Published : May 04, 2025, 07:18 AM ISTUpdated : May 04, 2025, 09:22 AM IST

Karnataka News Live: ಹಿಂದೂಗಳಲ್ಲಿ ಯಾಕೆ ಇನ್ನೂ ಮುಟ್ಟಿ ತಟ್ಟಿ ಅನ್ನೋದು ಇದೆ: ಮಲ್ಲಿಕಾರ್ಜುನ ಖರ್ಗೆ

ಸಾರಾಂಶ

ಬೆಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕೋಮು ದುಷ್ಕೃತ್ಯಗಳನ್ನು ಮಟ್ಟ ಹಾಕಲು ನಕ್ಸಲ್‌ ನಿಗ್ರಹ ಪಡೆಯ ರೀತಿಯಲ್ಲಿಯೇ ಪ್ರತ್ಯೇಕ ‘ಆ್ಯಂಟಿ ಕಮ್ಯುನಲ್‌ ಟಾಸ್ಕ್‌ ಫೋರ್ಸ್‌’ (ಕೋಮು ಹಿಂಸಾಚಾರ ನಿಗ್ರಹ ಕಾರ್ಯಪಡೆ) ರಚಿಸಲಾಗುವುದು. ಕೋಮು ಸಂಬಂಧಿ ಪ್ರಕರಣಗಳ ನಿಗ್ರಹಕ್ಕೆ ಈ ಟಾಸ್ಕ್‌ ಫೋರ್ಸ್‌ಗೆ ಸಂಪೂರ್ಣ ಅಧಿಕಾರ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಪ್ರಕಟಿಸಿದ್ದಾರೆ. ಕನ್ನಡಿಗರನ್ನು ಅವಮಾನಿಸಿದ ಖ್ಯಾತ ಗಾಯಕ ಸೋನು ನಿಗಮ್‌ ವಿರುದ್ಧ ಆವಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕ ಜಿಲ್ಲಾಧ್ಯಕ್ಷ ಎ.ಧರ್ಮರಾಜ್‌ ಪೊಲೀಸರಿಗೆ ಶುಕ್ರವಾರ ನೀಡಿದ ದೂರಿನಂತೆ ಎಫ್‌ಐಆರ್‌ ದಾಖಲಾಗಿದೆ.

Karnataka News Live: ಹಿಂದೂಗಳಲ್ಲಿ ಯಾಕೆ ಇನ್ನೂ ಮುಟ್ಟಿ ತಟ್ಟಿ ಅನ್ನೋದು ಇದೆ: ಮಲ್ಲಿಕಾರ್ಜುನ ಖರ್ಗೆ

11:56 PM (IST) May 04

ಹಿಂದೂಗಳಲ್ಲಿ ಯಾಕೆ ಇನ್ನೂ ಮುಟ್ಟಿ ತಟ್ಟಿ ಅನ್ನೋದು ಇದೆ: ಮಲ್ಲಿಕಾರ್ಜುನ ಖರ್ಗೆ

ಹಿಂದುಗಳಲ್ಲಿ ಯಾಕೆ ಇನ್ನೂ ಮುಟ್ಟಿತಟ್ಟಿ ಅನ್ನೋದು ಇದೆ? ಎಂದು ಎಐಸಿಸಿ ಅದ್ಯಕ್ಷರು, ರಾಜ್ಯಸಬೆ ವಿರೋಧ ಪಕ್ಷ ನಾಯಕರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ

11:45 PM (IST) May 04

ಈ ಬಾರಿ RCB ಐಪಿಎಲ್‌ ಗೆದ್ರೆ, ಈ ಸಲ ಕಪ್‌ ನಮ್ದೆ ಆದ್ರೇ ಏನಾಗತ್ತೆ? ಊಹೆಗೂ ನಿಲುಕದ ಈ ಘಟನೆ ನಡೆಯತ್ತೆ!

RCB ಐಪಿಎಲ್ ಗೆದ್ದರೆ ಐತಿಹಾಸಿಕ ಕ್ಷಣವಾಗಲಿದೆ. ಅಭಿಮಾನಿಗಳ ಸಂಭ್ರಮ, ವಿರಾಟ್ ಕೊಹ್ಲಿಯ ಭಾವನಾತ್ಮಕ ಕ್ಷಣ, ಚಿನ್ನಸ್ವಾಮಿ ಕ್ರೀಡಾಂಗಣದ ಸಂಭ್ರಮ, ಮಾಧ್ಯಮಗಳ ಭರಾಟೆ ಎಲ್ಲವೂ ವಿಶೇಷವಾಗಿರುತ್ತದೆ.

ಪೂರ್ತಿ ಓದಿ

11:27 PM (IST) May 04

ಚೀನಾ ಸೂಚನೆಯಂತೆ ಪಾಕಿಸ್ತಾನ ನಡೆಸಿತಾ ಪೆಹಲ್ಗಾಂ ಉಗ್ರ ದಾಳಿ? ಕನೆಕ್ಟ್ ಆಗುತ್ತಿದೆ ಡಾಟ್ಸ್

ಪೆಹಲ್ಗಾಂ ಉಗ್ರ ದಾಳಿಗೆ ಭಾರತ ಇನ್ನು ಯಾಕೆ ಪ್ರತೀಕಾರ ನಡೆಸಿಲ್ಲ? ಭಾರತಕ್ಕೆ ಪಾಕಿಸ್ತಾನ ಉಡೀಸ್ ಮಾಡುವುದು ಸವಾಲಿನ ಕೆಲಸವಲ್ಲ. ಆದರೆ ಪೆಹಲ್ಗಾಂ ಉಗ್ರ ದಾಳಿಗೆ ಚೀನಾದ ಬೆಂಬಲವೂ ಇತ್ತಾ? ಪಾಕಿಸ್ತಾನದ ಮೇಲೆ ಪ್ರತೀಕಾರಕ್ಕೆ ಮುಂದಾದರೆ ಲಡಾಖ್ ಹಾಗೂ ಅರುಣಾಚಲ ಪ್ರದೇಶದಲ್ಲಿ ಚೀನಾ ಆಕ್ರಮಣವಾಗುತ್ತಾ? ಭಾರತದ ಮೇಲೆ ಈ ಪರಿ ಹಗೆ ಸಾಧಿಸುತ್ತಿದೆಯಾ ಚೀನಾ?

