LIVE NOW
Published : Feb 28, 2026, 05:57 AM ISTUpdated : Feb 28, 2026, 11:16 PM IST

Karnataka Latest News Live: ಟಾಕ್ಸಿಕ್ ಸಾಂಗ್ ಪೋಸ್ಟರ್ ಟೀಕೆ ಬೆನ್ನಲ್ಲೇ ಮತ್ತೊಂದು ಅಪ್‌ಡೇಟ್, ಯಶ್ ಕಿಯಾರ ಜೋಡಿಗೆ ಫ್ಯಾನ್ಸ್ ಫಿದಾ

ಸಾರಾಂಶ

ಶಿಕಾರಿಪುರ: ರಾಜಕೀಯ ಜೀವನದಲ್ಲಿ 50 ವಸಂತಗಳನ್ನು ಪೂರೈಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅದ್ಧೂರಿಯಾಗಿ ಅಭಿನಂದನೆ ಸಲ್ಲಿಸಲು ಚಿತ್ರದುರ್ಗದಲ್ಲಿ ಬರುವ ಮೇ ತಿಂಗಳಿನಲ್ಲಿ ಆಯೋಜಿಸಲು ಉದ್ದೇಶಿಸಿರುವ ಸಮಾವೇಶದ ಸಿದ್ಧತೆಗೆ ಚಾಲನೆ ದೊರೆತಿದೆ. ಇದಕ್ಕಾಗಿ ಸ್ವಾಗತ ಸಮಿತಿ ರಚಿಸಲಾಗಿದ್ದು, ಕೆಎಲ್‌ಇ ಮಾಜಿ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ಅವರನ್ನು ಅಧ್ಯಕ್ಷರನ್ನಾಗಿ, ಮಾಜಿ ಸಚಿವ ಶ್ರೀರಾಮುಲು ಅವರನ್ನು ಕಾರ್ಯಾಧ್ಯಕ್ಷರನ್ನಾಗಿ, ಸಂಸದ ಗೋವಿಂದ ಕಾರಜೋಳ ಅವರನ್ನು ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

Yash toxic tabaahi Song poster

11:16 PM (IST) Feb 28

ಟಾಕ್ಸಿಕ್ ಸಾಂಗ್ ಪೋಸ್ಟರ್ ಟೀಕೆ ಬೆನ್ನಲ್ಲೇ ಮತ್ತೊಂದು ಅಪ್‌ಡೇಟ್, ಯಶ್ ಕಿಯಾರ ಜೋಡಿಗೆ ಫ್ಯಾನ್ಸ್ ಫಿದಾ

ಟಾಕ್ಸಿಕ್ ಸಾಂಗ್ ಪೋಸ್ಟರ್ ಟೀಕೆ ಬೆನ್ನಲ್ಲೇ ಮತ್ತೊಂದು ಅಪ್‌ಡೇಟ್, ತಬಾಹಿ ಹಾಡಿನ ಮೊದಲ ಪೋಸ್ಟರ್‌ಗೆ ಕೆಲ ಟೀಕೆಗಳು ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಟಾಕ್ಸಿಕ್ ತಂಡ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದೆ.

Read Full Story

10:09 PM (IST) Feb 28

ರಕ್ಷಿತ್ ಶೆಟ್ಟಿ ಹಾರ್ಟ್‌ಬ್ರೇಕ್, ಅಪ್ಡೇಟ್ ನಿರೀಕ್ಷೆಯಲ್ಲಿರುವಾಗಲೇ ಶ್ರದ್ದಾಂಜಲಿ ಸ್ಟೋರಿ ಪೋಸ್ಟ್ ಮಾಡಿದ‌ ನಟ

ರಕ್ಷಿತ್ ಶೆಟ್ಟಿ ಹಾರ್ಟ್‌ಬ್ರೇಕ್, ಅಪ್ಡೇಟ್ ನಿರೀಕ್ಷೆಯಲ್ಲಿರುವಾಗಲೇ ಶ್ರದ್ದಾಂಜಲಿ ಸ್ಟೋರಿ ಪೋಸ್ಟ್ ಮಾಡಿದ‌ ನಟ, ಅಭಿಮಾನಿಗಳು ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾ ಅಪ್‌ಡೇಟ್‌ಗಾಗಿ ಕಾಯುತ್ತಲೇ ಇರುವಾಗ ಈ ಪೋಸ್ಟ್ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ.

