ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೀರ್ಘಕಾಲೀನ ಅನಾರೋಗ್ಯ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 84 ವರ್ಷದ ಕೊರೋನಾ ಸೋಂಕಿತ ವೃದ್ದರೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಪ್ರಸಕ್ತ ವರ್ಷದಲ್ಲಿ ಕೊರೋನಾಗೆ ರಾಜ್ಯದಲ್ಲಿ ಮೊದಲ ಬಲಿ ಆದಂತಾಗಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 38 ಮಂದಿಗೆ ಸೋಂಕು ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ನಗರದಲ್ಲೇ 32 ಮಂದಿಗೆ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಹಾಗೆಯೇ ಮಹಾರಾಷ್ಟ್ರದ ಥಾಣೆಯಲ್ಲಿ ಷುಗರ್‌ನಿಂದಲೂ ಬಳಲುತ್ತಿದ್ದ 21 ವರ್ಷದ ಯುವಕ ಬಲಿಯಾಗಿದ್ದಾನೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಹೊಸ ಕೊರೋನಾಗೆ ಮಹಾರಾಷ್ಟ್ರದಲ್ಲಿ ಬಲಿಯಾದವರ ಸಂಖ್ಯೆ 4ಕ್ಕೆ ಏರಿದೆ.

09:30 PM (IST) May 25
08:56 PM (IST) May 25
08:03 PM (IST) May 25
ಐಶ್ವರ್ಯಾ ರೈ ಇತ್ತೀಚೆಗೆ 78 ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು. ಐಶ್ವರ್ಯಾ ಬಾಲಿವುಡ್‌ನ ಸುಂದರ ನಟಿ ಮತ್ತು ಹಲವು ಚಿತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಐಶ್ವರ್ಯಾ ಹಲವು ಸೂಪರ್‌ಹಿಟ್ ಚಿತ್ರಗಳನ್ನು ತಿರಸ್ಕರಿಸಿದ್ದಾರೆ. ಅಂತಹ 8 ಚಿತ್ರಗಳನ್ನು ನೋಡೋಣ...
07:49 PM (IST) May 25
ಆ್ಯಪಲ್ ಕಂಪನಿ ಭಾರತದಲ್ಲಿ ಐಫೋನ್ (iPhone) ಫ್ಯಾಕ್ಟರಿಗಳನ್ನು ಸ್ಥಾಪಿಸಿದೆ. ಅಮೆರಿಕಕ್ಕಿಂತ ಭಾರತದಲ್ಲಿ ಐಫೋನ್ ತಯಾರಿಸುವ ವೆಚ್ಚ ತುಂಬಾ ಕಡಿಮೆ. ಜಿಟಿಆಆರ್‌ಐ ವರದಿಯ ಪ್ರಕಾರ, ಭಾರತದಲ್ಲಿ ಒಂದು ಐಫೋನ್ ಜೋಡಿಸಲು ಸುಮಾರು $30 ವೆಚ್ಚವಾಗುತ್ತದೆ. ಆದರೆ ಅಮೆರಿಕದಲ್ಲಿ $390 ವೆಚ್ಚವಾಗುತ್ತದೆ.
07:28 PM (IST) May 25
ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಕಾಂಗ್ರೆಸ್ ನಾಯಕಿ ಮಂಜುಳಾ ಗೂಳಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
07:10 PM (IST) May 25
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳ ಮೇಲೆ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ತ್ರಿವೇಣಿ ಸಂಗಮ ಸ್ನಾನಘಟ್ಟ, ಪಕ್ಕದ ಉದ್ಯಾನ ಮುಳುಗಿದೆ.
06:37 PM (IST) May 25
ಪ್ರೀತಿಯ ಗೆಳೆಯನ ಜೊತೆ ಫೋಟೋ ತೆಗೆದುಕೊಂಡು ಸಂತೋಷದಿಂದ ವಿದಾಯ ಹೇಳಿದರು. ಆದರೆ ಅದು ಶಾಶ್ವತ ವಿದಾಯ ಎಂದು ಯಾರೂ ಊಹಿಸಿರಲಿಲ್ಲ.
05:31 PM (IST) May 25
04:50 PM (IST) May 25
ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಬೆಂಗಳೂರಿನಲ್ಲಿ ಮೊದಲ ಕೋವಿಡ್ ಸಾವು ದಾಖಲಾಗಿದೆ. 85 ವರ್ಷದ ವೃದ್ಧರೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 38 ಸಕ್ರಿಯ ಪ್ರಕರಣಗಳಿದ್ದು, ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮ ತೆಗೆದುಕೊಂಡಿದೆ.
