Published : Aug 31, 2025, 07:06 AM ISTUpdated : Aug 31, 2025, 11:36 PM IST

Karnataka News Live: ಕೈ-ತುತ್ತಿನಲ್ಲಿ ಸಾವು; ಅನ್ನದ ಅಗಳು ಗಂಟಲಿಗೆ ಸಿಲುಕಿ ಉಸಿರೇ ನಿಲ್ಲಿಸಿದ 38ರ ಯುವಕ!

ಸಾರಾಂಶ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಚಂಬಲ್ ಕಣಿವೆಯ ದರೋಡೆಕೋರರನ್ನು ಮೀರಿಸುವಂತೆ ಜನಸಾಮಾನ್ಯರ ಸುಲಿಗೆಗೆ ಮುಂದಾಗಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕಟಣೆ ನೀಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್, ಪಾರ್ಕಿಂಗ್ ಟ್ಯಾಕ್ಸ್, ನೀರಿನ ದರ ಹೆಚ್ಚಳ ಸೇರಿದಂತೆ ಹಲವಾರು ರೀತಿಯಲ್ಲಿ ಸಿದ್ದರಾಮಯ್ಯ ಸರ್ಕಾರ ‘ತೆರಿಗೆ ಭಯೋತ್ಪಾದನೆ’ ನಡೆಸುತ್ತಿದೆ ಎಂದು ಆರೋಪಿಸಿದರು. ಗಣೇಶ ಹಬ್ಬದ ಸಂಭ್ರಮದ ಮರುದಿನವೇ ದಸ್ತಾವೇಜುಗಳ ನೋಂದಣಿ ಹಾಗೂ ಮುದ್ರಾಂಕ ಶುಲ್ಕವನ್ನು ಶೇ.1ರಿಂದ 2ಕ್ಕೆ ಏರಿಸಲಾಗಿದ್ದು, ಸೋಮವಾರದಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ ಎಂದರು.

Uttara Kannada News

11:36 PM (IST) Aug 31

ಕೈ-ತುತ್ತಿನಲ್ಲಿ ಸಾವು; ಅನ್ನದ ಅಗಳು ಗಂಟಲಿಗೆ ಸಿಲುಕಿ ಉಸಿರೇ ನಿಲ್ಲಿಸಿದ 38ರ ಯುವಕ!

ಕಾರವಾರದಲ್ಲಿ ಊಟ ಮಾಡುವಾಗ ಅನ್ನದ ಅಗಳು ಗಂಟಲಿಗೆ ಸಿಲುಕಿ ಯುವಕ ಸಾವನ್ನಪ್ಪಿದ್ದಾನೆ. ಅಮಿತ್ ಮಾಳಸೇರ್ ಎಂಬ 38 ವರ್ಷದ ಯುವಕನಿಗೆ ಉಸಿರುಗಟ್ಟಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ. ಈ ಘಟನೆ ಕುಟುಂಬದಲ್ಲಿ ದುಃಖ ತಂದಿದೆ.

Read Full Story

11:23 PM (IST) Aug 31

ಮಿನಿಟ್ರಕ್ ತುಂಬಾ ಅಕ್ರಮ ಗೋಮಾಂಸ ಸಾಗಣೆ; ಬೆಳಗಾವಿಯಲ್ಲಿ ವಾಹನ ಪಲ್ಟಿ, ಚಾಲಕ ಪರಾರಿ

ಬೆಳಗಾವಿ ಜಿಲ್ಲೆಯಲ್ಲಿ ಗೋಮಾಂಸ ಸಾಗಿಸುತ್ತಿದ್ದ ವಾಹನ ಪಲ್ಟಿಯಾಗಿ 2,000 ಕೆಜಿಗೂ ಹೆಚ್ಚು ಮಾಂಸ ಪತ್ತೆಯಾಗಿದೆ. ಚಾಲಕ ಪರಾರಿಯಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಅಕ್ರಮ ಗೋಸಾಗಾಟದ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

11:17 PM (IST) Aug 31

ಸಿಎಂ ಸಿದ್ದರಾಮಯ್ಯರಿಂದ ಎಸ್‌ಐಟಿ ದುರ್ಬಳಕೆ - ನಿಖಿಲ್ ಕುಮಾರಸ್ವಾಮಿ ಆರೋಪ

ಧರ್ಮಸ್ಥಳ ಬುರುಡೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಗೆ ವಹಿಸುವಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.

Read Full Story

10:32 PM (IST) Aug 31

ಧರ್ಮಸ್ಥಳ ಕೇಸಲ್ಲಿ ಮತ್ತೊಂದು FIR - ಮಟ್ಟಣ್ಣನವರ್, ತಿಮರೋಡಿ ಗ್ಯಾಂಗ್‌ಗೆ ಮದನ್ ಬುಗುಡಿ ಸೇರ್ಪಡೆ!

