ಬೆಂಗಳೂರು: ಈ ಹಿಂದೆ ನೀಡಿದ ದಿನಾಂಕಗಳ ಪ್ರಕಾರ ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಬೇಕಿತ್ತು. ಆದ್ರೆ ತಾಂತ್ರಿಕ ಕಾರಣಗಳಿಂದ ಫಲಿತಾಂಶ ಏಪ್ರಿಲ್ 8 ಅಥವಾ ಏಪ್ರಿಲ್ 9ರ ನಂತರ ಪ್ರಕಟವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಏಪ್ರಿಲ್ 9ರಂದು ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ಕಾರಣದಿಂದಲೂ ಫಲಿತಾಂಶ ಪ್ರಕಟದ ದಿನಾಂಕ ಮುಂದೂಡಿಕೆಯಾಗಿರುವ ಬಗ್ಗೆ ಅನುಮಾನಗಳು ಮೂಡಿವೆ.
ಈ ಕುರಿತು ಶಿಕ್ಷಣ ಇಲಾಖೆಯಿಂದ ಅಧಿಕೃತ ಮಾಹಿತಿ ಹೊರಬಂದಿಲ್ಲ. ವಿದ್ಯಾರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
10:34 PM (IST) Apr 06
ಯುವತಿ ವಿಚಾರಕ್ಕೆ ಎರಡು ಮುಸ್ಲಿಂ ಕುಟುಂಬಗಳ ನಡುವೆ ಮಾರಾಮರಿ, ತುಮಕೂರು ರಸ್ತೆಯಲ್ಲಿ ಗಲಾಟೆ ನಡೆದಿದೆ. ಹಲವರ ಮೊಬೈಲ್‌ನಲ್ಲಿ ಗಲಾಟೆ ದೃಶ್ಯಗಳು ಸೆರೆಯಾಗಿದ್ದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
10:04 PM (IST) Apr 06
ಬೆಳಗಾವಿಯಲ್ಲಿ ದುರಂತ, ಟಿಪ್ಪರ್ ಡಿಕ್ಕಿಯಾಗಿ ತಂದೆ ಕಣ್ಣೆದುರೇ ನಾಲ್ಕು ವರ್ಷದ ಮಗು ಸಾವು, ತಂದೆ ಮಗ ಬೈಕ್‌ನಲ್ಲಿ ಹೋಗುವಾಗ ಈ ಅಪಘಾತ ಸಂಭವಿಸಿದೆ. ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.
09:47 PM (IST) Apr 06
ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಡಿ ಎನ್ನುವ ಸಿದ್ದರಾಮಯ್ಯ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಹಿಂದ ಸಮಾಜದ ವ್ಯಕ್ತಿಯೇ ನಿಂತಿದ್ದರೂ ಯಾಕಪ್ಪಾ ಸೋಲಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
09:38 PM (IST) Apr 06
ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನ ರಾಮಯ್ಯನಲ್ಲ. ಅವರೊಬ್ಬ ಡೋಂಗಿ ರಾಜಕಾರಣಿ, ಎಲ್ಲದಕ್ಕೂ ಕನ್ನ ಹಾಕುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
09:07 PM (IST) Apr 06
Food for hair growth: ಪ್ರೋಟೀನ್, ಕಬ್ಬಿಣ, ಒಮೆಗಾ-3 ಮತ್ತು ವಿಟಮಿನ್‌ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವು ಕೂದಲನ್ನು ಬಲಪಡಿಸುತ್ತದೆ, ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ನೆತ್ತಿಯ ಆರೋಗ್ಯವನ್ನು ಸುಧಾರಿಸುತ್ತದೆ. ಆರೋಗ್ಯಕರ, ಹೊಳೆಯುವ ಕೂದಲಿಗಾಗಿ ಸಹಾಯ ಮಾಡುವ 11 ಆಹಾರಗಳ ಪಟ್ಟಿ.