04:12 PM (IST) May 25
ನೀವು ಪ್ರಯಾಣವನ್ನು ಇಷ್ಟಪಡುವವರಾಗಿದ್ದರೆ ಪ್ರಯಾಣ ಮಾಡುವಾಗ ನೀವು ಅನೇಕ ವಿಷಯಗಳನ್ನು ಕಲಿಯಬಹುದಾದ ರೈಲಿನ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಈ ರೈಲು ವರ್ಷಕ್ಕೊಮ್ಮೆ 500 ಜನರಿಗೆ ಕೇವಲ ₹25 ರಲ್ಲಿ 8000 ಕಿ.ಮೀ. ಭಾರತದಾದ್ಯಂತ ಪ್ರಯಾಣಿಸುವ ಅವಕಾಶ ನೀಡುತ್ತದೆ.
04:11 PM (IST) May 25
03:33 PM (IST) May 25
03:15 PM (IST) May 25
03:01 PM (IST) May 25
ಫಿಫಾ ಅಧ್ಯಕ್ಷ ಜಿಯಾನ್ನಿ ಇನ್ಫಾಂಟಿನೋ, ರೊನಾಲ್ಡೋ ಅವರು ಕ್ಲಬ್ ವರ್ಲ್ಡ್ ಕಪ್‌ನಲ್ಲಿ ಆಡುವ ಸಾಧ್ಯತೆಯನ್ನು ಸೂಚಿಸಿದ್ದಾರೆ. ಅಲ್ ನಸರ್ ತಂಡ ಟೂರ್ನಿಗೆ ಅರ್ಹತೆ ಪಡೆಯದಿದ್ದರೂ, ರೊನಾಲ್ಡೋ ಬೇರೆ ತಂಡದಿಂದ ಆಡಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
02:29 PM (IST) May 25
ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ವಿದ್ಯಾರ್ಥಿಗಳಿಗಾಗಿ 'ಸುವರ್ಣ ಶಿಕ್ಷಣ ಮೇಳ'ವನ್ನು ಆಯೋಜಿಸಿದೆ. ಈ ಮೇಳದಲ್ಲಿ 50 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಭಾಗವಹಿಸಲಿದ್ದು, ವಿದ್ಯಾರ್ಥಿಗಳಿಗೆ ಕೋರ್ಸ್ ಮತ್ತು ಕಾಲೇಜು ಆಯ್ಕೆ, ಅಡ್ಮಿಷನ್ ಪ್ರಕ್ರಿಯೆ ಮಾಹಿತಿ ನೀಡಲಾಗುವುದು.
01:58 PM (IST) May 25
01:56 PM (IST) May 25
01:16 PM (IST) May 25
ಯುಕೆ ಬ್ಲೆನ್‌ಹೈಮ್ ಅರಮನೆಯಲ್ಲಿ 51 ಕೋಟಿ ರೂ. ಮೌಲ್ಯದ ಚಿನ್ನದ ಟಾಯ್ಲೆಟ್ ಕಳ್ಳತನವಾಗಿದೆ. ಮೂವರು ಕಳ್ಳರು ಕೇವಲ 5 ನಿಮಿಷಗಳಲ್ಲಿ ಈ ಕೃತ್ಯ ಎಸಗಿದ್ದಾರೆ
12:53 PM (IST) May 25
ಭಾರತದ ವಿಜ್ಞಾನಿಗಳು ಜೀನೋಮ್ ಆಧರಿತ ಅಕ್ಕಿ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಹೊಸ ತಳಿಗಳು ರೋಗ ನಿರೋಧಕ, ಹೆಚ್ಚು ಇಳುವರಿ ನೀಡುತ್ತವೆ ಮತ್ತು ನೀರು ಸಂರಕ್ಷಣೆಗೆ ನೆರವಾಗುತ್ತವೆ.
12:52 PM (IST) May 25
ಪಾಲ್ಘರ್ ಜಿಲ್ಲೆಯ ರೆಸಾರ್ಟ್‌ನಲ್ಲಿ ಯುವತಿಯೊಬ್ಬಳು ಸಂಶಯಾಸ್ಪದವಾಗಿ ಮೃತಪಟ್ಟಿದ್ದಾಳೆ. ಪ್ರಿಯಾಂಕಾ ಪವಾರ್ ತನ್ನ ಪ್ರಿಯಕರನ ಜೊತೆ ರಿಸಾರ್ಟ್‌ನಲ್ಲಿದ್ದಾಗ, ಇದ್ದಕ್ಕಿದ್ದಂತೆ ಅಸ್ವಸ್ಥಳಾಗಿ ಮೃತಪಟ್ಟಳು. ಕುಟುಂಬಸ್ಥರು ಹತ್ಯೆಯ ಶಂಕೆ ವ್ಯಕ್ತಪಡಿಸಿದ್ದಾರೆ.