ಪೂರ್ತಿ ಓದಿ

11:23 PM (IST) May 04

ಬ್ಯಾಂಕ್‌ನ ಎಡವಟ್ಟು, ಚಿನ್ಮಯ್‌ನ ಸರಿ ನಿರ್ಧಾರ: SSLCಯಲ್ಲಿ 97% ಫಲಿತಾಂಶ ಪಡೆದ ಬಾಲಕಿ!

ಹೃದಯ ಸ್ಪರ್ಶಿಸುವ ಈ ಕಥೆ ಸಾವಿರಾರು ಜನರ ಮನಸ್ಸನ್ನು ತಟ್ಟದೇ ಇರದು. ಬೆಂಗಳೂರು ಮೂಲದ ಉದ್ಯಮಿ ಮತ್ತು ಕ್ರೀಡಾಪಟು ಚಿನ್ಮಯ್ ಹೆಗ್ಡೆ ಅವರ ಜೀವನದಲ್ಲಿ ಒಂದು ವಿಶೇಷ ಘಟನೆ ನಡೆದಿದೆ. 

ಪೂರ್ತಿ ಓದಿ

11:11 PM (IST) May 04

ಸ್ವಿಮ್‌ಸೂಟ್‌ ಹಾಕಿ, ಕನ್ನಡಿಗರನ್ನು ಕುಣಿಸಿದ್ರು, 13 ವರ್ಷ ಕೋಮಾದಲ್ಲಿದ್ದ ಪತಿಗೋಸ್ಕರ ಹೋರಾಡಿದ್ದ ಅನುರಾಧ!

ಕ್ಯಾಬರೆ ಡಾನ್ಸರ್‌ ಅನುರಾಧ ಅವರ ಜೀವನದಲ್ಲಿ ಅನುಭವಿಸಿದ ಕಷ್ಟಗಳು, 13 ವರ್ಷಗಳ ಕಾಲ ಕೋಮಾದಲ್ಲಿದ್ದ ಗಂಡನ ಆರೈಕೆ, ಚಿತ್ರರಂಗದಲ್ಲಿನ ಏಳುಬೀಳುಗಳು ಮತ್ತು ಮಕ್ಕಳೊಂದಿಗೆ ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಬಗ್ಗೆ ಈ ಲೇಖನ ಒಳನೋಟ ನೀಡುತ್ತದೆ.

ಪೂರ್ತಿ ಓದಿ

10:33 PM (IST) May 04

ಸುದ್ದಿ ವಾಹನಿಯಲ್ಲಿ ಪಾಕಿಸ್ತಾನ ಕಮೆಂಟೇಟರ್ಸ್, ವಕ್ತಾರರು ಬ್ಯಾನ್; NBDA ಆದೇಶ

ಸುದ್ದಿ ವಾಹನಿಗಳಲ್ಲಿ, ಡಿಜಿಟಲ್ ಸುದ್ದಿ ಮಾಧ್ಯಮಗಳಲ್ಲಿ ಪಾಕಿಸ್ತಾನಿ ಕಮೆಂಟೇಟರ್ಸ್, ಭಾರತ ವಿರೋಧಿ ಧೋರಣೆ ವಿಶ್ಲೇಷಕರನ್ನು ಆಹ್ವಾನಿಸದಂತೆ ಭಾರತದ NBDA ಪ್ರಕಟಣೆ ಹೊರಡಿಸಿದೆ.

ಪೂರ್ತಿ ಓದಿ

10:29 PM (IST) May 04

ಯಾವುದೇ ಥೆರಪಿ, ಸರ್ಜರಿ ಇಲ್ಲದೇ ಮುಖದ ಕೊಬ್ಬನ್ನು ಕರಗಿಸಲು ಇಲ್ಲಿದೆ ಸೂಪರ್ ಟಿಪ್ಸ್!

ಕೆಲವರಿಗೆ ಮುಖದಲ್ಲಿ ಕೊಬ್ಬು ಜಾಸ್ತಿ ಇದ್ದು, ಆಕರ್ಷಕವಲ್ಲದಂತೆ ಕಾಣುತ್ತದೆ. ಇದನ್ನು ಸರಿಪಡಿಸಲು ಕೆಲವರು ಥೆರಪಿ, ಸರ್ಜರಿವರೆಗೂ ಹೋಗುತ್ತಾರೆ. ಆದರೆ ಸರಳ ವಿಧಾನಗಳನ್ನು ಅನುಸರಿಸಿದರೆ, ಆರೋಗ್ಯಕರವಾಗಿ, ದುಡ್ಡು ಖರ್ಚು ಮಾಡದೆಯೇ ಮುಖದ ಕೊಬ್ಬನ್ನು ಕರಗಿಸಬಹುದು.