 

Read Full Story

09:43 PM (IST) Feb 28

ಕಾಂತಾರ ಚಿತ್ರಕ್ಕೆ ಪುನೀತ್​ ರಾಜ್​ ಆಯ್ಕೆಯಾಗಿದ್ರು! ಕುತೂಹಲದ ವಿಷ್ಯ ರಿವೀಲ್​ ಮಾಡಿದ Rishab Shetty

'ಕಾಂತಾರ' ಚಿತ್ರದ ಶಿವನ ಪಾತ್ರಕ್ಕೆ ನಟ ಪುನೀತ್ ರಾಜ್‌ಕುಮಾರ್ ಮೊದಲ ಆಯ್ಕೆಯಾಗಿದ್ದರು ಎಂಬ ಕುತೂಹಲಕಾರಿ ವಿಷಯವನ್ನು ರಿಷಬ್ ಶೆಟ್ಟಿ ಬಹಿರಂಗಪಡಿಸಿದ್ದಾರೆ. ಕರಾವಳಿ ಭಾಷೆ ಕಲಿಯಲು ಬೇಕಾದ ಸಮಯದ ಅಭಾವ ಹಾಗೂ  ಸಿನಿಮಾ ಬದ್ಧತೆಗಳಿಂದಾಗಿ, ಪುನೀತ್ ಅವರೇ ಈ ಪಾತ್ರವನ್ನು ರಿಷಬ್ ನಿರ್ವಹಿಸುವಂತೆ ಸೂಚಿಸಿದ್ದರು

Read Full Story

08:40 PM (IST) Feb 28

ತಂದೆಯ ಕಾರ್ಗಿಲ್ ಯುದ್ಧ ಹೋರಾಟದ ಘಟನೆ ಬಿಚ್ಚಿಟ್ಟಿ ನಟಿ ರಾಗಿಣಿ ದ್ವಿವೇದಿ, ಅಂದು ಏನಾಗಿತ್ತು?

ತಂದೆಯ ಕಾರ್ಗಿಲ್ ಯುದ್ಧ ಹೋರಾಟದ ಘಟನೆ ಬಿಚ್ಚಿಟ್ಟಿ ನಟಿ ರಾಗಿಣಿ ದ್ವಿವೇದಿ, ಅಂದು ಏನಾಗಿತ್ತು? ಸೇನಾಧಿಕಾರಿ ಪುತ್ರಿ ರಾಗಿಣಿ ದ್ವೇವೇದಿ ಬಾಂಬ್‌ಶೆಲ್ ಕುರಿತು ಹೇಳಿದ ಘಟನೆ ಇದೀಗ ಸದ್ದು ಮಾಡುತ್ತಿದೆ.

 

Read Full Story

06:56 PM (IST) Feb 28

ಮುಡಾ ಅಕ್ರಮ ಕೇಸ್ - ಕೋರ್ಟ್‌ನಲ್ಲಿ ₹50 ಕೋಟಿ ಲಂಚ, ವಾಮಾಚಾರದ ಸ್ಫೋಟಕ ಸತ್ಯ ಬಾಯ್ಬಿಟ್ಟ ಸ್ನೇಹಮಯಿ ಕೃಷ್ಣ!

ಮುಡಾ ಅಕ್ರಮ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಅವರು ನ್ಯಾಯಾಲಯದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದಿಂದ ಹಿಂದೆ ಸರಿಯಲು ತಮಗೆ 50 ಕೋಟಿ ರೂ. ಲಂಚದ ಆಮಿಷ ಒಡ್ಡಲಾಗಿತ್ತು ಮತ್ತು ತಮ್ಮ ವಿರುದ್ಧ ವಾಮಾಚಾರ ನಡೆಸಲಾಗಿದೆ ಎಂದು ಹೇಳಿದ್ದಾರೆ.

