Published : Sep 26, 2025, 06:52 AM ISTUpdated : Sep 26, 2025, 10:48 PM IST

karnataka news live: ಪ್ರಧಾನಿ ನಿವಾಸದ ಎದುರು ನಾವೆಂದೂ ಗುಂಡಿಗಳನ್ನು ನೋಡಿಲ್ಲ - ಡಿಕೆಶಿಗೆ ಸಂಸದ ಡಾ.ಮಂಜುನಾಥ್ ಟಾಂಗ್

ಸಾರಾಂಶ

ಮಂಗಳೂರು/ನವದೆಹಲಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಬುರುಡೆ ಟೀಂ ತಾನು ಸುಪ್ರೀಂಕೋರ್ಟ್‌ನಲ್ಲಿ ಭೀಮಾರಿ ಹಾಕಿಸಿಕೊಂಡಿದ್ದ ವಿಚಾರವನ್ನು ಮುಚ್ಚಿಟ್ಟು ಸರ್ಕಾರವನ್ನು ಏಮಾರಿಸಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸುಪ್ರೀಂಕೋರ್ಡ್‌ನಲ್ಲಿ ತಮಗಾಗಿದ್ದ ಮುಖಭಂಗ ಮುಚ್ಚಿಟ್ಟು, ಈ ಟೀಂ ದೂರು ಕೊಟ್ಟಿತ್ತು. ಈ ದೂರು ಆಧರಿಸಿ, ಸರ್ಕಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ದೂರುದಾರರ ಹೇಳಿಕೆ ಆಧರಿಸಿ, ಧರ್ಮಸ್ಥಳ ಗ್ರಾಮದಲ್ಲಿ ಉತ್ಪನನ ಕೂಡ ನಡೆಸಿದೆ. ಬುರುಡೆ ಪ್ರಕರಣದ ಎಫ್‌ಐಆ‌ರ್ ದಾಖಲಿಸುವುದಕ್ಕೂ ಮೊದಲೇ ಸುಪ್ರೀಂಕೋರ್ಟ್‌ಗೆ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಧರ್ಮಸ್ಥಳದಲ್ಲಿ ಹಲವು ಶವಗ ಳನ್ನು ಅಕ್ರಮವಾಗಿ ಹೂಳಲಾಗಿದೆ ಎಂಬ ವಿಚಾರದ ಕುರಿತು ಸುಪ್ರೀಂಕೋರ್ಟ್‌ಗೆ ಸಾರ್ವ ಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿತ್ತು. ಸುಪ್ರೀಂಕೋರ್ಟ್ ವಕೀಲ ಕೆ.ವಿ. ಧನಂಜಯ್ ಅವರು ಬುರುಡೆ ಟೀಂ ಪರವಾಗಿ ಅರ್ಜಿ ಸಲ್ಲಿಸಿ, ವಾದ ಮಂಡಿಸಿದ್ದರು. ಮೇ 5 ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿತ್ತು. ಇದು ನಿಜವಾದ ಅರ್ಥದಲ್ಲಿ 'ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್' ಅಲ್ಲ, ಬದಲಾಗಿ 'ಪೈಸಾ ಇಂಟರೆಸ್ಟ್ ಲಿಟಿಗೇಶನ್' ಎಂದು ಭೀಮಾರಿ ಹಾಕಿತ್ತು ಎಂಬ ಸಂಗತಿ ಬಯಲಾಗಿದೆ.

Dr CN Manjunath

10:48 PM (IST) Sep 26

ಪ್ರಧಾನಿ ನಿವಾಸದ ಎದುರು ನಾವೆಂದೂ ಗುಂಡಿಗಳನ್ನು ನೋಡಿಲ್ಲ - ಡಿಕೆಶಿಗೆ ಸಂಸದ ಡಾ.ಮಂಜುನಾಥ್ ಟಾಂಗ್

ನವದೆಹಲಿಯಲ್ಲಿ ಪ್ರಧಾನಿ ನಿವಾಸದ ಎದುರು ಹಲವು ಬಾರಿ ಪ್ರಯಾಣ ಮಾಡಿದ್ದೇನೆ. ಅಲ್ಲಿ ಯಾವುದೇ ರಸ್ತೆ ಗುಂಡಿಗಳು ನಮಗೆ ಕಾಣಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಟಾಂಗ್ ನೀಡಿದರು.

Read Full Story

10:22 PM (IST) Sep 26

ಜಿಎಸ್‌ಟಿ ಲಾಭ ಜನತೆಗೆ ತಲುಪಿಸಿ - ವಿಶೇಷ ಜಾಗೃತಿ ಅಭಿಯಾನ ಆರಂಭಿಸಿದ ಸಂಸದ ಡಾ.ಸುಧಾಕರ್‌

ಜಿಎಸ್‌ಟಿ ಸುಧಾರಣೆಗಳು ಸೆ. 22 ರಿಂದ ಜಾರಿಯಾಗಿವೆ. ಈ ಸುಧಾರಣೆಗಳ ಲಾಭ ಜನರಿಗೆ ನೇರವಾಗಿ ತಲುಪುವಂತೆ ಮಾಡಲು ಸಂಸದ ಡಾ.ಕೆ.ಸುಧಾಕರ್, ಚಿಕ್ಕಬಳ್ಳಾಪುರ ನಗರದ ಅಂಗಡಿ, ಮುಂಗಟ್ಟು ಮತ್ತು ವಿಮಾ ಕಚೇರಿಗಳಲ್ಲಿ ವಿಶೇಷ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.