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಸುಳ್ಳು ಮಾಹಿತಿ ಪ್ರಸಾರ ಮಾಡಿದ ಆರೋಪದ ಮೇಲೆ ಮೂವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು. ಮಾನವ ಹಕ್ಕು ಆಯೋಗದ ಅಧಿಕಾರಿಯೆಂದು ಸುಳ್ಳು ಹೇಳಿ ಧರ್ಮಸ್ಥಳದ ಘನತೆಗೆ ಧಕ್ಕೆ ತಂದ ಆರೋಪ.
Read Full Story

10:23 PM (IST) Aug 31

ಸದ್ದಿಲ್ಲದೆ ಮದುವೆಯಾಗೋಕೆ ರೆಡಿಯಾದ ಚಿಕ್ಕಣ್ಣ! ಖ್ಯಾತ ಹಾಸ್ಯನಟನ ಬದುಕೀಗ ಪಾವನಾಮಯ! ಹುಡುಗಿ ಯಾರು?

Actor Chikkanna Marriage:  ನಟ ಚಿಕ್ಕಣ್ಣ ಬದುಕು ಈಗ ಪಾವನಾಮಯವಂತೆ. ಹೌದು ಸಿಂಗಲ್‌ ಆಗಿದ್ದ ಚಿಕ್ಕಣ್ಣ ಈಗ ಫ್ಯಾಮಿಲಿ ಮ್ಯಾನ್‌ ಆಗೋಕೆ ರೆಡಿಯಾಗಿದ್ದಾರಂತೆ. ಹಾಗಾದರೆ ಹುಡುಗಿ ಯಾರು?

Read Full Story

10:04 PM (IST) Aug 31

ಶ್ರಮಿಕರಿಗೆ ಶಕ್ತಿ ತುಂಬಿದ್ದೇ ಅಂದಿನ ಭಾಗ್ಯಗಳು, ಇಂದಿನ ಗ್ಯಾರಂಟಿಗಳು - ಸಿಎಂ ಸಿದ್ದರಾಮಯ್ಯ

ಶೂದ್ರ ಶ್ರಮಿಕ ವರ್ಗಗಳಿಗೆ ಆರ್ಥಿಕ ಚೈತನ್ಯ ನೀಡಲು ಭಾಗ್ಯಗಳು ಮತ್ತು ಗ್ಯಾರಂಟಿಗಳು ವರದಾನವಾಗಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜಾತಿ ನೋಡದೆ ಎಲ್ಲ ಜಾತಿಗಳ ಅಭಿವೃದ್ಧಿಯೇ ಸರ್ಕಾರದ ಗುರಿ. ದಾರ್ಶನಿಕರು ಮತ್ತು ಮಹನೀಯರ ಜಯಂತಿಗಳನ್ನು ಸರ್ಕಾರ ಆಚರಿಸುತ್ತಿದೆ.
Read Full Story

09:43 PM (IST) Aug 31

ಗಡಿ ತಾಲೂಕಿಗೆ ಆರೋಗ್ಯ ರಕ್ಷೆ - ಭಾಗ್ಯನಗರದಲ್ಲಿ ಸೆ.1ಕ್ಕೆ ಸಾಯಿ ಸ್ವಾಸ್ಥ್ಯ ವೆಲ್‌ನೆಸ್‌ ಸೆಂಟರ್ ಉದ್ಘಾಟನೆ

ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಈ ಆರೋಗ್ಯ ಕೇಂದ್ರವನ್ನು ನಿರ್ವಹಿಸಲಿದೆ. ಈ ಆರೋಗ್ಯ ಕೇಂದ್ರವು 'ಒಂದು ಜಗತ್ತು ಒಂದು ಕುಟುಂಬದ ಸಾಯಿ ಸ್ವಾಸ್ಥ್ಯ ಚಿಕಿತ್ಸಾಲಯ' ಸಮೂಹದ ಭಾಗವಾಗಲಿದೆ.

Read Full Story

09:29 PM (IST) Aug 31

ಸಿದ್ದರಾಮಯ್ಯ ಸರ್ಕಾರದಿಂದ ತೆರಿಗೆ ಭಯೋತ್ಪಾದನೆ - ಶಾಸಕ ಸುನೀಲ್ ಕುಮಾರ್ ಆಕ್ರೋಶ

ರಾಜ್ಯ ಕಾಂಗ್ರೆಸ್ ಸರ್ಕಾರ ಚಂಬಲ್ ಕಣಿವೆಯ ದರೋಡೆಕೋರರನ್ನು ಮೀರಿಸುವಂತೆ ಜನಸಾಮಾನ್ಯರ ಸುಲಿಗೆಗೆ ಮುಂದಾಗಿದೆ ಎಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

09:14 PM (IST) Aug 31

ಕೆ.ಎನ್. ರಾಜಣ್ಣ ಭೇಟಿಯಾದ ಮಠಾಧೀಶರು; ಸಚಿವ ಸ್ಥಾನ ವಾಪಸ್ ಕೊಡಿಸಲು ಹೈಕಮಾಂಡ್ ಭೇಟಿಗೆ ತೀರ್ಮಾನ!