Read Full Story

05:30 PM (IST) Feb 28

ರಂಜಾನ್ ಮಾಸದಲ್ಲಿ ಭಿಕ್ಷೆಗೆ ಬಂದ ಮಹಿಳೆಯನ್ನು ಮಕ್ಕಳ ಕಳ್ಳಿಯೆಂದು ಭಾವಿಸಿ ಧರ್ಮದೇಟು ಕೊಟ್ಟ ಜನ!

ಬೆಳಗಾವಿಯಲ್ಲಿ 'ಮಕ್ಕಳ ಕಳ್ಳರು' ಬಂದಿದ್ದಾರೆ ಎಂಬ ಸುಳ್ಳು ವದಂತಿಯಿಂದಾಗಿ, ಜನರು ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರನ್ನು ಥಳಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಮಹಿಳೆ ರಕ್ಷಿಸಿದ್ದು, ಇಂತಹ ವದಂತಿಗಳನ್ನು ನಂಬದಂತೆ ಮತ್ತು ಕಾನೂನನ್ನು ಕೈಗೆತ್ತಿಕೊಳ್ಳದಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

Read Full Story

04:50 PM (IST) Feb 28

ಮಂಗಳೂರಿನಿಂದ ಗಲ್ಫ್ ದೇಶಗಳು ಸೇರಿ, ಇರಾನ್‌ನತ್ತ ಹೊರಟ ವಿಮಾನಗಳು ವಾಪಸ್; ರದ್ದಾದ ವಿಮಾನಗಳ ವಿವರ ಇಲ್ಲಿದೆ!

ಇರಾನ್-ಇಸ್ರೇಲ್ ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ, ಮಂಗಳೂರು ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನಯಾನ ಸೇವೆಗಳಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ದುಬೈಗೆ ಹೊರಟಿದ್ದ ವಿಮಾನ ಅರ್ಧ ದಾರಿಯಿಂದಲೇ ವಾಪಸಾಗಿವೆ.

Read Full Story

04:18 PM (IST) Feb 28

ಸಿದ್ದರಾಮಯ್ಯ ಸರ್ಕಾರ ನಿರುದ್ಯೋಗಿಗಳ ವಿರೋಧಿ - ಮೀಸಲಾತಿ ಕಡಿತ, ಉದ್ಯೋಗ ಭರ್ತಿ ಮಾಹಿತಿ ಕೇಳಿದ ಎನ್.ರವಿಕುಮಾರ್!

ರಾಜ್ಯ ಸರ್ಕಾರದ 40 ಸಾವಿರ ಹುದ್ದೆ ಭರ್ತಿ ಹೇಳಿಕೆ ಸುಳ್ಳು ಎಂದು ಬಿಜೆಪಿ ಆರೋಪಿಸಿದೆ. ಮೀಸಲಾತಿ ಹೆಚ್ಚಳವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವ ಮತ್ತು ಒಳಮೀಸಲಾತಿ ಬಗ್ಗೆ ಗೊಂದಲ ಸೃಷ್ಟಿಸಿರುವ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

Read Full Story

03:33 PM (IST) Feb 28

ಚಿಲ್ಲರೆ ಕಾಸಿಗೆ '51 ಸಾವಿರ ಅತಿಥಿ ಶಿಕ್ಷಕರ ನಿಯೋಜನೆ'ಯೇ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಸಾಧನೆಯಂತೆ!

51 ಸಾವಿರ ಅತಿಥಿ ಶಿಕ್ಷಕರ ನೇಮಕವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮ ಸಾಧನೆ ಎಂದಿರುವುದು ನಿರುದ್ಯೋಗಿ ಪದವೀಧರರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದೆಡೆ, ಕಾಯಂ ಹುದ್ದೆಗಳ ಭರ್ತಿಗೂ ಮುನ್ನ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.

Read Full Story

02:39 PM (IST) Feb 28

ಭ್ರಮನಿರಸನಗೊಂಡ ಕರ್ನಾಟಕ, ರಣಜಿ ಕಿರೀಟ ಗೆದ್ದು ಭಾರತದ ಹೊಸ ಕ್ರಿಕೆಟ್ ರಾಜನಾದ ಜಮ್ಮು-ಕಾಶ್ಮೀರ!

