Published : Mar 26, 2026, 08:11 AM ISTUpdated : Mar 26, 2026, 10:50 PM IST

Karnataka Latest News: ಹೂವಿನಂತಹ ಮೂವರು ಮಕ್ಕಳನ್ನು ಬಾವಿಗೆ ಎಸೆದು ತಾನೂ ಪ್ರಾಣಬಿಟ್ಟ ತಾಯಿ; ವಿಜಯಪುರದಲ್ಲಿ ಘೋರ ದುರಂತ

ಸಾರಾಂಶ

ಸ್ಪೀಕರ್‌ ಯು.ಟಿ.ಖಾದರ್‌ ಅವರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿ ಹಾಲಿ ವಿಧಾನಸಭೆಯ ಎಲ್ಲಾ ಶಾಸಕರ ಗ್ರೂಫ್‌ ಫೋಟೋ ಸೆಷನ್‌ ಆಯೋಜಿಸಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Vijayapura Child Death

10:50 PM (IST) Mar 26

ಹೂವಿನಂತಹ ಮೂವರು ಮಕ್ಕಳನ್ನು ಬಾವಿಗೆ ಎಸೆದು ತಾನೂ ಪ್ರಾಣಬಿಟ್ಟ ತಾಯಿ; ವಿಜಯಪುರದಲ್ಲಿ ಘೋರ ದುರಂತ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ, ರಾಜಶ್ರೀ ಎಂಬ ತಾಯಿ ತನ್ನ ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಊರಲ್ಲಿಲ್ಲದ ವೇಳೆ ಈ ದುರಂತ ಸಂಭವಿಸಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

10:42 PM (IST) Mar 26

King Movie - 10 ರಷ್ಯನ್ ಫೈಟರ್ಸ್ ಜೊತೆ ಶಾರುಖ್ ಖಾನ್ ಫೈಟ್ - ಹಿಂದೆಂದೂ ನೋಡಿರದ ಆಕ್ಷನ್ ಸೀನ್‌ಗೆ ಸಿದ್ಧತೆ

ಶಾರುಖ್ ಖಾನ್ ಮತ್ತೊಮ್ಮೆ ತಮ್ಮ 'ಕಿಂಗ್' ಚಿತ್ರದ ಮೂಲಕ ಬಾಕ್ಸ್ ಆಫೀಸ್ ಶೇಕ್ ಮಾಡಲು ಸಿದ್ಧರಾಗಿದ್ದಾರೆ. ಚಿತ್ರದ ಬಗ್ಗೆ ಹೊಸ ಹೊಸ ಅಪ್‌ಡೇಟ್‌ಗಳು ಬರುತ್ತಲೇ ಇವೆ. ಈಗ ಮತ್ತೊಂದು ತಾಜಾ ಸುದ್ದಿ ಹೊರಬಿದ್ದಿದೆ.

Read Full Story

10:37 PM (IST) Mar 26

ಇವ ಗೋವಾದ ಪ್ರಜ್ವಲ್ ರೇವಣ್ಣ - 30ಕ್ಕೂ ಹೆಚ್ಚು ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ

ಗೋವಾದಲ್ಲಿ 30ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಬಿಜೆಪಿ ಮುನ್ಸಿಪಲ್ ಕೌನ್ಸಿಲರ್ ಪುತ್ರ ಸೋಹಮ್ ಸುಶಾಂತ್ ನಾಯ್ಕ್‌ನನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ಕರ್ನಾಟಕದ ಪ್ರಜ್ವಲ್ ರೇವಣ್ಣ  ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಹೋಲಿಸಲಾಗುತ್ತಿದೆ.

Read Full Story

10:13 PM (IST) Mar 26

ಚಿಕ್ಕಬಳ್ಳಾಪುರ - ಗಂಡು ದೆವ್ವದ ಕಾಟಕ್ಕೆ ಬೇಸತ್ತು ವಿಚಿತ್ರವಾಗಿ ವರ್ತಿಸಿ ಸಾವು ಕಂಡ ಮಹಿಳೆ!

ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿಯಲ್ಲಿ, ದೆವ್ವ ಕಾಡುತ್ತಿದೆ ಎಂಬ ಮಾನಸಿಕ ಭೀತಿಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ವೈದ್ಯಕೀಯ ಚಿಕಿತ್ಸೆಯ ಬದಲು ಮಂತ್ರವಾದಿಗಳ ಮೊರೆ ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. 

Read Full Story

09:03 PM (IST) Mar 26

ಮದುವೆಯಾದ ತಂಗಿಯ ಮೇಲೆ ಕಣ್ಣುಹಾಕಿದ ಬಾಮೈದನ ಕಥೆ ಮುಗಿಸಿದ ಭಾವ!

ಆನೇಕಲ್ ತಾಲೂಕಿನಲ್ಲಿ, ತನ್ನ ತಂಗಿಯೊಂದಿಗಿನ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸ್ವಂತ ಬಾಮೈದನನ್ನು ಕೊಲೆ ಮಾಡಿದ್ದಾನೆ. ಹತ್ಯೆಯ ನಂತರ, ಆರೋಪಿಯು ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಬನ್ನೇರುಘಟ್ಟ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
Read Full Story

08:14 PM (IST) Mar 26

ತಮಿಳುನಾಡು ಸಿಎಂ ಸ್ಟಾಲಿನ್‌ರಿಂದ ಡಿಕೆಶಿ ಎನ್‌ಒಸಿ ತೆಗೆದುಕೊಂಡು ಬರಲಿ - ನಿಖಿಲ್ ಕುಮಾರಸ್ವಾಮಿ

ಮೇಕೆದಾಟು ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಅವರಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಎನ್ ಒಸಿ ತೆಗೆದುಕೊಂಡು ಬರಲಿ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.