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಹಲವು ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೀಗ ರಾಜಣ್ಣ ಅವರನ್ನು ಪುನಃ ರಾಜ್ಯದ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಸಿದ್ಧತೆ ನಡೆಸಿದ್ದಾರೆ.

Read Full Story

08:48 PM (IST) Aug 31

ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಕಾರ್ಖಾನೆ ಸ್ಪಂದಿಸಲಿ - ಶಾಸಕ ಆರ್.ವಿ.ದೇಶಪಾಂಡೆ

ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸ್ಪಂದಿಸಬೇಕು. ರೈತರ ಹಿತರಕ್ಷಣೆ ಮರೆಯಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

Read Full Story

07:39 PM (IST) Aug 31

ಗಣೇಶ ಮೆರವಣಿಗೆಯಲ್ಲಿ ಕುಣಿಯುತ್ತಲೇ ಕುಸಿದುಬಿದ್ದ ಭಕ್ತ, ಪ್ರಾಣ ಹೊತ್ತೊಯ್ದ ಜವರಾಯ!

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ನೃತ್ಯ ಮಾಡುತ್ತಿದ್ದ ಲಕ್ಷ್ಮೀಪತಿ (40) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

Read Full Story

06:47 PM (IST) Aug 31

ಜಲಮಂಡಳಿ ಸ್ವಚ್ಛತಾ ಕಾರ್ಮಿಕರಿಗೆ 'ಅನ್ನಪೂರ್ಣ ಯೋಜನೆ' - ನಾಳೆ ಸ್ಮಾರ್ಟ್ ಕಾರ್ಡ್‌ ವಿತರಣೆ

ಬೆಂಗಳೂರು ಜಲಮಂಡಳಿ 'ಜಲಮಂಡಳಿ ಅನ್ನಪೂರ್ಣ ಯೋಜನೆ'ಯಡಿ 700+ ನೈರ್ಮಲ್ಯೀಕರಣ ಕಾರ್ಮಿಕರಿಗೆ ಉಪಹಾರಕ್ಕಾಗಿ ಮಾಸಿಕ ₹1500 ಒದಗಿಸುತ್ತಿದೆ. ಈ ಯೋಜನೆಯು ಕಾರ್ಮಿಕರ ಆರೋಗ್ಯ ಮತ್ತು ಗೌರವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
Read Full Story

06:33 PM (IST) Aug 31

ಕರ್ನಾಟಕದಲ್ಲಿ ಮುಂದಿನ ಏಳು ದಿನ ಭಾರಿ ಮಳೆ, ಹವಾಮಾನ ಇಲಾಖೆಯಿಂದ ಹೈ ಅಲರ್ಟ್!

ಕರ್ನಾಟಕದಲ್ಲಿ ಮುಂದಿನ ಏಳು ದಿನಗಳವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ನಿರೀಕ್ಷೆಯಿದ್ದು, ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿಯೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
Read Full Story

06:19 PM (IST) Aug 31

ಚಾಮುಂಡಿ ಚಲೋ ಮೂಲಕ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ - ಆರ್.ಅಶೋಕ್ ಘೋಷಣೆ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ತಿಳಿದುಕೊಂಡು ಮಾಧ್ಯಮಕ್ಕೆ ತಿಳಿಸುತ್ತೇನೆ. ಚಾಮುಂಡಿ ಚಲೋ ಮಾಡುವ ಚಿಂತನೆಯಿದೆ. ರಾಜ್ಯಾದ್ಯಂತ ಎಲ್ಲಾ ಹಿಂದೂ ಸಂಘಟನೆಗಳು ಈ ಚಲೋದಲ್ಲಿ ಸೇರಲಿದ್ದಾರೆ.

Read Full Story

06:12 PM (IST) Aug 31

ನಿಮ್ಮ ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯುವ ಸುವರ್ಣಾವಕಾಶ, ಅರ್ಜಿ ಸಲ್ಲಿಸೋದು ಹೇಗೆ?

