Published : Aug 06, 2025, 06:58 AM ISTUpdated : Aug 06, 2025, 11:33 PM IST

Karnataka News Live: ಉರ್ದುವಿನಲ್ಲಿ ಓದಿದ ಯುವಕ, ನಿಸಾರ್ ಜಂಗಮ ದೀಕ್ಷೆ ಪಡೆದು ನಿಜಲಿಂಗಸ್ವಾಮಿಯಾಗಿದ್ದು ಹೇಗೆ? ಪಾಠ ಕಲಿಸಿದ ಶಿಕ್ಷಕ ಹೇಳಿದ್ದೇನು?

ಸಾರಾಂಶ

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂಡು ಹಾಕಿದ ನಡೆಯುತ್ತಿರುವ ಶೋಧ ಕಾರ್ಯಾಚರಣೆ ವೇಳೆ ಪಾಯಿಂಟ್ 6ರಲ್ಲಿ ಮಾನವನ ಕಳೆಗುರ ಪತ್ತೆಯಾಗಿತ್ತು. ಈ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಯುಡಿಆರ್‌ (ಅಸಹಜ ಸಾವು ಪ್ರಕರಣ) ದಾಖಲಾಗಿತ್ತು. ಈ ಪ್ರಕರಣವನ್ನು ಸಹ ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ. ಧರ್ಮಸ್ಥಳ ಗ್ರಾಮದಲ್ಲಿ ಪೊಲೀಸರು ಈ ಹಿಂದೆ ಪ್ರಕರಣ ದಾಖಲಿಸದೇ ಮೃತದೇಹವೊಂದನ್ನು ಹೂತು ಹಾಕಿದ್ದಾರೆ ಎಂದು ಜಯಂತ್ ಎಂಬವರು ದೂರು ದಾಖಲಿಸಿದ್ದರು. ಜು.31ರಂದು ಆರನೇ ಸ್ಥಳದಲ್ಲಿ ಉತ್ಪನನ ಕಾರ್ಯಾಚರಣೆ ವೇಳೆ ಪತ್ತೆಯಾದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ. ಈ ಎರಡೂ ಪ್ರಕರಣಗಳನ್ನು ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ.

kalaburagi news

11:33 PM (IST) Aug 06

ಉರ್ದುವಿನಲ್ಲಿ ಓದಿದ ಯುವಕ, ನಿಸಾರ್ ಜಂಗಮ ದೀಕ್ಷೆ ಪಡೆದು ನಿಜಲಿಂಗಸ್ವಾಮಿಯಾಗಿದ್ದು ಹೇಗೆ? ಪಾಠ ಕಲಿಸಿದ ಶಿಕ್ಷಕ ಹೇಳಿದ್ದೇನು?

ನಿಸಾರ್‌ನ ಈ ಆಧ್ಯಾತ್ಮಿಕ ಒಲವಿಗೆ ಅವರ ಧರ್ಮದ ಕೆಲವರು ವಿರೋಧ ವ್ಯಕ್ತಪಡಿಸಿದ್ದರಂತೆ. ಆದಾಗ್ಯೂ, 2020ರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾದ ನಿಸಾರ್, ಲಿಂಗ ದೀಕ್ಷೆ ಪಡೆದ ಬಳಿಕ ಕಾವಿ ಬಟ್ಟೆ ಧರಿಸಿ ಶಾಲೆಗೆ ಅಂಕಪಟ್ಟಿ ಪಡೆಯಲು ಬಂದಿದ್ದರು. 

Read Full Story

11:13 PM (IST) Aug 06

ಟ್ರಂಪ್‌ ತೆರಿಗೆ ಲೆಕ್ಕಕ್ಕಿಲ್ಲ, ರಷ್ಯಾ ಜೊತೆ ಮತ್ತೆ ಕೈಗಾರಿಕಾ ಸಹಕಾರ ಒಪ್ಪಂದ ಮಾಡಿಕೊಂಡ ಭಾರತ!