Read Full Story

07:46 PM (IST) Mar 26

Viral Video - ಟ್ರಾನ್ಸ್‌ಜೆಂಡರ್‌ ಜೊತೆ ರೂಮ್‌ನಲ್ಲಿ ಆಹಾರ ಸಚಿವನ ಕುಚ್‌ ಕುಚ್‌ ವಿಡಿಯೋ ಲೀಕ್‌!

ಮಹಾರಾಷ್ಟ್ರ ಸಚಿವ ನರಹರಿ ಜಿರ್ವಾಲ್ ಅವರ ಅಧಿಕೃತ ಬಂಗಲೆಯಲ್ಲಿ ತೃತೀಯಲಿಂಗಿಯೊಂದಿಗೆ ಇರುವ ವಿಡಿಯೋ ವೈರಲ್ ಆಗಿ ವಿವಾದ ಸೃಷ್ಟಿಸಿದೆ. ಈ ಘಟನೆಯಿಂದಾಗಿ ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಒತ್ತಾಯಿಸುತ್ತಿದೆ.

Read Full Story

07:37 PM (IST) Mar 26

ಚಾಮರಾಜನಗರ - ಬಿ‌ಆರ್‌ಟಿಯ ಹಲವು ಕಡೆಗಳಲ್ಲಿ ಭಾರಿ ಬೆಂಕಿ - ಧಗಧಗನೇ ಹೊತ್ತಿ ಉರಿಯುತ್ತಿರುವ ಹುಲಿ ಸಂರಕ್ಷಿತ ಪ್ರದೇಶ

ಚಾಮರಾಜನಗರ ಜಿಲ್ಲೆಯ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ನಾಶವಾಗಿದೆ. ಇದು ಕಿಡಿಗೇಡಿಗಳ ಕೃತ್ಯವಿರಬಹುದೆಂದು ಶಂಕಿಸಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
Read Full Story

07:37 PM (IST) Mar 26

ಕರ್ನಾಟಕದಲ್ಲೂ 'ಧುರಂಧರ್ 2' ಕಮಾಲ್, 7 ದಿನದಲ್ಲಿ ಯಾವುದೇ ಚಿತ್ರವೂ ಮಾಡದ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿ!

ಧುರಂಧರ್ 2 ಕರ್ನಾಟಕದಲ್ಲಿ ಕೂಡ ಕಮಾಲ್ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಲೆಕ್ಷನ್ ಮಾಡೋದಂತೂ ಖಂಡಿತ. ಸದ್ಯದಲ್ಲೇ ಈ ಚಿತ್ರವು ಜಗತ್ತಿನಾದ್ಯಂತ 2000 ಕೋಟಿ ಗಳಿಕೆ ಮಾಡಿ ಹೊಸ ದಾಖಲೆ ಬರೆಯೋದು ಖಂಡಿತ ಎಂಬ ಮಾತು ಎಲ್ಲರಿಂದಲೂ ಬರುತ್ತಿದೆ.

Read Full Story

07:26 PM (IST) Mar 26

Amruthadhaare ಜೈದೇವ್​ಗಾಗಿ ನಾನ್​ವೆಜ್​ ಮಾಡೋದ ಕಲಿತೆ - ನಾಚುತ್ತಲೇ ನಟಿ ರಾಧಾ ಭಗವತಿ ಹೇಳಿದ್ದೇನು?

'ಅಮೃತಧಾರೆ' ಸೀರಿಯಲ್ ಖ್ಯಾತಿಯ ರಾಣವ್ ಗೌಡ ಮತ್ತು 'ಭಾರ್ಗವಿ ಎಲ್ಎಲ್​ಬಿ' ನಟಿ ರಾಧಾ ಭಗವತಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಸೀರಿಯಲ್ ಸೆಟ್‌ನಲ್ಲಿ ಪ್ರೀತಿಸಿ, ಕುಟುಂಬದ ಒಪ್ಪಿಗೆಯೊಂದಿಗೆ ಒಂದಾಗುತ್ತಿರುವ ಈ ಜೋಡಿಯ ವಿಶೇಷವೆಂದರೆ, ಪತಿ ರಾಣವ್‌ಗಾಗಿ ರಾಧಾ ಅವರು ನಾನ್‌ವೆಜ್ ಅಡುಗೆ ಕಲಿಯುತ್ತಿದ್ದಾರೆ

Read Full Story

06:55 PM (IST) Mar 26

ಟ್ರೈಲರ್​ ನೋಡಿ 5 ಲಕ್ಷ ಗೆಲ್ಲಿ - ಪ್ರತಿಯೊಬ್ಬರಿಗೂ ಬಹುಮಾನ- ನಟ ಪ್ರಥಮ್​ ಬಂಪರ್​ ಆಫರ್​ ಏನು?