Read Full Story

09:59 PM (IST) Sep 26

ಭಾರತವನ್ನು 2047ಕ್ಕೆ ಶ್ರೇಷ್ಠ ಆರ್ಥಿಕ ಶಕ್ತಿ ಮಾಡೋಣ - ಸಂಸದ ಬಸವರಾಜ ಬೊಮ್ಮಾಯಿ

ಉಪಾಧ್ಯಾಯ ಒಬ್ಬ ಮಾನವತಾವಾದಿ, ದೇಶದ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ಮೂಲಕ ಅವರ ಅಂತ್ಯೋದಯದ ವಿಚಾರಗಳನ್ನು ಕಾರ್ಯರೂಪಕ್ಕೆ ತಂದಿರುವ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Read Full Story

09:35 PM (IST) Sep 26

ಜಾತಿಗಣತಿ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ - ಶಾಸಕ ಯತ್ನಾಳ

ರಾಜ್ಯ ಸರ್ಕಾರದ ಜಾತಿಗಣತಿಗೆ ನಮ್ಮ ವಿರೋಧವಿದೆ. ಸರ್ಕಾರ ಇನ್ನಾದರೂ ಜಾತಿಗಣತಿ ಹಿಂಪಡೆಯಲಿ ಎಂದು ಒತ್ತಾಯಿಸಿದರು. ಲಿಂಗಾಯತ ಧರ್ಮ ಎನ್ನುವುದು ಅನುಮೋದನೆಯೇ ಆಗಿಲ್ಲ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಿಸಿದರು.

Read Full Story

08:48 PM (IST) Sep 26

ಮೊಬೈಲ್‌ಗೆ ಅಂಟಿಕೊಂಡು ಸಂಬಂಧಗಳ ಕೊಂಡಿಗಳು ಕಳಚುತ್ತಿವೆ - ನಿರ್ದೇಶಕ ಟಿ.ಎಸ್.ನಾಗಾಭರಣ

ಸಂಬಂಧಗಳನ್ನು ಗಟ್ಟಿಗೊಳಿಸಲು ಹಬ್ಬಗಳ ಆಚರಣೆ ಮಾಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮೊಬೈಲ್‌ಗೆ ಅಂಟಿಕೊಂಡಿದ್ದರಿಂದ ಸಂಬಂಧಗಳ ಕೊಂಡಿಗಳು ಕಳಚಿಕೊಳ್ಳುತ್ತಿವೆ ಎಂದು ಹಿರಿಯ ನಟ ಹಾಗೂ ನಿರ್ದೇಶಕ ಟಿ.ಎಸ್.ನಾಗಾಭರಣ ಬೇಸರ ವ್ಯಕ್ತಪಡಿಸಿದರು.

Read Full Story

08:39 PM (IST) Sep 26

ಬೆಂಗಳೂರು ರಸ್ತೆ ಗುಂಡಿ ವಿವಾದ, ಬಿಜೆಪಿ ಅವಧಿಯಲ್ಲಿ ಲಕ್ಷಗಟ್ಟಲೇ ಗುಂಡಿ ಇತ್ತು - ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಪ್ರತಿಭಟಿಸಿ ಗುಂಡಿ ಮುಚ್ಚಿದರೆ, ಸಚಿವ ರಾಮಲಿಂಗಾರೆಡ್ಡಿ ಹಿಂದಿನ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿ, ತಮ್ಮ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

Read Full Story

08:29 PM (IST) Sep 26

ಕಾವೇರಿ ಕನ್ನಡಿಗರ ಭಾಗ್ಯ ದೇವತೆ, ರೈತರ ಜೀವನಾಡಿ.. ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಡಿಕೆಶಿ ಹೇಳಿದ್ದೇನು?

ಇದೊಂದು ಐತಿಹಾಸಿಕ ಕಾರ್ಯಕ್ರಮ. ಕಾವೇರಿ ಆರತಿಯನ್ನು ಧಾರ್ಮಿಕ ಕಾರ್ಯಕ್ರಮ ಎಂದು ರೂಪಿಸಲಿಲ್ಲ. ಮನುಷ್ಯನಿಗೆ ಸೂರ್ಯ, ಚಂದ್ರ, ಗಾಳಿ, ನೀರು ಇಲ್ಲದೇ ಬದುಕಿಲ್ಲ ಎಂದು ಕಾವೇರಿ ಆರತಿಯ ವೇದಿಕೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

Read Full Story

08:12 PM (IST) Sep 26

ಬಿಜೆಪಿ ಅವಧಿಯಲ್ಲಿ 24 ದೇವಾಲಯ ಸೇವಾ ಶುಲ್ಕ ಪರಿಷ್ಕರಣೆ - ಸಚಿವ ರಾಮಲಿಂಗಾರೆಡ್ಡಿ

2019ರಿಂದ 2023ರವರೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 24 ದೇವಸ್ಥಾನಗಳ ಸೇವಾ ಶುಲ್ಕ ಪರಿಷ್ಕರಿಸಲಾಗಿತ್ತು. ಈಗ ಬಿಜೆಪಿ ನಾಯಕರು ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಧಾರ್ಮಿಕ ದತ್ತಿ ಹಾಗೂ ಸಾರಿಗೆ ಸಚಿವ ಬಿ.ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Read Full Story

08:07 PM (IST) Sep 26

ಅಕ್ಟೋಬರ್‌ನಲ್ಲಿ ಬ್ಯಾಂಕ್‌ ನೌಕರರಿಗೆ ರಜೆಯೋ ರಜೆ - ದಸರಾ, ದೀಪಾವಳಿ ಸೇರಿ 21 ದಿನ ಬ್ಯಾಂಕ್ ಕ್ಲೋಸ್!

