Published : Jun 28, 2025, 07:19 AM ISTUpdated : Jun 28, 2025, 11:27 PM IST

Karnatata Latest News Live: ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿಗೂ ಲಂಚ, ನಾಚಿಕೆಗೇಡು - ಸಂಸದ ಬಸವರಾಜ ಬೊಮ್ಮಾಯಿ

ಸಾರಾಂಶ

ಬೆಂಗಳೂರು (ಜೂ.27): ಸಚಿವ ಕೆ.ಎನ್‌. ರಾಜಣ್ಣ ರಾಜಕೀಯ ಬೆಳವಣಿಗೆ ಆಗಬಹುದು ಎಂದು ಹೇಳಿದ್ದಾರೆಯೇ ಹೊರತು ಹೀಗೆಯೇ ಆಗುತ್ತದೆ ಎಂದು ಹೇಳಿಲ್ಲ. ನೀವು ಊಹೆ ಮಾಡಿಕೊಂಡು ಏನೇನೋ ಸುದ್ದಿ ಮಾಡಿದರೆ ಹೇಗೆ? ರಾಜಣ್ಣ ಅವರ ಹೇಳಿಕೆಯನ್ನು ನಿರ್ಲಕ್ಷ್ಯ ಮಾಡುವುದು ಉತ್ತಮ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ರಾಜಕೀಯದಲ್ಲಿ ಕಾಂಗ್ರೆಸ್‌ ಹಾಗೂ ಸರ್ಕಾರದಲ್ಲಿ ಆಗಬಹುದಾದದ ಬದಲಾವಣೆಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

11:27 PM (IST) Jun 28

ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿಗೂ ಲಂಚ, ನಾಚಿಕೆಗೇಡು - ಸಂಸದ ಬಸವರಾಜ ಬೊಮ್ಮಾಯಿ

ಜಿಲ್ಲೆಯ ಕೆಲವು ಕೆಪಿಎಸ್ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಮುಖ್ಯ ಶಿಕ್ಷಕರು ಲಂಚಕ್ಕೆ ಕೈಯೊಡ್ಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದರು.

Read Full Story

11:10 PM (IST) Jun 28

ತುಂಗಭದ್ರಾ ಕಾಲುವೆಗೆ ಜು.2ರಿಂದ ನ.30ರವರೆಗೆ ನೀರು - ಸಚಿವ ಶಿವರಾಜ ತಂಗಡಗಿ

ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 57 ಟಿಎಂಸಿ ನೀರಿನ ಸಂಗ್ರಹವಿದ್ದು ಜು. 2ರಿಂದ ನ. 30ರ ವರೆಗೆ ಕಾಲುವೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

Read Full Story

10:55 PM (IST) Jun 28

ಅಮೆರಿಕಗೆ ಹಾರುತ್ತಿದೆ ರಶ್ಮಿಕಾ-ದೇವರಕೊಂಡ ಜೋಡಿ, ಹೆಮ್ಮೆಯ ಕ್ಷಣಕ್ಕೆ ಕೆಲ ದಿನ ಮಾತ್ರ ಬಾಕಿ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಅಮೆರಿಕಗೆ ತೆರಳುತ್ತಿದ್ದಾರೆ. ನ್ಯೂಯಾರ್ಕ್ ತೆರಳು ಟಿಕೆಟ್ ಬುಕ್ ಆಗಿದೆ. ಆ ಸಂತಸದ ಹಾಗೂ ಹೆಮ್ಮೆ ಕ್ಷಣಕ್ಕೆ ಸಾಕ್ಷಿಯಾಗಲು ಇನ್ನು ಕೆಲವೇ ದಿನ ಮಾತ್ರ ಬಾಕಿ ಇದೆ.

Read Full Story

10:35 PM (IST) Jun 28

ಕೊಪ್ಪಳ ಜಿಲ್ಲೆಯಲ್ಲಿ ಶೇ.90 ಗಣಿಗಾರಿಕೆ ಸಕ್ರಮ - ಸಂಸದ ರಾಜಶೇಖರ ಹಿಟ್ನಾಳ

ಜಿಲ್ಲಾದ್ಯಂತ ನಡೆಯುತ್ತಿರುವ ಕಲ್ಲು, ಗ್ರಾವೆಲ್ ಮತ್ತು ಮರಳು ಗಣಿಗಾರಿಕೆ ಶೇ. 90ರಷ್ಟು ಸಕ್ರಮವಾಗಿಯೇ ಇದ್ದು, ಉಳಿದ ಶೇ. 10ರಷ್ಟು ವಿವಿಧ ಕಾರಣಗಳಿಂದ ಅಕ್ರಮವಾಗಿರಬಹುದು.