ಬಿಗ್ ಬಾಸ್ ವಿನ್ನರ್ ಪ್ರಥಮ್ ಅವರ 'ಫಸ್ಟ್ ನೈಟ್ ವಿತ್ ದೆವ್ವ' ಚಿತ್ರವು ಏಪ್ರಿಲ್ 3 ರಂದು ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರಕ್ಕಾಗಿ, ಟ್ರೈಲರ್‌ಗೆ ಕ್ರಿಯೇಟಿವ್ ಕಾಮೆಂಟ್ ಹಾಕಿದ ಪ್ರೇಕ್ಷಕರಿಗೆ ಪ್ರಥಮ್ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

Read Full Story

06:25 PM (IST) Mar 26

ಧುರಂಧರ್ 2ಗಾಗಿ ರಣವೀರ್ ಸಿಂಗ್ ಬಾಡಿ ಟ್ರಾನ್ಸ್‌ಫರ್ಮೇಷನ್ - ತೂಕ ಇಳಿಸಿ, ಏರಿಸಿ ಅಚ್ಚರಿ ಮೂಡಿಸಿದ ನಟ

ಧುರಂಧರ್ 2 ಚಿತ್ರಕ್ಕಾಗಿ ನಟ ರಣವೀರ್ ಸಿಂಗ್ ತಮ್ಮ ದೇಹವನ್ನು ಅದ್ಭುತವಾಗಿ ಬದಲಾಯಿಸಿಕೊಂಡಿದ್ದಾರೆ. ಹಮ್ಜಾ ಪಾತ್ರಕ್ಕಾಗಿ 10 ಕೆಜಿ ತೂಕ ಹೆಚ್ಚಿಸಿ, ಜಸ್‌ಕಿರತ್ ಪಾತ್ರಕ್ಕಾಗಿ 15 ಕೆಜಿ ಇಳಿಸಿದ್ದಾರೆ.

Read Full Story

05:47 PM (IST) Mar 26

ಚಿಕ್ಕಮಗಳೂರು - ಚಲಿಸುತ್ತಿದ್ದಾಗಲೇ ಕಳಚಿ ಬಂದ ಕೆಎಸ್‌ಆರ್‌ಟಿಸಿ ಬಸ್‌ ಚಕ್ರ!

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ, ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಹಿಂಬದಿ ಚಕ್ರವು ಕಳಚಿ ಬಿದ್ದಿದೆ. ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದ್ದು, ಬಸ್ಸಿನ ಕಳಪೆ ನಿರ್ವಹಣೆ ಮತ್ತು ಸಾರಿಗೆ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

05:44 PM (IST) Mar 26

ಅಪಘಾತದಲ್ಲಿ ಮೆದುಳು ನಿಷ್ಕ್ರಿಯ - ಕಣ್ಣುದಾನ ಮಾಡಿ ಮಗನ ಸಾವಿನಲ್ಲೂ ಸಾರ್ಥಕತೆ ಮರೆದ ಪೋಷಕರು

Organ donation: ವಿಜಯಪುರದಲ್ಲಿ ರಸ್ತೆ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ಆಕಾಶ್ ಹರಿಜನ ಎಂಬ ಬಾಲಕನ ಸಾವಿನ ನೋವಿನಲ್ಲೂ, ಪೋಷಕರು ಅವನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಆದರೆ, ಹಠಾತ್ ರಕ್ತದೊತ್ತಡ ಕುಸಿತದಿಂದಾಗಿ ಅಂತಿಮವಾಗಿ ಮಗನ ನೇತ್ರಗಳನ್ನು ಮಾತ್ರ ದಾನ ಮಾಡಲು ಸಾಧ್ಯವಾಯ್ತು.

Read Full Story

05:01 PM (IST) Mar 26

ಮದ್ವೆಗಾಗಿ ಆಕೆಯನ್ನು ಮೀಟ್​ ಮಾಡಿದಾಗ್ಲೇ ನಾನು Gay ಅಂತ ಗೊತ್ತಾಯ್ತು! CA ನಿಖಿಲ್​ ಓಪನ್​ ಮಾತು

'ಮಿಸ್ಟರ್ ಗೇ ವರ್ಲ್ಡ್ ಇಂಡಿಯಾ 2025' ಕಿರೀಟಧಾರಿ ನಿಖಿಲ್ ಜೈನ್, ತಾವು ಸಲಿಂಗಿ ಎಂದು ಅರಿತ ಕ್ಷಣದ ಬಗ್ಗೆ ಮಾತನಾಡಿದ್ದಾರೆ. ಮದುವೆಯಾಗುವ ಹುಡುಗಿ ತನ್ನ ಹಿಂದಿನ ಪ್ರೀತಿಯ ಬಗ್ಗೆ ಹೇಳಿ, ನಿಮ್ಮ ಕ್ರಷ್ ಯಾರು ಎಂದು ಕೇಳಿದಾಗ, ಸತ್ಯದ ಅರಿವಾಯಿತು ಎಂದು ಅವರು ಬಹಿರಂಗಪಡಿಸಿದ್ದಾರೆ.

Read Full Story

04:49 PM (IST) Mar 26

ಬಸ್ಸಿನ ಮೇಲೆ ಡಿ-ಗ್ಯಾಂಗ್ ಕ್ರೇಜ್ - ಚಿಕ್ಕಮಗಳೂರಿನಲ್ಲಿ ದೇಶದ್ರೋಹಿಯನ್ನು ಹೀರೋ ರೀತಿ ಬಿಂಬಿಸಿದ ಬಸ್ ಜಪ್ತಿ!