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಮನೆಯ ಮೇಲ್ಚಾವಣಿಯಲ್ಲಿ ಸೌರ ಘಟಕ ಅಳವಡಿಸಿ 20 ವರ್ಷ ಉಚಿತ ವಿದ್ಯುತ್ ಪಡೆಯಿರಿ. ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಆದಾಯ ಗಳಿಸಿ, ಸರ್ಕಾರದ ಸಬ್ಸಿಡಿ ಪಡೆದು ಖರ್ಚು ಕಡಿಮೆ ಮಾಡಿ.
Read Full Story

05:57 PM (IST) Aug 31

ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಳಿಸಿ ಸರ್ಕಾರಕ್ಕೆ ಶೀಘ್ರ ಶಿಫಾರಸು - ಸಚಿವ ಸಂತೋಷ್ ಲಾಡ್

ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ನಿಯಮಾನುಸಾರ ಪರಿಹಾರ ನೀಡುತ್ತದೆ. ಪರಿಹಾರ ಕಾರ್ಯಗಳಲ್ಲಿ ಯಾವುದೇ ಲೋಪದೋಷಗಳಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು.

Read Full Story

05:49 PM (IST) Aug 31

ಮಡಿಕೇರಿಯಲ್ಲಿ ಹುಡುಗಿಯರು, ಆಂಟಿಯರು ಸಿಗುತ್ತಾರೆಂದು ಇನ್ಸ್ಟಾದಲ್ಲಿ ಪೋಸ್ಟ್ - ಯುವಕನ ಬಂಧನ

ಡೇಟಿಂಗ್‌ಗೆ ಮಡಿಕೇರಿಯಲ್ಲಿ ಹುಡುಗಿಯರು, ಆಂಟಿಯರು ಸಿಗುತ್ತಾರೆ ಎಂದು ಇನ್ಸ್ಟಾಗ್ರಾಂನಲ್ಲಿ ಹಾಕಿ ಜನರನ್ನು ವಂಚಿಸುತ್ತಿದ್ದ ಯುವಕನನ್ನು ಮಡಿಕೇರಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Read Full Story

05:35 PM (IST) Aug 31

ಮಡಿಕೇರಿ ಆಂಟಿಯರ ಸುದ್ದಿಗೆ ಹೋಗಿ ತಗ್ಲಾಕ್ಕೊಂಡ ಭೂಪ! ಹನಿಮೂನ್​ಗೆ ಹೋಗಿ ಜೈಲು ಸೇರಿದ...

ಆಂಟಿಯರು ಬೇಕಾ, ಹುಡುಗಿಯರು ಬೇಕಾ ಎಂದು ವಿವಿಧೆಡೆ ಜಾಹೀರಾತು ನೀಡಿ ಹಲವರಿಗೆ ಟೋಪಿ ಹಾಕಿರುವ ಭೂಪನೊಬ್ಬ ಮಡಿಕೇರಿಯವರ ತಂಟೆಗೆ ಹೋಗಿ ಅರೆಸ್ಟ್​ ಆಗಿದ್ದಾನೆ. ಈತನ ಕುತೂಹಲದ ಸ್ಟೋರಿ ಕೇಳಿ...

 

Read Full Story

05:32 PM (IST) Aug 31

ತೋಟದ ಕೆಲಸಕ್ಕೆ ಬಂದ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡ ಯುವ ರೈತ; ಈಗ ಇಬ್ಬರೂ ಕೃಷಿ ಹೊಂಡದಲ್ಲಿ ಹತ!

ಚಾಮರಾಜನಗರ ಜಿಲ್ಲೆಯಲ್ಲಿ ಯುವಕ ಮತ್ತು ವಿಚ್ಛೇಧಿತ ಮಹಿಳೆ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರಾತ್ರಿ ಎಣ್ಣೆ ಪಾರ್ಟಿ ವೇಳೆ ಭಿನ್ನಾಭಿಪ್ರಾಯ ಉಂಟಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮಹಿಳೆಯ ತಾಯಿ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

04:52 PM (IST) Aug 31

ಬೇರೆ ಧರ್ಮದವರು ಬೇಕಾದಷ್ಟು ಮಕ್ಕಳನ್ನು ಹುಟ್ಟಿಸಿದರೂ ಕಾಂಗ್ರೆಸ್ ಗೆ ನಡೆಯುತ್ತೆ - ಕೇಂದ್ರ ಸಚಿವ ಜೋಶಿ ಕಿಡಿ

ಮೋಹನ್ ಭಾಗವತ್ ಅವರ 'ನಾವಿಬ್ಬರು ನಮಗೆ ಮೂವರು' ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೆಂಬಲ ವ್ಯಕ್ತಪಡಿಸಿದ್ದಾರೆ. ವೋಟ್ ಬಚಾವ್ ಆಂದೋಲನವನ್ನು ನುಸುಳುಕೋರರ ಬಚಾವ್ ಆಂದೋಲನ ಎಂದು ಕರೆದ ಜೋಶಿ, ಕಾಂಗ್ರೆಸ್ ಮತ್ತು ಮಹುವಾ ಮೈತ್ರಾ ವಿರುದ್ಧ ವಾಗ್ದಾಳಿ ನಡೆಸಿದರು.