Read Full Story

10:16 PM (IST) Jun 28

ಐದು ಹುಲಿ ಸಾವು ಪ್ರಕರಣ, ಮೂವರು ಆರೋಪಿಗಳು ಅರಣ್ಯಾಧಿಕಾರಿಗಳ ಕಸ್ಟಡಿಗೆ

ಚಾಮರಾಜನಗರದಲ್ಲಿ ನಡೆದ ಐದು ಹುಲಿಗಳ ಸಾವು ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಇಂದು ಕೋರ್ಟ್‌ಗೆ ಹಾಜರುಪಡಿಸಿದದ ಅರಣ್ಯಾಧಿಕಾರಿಗಳು ತಮ್ಮ ಕಸ್ಟಡಿಗೆ ಪಡೆದಿದ್ದಾರೆ.

Read Full Story

09:36 PM (IST) Jun 28

ಕೆಸರು ಗುಂಡಿಯಲ್ಲಿ ಮಾಡಬೇಕು ಶವಸಂಸ್ಕಾರ - ಕೊಡಗಿನ ಕಣ್ವ ಬಲಮುರಿಯಲ್ಲಿ ಆತ್ಮವಿದ್ರಾವಕ ಸ್ಥಿತಿ

ಯಾವುದೇ ಧರ್ಮದಲ್ಲಾದರೂ ವ್ಯಕ್ತಿ ಸತ್ತ ಬಳಿಕ ಸಾವಿಗೂ ಗೌರವ ಸಲ್ಲಿಸಬೇಕೆಂಬ ದೃಷ್ಟಿಯಿಂದ ಗೌರವಯುತವಾದ ಶವ ಸಂಸ್ಕಾರ ಮಾಡಬೇಕು ಎನ್ನುವ ನಿಯಮವಿದೆ.

Read Full Story

09:23 PM (IST) Jun 28

ನಿಜವಾಯ್ತು 10 ತಿಂಗಳ ಹಿಂದೆ ಶೆಫಾಲಿ ಜರಿವಾಲಗೆ ಹೇಳಿದ್ದ ಹಠಾತ್ ನಿಧನದ ಕುಂಡಲಿ ಭವಿಷ್ಯ

ಶೆಫಾಲಿ ಜರಿವಾಲ ಹಠಾತ್ ನಿಧನ ಹಲವರನ್ನು ಬೆಚ್ಚಿ ಬೀಳಿಸಿದೆ. ಆದರೆ 10 ತಿಂಗಳ ಹಿಂದೆ ಶೆಫಾಲಿ ಕುಂಡಲಿ ನೋಡಿ ಇದೇ ಭವಿಷ್ಯ ನುಡಿಯಲಾಗಿತ್ತು. ಅದು ಕೂಡ ಆಕೆಯ ಎದುರಿನಲ್ಲೇ ಈ ಭವಿಷ್ಯ ಹೇಳಲಾಗಿತ್ತು. ಇದೀಗ ಈ ಭವಿಷ್ಯ ನಿಜವಾಗಿದೆ.

 

Read Full Story

08:42 PM (IST) Jun 28

ವಿಧಾನಸಭೆಗೆ 2026ರಲ್ಲಿ ಮಧ್ಯಂತರ ಚುನಾವಣೆ - ಸಂಸದ ಬೊಮ್ಮಾಯಿ ಭವಿಷ್ಯ

ರಾಜ್ಯದಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೂ ಮುಂಚೆಯೇ 2026ರಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.

Read Full Story

08:34 PM (IST) Jun 28

ಖುಲ್ಲಂ ಖುಲ್ಲಾ ಡ್ರೆಸ್‌ ಹಾಕಿ ಕಾರಿನಿಂದ ಇಳಿಯುತ್ತಿದ್ದಂತೆ ಬೀಸಿದ ಗಾಳಿ, ಮುಜುಗರಕ್ಕೀಡಾದ ನಟಿ ಖುಷಿ

ಖುಷಿ ಮುಖರ್ಜಿ ಡ್ರೆಸ್ ಇದೀಗ ಭಾರಿ ಟ್ರೆಂಡ್ ಆಗಿದೆ. ಕಾರಿನಿಂದ ಇಳಿಯುತ್ತಿದ್ದಂತೆ ಬೀಸಿದ ಗಾಳಿ ಹಲವರ ಕಣ್ಣು ತಂಪಾಗಿಸಿದೆ. ಖುಷಿ ಮುಖರ್ಜಿಯ ಹೊಸ ವಿಡಿಯೋ ಇದೀಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಹಲವರು ಸೂಪರ್ ಎಂದರೆ, ಕೆಲ ಸೆಲೆಬ್ರೆಟಿಗಳು ಇವರಿಗೆ ದಂಡ ಹಾಕಿ ಎಂದು ಸೂಚಿಸಿದ್ದಾರೆ.