October 2025 Bank Holidays: 11 Days Holiday in Karnataka; Full List ಅಕ್ಟೋಬರ್ 2025 ಹಬ್ಬಗಳ ತಿಂಗಳಾಗಿದ್ದು, ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳಿಂದಾಗಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆಗಳಿವೆ. 

Read Full Story

07:39 PM (IST) Sep 26

ಆರೋಗ್ಯ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಮಹತ್ವದ ಘೋಷಣೆ, ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವ ಗುರಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ, ತಾಲೂಕು ಆಸ್ಪತ್ರೆಗಳಲ್ಲಿ 24/7 ಸೇವೆ, ತಜ್ಞ ವೈದ್ಯರ ನೇಮಕಾತಿ, ಗರ್ಭಿಣಿಯರಿಗೆ ವಿಶೇಷ ಆರೈಕೆ ಒದಗಿಸುವಂತಹ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ.

Read Full Story

07:30 PM (IST) Sep 26

ರಾಜ್ಯದ ಜನರ ಮೇಲೆ ಮತ್ತೊಂದು ಸೆಸ್‌ ಭಾರ; ಸಿನಿಮಾ ಟಿಕೆಟ್‌, ಟಿವಿ ಚಾನೆಲ್‌ಗಳ ಮೇಲೆ ಶೇ. 2ರಷ್ಟು ಸೆಸ್‌

Karnataka Govt Proposes New 2% Cess on Cinema Tickets and TV Channels ಕರ್ನಾಟಕ ಸರ್ಕಾರವು ಚಲನಚಿತ್ರ ಕಾರ್ಮಿಕರ ಕಲ್ಯಾಣ ನಿಧಿಗಾಗಿ ಸಿನಿಮಾ ಟಿಕೆಟ್‌ಗಳು ಮತ್ತು ಟಿವಿ ಚಾನೆಲ್‌ಗಳ ಮೇಲೆ ಶೇ. 2ರಷ್ಟು ಸೆಸ್ ವಿಧಿಸಲು ಪ್ರಸ್ತಾಪಿಸಿದೆ. 

Read Full Story

06:55 PM (IST) Sep 26

ಕ್ಲೀನ್‌ ಗರ್ಲ್‌ ಮೇಕಪ್‌ ಟ್ರೆಂಡ್‌ - ಸಹಜ ಚೆಲುವೇ ಬೆಸ್ಟ್ ಎನ್ನುವ ಸಾಯಿ ಪಲ್ಲವಿ, ದೀಪಿಕಾ ಪಡುಕೋಣೆ

ಮೇಕಪ್‌ ಮಾಡ್ಕೊಳ್ಬೇಕು, ಆದರೆ ಮೇಕಪ್‌ ಮಾಡಿದ ಹಾಗಿರಬಾರದು ಅನ್ನುವುದು ಈ ಹೊಸ ಟ್ರೆಂಡಿನ ಧ್ಯೇಯ ವಾಕ್ಯ. ಇದಕ್ಕೆ ಕಾರಣ ಕ್ಲೀನ್‌ ಗರ್ಲ್‌ ಮೇಕಪ್‌ ಟ್ರೆಂಡ್‌. ಈ ಟ್ರೆಂಡಿಗೆ ಬ್ರಾಂಡ್‌ ಅಂಬಾಸಿಡರ್‌ ಅಂತ ಫ್ಯಾಶನ್‌ ಪ್ರಿಯರು ಜೋಕ್‌ ಮಾಡುತ್ತಿದ್ದಾರೆ.

 

Read Full Story

06:53 PM (IST) Sep 26

ತಾಂತ್ರಿಕ ದೋಷ ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು!

ಮಂಗಳೂರಿನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ತಾಂತ್ರಿಕ ದೋಷದ ಕಾರಣದಿಂದ ಕೊನೆಯ ಕ್ಷಣದಲ್ಲಿ ರದ್ದಾಗಿದೆ. ದಿನವಿಡೀ ಯಾವುದೇ ಸೌಲಭ್ಯವಿಲ್ಲದೆ ಕಾದು ಕುಳಿತ ನೂರಾರು ಪ್ರಯಾಣಿಕರು, ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

06:43 PM (IST) Sep 26

Kipi Keerthi ಖಾಸಗಿ ವಿಡಿಯೋ ಲೀಕ್​ - ಡ್ರಿಂಕ್ಸ್​ನಲ್ಲಿ ಏನೋ ಮಿಕ್ಸ್​ ಮಾಡಿ ಕೊಟ್ರು ಎಂದು ಘಟನೆ ನೆನೆದು ಕಣ್ಣೀರು

'ಹೇಳಿ ಜನರೇ' ಮೂಲಕ ಖ್ಯಾತರಾದ ಸೋಷಿಯಲ್ ಮೀಡಿಯಾ ತಾರೆ ಕಿಪ್ಪಿ ಕೀರ್ತಿ, ತಮ್ಮ ಗೆಳೆಯ ಮುತ್ತು ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಂಪು ಪಾನೀಯದಲ್ಲಿ ಮತ್ತೇನನ್ನೋ ಬೆರೆಸಿ ಖಾಸಗಿ ಫೋಟೋ ತೆಗೆದು ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.  