Read Full Story

04:51 PM (IST) Aug 31

ಸುದೀಪ್ ಗರಡಿಯಲ್ಲಿ ಪಳಗಿದ ಬಿಗ್ ಬಾಸ್ ಖ್ಯಾತಿಯ ನಟಿ ಅನುಷಾ ರೈ, ವಿಜಯಲಕ್ಷ್ಮೀ ದರ್ಶನ್‌ಗೆ ಸಪೋರ್ಟ್!

ಬಿಗ್ ಬಾಸ್ ಸೀಸನ್ 11ರಲ್ಲಿ ಕಿಚ್ಚ ಸುದೀಪ್ ಗರಡಿಯಲ್ಲಿ ಪಳಗಿದ ನಟಿ ಅನುಷಾ ರೈ ಅವರು ಇದೀಗ ವಿಜಯಲಕ್ಷ್ಮೀ ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದಾರೆ.  ದರ್ಶನ್ ಕುಟುಂಬದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ವಿಜಯಲಕ್ಷ್ಮಿ ಅವರಿಗೆ ಅಶ್ಲೀಲ ಕಾಮೆಂಟ್‌ ಬಂದಿರುವುದಕ್ಕೆ ಅನುಷಾ ರೈ ಖಂಡನೆ ವ್ಯಕ್ತಪಡಿಸಿದ್ದಾರೆ.

Read Full Story

04:01 PM (IST) Aug 31

ಧರ್ಮಸ್ಥಳದಲ್ಲಿ ಶವ ಹೂತಿರುವ ಸ್ಥಳಗಳ ಬಗ್ಗೆ ಗಿರೀಶ್ ಮಟ್ಟಣ್ಣನವರ್ ಗೆ ಚೆನ್ನಾಗಿ ಗೊತ್ತು, ಇಂಚಿಚೂ ಸತ್ಯ ಹೇಳಿದ ಜಯಂತ್!

ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣದಲ್ಲಿ ಜಯಂತ್ ಟಿ ಹೊಸ ಆರೋಪಗಳನ್ನು ಮಾಡಿದ್ದಾರೆ. ಗಿರೀಶ್ ಮಟ್ಟಣ್ಣನವರ್ ಅವರಿಗೆ ಶವಗಳ ಸ್ಥಳ ತಿಳಿದಿತ್ತೆಂದು ಹಾಗೂ ಚಿನ್ನಯ್ಯ ಸ್ಥಳ ಬದಲಿಸಿದ್ದಾನೆಂದು ಹೇಳಿದ್ದಾರೆ. ಸ್ವಾಮೀಜಿಯೊಬ್ಬರ ಪಾತ್ರವೂ ಇದೆ ಎಂದು ಸುಳಿವು ನೀಡಿದ್ದಾರೆ.
Read Full Story

03:51 PM (IST) Aug 31

ಗಣೇಶ ವಿಸರ್ಜನೆ ವೇಳೆ ತಲೆಮೇಲೆ ಪಟಾಕಿ ಹೊತ್ತು ಸಿಡಿಸಿದವನ ಮೇಲೆ ಕೇಸ್ ಹಾಕಿದ ಪೊಲೀಸರು!

ಹೊಸಪೇಟೆಯಲ್ಲಿ ಗಣೇಶ ವಿಸರ್ಜನೆ ವೇಳೆ ಯುವಕನೊಬ್ಬ ತಲೆಯ ಮೇಲೆ ಪಟಾಕಿ ಬಾಕ್ಸ್ ಇಟ್ಟು ಸಿಡಿಸಲು ಯತ್ನಿಸಿದ ಘಟನೆ ನಡೆದಿದೆ. ಪೊಲೀಸರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
Read Full Story

03:07 PM (IST) Aug 31

7ನೇ ಕ್ಲಾಸ್ ಹುಡುಗಿಗೂ 8ನೇ ಕ್ಲಾಸ್‌ ಹುಡುಗನಿಗೂ ಲವ್, ಬಾಲಾಪರಾಧ ಮಾಡಿ ಬಾಲಕಿ ಈಗ ಗರ್ಭಿಣಿ!

ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳ ನಡುವೆ ನಡೆದ ಘಟನೆಯಲ್ಲಿ ಒಬ್ಬ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Read Full Story

02:01 PM (IST) Aug 31

ಬೇರೆ ಧರ್ಮದವರು ಡಜನ್‌ಗಟ್ಟಲೇ ಮಕ್ಕಳು ಮಾಡ್ಕೊಂಡ್ರೆ ಕಾಂಗ್ರೆಸ್ ಖುಷಿ; ಹಿಂದೂಗಳಿಗೆ ಭಾಗವತ್ ಕರೆ ಕೊಟ್ಟರೆ ಬ್ಯಾನಿ ಆಗುತ್ತೆ - ಜೋಶಿ ಕಿಡಿ

ಕಾಂಗ್ರೆಸ್ ಪಕ್ಷವು ಬೇರೆ ಧರ್ಮದವರ ಜನಸಂಖ್ಯಾ ಬೆಳವಣಿಗೆಯನ್ನು ಒಪ್ಪಿಕೊಂಡರೂ, ಹಿಂದೂಗಳಿಗೆ ಮಕ್ಕಳನ್ನು ಹೊಂದುವ ಬಗ್ಗೆ ಸಲಹೆ ನೀಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಟೀಕಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

Read Full Story

01:35 PM (IST) Aug 31

'ಡಿಜೆ ನಿಷೇಧಕ್ಕೆ ಉತ್ಸಾಹ ಕಡಿಮೆ ಆಗಲ್ಲಾರೀ..' ಮನೆ ಪಾತ್ರೆ, ನೀರಿನ ಡ್ರಮ್ ಬಳಸಿ ತಮಟೆ, ಸರ್ಕಾರದ ವಿರುದ್ಧ ಕೋಲಾರ ಯುವಕರ ವಿನೂತನ ಪ್ರತಿಭಟನೆ

ಕೋಲಾರದಲ್ಲಿ ಗಣೇಶ ವಿಸರ್ಜನೆ ವೇಳೆ ಡಿಜೆ ನಿಷೇಧಕ್ಕೆ ಯುವಕರಿಂದ ವಿನೂತನ ಪ್ರತಿಭಟನೆ. ಮನೆ ಪಾತ್ರೆಗಳಿಂದ ತಮಟೆ ವಾದನ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.
Read Full Story

01:14 PM (IST) Aug 31

'ಕಾಂಗ್ರೆಸ್‌ನ ಅವನತಿ ಇಲ್ಲಿಂದಲೇ ಪ್ರಾರಂಭ..' ಚಾಮುಂಡೇಶ್ವರಿ ತಾಯಿ ದರ್ಶನ ಬಳಿಕ ಆರ್ ಅಶೋಕ್ ವಾಗ್ದಾಳಿ!

ಕಾಂಗ್ರೆಸ್ ಸರ್ಕಾರ ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡುತ್ತಿದೆ, ಚಾಮುಂಡೇಶ್ವರಿ ದೇವಾಲಯವನ್ನು ಟೂಲ್‌ಕಿಟ್ ಆಗಿ ಬಳಸುತ್ತಿದೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ. ದಸರಾ ಉದ್ಘಾಟಕರಾಗಿ ಭಾನು ಮುಸ್ತಾಕ್ ಆಯ್ಕೆ ವಿಚಾರವಾಗಿಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

12:38 PM (IST) Aug 31

ವಿದ್ಯುತ್ ಕಳ್ಳತನ ಪ್ರಕರಣ; ಹೈಕೋರ್ಟ್ ಮಹತ್ವದ ತೀರ್ಪು

ವಿದ್ಯುತ್ ಕಳ್ಳತನ ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಮಾತ್ರ ನಡೆಸಬೇಕೆಂದು ಹೈಕೋರ್ಟ್ ತೀರ್ಪು ನೀಡಿದೆ. ಬೀದರ್ ನಿವಾಸಿಗಳೊಬ್ಬರ ಅರ್ಜಿಯನ್ನು ವಜಾಗೊಳಿಸಿದೆ

Read Full Story

12:37 PM (IST) Aug 31

ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಮತ್ತೊಂದು ತಿರುವು, ಕಾರಲ್ಲಿ ಕಿಡ್ನಾಪ್ ಮಾಡಿದ್ದು ನೋಡಿದ್ದಾಗಿ ಮಹಿಳೆ ದೂರು

ಧರ್ಮಸ್ಥಳದ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಪ್ರತ್ಯಕ್ಷದರ್ಶಿಯಾಗಿ ಮುಂದೆ ಬಂದು SITಗೆ ದೂರು ನೀಡಿದ್ದಾರೆ. ಚಿಕ್ಕಕೆಂಪಮ್ಮ ಎಂಬ ಮಹಿಳೆ ಹುಡುಗಿಯೊಬ್ಬಳನ್ನು ಅಪಹರಿಸುವುದನ್ನು ಕಣ್ಣಾರೆ ಕಂಡಿದ್ದಾಗಿ ಹೇಳಿದ್ದಾರೆ. ಈ ಹೊಸ ಸಾಕ್ಷ್ಯ ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಇದೆ.
Read Full Story