ಜಮ್ಮು ಮತ್ತು ಕಾಶ್ಮೀರ ತಂಡವು ರಣಜಿ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಲಿಷ್ಠ ಕರ್ನಾಟಕ ತಂಡವನ್ನು ಫೈನಲ್‌ನಲ್ಲಿ ಮಣಿಸಿದ ಈ ತಂಡ, ಆಕಿಬ್ ನಬಿ, ಶುಭಂ ಪುಂಡಿರ್ ಮತ್ತು ಕಮ್ರಾನ್ ಇಕ್ಬಾಲ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ 66 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಿದೆ.

Read Full Story

02:28 PM (IST) Feb 28

ಕೋಡಿಮಠ ಶ್ರೀ ಹೇಳಿದ್ರು ದರ್ಶನ್ ಭವಿಷ್ಯ! ರಾಜಕೀಯದಲ್ಲಿ ಕಾಟೇರನಿಗಿದೆಯಾ ವೈಭೋಗ?

ನಟ ದರ್ಶನ್ ಅವರ ಜೈಲು ವಾಸದ ಬಗ್ಗೆ ಹಲವು ಭವಿಷ್ಯಗಳು ಕೇಳಿಬರುತ್ತಿರುವಾಗ, ಇದೀಗ ಕೋಡಿ ಮಠದ ಶ್ರೀಗಳು ಮೊದಲ ಬಾರಿಗೆ ಮಾತನಾಡಿದ್ದಾರೆ. ದರ್ಶನ್ ಮೊದಲು ಜೈಲಿನಿಂದ ಹೊರಬರಲಿ, ನಂತರ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡುತ್ತೇನೆ ಎಂದು ಶ್ರೀಗಳು ಮಾರ್ಮಿಕವಾಗಿ ನುಡಿದಿದ್ದಾರೆ.  

Read Full Story

02:20 PM (IST) Feb 28

ಎಲ್ಲರೂ ಸರಿ ಎಂದ್ಕೊಂಡೆ, ಆಮೇಲೆ ಜ್ಞಾನೋದಯ ಆಯ್ತು - ಸಂದರ್ಶನದಲ್ಲಿ ಅಂದೇ ಹೇಳಿದ್ರು Rakshit Shetty!

ರಶ್ಮಿಕಾ ಮಂದಣ್ಣ ಅವರ ಮದುವೆಯ ಚರ್ಚೆಯ ನಡುವೆ ರಕ್ಷಿತ್ ಶೆಟ್ಟಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ, ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಅವರು ವ್ಯಕ್ತಪಡಿಸಿದ ದೃಷ್ಟಿಕೋನದ ಬದಲಾವಣೆಯನ್ನು ಅಭಿಮಾನಿಗಳು ಅವರ ಮುರಿದುಬಿದ್ದ ಸಂಬಂಧಕ್ಕೆ ಹೋಲಿಸುತ್ತಿದ್ದಾರೆ.
Read Full Story

12:27 PM (IST) Feb 28

Bigg boss ಗಿಲ್ಲಿ ನಟನ ಮುಗಿಯದ ಹವಾ! ಪರೀಕ್ಷೆಯಲ್ಲೂ ಗಿಲ್ಲಿ ಕುರಿತ ಬಿಟ್ಟಸ್ಥಳ ತುಂಬಿ; ಏನಿದು ಪ್ರಶ್ನೆ?

ಬಿಗ್​ಬಾಸ್​ 12ರ ಸ್ಪರ್ಧಿ ಗಿಲ್ಲಿ ನಟನ ಜನಪ್ರಿಯತೆ ಹೊಸ ಮೈಲಿಗಲ್ಲು ತಲುಪಿದೆ. ಪ್ರಥಮ ಪಿಯುಸಿಯದ್ದು ಎನ್ನಲಾದ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯೊಂದರಲ್ಲಿ ಗಿಲ್ಲಿ ಕುರಿತು ಪ್ರಶ್ನೆ ಕೇಳಲಾಗಿದ್ದು, ಈ ಪತ್ರಿಕೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
Read Full Story

11:57 AM (IST) Feb 28

ದ್ವಿತೀಯ ಪಿಯುಸಿ ಪರೀಕ್ಷೆಗೂ ಮುನ್ನವೇ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ - ವಿಧಿಯಾಟಕ್ಕೆ ಬಲಿಯಾದ ಚಿಕ್ಕೋಡಿಯ ಭೂಮಿಕಾ!

