನ ವಿಫಲ ಪ್ರಯತ್ನ ನಡೆಸಿದೆ.
ಪೂರ್ತಿ ಓದಿ09:17 PM (IST) May 08
ಅಕ್ರಮ ಗಣಿಗಾರಿಕೆಯಲ್ಲಿ ಶಾಸಕ ಜನಾರ್ಧನ ರೆಡ್ಡಿಗೆ 7 ವರ್ಷಗಳ ಜೈಲು ಶಿಕ್ಷೆ ಪ್ರಕಟವಾಗಿರುವ ಹಿನ್ನಲೆಯಲ್ಲಿ ಇದೀಗ ಶಾಸಕ ಸ್ಥಾನಕ್ಕೆ ಕುತ್ತು ಬಂದಿದೆ. ಜನಾರ್ಧನ ರೆಡ್ಡಿ ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ.
ಪೂರ್ತಿ ಓದಿ08:46 PM (IST) May 08
ಕೇಂದ್ರ ಗೃಹಸಚಿವಾಲಯವು ರಾಯಚೂರು ಸೇರಿದಂತೆ 244 ಜಿಲ್ಲೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಿದೆ. ಮೇ 9 ರಂದು ಆರ್‌ಟಿಪಿಎಸ್ ಹೆಲಿಪ್ಯಾಡ್‌ನಲ್ಲಿ ನಾಗರಿಕ ರಕ್ಷಣಾ ಅಣಕು ಪ್ರದರ್ಶನ 'ಆಪರೇಷನ್ ಅಭ್ಯಾಸ್' ನಡೆಯಲಿದೆ. ಯುದ್ಧದಂತಹ ಸನ್ನಿವೇಶಗಳನ್ನು ಎದುರಿಸಲು ನಾಗರಿಕರಲ್ಲಿ ಆತ್ಮಸ್ಥೈರ್ಯ ತುಂಬುವುದು ಇದರ ಉದ್ದೇಶ.
ಪೂರ್ತಿ ಓದಿ08:34 PM (IST) May 08
ಭಾರತದ ಗಡಿಯಲ್ಲಿ ನಿಂತು ಭಾರತೀಯ ಸೇನೆ ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ಪಾಕಿಸ್ತಾನದ ಯುಟ್ಯೂಬರ್ ಒಬ್ಬರು ಗಹಗಹಿಸಿ ನಕ್ಕಿರುವ ವಿಡಿಯೋ ವೈರಲ್ ಆಗಿದೆ.
ಪೂರ್ತಿ ಓದಿ08:26 PM (IST) May 08
ಮೂವರು ಪಾಕಿಸ್ತಾನಿ ಮಕ್ಕಳ ವೀಸಾ ವಿಸ್ತರಣೆ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಮಕ್ಕಳ ತಾಯಿ ರಾಂಷಾ ಜಹಾನ್, ಮೈಸೂರಿನವರಾಗಿದ್ದು, ಪಾಕಿಸ್ತಾನಿ ವ್ಯಕ್ತಿಯನ್ನು ವಿವಾಹವಾಗಿದ್ದರು. ಕೇಂದ್ರ ಸರ್ಕಾರ ಮಕ್ಕಳ ವೀಸಾ ರದ್ದುಗೊಳಿಸಿ, ದೇಶ ತೊರೆಯುವಂತೆ ಸೂಚಿಸಿತ್ತು.
ಪೂರ್ತಿ ಓದಿ08:08 PM (IST) May 08
ಭಾರತದ ಆಪರೇಶನ್ ಸಿಂದೂರ್‌ನಿಂದ ದೇಶವನ್ನು ಕಾಪಾಡಿ,ನಮ್ಮ ಸುರಕ್ಷತೆಯನ್ನು ಅಲ್ಲಾ ಕಾಪಾಡಬೇಕು ಎಂದು ಸಂಸತ್ತಿನಲ್ಲಿ ಸಂಸದ ಕಣ್ಣೀರಿಟ್ಟ ಘಟನೆ ನಡೆದಿದೆ.
ಪೂರ್ತಿ ಓದಿ08:06 PM (IST) May 08
ಆಪರೇಷನ್ ಸಿಂದೂರ್ನಂಥ ಹಲವು ಕಾರ್ಯಾಚರಣೆಗಳ ಅದ್ಭುತ ಶಕ್ತಿ, ಪ್ರಧಾನಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕುಮಾರ್ ಅವರ ಜೀವನ ಯಾವ ಸಿನಿಮಾಗೂ ಕಡಿಮೆ ಇಲ್ಲ.