11:27 AM (IST) Aug 31

Raichur - ಮಂಚಕ್ಕೆ ಬರಲು ನಿರಾಕರಿಸಿದ ಪತ್ನಿಯ ಕತ್ತು ಸೀಳಿ ಕೊಂದ ಗಂಡ ಯಲ್ಲಪ್ಪ

Raichur Crime News: ರಾಯಚೂರಿನಲ್ಲಿ ಪತ್ನಿಯನ್ನು ಕೊ*ಲೆಗೈದ ಪತಿಯ ಬಂಧನ. ಮಂಚಕ್ಕೆ ಬರಲು ನಿರಾಕರಿಸಿದ್ದಕ್ಕೆ ಕುಡುಗೋಲಿನಿಂದ ಕೊ*ಲೆ. ಮೂರು ಮಕ್ಕಳ ತಾಯಿ ಬರ್ಬರವಾಗಿ ಕೊ*ಲೆಯಾದ ಘಟನೆ.

Read Full Story

11:21 AM (IST) Aug 31

ಗಣೇಶನ ಶೋಭಯಾತ್ರೆ - ಬೆಂಗಳೂರಿನಲ್ಲಿ ಸಂಚಾರ ಬದಲಾವಣೆ, ಎಲ್ಲೆಲ್ಲ ಮಾರ್ಗ ಬಂದ್‌?

ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಮೆರವಣಿಗೆ ಹಿನ್ನೆಲೆಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಚೆಪ್ಪೋ ವರದಿಯ ಪ್ರಕಾರ, ಸಾಂಪ್ರದಾಯಿಕ ವಸ್ತುಗಳ ಆರ್ಡರ್‌ಗಳಲ್ಲಿ ಏರಿಕೆ ಕಂಡುಬಂದಿದೆ.
Read Full Story

11:18 AM (IST) Aug 31

'ನನಗೆ ಏನೇ ಆದರೂ ಮಗಳೇ ಕಾರಣ, ಹಾಗೆ ಮಾಡಿದ್ರೆ ದೇಶಾಂತರ ಹೋಗ್ತೀನಿ'-ಮಗಳ ಕಾಲೆಳೆದ Actress Sudha Rani

Actress Sudha Rani Daughter Nidhi Education: ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ಸುಧಾರಾಣಿಗೆ ಬಿಪಿ, ಶುಗರ್‌ ಏನೇ ಸಮಸ್ಯೆ ಬಂದರೂ ಅದಕ್ಕೆ ಅವರ ಮಗಳೇ ಕಾರಣವಂತೆ, ಬರುವ ಡಿಸೆಂಬರ್‌ಗೆ ದೇಶಾಂತರ ಹೋಗೋ ಯೋಚನೆಯೂ ಇದೆಯಂತೆ. ಯಾಕೆ ಎಂದು ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

 

Read Full Story

09:53 AM (IST) Aug 31

Today Top News - ಗಂಟಲಿನಲ್ಲಿ ಎದೆಹಾಲು ಸಿಲುಕಿ ಮಗು ಸಾವು, ಅಪ್ರಾಪ್ತೆ ಮದುವೆ, ಮೈಸೂರಿನಲ್ಲಿ ನಿಗೂಢ ವ್ಯಕ್ತಿ

ಬೆಳಗಾವಿಯಲ್ಲಿ ಬಾಲ್ಯ ವಿವಾಹ, ತುಮಕೂರಿನಲ್ಲಿ ಸ್ವಾಮೀಜಿಗಳ ಭೇಟಿ, ಮೈಸೂರಿನಲ್ಲಿ ಎಂಜಿನ್ ಆಯಿಲ್ ಕುಡಿಯುವ ವ್ಯಕ್ತಿ, ಚುನಾವಣಾ ಮೀಸಲಾತಿಯ ಕೋರ್ಟ್ ಸೂಚನೆ ಹಾಗೂ ಪಾಲಕ್ಕಾಡಿನಲ್ಲಿ ಶಿಶು ಸಾವು – ಒಂದೇ ದಿನದಲ್ಲಿ ನಡೆದ ಐದು ವಿಚಿತ್ರ ಘಟನೆಗಳ ಸಂಕ್ಷಿಪ್ತ ವರದಿ.
Read Full Story

09:19 AM (IST) Aug 31

ತುಮಕೂರು - ಸಿಎಂ ಬಳಿಕ ಇಂದು ಕೆಎನ್ ರಾಜಣ್ಣ ಭೇಟಿಗೆ ಮುಂದಾದ 15ಕ್ಕೂ ಹೆಚ್ಚು ಮಠಾಧೀಶರು!