ಪೂರ್ತಿ ಓದಿ

09:06 PM (IST) May 04

ಮತ್ಸ್ಯ ಸಂಜೀವಿನಿ ಯೋಜನೆ ಅನುಷ್ಠಾನ ದೇಶದಲ್ಲೇ ಮೊದಲು: ಸಚಿವ ಮಂಕಾಳ ವೈದ್ಯ

ತಾಲೂಕಿನ ಅಳ್ವೆಕೋಡಿ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಏರ್ಪಡಿಸಲಾದ ಜಲಶ್ರೀ ಮತ್ಸ್ಯ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯುಸರ್ ಕಂಪನಿಯ ಪ್ರಥಮ ವಾರ್ಷಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರು ಮತ್ಸ್ಯ ಸಂಜೀವಿನಿ ಯೋಜನೆಗೆ ಚಾಲನೆ ನೀಡಿದರು. 

ಪೂರ್ತಿ ಓದಿ

08:34 PM (IST) May 04

ಕೇಂದ್ರ ಸರ್ಕಾರದ ಜಾತಿ ಗಣತಿ ನಿರ್ಧಾರ ಸ್ವಾಗತ: ಶಾಸಕ ಕೊತ್ತೂರು ಮಂಜುನಾಥ್

ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿ ಗಣತಿ ಮಾಡಲು ತೆಗೆದುಕೊಂಡಿರುವ ನಿರ್ಧಾರ ಒಳ್ಳೆಯದು, ದೇಶದಲ್ಲಿ ಯಾವ ಯಾವ ಸಮುದಾದ ಜನಸಂಖೆ ಎಷ್ಟಿದೆ ಎನ್ನುವುದು ತಿಳಿದರೆ ಎಲ್ಲರಿಗೂ ಒಳ್ಳೆಯದೇ ಎಂದು ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲು ತೆಗೆದುಕೊಂಡ ನಿರ್ಧಾರವನ್ನು ಶಾಸಕ ಕೊತ್ತೂರು ಮಂಜುನಾಥ್ ಸ್ವಾಗತಿಸಿದರು. 

ಪೂರ್ತಿ ಓದಿ

08:18 PM (IST) May 04

ವಿಶ್ವದ ಟಾಪ್ 10 ಯೂಟ್ಯೂಬರ್ಸ್, ನಂ.1 ಮಿ.ಬೀಸ್ಟ್ 2ನೇ ಸ್ಥಾನದಲ್ಲಿ ಭಾರತದ ಟ್ಯಾಕ್ಸಿ ಡ್ರೈವರ್ ಪುತ್ರ

ಸೋಶಿಯಲ್ ಮೀಡಿಯಾ, ಯೂಟ್ಯೂಬ್ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ವಿಡಿಯೋ, ಕಂಟೆಂಟ್ ಕ್ರಿಯೇಟ್ ಮೂಲಕ ಹಲವರು ಭಾರಿ ಆದಾಯಗಳಿಸುತ್ತಿದ್ದಾರೆ. ಹೀಗೆ ಆದಾಯಗಳಿಸಿದ ವಿಶ್ವದ ಟಾಪ್ 10 ಪಟ್ಟಿ ಕ್ರಿಯೇಟರ್ಸ್ ಪಟ್ಟಿ ಬಹಿರಂಗವಾಗಿದೆ. ವಿಶೇಷ ಅಂದರೆ 2ನೇ ಸ್ಥಾನದಲ್ಲಿರುವುದು ಭಾರತದ ಟ್ಯಾಕ್ಸಿ ಚಾಲಕನ ಪುತ್ರ.

ಪೂರ್ತಿ ಓದಿ

08:09 PM (IST) May 04

ಮದ್ವೆ ಹೆಸ್ರಲ್ಲಿ 12 ಮಂದಿಗೆ ಟೋಪಿ ಹಾಕಿದ 21ರ ಖತರ್ನಾಕ್​ ಲೇಡಿ ಭಯಾನಕ ಸ್ಟೋರಿ ಕೇಳಿ!

 ಮದುವೆಯಾಗುವುದಾಗಿ ನಂಬಿಸಿ 12 ಮಂದಿ ಪುರುಷರನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯ ಮಂಟಪದಿಂದಲೇ ಎಸ್ಕೇಪ್​ ಆಗುತ್ತಿದ್ದ ಖತರ್ನಾಕ್​ ಲೇಡಿ ಸ್ಟೋರಿ ಕೇಳಿ... 

ಪೂರ್ತಿ ಓದಿ

07:34 PM (IST) May 04

RITES ಬೆಂಗಳೂರು ಕಚೇರಿಯಲ್ಲಿ 14 ಫೀಲ್ಡ್ ಎಂಜಿನಿಯರ್ ಹುದ್ದೆಗಳು: ಅರ್ಜಿ ಸಲ್ಲಿಸಿ!

ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು (RITES) 14 ಫೀಲ್ಡ್ ಎಂಜಿನಿಯರ್, ಸೈಟ್ ಮೌಲ್ಯಮಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ, ಐಟಿಐ, ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳು ಮೇ 20, 2025 ರೊಳಗೆ ಅರ್ಜಿ ಸಲ್ಲಿಸಬಹುದು.

