LIVE NOW
Published : Mar 05, 2026, 06:42 AM ISTUpdated : Mar 06, 2026, 07:32 AM IST

Karnataka News Live: ಡಿ.ಕೆ.ಸುರೇಶ್ ಧ್ವನಿಯಲ್ಲಿ ಮಾತನಾಡಿದ ಆರೋಪ - ಬಂಗಾರಿ ಕೇಸ್‌ನಲ್ಲಿ ನಟ ಧರ್ಮಗೆ CID ಧ್ವನಿ ಪರೀಕ್ಷೆ

ಸಾರಾಂಶ

ಕೊಪ್ಪಳ: ಒಬ್ಬ ವಿದ್ಯಾರ್ಥಿನಿಯ ಪರೀಕ್ಷೆಗಾಗಿ ಹತ್ತು ಸಿಬ್ಬಂದಿ ಪರೀಕ್ಷಾ ಕೇಂದ್ರದಲ್ಲಿ ಸಿದ್ಧವಾಗಿದ್ದರು, ಆದರೆ ವಿದ್ಯಾರ್ಥಿನಿ ಪರೀಕ್ಷೆಗೆ ಬರಲೇ ಇಲ್ಲ. ಇದರಿಂದ ಸಿಬ್ಬಂದಿ ಸಮಯ ಮುಗಿಯುವವರೆಗೂ ಕಾದು ಪರೀಕ್ಷಾ ಕೇಂದ್ರ ಬಂದ್ ಮಾಡಿಕೊಂಡು, ವಾಪಸ್ಸಾದರು. ಹಿರೇಸಿಂದೋಗಿ ಮೊರಾರ್ಜಿ ವಸತಿ ಶಾಲೆಯ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಅಲಿಯಾ ಬುಧವಾರ ಉರ್ದು ವಿಷಯ ಪರೀಕ್ಷೆ ಬರೆಯಬೇಕಾಗಿತ್ತು.

ಓರ್ವ ವಿದ್ಯಾರ್ಥಿನಿಯ ಪರೀಕ್ಷೆ ಬರೆಯಲು ಹತ್ತು ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಪರೀಕ್ಷಾ ಸಮಯ ಹತ್ತು ಗಂಟೆಗೆ ಇದ್ದರೂ ವಿದ್ಯಾರ್ಥಿನಿ ಹತ್ತುವರೆಯಾದರೂ ಬರಲೇ ಇಲ್ಲ. ನಿಯಮಾನುಸಾರ ಅರ್ಧಗಂಟೆ ಮೀರಿದ ಮೇಲೆ ಪರೀಕ್ಷೆಗೆ ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಹತ್ತುವರೆ ಗಂಟೆಯವರೆಗೂ ಕಾಯ್ದು ಪರೀಕ್ಷಾ ಕೇಂದ್ರ ಬಂದ್ ಮಾಡಲಾಯಿತು.

 

07:32 AM (IST) Mar 06

ಡಿ.ಕೆ.ಸುರೇಶ್ ಧ್ವನಿಯಲ್ಲಿ ಮಾತನಾಡಿದ ಆರೋಪ - ಬಂಗಾರಿ ಕೇಸ್‌ನಲ್ಲಿ ನಟ ಧರ್ಮಗೆ CID ಧ್ವನಿ ಪರೀಕ್ಷೆ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ. ಕೆ.ಸುರೇಶ್ ಹೆಸರಿನಲ್ಲಿ ಬಹು ಕೋಟಿ ವಂಚನೆ ಪ್ರಕರಣ ಸಂಬಂಧ ನಟ ಧರ್ಮ ಅವರನ್ನು ರಾಜ್ಯ ಅಪರಾಧ ತನಿಖಾ ಇಲಾಖೆ ಸಿಐಡಿ ಧ್ವನಿ ಪರೀಕ್ಷೆಗೆ ಒಳಪಡಿಸಿದೆ.

Read Full Story

11:44 PM (IST) Mar 05

ಅಧಿವೇಶನದಲ್ಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿ - ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

ಬಜೆಟ್‌ ಅಧಿವೇಶನ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ನಡೆಸಿದರು. ಸರ್ಕಾರಕ್ಕೆ ಚಾಟಿ ಬೀಸುವಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮ ಶಾಸಕರಿಗೆ ಹೇಳಿದ್ದಾರೆ.

Read Full Story

10:41 PM (IST) Mar 05

ರಾಜ್ಯದಲ್ಲಿ 56 ಸಾವಿರ ಹುದ್ದೆಗಳ ಭರ್ತಿ ಐತಿಹಾಸಿಕ ನಿರ್ಧಾರ - ಸಚಿವ ಮಧು ಬಂಗಾರಪ್ಪ

ರಾಜ್ಯದಲ್ಲಿ 56 ಸಾವಿರ ಹುದ್ದೆಯನ್ನು ಭರ್ತಿ ಮಾಡುತ್ತಿರುವುದು ಐತಿಹಾಸಿಕ ನಿರ್ಧಾರ. ದೇಶದ ಯಾವ ರಾಜ್ಯದಲ್ಲೂ ಇಷ್ಟು ದೊಡ್ಡ ಪ್ರಮಾಣದ ನೇಮಕಾತಿ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

Read Full Story

09:56 PM (IST) Mar 05

ಕರ್ನಾಟಕದ 8 ಸರ್ಕಾರಿ ಭ್ರಷ್ಟ ಅಧಿಕಾರಿಗಳ 42 ಸ್ಥಳಗಳಲ್ಲಿ ಲೋಕಾಯುಕ್ತ ಶೋಧ, ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ!

ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ  8 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 42 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಶೋಧ ಕಾರ್ಯಾಚರಣೆಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ರಮ ಸ್ಥಿರ ಮತ್ತು ಚರ ಆಸ್ತಿಗಳು ಪತ್ತೆಯಾಗಿದೆ.

Read Full Story

09:16 PM (IST) Mar 05

ಮಸಾಲೆ ಪಡ್ಡುಗೆ ಒಂದು ವಸ್ತು ಸೇರಿಸಿದ್ರೆ ಆಗುತ್ತೆ ಸೂಪರ್ ಟೇಸ್ಟಿ; ಮಕ್ಕಳ ಜೊತೆ ಇಡೀ ಮನೆಯವರು ಖುಷ್!

ಸಾಮಾನ್ಯ ಪಡ್ಡು ಹಿಟ್ಟಿಗೆ ಒಂದು ವಸ್ತು ಸೇರಿಸುವುದರಿಂದ ಅದರ ರುಚಿ ಹೆಚ್ಚುತ್ತದೆ. ಹಾಗೆಯೇ ಈರುಳ್ಳಿಯನ್ನು ಹುರಿದು ಹಿಟ್ಟಿಗೆ ಸೇರಿಸಿದರೆ ಪಡ್ಡು ಹೊರಗಿನಿಂದ ಗರಿಗರಿಯಾಗಿ ಮತ್ತು ಒಳಗಿನಿಂದ ಮೃದುವಾಗಿ ಬರುತ್ತದೆ, ಇದು ಉತ್ತರ ಕರ್ನಾಟಕದ ವಿಶೇಷ ವಿಧಾನವಾಗಿದೆ.

Read Full Story

08:49 PM (IST) Mar 05

ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಡೀತಿದೆಯಾ ಕಿಡ್ನಿ ಮಾಫಿಯಾ? ಆಪರೇಷನ್ ವೇಳೆ ಗಂಡ ಸಾವು, ಕಿಡ್ನಿ ಕೊಟ್ಟ ಪತ್ನಿಗೆ ತಿಳಿದೇ ಇಲ್ಲ!

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿದೆ. ಗಂಡನಿಗೆ ಕಿಡ್ನಿ ದಾನ ಮಾಡಿದ ಪತ್ನಿಗೆ ಈ ದುರಂತದ ವಿಷಯ ಇನ್ನೂ ತಿಳಿದಿಲ್ಲ.

Read Full Story

07:59 PM (IST) Mar 05

Karnataka Budget 2026–27 - ಮೊತ್ತ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ 2026-27ನೇ ಸಾಲಿನ ರಾಜ್ಯ ಬಜೆಟ್ ಅನ್ನು ಇದೇ ಮೊದಲ ಬಾರಿಗೆ ರಾಜ್ಯದ ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಾರ್ಚ್ 6 ರಿಂದ 230 ಬಸ್ ನಿಲ್ದಾಣಗಳಲ್ಲಿನ ಎಲ್‌ಇಡಿ ಪರದೆಗಳ ವ್ಯವಸ್ಥೆ ಮಾಡಿದೆ.

Read Full Story

07:42 PM (IST) Mar 05

ಸದ್ದಿಲ್ಲದೇ ಮದ್ವೆ ಮಾಡಿಕೊಂಡ Shrirasthu Shubhamasthu ಸಮರ್ಥ್​? ನಟ ದರ್ಶಿತ್​ ಗೌಡ ಫೋಟೋ ಇಲ್ಲಿವೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಸಮರ್ಥ್ ಪಾತ್ರಧಾರಿ ನಟ ದರ್ಶಿತ್ ಗೌಡ ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ, ಇದು ನಿಜವಾದ ಮದುವೆಯೇ ಅಥವಾ ಕೇವಲ ಶೂಟಿಂಗಿನ ಭಾಗವೇ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. 

Read Full Story

07:36 PM (IST) Mar 05

ಕೊಲ್ಲಿ ಸಂಘರ್ಷ - ಡ್ರೈಫ್ರೂಟ್ಸ್ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ, ಯುದ್ಧ ಮುಂದುವರೆದರೆ ಆಮದು ಸ್ಥಗಿತ ಆತಂಕ!

 ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಭಾರತದಲ್ಲಿ ಡ್ರೈಫ್ರೂಟ್ಸ್ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದೆ.  ರಂಜಾನ್   ಹಿನ್ನೆಲೆಯಲ್ಲಿ ಸಾಕಷ್ಟು ದಾಸ್ತಾನು ಇರುವುದರಿಂದ ದರ ಸ್ಥಿರವಾಗಿದ್ದರೂ, ಯುದ್ಧ ಮುಂದುವರಿದರೆ ಮುಂದಿನ ದಿನಗಳಲ್ಲಿ ಆಮದು ಸ್ಥಗಿತಗೊಂಡು ಬೆಲೆಗಳು ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ.

Read Full Story

07:18 PM (IST) Mar 05

ಬಿಜೆಪಿ ಅನುದಾನವನ್ನು ತಾನು ನೀಡಿದ್ದು ಎಂದು ದಾರಿತಪ್ಪಿಸುವ ಕಾಂಗ್ರೆಸ್‌ - ವೇದವ್ಯಾಸ್‌ ಕಾಮತ್‌ ಆರೋಪ

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜಾ ಅವರು ಅಭಿವೃದ್ಧಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಆರೋಪಿಸಿದ್ದಾರೆ.