ಬೆಳಗಾವಿಯಲ್ಲಿ ಪರೀಕ್ಷೆಗೂ ಮುನ್ನವೇ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಿದ್ಯಾರ್ಥಿನಿ ಭೂಮಿಕಾ ಮಾಳಂಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

Read Full Story

11:35 AM (IST) Feb 28

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಗುಡ್‌ ನ್ಯೂಸ್ - ಮುಖ್ಯೋಪಾಧ್ಯಾಯರ ಬಡ್ತಿ ನಿಯಮಕ್ಕೆ ಮಹತ್ವದ ತಿದ್ದುಪಡಿ!

ರಾಜ್ಯ ಸರ್ಕಾರವು ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ ನಿಯಮಗಳಿಗೆ ಮಹತ್ವದ ತಿದ್ದುಪಡಿ ತಂದಿದೆ. ಈ ಹೊಸ ನಿಯಮದ ಪ್ರಕಾರ, ಮುಖ್ಯೋಪಾಧ್ಯಾಯರ ಹುದ್ದೆಗಳನ್ನು 1-5ನೇ ತರಗತಿ ಮತ್ತು 6-8ನೇ ತರಗತಿ ಶಿಕ್ಷಕರಿಂದ 2:1 ಅನುಪಾತದಲ್ಲಿ ಭರ್ತಿ ಮಾಡಲಾಗುವುದು. 

Read Full Story

11:32 AM (IST) Feb 28

Amruthadhaare ಜೈದೇವ್​ ಜೊತೆ ಮದ್ವೆ ಗುಡ್​ನ್ಯೂಸ್​ ಬೆನ್ನಲ್ಲೇ ಲೈವ್​ಗೆ ಬಂದ ಭಾರ್ಗವಿ LLB ಹೇಳಿದ್ದೇನು?

ಅಪ್ಪನ ಚಿತೆಯೆದುರು ವಕೀಲಿ ಮಾಡುವುದಿಲ್ಲವೆಂದು ಭಾರ್ಗವಿ ಪ್ರಾಮಿಸ್ ಮಾಡಿದ್ದಾಳೆ. ಆದರೆ, ನ್ಯಾಯ ಒದಗಿಸಲು ಈಗ ಕಾಳಿಯ ಹೊಸ ಅವತಾರದಲ್ಲಿ ಬರುತ್ತಿದ್ದು, ದುಷ್ಟರನ್ನು ಶಿಕ್ಷಿಸಲಿದ್ದಾಳೆ. ನಿಜ ಜೀವನದಲ್ಲಿ, ಭಾರ್ಗವಿ ಪಾತ್ರಧಾರಿ ರಾಧಾ ಭಗವತಿ ಅವರು ನಟ ರಾಣವ್ ಜೊತೆ ಮದುವೆಯಾಗುತ್ತಿದ್ದಾರೆ.
Read Full Story

11:24 AM (IST) Feb 28

ಜ್ಯೋತಿಷಿ ಮಾತು ನಂಬಿ ನೇಣು ಬಿಗಿದುಕೊಂಡ ಮದ್ವೆ ತಯಾರಿಯಲ್ಲಿದ್ದ ಬೆಂಗಳೂರಿನ ಟೆಕ್ಕಿ ವಿದ್ಯಾಜ್ಯೋತಿ

ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಜ್ಯೋತಿಷಿಯೊಬ್ಬರ ಅಲ್ಪಾಯುಷಿ ಭವಿಷ್ಯವನ್ನು ನಂಬಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮದುವೆಗೆ ಸಿದ್ಧತೆ ನಡೆಸುತ್ತಿದ್ದ 27 ವರ್ಷದ ವಿದ್ಯಾಜ್ಯೋತಿ, 9 ದಿನಗಳ ಪೂಜೆಯ ಕೊನೆಯ ದಿನದಂದು ಈ ದುರಂತ ನಿರ್ಧಾರ ತೆಗೆದುಕೊಂಡಿದ್ದಾರೆ.