ಭಾರತ ಮತ್ತು ರಷ್ಯಾ ನಡುವೆ ಕೈಗಾರಿಕಾ ಮತ್ತು ತಾಂತ್ರಿಕ ಸಹಕಾರವನ್ನು ಗಾಢವಾಗಿಸಲು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದವು ಗಣಿಗಾರಿಕೆ, ರೈಲ್ವೆ ಸಾರಿಗೆ, ರಸಗೊಬ್ಬರಗಳು ಮತ್ತು ಇತರ ಕ್ಷೇತ್ರಗಳಲ್ಲಿ ಸಹಯೋಗವನ್ನು ಒಳಗೊಂಡಿದೆ.
Read Full Story

10:57 PM (IST) Aug 06

ದೇವ್ರೇ, ಇಂತಹ ಸಾವು ಯಾರಿಗೂ ಬೇಡ! ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೇ ಮನನೊಂದು ಬೆಂಕಿ ಹಚ್ಚಿಕೊಂಡು ಮಹಿಳೆ ದಾರುಣ ಸಾವು

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಸಾಯಲು ಮಾಡಿಕೊಂಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ.

Read Full Story

10:32 PM (IST) Aug 06

ಕಲಬುರಗಿ - ಕುಡಿತದ ಚಟ ಬಿಡಿಸಲು ನೀಡಿದ ನಾಟಿ ಔಷಧ ಸೇವಿಸಿ ಮೂವರು ಮೃತ್ಯು; ಓರ್ವನ ಸ್ಥಿತಿ ಗಂಭೀರ

ಕಲಬುರಗಿಯ ಸೇಡಂ ತಾಲೂಕಿನಲ್ಲಿ ನಾಟಿ ಔಷಧ ಸೇವಿಸಿ ಮೂವರು ಮೃತಪಟ್ಟಿದ್ದಾರೆ. ಕುಡಿತದ ಚಟ ಬಿಡಿಸಲು ಸೇವಿಸಿದ ಔಷಧವೇ ಸಾವಿಗೆ ಕಾರಣ ಎನ್ನಲಾಗಿದೆ. ಓರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.
Read Full Story

09:22 PM (IST) Aug 06

ಜನರೇ ಅರ್ಥ ಮಾಡಿಕೊಳ್ಳಿ, ನ್ಯಾಯ ಕೇಳೋದು ನಮ್ಮ ಹಕ್ಕು-ಕರ್ತವ್ಯ - ಪ್ರಕಾಶ್‌ ರಾಜ್‌

ಧರ್ಮಸ್ಥಳದಲ್ಲಿ ಸೌಜನ್ಯ ಪರ ಹೋರಾಟಗಾರರು ಹಾಗೂ ಸ್ಥಳೀಯ ಗ್ರಾಮಸ್ಥರ ನಡುವೆ ಹೊಡೆದಾಟ ನಡೆದಿದ್ದು, ಯೂಟ್ಯೂಬರ್‌ಗಳಿಗೆ ಧರ್ಮದೇಟು ನೀಡಲಾಗಿದೆ. ಕ್ಷೇತ್ರಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಈ ಘಟನೆ ಬೆನ್ನಲ್ಲೇ ಮತ್ತೆ ಪರ-ವಿರೋಧ ಚರ್ಚೆ ಶುರುವಾಗಿದೆ.
Read Full Story

08:51 PM (IST) Aug 06

ಮಡಿಕೇರಿಯ ರಾಜಾಸೀಟಿನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣಕ್ಕೆ ತೀವ್ರ ವಿರೋಧ

ಕೊಡಗಿನ ರಾಜಾಸೀಟಿನಲ್ಲಿ ಗಾಜಿನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಭೂಕುಸಿತದ ಭೀತಿಯಿರುವ ಪ್ರದೇಶದಲ್ಲಿ ಈ ಕಾಮಗಾರಿ ಸೂಕ್ತವೇ ಎಂಬ ಪ್ರಶ್ನೆ ಎದ್ದಿದೆ. ಬಿಜೆಪಿ ಈ ಯೋಜನೆಯನ್ನು ವಿರೋಧಿಸುತ್ತಿದ್ದರೆ, ಕಾಂಗ್ರೆಸ್ ಅಭಿವೃದ್ಧಿಗೆ ಅಗತ್ಯ ಎಂದು ವಾದಿಸುತ್ತಿದೆ.
Read Full Story

08:34 PM (IST) Aug 06

ಕ್ಷೇತ್ರದ ಅಪಪ್ರಚಾರದ ಬಗ್ಗೆ ಸಿಡಿದೆದ್ದ ಭಕ್ತರು, ಯೂಟ್ಯೂಬರ್ಸ್‌ಗಳಿಗೆ ಧರ್ಮದೇಟು ಕೊಟ್ಟು ಓಡಿಸಿದ ಸ್ಥಳೀಯರು!