 

Read Full Story

08:17 PM (IST) Jun 28

ಕಾಂಗ್ರೆಸ್‌ನಲ್ಲಿ ಕ್ರಾಂತಿ ನಡೆಯಲ್ಲ, ಎಲ್ಲ ಹೈಕಮಾಂಡ್ ನಿರ್ಧಾರ - ಸಚಿವ ಎಂ.ಬಿ.ಪಾಟೀಲ

ನಮ್ಮಲ್ಲಿ ಕ್ರಾಂತಿಗಳು ಎಲ್ಲಾ ನಡೆಯಲ್ಲ, ಕಾಂಗ್ರೆಸ್ ಸ್ವಾತಂತ್ರ್ಯ ಕ್ರಾಂತಿಯಲ್ಲಿ ಭಾಗವಹಿಸಿದೆ. ಪಕ್ಷದಲ್ಲಿ ಏನೇ ಇದ್ರೂ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

Read Full Story

07:53 PM (IST) Jun 28

ಸದ್ಯ ಕಾಂಗ್ರೆಸ್‌ನಲ್ಲಿ ಸಮಸ್ಯೆ ಇಲ್ಲ, ಯಾವ ಕ್ರಾಂತಿಯೂ ಆಗಲ್ಲ - ಸಚಿವ ಎನ್.ಎಸ್.ಬೋಸರಾಜು

ರಾಜ್ಯ ರಾಜಕಾರಣದಲ್ಲಿ ಅಥವಾ ಪಕ್ಷದಲ್ಲಿ ಸೆಪ್ಟೆಂಬರ್ ಕ್ರಾಂತಿ ಆಗುತ್ತದೆ ಎನ್ನುವ ಸಚಿವ ರಾಜಣ್ಣ ಹೇಳಿಕೆಗೆ ಬೋಸರಾಜು ಪ್ರತಿಕ್ರಿಯಿಸಿದ್ದಾರೆ.

Read Full Story

07:44 PM (IST) Jun 28

195 ಆಶಾ ಮೆಂಟರ್ಸ್‌ನ್ನು ಕಿತ್ತಾಕಿದ ಸರ್ಕಾರ - ತನ್ನ ವಚನವನ್ನು ತಾನೇ ಮರೆತ ಕಾಂಗ್ರೆಸ್

ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್‌ಎಂ) ಅಡಿ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 195 ಆಶಾ ಮೆಂಟರ್ಸ್‌ನ್ನು ಸರ್ಕಾರ ಕೆಲಸದಿಂದ ಮುಕ್ತಗೊಳಿಸಿದೆ. ಈ ಮೂಲಕ ಚುನಾವಣಾ ಪೂರ್ವದಲ್ಲಿ ನೀಡಿದ್ದ ವಚನವನ್ನು ಕಾಂಗ್ರೆಸ್‌ ತಾನೇ ಮರೆತಂತಾಗಿದೆ.

Read Full Story

07:30 PM (IST) Jun 28

ಸಂವಿಧಾನದಿಂದ ಸಾಮಾನ್ಯ ಹುಡುಗನಾದ ನಾನೂ ಶಾಸಕನಾಗಿದ್ದೇನೆ - ಪ್ರದೀಪ್ ಈಶ್ವರ್

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಕ್ಷೇತ್ರದ ಎಲ್ಲ ವರ್ಗಗಳ ಜನರೇ ತಮ್ಮ ಭವಿಷ್ಯವಾಗಿದ್ದು ಅವರಿಗೆ ಮೂಲಭೂತ ಸೌಲಭ್ಯ ಒದಗಿಸುವುದೇ ತಮ್ಮ ಗುರಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

Read Full Story

07:25 PM (IST) Jun 28

ಎರಡ್ಮೂರು ಪಟ್ಟು ಹಣ ಕೇಳೋ ಆಟೋ ಚಾಲಕರ ನಟ್ಟು-ಬೋಲ್ಟು ಟೈಟ್‌ಗೆ ಮುಂದಾದ ರಾಮಲಿಂಗಾ ರೆಡ್ಡಿ

ಬೆಂಗಳೂರಿನಲ್ಲಿ ಆಟೋ ಚಾಲಕರು ಹೆಚ್ಚಿನ ದರ ಕೇಳುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ. 

Read Full Story

07:02 PM (IST) Jun 28

ಶೆಫಾಲಿ ಜರಿವಾಲ ತಂಗಿ ಶಿವಾನಿ ಸಿನಿಮಾ ಇಂಡಸ್ಟ್ರಿಯಿಂದ ದೂರವಿರುವುದೇಕೆ?