Read Full Story

11:02 AM (IST) Feb 28

ಓ ದೇವರೇ, ಯಶ್​ ಹೊತ್ತುಕೊಂಡಿರೋ ಹುಡುಗಿ ಅವಳಾಗದಿರಪ್ಪಾ! ರುಕ್ಕು ಫ್ಯಾನ್ಸ್​ ಹೀಗೊಂದು ಹರಕೆ

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಹೊಸ ಪೋಸ್ಟರ್​ವೊಂದು ವೈರಲ್​ ಆಗಿದ್ದು, ಇದರಲ್ಲಿ ಯಶ್ ಯುವತಿಯೊಬ್ಬರನ್ನು ಎತ್ತಿಕೊಂಡಿದ್ದಾರೆ. ಈ ಪೋಸ್ಟರ್​ ಅನ್ನು ಕಿಯಾರಾ ಅಡ್ವಾಣಿ ಹಂಚಿಕೊಂಡಿದ್ದು, ಹಾಡಿನಲ್ಲಿರುವ ನಟಿ ಅವರೇ ಇರಬಹುದೆಂಬ ಚರ್ಚೆ ಶುರುವಾಗಿದೆ. ಮಾರ್ಚ್ 2 ರಂದು ಹಾಡು ಬಿಡುಗಡೆಯಾಗಲಿದೆ.

 

Read Full Story

09:53 AM (IST) Feb 28

ಮಂಡ್ಯ ಜಿಲ್ಲೆಯ ತಗ್ಗಹಳ್ಳಿ ಗ್ರಾಮ ಪಂಚಾಯ್ತಿ ಖಜಾನೆ ರಹಸ್ಯ - ₹53 ಲಕ್ಷ ವಾಪಸ್ ಬಂದ ಕಥೆ

ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ, ಪ್ರಭಾರಿ ಪಿಡಿಒ ಒಬ್ಬರು ಅಕ್ರಮವಾಗಿ ವರ್ಗಾಯಿಸಿದ್ದ ₹54 ಲಕ್ಷ ಹಣದಲ್ಲಿ, ಜಿಪಂ ಸಿಇಒ ಕೆ.ಆರ್.ನಂದಿನಿ ಅವರ ಸಮಯೋಚಿತ ಕ್ರಮದಿಂದ ₹53 ಲಕ್ಷ ಹಣವನ್ನು ಮರಳಿ ಪಂಚಾಯಿತಿ ಖಾತೆಗೆ ಜಮೆ ಮಾಡಲಾಗಿದೆ. 

Read Full Story

09:31 AM (IST) Feb 28

ಕಠಿಣ 9 ಷರತ್ತುಗಳೊಂದಿಗೆ 22 ಹಿಂದುಳಿದ, ದಲಿತ ಮಠ, ಟ್ರಸ್ಟ್‌, ಸಂಘಗಳಿಗೆ 53 ಎಕ್ರೆ ಭೂಮಿ ಮಂಜೂರು

ರಾಜ್ಯ ಸರ್ಕಾರವು ಹಿಂದುಳಿದ ಹಾಗೂ ದಲಿತ ಸಮುದಾಯಗಳಿಗೆ ಸೇರಿದ 22 ಮಠಗಳು ಮತ್ತು ಸಂಘ-ಸಂಸ್ಥೆಗಳಿಗೆ ಬೆಂಗಳೂರಿನಲ್ಲಿ 52 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದಲ್ಲಿರುವ ಈ ಗೋಮಾಳ ಭೂಮಿಯ ಬಳಕೆಗೆ ಸರ್ಕಾರವು ಒಂಬತ್ತು ಕಠಿಣ ಷರತ್ತುಗಳನ್ನು ವಿಧಿಸಿದೆ.