Read Full Story

06:40 PM (IST) Sep 26

ಭಾರತದ ಪ್ರಭಾವಿ ಸೆಲೆಬ್ರಿಟಿ ಬ್ರಾಂಡ್‌ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತೆ ಟಾಪ್; ರಶ್ಮಿಕಾಗೆ ಎಷ್ಟನೇ ಸ್ಥಾನ?

ವಿರಾಟ್ ಕೊಹ್ಲಿ ಮೂರನೇ ಬಾರಿ ನಿರಂತರವಾಗಿ ಭಾರತದಲ್ಲಿ ಅತ್ಯಂತ ಶಕ್ತಿಯುತ ಸೆಲೆಬ್ರಿಟಿ ಬ್ರಾಂಡ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ತನ್ನ ಪಥದಲ್ಲಿ ಬಾಲಿವುಡ್‌ನ ತಾರೆಗಳಾದ ಶಾರುಖ್ ಖಾನ್, ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ಅವರನ್ನು ಹಿಂದಿಕ್ಕಿದ್ದಾರೆ.

Read Full Story

06:20 PM (IST) Sep 26

ಸಮಾಜದಲ್ಲಿ ಎಲ್ಲರೂ ಸಮಾನರು, ಜೀವನವೇ 'ಕುಂಟೆಬಿಲ್ಲೆ' - ನಿರ್ದೇಶಕ ಸಿದ್ದೇಗೌಡ

ನಾನು ಸಿನಿಮಾ ರಂಗಕ್ಕೆ ಬಂದು 30 ವರ್ಷಗಳಾಗಿವೆ. ಆರಂಭದಲ್ಲಿ ಕಿರುತೆರೆಯಲ್ಲಿದ್ದೆ. ಆ ಬಳಿಕ ಹಿರಿತೆರೆಗೆ ಬಂದೆ. ಹಳ್ಳಿ ಸೊಗಡಿನ ಒಂದೊಳ್ಳೆ ಕಥೆ ಹೇಳುವ ಉದ್ದೇಶದಿಂದ ಈ ಸಿನಿಮಾ ಮಾಡಿದ್ದೇನೆ ಎಂದರು ನಿರ್ದೇಶಕ ಸಿದ್ದೇಗೌಡ.

Read Full Story

06:12 PM (IST) Sep 26

ಆನ್​ಲೈನ್​ನಲ್ಲಿಯೇ ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

ಜನನ ಪ್ರಮಾಣ ಪತ್ರವು ಪ್ರತಿಯೊಬ್ಬರಿಗೂ ಅತ್ಯಗತ್ಯ ದಾಖಲೆಯಾಗಿದ್ದು, ಇದನ್ನು ಕರ್ನಾಟಕದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಪಡೆಯಬಹುದು. ಸೇವಾ ಸಿಂಧು ಪೋರ್ಟಲ್ ಬಳಸಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹಂತ-ಹಂತದ ಪ್ರಕ್ರಿಯೆ, ವಿಳಂಬವಾದರೆ ಅನುಸರಿಸಬೇಕಾದ ನಿಯಮ ವಿವರಿಸಲಾಗಿದೆ.

Read Full Story

05:37 PM (IST) Sep 26

ಶಿವಮೊಗ್ಗದಲ್ಲಿ ಯಶಸ್ವಿಯಾಗಿ ಅಖಿಲ ಭಾರತ ತೆರಿಗೆ ವಿನಾಯಿತಿ ಸಮ್ಮೇಳನ - CBDT ಹಿರಿಯ ಅಧಿಕಾರಿಗಳ ಭಾಗಿ

All India Income Tax Exemptions Conference Held in Shivamogga ಆದಾಯ ತೆರಿಗೆ ಇಲಾಖೆಯ ವಿನಾಯಿತಿ ವಿಭಾಗವು ಶಿವಮೊಗ್ಗದಲ್ಲಿ ಅಖಿಲ ಭಾರತ ವಿನಾಯಿತಿಗಳ ಸಮ್ಮೇಳನ ಮತ್ತು ಪಾಲುದಾರರ ಸಮಾಲೋಚನೆಯನ್ನು ಯಶಸ್ವಿಯಾಗಿ ಆಯೋಜಿಸಿತು. 

Read Full Story

05:34 PM (IST) Sep 26

Amruthadhaare - ಅಪ್ಪ- ಮಗ ಒಂದಾಗುವ ಹೊತ್ತಲ್ಲೇ ಆಕಾಶ್​ ಕಿಡ್​ನ್ಯಾಪ್​? ಮುಂದೇನಾಗತ್ತೆ?