ಚಿಕ್ಕಮಗಳೂರಿನಲ್ಲಿ, ಅಂಡರ್ ವರ್ಲ್ಡ್ ಡಾನ್ ದಾವುದ್ ಇಬ್ರಾಹಿಂನನ್ನು ವೈಭವೀಕರಿಸುವ ಚಿತ್ರ ಮತ್ತು ಬರಹಗಳಿದ್ದ ತಮಿಳುನಾಡು ಮೂಲದ ಖಾಸಗಿ ಬಸ್ಸನ್ನು ಹಿಂದೂ ಸಂಘಟನೆಗಳು ತಡೆಹಿಡಿದಿವೆ. ಈ ಘಟನೆಯ ನಂತರ, ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್ಸನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
Read Full Story

04:43 PM (IST) Mar 26

ನೋ ಪಾರ್ಕಿಂಗ್‌ನಲ್ಲಿ ಗಾಡಿ ನಿಲ್ಸೋಕೆ ಧೈರ್ಯ ಇಲ್ಲ, ಇನ್ನು ಕತೆ ಕದೀತೀನಾ ಸರ್‌ - ಡಾರ್ಲಿಂಗ್‌ ಕೃಷ್ಣ

ಗುರು ದೇಶಪಾಂಡೆ ನನ್ನ ಫ್ರೆಂಡ್‌ ಅಲ್ಲ. ಅಂಥವ್ರನ್ನು ಫ್ರೆಂಡ್‌ ಅಂದರೆ ನನ್ನನ್ನು ಮನೆಯೊಳಗೆ ಸೇರಿಸ್ತಾರ.. ನಾನು ಇಲ್ಲೀತನಕ ಹೇಗೆ ಬೆಳೆದೆ, ಅವರು ಹೇಗೆ ಬೆಳೆದರು ಅನ್ನೋದು ಇಂಡಸ್ಟ್ರಿಯಲ್ಲಿರುವವರಿಗೆ ಗೊತ್ತಿದೆ.

Read Full Story

04:24 PM (IST) Mar 26

ಕಲಬುರಗಿ - ನಡುರಸ್ತೆಯಲ್ಲಿ ಕುಡುಗೋಲಿನಿಂದ ಪತ್ನಿಯ ಕತ್ತು ಕತ್ತರಿಸಿ, ಹೆಣದ ಮೇಲೆ ಕಾರು ಹರಿಸಿ ಪತಿಯ ಅಟ್ಟಹಾಸ!

ಕಲಬುರಗಿಯ ಅಫಜಲಪುರ ತಾಲೂಕಿನ ಬಳಿ ಪತಿಯೊಬ್ಬ ತನ್ನ ಪತ್ನಿಯನ್ನು ಕುಡುಗೋಲಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ಆಕೆಯ ಮೇಲೆ ಕಾರ್ ಹತ್ತಿಸಿ ವಿಕೃತಿ ಮೆರೆದಿದ್ದು, ಈ ಘಟನೆಗೆ ಸಾರ್ವಜನಿಕರು ಮೂಕಪ್ರೇಕ್ಷಕರಾಗಿದ್ದರು. ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
Read Full Story

04:15 PM (IST) Mar 26

ಬೆಂಗಳೂರಿನಲ್ಲಿ ಭೀಕರ ಜೋಡಿ ಕೊಲೆ - ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನಿಗೆ ಚಾಕು ಇರಿದು ಕೊಂದ ಬಾಲಕ!

ಪೀಣ್ಯಾದ ನೆಲಗೆದರನಹಳ್ಳಿಯಲ್ಲಿ, ಅಕ್ರಮ ಸಂಬಂಧವನ್ನು ಪ್ರಶ್ನಿಸಲು ಹೋದ ಯಮುನಾ ಮತ್ತು ಆಕೆಯ ತಮ್ಮ ಸುದೀಪ್ ಎಂಬುವವರನ್ನು ಮಹಿಳೆಯೊಬ್ಬಳ ಅಪ್ರಾಪ್ತ ಮಗ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಈ ಘಟನೆಯಿಂದ ಮನನೊಂದ ಮೃತೆ ಯಮುನಾಳ ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Read Full Story

04:14 PM (IST) Mar 26

BOB ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಅಚ್ಚರಿಯ ನೇಮಕಾತಿ - 103 ಹುದ್ದೆಗಳು! ಇಂದೇ ಅರ್ಜಿ ಸಲ್ಲಿಸಿ

ಬ್ಯಾಂಕ್ ಆಫ್ ಬರೋಡಾ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ (BOB Caps) 103 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕ ಮತ್ತು ತಂಡದ ನಾಯಕ ಹುದ್ದೆಗಳಿಗೆ 12ನೇ ತರಗತಿ ಪಾಸಾದವರಿಂದ ಸ್ನಾತಕೋತ್ತರ ಪದವೀಧರರವರೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯು ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
Read Full Story