Read Full Story

09:16 AM (IST) Feb 28

ಸಂತೋಷ್ ಲಾಡ್-ಜಕ್ಕಪ್ಪನವರ ಜಟಾಪಟಿ; ಕೊನೆಗೂ ಪತ್ತೆಯಾಯ್ತು ನಿಗೂಢ 120 ಎಕರೆ ಜಮೀನು

ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿ ಪ್ರಕಾಶ ಮಿರ್ಜಿ ಅವರಿಗೆ 120 ಎಕರೆ ಜಮೀನು ನೀಡಲಾಗಿದೆ ಎಂಬ ಎಂಎಲ್‌ಸಿ ಜಕ್ಕಪ್ಪನವರ ಆರೋಪದ ಬೆನ್ನಲ್ಲೇ, ಅಳ್ನಾವರ ತಾಲೂಕಿನಲ್ಲಿ ಆ ವಿವಾದಿತ ಭೂಮಿ ಪತ್ತೆಯಾಗಿದೆ. ರೈತರು ದಾಖಲೆ ಸಮೇತ ಜಮೀನು ತೋರಿಸಿದ್ದಾರೆ.

Read Full Story

08:59 AM (IST) Feb 28

ಶ್ರೀಶೈಲ ಯುಗಾದಿ ಜಾತ್ರೆ - 10 ದಿನ 4 ಹಂತಗಳಲ್ಲಿ ಮಾತ್ರ ಸ್ಪರ್ಶ ದರ್ಶನಕ್ಕೆ ಅವಕಾಶ

ಶ್ರೀಶೈಲ ಕ್ಷೇತ್ರದಲ್ಲಿ ಯುಗಾದಿ ಜಾತ್ರಾಮಹೋತ್ಸವಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಮಾ.6 ರಿಂದ 15ರವರೆಗೆ ಭಕ್ತರಿಗೆ ಮಲ್ಲಿಕಾರ್ಜುನಸ್ವಾಮಿಯ ಸ್ಪರ್ಶ ದರ್ಶನಕ್ಕೆ ಅವಕಾಶವಿದ್ದು, ಜಾತ್ರೆಯ ಪ್ರಮುಖ ದಿನಗಳಾದ ಮಾ.16 ರಿಂದ 20ರವರೆಗೆ ಅಲಂಕಾರಿಕ ಲಘು ದರ್ಶನ ಮಾತ್ರ ಲಭ್ಯವಿರುತ್ತದೆ.

Read Full Story

08:58 AM (IST) Feb 28

ನಮ್ಮ ಸರ್ಕಾರ ಇದ್ದಿದ್ರೆ ₹5000 ಕೊಡ್ತಿದ್ವಿ - ಎಚ್‌ಡಿ ಕುಮಾರಸ್ವಾಮಿ

ವಿಜಯಪುರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ₹2 ಸಾವಿರ ನೀಡಿ, ತೆರಿಗೆಗಳ ಮೂಲಕ ಜನರ ಮೇಲೆ ಹೆಚ್ಚಿನ ಹೊರೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು,

Read Full Story

08:14 AM (IST) Feb 28

₹593 ಕೋಟಿ GST ವಂಚನೆ - ಸೂತ್ರದಾರಿ ಮೊಹಮ್ಮದ್ ಸೈಫುಲ್ಲಾ ಸೆರೆ!

ಬೆಳಗಾವಿಯ ಜಿಎಸ್‌ಟಿ ಗುಪ್ತಚರ ಇಲಾಖೆಯು ಸುಮಾರು ₹593 ಕೋಟಿ ಮೌಲ್ಯದ ನಕಲಿ ಬಿಲ್ ಆಧಾರಿತ ಇನ್‌ಪುಟ್ ತೆರಿಗೆ ಕ್ರೆಡಿಟ್ ಹಗರಣವನ್ನು ಭೇದಿಸಿದೆ. ಯಾವುದೇ ಸರಕು ಅಥವಾ ಸೇವೆಗಳ ಪೂರೈಕೆಯಿಲ್ಲದೆ, ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಅಕ್ರಮವಾಗಿ ತೆರಿಗೆ ಕ್ರೆಡಿಟ್ ವರ್ಗಾಯಿಸುತ್ತಿದ್ದ ಜಾಲದ ಸೂತ್ರಧಾರ ಬಂಧನ.