Read Full Story

07:05 PM (IST) Mar 05

ಹೇಮಾವತಿ ಲಿಂಕ್ ಕೆನಾಲ್ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ - ಡಿ.ಕೆ.ಶಿವಕುಮಾರ್

ನಮ್ಮ ಜಿಲ್ಲೆಯ ಕೆಲಸಗಳು ಬಜೆಟ್ ಮೇಲೆ ನಿಂತಿಲ್ಲ. ಬೇರೆಯವರಿಗೆ ಬಜೆಟ್ ಬೇಕಾಗಿರಬಹುದು, ನಮಗೆ ಬೇಡ. ಪೆನ್ನು ಪೇಪರ್ ನನ್ನ ಹತ್ತಿರವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

Read Full Story

06:54 PM (IST) Mar 05

ಸಿಎಂ, ಶಾಸಕರ ಸಂಬಳ ಹೆಚ್ಚಳ, ಸರ್ಕಾರಿ ನೌಕರರ ಸಂಬಳ ಹೆಚ್ಚಳ, ಆದ್ರೆ ಗುತ್ತಿಗೆ ನೌಕರರಿಗೆ ಕನಿಷ್ಠ ವೇತನಕ್ಕೆ ಯಾಕೆ ವಿಳಂಬ?

2022ರಲ್ಲಿ ಪರಿಷ್ಕರಿಸಬೇಕಿದ್ದ ಕನಿಷ್ಠ ವೇತನವನ್ನು ರಾಜ್ಯ ಸರ್ಕಾರ ಇನ್ನೂ ಜಾರಿಗೆ ತರದ ಕಾರಣ ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕನಿಷ್ಠ ವೇತನ ಸಲಹಾ ಮಂಡಳಿಯ ಶಿಫಾರಸಿನಂತೆ ವೇತನವನ್ನು ತಕ್ಷಣ ಪರಿಷ್ಕರಿಸಬೇಕು ಮತ್ತು ಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.

Read Full Story

06:32 PM (IST) Mar 05

Viral Video - ಮಾವ ರೇವಣ್ಣ ವಿರುದ್ಧವೇ ತೊಡೆ ತಟ್ಟಿ ರೌಡಿ ಅವತಾರ ತೋರಿದ ನಟಿ ಕಾವ್ಯಾ ಗೌಡ!

ನಟಿ ಕಾವ್ಯಾ ಗೌಡರ ಕೌಟುಂಬಿಕ ಆಸ್ತಿ ಕಲಹವು ಇದೀಗ ಬೀದಿ ರಂಪಾಟವಾಗಿ ಮಾರ್ಪಟ್ಟಿದೆ. ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದ ಕಾವ್ಯಾ, ಇದೀಗ ತಾವೇ ಮಾವನಿಗೆ ತೊಡೆ ತಟ್ಟಿ ದರ್ಪ ತೋರಿದ ವಿಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. 

Read Full Story

06:30 PM (IST) Mar 05

ಮಲ್ಲತ್ತಹಳ್ಳಿಯಲ್ಲಿ ನಿರ್ಮಾಣವಾದ ಪಬ್‌ ಕಟ್ಟಡ ಸಂಬಂಧ ಭಾರೀ ಭ್ರಷ್ಟಾಚಾರ ಹಗರಣ, 5 ಇಲಾಖೆ ಅಧಿಕಾರಿಗಳ ವಿರುದ್ಧ ಆರೋಪ

ಬೆಂಗಳೂರಿನ ಬೃಹತ್ ಬಾರ್ ಮತ್ತು ರೆಸ್ಟೋರೆಂಟ್ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಿಸಿದ್ದಾರೆ. ನಕ್ಷೆ ಮಂಜೂರಾತಿಯಿಂದ ಹಿಡಿದು ಮದ್ಯ ಪರವಾನಗಿ ನೀಡುವವರೆಗೆ ಹಲವು ಇಲಾಖೆಗಳ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದಾರೆ.

Read Full Story

06:30 PM (IST) Mar 05

ನಾವು ಸುಳ್ಳು ಹೇಳಿ ಕೆಲಸ ಮಾಡುವವರಲ್ಲ‌‌, ಅತ್ತು ನಾಟಕ ಮಾಡಲ್ಲ - ಡಿ.ಕೆ.ಸುರೇಶ್ ವಾಗ್ದಾಳಿ

ನಾವು ಸುಳ್ಳು ಹೇಳಿ ಕೆಲಸ ಮಾಡುವವರಲ್ಲ‌‌, ನಿಮ್ಮ ಬಳಿ ಅತ್ತು ಕರೆದು ನಾಟಕ ಮಾಡುವವರಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

Read Full Story

06:15 PM (IST) Mar 05

ಖಮೇನಿ ಸಾವನ್ನಪ್ಪಿ 5 ದಿನದ ನಂತರ ಕಡೆಗೂ ಸಂತಾಪ ಸೂಚಿಸಿದ ಭಾರತ ಸರ್ಕಾರ

ಇಸ್ರೇಲ್-ಅಮೆರಿಕಾ ದಾಳಿಯಲ್ಲಿ ಹತರಾದ ಇರಾನ್ ನಾಯಕ ಅಯತೊಲ್ಲಾ ಖಮೇನಿ ಸಾವಿಗೆ ಭಾರತ ಸರ್ಕಾರವು 5 ದಿನಗಳ ನಂತರ ಸಂತಾಪ ಸೂಚಿಸಿದೆ. ಭಾರತ ಸರ್ಕಾರ ಸಂತಾಪ ಸೂಚಿಸದ ಬಗ್ಗೆ  ವಿರೋಧ ಪಕ್ಷಗಳು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದವು.

Read Full Story

06:02 PM (IST) Mar 05

Celebrities Home - ದುಬೈನಲ್ಲಿ ಸ್ವಂತ ಮನೆ ಹೊಂದಿರುವ 8 ಭಾರತೀಯ ಸೆಲೆಬ್ರಿಟಿಗಳಿವರು!