03:33 PM (IST) Mar 26

ಸೀಟು ಹಿಡಿಯುವ ರಭಸದಲ್ಲಿ ಮಗುವಿನ ಕಾಲೇ ಹೋಯ್ತು - ಅಮ್ಮನ ಕೈನಿಂದ ಕೆಳಗೆ ಬಿದ್ದ ಮಗುವಿನ ಮೇಲೆ ಹರಿದ ಸರ್ಕಾರಿ ಬಸ್

disaster at Savadatti bus stand : ಬೆಳಗಾವಿ ಜಿಲ್ಲೆಯ ಸವದತ್ತಿ ಬಸ್ ನಿಲ್ದಾಣದಲ್ಲಿ, ಸೀಟಿಗಾಗಿ ಬಸ್ ಹತ್ತಲು ಯತ್ನಿಸುತ್ತಿದ್ದ ತಾಯಿಯ ಕೈಯಿಂದ ಜಾರಿದ ಮಗುವಿನ ಕಾಲಿನ ಮೇಲೆ ಸರ್ಕಾರಿ ಬಸ್ ಚಕ್ರ ಹರಿದ ಪರಿಣಾಮ ಮಗು ಗಂಭೀರ ಗಾಯಗೊಂಡಿದೆ.

Read Full Story

03:23 PM (IST) Mar 26

ಕರ್ನಾಟಕ ಹೈಕೋರ್ಟ್‌ನಲ್ಲಿ 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ನೇಮಕಾತಿ, 1.42 ಲಕ್ಷದವರೆಗೆ ವೇತನ!

ಕರ್ನಾಟಕ ಉಚ್ಚ ನ್ಯಾಯಾಲಯವು ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕಟಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 70 ಹುದ್ದೆಗಳು ಲಭ್ಯವಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವೀಧರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
Read Full Story

02:59 PM (IST) Mar 26

1ನೇ ತರಗತಿ ಪ್ರವೇಶ - ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರ, ಶಿಕ್ಷಣ ಸಚಿವರ ಸ್ಪಷ್ಟನೆ

ಕರ್ನಾಟಕ ಸರ್ಕಾರವು ಒಂದನೇ ತರಗತಿ ಪ್ರವೇಶದ ವಯೋಮಿತಿಯಲ್ಲಿ 60 ದಿನಗಳ ವಿನಾಯಿತಿ ಘೋಷಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಪ್ರಕಾರ, ಇನ್ನು ಮುಂದೆ 5 ವರ್ಷ 10 ತಿಂಗಳು ತುಂಬಿದ ಮಕ್ಕಳನ್ನು ಶಾಲೆಗೆ ಸೇರಿಸಬಹುದಾಗಿದ್ದು, ಈ ನಿರ್ಧಾರ ಪೋಷಕರಿಗೆ ನೆಮ್ಮದಿ ತಂದಿದೆ.
Read Full Story

02:37 PM (IST) Mar 26

ಮಂಡ್ಯ ಕುರುಬರ ಸಂಘದಲ್ಲಿ ಹೈಡ್ರಾಮಾ - ಕುರುಬರ ಸಂಘದ ಜಿಲ್ಲಾಧ್ಯಕ್ಷ, ಸಿಎಂ ಸಿದ್ದು ಆಪ್ತನಿಗೆ ಮಸಿ ಎರಚಿ ಆಕ್ರೋಶ

ಮಂಡ್ಯ ಕುರುಬರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಕಿತ್ತಾಟದಲ್ಲಿ, ಅಧಿಕಾರಾವಧಿ ಮುಗಿದರೂ ಮುಂದುವರೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಹಾಲಿ ಅಧ್ಯಕ್ಷ ಸುರೇಶ್‌ಗೆ ಸದಸ್ಯರು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Read Full Story

02:00 PM (IST) Mar 26

ಸದನದಲ್ಲೂ ಐಪಿಎಲ್ ಟಿಕೆಟ್ ಹವಾ; ಕ್ರಿಕೆಟ್ ಮ್ಯಾಚ್‌ ಟಿಕೆಟ್‌ಗಾಗಿ ಸರ್ಕಾರವನ್ನು ಬೇಡಿದ ಶಾಸಕರು!

ಐಪಿಎಲ್ ಆರಂಭದ ಬೆನ್ನಲ್ಲೇ ವಿಧಾನಸೌಧದಲ್ಲಿ ಟಿಕೆಟ್ ಕುರಿತು ಬಿಸಿಬಿಸಿ ಚರ್ಚೆ ನಡೆದಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶಾಸಕರಿಗೆ ಅಗೌರವವಾಗುತ್ತಿದೆ ಮತ್ತು ಸರಿಯಾಗಿ ಟಿಕೆಟ್ ಸಿಗುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಶಾಸಕರಿಗೆ ಗೌರವಯುತವಾಗಿ ಕನಿಷ್ಠ 4 ಟಿಕೆಟ್ ನೀಡುವಂತೆ ಸ್ಪೀಕರ್ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
Read Full Story

02:00 PM (IST) Mar 26

ಶಾಸಕರ ಹಕ್ಕುಚ್ಯುತಿ ಪ್ರಕರಣ ಹೆಚ್ಚಳ - ಅಧಿಕಾರಿಗಳ ವರ್ತನೆಗೆ ಕಡಿವಾಣ? ಸ್ಪೀಕರ್ ಖಾದರ್ ಹೇಳಿದ್ದೇನು?