ನಟಿ, ಮಾಡೆಲ್ ಶೆಫಾಲಿ ಜರಿವಾಲ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶೆಫಾಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರಿ ಸದ್ದು ಮಾಡಿದ್ದಾರೆ. ಆದರೆ ಆಕೆಯ ಕಿರಿಯ ತಂಗಿ ಶಿವಾನಿ ಜರಿವಾಲ ಸಿನಿಮಾದಿಂದ ದೂರವಿದ್ದಾರೆ. ಶೆಫಾಲಿ ತಂಗಿ ಏನು ಮಾಡುತ್ತಿದ್ದಾರೆ?

 

Read Full Story

06:20 PM (IST) Jun 28

Tumakuru - ಗಂಡನ ಶವವನ್ನ ಗೋಣಿ ಚೀಲದಲ್ಲಿ ತುಂಬಿ 30 ಕಿಮೀ ಸಾಗಿಸಿದ ಸುಮಂಗಳಾ!

ಪ್ರಿಯಕರನ ಜೊತೆ ಸೇರಿ ಪತ್ನಿಯೊಬ್ಬಳು ಗಂಡನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಶವವನ್ನು ಗೋಣಿ ಚೀಲದಲ್ಲಿ ತುಂಬಿ 30 ಕಿ.ಮೀ. ದೂರ ಸಾಗಿಸಿ ಬಾವಿಗೆ ಎಸೆದಿದ್ದಾರೆ. ಪೊಲೀಸರ ತನಿಖೆಯಲ್ಲಿ ಅಸಲಿ ಸತ್ಯ ಬಯಲಾಗಿದೆ.

Read Full Story

06:07 PM (IST) Jun 28

ಬೆಂಗಳೂರು ಮೆಟ್ರೋದಲ್ಲಿ ಹೊಸ ಡಿಜಿಟಲ್ ಯುಗ, ಟಿಕೆಟ್‌ ಬುಕ್ಕಿಂಗ್ ಇನ್ನಷ್ಟು ಸುಲಭ!

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಒಂದೇ ತಾಣದಲ್ಲಿ ಮೆಟ್ರೋ, ಬಸ್ ಹಾಗೂ ಆಟೋ ಟಿಕೆಟ್ ಬುಕ್ ಮಾಡುವ ಸೌಲಭ್ಯ ಲಭ್ಯವಾಗಲಿದೆ. ONDC ಜೊತೆಗಿನ ಏಕೀಕರಣದ ಮೂಲಕ ಮೊಬಿಲಿಟಿ ಅಪ್ಲಿಕೇಶನ್‌ಗಳಲ್ಲಿ ಈ ಸೇವೆ ಲಭ್ಯವಾಗಲಿದ್ದು, ಮನೆ-ಮನೆಗೆ ಪ್ರಯಾಣ ಸುಗಮವಾಗಲಿದೆ.
Read Full Story

06:04 PM (IST) Jun 28

ತನ್ನ ಬಹುದೊಡ್ಡ ಆಸೆಯಂತೆ ದುರಂತ ಅಂತ್ಯಕಂಡ ಶೆಫಾಲಿ ಜರಿವಾಲ, ಕಣ್ಣೀರಿಟ್ಟ ಫ್ಯಾನ್ಸ್

ನಟಿ ಶೆಫಾಲಿ ಜರಿವಾಲ ನಿಧನ ಸುದ್ದಿ ಸಿನಿ ರಂಗ ಮಾತ್ರವಲ್ಲ ಭಾರತವನ್ನೇ ಬೆಚ್ಚಿ ಬೀಳಿಸಿದೆ. 42ರ ಹರೆಯದ ನಟಿ ಫಿಟ್ ಆಗಿದ್ದರೂ ಹಠಾತ್ ನಿಧನ ಆತಂಕ ಹೆಚ್ಚಿಸಿದೆ. ಇದೀಗ ಈಕೆಯ ತನ್ನ ಬಹುದೊಡ್ಡ ಕನಸು, ಆಸೆಯನ್ನು ಹೇಳಿಕೊಂಡಿದ್ದಳು.

Read Full Story

05:31 PM (IST) Jun 28

Lakme Brand - ಲಕ್ಷ್ಮೀಗೂ, ಲ್ಯಾಕ್ಮೆಗೂ, ನೆಹರುಗೂ ಇದೆ ಗಾಢ ಸಂಬಂಧ! ಬ್ಯೂಟಿ ಕ್ರೀಮ್​ ರೋಚಕ ಸ್ಟೋರಿ..