08:10 PM (IST) Apr 06
Paneer Consumption Guide: ಹಾಲಿನಿಂದ ತಯಾರಿಸುವ ಪನ್ನೀರ್ ಇಷ್ಟಪಡದವರು ತುಂಬಾ ಕಡಿಮೆ. ಮದುವೆ, ಪಾರ್ಟಿ ಅಥವಾ ಯಾವುದೇ ಶುಭ ಸಮಾರಂಭವಿರಲಿ, ಪನ್ನೀರ್ ಇರಲೇಬೇಕು. ಆದರೆ, ಈ ಪನ್ನೀರ್ ಎಲ್ಲರಿಗೂ ಒಳ್ಳೆಯದಲ್ಲ, ಕೆಲವರು ಇದನ್ನು ತಿನ್ನಲೇಬಾರದು. ಅದು ಯಾರೆಂದು ನಿಮಗೆ ಗೊತ್ತಾ?
07:55 PM (IST) Apr 06
ಉಪ ಕ್ಷೇತ್ರಗಳ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಲ್ಲಿ ಗೆಲ್ಲಲೇಬೇಕೆಂಬ ರಣೋತ್ಸಾಹ ನಮ್ಮೆಲ್ಲಾ ಕಾರ್ಯಕರ್ತರು, ಮುಖಂಡರಲ್ಲಿ ಕಂಡುಬರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
07:51 PM (IST) Apr 06
OTT Movie Release This Week: ಏಪ್ರಿಲ್ 6 ರಿಂದ 12ರ ವರೆಗೆ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ಹಲವು ಹೊಸ ಸಿನಿಮಾ ಹಾಗೂ ಸಿರೀಸ್‌ಗಳು ಬಿಡುಗಡೆಯಾಗಲಿವೆ. ಹಾಗಾದರೆ ಯಾವ ಸಿನಿಮಾಗಳು ರಿಲೀಸ್ ಆಗಲಿವೆ? ಅವುಗಳ ಸಂಪೂರ್ಣ ವಿವರ ಇಲ್ಲಿದೆ.
07:09 PM (IST) Apr 06
ರಂಗಭೂಮಿ ಹಿನ್ನೆಲೆಯ ನಟ ಪ್ರಮೋದ್ ಶೆಟ್ಟಿ ಅವರು, ಸೀರಿಯಲ್ ಒಂದರ ಶೂಟಿಂಗ್ ವೇಳೆ ನಿರ್ದೇಶಕರಿಂದ 'ನಟನೆ ಬರುವುದಿಲ್ಲ' ಎಂದು ನೂರಾರು ಮಹಿಳೆಯರ ಮುಂದೆ ಅವಮಾನಕ್ಕೊಳಗಾಗಿದ್ದರು. ಪ್ರೇಯಸಿ ಸುಪ್ರೀತಾಳಿಗಾಗಿ ಗಟ್ಟಿ ಮನಸ್ಸು ಮಾಡಿ, ಅದೇ ನಿರ್ದೇಶಕರಿಂದ ಶಹಬ್ಬಾಸ್ ಗಿರಿ ಪಡೆದ ಅನುಭವ ಹಂಚಿಕೊಂಡಿದ್ದಾರೆ.
06:34 PM (IST) Apr 06
2020ರ ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್ನಲ್ಲಿ ತಮ್ಮ ಹೆಸರು ಕೇಳಿಬಂದಾಗ ಅನುಭವಿಸಿದ ನರಕಯಾತನೆಯ ಬಗ್ಗೆ ಆ್ಯಂಕರ್ ಅನುಶ್ರೀ ಮಾತನಾಡಿದ್ದಾರೆ. ಪೊಲೀಸರು ಕೇವಲ ವಿಚಾರಣೆಗೆ ಕರೆದಿದ್ದರೂ, ಮಾಧ್ಯಮಗಳು ತಮ್ಮನ್ನು ತಪ್ಪಿತಸ್ಥೆಯಂತೆ ಬಿಂಬಿಸಿ 'ಮಾನಸಿಕ ಅ*ತ್ಯಾಚಾರ' ನಡೆಸಿದವು ಎಂದು ನೋವು ಹಂಚಿಕೊಂಡಿದ್ದಾರೆ.