Celebrities Home: ಸಲ್ಮಾನ್ ಖಾನ್‌ನಿಂದ ಶಾರುಖ್ ಖಾನ್‌ವರೆಗೆ, ದುಬೈನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ದುಬೈನ ಐಷಾರಾಮಿ ಜೀವನಶೈಲಿ, ತೆರಿಗೆ ವಿನಾಯಿತಿಗಳು ಭಾರತದ ಸ್ಟಾರ್‌ಗಳನ್ನು ಆಕರ್ಷಿಸುತ್ತಿವೆ. ಬೀಚ್‌ಫ್ರಂಟ್ ವಿಲ್ಲಾಗಳಿಂದ ಹಿಡಿದು ಗಗನಚುಂಬಿ ಅಪಾರ್ಟ್‌ಮೆಂಟ್‌ ಹೊಂದಿದ್ದಾರೆ. 

Read Full Story

05:39 PM (IST) Mar 05

ಮೀಸಲಾತಿ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್‌ ಕುಮ್ಮಕ್ಕು - ಸಂಸದ ಕಾರಜೋಳ ಆರೋಪ

ಮೀಸಲಾತಿ ಪ್ರಮಾಣ ಶೇ.50ಕ್ಕೆ ಏರಿಕೆಯಾಗುತ್ತಿದೆ ಎಂದು ಪ್ರಶ್ನಿಸಿ ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ವ್ಯಕ್ತಿಗಳು ಕಾನೂನಾತ್ಮಕ ಹೋರಾಟ ನಡೆಸಲು ಕಾಂಗ್ರೆಸ್ ಸರ್ಕಾರವೇ ಕುಮ್ಮಕ್ಕು ನೀಡಿದೆ.

Read Full Story

05:34 PM (IST) Mar 05

ಇದು ಅಪ್ಪು ಹೇಳಿಕೊಟ್ಟ very very special ಚಿತ್ರಾನ್ನ - ಆದ್ರೆ ಕ್ಲೈಮ್ಯಾಕ್ಸ್​ ಮಾತ್ರ ಸಕತ್​ ಇಂಟರೆಸ್ಟಿಂಗ್​!

ನಟ ಪುನೀತ್ ರಾಜ್‌ಕುಮಾರ್ ಅವರು ಸೃಜನ್ ಲೋಕೇಶ್ ಅವರೊಂದಿಗಿನ ಸಂದರ್ಶನದಲ್ಲಿ ಚಿತ್ರಾನ್ನ ಮಾಡುವ ವಿಧಾನವನ್ನು ತಮಾಷೆಯಾಗಿ ವಿವರಿಸಿದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಪ್ಪು, ಅಡುಗೆಗೆ ಬೇಕಾದ ಪ್ರಮುಖ ಸಾಮಗ್ರಿ ಮರೆತು ಹೇಳಿದ್ದು,  ತಮಾಷೆಯ ಕ್ಷಣವನ್ನು ನೆನಪಿಸುತ್ತದೆ.

Read Full Story

05:33 PM (IST) Mar 05

ಅಯ್ಯೋ ಹಲ್ಲಿ ಅಂತ ನೀವು ಓಡಿ ಹೋಗುವ ಬದಲು ಹಲ್ಲಿಗಳನ್ನೇ ಓಡಿಸಿ - ಇಲ್ಲಿದೆ ಪರಿಣಾಮಕಾರಿ ಮನೆ ಮದ್ದು

ಮನೆಯಲ್ಲಿ ಹಲ್ಲಿಗಳ ಕಾಟದಿಂದ ಬೇಸತ್ತಿದ್ದರೆ, ರಾಸಾಯನಿಕಗಳ ಬದಲು ಕರ್ಪೂರ ಮತ್ತು ಆಂಟಿಸೆಪ್ಟಿಕ್ ದ್ರಾವಣ ಬಳಸಿ ಸುಲಭವಾಗಿ ಹಲ್ಲಿ ನಿವಾರಕ ದ್ರಾವಣವನ್ನು ತಯಾರಿಸಬಹುದು. ಈ ಸುರಕ್ಷಿತ ಮತ್ತು ಪರಿಣಾಮಕಾರಿ ಮನೆಮದ್ದು ಹಲ್ಲಿಗಳನ್ನು ಮನೆಯಿಂದ ದೂರವಿಡಲು ಸಹಾಯ ಮಾಡುತ್ತದೆ.
Read Full Story

05:30 PM (IST) Mar 05

ಕೇಂದ್ರ ಸರ್ಕಾರದಿಂದ ವಾಹನ ಮಾಲೀಕರಿಗೆ ಗುಡ್‌ನ್ಯೂಸ್, ವಾಹನ ಸಾಲ ತೀರಿದ ಕೂಡಲೇ ಹೈಪೊಥಿಕೇಷನ್ ಸ್ವಯಂ ರದ್ದು

 ವಾಹನ ಸಾಲವನ್ನು ಸಂಪೂರ್ಣವಾಗಿ ತೀರಿಸಿದ ನಂತರ ಆರ್‌ಸಿ ಬ್ಯಾಂಕ್‌ನ ಹೆಸರನ್ನು ಸ್ವಯಂಚಾಲಿತವಾಗಿ ತೆಗೆದುಹಾಕುವ ಹೊಸ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.  ಇದರಿಂದಾಗಿ, ವಾಹನ ಮಾಲೀಕರು ಇನ್ನು ಮುಂದೆ ಹೈಪೊಥಿಕೇಷನ್ ರದ್ದುಗೊಳಿಸಲು ಬ್ಯಾಂಕ್ ಮತ್ತು ಆರ್‌ಟಿಒ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ.