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಹಕ್ಕುಚ್ಯುತಿಯಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡರು ಸದನದಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಹಲವು ಶಾಸಕರು ಧ್ವನಿಗೂಡಿಸಿದ್ದು, ಅಧಿಕಾರಿಗಳ ವರ್ತನೆಗೆ ಕಡಿವಾಣ ಹಾಕಲು ಸರ್ಕಾರವು ಸೂಕ್ತ ಎಸ್‌ಒಪಿ ರೂಪಿಸಬೇಕೆಂದು ಸ್ಪೀಕರ್ ಯು.ಟಿ.ಖಾದರ್ ಸೂಚಿಸಿದರು.
Read Full Story

01:34 PM (IST) Mar 26

ಗೃಹ ಸಚಿವ ಜಿ.ಪರಮೇಶ್ವರ ಆಪ್ತ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ್ ಹತ್ಯೆಗೆ ಯತ್ನಿಸಿದ 6 ಜನರಲ್ಲಿ 4 ಮಂದಿ ಅರೆಸ್ಟ್

ಅಂಕೋಲಾದಲ್ಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ಹಾಡಹಗಲೇ ಹತ್ಯೆ ಯತ್ನ ನಡೆದಿದೆ. ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
Read Full Story

01:21 PM (IST) Mar 26

ಧಾರವಾಡ ಮಾಜಿ ಶಾಸಕನ ಪುತ್ರನ ಕೊಲೆಗೆ ಬಿಗ್ ಟ್ವಿಸ್ಟ್, ಅನೈತಿಕ ಸಂಬಂಧಕ್ಕೆ ಜೀವ ಹೋಯ್ತಾ? ಬೆಚ್ಚಿಬೀಳಿಸುವ ಸತ್ಯ ಬಿಚ್ಚಿಟ್ಟ ಎಸ್ಪಿ!

ಧಾರವಾಡದಲ್ಲಿ ನಡೆದ ಮಾಜಿ ಶಾಸಕನ ಪುತ್ರ ರಾಜು ಬೋಳಶೆಟ್ಟಿ ಕೊಲೆ ಪ್ರಕರಣಕ್ಕೆ ಅಕ್ರಮ ಸಂಬಂಧವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಓರ್ವ ಮಹಿಳೆ ಸೇರಿ ನಾಲ್ವರನ್ನು ಬಂಧನ, ತೋಟದ ಮನೆಯಲ್ಲಿ ಕೊಲೆ ಮಾಡಿ ರಾಮಾಪುರ ಬಳಿ ಶವವನ್ನು ಸುಟ್ಟು ಹಾಕಲಾಗಿತ್ತು.ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?

Read Full Story

12:47 PM (IST) Mar 26

Bigg Boss ಮ್ಯೂಟಂಟ್​ ರಘುಗೆ ಹಾರ್ಟ್​ ಕೊಟ್ಟ ಅಶ್ವಿನಿ ಗೌಡ! ಅಲ್ಲಿ ಹಾವು-ಮುಂಗುಸಿ, ಇಲ್ಲಿ ನೋಡಿ ಮಜಾ

ಬಿಗ್​ಬಾಸ್​ 12ರಲ್ಲಿ ಅತಿ ಹೆಚ್ಚು ಜಗಳವಾಡಿದ್ದ ಅಶ್ವಿನಿ ಗೌಡ ಮತ್ತು ಮ್ಯೂಟಂಟ್​ ರಘು, ಶೋನಿಂದ ಹೊರಬಂದ ನಂತರ ತಮ್ಮ ವೈರತ್ವ ಮರೆತಿದ್ದಾರೆ. ಗಿಚ್ಚಿ ಗಿಲಿಗಿಲಿ ಷೋನಲ್ಲಿ ಒಂದಾದ ಇವರಿಬ್ಬರು, ಪರಸ್ಪರ ಹೊಗಳಿಕೊಂಡು, ಅಶ್ವಿನಿ ಅವರು ರಘುಗೆ ಲವ್​ ಮಾರ್ಕ್​ ತೋರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Read Full Story

12:43 PM (IST) Mar 26

ಮದುವೆಯಾದ ಒಂದೂವರೆ ತಿಂಗಳಿಗೆ ಸೊಸೆ ನಾಪತ್ತೆ, ಮರ್ಯಾದೆ ಹೋಯ್ತೆಂದು ಮಾವ ಸಾವು, ಗಂಡ ಬೇಡ ರವಿನೇ ಬೇಕು ಅಂದ್ಲಾ ನವವಧು!

ಕೊಪ್ಪಳದಲ್ಲಿ ಮದುವೆಯಾದ ಒಂದೂವರೆ ತಿಂಗಳಲ್ಲೇ ಸಂಜನಾ ಎಂಬ ನವವಧು ನಾಪತ್ತೆಯಾಗಿದ್ದಾಳೆ. ಈ ಆಘಾತದಿಂದ ಆಕೆಯ ಮಾವ ಹೃದಯಾಘಾತದಿಂದ ಮೃತಪಟ್ಟಿದ್ದು, ಕುಟುಂಬಕ್ಕೆ ದೊಡ್ಡ ದುರಂತ ಎದುರಾಗಿದೆ. ಪತಿ ನಾಗರಾಜ್ ಪತ್ನಿಗಾಗಿ ಹುಡುಕಾಟ ನಡೆಸುತ್ತಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
Read Full Story