ಪೂರ್ತಿ ಓದಿ07:59 PM (IST) May 08
ಬಾಗಲಕೋಟೆ ತಾಲೂಕಿನಲ್ಲಿ ಕ್ಯಾಂಟರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಮೂವರು ಬಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹನುಮ ಜಯಂತಿ ಆಚರಣೆ ವೀಕ್ಷಿಸಲು ಹೊರಟಿದ್ದ ಬಾಲಕರು ಈ ದುರಂತಕ್ಕೆ ಸಿಲುಕಿದ್ದಾರೆ. ಹಾವೇರಿಯಲ್ಲಿ ಇದೇ ರೀತಿಯ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.
ಪೂರ್ತಿ ಓದಿ07:21 PM (IST) May 08
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ರಫೇಲ್ ಯುದ್ಧ ವಿಮಾನವನ್ನು ಮೊದಲು ಹಾರಿಸಿದ ಭಾರತೀಯನ ಬಗ್ಗೆ ಇಲ್ಲಿದೆ ಮಾಹಿತಿ
ಪೂರ್ತಿ ಓದಿ07:16 PM (IST) May 08
ಕರ್ನಾಟಕದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳನ್ನು ದೇಶದಿಂದ ಹೊರದಬ್ಬುವಂತೆ ಬಿಜೆಪಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಿದೆ. ಈ ಕುರಿತು ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಸಲಾಗಿದೆ ಎಂದು ಬಿಜೆಪಿ ಪ್ರಕೋಷ್ಠಗಳ ಅಧ್ಯಕ್ಷ ಎಸ್ ದತ್ತಾತ್ರಿ ತಿಳಿಸಿದ್ದಾರೆ.
ಪೂರ್ತಿ ಓದಿ07:09 PM (IST) May 08
ಯಾದಗಿರಿ ಜಿಲ್ಲೆಯಲ್ಲಿ 34 ಸಾವಿರ ಕೋಟಿ ರೂ. ಖರ್ಚಾದರೂ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಶಿಕ್ಷಕರ ಕೊರತೆ, ಮೂಲಸೌಕರ್ಯಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿಂದ ಜಿಲ್ಲೆ ತೀವ್ರ ಹಿಂದುಳಿದಿದೆ. ಮಾನವ ಸೂಚ್ಯಂಕದಲ್ಲಿಯೂ ಹಿಂದುಳಿದಿರುವುದಕ್ಕೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಕೊರತೆಯೇ ಕಾರಣ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಪೂರ್ತಿ ಓದಿ06:51 PM (IST) May 08
ಆಪರೇಶನ್ ಸಿಂದೂರ್ ಕುರಿತು ಫೋಟೋ ಹಂಚಿಕೊಂಡ ಸಾನಿಯಾ ಮಿರ್ಜಾ ಪಾಕಿಸ್ತಾನದಿಂದ ತೀವ್ರ ಟೀಕೆ ಎದುರಿಸಿದ್ದರು. ಇದರ ಬೆನ್ನಲ್ಲೇ ಸಾನಿಯಾ ತಮ್ಮ ವರಸೆ ಬದಲಿಸಿದ್ದಾರೆ. ಪಾಕಿಸ್ತಾನದ ದಾಳಿಯನ್ನು ಭಾರತ ಹಿಮ್ಮೆಟ್ಟಿಸುತ್ತಿದ್ದಂತೆ ಸಾನಿಯಾ ಮಿರ್ಜಾ ಇದೀಗ ಶಾಂತಿ ಪಾಠ ಮಾಡಿದ್ದಾರೆ. ಇದು ಭಾರತೀಯರ ಆಕ್ರೋಶಕ್ಕೆ ಕಾರಣಾಗಿದೆ.
06:45 PM (IST) May 08
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದ ಭಯೋತ್ಪಾದಕರಿಗೆ ಸರ್ಕಾರಿ ಅಂತ್ಯಕ್ರಿಯೆಗಳನ್ನು ನಡೆಸಿದ್ದಕ್ಕಾಗಿ ಭಾರತ ಪಾಕಿಸ್ತಾನವನ್ನು ಖಂಡಿಸಿದೆ. ಭಯೋತ್ಪಾದಕರಿಗೆ ಸರ್ಕಾರಿ ಅಂತ್ಯಕ್ರಿಯೆಗಳನ್ನು ನೀಡುವುದು ಪಾಕಿಸ್ತಾನದಲ್ಲಿ ಅಭ್ಯಾಸವಾಗಿರಬಹುದು ಎಂದು ಭಾರತ ಟೀಕಿಸಿದೆ.