Read Full Story

04:55 PM (IST) Mar 05

ಬೆಂಗಳೂರಿನ ಈ ಅಪಾರ್ಟ್‌ಮೆಂಟ್‌ನಲ್ಲಿ ರಾತ್ರಿ ಓಡಾಡೋಕೆ ಜೀವಭಯ! ಸಿಸಿಟಿವಿ ದೃಶ್ಯ ಕಂಡರೆ ಕರುಳು ಹಿಂಡಿ ಬರುತ್ತೆ!

ಬೆಂಗಳೂರಿನ ಚೂಡಸಂದ್ರದ 'ಅಹದ್ ಸೆರೆನಿಟಿ' ಅಪಾರ್ಟ್‌ಮೆಂಟ್ ನಿವಾಸಿಗಳು ಬೀದಿ ನಾಯಿಗಳ ಹಾವಳಿಯಿಂದ ತತ್ತರಿಸಿದ್ದಾರೆ. ಕೈಯಲ್ಲಿ ಲಾಠಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣ, ಮಕ್ಕಳು ಮತ್ತು ನಿವಾಸಿಗಳ ಮೇಲೆ ನಾಯಿಗಳು ದಾಳಿ ಮಾಡುತ್ತಿವೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ  ಪ್ರಯೋಜನವಾಗಿಲ್ಲ.

Read Full Story

04:53 PM (IST) Mar 05

ಕಂದಾಯ ಇಲಾಖೆಗೆ 750 ಸರ್ವೆಯರ್ ನೇಮಕಾತಿ ಶೀಘ್ರ - ಸಚಿವ ಕೃಷ್ಣ ಬೈರೇಗೌಡ

ಕಂದಾಯ ಇಲಾಖೆಯಲ್ಲಿ 1219 ಲೈಸೆನ್ಸ್ ಸರ್ವೇಯರ್ ಇದ್ದಾರೆ. ಈಗಾಗಲೇ 1000 ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, 750 ಸರ್ವೇಯರ್ ನೇಮಕಾತಿ ಶೀಘ್ರವಾಗಿ ಮಾಡಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Read Full Story

04:43 PM (IST) Mar 05

ಮದ್ವೆಯಾದ್ಮೇಲೆ ಏನಾದ್ರೂ ಅನ್ನಿಸ್ತಿದ್ಯಾ ಕೇಳಿದ್ರೆ ರಾಧಿಕಾ ಪಂಡಿತ್​ ಓಪನ್ನಾಗಿ ಹೀಗೆ ಹೇಳೋದಾ? Yash ಶಾಕ್​!

ಸ್ಯಾಂಡಲ್​ವುಡ್​ನ ಕ್ಯೂಟ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ 9 ವರ್ಷಗಳ ದಾಂಪತ್ಯವನ್ನು ಪೂರೈಸಿದ್ದಾರೆ. ಮದುವೆಯ ನಂತರದ ಜೀವನದ ಬಗ್ಗೆ ಕೇಳಿದ ಪ್ರಶ್ನೆಗೆ ರಾಧಿಕಾ ನೀಡಿದ ಉತ್ತರಕ್ಕೆ ಯಶ್ ಅವರೇ ಒಂದು ಕ್ಷಣ ಅವಾಕ್ಕಾಗಿದ್ದಾರೆ.

 

Read Full Story

04:35 PM (IST) Mar 05

ಯಡೂರಿನಲ್ಲಿ ಡಿಕೆಶಿ ಧರ್ಮ-ರಾಜಕಾರಣದ ಮಾತು, ಈ ದೇಶದ ಆಧ್ಯಾತ್ಮಿಕ ಮೂಲವೇ ಶಿವ, ನಂಬಿಕೆಯ ಸಂಕೇತವೇ ಶಿವ

ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ವೀರಭದ್ರೇಶ್ವರ ದೇವಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಧರ್ಮ, ದೇವರು ಮತ್ತು ಗುರುವಿನ ಮಹತ್ವವನ್ನು ಒತ್ತಿ ಹೇಳಿದರು. ರಾಜಕಾರಣದಲ್ಲಿ ಧರ್ಮವಿರಬೇಕು ಆದರೆ ಧರ್ಮದಲ್ಲಿ ರಾಜಕಾರಣವಿರಬಾರದು ಎಂದು ಪ್ರತಿಪಾದಿಸಿದರು.

Read Full Story

04:18 PM (IST) Mar 05

'ನಿಮ್ಮ ಚಿನ್ನುಗೆ ನೀವೇ ಶಾ* ಹಾಕ್ಬಿಡಿ..' ಪ್ರಾಣಿಕಾಮ ಪ್ರಚೋದನೆ ಆರೋಪದಲ್ಲಿ ಬಿಗ್‌ಬಾಸ್‌ ಡಾಗ್‌ ಸತೀಶ್‌ ವಿರುದ್ಧ ಎಫ್‌ಐಆರ್‌!

ಬಿಗ್‌ಬಾಸ್ ಸ್ಪರ್ಧಿ 'ಡಾಗ್ ಸತೀಶ್' ಮತ್ತು ಕಂಟೆಂಟ್ ಕ್ರಿಯೇಟರ್ 'ಟಾಟ್ ಸುಭಾಷ್' ವಿರುದ್ಧ ಪ್ರಾಣಿ ಕಾಮ ಮತ್ತು ಪ್ರಾಣಿ ಹಿಂಸೆಯನ್ನು ಪ್ರೋತ್ಸಾಹಿಸುವ ಅಶ್ಲೀಲ ವಿಡಿಯೋ ಹರಿಬಿಟ್ಟ ಆರೋಪದ ಮೇಲೆ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ. 