12:38 PM (IST) Mar 26

ಮರ್ಯಾದಾ ಹತ್ಯೆ ವಿಧೇಯಕ - ಸಮಸಮಾಜಕ್ಕೆ ಬಲ

ಕರ್ನಾಟಕ ಸರ್ಕಾರವು ಮರ್ಯಾದಾಗೇಡು ಹತ್ಯೆಗಳನ್ನು ನಿಷೇಧಿಸಲು 'ಇವ ನಮ್ಮವ, ಇವ ನಮ್ಮವ' ಎಂಬ ಐತಿಹಾಸಿಕ ವಿಧೇಯಕವನ್ನು ಅನುಮೋದಿಸಿದೆ. ಹೆಚ್ಚುತ್ತಿರುವ ಜಾತಿ ಆಧಾರಿತ ಹಿಂಸೆ ಮತ್ತು ಹುಬ್ಬಳ್ಳಿಯ ಮಾನ್ಯಳ ಹತ್ಯೆಯಂತಹ ಘಟನೆಗಳ ಹಿನ್ನೆಲೆಯಲ್ಲಿ, ಈ ಕಾನೂನು ಅಂತರ್‌ಜಾತಿ ವಿವಾಹವಾದವರ ಆಯ್ಕೆಯ ಸ್ವಾತಂತ್ರ್ಯವನ್ನು ರಕ್ಷಿಸುವ ಗುರಿ ಹೊಂದಿದೆ. ಈ ಮೂಲಕ ದೇಶದಲ್ಲೇ ಇಂತಹ ಕಾಯ್ದೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ.
Read Full Story

12:13 PM (IST) Mar 26

ಶಿವಮೊಗ್ಗ - ಬೆಂಕಿಯ ಕೆನ್ನಾಲಗೆಗೆ ಹೊತ್ತಿ ಉರಿದ ಗೂಡ್ಸ್ ಲಾರಿ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇಂದು ಬೆಳಗಿನ ಜಾವ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ನಿಂತಿದ್ದ ಲಾರಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲಿ ಇಡೀ ವಾಹನವನ್ನು ಆವರಿಸಿಕೊಂಡ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ

Read Full Story

12:02 PM (IST) Mar 26

100 ಕೋಟಿ ಗೋಲ್ಡ್ ವಂಚನೆ - ಡಿಕೆಸು ಸುಳ್ಳು ತಂಗಿ ಐಶ್ವರ್ಯಾ ಗೌಡಗೆ ಬಂಧನ ಭೀತಿ, ಸ್ಯಾಂಡಲ್‌ವುಡ್‌ ನಟ ಧರ್ಮಗೂ ಸಂಕಷ್ಟ

ನೂರು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಗೋಲ್ಡ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಐಶ್ವರ್ಯಾ ಗೌಡಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಎರಡು ಹೆಸರು ಬಳಸಿ, ರಾಜಕೀಯ ಪ್ರಭಾವವಿದೆ ಎಂದು ನಂಬಿಸಿ ವಂಚನೆ ನಡೆಸಿದ ಆರೋಪದ ಮೇಲೆ ಸಿಐಡಿ ತನಿಖೆ ಚುರುಕುಗೊಳಿಸಿದ್ದು, ನಟ ಧರ್ಮ ಅವರನ್ನೂ ವಿಚಾರಣೆಗೊಳಪಡಿಸಿದೆ.
Read Full Story

11:24 AM (IST) Mar 26

'ಮನೇಲಿ ಗ್ಯಾಸ್ ಖಾಲಿ, ಅಡುಗೆ ಆಗಿಲ್ಲ ಸಾರ್..' - ಪರೀಕ್ಷೆ ಬರೆಯಲು ಹೋಗದೇ ಗ್ಯಾಸ್‌ಗಾಗಿ ಕ್ಯೂ ನಿಂತ ಸ್ಟೂಡೆಂಟ್!

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಪ್ರಾರಂಭವಾಗಿ 27ನೇ ದಿನಕ್ಕೆ ಕಾಲಿಟ್ಟಿದ್ದು, ಅದರ ಬಿಸಿ ಭಾರತದ ಹಳ್ಳಿಹಳ್ಳಿಗೂ ತಟ್ಟಿದೆ. ಗಡಿಜಿಲ್ಲೆ ಬೀದರ್‌ ಜಿಲ್ಲೆಯಲ್ಲಿ ಅಡುಗೆ ಅನಿಲದ (LPG) ತೀವ್ರ ಕೊರತೆಯಿಂದ ಜನಸಾಮಾನ್ಯರನ್ನ ಹೈರಾಣಾಗಿಸಿದೆ. 

 

Read Full Story

10:49 AM (IST) Mar 26

ಟೀಕಿಸಿದವರ ಎದುರೇ 450 ಕೋಟಿಯಿಂದ 16,500 ಕೋಟಿಗೆ ಬೆಳೆದ ಆರ್‌ಸಿಬಿ ನನ್ನ ಡಿಎನ್‌ಎ ಭಾಗ, ರಾಯಲ್ ಚಾಲೆಂಜರ್ಸ್ ಹುಚ್ಚುತನ ಇಂದು 37 ಪಟ್ಟು ಬೆಳೆದಿದೆ - ವಿಜಯ್‌ ಮಲ್ಯ ಟ್ವೀಟ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ₹16,500 ಕೋಟಿ ಮೌಲ್ಯಕ್ಕೆ ಮಾರಾಟವಾಗಿದೆ. ಈ ಹಿನ್ನೆಲೆಯಲ್ಲಿ, ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರು 2008ರಲ್ಲಿ ₹450 ಕೋಟಿಗೆ ತಂಡ ಖರೀದಿಸಿದ್ದನ್ನು ಮತ್ತು ತಮ್ಮ ನಿರ್ಧಾರವನ್ನು ಟೀಕಿಸಿದ್ದವರನ್ನು ನೆನಪಿಸಿಕೊಂಡಿದ್ದಾರೆ. ತಂಡದ ಮೌಲ್ಯ 37 ಪಟ್ಟು ಹೆಚ್ಚಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಹೊಸ ಮಾಲೀಕರಿಗೆ ಶುಭ ಕೋರಿದ್ದಾರೆ.
Read Full Story