12:21 PM (IST) May 25
12:02 PM (IST) May 25
ಚಾಂಪಿಯನ್ಸ್ ಲೀಗ್‌ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಸೋತಿದ್ದರಿಂದ, ವಿಕ್ಟರ್ ಗ್ಯೋಕೆರೆಸ್ ಮತ್ತು ವಿಕ್ಟರ್ ಒಸಿಮ್ಹೆನ್ ಸೇರಿದಂತೆ 5 ಪ್ರಮುಖ ಆಟಗಾರರನ್ನು ಈ ಬೇಸಿಗೆಯಲ್ಲಿ ಕಳೆದುಕೊಳ್ಳಬಹುದು.
11:55 AM (IST) May 25
ರಾಜ್ಯ ವಿಧಾನಸಭೆಗೆ ಈಗ ಚುನಾವಣೆ ನಡೆದರೆ ಬಿಜೆಪಿ 150-160 ಸ್ಥಾನ ಗೆಲ್ಲುತ್ತೆ ಎಂದು ಖಾಸಗಿ ಸಮೀಕ್ಷೆಯೊಂದು ಹೇಳಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
11:34 AM (IST) May 25
ಆರ್ಥಿಕ, ಸಾಮಾಜಿಕ, ಬುಡಕಟ್ಟು ಸೇರಿ ಯಾವುದೇ ವಿಚಾರವಾಗಿ ಯಾವುದೇ ವೇದಿಕೆಯಲ್ಲೂ ನಾನು ಚರ್ಚೆಗೆ ಸಿದ್ಧನಿದ್ದೇನೆ. ನನ್ನೊಂದಿಗೆ ಚರ್ಚೆ ನಡೆಸಲು ಅವರು ತಯಾರಿದ್ದಾರೆಯೇ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
10:59 AM (IST) May 25
ಫಿಟ್‌ನೆಸ್ ಸಮಸ್ಯೆಯಿಂದಾಗಿ ವೇಗಿ ಮೊಹಮ್ಮದ್ ಶಮಿ ಭಾರತ ತಂಡದಿಂದ ಹೊರಗುಳಿದಿದ್ದಾರೆ. 64 ಟೆಸ್ಟ್‌ಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. ಹಲವು ಯುವ ಬೌಲರ್‌ಗಳು ತಂಡದ ಆಯ್ಕೆ ರೇಸ್‌ನಲ್ಲಿರುವುದರಿಂದ ಶಮಿ ಇನ್ನು ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
10:16 AM (IST) May 25
09:59 AM (IST) May 25
09:31 AM (IST) May 25
ಜಿಲ್ಲೆಯ ಕೆರಗೋಡು ಮತ್ತು ಶ್ರೀರಂಗಪಟ್ಟಣದಲ್ಲಿ ಎರಡು ಬಾಲ್ಯ ವಿವಾಹಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಈ ಬಾಲ್ಯ ವಿವಾಹಗಳು ಆಯಾ ಭಾಗದ ದೇವಸ್ಥಾನಗಳಲ್ಲಿ ನಡೆದಿವೆ. ಈ ಸಂಬಂಧ ಮಂಡ್ಯ ತಾಲೂಕಿನ ಬಸರಾಳು ಮತ್ತು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ.
09:18 AM (IST) May 25
ಅಭಿವೃದ್ಧಿಯ ಅಸಮಾನತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೆ. ಆದರೆ, ಹೈದರಾಬಾದ್ ಕರ್ನಾಟಕದಲ್ಲಿ ಅತೀ ಹೆಚ್ಚು ಅಸಮಾನತೆ ಕಂಡುಬಂದಿದೆ. ರಾಜ್ಯದ 175 ತಾಲೂಕುಗಳಲ್ಲಿ 114 ತಾಲೂಕುಗಳು ಹಿಂದುಳಿದಿವೆ ಎಂದು ಸಮಿತಿ ಹೇಳಿತ್ತು.
09:06 AM (IST) May 25
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದೆ. ಇದೀಗ ಪ್ಲೇ ಆಫ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಗುಡ್ ನ್ಯೂಸ್ ಸಿಕ್ಕಿದೆ. ಏನದು ಎನ್ನುವುದನ್ನು ನೋಡೋಣ ಬನ್ನಿ.