ಗೌತಮ್ ಮತ್ತು ಆಕಾಶ್ ಒಂದಾಗುವ ಸಮಯ ಹತ್ತಿರವಾಗುತ್ತಿದ್ದಂತೆ, ಭೂಮಿಕಾ ಎಂಎಲ್ಎ ಮಗನ ವಿರುದ್ಧ ತೆಗೆದುಕೊಂಡ ನಿರ್ಧಾರದಿಂದ ಆಕಾಶ್ ಅಪಹರಣಕ್ಕೊಳಗಾಗುವ ಅಪಾಯದಲ್ಲಿದ್ದಾನೆ. ಈ ಸಂಕಷ್ಟದಿಂದ ಗೌತಮ್ ತನ್ನ ಮಗನನ್ನು ಪಾರುಮಾಡಿ, ಭೂಮಿಕಾ ಜೊತೆ ಒಂದಾಗುತ್ತಾನೆಯೇ ಎನ್ನುವುದು ಕಥೆಯ ಪ್ರಮುಖ ತಿರುವು.
Read Full Story

04:27 PM (IST) Sep 26

ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ, ಗಂಟೆಗೆ 30ರಿಂದ 40ಕಿ.ಮೀ ವೇಗದಲ್ಲಿ ಗಾಳಿ, ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್

ರಾಜ್ಯದಲ್ಲಿ ಮತ್ತೆ ಮಳೆ ಚುರುಕುಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಉತ್ತರ, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ಹವಾಮಾನ ಇಲಾಖೆಯು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

Read Full Story

04:21 PM (IST) Sep 26

Pandavapura land purchase fraud - ರೈತರೇ ಜಮೀನು ಮಾರಾಟ ಮಾಡುವ ಮುನ್ನ ಎಚ್ಚರ! ಬೆಂಗಳೂರು ಉದ್ಯಮಿಯ ವಂಚನೆ ನೋಡಿ ಹೇಗಿದೆ!

Pandavapura land purchase fraud: ಪಾಂಡವಪುರ ತಾಲೂಕಿನ ಎರಡು ರೈತ ಕುಟುಂಬಗಳಿಗೆ ಸೇರಿದ 2.18 ಎಕರೆ ಜಮೀನನ್ನು ಬೆಂಗಳೂರಿನ ಉದ್ಯಮಿ ನಾಗರಾಜು ಖರೀದಿಸಿ, ಮುಂಗಡ ಹಣ ನೀಡಿ ಬಾಕಿ ಕೋಟ್ಯಾಂತರ ರೂ. ನೀಡದೆ ವಂಚಿಸಿದ್ದಾನೆ. ಜಮೀನು ಪರಭಾರೆಯಾಗದಂತೆ ತಡೆಯಲು ರೈತ ಮುಖಂಡರು ಉಪನೋಂದಣಾಧಿಕಾರಿ ಭೇಟಿ

Read Full Story

04:04 PM (IST) Sep 26

ನಮ್ಮ ಮೇಲೆ ಯಾಕಿಷ್ಟು ದ್ವೇಷ, ನಾವು ಇಲ್ಲಿ ನಿಮಿತ್ತ ಮಾತ್ರ - ಡಾ.ಡಿ. ವೀರೇಂದ್ರ ಹೆಗ್ಗಡೆ

Veerendra Heggade on Controversy Why So Much Hatred Towards Us ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ಕುರಿತು ಎಸ್‌ಐಟಿ ರಚಿಸಿದ್ದಕ್ಕೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. 

Read Full Story

03:57 PM (IST) Sep 26

Uttara kannada - ಅಸಮಾನತೆ ತೊಡೆದು ಹಾಕುವುದು ನಮ್ಮ ಮುಂದಿನ ಗುರಿ - ಚೇತನ್

Chetan ahimsa: ಹೊನ್ನಾವರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನಟ ಚೇತನ್ ಅಹಿಂಸಾ, ಕುವೆಂಪು ಅಂಬೇಡ್ಕರ್‌ರವರ ಚಿಂತನೆಗಳ ಆಧಾರದ ಮೇಲೆ ಸಮಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಬೇಕೆಂದು ಕರೆ ನೀಡಿದರು. ಭ್ರಷ್ಟಾಚಾರ ಮುಕ್ತ ಆಡಳಿತ ತರಲು ಕರ್ನಾಟಕದಿಂದಲೇ ಹೋರಾಟ ಆರಂಭಿಸೋಣ ಎಂದರು.

Read Full Story

03:16 PM (IST) Sep 26

ಐಪಿಎಲ್ ಟ್ರೋಫಿ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ ರಾಜಸ್ಥಾನ ಫ್ರಾಂಚೈಸಿ, ದ್ರಾವಿಡ್ ಸ್ಥಾನಕ್ಕೆ ಲಂಕಾ ಲೆಜೆಂಡ್ ಎಂಟ್ರಿ!

ರಾಹುಲ್ ದ್ರಾವಿಡ್ ಅವರಿಂದ ತೆರವಾದ ರಾಜಸ್ಥಾನ ರಾಯಲ್ಸ್ ಕೋಚ್ ಸ್ಥಾನಕ್ಕೆ ಕುಮಾರ್ ಸಂಗಕ್ಕಾರ ಮರಳುವ ಸಾಧ್ಯತೆಯಿದೆ. ಕಳೆದ ಸೀಸನ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ತಂಡದಲ್ಲಿ ಸಮಸ್ಯೆ ಬಿಕ್ಕಟ್ಟನ್ನು ಬಗೆಹರಿಸುವುದು ಸಂಗಕ್ಕಾರ ಮುಂದಿರುವ ಮೊದಲ ಸವಾಲಾಗಿದೆ.