09:54 AM (IST) Mar 26

ಗೃಹ ಸಚಿವ ಜಿ.ಪರಮೇಶ್ವರ ಒಡೆತನದ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಪ್ರಾಧ್ಯಾಪಕನ ಕೆಟ್ಟ ಪ್ರಪೋಸ್‌, ಕಾಲೇಜಾಯ್ತು ರಣರಂಗ!

ನೆಲಮಂಗಲದ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ, ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿನಿಗೆ ಅಸಭ್ಯವಾಗಿ ಪ್ರಪೋಸ್ ಮಾಡಿದ್ದಾರೆಂಬ ಆರೋಪದ ಮೇಲೆ ದೊಡ್ಡ ಗಲಾಟೆ ನಡೆದಿದೆ. ಆಕ್ರೋಶಗೊಂಡ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿ ಪ್ರಾಧ್ಯಾಪಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಗೃಹ ಸಚಿವ ಜಿ. ಪರಮೇಶ್ವರ್ ಅವರ ಒಡೆತನದ ಕಾಲೇಜಿನಲ್ಲಿ ನಡೆದ ಈ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.
Read Full Story

09:53 AM (IST) Mar 26

ಮೋಟಾರು ವಾಹನಗಳ ತೆರಿಗೆ ಬಿಲ್‌ಗೆ ಚರ್ಚೆ ಇಲ್ಲದೆ ಅಂಗೀಕಾರ; ಹೊಸ ತಿದ್ದುಪಡಿಯಿಂದ ವಾಹನ ಮಾಲೀಕರಿಗೆ ಆಗುವ ಲಾಭವೇನು?

ಕರ್ನಾಟಕ ಸರ್ಕಾರವು ಸ್ಲೀಪರ್‌ ಕೋಚ್‌ ಮತ್ತು 12ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಒಪ್ಪಂದದ ವಾಹನಗಳ ಮೇಲಿನ ಪ್ರತಿ ಆಸನದ ತೆರಿಗೆಯನ್ನು ಗಣನೀಯವಾಗಿ ಇಳಿಕೆ. ಹೊರ ರಾಜ್ಯಗಳಲ್ಲಿ ಕಡಿಮೆ ತೆರಿಗೆಯಿಂದಾಗಿ ಅಲ್ಲಿ ನೋಂದಣಿಯಾಗುತ್ತಿದ್ದ ವಾಹನಗಳನ್ನು ರಾಜ್ಯಕ್ಕೆ ಮರಳಿ ಸೆಳೆಯುವ ಮಾಸ್ಟರ್ ಪ್ಲಾನ್

Read Full Story

08:45 AM (IST) Mar 26

ಮಹಿಳಾ ರೌಡಿ ಶೀಟರ್‌ ಗೆ ಇನ್ಸ್‌ಪೆಕ್ಟರ್ ಪಾಪಣ್ಣ ಲೈಂಗಿಕ ಕಿರುಕುಳ, ತನಿಖೆಗೆ ಆದೇಶಿಸಿದ ಬೆಂಗಳೂರು ಪೊಲೀಸ್ ಆಯುಕ್ತ

ಕೋಣನಕುಂಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಮಹಿಳಾ ರೌಡಿ ಶೀಟರ್ ಯಶಸ್ವಿನಿ ದೂರು ನೀಡಿದ್ದಾರೆ. ಆಡಿಯೋ ಸಾಕ್ಷ್ಯಗಳ ಸಹಿತ ದೂರು ನೀಡಲಾಗಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಈ ಪ್ರಕರಣದ ಬಗ್ಗೆ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.
Read Full Story

08:35 AM (IST) Mar 26

ತಾಕತ್ತಿದ್ದರೆ ಪ್ರದೀಪ ಈಶ್ವರ ದಾವಣಗೆರೆ ಜಿಲ್ಲೆಗೆ ಬರಲಿ - ಬಿಜೆಪಿ ನಾಯಕ ನೇರ ಸವಾಲು!

ಬಿಜೆಪಿಯವರನ್ನು ಅಯೋಗ್ಯರು ಎಂದಿದ್ದಲ್ಲದೆ, ಮುಸ್ಲಿಂ ಮಹಿಳೆಯರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಪ್ರದೀಪ ಈಶ್ವರ್ ವಿರುದ್ಧ ಬಿಜೆಪಿ ಮುಖಂಡ ಬಿ.ಜಿ.ಅಜಯಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಕತ್ತಿದ್ದರೆ ದಾವಣಗೆರೆಗೆ ಬರಲಿ ಎಂದು ಸವಾಲು.

Read Full Story

More Trending News