ಪೂರ್ತಿ ಓದಿ06:41 PM (IST) May 08
ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿ ಸ್ಥಾಪನೆ (DRDO LRDE) 118 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇ 25, 2025 ರೊಳಗೆ ಅರ್ಜಿ ಸಲ್ಲಿಸಬಹುದು.
ಪೂರ್ತಿ ಓದಿ06:38 PM (IST) May 08
ಭಾರತವು ಪಾಕಿಸ್ತಾನದ ವಿರುದ್ಧ ಜಲದಾಳಿ ತೀವ್ರಗೊಳಿಸಿದ್ದು, ರಿಯಾಸಿಯ ಸಲಾಲ್ ಅಣೆಕಟ್ಟಿನ ದ್ವಾರಗಳನ್ನು ತೆರೆದಿದೆ. ಇದರಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಸಾಧ್ಯತೆ ಹೆಚ್ಚಾಗಿದೆ. ಸಿಂಧೂ ನದಿ ನೀರು ಒಪ್ಪಂದ ರದ್ದಾದ ಬಳಿಕ ಭಾರತವು ನೀರು ಬಿಡುಗಡೆ ಮಾಡುವ ಸಂಪೂರ್ಣ ನಿಯಂತ್ರಣ ಹೊಂದಿದೆ.
ಪೂರ್ತಿ ಓದಿ06:17 PM (IST) May 08
ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ, ಪಾಕಿಸ್ತಾನ ಮೂಲದ ಎಲ್ಲಾ ಕಂಟೆಂಟ್‌ಅನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಸರ್ಕಾರ ಆನ್‌ಲೈನ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ನಿರ್ದೇಶನ ನೀಡಿದೆ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಪೂರ್ತಿ ಓದಿ06:12 PM (IST) May 08
ಸರಿಯಾಗಿ ಹೊಡೆಸಿಕೊಂಡರು ತನ್ನ ಹುಟ್ಟುಗುಣ ಬಿಡದ ಪಾಕಿಸ್ತಾನದ ಉದ್ಧಟತನದ ವರ್ತನೆಗೆ ಭಾರತದ ರಕ್ಷಣಾ ರಾಜನಾಥ್ ಸಿಂಗ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಪೂರ್ತಿ ಓದಿ05:57 PM (IST) May 08
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಕಡಗೋಲು ಕೃಷ್ಣನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಸುದರ್ಶನ ಚಕ್ರ ಮತ್ತು ಸಿಂಧೂರದ ಬಟ್ಟಲು ಹಿಡಿದು ದೇಶ ರಕ್ಷಣೆಯ ಸಂದೇಶ ಸಾರಿದ ಶ್ರೀಕೃಷ್ಣ, ಸೈನಿಕರ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಪೂರ್ತಿ ಓದಿ05:30 PM (IST) May 08
S-400 missile system ಭಾರತದ S-400 ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದಿಂದ 15 ಭಾರತೀಯ ನಗರಗಳ ಮೇಲೆ ನಡೆಸಲು ಉದ್ದೇಶಿಸಲಾದ ಕ್ಷಿಪಣಿ ದಾಳಿಯನ್ನು ಯಶಸ್ವಿಯಾಗಿ ತಡೆಯಿತು. ಬಿಎಸ್‌ಎಫ್ ಪಂಜಾಬ್ ಗಡಿಯಲ್ಲಿ ಪಾಕಿಸ್ತಾನಿ ಒಳನುಸುಳುವವರನ್ನು ಹೊಡೆದುರುಳಿಸಿತು. ವಿಶ್ವಸಂಸ್ಥೆಯು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಮತ್ತು ಪಾಕಿಸ್ತಾನಕ್ಕೆ ಕರೆ ನೀಡಿದೆ.