Read Full Story

02:56 PM (IST) Sep 26

ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಕೇಸ್‌ ನಲ್ಲಿ ಕಾನೂನು ಸಂಕಷ್ಟ, ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣ!

ಬೆಳಗಾವಿಯಲ್ಲಿ ನಡೆದ ರಾಜಕೀಯ ಸಮಾವೇಶದ ವೇಳೆ ಪೊಲೀಸ್ ಅಧಿಕಾರಿಯ ಮೇಲೆ ಕೈ ಎತ್ತಿದ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಖಾಸಗಿ ದೂರು ದಾಖಲಿಸಿದ್ದಾರೆ.  ಪ್ರಕರಣವು ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದೆ.

Read Full Story

02:04 PM (IST) Sep 26

ಹಿಂದಿ ಹೇರಿಕೆ ಕಾರ್ಯಕ್ರಮ ಆರೋಪ - ಹೋಟೆಲ್ ತಾಜ್ ವೆಸ್ಟೆಂಡ್‌ಗೆ ನುಗ್ಗಿದ ಕರವೇ ಕಾರ್ಯಕರ್ತರ ಬಂಧನ

ಬೆಂಗಳೂರಿನ ತಾಜ್ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಸಭೆಯನ್ನು ಕರವೇ ಕಾರ್ಯಕರ್ತರು ಭಗ್ನಗೊಳಿಸಿದ್ದಾರೆ. ಈ ವೇಳೆ ಪೊಲೀಸರು ಹಲವು ಕಾರ್ಯಕರ್ತರನ್ನು ಬಂಧಿಸಿದ್ದು, దీనికి ವಿರುದ್ಧವಾಗಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಕರವೇ ಎಚ್ಚರಿಸಿದೆ.
Read Full Story

01:32 PM (IST) Sep 26

Davanagere - ನಾನು ಸಿಎಂ ಆದ್ರೆ ಪೊಲೀಸರ ಕೈಗೆ ಎಕೆ 47 ನೀಡ್ತೇನೆ - ಯತ್ನಾಳ್

ದಾವಣಗೆರೆಯಲ್ಲಿ ನಡೆದ ದಸರಾ ಉತ್ಸವದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಾಜ್ಯದಲ್ಲಿ ಹಿಂದುತ್ವದ ಅಲೆ ಎದ್ದಿದೆ ಎಂದರು. ತಾವು ಮುಖ್ಯಮಂತ್ರಿಯಾದರೆ ಹಿಂದೂ ವಿರೋಧಿಗಳನ್ನು ಎದುರಿಸಲು ಪೊಲೀಸರಿಗೆ ಎಕೆ-47 ನೀಡುವ ಭರವಸೆ ನೀಡಿದ್ದು, ಸಿದ್ದರಾಮಯ್ಯ ಸರ್ಕಾರದ ತುಷ್ಟೀಕರಣ ನೀತಿಯನ್ನು  ಟೀಕಿಸಿದರು.

Read Full Story

12:36 PM (IST) Sep 26

ನವರಾತ್ರಿ 5ನೇ ದಿನ ಸರಸ್ವತಿ ಪುತ್ರ ಎಸ್.ಎಲ್.ಭೈರಪ್ಪ ಪಂಚಭೂತಗಳಲ್ಲಿ ಲೀನ

SL Bhyrappa: ಅಗಲಿದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ (SL Bhyrappa) ಇಂದು ಬೆಳಗ್ಗೆ ... ಗಂಟೆಗೆ ಮೈಸೂರಿನ (Mysuru) ಚಾಮುಂಡಿ ಬೆಟ್ಟದ (Chamundi hill) ತಪ್ಪಲಿನ ರುದ್ರ ಭೂಮಿಯಲ್ಲಿ ಪಂಚಭೂತಗಳಲ್ಲಿ ಲೀನವಾದರು. 

Read Full Story

12:16 PM (IST) Sep 26

Hindu Mythology - ಕುಬೇರ ದೇವನ ವಾಹನ ಪ್ರಾಣಿ-ಪಕ್ಷಿಗಳಲ್ಲ, ಮಾನವ! ಇದರ ಹಿಂದಿನ ದೈವಿಕ ರಹಸ್ಯ ತಿಳಿಯಿರಿ

ಸಂಪತ್ತಿನ ದೇವರಾದ ಕುಬೇರನ ವಾಹನವು ಇತರ ದೇವತೆಗಳಂತೆ ಪ್ರಾಣಿ ಅಥವಾ ಪಕ್ಷಿಯಲ್ಲ, ಬದಲಾಗಿ ಮನುಷ್ಯ. ಪುರಾಣಗಳ ಪ್ರಕಾರ, ಸಂಪತ್ತಿನ ನಿಜವಾದ ಮಾಲೀಕರು ಮತ್ತು ಬಳಕೆದಾರರು ಮನುಷ್ಯರೇ ಎಂಬುದನ್ನು ಇದು ಸಂಕೇತಿಸುತ್ತದೆ. ಅಲ್ಲದೆ, ಸಂಪತ್ತನ್ನು ಧರ್ಮಯುತವಾಗಿ ಬಳಸುವ ಜವಾಬ್ದಾರಿಯನ್ನು ನೆನಪಿಸುತ್ತದೆ.