ಪೂರ್ತಿ ಓದಿ

06:52 PM (IST) May 04

ಪೌರಾಣಿಕ ಹಿನ್ನೆಲೆ ಇರುವ ಜಗತ್ತಿನ 7 ಅತೀ ಭಯಾನಕ ಕಾಡುಗಳಿವು

ಜಗತ್ತಿನಾದ್ಯಂತ ಹಲವು ಅರಣ್ಯಗಳಿವೆ. ಕೆಲವು ಅರಣ್ಯಗಳು ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದರೆ, ಇನ್ನು ಕೆಲವು ಅರಣ್ಯಗಳು ತಮ್ಮಲ್ಲಿ ಅಡಗಿರುವ ಭಯಾನಕ ರಹಸ್ಯಗಳಿಗೆ ಹೆಸರುವಾಸಿಯಾಗಿವೆ. ಇಲ್ಲಿ ಜಗತ್ತಿನಾದ್ಯಂತ ಇರುವ ಕೆಲವು ಭಯಾನಕ ಅರಣ್ಯಗಳ ಬಗ್ಗೆ ಮಾಹಿತಿ ಇದೆ.

ಪೂರ್ತಿ ಓದಿ

06:38 PM (IST) May 04

ಬಿಜೆಪಿಯವರು ಹೊಸದನ್ನು ಹಳೆಯದನ್ನಾಗಿ ಮಾಡ್ತಾರೆ: ಸಚಿವ ಸತೀಶ್ ಜಾರಕಿಹೊಳಿ

ಬಿಜೆಪಿಯವರು ಹಳೆಯದನ್ನು ಹೊಸದಾಗಿ, ಹೊಸದನ್ನು ಹಳೆಯದನ್ನಾಗಿ ಮಾಡ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. 

ಪೂರ್ತಿ ಓದಿ

06:16 PM (IST) May 04

RCB ಗುಡ್ ಲಕ್‌ಗಾಗಿ 10 ರೂ ಕಾಣಿಕೆ ಹಾಕಿ, ಕ್ಯೂಆರ್ ಕೋಡ್ ಪ್ರಾಂಕ್‌ನಿಂದ ಭಾರಿ ಮೊತ್ತ ಸಂಗ್ರಹ

ಸಿಎಸ್‌ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ಅಭಿಮಾನಿಯೊಬ್ಬ ತಂಡ ಗುಡ್‌ಲಕ್‌ಗಾಗಿ 10 ರೂ ಕಾಣಿಕೆ ಹಾಕಿ ಅನ್ನೋ ಕ್ಯೂಆರ್ ಕೋಡ್  ಪ್ರಾಂಕ್ ಮಾಡಿದ್ದಾನೆ. ಇಷ್ಟೇ ನೋಡಿ ಅತ್ತ ಆರ್‌ಸಿಬಿ ರೋಚಕ ಗೆಲುವು ದಾಖಲಿಸಿದರೆ, ಇತ್ತ ಅಭಿಮಾನಿಯ ಖಾತೆಗೆ ಅಚ್ಚರಿ ಮೊತ್ತ ಕಾಣಿಕೆಯಾಗಿ ಜಮೆ ಆಗಿದೆ.

ಪೂರ್ತಿ ಓದಿ

05:30 PM (IST) May 04

ವೀರಶೈವ ಲಿಂಗಾಯತ ಸಂಘಟಿತ ಶಕ್ತಿ ಆಗಬೇಕು: ಸಚಿವ ಈಶ್ವರ ಖಂಡ್ರೆ

ವೀರಶೈವ ಲಿಂಗಾಯತ ಸಮುದಾಯ ಯಾಕೆ ಕವಲು ದಾರಿಯಲ್ಲಿದೆಯೆಂಬುದನ್ನು ಸ್ವಯಂ ಪ್ರೇರಿತರಾಗಿ ನಾವೇ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ಸಂಘಟನಾತ್ಮಕವಾಗಿ ಸಮಾಜ ಸಂಘಟಿತಸಬೇಕಾದ ತುರ್ತು ಅಗತ್ಯವಿದೆ.

ಪೂರ್ತಿ ಓದಿ

05:19 PM (IST) May 04

ಲ್ಯಾಂಡಿಂಗ್‌ಗೆ ಕೆಲವೇ ಕ್ಷಣ ಮುನ್ನ ಮಿಸೈಲ್ ದಾಳಿ, ಏರ್ ಇಂಡಿಯಾ ವಿಮಾನ ಡೈವರ್ಟ್

ಪ್ರಯಾಣಿಕರನ್ನು ಹೊತ್ತು ಸಾಗಿದ ಏರ್ ಇಂಡಿಯಾ ವಿಮಾನ ಇನ್ನೇನು ಲ್ಯಾಂಡಿಂಗ್‌ಗೆ ಕೆಲ ಕ್ಷಣಗಳು ಬಾಕಿ ಇತ್ತು. ಈ ವೇಳೆ ಮಿಸೈಲ್ ದಾಳಿ ನಡೆದಿದೆ. ತುರ್ತು ಪರಿಸ್ಥಿತಿ ಪರಿಣಾಮ ಏರ್ ಇಂಡಿಯಾ ವಿಮಾನವನ್ನು ಬೇರೆಡೆಗೆ ಡೈವರ್ಟ್ ಮಾಡಿದ ಘಟನೆ ನಡೆದಿದೆ. 

ಪೂರ್ತಿ ಓದಿ

04:54 PM (IST) May 04

ಈಜುಡುಗೆಯಲ್ಲಿ ಮತ ಚಲಾಯಿಸಿದ ಆಸ್ಟ್ರೇಲಿಯನ್ನರು, ಅಲ್ಬನೀಸ್ ಐತಿಹಾಸಿಕ ಗೆಲುವು

ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದ್ದಾರೆ. ಕಳೆದ 21 ವರ್ಷಗಳಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ.