ಆರ್​ಜೆಡಿ ಟಾಟಾ ಅವರು ಹುಟ್ಟುಹಾಕಿರುವ ಭಾರತದ ಮೊದಲ ಸ್ವದೇಶಿ ಬ್ಯೂಟಿ ಬ್ರ್ಯಾಂಡ್​ ಲ್ಯಾಕ್ಮೆಗೂ, ಲಕ್ಷ್ಮೀಗೂ, ಆಗಿನ ಪ್ರಧಾನಿ ಜವಾಹರ್​ಲಾಲ್​ ನೆಹರೂ ಇದೆ ಸಂಬಂಧ. ಇದರ ಕುತೂಹಲದ ಸ್ಟೋರಿ ಇಲ್ಲಿದೆ...

 

Read Full Story

05:07 PM (IST) Jun 28

ಭಾರತದ 2ನೇ ಟಿ20 ವಿಶ್ವಕಪ್ ವಿಜಯಕ್ಕೆ ಒಂದು ವರ್ಷದ ಸಂಭ್ರಮ! ನೆನಪಿದೆಯಾ ಗೇಮ್ ಚೇಂಜ್ ಕ್ಷಣ

2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವಕಪ್ ಗೆದ್ದ ರೋಚಕ ಕ್ಷಣಗಳನ್ನು ಈ ಲೇಖನವು ವಿವರಿಸುತ್ತದೆ. 

Read Full Story

04:56 PM (IST) Jun 28

Jackpot for husband - ಪತ್ನಿ ಖುಷಿಯಾಗಿದ್ದರೆ ಸಿಗಲಿದೆ ಪತಿಗೆ ಶೇಕಡಾ 80ರಷ್ಟು ಸಂಪತ್ತು! ಏನಿದು?

ಪುರುಷನ ಸಂಪತ್ತಿನ ಶೇಕಡಾ 80 ಅವನ ಹೆಂಡತಿಯ ನಗುವಿನಲ್ಲಿ ಅಡಗಿದೆ ಎಂಬ ಮಾತೊಂದು ಇದೆ. ಅದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗ್ತಿದೆ. ಏನು ಈ ಮಾತಿನ ಅರ್ಥ?

 

Read Full Story

04:41 PM (IST) Jun 28

ತಿಮ್ಮನ ಮೊಟ್ಟೆಗಳು ವಿಮರ್ಶೆ - ಮಲೆನಾಡಿನ ಮಳೆ, ಸರ್ಪ, ಮತ್ತು ಮನುಷ್ಯನ ಬದುಕಿನ ಚಿತ್ರಣ

ಮಲೆನಾಡಿನ ಕಾಡುಗಳಲ್ಲಿನ ಕಾಳಿಂಗ ಸರ್ಪಗಳ ಸಂರಕ್ಷಣೆಗೆಂದು ಬಂದ ರೀಸರ್ಚ್‌ ತಂಡವೊಂದು ತಿಮ್ಮನಿಗೆ ಮುಖಾಮುಖಿಯಾಗುತ್ತದೆ. ಕಾಳಿಂಗ ಸರ್ಪದ ಮೊಟ್ಟೆಗಳನ್ನು ತೋರಿಸುವ ಟಾಸ್ಕ್‌ ಕೊಡುತ್ತದೆ.

Read Full Story

04:27 PM (IST) Jun 28

ಕೈಗೆಟುಕುವ ದರದಲ್ಲಿ ಸ್ಪೋರ್ಟ್ ಬೈಕ್, ಹೊಸ ಟಿವಿಎಸ್ ಅಪಾಚೆ 160 ಬೈಕ್ ಲಾಂಚ್

ಟಿವಿಎಸ್ ಅಪಾಚೆ ಹಲವರ ನೆಚ್ಚಿನ ಬೈಕ್, ಸ್ಪೋರ್ಟ್ ಬೈಕ್ ಇಷ್ಟುಪಡುವ ಮಂದಿ ಟಿವಿಎಸ್ ಅಪಾಚೆ ಖರೀದಿಸಲು ಬಯಸುತ್ತಾರೆ. ಇದೀಗ ಹೊಸ ಫೀಚರ್‌ನೊಂದಿಗೆ ಟಿವಿಎಸ್ ಅಪಾಚೆ 160 ಬೈಕ್ ಬಿಡುಗಡೆಯಾಗಿದೆ. ಕೈಗೆಟುಕುವ ದರದಲ್ಲಿ ಬೈಕ್ ಲಾಂಚ್ ಮಾಡಲಾಗಿದೆ.

Read Full Story

04:15 PM (IST) Jun 28

ರಿಷಭ್ ಪಂತ್‌ಗೆ ವಿಶೇಷ ಮನವಿ ಮಾಡಿದ ರವಿಚಂದ್ರನ್ ಅಶ್ವಿನ್!