Read Full Story

04:18 PM (IST) Mar 05

ನಮ್ಮ ದೇಶ ಅಣುಬಾಂಬ್ ಬಲದ ಮೇಲೆ ನಿಂತಿಲ್ಲ, ಸುತ್ತೂರು ಶ್ರೀಗಳು ಹೇಳಿದ ಭಾರತೀಯರ ದೊಡ್ಡ ಶಕ್ತಿ ಯಾವುದು?

ಗುಂಡ್ಲುಪೇಟೆಯ ಸೋಮಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಜಾಗತಿಕ ಯುದ್ಧದ ಭೀತಿಯ ನಡುವೆ ಶಾಂತಿಯ ಮಹತ್ವ ಸಾರಿದ್ದಾರೆ. ಕೋಪ, ದ್ವೇಷದಿಂದ ಶಾಂತಿ ಅಸಾಧ್ಯ, ಆಧ್ಯಾತ್ಮಿಕ ಮಾರ್ಗ ಆತ್ಮಸ್ಥೈರ್ಯವೇ ನಿಜವಾದ ಶಕ್ತಿ ಎಂದರು.

Read Full Story

04:18 PM (IST) Mar 05

Karna ಸೀರಿಯಲ್​ಗೆ ಎರಡೆರಡು ಬಾರಿ ಅದೃಷ್ಟ ತಂದ TRP King ಕಿರಣ್​ ರಾಜ್​ ರೋಚಕ ಸ್ಟೋರಿ

'ಕರ್ಣ' ಧಾರಾವಾಹಿಯ ಮೂಲಕ 'ಟಿಆರ್‌ಪಿ ಕಿಂಗ್' ಎನಿಸಿಕೊಂಡಿರುವ ನಟ ಕಿರಣ್ ರಾಜ್ ಅವರ ಬಗ್ಗೆ ಈ ಲೇಖನ ವಿವರಿಸುತ್ತದೆ. ಅವರ ಯಶಸ್ವಿ ನಟನಾ ಪಯಣ, 'ಕರ್ಣ 2.0' ನಲ್ಲಿನ ಅಭಿನಯ ಮತ್ತು ನಿಜ ಜೀವನದಲ್ಲಿ ಅವರು ಮಾಡುತ್ತಿರುವ ಸಮಾಜ ಸೇವೆಯ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
Read Full Story

04:11 PM (IST) Mar 05

ರಶ್ಮಿಕಾ ಪರ ನಿಂತ 'Gen Z' ಪಾರ್ಟಿ.. 'ರಶ್ಮಿಕಾ ಈಸ್ ಗ್ರೇಟ್.. ಕರ್ನಾಟಕ ಕ್ರಶ್ ಟು 'ನ್ಯಾಷನಲ್ ಕ್ರಶ್' ಅಗಿದ್ದು ಸಣ್ಣ ಸಾಧನೆಯಲ್ಲ!

ಒಬ್ಬ ನಟಿ ತನ್ನ ಶ್ರಮದಿಂದ ಭಾರತದ ನಂಬರ್ ಒನ್ ನಟಿಯಾಗಿ ಬೆಳೆದಾಗ ಆಕೆಯನ್ನು ಪ್ರೋತ್ಸಾಹಿಸಬೇಕೇ ಹೊರತು, ಹಳೆಯ ವಿಚಾರಗಳನ್ನು ಕೆದಕಿ ಕೀಳು ಅಭಿರುಚಿಯ ಕಾಮೆಂಟ್ ಹಾಕುವುದು ಸರಿಯಲ್ಲ. ಇಡೀ ಭಾರತವೇ ಹೆಮ್ಮೆ ಪಡುವಂತೆ ಬೆಳೆದಿರುವ ಈ ಕನ್ನಡತಿ ಬಗ್ಗೆ ಜೆನ್ ಜಿ ಹೀಗ್ ಹೇಳಿದೆ ನೋಡಿ..

Read Full Story

04:06 PM (IST) Mar 05

Rani Serial - ಜೈಲಲ್ಲಿರೋ ತಾಯಿಗೋಸ್ಕರ ಗೋಗರೆದ ಪುಟಾಣಿ ಮಗಳು; ಕಂಬನಿ ಹಾಕಿದ ಕನ್ನಡಿಗರು!

Rani Kannada Serial Episode: ಅಮ್ಮ-ಮಗಳ ನಿಷ್ಕಲ್ಮಶ ಪ್ರೀತಿಯ ಮಹಾಕಾವ್ಯ ‘ರಾಣಿ’! ಇದೇ ಮಾರ್ಚ್ 9 ರಿಂದ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಆರಂಭಿಸಲಿದ್ದು, ವೀಕ್ಷಕರಿಗೆ ಹೊಸದೊಂದು ಭಾವಲೋಕವನ್ನು ಪರಿಚಯಿಸಲಿದೆ.

Read Full Story

03:50 PM (IST) Mar 05

Krishna Rukku Serial - ಪ್ರೀತಿ, ದ್ವೇಷ, ವಿಧಿಯಾಟದ ನಡುವೆ ಒಂದಾದ ಕೃಷ್ಣ- ರುಕ್ಕು ಜೋಡಿ!