ಪೂರ್ತಿ ಓದಿ

04:37 PM (IST) May 04

ಭಾರತ-ಪಾಕಿಸ್ತಾನ ಯುದ್ಧ ಆದ್ರೆ ನಾನು ಇಂಗ್ಲೆಂಡ್‌ಗೆ ಓಡಿ ಹೋಗ್ತೀನಿ: ಸಂಸದನ ಹೇಳಿಕೆ ವೈರಲ್!‌

ಪಹಲ್ಗಾಮ್ ದಾಳಿಯ ನಂತರ ಭಾರತ-ಪಾಕ್ ನಡುವೆ ಉದ್ವಿಗ್ನತೆ ಹೆಚ್ಚಿದೆ. ಪಾಕಿಸ್ತಾನದ ಸಂಸದರೊಬ್ಬರು ಯುದ್ಧದ ಭೀತಿಯಿಂದ ಇಂಗ್ಲೆಂಡ್‌ಗೆ ಪಲಾಯನವಾಗುವುದಾಗಿ ಹೇಳಿದ್ದಾರೆ.

ಪೂರ್ತಿ ಓದಿ

04:25 PM (IST) May 04

ಸಿಎಸ್‌ಕೆ ವಿರುದ್ಧ ಗೆಲುವು ಸಂಭ್ರಮಿಸಲಿಲ್ಲ, ಮುಖದಲ್ಲಿ ನಗು ಇರಲಿಲ್ಲ: ಕೊಹ್ಲಿಗೆ ಏನಾಯ್ತು?

ಸಿಎಸ್‌ಕೆ ವಿರುದ್ಧ ಲಾಸ್ಟ್ ಬಾಲ್ ವಿನ್ನಿಂಗ್ ಮ್ಯಾಚ್‌ನ್ನು ಎಲ್ಲರೂ ಸಂಭ್ರಮಿಸಿದ್ದಾರೆ. ಆರ್‌ಸಿಬಿ ಫ್ಯಾನ್ಸ್ ಸಂಭ್ರಮಾಚರಣೆ ಕೇಳಬೇಕಿಲ್ಲ. ಆದರೆ ಪ್ರತಿ ವಿಕೆಟ್, ಗೆಲುವನ್ನು ಅತೀಯಾಗಿ, ಅಗ್ರೆಸ್ಸೀವ್ ಆಗಿ ಆಚರಿಸುವ ವಿರಾಟ್ ಕೊಹ್ಲಿ ಸಿಎಸ್‌ಕೆ ವಿರುದ್ಧ ಡಲ್ ಆಗಿದ್ರು. ಮುಖದಲ್ಲಿ ನಗು ಇರಲಿಲ್ಲ. ಗೆಲುವು ಸಂಭ್ರಮಿಸಲೇ ಇಲ್ಲ. ಕೊಹ್ಲಿಗೆ ಏನಾಯ್ತು?

ಪೂರ್ತಿ ಓದಿ

04:11 PM (IST) May 04

ಭೂಗತ ಪಾತಕಿ ಬನ್ನಂಜೆ ರಾಜಗೆ ತುರ್ತು ಪೆರೋಲ್‌, ತಂದೆಯ ಅಂತ್ಯಕ್ರಿಯೆಗೆ ಉಡುಪಿಗೆ ಆಗಮನ

ಭೂಗತ ಪಾತಕಿ ಬನ್ನಂಜೆ ರಾಜ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು 14 ದಿನಗಳ ಪೆರೋಲ್‌ನಲ್ಲಿ ಬಿಡುಗಡೆಯಾಗಿದ್ದಾರೆ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದ ಬನ್ನಂಜೆ ರಾಜಾ ತಂದೆ ಸುಂದರ ಶೆಟ್ಟಿ ಮೃತಪಟ್ಟ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.

ಪೂರ್ತಿ ಓದಿ

04:11 PM (IST) May 04

ಈ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರಿಂದ ಹುಡುಗರು ದೂರವಿರಲು ಇಷ್ಟಪಡುತ್ತಾರೆ

ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಾಂಕಗಳಂದು ಹುಡುಗರು ಈ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರಿಂದ ದೂರವಿರಲು ಇಷ್ಟಪಡುತ್ತಾರೆ. ಇದರ ಹಿಂದೆ ಹಲವು ಕಾರಣಗಳಿವೆ.
 

ಪೂರ್ತಿ ಓದಿ

03:38 PM (IST) May 04

ಯೂಟ್ಯೂಬ್ ಚಾನೆಲ್ ಆದಾಯಕ್ಕೆ ಪ್ರಯತ್ನಿಸುತ್ತಿದ್ದೀರಾ? ಮಾನಿಟೈಸ್ ಕುರಿತು BCG ಮಾತು ಒಮ್ಮೆ ಕೇಳಿ

ಯೂಟ್ಯೂಬ್ ಚಾನೆಲ್ ಮೂಲಕ ಆದಾಯಕ್ಕೆ ಪ್ರಯತ್ನಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಬಹುತೇಕರು ಮಾನಿಟೈಸ್ ಆಗುತ್ತಿಲ್ಲ, ಹಣ ಬರುತ್ತಿಲ್ಲ ಎಂದು ಕೊರಗುತ್ತಾರೆ. ಭಾರತದಲ್ಲಿ ಯೂಟ್ಯೂಬ್, ಆದಾಯ, ಮಾನಿಟೈಸ್ ಕುರಿತು BCG  ಹೇಳು ಮಾತು ಒಮ್ಮೆ ಕೇಳಿ.