ಭಾರತ ತಂಡದ ಬ್ಯಾಟಿಂಗ್‌ ಅವಧಿ ವಿಸ್ತರಣೆಗೆ ಹೆಚ್ಚಿನ ಗಮನ ಹರಿಸಬೇಕು ಮತ್ತು ರಿಷಭ್ ಪಂತ್ ತಮ್ಮ ಶತಕಗಳನ್ನು ದ್ವಿಶತಕಗಳನ್ನಾಗಿ ಪರಿವರ್ತಿಸಬೇಕೆಂದು ಆರ್. ಅಶ್ವಿನ್ ಸಲಹೆ ನೀಡಿದ್ದಾರೆ. ಕೆಳ ಕ್ರಮಾಂಕ ಬಲಿಷ್ಠವಾಗಿಲ್ಲದಿದ್ದಾಗ ಪಂತ್ ಹೆಚ್ಚಿನ ಕೊಡುಗೆ ನೀಡಬೇಕು ಎಂದು ಅವರು ಹೇಳಿದ್ದಾರೆ.
Read Full Story

03:44 PM (IST) Jun 28

ಎಂಎನ್‌ಸಿ ಕಂಪನಿಯಲ್ಲಿದ್ದ ಮಹಿಳಾ ಉದ್ಯೋಗಿ ಶವ ಪಿಜಿಯಲ್ಲಿ ಪತ್ತೆ, ಬಾಯ್‌ಫ್ರೆಂಡ್ ವಶಕ್ಕೆ

29 ವರ್ಷದ ಯುವತಿ ಪ್ರತಿಷ್ಠಿತ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ಯುವತಿ ತಂಗಿದ್ದ ಪಿಜಿ ಕೋಣೆಯಲ್ಲಿ ಯುವತಿ ಶವ ಪತ್ತೆಯಾಗಿದೆ.

 

Read Full Story

03:40 PM (IST) Jun 28

ಬೆಂಗಳೂರಲ್ಲಿ ಜಾವೆಲಿನ್‌ ಥ್ರೋ ಸ್ಪರ್ಧೆ ನೋಡುವ ಅಭಿಮಾನಿಯ ಆಸೆ ಈಡೇರಿಸಿದ ನೀರಜ್‌ ಚೋಪ್ರಾ!

ತಮಿಳುನಾಡಿನ ರಂಜಿತ್ ಎಂಬ ಅಭಿಮಾನಿಯ ಬಯಕೆಯನ್ನು ಈಡೇರಿಸಿದ ನೀರಜ್ ಚೋಪ್ರಾ, ಬೆಂಗಳೂರಿನಲ್ಲಿ ನಡೆಯಲಿರುವ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಎಸೆತ ಸ್ಪರ್ಧೆಗೆ ವಿಐಪಿ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಜುಲೈ 5 ರಂದು ನಡೆಯಲಿರುವ ಈ ಕ್ರೀಡಾಕೂಟ.

Read Full Story

02:03 PM (IST) Jun 28

ಭಾರತ ಎದುರಿನ ಎರಡನೇ ಟೆಸ್ಟ್‌ಗೆ ಮಾರಕ ವೇಗಿ ಇಂಗ್ಲೆಂಡ್ ಸೇರ್ಪಡೆ, ಆದ್ರೆ ಆಡೋದೇ ಡೌಟ್!

ಬರ್ಮಿಂಗ್‌ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು, ಮಾರಕ ವೇಗಿ ಜೋಫ್ರಾ ಆರ್ಚರ್ ತಂಡ ಕೂಡಿಕೊಂಡಿದ್ದಾರೆ. ಆದರೆ ಆರ್ಚರ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುತ್ತಾರಾ ಎನ್ನುವುದಕ್ಕೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

 

Read Full Story

02:02 PM (IST) Jun 28

ಬೆಳೆ ವಿಮೆ ಪಾವತಿಗೆ ಒಂದೇ ವಾರ ಟೈಂ - ರೈತರ ಆಕ್ಷೇಪ!

ಮುಂಗಾರು ಹಂಗಾಮಿನ ಬೆಳೆ ವಿಮೆ ಪಾವತಿಗೆ ತೋಟಗಾರಿಕಾ ಇಲಾಖೆ ನೀಡಿರುವ ಕಡಿಮೆ ಅವಧಿಯಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೂ. 30 ಕೊನೆಯ ದಿನವಾಗಿರುವುದರಿಂದ ಅವಧಿ ವಿಸ್ತರಣೆಗೆ ಒತ್ತಾಯಿಸಿದ್ದಾರೆ.

Read Full Story

01:45 PM (IST) Jun 28

ಜೂನ್‌ನಲ್ಲೇ ಕೆಆರ್‌ಎಸ್ ಜಲಾಶಯ ಭರ್ತಿ - ಇತಿಹಾಸದಲ್ಲೇ ಪ್ರಥಮ!

