ಬೆಂಗಳೂರು: ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ದಾಳಿಗೆ ಬಲಿಯಾಗಿರುವ ಕನ್ನಡಿಗರ ಪಾರ್ಥಿವ ಶರೀರ ಬುಧವಾರ ತಡರಾತ್ರಿ ರಾಜ್ಯಕ್ಕೆ . ಇನ್ನು ದಾಳಿಯಿಂದ ಸಂತ್ರಸ್ತರಾಗಿರುವ ಕನ್ನಡಿಗರ ಪೈಕಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಂಪರ್ಕಕ್ಕೆ ಬಂದಿರುವ ಸುಮಾರು 150ಕ್ಕೂ ಹೆಚ್ಚು ಕನ್ನಡಿಗರು ಗುರುವಾರ ಬೆಂಗಳೂರಿಗೆ ಮರಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಕನ್ನಡಿಗರ ರಕ್ಷಣೆಗಾಗಿ ಕಾಶ್ಮೀರದ ಪಹಲ್ಗಾಂಗೆ ತೆರಳಿರುವ ಸಚಿವ ಸಂತೋಷ್ ಲಾಡ್ ಅವರೇ ಈ ಮಾಹಿತಿ ನೀಡಿದ್ದಾರೆ.

11:39 PM (IST) Apr 24
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಭಾರತಕ್ಕೆ ಮಾಡಿದ ಅವಮಾನ ಎಂದು ಜ್ಯೋತಿರ್ಪೀಠದ ಶಂಕರಾಚಾರ್ಯರು ಹೇಳಿದ್ದಾರೆ. ಈ ದಾಳಿಯು 'ಭಯೋತ್ಪಾದನೆಗೆ ಒಂದು ಧರ್ಮವಿದೆ' ಎಂಬುದನ್ನು ಸಾಬೀತುಪಡಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭದ್ರತಾ ವೈಫಲ್ಯಕ್ಕೆ ಯಾರು ಹೊಣೆ ಎಂದು ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪೂರ್ತಿ ಓದಿ11:30 PM (IST) Apr 24
ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಗೆ ಮೊದಲ ಗೆಲುವು. ರಾಜಸ್ಥಾನದ 195 ರನ್‌ಗಳಿಗೆ ಪ್ರತಿಯಾಗಿ 206 ರನ್ ಗಳಿಸಿ 11 ರನ್‌ಗಳ ಜಯ. ಕೊಹ್ಲಿ (70), ಪಡಿಕ್ಕಲ್ (52) ಅರ್ಧಶತಕ. ಹ್ಯಾಸಲ್‌ವುಡ್ ಕೊನೆಯ ಓವರ್‌ನಲ್ಲಿ 2 ವಿಕೆಟ್ ಪಡೆದು ಆರ್‌ಸಿಬಿ ಗೆಲುವಿನ ರೂವಾರಿ.
ಪೂರ್ತಿ ಓದಿ11:00 PM (IST) Apr 24
ಮೋಸಾದ್ 'ಆಪರೇಷನ್ ಜೆಪ್ಪೆಲಿನ್' ಮೂಲಕ ಅದಾನಿ ಮೇಲಿನ ಹಿಂಡನ್‌ಬರ್ಗ್ ಆರೋಪಗಳನ್ನು ತನಿಖೆ ಮಾಡಿದೆ. ಇಸ್ರೇಲಿ ಪ್ರಧಾನಿ ನೆತನ್ಯಾಹು ಅವರು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡ ಅವರ ಸರ್ವರ್ ಹ್ಯಾಕ್ ಮಾಡಲು ಆದೇಶಿಸಿದರು. ಮೋಸಾದ್ ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ.