ಧರ್ಮಸ್ಥಳದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಯೂಟ್ಯೂಬರ್‌ಗಳಿಗೆ ಭಕ್ತರಿಂದ ಧರ್ಮದೇಟು. ಸ್ಥಳೀಯ ಆಸ್ಪತ್ರೆಗೆ ದಾಖಲು. ಧರ್ಮಸ್ಥಳದ ಕುರಿತು ಅವಹೇಳನ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಭಕ್ತರಿಂದ ಪ್ರತಿಭಟನೆ.
Read Full Story

08:10 PM (IST) Aug 06

ಸುವರ್ಣ ನ್ಯೂಸ್ ವರದಿಗಾರನ ಮೇಲೆ ಹಲ್ಲೆ ಮಾಡಿದ ಗಿರೀಶ್ ಮೆಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್!

ಸೌಜನ್ಯ ಪ್ರಕರಣ ವರದಿ ಮಾಡುತ್ತಿದ್ದ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದ ಬಳಿಕ, ಉಜಿರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಲು ತೆರಳಿದ ಸುವರ್ಣ ನ್ಯೂಸ್ ವರದಿಗಾರ ಹರೀಶ್ ಮೇಲೆಯೂ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮೆಟ್ಟಣ್ಣನವರ್ ಗ್ಯಾಂಗ್ ಹಲ್ಲೆ ನಡೆಸಿದೆ. ತಡೆಯಲು ಯತ್ನಿಸಿದ ಪೊಲೀಸರ ಮೇಲೂ ಹಲ್ಲೆ ನಡೆದಿದೆ.

Read Full Story

07:50 PM (IST) Aug 06

ಒಳಮೀಸಲಾತಿ ವರದಿಗೆ ಬೋವಿಗುರುಪೀಠದ ಸ್ವಾಮೀಜಿಯಿಂದ ತೀವ್ರ ವಿರೋಧ

ಒಳಮೀಸಲಾತಿ ವರದಿಯನ್ನು ತರಾತುರಿಯಲ್ಲಿ ಅಂಗೀಕರಿಸದಂತೆ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಎಲ್ಲಾ ಸಮುದಾಯಗಳೊಂದಿಗೆ ಸಮಾಲೋಚನೆ ನಡೆಸಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. 

Read Full Story

07:39 PM (IST) Aug 06

ಸೌಜನ್ಯಾಪರ ವರದಿ ಮಾಡ್ತಿದ್ದ ಯೂಟೂಬರ್‌ಗಳ ಮೇಲೆ ಹಲ್ಲೆ; ಲಾಠಿ ಚಾರ್ಜ್ ಮಾಡಿದ ಪೊಲೀಸರು!

ಧರ್ಮಸ್ಥಳದ ಪಾಂಗಳ ಕ್ರಾಸ್‌ನಲ್ಲಿ ಯೂಟ್ಯೂಬ್ ವಿಡಿಯೋ ಮಾಡುತ್ತಿದ್ದವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಘಟನೆಯ ಬಳಿಕ ಪರ-ವಿರೋಧ ಗುಂಪುಗಳು ಸೇರಿದ್ದು, ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
Read Full Story

06:24 PM (IST) Aug 06

ಮನೆ ಮುಂದೆ ಆಟವಾಡ್ತಿದ್ದ ಬಾಲಕಿ ಮಸೀದಿಯೊಳಗೆ ಎಳೆದೊಯ್ದು, ರೇಪ್ ಮಾಡಿ ಕಳಿಸಿದ ಮೌಲ್ವಿ!