ಕಾವೇರಿ ಕಣಿವೆಯಲ್ಲಿ ಭಾರೀ ಮಳೆಯಿಂದಾಗಿ ಕೃಷ್ಣರಾಜಸಾಗರ ಅಣೆಕಟ್ಟು ಜೂನ್‌ನಲ್ಲೇ ಭರ್ತಿಯಾಗಿದ್ದು, ಜೂ. 30 ರಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ. ಜೂನ್‌ನಲ್ಲಿ ಕೆಆರ್‌ಎಸ್ ಭರ್ತಿ ಮತ್ತು ಬಾಗಿನ ಅರ್ಪಣೆ ಇದೇ ಮೊದಲು.
Read Full Story

01:44 PM (IST) Jun 28

ಬ್ರೇಕಪ್‌ ಆದ್ಮೇಲೂ Bigg Boss ಮನೇಲಿ X ಬಾಯ್‌ಫ್ರೆಂಡ್‌ನ ಹೊಸ ಲವ್‌ಸ್ಟೋರಿ ನೋಡಿ ಖುಷಿಪಟ್ಟಿದ್ದ ನಟಿ!

ಬ್ರೇಕಪ್‌ ಆದ್ಮೇಲೆ ತನ್ನ ಬಾಯ್‌ಫ್ರೆಂಡ್‌ ಇನ್ನೊಂದು ಹುಡುಗಿ ಜೊತೆ ಚೆನ್ನಾಗಿರೋದು ನೋಡಿ ಈ ಬಿಗ್‌ ಬಾಸ್‌ ಸ್ಪರ್ಧಿ  ಖುಷಿಪಟ್ಟಿದ್ದರು. 

Read Full Story

01:43 PM (IST) Jun 28

ತಾಯಿಯ ಜೊತೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಪ್ರಖ್ಯಾತ ಟಿವಿ ನಿರೂಪಕಿ ಆತ್ಮಹತ್ಯೆ!

ಪ್ರಖ್ಯಾತ ಟಿವಿ ನಿರೂಪಕಿತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐದು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದ ಅವರು ತಾಯಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read Full Story

01:32 PM (IST) Jun 28

'ನಾನು ರಾಜಕೀಯಕ್ಕೆ ಬಂದಾಗ ಅವರಿನ್ನೂ ಹುಟ್ಟಿರಲಿಲ್ಲ..; ಬಿಜೆಪಿ ಮಾಜಿ ಶಾಸಕನ ವಿರುದ್ಧ ಕಾಂಗ್ರೆಸ್ ಶಾಸಕ ಕಿಡಿ

ಮೊಳಕಾಲ್ಮುರು ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಲಾಯಿತು. ಶಾಸಕ ಎನ್.ವೈ.ಗೋಪಾಲಕೃಷ್ಣ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಧ್ಯಮಗಳ ಮುಂದೆ ಶೀಘ್ರದಲ್ಲೇ ಕಡತ ಬಿಡುಗಡೆ ಮಾಡುವುದಾಗಿ ತಿಳಿಸಿದರು.
Read Full Story

01:22 PM (IST) Jun 28

ಚಾಮರಾಜನಗರದಲ್ಲಿ ಐದು ಹುಲಿಗಳ ನಿಗೂಢ ಸಾವು, ವಿಷ ಉಣಿಸಿದ ಮೂವರ ಬಂಧನ

ಚಾಮರಾಜನಗರದಲ್ಲಿ ಐದು ಹುಲಿಗಳ ನಿಗೂಢ ಸಾವು ಸಂಭವಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ವಿಷಪೂರಿತ ಮಾಂಸ ತಿಂದು ಹುಲಿಗಳು ಸಾವನ್ನಪ್ಪಿವೆ ಎಂಬ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ.
Read Full Story

01:12 PM (IST) Jun 28

ಹೊಸಬಾಳೆ ಹೇಳಿಕೆ ಬಗ್ಗೆ ಮೋದಿ ನಿಲುವೇನು ಸ್ಪಷ್ಟಪಡಿಸಲಿ ? - ಸಿಎಂ ಸಿದ್ದರಾಮಯ್ಯ ಆಗ್ರಹ

ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ತೆಗೆದುಹಾಕುವಂತೆ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ. 

Read Full Story

12:59 PM (IST) Jun 28

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಚಿಕ್ಕಮಗಳೂರಿನಿಂದ ಹೊಸ ರೈಲು!