ಪೂರ್ತಿ ಓದಿ

03:16 PM (IST) May 04

ಡಾರ್ಲಿಂಗ್ ಪ್ರಭಾಸ್‌ 'ಸ್ಪಿರಿಟ್‌'ಗೆ ದೀಪಿಕಾ ಪಡುಕೋಣೆ ಸೆಲೆಕ್ಟ್ ಆಗಿರೋ ಕಾರಣ ಬಹಿರಂಗ!

ಮಗಳು ಹುಟ್ಟಿದ ಮೇಲೆ ಸಿನಿಮಾ ನಟನೆಯಿಂದ ಸ್ವಲ್ಪ ಬಿಡುವು ಪಡೆದಿದ್ದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ, ಇದೀಗ ಮತ್ತೆ ಶಾರೂಖ್‌ ಖಾನ್ ನಟನೆಯ ‘ಕಿಂಗ್‌’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ.ಇದೀಗ, ಪ್ರಭಾಸ್ ನಟನೆಯ ಸಿನಿಮಾಗೂ ಸಹಿ ಮಾಡಿದ್ದಾರೆ..

ಪೂರ್ತಿ ಓದಿ

03:03 PM (IST) May 04

ಕೋಡಿಶ್ರೀಗಳ ಭವಿಷ್ಯ: ಪ್ರಮುಖ ನಾಯಕನಿಗೆ ಅಪಮೃತ್ಯು, ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ!

ಕೋಡಿಮಠದ ಶ್ರೀಗಳು ಸಂಕ್ರಾಂತಿಯವರೆಗೂ ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ವಾಯು, ಜಲ, ಭೂ ಮತ್ತು ಅಗ್ನಿ ಸುನಾಮಿಗಳು ಸಂಭವಿಸಲಿದ್ದು, ಹಿಮಾಲಯದಿಂದ ಡೆಲ್ಲಿವರೆಗೂ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಜಗತ್ತಿನ ಪ್ರಮುಖ ನಾಯಕರಿಗೆ ಅಪಮೃತ್ಯುವಿದೆ ಎಂದೂ ಭವಿಷ್ಯ ನುಡಿದಿದ್ದಾರೆ.

ಪೂರ್ತಿ ಓದಿ

02:03 PM (IST) May 04

ಅಕ್ಕಿ ಆಲೂರಿಗೆ ಆಗಮಿಸಿದ ಸಿಎಂ, ಬಿಜೆಪಿಗರ ಜಾತಿಗಣತಿ ಬಗ್ಗೆ ವ್ಯಂಗ್ಯ, ದೇವೇಗೌಡರಿಗೆ ಸಿದ್ದು ಟಾಂಗ್!

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಹಾನಗಲ್ ತಾಲೂಕಿನ ಅಕ್ಕಿ ಆಲೂರಿಗೆ ಭೇಟಿ ನೀಡಿದರು. ₹650 ಕೋಟಿಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪೂರ್ತಿ ಓದಿ

01:29 PM (IST) May 04

ತಾಯಿ ತೀರಿಕೊಂಡ ದುಃಖದಲ್ಲೇ ಪರೀಕ್ಷೆ ಬರೆದು 612 ಅಂಕ ಪಡೆದ ವಿದ್ಯಾರ್ಥಿನಿ!

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೇವಲ 15 ದಿನ ಮೊದಲು ತಾಯಿಯನ್ನು ಕಳೆದುಕೊಂಡ ಹಾನಗಲ್ಲ ತಾಲೂಕಿನ ವಿದ್ಯಾರ್ಥಿನಿ ಅನ್ನಪೂರ್ಣ ಬಾಳಿಕಾಯಿ 612 ಅಂಕ ಗಳಿಸಿದ್ದಾರೆ. ಕೃಷಿ ಕುಟುಂಬದ ಹಿನ್ನೆಲೆಯ ಈ ವಿದ್ಯಾರ್ಥಿನಿ ತಾಯಿ ತೀರಿದ ದುಃಖದ ನಡುವೆಯೂ ಓದಿ ಉತ್ತಮ ಅಂಕ ಗಳಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದೇ ಪರೀಕ್ಷೆಯಲ್ಲಿ ಕಾವಲುಗಾರನ ಮಗ ಪೃಥ್ವೀಶ್ ಜಿಲ್ಲೆಗೆ ಎರಡನೇ ಸ್ಥಾನ ಗಳಿಸಿದ್ದಾರೆ.

ಪೂರ್ತಿ ಓದಿ

01:25 PM (IST) May 04

ಶತಾಯುಷಿ 128 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ ನಿಧನ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶತಾಯುಷಿ ಯೋಗ ಗುರು ಸ್ವಾಮಿ ಶಿವಾನಂದರು 128ನೇ ವಯಸ್ಸಿನಲ್ಲಿ ವಾರಣಾಸಿಯಲ್ಲಿ ನಿಧನರಾಗಿದ್ದಾರೆ. 

ಪೂರ್ತಿ ಓದಿ

01:10 PM (IST) May 04

ದೇವಾಲಯಗಳ ಸುಸಜ್ಜಿತಗೊಳಿಸುವಿಕೆಗೆ ಭಕ್ತರ ಕರೆ: ಧರ್ಮಸ್ಥಳದಲ್ಲಿ ಬ್ರಹ್ಮಕಲಶೋತ್ಸವ

ದೇವಾಲಯಗಳನ್ನು ಸುಸಜ್ಜಿತವಾಗಿಸಿಕೊಳ್ಳುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಭಕ್ತರಿಗೆ ಕರೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ 75 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಪ್ರಭಾವಿ ವ್ಯಕ್ತಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಪೂರ್ತಿ ಓದಿ