ಪೂರ್ತಿ ಓದಿ05:09 PM (IST) May 08
ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಕ್ರಿಕೆಟಿಗ ವರುಣ್ ಚಕ್ರವರ್ತಿಗೆ ಬಿಸಿಸಿಐ ಪಂದ್ಯದ ಶುಲ್ಕದ 25% ದಂಡ ವಿಧಿಸಿದೆ ಮತ್ತು ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಗಾಗಿ ಡಿಮೆರಿಟ್ ಪಾಯಿಂಟ್ ನೀಡಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಕ್ರಮಣಕಾರಿ ಸನ್ನೆಗಾಗಿ ಈ ಶಿಕ್ಷೆ ವಿಧಿಸಲಾಗಿದೆ.
ಪೂರ್ತಿ ಓದಿ05:00 PM (IST) May 08
ಪಾಕಿಸ್ತಾನದ ಪ್ರಮುಖ ನಗರಗಳ ಮೇಲೆ ಭಾರತದ ಹರುಪ್ ಡ್ರೋನ್‌ಗಳಿಂದ ದಾಳಿ. ಈ ಡ್ರೋನ್‌ಗಳು ಇಸ್ರೇಲ್ ನಿರ್ಮಿತವಾಗಿದ್ದು, ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತವೆ. ಪತ್ತೆಹಚ್ಚುವುದು ಕಷ್ಟಕರವಾದ ಈ ಡ್ರೋನ್‌ಗಳು ಮಾರಕ ಸ್ವಾಯತ್ತ ಶಸ್ತ್ರಾಸ್ತ್ರ ವ್ಯವಸ್ಥೆಗೆ ಸೇರುತ್ತವೆ.
ಪೂರ್ತಿ ಓದಿ04:50 PM (IST) May 08
India Pakistan tensions ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಆರು ಮೆಟ್ರೋ ನಿಲ್ದಾಣಗಳಲ್ಲಿ AI ಆಧಾರಿತ ಸಿಸಿಟಿವಿ ಮತ್ತು ANPR ತಂತ್ರಜ್ಞಾನ ಅಳವಡಿಸಲಾಗಿದ್ದು, ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇಡಲಿದೆ.
ಪೂರ್ತಿ ಓದಿ04:40 PM (IST) May 08
ಆಪರೇಷನ್ ಸಿಂದೂರ್ ಹೆಸರು ಈಗ ಎಲ್ಲೆಡೆ ಸದ್ದು ಮಾಡ್ತಿದೆ. ಸೋಷಿಯಲ್ ಮೀಡಿಯಾ, ಟಿವಿ, ಪೇಪರ್ ಎಲ್ಲದರಲ್ಲೂ ಇದೇ ಸುದ್ದಿ. ಈ ಹೆಸರನ್ನ ಟ್ರೇಡ್‌ಮಾರ್ಕ್ ಮಾಡಿಕೊಳ್ಳೋಕೆ ದೊಡ್ಡ ದೊಡ್ಡ ಕಂಪನಿಗಳು ಪೈಪೋಟಿ ನಡೆಸ್ತಿವೆ. ರಿಲಯನ್ಸ್ ಮುಂದು ಅಂತ ಕೇಳಿಬರ್ತಿದೆ.
ಪೂರ್ತಿ ಓದಿ04:21 PM (IST) May 08
ಪ್ರಾಣಿಗಳ ಉತ್ತಮ ಆರೋಗ್ಯ ಮತ್ತು ಸೌಕರ್ಯಕ್ಕಾಗಿ ಚಿಗಟಗಳನ್ನು ತಡೆಗಟ್ಟುವುದು ಮುಖ್ಯ. ಚಿಗಟಗಳನ್ನು ತಡೆಗಟ್ಟಲು ಈ ಸಲಹೆಗಳನ್ನು ಪಾಲಿಸಿ.
ಪೂರ್ತಿ ಓದಿ04:19 PM (IST) May 08
ಆಪರೇಷನ್ ಸಿಂದೂರ್ ಮುಂದುವರೆದಿದ್ದು, ಭಾರತದ ಡ್ರೋಣ್ ದಾಳಿಗೆ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಧ್ವಂಸಗೊಂಡಿದೆ
ಪೂರ್ತಿ ಓದಿ04:14 PM (IST) May 08
ಇಂದು ಬಂಗಾರದ ಬೆಲೆ ಹತ್ತು ಗ್ರಾಮ್‌ಗೆ ಒಂದು ಲಕ್ಷ ರೂಪಾಯಿ ಬಳಿ ಹೋಗಿದೆ. ಇನ್ನು ಕೇಸರಿಯ ಬೆಲೆ ಒಂದು ಕೆಜಿಗೆ ಐದು ಲಕ್ಷ ರೂಪಾಯಿ ಆಗಿದೆ. ಒಂದು ಕೆಜಿ ಕೇಸರಿ ಬೆಳೆದರೆ ನೀವು ಐವತ್ತು ಗ್ರಾಂ ಬಂಗಾರ ಖರೀದಿ ಮಾಡಬಹುದು. ಹಾಗಾದರೆ ಕೇಸರಿ ಬೆಳೆಯೋದು ಹೇಗೆ? ಸರಳ ಸ್ಟೆಪ್‌ನಲ್ಲಿ ಕೇಸರಿ ಬೆಳೆಯೋದು ಹೇಗೆ?