06:16 PM (IST) Apr 06
ಬೆಂಗಳೂರಿನ ಪ್ರತಿಷ್ಠಿತ DRDO ಕಚೇರಿಗಳಿಗೆ ಸರಣಿ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಭದ್ರತಾ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಈ ಇಮೇಲ್‌ನಲ್ಲಿ ಸ್ಫೋಟಕಗಳನ್ನು ಇಟ್ಟಿರುವುದಾಗಿ ಹೇಳಿರುವುದಲ್ಲದೆ, ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಪುತ್ರನ ಅಪಹರಣದ ಎಚ್ಚರಿಕೆಯನ್ನೂ ನೀಡಲಾಗಿದೆ.
06:13 PM (IST) Apr 06
ಬೆಲ್ಲಂಕೊಂಡ ಶ್ರೀನಿವಾಸ್ ಮತ್ತು ಕಾವ್ಯಾ ರೆಡ್ಡಿ ಅವರ ನಿಶ್ಚಿತಾರ್ಥ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ಇವರ ಮದುವೆ ದಿನಾಂಕವೂ ನಿಗದಿಯಾಗಿದೆ. ಈ ಕುರಿತ ವಿವರ ಇಲ್ಲಿದೆ. ಟಾಲಿವುಡ್ ಯುವ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.
04:54 PM (IST) Apr 06
Vasundhara Das: ಬೆಂಗಳೂರಿನ ವಸುಂಧರಾ ದಾಸ್ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಒಂದು ಕಾಲದಲ್ಲಿ ವಸುಂಧರಾ ಅವರು ಬಾಲಿವುಡ್, ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಧ್ವನಿಯ ಮೂಲಕ ಸಂಚಲನ ಮೂಡಿಸಿದ್ದರು. ಕಮಲ್ ಹಾಸನ್ ಎದುರು ನಟಿಸಿ ಮಿಂಚಿದ್ದ ಇವರು ಹಠಾತ್ತನೆ ಚಿತ್ರರಂಗದಿಂದ ದೂರವಾದರು.
04:50 PM (IST) Apr 06
ಕರ್ನಾಟಕದ ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಎರಡು ಹೊಸ ಫುಡ್ ಪಾರ್ಕ್‌ಗಳು ಶೀಘ್ರದಲ್ಲೇ ಸ್ಥಾಪನೆಯಾಗಲಿವೆ. ನಬಾರ್ಡ್ ನೆರವಿನೊಂದಿಗೆ, ಈ ಪಾರ್ಕ್‌ಗಳು ಸ್ಥಳೀಯ ಕೃಷಿ ಉತ್ಪನ್ನಗಳಾದ ಹಣ್ಣು, ತರಕಾರಿ, ಮತ್ತು ಹಾಲು ಸಂಸ್ಕರಣೆಗೆ ಆದ್ಯತೆ ನೀಡಲಿವೆ.
04:42 PM (IST) Apr 06
04:29 PM (IST) Apr 06
ಬೆಂಗಳೂರಿನ ಒರಾಕಲ್ ಕಂಪನಿಯಿಂದ ಲೇ-ಆಫ್ ಆದ 14 ವರ್ಷಗಳ ಅನುಭವಿ ಉದ್ಯೋಗಿಯೊಬ್ಬರು, ಆತಂಕಪಡದೆ ತಮ್ಮ ಊರಿಗೆ ಮರಳಿದ್ದಾರೆ. ತಮ್ಮ ಉತ್ತಮ ಆರ್ಥಿಕ ಯೋಜನೆಯಿಂದಾಗಿ, ಅಂಚೆ ಕಚೇರಿ ಮತ್ತು ಬ್ಯಾಂಕ್ ಎಫ್‌ಡಿಗಳಿಂದ ತಿಂಗಳಿಗೆ ₹43,000 ನಿಷ್ಕ್ರಿಯ ಆದಾಯ ಗಳಿಸುತ್ತಿದ್ದು, ಸಾಲಮುಕ್ತರಾಗಿ ಹೊಸ ಜೀವನ ಆರಂಭಿಸಿದ್ದಾರೆ.