12:48 PM (IST) May 04

ಮಕ್ಕಳ ಕಿತಾಪತಿಗೆ ಅಮ್ಮನ ವಿದೇಶ ಪ್ರವಾಸವೇ ರದ್ದು: ಏರ್‌ಪೋರ್ಟ್‌ಲ್ಲಿ ಪಾಸ್ಪೋರ್ಟ್ ನೋಡಿದಾಕೆಗೆ ಶಾಕ್

ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳಬೇಕು ಎಂಬುದು ಅನೇಕರ ಬಹುದಿನಗಳ ಕನಸು. ಆದರೆ ಮಕ್ಕಳು ಮಾಡಿದ ಕಿತಾಪತಿಯಿಂದಾಗಿ ಮಹಿಳೆಯೊಬ್ಬರ ವಿದೇಶ ಪ್ರವಾಸ ಕೊನೆಕ್ಷಣದಲ್ಲಿ ರದ್ದಾಗಿದೆ. ಹಾಗಿದ್ರೆ ಮಕ್ಕಳು ಮಾಡಿದ್ದೇನು?

ಪೂರ್ತಿ ಓದಿ

12:42 PM (IST) May 04

RCB vs CSK ಮ್ಯಾಚ್ ವೇಳೆ ಬ್ಲಾಕ್ ಟಿಕೆಟ್ ಮಾರಾಟ, ಸಿಸಿಬಿ ಪೊಲೀಸರಿಂದ ನಾಲ್ವರ ಬಂಧನ, ಆರೋಪಿಗಳ ಸಿಕ್ಕಿಬಿದ್ದಿದ್ದು ಹೇಗೆ?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯದ ವೇಳೆ ಟಿಕೆಟ್‌ಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ 32 ಟಿಕೆಟ್‌ಗಳು ಮತ್ತು 1 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ಆರ್‌ಸಿಬಿ ಅಭಿಮಾನಿಗಳು ಚೆನ್ನೈ ತಂಡದ ‘ಜೈಲು ಜೆರ್ಸಿ’ಯನ್ನು ಮಾರಾಟ ಮಾಡಿದ್ದಾರೆ.

ಪೂರ್ತಿ ಓದಿ

12:11 PM (IST) May 04

ಕಳ್ಳರ ಹಿಡೀತಾರೆ, ಟ್ರಾಫಿಕ್​ ಸರಿಮಾಡ್ತಾರೆ, ನ್ಯಾಯ ಕೊಡಿಸ್ತಾರೆ... 74ರ 'ಬೈಕ್​ ಅಜ್ಜಿ'ಯ ರೋಚಕ ಕಥೆ ಕೇಳಿ...

ಕಳ್ಳರ ಹಿಡೀತಾರೆ, ಟ್ರಾಫಿಕ್​ ಸರಿಮಾಡ್ತಾರೆ, ನ್ಯಾಯ ಕೊಡಿಸ್ತಾರೆ,  ಅಪಘಾತವಾದವರನ್ನು ಆಸ್ಪತ್ರೆಗೆ ಸೇರಿಸ್ತಾರೆ.. ಎಲ್ಲವೂ ಉಚಿತ... 74ರ 'ಬೈಕ್​ ಅಜ್ಜಿ'ಯ ರೋಚಕ ಕಥೆ ಕೇಳಿ... 

ಪೂರ್ತಿ ಓದಿ

11:52 AM (IST) May 04

6 ವರ್ಷದ ಬಾಲಕಿ ಮೇಲೆ ಬಲತ್ಕಾರ ಮಾಡಿದವನಿಗೆ 8 ವರ್ಷ ಜೈಲು ಶಿಕ್ಷೆ, ₹50 ಸಾವಿರ ದಂಡ: ಕೋರ್ಟ್ ತೀರ್ಪು

ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಅಪರಾಧಿಗೆ ಮಂಡ್ಯದ ಪೋಕ್ಸೋ ವಿಶೇಷ ನ್ಯಾಯಾಲಯ 8 ವರ್ಷ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಿದೆ. ಕೆ.ಆರ್.ಪೇಟೆ ತಾಲೂಕಿನ ರಾಮಕೃಷ್ಣನಿಗೆ ಶಿಕ್ಷೆ ವಿಧಿಸಲಾಗಿದೆ.

ಪೂರ್ತಿ ಓದಿ

11:43 AM (IST) May 04

ಸುಹಾಸ್ ಹ*ತ್ಯೆ: NIA ತನಿಖೆಗೆ ತೇಜಸ್ವಿ ಸೂರ್ಯ ಒತ್ತಾಯ, ಅಮಿತ್ ಶಾಗೆ ಪತ್ರ

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹ*ತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವರ್ಗಾಯಿಸಬೇಕೆಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ. ಪ್ರವೀಣ್ ನೆಟ್ಟಾರು ಹ*ತ್ಯೆಯ ಮಾದರಿಯಲ್ಲೇ ಈ ಹ*ತ್ಯೆಯೂ ನಡೆದಿದ್ದು, ನಿಷೇಧಿತ PFI ಸಂಘಟನೆಯ ಪಾತ್ರವಿರಬಹುದೆಂಬ ಶಂಕೆಯಿದೆ.

ಪೂರ್ತಿ ಓದಿ

11:38 AM (IST) May 04

ಎಲ್ಲರೂ ಮೂಗು ಮೇಲೆ ಬೆರಳಿಡುವಂತೆ ಮನೆ ಕಟ್ಟಿ ಗೃಹಪ್ರವೇಶ ಮಾಡಿದ ಮಜಾ ಭಾರತ ಶೋ ಚಂದ್ರಪ್ರಭ! ವಿಡಿಯೋ ನೋಡಿ!