03:49 PM (IST) May 08
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ತೇಜ್ ಪ್ರತಾಪ್ ಯಾದವ್ ದೇಶ ಸೇವೆ ಮಾಡುವುದಾಗಿ ಹೇಳಿ ತಮ್ಮ ಪೈಲಟ್ ಲೈಸೆನ್ಸ್ ಹಂಚಿಕೊಂಡಿದ್ದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಪೂರ್ತಿ ಓದಿ03:36 PM (IST) May 08
ಭಾರತವು ಪಾಕಿಸ್ತಾನದ ಮೇಲೆ ಮೊದಲ ಬಾರಿಗೆ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ಬಳಸಿ ಕ್ಷಿಪಣಿ ದಾಳಿಯನ್ನು ಹಿಮ್ಮೆಟ್ಟಿಸಿದೆ. ಪಾಕಿಸ್ತಾನದ ಚೀನಾ ನಿರ್ಮಿತ ಎಚ್‌ಕ್ಯು 16 ಎಡಿಎಸ್ ಸಿಸ್ಟಮ್ ಧ್ವಂಸವಾಗಿದೆ. ಡ್ರೋನ್ ದಾಳಿಗಳಲ್ಲಿ ನಾಲ್ವರು ಪಾಕಿಸ್ತಾನಿ ಸೈನಿಕರು ಗಾಯಗೊಂಡಿದ್ದಾರೆ.
ಪೂರ್ತಿ ಓದಿ03:15 PM (IST) May 08
ಆಪರೇಶನ್ ಸಿಂದೂರ್‌ಗೆ ಪ್ರತಿಯಾಗಿ ಪಾಕಿಸ್ತಾನ ಮಿಲಿಟರಿ ದಾಳಿಗೆ ಮುಂದಾದರೆ ಅದಕ್ಕಿಂತ ಕಠಿಣ ಉತ್ತರ ಖಚಿತ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಎಚ್ಚರಿಸಿದ್ದಾರೆ. ಜೈಶಂಕರ್ ಮಾತುಗಳು ಇದೀಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸದ್ದು ಮಾಡುತ್ತಿದೆ.
ಪೂರ್ತಿ ಓದಿ03:06 PM (IST) May 08
ಪಾಕಿಸ್ತಾನದ ಗಡಿಯಲ್ಲಿ ನಡೆದ ಭಾರೀ ಪ್ರಮಾಣದ ಆರ್ಟಿಲ್ಲರಿ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನದ ಮಿಲಿಟರಿ ಆಸ್ತಿಗಳ ಮೇಲೆ ಪ್ರತಿದಾಳಿ ನಡೆಸಿದೆ. ಈ ದಾಳಿಯಲ್ಲಿ ಚೀನಾ ನಿರ್ಮಿತ ಏರ್ ಡಿಫೆನ್ಸ್ ರಡಾರ್‌ಗಳು ಮತ್ತು ವ್ಯವಸ್ಥೆಗಳು ಧ್ವಂಸಗೊಂಡಿವೆ.
ಪೂರ್ತಿ ಓದಿ02:55 PM (IST) May 08
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದು ಮತ್ತು ಭಾವನಾ ಪ್ರೀತಿ ಒಂದಾಗಿದ್ದು, ಭಾವನಾ ಸಿದ್ದುಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ. ಆದರೆ ವೆಂಕಿ ಜೈಲಿನಲ್ಲಿರುವ ವಿಷಯ ಭಾವನಾಗೆ ಗೊತ್ತಾದರೆ ಅವಳು ಸಿದ್ದುಳಿಂದ ದೂರ ಆಗಬಹುದು ಎಂದು ವೀಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