ಬೆಳಗಾವಿಯ ಮಸೀದಿಯೊಂದರಲ್ಲಿ ಎರಡು ವರ್ಷಗಳ ಹಿಂದೆ ನಡೆದಿದ್ದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾ*ಚಾರ ಪ್ರಕರಣ ಬೆಳಕಿಗೆ ಬಂದಿದೆ. ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಸಾಮಾಜಿಕ ಜಾಲತಾಣದ ಮಧ್ಯಪ್ರವೇಶದ ನಂತರ ಪೊಲೀಸರು ಆರೋಪಿ ಮೌಲ್ವಿಯನ್ನು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಈ ಘಟನೆ ದೃಢಪಡಿಸಿವೆ.

Read Full Story

05:55 PM (IST) Aug 06

ಪುತ್ತೂರಿನ ಪ್ರತಿಭಾವಂತ ಯುವ ಪಶುವೈದ್ಯೆ ಕೀರ್ತನಾ ಮಂಗಳೂರಿನಲ್ಲಿ ಆತ್ಮಹ*ತ್ಯೆ!

ಪುತ್ತೂರಿನ ಯುವ ಪಶುವೈದ್ಯೆ ಡಾ. ಕೀರ್ತನಾ ಜೋಶಿ ಮಂಗಳೂರಿನ ತಮ್ಮ ನಿವಾಸದಲ್ಲಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಅವರ ಕುಟುಂಬ ಮತ್ತು ಸ್ನೇಹಿತರಲ್ಲಿ ಆಘಾತವನ್ನುಂಟುಮಾಡಿದೆ. ಪ್ರತಿಭಾವಂತ ವೈದ್ಯೆಯ ಈ ಅಕಾಲಿಕ ಮರಣಕ್ಕೆ ಕಾರಣ ತಿಳಿದುಬಂದಿಲ್ಲ.

Read Full Story

05:55 PM (IST) Aug 06

ಟಿಕೆಟ್​ ಇಲ್ದೇ ಪ್ರಯಾಣಿಸ್ತೀರಾ, ಸಾಮಾನು ಸಾಗಿಸ್ತೀರಾ? 4 ತಿಂಗಳಲ್ಲಿ ಪಶ್ಚಿಮ ರೈಲೊಂದರಲ್ಲೇ 71 ಕೋಟಿ ದಂಡ!

ಕೇವಲ ನಾಲ್ಕು ತಿಂಗಳಿನಲ್ಲಿ ಪಶ್ಚಿಮ ರೈಲ್ವೆ ಒಂದರಲ್ಲಿಯೇ 71 ಕೋಟಿ ರೂಪಾಯಿಗಳ ದಂಡ ವಸೂಲಿ ಆಗಿದೆ. ಇದರ ಕುತೂಹಲದ ಮಾಹಿತಿ ಇಲ್ಲಿದೆ...

 

Read Full Story

05:44 PM (IST) Aug 06

ತಂದೆಯ ಸಮಾಧಿಯ ಪಕ್ಕದಲ್ಲೇ ಕ್ರೈಸ್ತ ಸಂಪ್ರದಾಯದಂತೆ ನಟ ಸಂತೋಷ್‌ ಬಾಲರಾಜ್‌ ಅಂತ್ಯಸಂಸ್ಕಾರ

ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್, 34, ಜಾಂಡೀಸ್ ನಿಂದ ನಿಧನರಾಗಿದ್ದಾರೆ. ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಕುಟುಂಬ ಈಗ ಮಗನನ್ನೂ ಕಳೆದುಕೊಂಡಿದೆ. ಬುಧವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.
Read Full Story

05:32 PM (IST) Aug 06

ದರ್ಶನ್ & ಗ್ಯಾಂಗ್‌ನ ಜಾಮೀನು ರದ್ದತಿ ಮಾಡಲು, ಸುಪ್ರೀಂ ಕೋರ್ಟ್‌ಗೆ ಲಿಖಿತ ವಾದ ಸಲ್ಲಿಸಿದ ಸರ್ಕಾರ!