09:04 AM (IST) May 25
ಪಾಕ್ ಭಯೋತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಬಯಲು ಮಾಡಲು ಭಾರತದ ಮತ್ತೆರಡು ಸರ್ವಪಕ್ಷ ನಿಯೋಗಗಳು ವಿದೇಶ ಪ್ರವಾಸ ಆರಂಭಿಸಿವೆ.
08:52 AM (IST) May 25
ಭಾರತವು ಜಪಾನ್ ಅನ್ನು ಮೀರಿಸಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಮುಂದಿನ 2.5 ರಿಂದ 3 ವರ್ಷಗಳಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆಯಿದೆ ಎಂದು ನುಡಿದಿದ್ದಾರೆ.
08:41 AM (IST) May 25
ಕಳೆದ ನಾಲ್ಕು ದಶಕಗಳಲ್ಲಿ 20,000 ಭಾರತೀಯರು ಪಾಕಿಸ್ತಾನದ ಭಯೋತ್ಪಾದನೆಗೆ ಬಲಿಯಾಗಿದ್ದಾರೆ ಎಂದು ಭಾರತದ ಪ್ರತಿನಿಧಿ ವಿಶ್ವಸಸ್ಥೆಯಲ್ಲಿ ಹೇಳಿದ್ದಾರೆ.
08:40 AM (IST) May 25
ನೀಟ್ ಫಲಿತಾಂಶ ಹಾಗೂ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಎಂಜಿನಿಯರಿಂಗ್, ವೈದ್ಯಕೀಯ ಸೇರಿ ಎಲ್ಲ ವೃತ್ತಿಪರ ಕೋರ್ಸುಗಳ ಸೀಟು ಹಂಚಿಕೆಗೂ ಏಕೀಕೃತ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
08:33 AM (IST) May 25
ಬೆಂಗಳೂರಿನ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ವಿಮಾನ ನಿಲ್ದಾಣದಿಂದ 20 ಕಿ.ಮೀ. ದೂರ ಇರಬೇಕು ಎಂಬ ಕಾರಣದ ಹಿನ್ನೆಲೆಯಲ್ಲಿ ಕೆಂಪೇಗೌಡ ಬಡಾವಣೆಯ ಬಿಡಿಎ ಜಾಗದಲ್ಲಿ ಸ್ಕೈಡೆಕ್ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
08:32 AM (IST) May 25
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 6 ವಿಕೆಟ್‌ಗಳಿಂದ ಸೋಲು ಕಂಡಿದೆ. ಶ್ರೇಯಸ್ ಅಯ್ಯರ್ ಮತ್ತು ಮಾರ್ಕಸ್ ಸ್ಟೋಯಿಸ್ ಅವರ ಅರ್ಧಶತಕಗಳ ಹೊರತಾಗಿಯೂ, ಪಂಜಾಬ್ 206 ರನ್‌ಗಳ ಗುರಿಯನ್ನು ರಕ್ಷಿಸಿಕೊಳ್ಳಲು ವಿಫಲವಾಯಿತು. ಸಮೀರ್ ರಿಜ್ವಿ ಅಜೇಯ 58 ರನ್‌ಗಳ ನೆರವಿನಿಂದ ಡೆಲ್ಲಿ ಗೆಲುವು ಸಾಧಿಸಿತು.
07:43 AM (IST) May 25
ಬಾನು ಮುಷ್ತಾಕ್ ಅವರ ಕೃತಿಗೆ ಬಂದ ಅಂತಾರಾಷ್ಟ್ರೀಯ ಬೂಕರ್ ಮೂಡಿಸಿದೆ. ಅದರ ಅನುವಾದಕಿ ದೀಪಾ ಭಾಸ್ತಿ ಜತೆ ಒಂದು ಸುದೀರ್ಘ ಮಾತುಕತೆ.
07:25 AM (IST) May 25
ದೇಶದ 50 ನಗರಗಳ ಆಸ್ತಿ ಬೆಲೆ ಏರಿಕೆ ಅಧ್ಯಯನದಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದುಕೊಂಡಿದ್ದು, 2024-25ರಲ್ಲಿ ಬೆಂಗಳೂರಿನ ಆಸ್ತಿ ಬೆಲೆಯು ಶೇ.13.1ರಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ.
07:18 AM (IST) May 25
06:55 AM (IST) May 25
ಕಳೆದ 10 ವರ್ಷಗಳಿಂದ ಭರತನಾಟ್ಯ ಶಾಸ್ತ್ರೀಯ ನೃತ್ಯ ಅಭ್ಯಾಸ ಮಾಡುತ್ತಿರುವ ತೇಜಸ್ವಿರಾಜ್, 2018ರಲ್ಲಿ ಜೂನಿಯರ್, 2021ರಲ್ಲಿ ಸೀನಿಯರ್ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.