ಮಜಾ ಭಾರತ ಖ್ಯಾತಿಯ ಚಂದ್ರಪ್ರಭ ಅವರು ಹೊಸ ಮನೆಗೆ ಗೃಹಪ್ರವೇಶ ಮಾಡಿದ್ದಾರೆ. ಚಿತ್ರರಂಗದ ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದಾರೆ. ಭಾರತಿ ಪ್ರಿಯ ಜೊತೆ ಮದುವೆಯಾಗಿ ಡುಪ್ಲೆಕ್ಸ್ ಮನೆ ಕಟ್ಟಿಸಿದ್ದಾರೆ.

ಪೂರ್ತಿ ಓದಿ

11:33 AM (IST) May 04

ತೆರಿಗೆ ಸಂಗ್ರಹ ₹1ನೂ ಕಮ್ಮಿ ಆಗಬಾರದು, ತಪ್ಪಿಸಿಕೊಳ್ಳುವವರನ್ನ ಪತ್ತೆ ಹಚ್ಚಿ ವಸೂಲಿ ಮಾಡಿ: ಸಿಎಂ

ಇಲಾಖೆಗಳಿಗೆ ನಿಗದಿಪಡಿಸಿರುವ ತೆರಿಗೆ ಸಂಗ್ರಹ ಗುರಿಯಲ್ಲಿ ಒಂದು ರೂಪಾಯಿಯೂ ಕಡಿಮೆಯಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತೆರಿಗೆ ಸಂಗ್ರಹದಲ್ಲಿ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ಅಗತ್ಯ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದರು.

ಪೂರ್ತಿ ಓದಿ

11:15 AM (IST) May 04

ಉತ್ತರ ಕರ್ನಾಟಕದಲ್ಲಿ 41 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ! ಈ ಮೂರು ಜಿಲ್ಲೆಗಳಲ್ಲಿ ಬೆಂಕಿ ಉಗುಳುವ ಬಿಸಿಲು!

ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಬಿಸಿಲ ಬೇಗೆ ಹೆಚ್ಚಾಗಿದೆ. ಕಲಬುರಗಿ, ಬೀದರ್ ಮತ್ತು ವಿಜಯಪುರದಲ್ಲಿ ಗರಿಷ್ಠ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗಿದೆ. ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 37.2 ಡಿ.ಸೆ ದಾಖಲಾಗಿದ್ದು, ಇದು ವಾಡಿಕೆ ಪ್ರಮಾಣಕ್ಕಿಂತ 2.4 ಹೆಚ್ಚಾಗಿದೆ.

ಪೂರ್ತಿ ಓದಿ

10:57 AM (IST) May 04

ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಆನೇಕಲ್‌: ಡಿಸಿಎಂ ಮಹತ್ವದ ಘೋಷಣೆ, ಮೆಟ್ರೋ ವಿಸ್ತರಣೆಗೆ ಡಿಪಿಆರ್ ಸಿದ್ಧತೆ!

ಆನೇಕಲ್ ಮತ್ತು ಸರ್ಜಾಪುರಕ್ಕೆ ಮೆಟ್ರೋ ವಿಸ್ತರಣೆಗೆ ಡಿಪಿಆರ್ ತಯಾರಾಗುತ್ತಿದ್ದು, ಆನೇಕಲ್ ತಾಲೂಕನ್ನು ಗ್ರೇಟರ್ ಬೆಂಗಳೂರಿಗೆ ಸೇರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಹೆನ್ನಾಗರ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದ ಅವರು, ಕಾಂಗ್ರೆಸ್ ಬದುಕಿನ ಮೇಲೆ ರಾಜಕಾರಣ ಮಾಡುತ್ತಿದೆ ಎಂದರು.

ಪೂರ್ತಿ ಓದಿ

10:55 AM (IST) May 04

ಬಾಲ ಬಿಚ್ಚಿದ ಪಾಕಿಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಇಂಡಿಯಾ

ಪಹಲ್ಗಾಮ್ ದಾಳಿಯ ನಂತರ, ಪಾಕಿಸ್ತಾನವು ಭಾರತ-ಪಾಕ್ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ನಿರಂತರವಾಗಿ ದಾಳಿ ಮಾಡಿದ್ದು, ಇದಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ.

ಪೂರ್ತಿ ಓದಿ

10:49 AM (IST) May 04

ಉಡುಪಿಯಲ್ಲಿ 7151 ಗೃಹಲಕ್ಷ್ಮೀ ವಂಚಿತರು! ಗೃಹಜ್ಯೋತಿ ಬಳಕೆಗೆ ಹೆಚ್ಚಿನ ಬಿಲ್!

ಉಡುಪಿ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ 7151 ಅರ್ಜಿಗಳು ಬಾಕಿ ಉಳಿದಿವೆ. ಐಟಿ, ಜಿಎಸ್ಟಿ, ಇ-ಕೆವೈಸಿ ಮ್ಯಾಪಿಂಗ್ ಸಮಸ್ಯೆಗಳಿಂದಾಗಿ ಫಲಾನುಭವಿಗಳು ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಗೃಹಜ್ಯೋತಿ ಯೋಜನೆಯಡಿ ಹೆಚ್ಚುವರಿ ವಿದ್ಯುತ್ ಬಳಕೆಗೆ ಹೆಚ್ಚಿನ ಬಿಲ್ ಬರುತ್ತಿರುವ ಬಗ್ಗೆಯೂ ದೂರುಗಳು ಬಂದಿವೆ.

ಪೂರ್ತಿ ಓದಿ

More Trending News