03:39 PM (IST) Apr 06
ಬೆಂಗಳೂರು ನಿವಾಸಿಗೆ ಶಾಕ್ ಕೊಟ್ಟ ಬಾಡಿಗೆ, 1BHK ಮನೆಗೆ ತಿಂಗಳಿಗೆ 32 ಸಾವಿರ ರೂ, ಬೆಂಗಳೂರಲ್ಲಿ ಮನೆ ಹುಡಕುವುದು ಸುಲಭದ ಮಾತಲ್ಲ, ಇಷ್ಟೇ ಅಲ್ಲ ಬಜೆಟ್‌ಗೆ ಹೊಂದಿಕೊಳ್ಳುವ ಮನೆಯೂ ಸಿಗುವುದಿಲ್ಲ.
03:19 PM (IST) Apr 06
03:04 PM (IST) Apr 06
ಗ್ವಾಲಿಯರ್ ಹೈಕೋರ್ಟ್‌ನಲ್ಲಿ, 19 ವರ್ಷದ ಯುವತಿಯೊಬ್ಬಳು ತನ್ನ 40 ವರ್ಷದ ಪತಿಯನ್ನು ತೊರೆದು ಪ್ರಿಯತಮನೊಂದಿಗೆ ಬದುಕುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾಳೆ. ವಯಸ್ಕರ 'ಜೀವನ ಸಂಗಾತಿಯ ಆಯ್ಕೆಯ ಹಕ್ಕನ್ನು' ಎತ್ತಿಹಿಡಿದ ನ್ಯಾಯಾಲಯವು, ಪತಿಯ ಅರ್ಜಿಯನ್ನು ವಜಾಗೊಳಿಸಿದೆ.
02:26 PM (IST) Apr 06
ನಟಿ ರಾಧಾ ಭಗವತಿ ಅವರ 'ನಾನು ಕರುಣಾಕರ' ಚಿತ್ರಕ್ಕೆ ಥಿಯೇಟರ್ಗಳ ಕೊರತೆ ಎದುರಾಗಿದೆ. ಈ ಬಗ್ಗೆ ಲೈವ್ನಲ್ಲಿ ಬೇಸರ ವ್ಯಕ್ತಪಡಿಸಿರುವ ಅವರು, ಪರಭಾಷಾ ಚಿತ್ರಗಳಿಂದ ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗವನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದ್ದಾರೆ
02:05 PM (IST) Apr 06
ಕರ್ನಾಟಕದಲ್ಲಿ ವಿದ್ಯುತ್ ಉಚಿತವಾಗಿದ್ದರೂ ಹಲವು ಬಾರಿ ಹೆಚ್ಚುವರಿ ಮೊತ್ತ ಬರುತ್ತದೆ. ಹೆಚ್ಚು ವಿದ್ಯುತ್ ಬಳಸುವ ಉಪಕರಣಗಳನ್ನು ಒಂದೇ ಸಮಯದಲ್ಲಿ ಉಪಯೋಗಿಸುವುದರಿಂದ ಬಿಲ್ ಹೆಚ್ಚಾಗುತ್ತದೆ. ಇವುಗಳನ್ನು ಬೇರೆ ಬೇರೆ ಸಮಯದಲ್ಲಿ ಬಳಸುವ ಮೂಲಕ ನಿಮ್ಮ ಮಾಸಿಕ ವಿದ್ಯುತ್ ಬಿಲ್ ಅನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಇದರ ಡಿಟೇಲ್ಸ್ ಇಲ್ಲಿದೆ.
12:30 PM (IST) Apr 06
Karnataka CM change news: ಸಿದ್ದರಾಮಯ್ಯನವರೇ ಪೂರ್ಣ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಈ ಬಗ್ಗೆ ಯಾವುದೇ ಗೊಂದಲ ಸೃಷ್ಟಿಸಿಲ್ಲ, ಸಿಎಂ ಬದಲಾವಣೆ ಚರ್ಚೆಗಳು ಕೇವಲ ವೈಯಕ್ತಿಕ ಅಭಿಪ್ರಾಯಗಳಷ್ಟೇ ಎಂದು ಅವರು ಹೇಳಿದ್ದಾರೆ.