Krishna Rukku Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರೀತಿ, ಪ್ರತೀಕಾರ ಮತ್ತು ವಿಧಿಯಾಟದ ಸುತ್ತ ನಡೆಯುವ ಹೊಚ್ಚಹೊಸ ಧಾರಾವಾಹಿ 'ಕೃಷ್ಣ ರುಕ್ಕು' ಇದೇ ಮಾರ್ಚ್ 9 ರಿಂದ 6:30 ಕ್ಕೆ ಪ್ರಸಾರ ಆಗಲಿದೆ.

 

Read Full Story

03:42 PM (IST) Mar 05

Shiman Mandanna - ರಶ್ಮಿಕಾ ಮಂದಣ್ಣ ದೇಶಕ್ಕೇ ಗೊತ್ತು ಈ ಶಿಮಾನ್ ಮಂದಣ್ಣ ಯಾರು ಗೊತ್ತಾ?

ರಶ್ಮಿಕಾ ಮಂದಣ್ಣ ಅವರಿಗಿಂತ 16 ವರ್ಷ ಚಿಕ್ಕವರಾದ ಶಿಮಾನ್ ಮಂದಣ್ಣ, ಇತ್ತೀಚೆಗೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಸ್ಟೈಲ್, ಚಾರ್ಮ್ ಮತ್ತು ಆಕರ್ಷಕ ವ್ಯಕ್ತಿತ್ವದ ಬಗ್ಗೆ ಇಲ್ಲಿದೆ ಮಾಹಿತಿ.
Read Full Story

03:24 PM (IST) Mar 05

ಮೂರನೇ ದಿನವೂ ಭಟ್ಕಳ ಬಂಕ್‌ಗಳಲ್ಲಿ ಮಧ್ಯರಾತ್ರಿವರೆಗೆ ಪೆಟ್ರೋಲ್-ಡೀಸೆಲ್‌ಗಾಗಿ ಕ್ಯೂ! ಖಾಲಿಯಾದ ಇಂಧನ ಬಂಕ್ ಕ್ಲೋಸ್!

ಮಧ್ಯಪ್ರಾಚ್ಯದ ಉದ್ವಿಗ್ನತೆಯಿಂದ ಇಂಧನ ಕೊರತೆ ಅಥವಾ ದರ ಏರಿಕೆಯಾಗಲಿದೆ ಎಂಬ ಸಾಮಾಜಿಕ ಜಾಲತಾಣದ ವದಂತಿಯಿಂದಾಗಿ ಉತ್ತರ ಕನ್ನಡದ ಭಟ್ಕಳ ಮತ್ತು ದಾಂಡೇಲಿಯಲ್ಲಿ ಜನರು ಆತಂಕಗೊಂಡು ಪೆಟ್ರೋಲ್ ಬಂಕ್‌ಗಳಿಗೆ ಮುಗಿಬಿದ್ದಿದ್ದಾರೆ.  

Read Full Story

02:50 PM (IST) Mar 05

ಗಂಡಭೇರುಂಡ ವಿನ್ಯಾಸದ ನಕ್ಲೇಸ್‌, ಮೈಸೂರು ಸಿಲ್ಕ್‌ ಸೀರೆಯಲ್ಲಿ ಕೊಡವರ ಪಿಚಕತ್ತಿ - ರಿಸೆಪ್ಷನ್‌ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ!

ರಿಸೆಪ್ಷನ್‌ಗಾಗಿ ರಶ್ಮಿಕಾ ಮಂದಣ್ಣ, ಮೈಸೂರಿನ 'ಗಂಡಭೇರುಂಡ' ಮತ್ತು ಕೊಡವ ಸಂಸ್ಕೃತಿಯ 'ಪಿಚಕತ್ತಿ' ವಿನ್ಯಾಸಗಳಿದ್ದ ಕೆಂಪು ಮೈಸೂರು ಸಿಲ್ಕ್ ಸೀರೆ ಧರಿಸಿದ್ದರು. ಆಭರಣಗಳು ಮತ್ತು ಸಾಂಪ್ರದಾಯಿಕ ಅಲಂಕಾರದಲ್ಲಿ ಅವರು ಕಂಗೊಳಿಸಿದರೆ, ವಿಜಯ್ ದೇವರಕೊಂಡ ಕೂಡ 'ಗಜ-ಕೇಸರಿ' ವಿನ್ಯಾಸದ ಉಡುಪಿನಲ್ಲಿ ಮಿಂಚಿದರು.

Read Full Story

02:20 PM (IST) Mar 05

ಇದ್ದರೆ ಹೀಗಿರಬೇಕು ಎನ್ನುವಂಥ ಕುಟುಂಬ, ಒಳ್ಳೇ ಉದ್ಯೋಗ;‌ ರೈಲಿಗೆ ತಲೆ ಕೊಟ್ಟಿದ್ದೇಕೆ ಕನ್ನಡ ಯುಟ್ಯೂಬರ್ ?

The Couplebuns Bharath gowda: ಕನ್ನಡದ ಯುಟ್ಯೂಬರ್‌ ಭರತ್‌ ಗೌಡ ಅವರು ಪತ್ನಿ, ಮುದ್ದಾದ ಮಗನ ಜೊತೆ ಫೋಟೋ, ವಿಡಿಯೋಗಳನ್ನು ಶೇರ್‌ ಮಾಡುತ್ತಿದ್ದರು. ಒಳ್ಳೆಯ ಉದ್ಯೋಗ, ಪತ್ನಿ, ಮಗ ಎಲ್ಲವೂ ಇತ್ತು. ಇವರ ಸಾವಿನ ಬಗ್ಗೆ ರಮ್ಯಾ ಜಗತ್‌ ಮೈಸೂರು ಅವರು ಬರೆದುಕೊಂಡಿದ್ದಾರೆ.  