Read Full Story

11:51 AM (IST) Sep 26

Valmiki community protest - ಕುರುಬ ಎಸ್ಟಿ ಸೇರ್ಪಡೆಗೆ ವಾಲ್ಮೀಕಿ ಸಮುದಾಯ ವಿರೋಧ, ಸಿಎಂ ಮನೆಗೆ ಮುತ್ತಿಗೆ ಎಚ್ಚರಿಕೆ

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಿಎಂ ಸಿದ್ದರಾಮಯ್ಯ ಅವರ ಹುನ್ನಾರದ ವಿರುದ್ಧ ಬಳ್ಳಾರಿಯಲ್ಲಿ ವಾಲ್ಮೀಕಿ ಸಮಾಜ ಬೃಹತ್ ಪ್ರತಿಭಟನೆ ನಡೆಸಿತು. ಇದು ಸಮುದಾಯವನ್ನು ರಾಜಕೀಯವಾಗಿ, ಶೈಕ್ಷಣಿಕವಾಗಿ ಹತ್ತಿಕ್ಕುವ ಯತ್ನ ಎಂದು ಆರೋಪಿಸಿರು. ಸಿಎಂ ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು.

Read Full Story

11:21 AM (IST) Sep 26

windmill noise pollution in Kudligi - ಗಾಳಿಯಂತ್ರದ ಸದ್ದಿಗೆ ದನ, ಕುರಿಗಳಿಗೂ ಇಲ್ಲ ನಿದ್ರೆ!

windmill noise pollution in Kudligi: ಗುಡೇಕೋಟೆ ಮತ್ತು ಹೊಸಹಳ್ಳಿ ಹೋಬಳಿಯ ಗ್ರಾಮದಲ್ಲಿ ಸ್ಥಾಪಿಸಲಾದ ಗಾಳಿಯಂತ್ರಗಳ ನಿರಂತರ ಸದ್ದಿನಿಂದಾಗಿ ಜನರು, ದನ-ಕುರಿಗಳಂತಹ ಪ್ರಾಣಿಗಳು ನಿದ್ದೆಯಿಲ್ಲದೆ ಬಳಲುತ್ತಿವೆ. ಸ್ಥಳೀಯ ಜೀವ ಸಂಕುಲದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಪರಿಸರವಾದಿಗಳು ಆತಂಕ

Read Full Story

10:49 AM (IST) Sep 26

Bengaluru twin tunnel road - ಟೆಂಡರ್‌ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ, ಸರ್ಕಾರಕ್ಕೆ ನೋಟಿಸ್‌

twin tunnel road project Bengaluru: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಉದ್ದೇಶಿಸಿರುವ ಹೆಬ್ಬಾಳ-ಸಿಲ್ಕ್ ಬೋರ್ಡ್ ಜೋಡಿ ಸುರಂಗ ಮಾರ್ಗ ಯೋಜನೆಗೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಪರಿಸರ ಪರಿಣಾಮ ಮೌಲ್ಯಮಾಪನ ಮತ್ತು ಸೂಕ್ತ ಅಧ್ಯಯನ ನಡೆಸದೆ ಟೆಂಡರ್ ಆರೋಪ

Read Full Story

10:24 AM (IST) Sep 26

Yadgir Murder case - ಅನೈತಿಕ ಸಂಬಂಧ ಶಂಕೆ, ಕೊಡಲಿಯಿಂದ ಮಕ್ಕಳಿಬ್ಬರ ಕೊಚ್ಚಿ ಕೊಂದ ತಂದೆ!

Hattikuni village murder case: ಯಾದಗಿರಿಯ ಹತ್ತಿಕುಣಿ ಗ್ರಾಮದಲ್ಲಿ, ಪತ್ನಿಯ ಅನೈತಿಕ ಸಂಬಂಧವನ್ನು ಶಂಕಿಸಿದ ತಂದೆಯೊಬ್ಬ ತನ್ನ ಮೂವರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಈ ಘೋರ ಕೃತ್ಯದಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಮಗು ಗಂಭೀರವಾಗಿ ಗಾಯಗೊಂಡಿದೆ.

Read Full Story

09:53 AM (IST) Sep 26

Mysuru - ದಸರಾ ಕವಿಗೋಷ್ಠಿ, ಗ್ರಾಮರ್ ಬೇಕಿದ್ರೆ 'ಥಿ' ಬರಿ, ಗ್ಲ್ಯಾಮರ್ ಬೇಕಿದ್ರೆ ತಿ ಬರಿ..!

Mysuru dasara 2025: ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನಡೆದ ದಸರಾ ಪ್ರಜ್ವಲ ಕವಿಗೋಷ್ಠಿಯಲ್ಲಿ ಹಿರಿಯ ಹಾಸ್ಯಕವಿ ಎಂ.ಎಸ್‌. ನರಸಿಂಹಮೂರ್ತಿ ಅವರು ಮೊಬೈಲ್‌ನಿಂದಾಗುವ ಅವಾಂತರಗಳ ಬಗ್ಗೆ ಮಾತನಾಡಿ ನಗೆಗಡಲಲ್ಲಿ ತೇಲಿಸಿದರು. ಆನ್‌ಲೈನ್ ವಂಚನೆಗಳ ಬಗ್ಗೆ ಎಚ್ಚರಿಸಿದ ಅವರು, ಪಿನ್‌ ಗೌಪ್ಯವಾಗಿಡಲು ತಿಳಿಸಿದರು