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಆರೋಪಿಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದೆ. ಪ್ರತ್ಯಕ್ಷದರ್ಶಿಗಳು, ವಿಧಿವಿಜ್ಞಾನ ವರದಿಗಳು, ದರ್ಶನ್ ಮತ್ತು ಪವಿತ್ರಾಳ ಸಕ್ರಿಯ ಪಾತ್ರ ಬಿಚ್ಚಿಟ್ಟಿದ್ದಾರೆ.

Read Full Story

05:20 PM (IST) Aug 06

ನೈಟ್‌ಶಿಫ್ಟ್ ಕೆಲಸ ಮಾಡುವ ಮಹಿಳೆಯರೇ ಎಚ್ಚರ; ವೈದ್ಯರು ಏನು ಹೇಳಿದ್ದಾರೆ ನೋಡಿ!

ರಾತ್ರಿ ಶಿಫ್ಟ್‌ನಿಂದ ಸ್ತ್ರೀಯರ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ? ಗರ್ಭಧಾರಣೆಯಲ್ಲಿ ಸಮಸ್ಯೆ ಉಂಟಾಗುತ್ತದೆಯೇ? ಇಲ್ಲಿ ಸಂಪೂರ್ಣ ವಿವರಗಳನ್ನು ತಿಳಿಯಿರಿ.

Read Full Story

05:11 PM (IST) Aug 06

ಕೆ.ಆರ್.ಪುರಂ ಮೆಟ್ರೋ ನಿಲ್ದಾಣದಲ್ಲಿ ಬಾಂಬ್ - ಎಚ್‌ಎಎಲ್ ಉದ್ಯೋಗಿ ಎಡವಟ್ಟಿಗೆ ಪೊಲೀಸರು ಕಂಗಾಲು!

ಕೆ.ಆರ್.ಪುರಂ ಮೆಟ್ರೋ ನಿಲ್ದಾಣದಲ್ಲಿ ಮರೆತುಹೋದ ಟೂಲ್ ಕಿಟ್ ಬಾಕ್ಸ್ ಬಾಂಬ್ ಭೀತಿ ಸೃಷ್ಟಿಸಿತ್ತು. ಎಚ್.ಎ.ಎಲ್ ಉದ್ಯೋಗಿ ಮಂಜುನಾಥ್ ಜಾದವ್ ಅವರದ್ದಾಗಿದ್ದ ಬಾಕ್ಸ್ ಅನ್ನು ಬಾಂಬ್ ನಿಷ್ಕ್ರಿಯ ದಳ ಪರಿಶೀಲಿಸಿ ಸುರಕ್ಷಿತ ಎಂದು ಖಚಿತಪಡಿಸಿತು. ಪೊಲೀಸರು ಮಂಜುನಾಥ್‌ರಿಗೆ ಎಚ್ಚರಿಕೆ ನೀಡಿದರು.

Read Full Story

04:58 PM (IST) Aug 06

ನಾನು ಸಿಂಗಲ್‌ ಪೇರೆಂಟ್‌, ಮಗಳ ಪರೀಕ್ಷೆ ಇದೆ - ಜಾಮೀನು ರದ್ದು ಮಾಡ್ಬೇಡಿ ಎಂದು ಸುಪ್ರೀಂಗೆ ಪವಿತ್ರಾ ಗೌಡ ಮನವಿ!

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ಪವಿತ್ರಾ ಗೌಡ ತಮ್ಮ ಜಾಮೀನು ರದ್ದು ಮಾಡದಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿ, ಏಕೈಕ ಪೋಷಕಿ ಮತ್ತು ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವುದನ್ನು ಪ್ರಮುಖ ವಾದವಾಗಿ ಮುಂದಿಟ್ಟಿದ್ದಾರೆ.
Read Full Story

04:14 PM (IST) Aug 06

ಮಗನಿಗೆ ಕೆಲಸ ಕೊಡುವಂತೆ ಮೈಗೆ ಮಲ ಬಳಿದುಕೊಂಡು ವ್ಯಕ್ತಿಯ ವಿಚಿತ್ರ ಪ್ರತಿಭಟನೆ!