ಚಿಕ್ಕಮಗಳೂರಿನಿಂದ ತಿರುಪತಿಗೆ ನೂತನ ವಾರದ ರೈಲು ಸಂಚಾರ ಆರಂಭವಾಗಲಿದೆ. ಮಲೆನಾಡು, ತುಮಕೂರು, ಬೆಂಗಳೂರು ಮತ್ತು ಕೋಲಾರ ಭಾಗದ ಭಕ್ತರಿಗೆ ಇದು ಸಿಹಿಸುದ್ದಿಯಾಗಿದೆ. ಪ್ರತಿ ಗುರುವಾರ ತಿರುಪತಿಯಿಂದ ಮತ್ತು ಶುಕ್ರವಾರ ಚಿಕ್ಕಮಗಳೂರಿನಿಂದ ರೈಲು ಸಂಚರಿಸಲಿದೆ.
Read Full Story

12:55 PM (IST) Jun 28

ಕನಸಲ್ಲಿ ಬಂದ ಭಗವದ್ಗೀತೆ - 9 ವರ್ಷಗಳ ಬಳಿಕ ಕೃಷ್ಣನ ಒಡವೆ ವಾಪಸ್​ ಮಾಡಿದ ಕಳ್ಳನ ರೋಚಕ ಸ್ಟೋರಿ...

ಹಿಂದೂಗಳ ಧರ್ಮಗ್ರಂಥ ಭಗವದ್ಗೀತೆಗೆ ಅದೆಂಥ ಶಕ್ತಿಯಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ದೇವಾಲಯದಿಂದ ಕದ್ದ ಆಭರಣಗಳನ್ನು 9 ವರ್ಷಗಳ ಬಳಿಕ ಮರಳಿಸಿರುವ ಕಳ್ಳತನ ರೋಚಕ ಸ್ಟೋರಿ ಇಲ್ಲಿದೆ...

 

Read Full Story

12:51 PM (IST) Jun 28

ಕಚೇರಿಯಲ್ಲಿ ಕೆಲಸ ಮಾಡುವಾಗಲೇ ಎದೆನೋವು; ಹೃದಯಾಘಾತದಿಂದ ಬ್ಯುಸಿನೆಸ್‌ಮನ್ ಸಾವು!

ಕೊಡಗಿನ ಕುಶಾಲನಗರದಲ್ಲಿ ವ್ಯಾಪಾರೋದ್ಯಮಿ ನಾಗೇಗೌಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೈಸೂರಿಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಸಾವುಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
Read Full Story

12:34 PM (IST) Jun 28

'ಅವರಷ್ಟು ವಿನಮ್ರ ವ್ಯಕ್ತಿಯ ನೋಡೇ ಇಲ್ಲ..' ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಸಾವಿಗೆ ಶೋಕ ವ್ಯಕ್ತಪಡಿಸಿದ್ದರು ಶೆಫಾಲಿ!

ಬಾಲಿವುಡ್ ನಟಿ ಹಾಗೂ 'ಹುಡುಗರು' ಚಿತ್ರದ ಖ್ಯಾತ 'ಪಂಕಜ'  ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರೊಂದಿಗೆ ನಟಿಸಿದ್ದ ಈ ನಟಿ, ಪುನೀತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದರು.

Read Full Story

12:25 PM (IST) Jun 28

Karnataka Rains Update - ರಾಜ್ಯದ ಹಲವೆಡೆ ಮುಂದುವರಿದ ಮಳೆ, ಭೀಮಾ ನದಿ ಪ್ರವಾಹ, ದೇವಾಲಯಗಳು ಜಲಾವೃತ!

ಭಾರೀ ಮಳೆಯಿಂದಾಗಿ ಭೀಮಾ ನದಿ ಉಕ್ಕಿ ಹರಿಯುತ್ತಿದ್ದು, ದೇವಾಲಯಗಳು ಮುಳುಗಡೆಯಾಗಿವೆ. ಉತ್ತರ ಕನ್ನಡದಲ್ಲಿ ಕಿರುಸೇತುವೆ ಕುಸಿದು ಸಂಚಾರ ವ್ಯತ್ಯಯವಾಗಿದೆ. ಕೊಡಗಿನಲ್ಲಿ ಮಳೆ ಕಡಿಮೆಯಾಗಿದ್ದು, ಪ್ರವಾಹ ಇಳಿಮುಖವಾಗಿದೆ.
Read Full Story

11:37 AM (IST) Jun 28

ಹ್ಯಾಂಡ್‌ ಡ್ರೈಯರ್ ಬಳಕೆ ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?

ಸಾರ್ವಜನಿಕ ಶೌಚಾಲಯಗಳಲ್ಲಿ ಕೈ ಒಣಗಿಸಲು ಹ್ಯಾಂಡ್ ಡ್ರೈಯರ್‌ಗಳನ್ನು ಬಳಸುವುದು ಅನುಕೂಲಕರವೆನಿಸಿದರೂ, ಅವು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಹರಡುವ ಮೂಲಕ ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

Read Full Story

More Trending News