11:41 AM (IST) Apr 06
Vijayanagara forest watchers death: ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಬೊಲೆರೋ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ರಾತ್ರಿ ಪಾಳಿಯಲ್ಲಿದ್ದ ಇಬ್ಬರು ಅರಣ್ಯ ಇಲಾಖೆ ವಾಚರ್‌ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಕೃಷ್ಣ ಮತ್ತು ಹನುಮಂತಪ್ಪ ಎಂದು ಗುರುತಿಸಲಾಗಿದೆ.
10:14 AM (IST) Apr 06
ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ಹಿಂದೆ ತನ್ನ ಸೈಕೋ ಗಂಡ ಜಯಂತ್‌ಗೆ ಹೆದರುತ್ತಿದ್ದ ಜಾನು ಈಗ ಸಂಪೂರ್ಣ ಬದಲಾಗಿದ್ದಾಳೆ. ತಾನು ಅನುಭವಿಸಿದ ಕಷ್ಟಗಳನ್ನೇ ಜಯಂತ್‌ಗೆ ನೀಡಿ, ಆತನಿಗೆ ನರಕ ದರ್ಶನ ಮಾಡಿಸುತ್ತಿದ್ದಾಳೆ. ಈ ಹೊಸ ತಿರುವು ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.
09:48 AM (IST) Apr 06
Kalaburagi teacher murder case: ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ಸರ್ಕಾರಿ ಶಾಲಾ ಶಿಕ್ಷಕಿ ಜ್ಯೋತಿ ಕಪಾಳೆ (57) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ನಂತರ ಪೆಟ್ರೋಲ್ ಸುರಿದು ಶವವನ್ನು ಸುಟ್ಟು ಹಾಕಿದ್ದಾರೆ.
09:20 AM (IST) Apr 06
Husband shooting training to kill wife: ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿ ಪತ್ನಿಯನ್ನು ಗುಂಡಿಕ್ಕಿ ಕೊಂದ ಪತಿ ಬಾಲಮುರುಗನ್, ಈ ಹತ್ಯೆಗಾಗಿಯೇ ವೈಟ್‌ಫೀಲ್ಡ್‌ನ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಎಂದು ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
09:02 AM (IST) Apr 06
ಸುಮಾರು 20 ವರ್ಷಗಳ ನಂತರ, ಕನಕಪುರದಿಂದ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಪುನರಾರಂಭಿಸಲಾಗಿದೆ. ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಿಗ್ಗೆ ಮತ್ತು ಸಂಜೆ ನಿರ್ದಿಷ್ಟ ಸಮಯಗಳಲ್ಲಿ ನಾಲ್ಕು ಬಸ್‌ಗಳ ಸೇವೆಯನ್ನು ಕಲ್ಪಿಸಲಾಗಿದೆ.
08:43 AM (IST) Apr 06
K-RIDE vs L&T tender dispute: ಸಬರ್ಬನ್ ಯೋಜನೆ ಅನುಷ್ಠಾನಗೊಳಿಸಲು ವಿಫಲವಾಗಿ ಟೆಂಡರ್ ನಿಯಮ ಉಲ್ಲಂಘಿಸಿದ ಎಲ್ ಆ್ಯಂಡ್ ಟಿ ಕಂಪನಿಯ ₹57 ಕೋಟಿಯನ್ನು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್) ಮುಟ್ಟುಗೋಲು ಹಾಕಿಕೊಂಡಿದೆ.