ಲಕ್ಷ್ಮೇಶ್ವರ ಪುರಸಭೆಯಲ್ಲಿ ಮಗನಿಗೆ ಕೆಲಸ ಕೊಡಿಸುವಂತೆ ವ್ಯಕ್ತಿಯೊಬ್ಬ ಮೈಗೆ ಮಲ ಬಳಿದುಕೊಂಡು ವಿಚಿತ್ರ ಪ್ರತಿಭಟನೆ ನಡೆಸಿದ್ದಾರೆ. 40 ವರ್ಷಗಳ ಕಾಲ ಪುರಸಭೆಯಲ್ಲಿ ಕಾರ್ಮಿಕನಾಗಿ ಸೇವೆ ಸಲ್ಲಿಸಿದ್ದ ಸುರೇಶ್ ಎಂಬುವವರು ಈ ಪ್ರತಿಭಟನೆ ನಡೆಸಿದ್ದು, ಪೊಲೀಸರು ಸಮಾಧಾನಪಡಿಸಿ ಕಳುಹಿಸಿದ್ದಾರೆ.
Read Full Story

01:36 PM (IST) Aug 06

ಬೆಂಗಳೂರಿನ ಇಬ್ಬರು ಬಿಜೆಪಿ ಮುಖಂಡರನ್ನು ಆಂಧ್ರದಲ್ಲಿ ಕೊಲೆಗೈದ ರೆಡ್ಡಿ ಗ್ಯಾಂಗ್ ಅರೆಸ್ಟ್!

ರಿಯಲ್ ಎಸ್ಟೇಟ್ ಉದ್ಯಮಿ ವೀರಸ್ವಾಮಿ ರೆಡ್ಡಿ ಮತ್ತು ಅವರ ಪುತ್ರ ಪ್ರಶಾಂತ್ ರೆಡ್ಡಿ ಹತ್ಯೆ ಪ್ರಕರಣದಲ್ಲಿ 6 ಜನರ ಬಂಧನ. 14 ಕೋಟಿ ರೂ. ಆಸ್ತಿ ವಿವಾದವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಮಾಜಿ ಉದ್ಯಮ ಪಾಲುದಾರನೇ ಹತ್ಯೆಗೆ ಸೂತ್ರಧಾರ.
Read Full Story

12:59 PM (IST) Aug 06

ಕೆಆರ್‌ಎಸ್‌ಗೆ ಟಿಪ್ಪುವೇ ಅಡಿಗಲ್ಲು - ಸಚಿವ ಮಹದೇವಪ್ಪ ಹೇಳಿಕೆ 'ನೂರಕ್ಕೆ ನೂರು ಸತ್ಯ' ಎಂದ ಎಂ. ಲಕ್ಷ್ಮಣ್

ಸಚಿವ ಮಹದೇವಪ್ಪ ಹೇಳಿಕೆ ಸಮರ್ಥಿಸಿಕೊಂಡ ಲಕ್ಷ್ಮಣ್, ಟಿಪ್ಪು 'ಮೋವಿ ಡ್ಯಾಂ' ನಿರ್ಮಿಸಿದ್ದರು ಎಂದು ಹೇಳಿದ್ದಾರೆ. ನಾಲ್ವಡಿಗಿಂತ ಸಿದ್ದರಾಮಯ್ಯ ಹೆಚ್ಚು ಕೆಲಸ ಮಾಡಿದ್ದಾರೆ ಎಂಬ ಯತೀಂದ್ರ ಹೇಳಿಕೆಯನ್ನೂ ಸಮರ್ಥಿಸಿದ್ದಾರೆ. ಪ್ರತಾಪ್ ಸಿಂಹ ಮೊಬೈಲ್ ತನಿಖೆಯಾದರೆ, ಪ್ರಜ್ವಲ್‌ನಂತೆ ಜೈಲು ಸೇರುತ್ತಾರೆ ಎಂದರು.