Read Full Story

09:36 AM (IST) Sep 26

ಆಮದಾಗುವ ಔಷಧಿಗಳಿಗೆ ಶೇ.100 ತೆರಿಗೆ ವಿಧಿಸಿದ ಟ್ರಂಪ್ - ಭಾರತದ ಫಾರ್ಮಾ ಕಂಪನಿಗಳಿಗೆ ಸಂಕಷ್ಟ

US drug import tariffs: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿದೇಶಗಳಿಂದ ಆಮದಾಗುವ ಔಷಧಿಗಳ ಮೇಲೆ ಶೇಕಡಾ 100ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ಅಮೆರಿಕ ಮಾರುಕಟ್ಟೆಯನ್ನೇ ಹೆಚ್ಚು ಅವಲಂಬಿಸಿರುವ ಭಾರತದ ಫಾರ್ಮಾ ಕಂಪನಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ.

Read Full Story

09:31 AM (IST) Sep 26

Kasaragod Kannada - ಕಾಸರಗೋಡಲ್ಲಿ ಕನ್ನಡ ಫಲಕ ಅಳವಡಿಸುವಂತೆ ಕೇರಳಕ್ಕೆ ಕೇಂದ್ರ ನಿರ್ದೇಶನ

ಕೇಂದ್ರ ಅಲ್ಪಸಂಖ್ಯಾತರ ಇಲಾಖೆಯ ನಿರ್ದೇಶನದಂತೆ, ಗಡಿಜಿಲ್ಲೆ ಕಾಸರಗೋಡಿನಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಲು ಕೇರಳ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ, ಗಡಿನಾಡಿನ ಕನ್ನಡ ಹೋರಾಟಗಾರ ಕಯ್ಯಾರ ಕಿಂಞಣ್ಣ ರೈ ಸಾಂಸ್ಕೃತಿಕ ಭವನ ನಿರ್ಮಾಣ ಶೀಘ್ರದಲ್ಲೇ ಲೋಕಾರ್ಪಣೆ..

Read Full Story

08:28 AM (IST) Sep 26

Karnataka High court - ಬೈಕ್ ಟ್ಯಾಕ್ಸಿ ನೀತಿ ರೂಪಿಸದ ಸರ್ಕಾರದ ವಿರುದ್ಧ ಹೈಕೋರ್ಟ್ ಗರಂ

ಬೈಕ್‌ ಟ್ಯಾಕ್ಸಿ ನೀತಿ ರೂಪಿಸಲು ವಿಫಲವಾದ ಸರ್ಕಾರದ ವಿರುದ್ಧ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಓಲಾ, ಉಬರ್‌ ಮತ್ತು ರ‍್ಯಾಪಿಡೋ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಪೀಠ, ಬೈಕ್‌ ಟ್ಯಾಕ್ಸಿ ಮೇಲಿನ ನಿರ್ಬಂಧಕ್ಕೆ ತಡೆ ನೀಡುವ ಬಗ್ಗೆ ಪರಿಶೀಲಿಸುವುದಾಗಿ ಮೌಖಿಕವಾಗಿ ಎಚ್ಚರಿಸಿದೆ.
Read Full Story

08:04 AM (IST) Sep 26

ಪುದುಚೇರಿಯಲ್ಲಿ ಕಾರು ನೋಂದಾಯಿಸಿ ರಾಜ್ಯಕ್ಕೆ ತೆರಿಗೆ ವಂಚಿಸಿದ ಕಾಂಗ್ರೆಸ್ ಶಾಸಕ?

ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಅವರು ತೆರಿಗೆ ಉಳಿಸಲು ತಮ್ಮ ಇನ್ನೋವಾ ಕ್ರಿಸ್ಟಾ ಕಾರನ್ನು ಪುದುಚೇರಿಯಲ್ಲಿ ನೋಂದಣಿ ಮಾಡಿ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಕರ್ನಾಟಕ ರಾಜ್ಯಕ್ಕೆ ತೆರಿಗೆ ನಷ್ಟವಾಗಿದ್ದು, ಹೊರರಾಜ್ಯದ ವಾಹನಗಳನ್ನು ಜಪ್ತಿ ಮಾಡುತ್ತಿರುವ ಆರ್‌ಟಿಒ, ಶಾಸಕರ ಕಾರನ್ನು ಸೀಜ್ ಮಾಡುತ್ತದೆಯೇ?

Read Full Story

07:36 AM (IST) Sep 26

ದಸರಾ ಬಳಿಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಬದಲಾವಣೆ! ಯಾವ್ಯಾವ ಅಧಿಕಾರಿಗಳ ವರ್ಗಾವಣೆ ಸಾಧ್ಯತೆ?

Karnataka Police Depertment:ದಸರಾ ಹಬ್ಬದ ನಂತರ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಾಮೂಹಿಕ ವರ್ಗಾವಣೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಒಂದೇ ಸ್ಥಳದಲ್ಲಿ ಎರಡು ವರ್ಷ ಪೂರೈಸಿದ ಅಧಿಕಾರಿಗಳು, ಕಾನೂನು ಸುವ್ಯವಸ್ಥೆ ವೈಫಲ್ಯ ಹಾಗೂ ಭ್ರಷ್ಟಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಮೇಜರ್ ಸರ್ಜರಿ ನಡೆಯಲಿದೆ.

Read Full Story

More Trending News