Read Full Story

07:44 AM (IST) Feb 28

ಲಿವ್‌ ಇನ್ ಸಂಬಂಧಕ್ಕೆ ಜನಿಸಿದ ಮಗುವಿಗೆ ತಾಯಿ ಸರ್‌ನೇಮ್‌, ಒಪ್ಪಿದ ಹೈಕೋರ್ಟ್‌!

ಪರಿತ್ಯಕ್ತ ಲಿವ್-ಇನ್ ಸಂಗಾತಿಯ ಹೆಸರನ್ನು ತನ್ನ ಮಗುವಿನ ಜನನ ಪ್ರಮಾಣಪತ್ರದಿಂದ ತೆಗೆದುಹಾಕಲು ಕೋರಿದ್ದ ತಾಯಿಯ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ತಾಯಿಯೇ ಮಗುವಿನ ಏಕೈಕ ನೈಸರ್ಗಿಕ ಪೋಷಕರಾಗಿದ್ದು, ಉಪನಾಮ ಸೇರಿಸಲು ಯಾವುದೇ ಸಾಂವಿಧಾನಿಕ ಅಡ್ಡಿಯಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Read Full Story

07:38 AM (IST) Feb 28

ಬೆಂಗಳೂರು ದೇಶದ ಟ್ಯಾಲೆಂಟ್‌ ಹಬ್‌ ಆಗಿದ್ದರ ಹಿಂದಿನ ಗುಟ್ಟು ಬಿಚ್ಚಿಟ್ಟ ಡಿಕೆ ಶಿವಕುಮಾರ್

ಬೆಂಗಳೂರನ್ನು ದೇಶದ ಟ್ಯಾಲೆಂಟ್ ಹಬ್ ಎಂದು ಕರೆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ದೇಶದಲ್ಲೇ ಅತಿ ಹೆಚ್ಚು ವೇತನ ಕರ್ನಾಟಕದಲ್ಲಿದೆ ಎಂದು ಹೇಳಿದ್ದಾರೆ. ಅಂಗವಿಕಲರಿಗೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉದ್ಯೋಗದಾತ ಮತ್ತು ಉದ್ಯೋಗಿಗಳ ನಡುವೆ ಸಮತೋಲನ ಕಾಪಾಡಬೇಕು ಎಂದರು.  

Read Full Story

06:50 AM (IST) Feb 28

ಪಾರ್ಟಿ ಮಾಡಲು ಕರೆಸಿ ಡ್ರಗ್ಸ್ ನೀಡಿ ರೇ*ಪ್ ಮಾಡುವ ದಂಧೆ? ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್!

ಬೆಂಗಳೂರಿನಲ್ಲಿ, ಸೋಶಿಯಲ್ ಮೀಡಿಯಾ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು, ಪಾರ್ಟಿಗಳಿಗೆ ಆಹ್ವಾನಿಸಿ, ಅವರಿಗೆ ಡ್ರಗ್ಸ್ ನೀಡಿ ಲೈಂ*ಗಿಕ ದೌರ್ಜನ್ಯ ಎಸಗಲಾಗುತ್ತಿತ್ತು. ನಂತರ ಆ ಕೃತ್ಯದ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಜಾಲವನ್ನು ಅಮೃತಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  

Read Full Story

06:17 AM (IST) Feb 28

ಪಿಎಂ ಹೇಳ್ತಿರೋ ಆರೆಂಜ್‌ ಆರ್ಥಿಕತೆ ನೀತಿ ಕರ್ನಾಟಕದಲ್ಲಿ 2016ರಲ್ಲೇ ಜಾರಿ - ಡಿಕೆ ಶಿವಕುಮಾರ್

ಬೆಂಗಳೂರು ಜಿಎಎಫ್‌ಎಕ್ಸ್‌ ಸಮ್ಮೇಳನದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರಧಾನಿ ಈಗ ಹೇಳುತ್ತಿರುವ ಆರೆಂಜ್ ಆರ್ಥಿಕತೆಗೆ ಕರ್ನಾಟಕ 2016ರಲ್ಲೇ ಎವಿಜಿಸಿ ನೀತಿ ಮೂಲಕ ಅಡಿಪಾಯ ಹಾಕಿತ್ತು ಎಂದಿದ್ದಾರೆ.  

Read Full Story

More Trending News