Read Full Story

12:17 PM (IST) Aug 06

ವಿಧಾನಮಂಡಲ ಅಧಿವೇಶನ ಸಿದ್ಧತೆಗೆ ಆ.12ಕ್ಕೆ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ

ವಿಧಾನಮಂಡಲ ಅಧಿವೇಶನ ಶುರುವಾಗುತ್ತಿರುವ ಪ್ರತಿಪಕ್ಷಗಳನ್ನು ಹೇಗೆ ಎದುರಿಸಬೇಕು ಎಂಬ ಕುರಿತು ಚರ್ಚಿಸಲು ಆ.12ರಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.

Read Full Story

12:11 PM (IST) Aug 06

ಅಂಜನಾದ್ರಿ ಪೂಜಾ ವಿವಾದ - ಆದೇಶ ಉಲ್ಲಂಘನೆ, ಕೊಪ್ಪಳ ಡಿಸಿಗೆ ಖುದ್ದು ಹಾಜರಾಗಲು ಸುಪ್ರೀಂ ಕೋರ್ಟ್ ತಾಕೀತು

ಅಂಜನಾದ್ರಿ ಬೆಟ್ಟದ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯದ ಹಿಂದಿನ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಆಗಸ್ಟ್ 11 ರಂದು ಆನ್‌ಲೈನ್ ಮೂಲಕ ಹಾಜರಾಗುವಂತೆ ಸೂಚಿಸಲಾಗಿದೆ. 

Read Full Story

11:16 AM (IST) Aug 06

ತಾತ ನೆಟ್ಟ ಕರದಂಟಿನ ಗಿಡವನು ಆಲದ ಮರವಾಗಿ ಬೆಳೆಸಿದ ಮೊಮ್ಮಗ - ವಿಜಯಾ ಕರದಂಟಿನ ಯಶೋಗಾಥೆ

ಡ್ರೈಫ್ರೂಟ್ಸ್ ಸಂಖ್ಯೆ ಹೆಚ್ಚಾದಂತೆ ಕರದಂಟು ತಯಾರಿಕೆಯಲ್ಲೂ ಬದಲಾವಣೆಗಳಾಗಿವೆ. ಇದಕ್ಕಿರುವ ಬೇಡಿಕೆ ನೋಡಿ ಇಡೀ ಅಮೀನಗಡದಲ್ಲಿ ಕರದಂಟು ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ.

Read Full Story

10:28 AM (IST) Aug 06

ಜಪಾನಿಗರ ಬದುಕು ಕಸಿದ ಹಿರೋಶಿಮಾ ದಾಳಿ - ಮನುಕುಲದ ಘೋರ ಕರಾಳ ಘಟನೆಗೆ 80 ವರ್ಷ

ಜಾಗತಿಕ ಭದ್ರತೆಗೆ ಬಹುದೊಡ್ಡ ಸವಾಲು. ಇಂಥ ಸನ್ನಿವೇಶದಲ್ಲಿ ಅಂದು ನಡೆದಿರುವ ಹಿರೋಶಿಮಾ ದುರ್ಘಟನೆ ವಿಶ್ವದ ಎಲ್ಲ ರಾಷ್ಟಗಳಿಗೂ ಎಚ್ಚರಿಕೆಯ ಗಂಟೆ.

Read Full Story

10:19 AM (IST) Aug 06

ಹೂ-ಹಣ್ಣು ದರ ಏರಿಕೆ ನಡುವೆ ವರಮಹಾಲಕ್ಷ್ಮೀಗೆ ಖರೀದಿ ಭರಾಟೆ

ವರಮಹಾಲಕ್ಷ್ಮಿ ಹಬ್ಬಕ್ಕೆ ನಗರದ ಮಾರುಕಟ್ಟೆ ಕಳೆಗಟ್ಟಿದ್ದು, ಹೂ-ಹಣ್ಣುಗಳ ದರ ವಿಪರೀತ ಏರಿಕೆ ನಡುವೆ ಖರೀದಿ ಭರಾಟೆ ಜೋರಾಗಿದೆ.