08:41 AM (IST) Apr 06
08:19 AM (IST) Apr 06
IOCL auto gas supply: ಜಾಗತಿಕ ವಿದ್ಯಮಾನಗಳು ಮತ್ತು ಖಾಸಗಿ ಬಂಕ್‌ಗಳ ಮುಚ್ಚುವಿಕೆಯಿಂದ ಬೆಂಗಳೂರಿನಲ್ಲಿ ಆಟೋ ಎಲ್‌ಪಿಜಿ ಕೊರತೆ ತೀವ್ರಗೊಂಡಿದೆ. ಪೂರೈಕೆ ಹೆಚ್ಚಿಸಿದ್ದರೂ ಬೇಡಿಕೆ ನೀಗಿಸಲು ಸಾಧ್ಯವಾಗದ ಕಾರಣ, ಐಒಸಿಎಲ್ ತಾತ್ಕಾಲಿಕವಾಗಿ ಪೆಟ್ರೋಲ್ ಬಳಸಲು ಚಾಲಕರಿಗೆ ಸಲಹೆ ನೀಡಿದೆ.
07:54 AM (IST) Apr 06
07:35 AM (IST) Apr 06
ಬಿಜೆಪಿ ಶಾಸಕ ಸುರೇಶ್ ಗೌಡರು ತಮ್ಮ ದೀರ್ಘಕಾಲದ ಆ್ಯಸಿಡಿಟಿ ಸಮಸ್ಯೆಗೆ ಆಸ್ಟ್ರೇಲಿಯಾದ ಔಷಧದಿಂದ ಪರಿಹಾರ ಕಂಡುಕೊಂಡಿದ್ದನ್ನು ವಿಧಾನಸಭೆಯಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ, ಇರಾನ್ ಯುದ್ಧದ ಸುಳ್ಳು ಸುದ್ದಿಯಿಂದಾಗಿ ಬೆಳಗಾವಿಯಲ್ಲಿ ಪೆಟ್ರೋಲ್-ಡೀಸೆಲ್‌ಗಾಗಿ ಜನರು ಮುಗಿಬಿದ್ದಿದ್ದು, ಪ್ಲಾಸ್ಟಿಕ್ ಬಾಟಲಿಗಳ ಮಾರಾಟ ಜೋರಾಗಿತ್ತು
07:04 AM (IST) Apr 06
Bengaluru businessman arrested: ಬೆಂಗಳೂರಿನಲ್ಲಿ ಮಹಿಳಾ ಕಸ್ಟಮ್ಸ್ ಅಧಿಕಾರಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ, ಸುಮಾರು ಏಳು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಉದ್ಯಮಿ ಕೃಪಲಾನಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.
06:48 AM (IST) Apr 06
ಬೆಳಗಾವಿಯಲ್ಲಿ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಯುವಕ, ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾ*ಚಾರ ಎಸಗಿದ್ದಾನೆ. ನಂತರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ 1500 ಗ್ರಾಂ ಚಿನ್ನ ಹಾಗೂ 19 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ.
06:24 AM (IST) Apr 06
ಮಧ್ಯಪ್ರಾಚ್ಯ ಯುದ್ಧದಿಂದ ಉಂಟಾದ ಅಡುಗೆ ಅನಿಲದ ಕೊರತೆಯ ನಡುವೆಯೂ, ಎಚ್.ಡಿ. ಕೋಟೆ ಮತ್ತು ಸರಗೂರು ತಾಲೂಕಿನ ಗ್ರಾಮಗಳು ಜೈವಿಕ ಅನಿಲ ಬಳಸಿ ಸ್ವಾವಲಂಬಿಯಾಗಿವೆ. ನೂರಾರು ಕುಟುಂಬಗಳು ಇಂಧನಕ್ಕಾಗಿ ಜೈವಿಕ ಅನಿಲವನ್ನು ಅವಲಂಬಿಸಿ, ಆರ್ಥಿಕ ಉಳಿತಾಯ ಮಾಡುತ್ತಿವೆ.
05:24 AM (IST) Apr 06
ಲೋಕಸಭಾ ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆಯು ದಕ್ಷಿಣದ ರಾಜ್ಯಗಳ ಧ್ವನಿಯನ್ನು ದುರ್ಬಲಗೊಳಿಸುವ ರಾಜಕೀಯ ತಂತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಜನಸಂಖ್ಯೆ ನಿಯಂತ್ರಿಸಿದ ರಾಜ್ಯಗಳಿಗೆ ಇದರಿಂದ ಅನ್ಯಾಯವಾಗಲಿದೆ.