ಸಚಿವ ಸ್ಥಾನ ಕಳೆದುಕೊಂಡಿರುವ ಕೆ.ಎನ್. ರಾಜಣ್ಣ ಅವರಿಗೆ ಬೆಂಬಲ ಸೂಚಿಸಲು 15ಕ್ಕೂ ಹೆಚ್ಚು ಮಠಾಧೀಶರು ಇಂದು ಅವರ ಮನೆಗೆ ಭೇಟಿ ನೀಡಲಿದ್ದಾರೆ. ನ್ಯಾಯ ಒದಗಿಸುವಂತೆ ಹೈಕಮಾಂಡ್‌ಗೆ ಮನವಿ ಮಾಡಲಿದ್ದಾರೆ. ಈ ಭೇಟಿಯ ನಂತರ ಸ್ವಾಮೀಜಿಗಳು ಸುದ್ದಿಗೋಷ್ಠಿ ನಡೆಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿದ್ದಾರೆ.
Read Full Story

08:56 AM (IST) Aug 31

'ನಿಸ್ಸಾರ್‌ರಿಗೆ ಬಿಜೆಪಿ ಕುಂಕುಮ ಹಚ್ಚಲು ಹೇಳಿತ್ತಾ?..' ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿವಾದ, ಸಚಿವ ರಾಮಲಿಂಗಾರೆಡ್ಡಿ ಕಿಡಿ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ಬಿಜೆಪಿ ಅನಗತ್ಯ ಅಪಪ್ರಚಾರ ಮಾಡುತ್ತಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಹಿಂದೂಗಳಿಗೆ ಸೇರಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬಿಜೆಪಿಯವರಿಗೆ ಚೇಷ್ಟೆ ಮಾಡದಿದ್ದರೆ ನಿದ್ದೆ ಬರಲ್ಲ ಎಂದು ಕಿಡಿ

Read Full Story

08:37 AM (IST) Aug 31

ಭರ್ಜರಿ ಮುಂಗಾರು - ಈ ಬಾರಿ ಗುರಿ ಮೀರಿ ಬಿತ್ತನೆ ಸಾಧ್ಯತೆ

ರಾಜ್ಯದಲ್ಲಿ ಉತ್ತಮ ಮಳೆಯಿಂದಾಗಿ ಬಿತ್ತನೆ ಚುರುಕಾಗಿದ್ದು, ಕೃಷಿ ಇಲಾಖೆ ಅಂದಾಜಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಗುರಿಗಿಂತಲೂ ಹೆಚ್ಚಿನ ಬಿತ್ತನೆಯಾಗಿದ್ದು, ಒಟ್ಟಾರೆ ಬಿತ್ತನೆ ಗುರಿ ಮೀರುವ ಸಾಧ್ಯತೆ ಇದೆ.
Read Full Story

08:21 AM (IST) Aug 31

15 ವರ್ಷದ ಬಾಲೆಯೊಂದಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷನ ವಿವಾಹ; ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲಿ ಅಮಾನವೀಯ ಘಟನೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಶಿ ಕಾಲಿಮಣಿ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾದ ಆರೋಪದ ಮೇಲೆ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. 

Read Full Story

08:11 AM (IST) Aug 31

ಸ್ಥಳೀಯ ಸಂಸ್ಥೆ ಚುನಾವಣೆ - ಅವಧಿಯೊಳಗೆ ಮೀಸಲು ಪಟ್ಟಿ ಪ್ರಕಟಣೆಗೆ ಕೋರ್ಟ್ ಸೂಚನೆ

 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ನಿಗದಿತ ಅವಧಿಯೊಳಗೆ ಪ್ರಕಟಿಸದಿದ್ದರೆ ಹಾಲಿ ರೋಸ್ಟರ್‌ ಪ್ರಕಾರವೇ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಎಚ್ಚರಿಸಿದೆ.

Read Full Story

07:56 AM (IST) Aug 31

ಸಿಎಂ ಸಿದ್ದರಾಮಯ್ಯ ಇಂದಿನಿಂದ ಮೂರು ದಿನ ಮೈಸೂರು ಪ್ರವಾಸ, ರಾಷ್ಟ್ರಪತಿಗಳ ಸ್ವಾಗಕ್ಕೆ ಸಜ್ಜು

ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೈಸೂರು ಪ್ರವಾಸದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. 

Read Full Story

07:50 AM (IST) Aug 31

ಭಾರತದ ಸದೃಢ ಆರ್ಥಿಕತೆಗೆ ನೇತಾಜಿ ಬುನಾದಿ - ಡಾ.ಜಿ.ಪರಮೇಶ್ವರ್‌

ಲಕ್ಷಾಂತರ ಜನರ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯ ಹೇಗೆ ಕಾಪಾಡಿಕೊಳ್ಳಬೇಕು. ಸ್ವತಂತ್ರ ಭಾರತವನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಇಂದಿನ ಯುವಜನತೆ ಯೋಚನೆ ಮಾಡುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಬೇಸರ ವ್ಯಕ್ತಪಡಿಸಿದರು.

Read Full Story

More Trending News