Read Full Story

10:02 AM (IST) Aug 06

ರಾಜ್ಯಾದ್ಯಂತ ಬಸ್‌ ಇಲ್ಲದೆ ಜನರ ಪರದಾಟ - ಫ್ರೀ ಬಸ್‌ ನಂಬಿ ಬಂದ ಮಹಿಳೆಯರಿಗೆ ಆಘಾತ

ಸಂಬಳ ಹೆಚ್ಚಳ, ಬಾಕಿ ವೇತನ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನಿಗಮದ ನೌಕರರು ಮಂಗಳವಾರ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾರಿಗೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

Read Full Story

09:43 AM (IST) Aug 06

ಮಠಾಧೀಶನಾಗಿದ್ದ ಮುಸ್ಲಿಂ ವ್ಯಕ್ತಿಯ ಸಲಿಂಗ ಕಾಮಪುರಾಣ - ನಿಜಲಿಂಗನ ನಿಜಸ್ವರೂಪ ಬಯಲು

ಚೌಡಹಳ್ಳಿ ಗುರುಮಲ್ಲೇಶ್ವರ ಶಾಖಾ ಮಠದ ಮಠಾಧೀಶ ನಿಜಲಿಂಗ ಸ್ವಾಮೀಜಿ ಅಲಿಯಾಸ್ ಮೊಹಮದ್ ನಿಸಾರ್ ಮುಸ್ಲಿಂ ವ್ಯಕ್ತಿಯಾಗಿದ್ದು, ಸಲಿಂಗಕಾಮಿ ಎಂಬುದು ಬೆಳಕಿಗೆ ಬಂದಿದೆ. ಮದ್ಯಪಾನ, ಮಾಂಸಾಹಾರ ಸೇವನೆ ಹಾಗೂ ಯುವಕನೊಂದಿಗೆ ಅಸಭ್ಯವಾಗಿ ವರ್ತಿಸುವ ವಿಡಿಯೋ ವೈರಲ್ ಆಗಿದೆ.
Read Full Story

09:03 AM (IST) Aug 06

ಮುಷ್ಕರದಿಂದ ಬಸ್ ನಿಂತ್ರೂ ಸರ್ಕಾರಕ್ಕೆ ಕೋಟಿ ಕೋಟಿ ಉಳಿತಾಯ; ಹೇಗೆ ಗೊತ್ತಾ?

ಸಾರಿಗೆ ನೌಕರರ ಮುಷ್ಕರದಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿ 'ಶಕ್ತಿ' ಯೋಜನೆಯಡಿ ಸರ್ಕಾರಕ್ಕೆ. ಉಳಿತಾಯವಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೇ.60ಕ್ಕೂ ಹೆಚ್ಚು ಬಸ್‌ಗಳ ಓಡಾಟ ಸ್ಥಗಿತಗೊಂಡಿತ್ತು.

Read Full Story

08:50 AM (IST) Aug 06

ನನ್ನ ಜತೆಗೆ ಶಾಸಕರಾದವರು ಸಿಎಂ, ಡಿಸಿಎಂ ಆದರೂ ನನಗೆ ಅದೃಷ್ಟವಿಲ್ಲ - ಬಸವರಾಜ ರಾಯರೆಡ್ಡಿ

ನನ್ನ ಜತೆಗೆ ಶಾಸಕರಾದವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಮಂತ್ರಿಗಳಾಗಿದ್ದಾರೆ. ಆದರೆ, ನನಗೆ ಅವಕಾಶ ಮತ್ತು ಅದೃಷ್ಟವಿಲ್ಲ ಎನ್ನುವ ಮೂಲಕ ಶಾಸಕ ಬಸವರಾಜ ರಾಯರೆಡ್ಡಿ ಮುಖ್ಯಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.

Read Full Story

07:18 AM (IST) Aug 06

ಸಾರಿಗೆ ಸಮಸ್ಯೆ ಈಡೇರಿಸಲು ಸರ್ಕಾರದಲ್ಲಿ ಹಣ ಇಲ್ಲ - ಬಿ.ವೈ.ವಿಜಯೇಂದ್ರ

ಹಲವು ತಿಂಗಳುಗಳಿಂದ ಸರ್ಕಾರದಲ್ಲಿ ಆರ್ಥಿಕ ಮುಗ್ಗಟ್ಟಿದೆ. ಹೀಗಾಗಿ ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳಿಗೆ ಸಾಧ್ಯವಾಗುತ್ತಿಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

Read Full Story

More Trending News