Read Full Story

02:13 PM (IST) Mar 05

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೈಶಾಕ್! RCB ಮಾಜಿ ವೇಗಿ ಮದುವೆಗೆ ಬಂದು ಶುಭ ಹಾರೈಸಿದ ಕಿಚ್ಚ ಸುದೀಪ್

ಬೆಂಗಳೂರು: ಭಾರತದ ಪ್ರತಿಭಾನ್ವಿತ ವೇಗಿ ಹಾಗೂ ಆರ್‌ಸಿಬಿ ಮಾಜಿ ಕ್ರಿಕೆಟಿಗ ವೈಶಾಕ್ ವಿಜಯ್‌ಕುಮಾರ್‌ ಇಂದು ದಾಂಪತ್ಯ ಜೀವನಕ್ಕೆ ಕಾಲಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವ ಜೋಡಿಗೆ ಶುಭ ಹಾರೈಸಿದ್ದಾರೆ.

 

Read Full Story

02:13 PM (IST) Mar 05

US Iran Conflict - ಇರಾನ್ ಯುದ್ಧಭೂಮಿಯಲ್ಲಿ ನಾಪತ್ತೆಯಾಗಿದ್ದ ಕೊಪ್ಪದ ಯುವಕ ಸುರಕ್ಷಿತ; ವಾರಗಳ ಬಳಿಕ ನಿಶ್ಚಿತ್ ಸಂಪರ್ಕಕ್ಕೆ!

US Iran Conflict: ಇರಾನ್-ಇಸ್ರೇಲ್ ಯುದ್ಧದ ಕಾರಣದಿಂದಾಗಿ ಇರಾನ್‌ನಲ್ಲಿ ನಾಪತ್ತೆಯಾಗಿದ್ದ ಚಿಕ್ಕಮಗಳೂರಿನ ಯುವಕ ನಿಶ್ಚಿತ್ ಇದೀಗ ಸುರಕ್ಷಿತವಾಗಿರುವುದು ದೃಢಪಟ್ಟಿದೆ. ಭಾರತೀಯ ರಾಯಭಾರಿ ಕಚೇರಿಯ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಸಂಪರ್ಕಕ್ಕೆ ಸಿಕ್ಕಿದ್ದು, ಕುಟುಂಬಸ್ಥರು ನಿಟ್ಟುಸಿರು

Read Full Story

02:07 PM (IST) Mar 05

ಪ್ರಾಣಿ ಸತ್ತಂತೆ ವಾಸನೆ ಬರ್ತಿದೆ ಎಂದು ಹುಡುಕಿದಾಗ ಪೀಸ್ ಪೀಸ್ ಆಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮನೆ ಮಗನ ಶವ

ವಿಜಯನಗರ ಜಿಲ್ಲೆಯ ಬೀರಬ್ಬಿಯಲ್ಲಿ 15 ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಶವ ಗೋಣಿ ಚೀಲದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಾಣಿ ಸತ್ತಂತೆ ವಾಸನೆ ಬರುತ್ತಿದೆ ಎಂದು ನೋಡಿದಾಗ ಮನೆಯವರಿಗೆ ತಮ್ಮದೇ ಮನೆ ಹಿಂದೆ ಮಗನ ಶವ ಸಿಕ್ಕಿದೆ.

Read Full Story

01:42 PM (IST) Mar 05

ಕಲಬುರಗಿ ದಿಶಾ ಸಭೆಗೆ ಆನ್‌ಲೈನ್‌ನಲ್ಲಿ ಹಾಜರಾದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಮಾಜಿ ಸಂಸದ ಕಿಡಿ

ಕಲಬುರಗಿಯಲ್ಲಿ ನಡೆದ ದಿಶಾ ಸಭೆಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸಂಸದ ರಾಧಾಕೃಷ್ಣ ದೊಡ್ಮನಿ ಆನ್‌ಲೈನ್‌ನಲ್ಲಿ ಭಾಗವಹಿಸಿದ್ದನ್ನು ಮಾಜಿ ಸಂಸದ ಉಮೇಶ್ ಜಾಧವ್ ತೀವ್ರವಾಗಿ ಟೀಕಿಸಿದ್ದಾರೆ. ಇವರನ್ನು 'ಆನ್‌ಲೈನ್ ಮಂತ್ರಿಗಳು' ಎಂದು ಕರೆದ ಜಾಧವ್, ಕಾಟಾಚಾರಕ್ಕೆ ಸಭೆ ನಡೆಸಿದ್ದಾರೆ ಎಂದು ಕಿಡಿಕಾರಿದರು..

Read Full Story

01:27 PM (IST) Mar 05

ಬಾಲಿವುಡ್‌ಗೆ ಹೋಗಿ ಕೈ ಸುಟ್ಕೊಂಡು ಬಂದ ಕನ್ನಡ ನಟಿ ಗಂಡ - ಬರೋಬ್ಬರಿ 65 ಕೋಟಿ ನಷ್ಟ!

Kannada Actress Husband Flop Movie: ಸೌಥ್ ಸ್ಟಾರ್ ತಮ್ಮ ಮೊದಲ ಬಾಲಿವುಡ್ ಚಿತ್ರದಲ್ಲಿಯೇ  ಹೀನಾಯ ಸೋಲು ಕಂಡಿದ್ದಾರೆ. 125 ಕೋಟಿ ಬಜೆಟ್‌ನ ಈ ಚಿತ್ರ ವಿಫಲವಾದ ನಂತರ, ಅವರು ಮತ್ತೆ ಹಿಂದಿ ಚಿತ್ರರಂಗದತ್ತ ಮುಖ ಮಾಡಿಲ್ಲ. 

Read Full Story

More Trending News