ಪೂರ್ತಿ ಓದಿ10:28 PM (IST) Apr 24
ಚಾಟ್‍ನಲ್ಲಿ ಹುಡುಗೀರನ್ನ ಇಂಪ್ರೆಸ್ ಮಾಡ್ಬೇಕಾ? ಸಿಂಪಲ್ ಟಿಪ್ಸ್ ಇಲ್ಲಿವೆ! ಅವ್ರ ಇಷ್ಟಗಳನ್ನ ತಿಳ್ಕೊಳ್ಳಿ, ಇಂಟ್ರೆಸ್ಟಿಂಗ್ ವಿಷಯಗಳನ್ನ ಮಾತಾಡಿ, ಮತ್ತು ಪ್ರೀತಿಯ ಮಾತುಗಳಿಂದ ಮನ ಗೆಲ್ಲಿ. ಆದ್ರೆ ಸುಳ್ಳು ಹೇಳ್ಬೇಡಿ ಮತ್ತು ಅವ್ರನ್ನ ಇಕ್ಕಟ್ಟಿಗೆ ಸಿಲುಕಿಸಬೇಡಿ.
ಪೂರ್ತಿ ಓದಿ09:51 PM (IST) Apr 24
ಪಹಲ್ಗಾಂನಲ್ಲಿ 26 ಪ್ರವಾಸಿಗರ ಸಾವಿಗೆ ಬಿಜೆಪಿಯ ದ್ವೇಷದ ರಾಜಕಾರಣವೇ ಕಾರಣ ಎಂದು ಶಿವಸೇನೆ ಆರೋಪಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಶಿವಸೇನೆ (ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಆಗ್ರಹಿಸಿದ್ದಾರೆ. ದೇಶದ ಇತಿಹಾಸದಲ್ಲಿಯೇ ಅಮಿತ್ ಶಾ ವಿಫಲ ಗೃಹಮಂತ್ರಿ ಎಂದು ರಾವುತ್ ಟೀಕಿಸಿದ್ದಾರೆ.
ಪೂರ್ತಿ ಓದಿ09:37 PM (IST) Apr 24
ಪಹಲ್ಗಾಮ್ ದಾಳಿಯಲ್ಲಿ ಭದ್ರತಾ ಲೋಪವಾಗಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಸರ್ವಪಕ್ಷ ಸಭೆಯಲ್ಲಿ, ವಿರೋಧ ಪಕ್ಷಗಳು ಸರ್ಕಾರದ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿವೆ ಮತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಮಾಡಬೇಕೆಂದು ಒತ್ತಾಯಿಸಿವೆ.
ಪೂರ್ತಿ ಓದಿ09:17 PM (IST) Apr 24
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 7 ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 30, 2025 ರೊಳಗೆ ಅರ್ಜಿ ಸಲ್ಲಿಸಬಹುದು.
ಪೂರ್ತಿ ಓದಿ09:12 PM (IST) Apr 24
ಭಾರತೀಯ ವಾಯುಪಡೆಯು 'ಆಕ್ರಮಣ' ಎಂಬ ದೊಡ್ಡ ಪ್ರಮಾಣದ ಕಾರ್ಯಾಚರಣೆಯ ವ್ಯಾಯಾಮವನ್ನು ನಡೆಸಿದೆ. ರಫೇಲ್ ಜೆಟ್‌ಗಳು ಸೇರಿದಂತೆ ತನ್ನ ಮುಂಚೂಣಿಯ ಯುದ್ಧ ವಿಮಾನಗಳನ್ನು ಬಳಸಿಕೊಂಡು ಸುಧಾರಿತ ಮಿಷನ್ ಪ್ರೊಫೈಲ್‌ಗಳನ್ನು ಅಭ್ಯಾಸ ಮಾಡಿದೆ. ಈ ವ್ಯಾಯಾಮವು ನೆಲದ ದಾಳಿ ಮತ್ತು ಎಲೆಕ್ಟ್ರಾನಿಕ್ ಯುದ್ಧ ಕವಾಯತುಗಳನ್ನು ಒಳಗೊಂಡಿತ್ತು.
ಪೂರ್ತಿ ಓದಿ08:45 PM (IST) Apr 24
ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ನಂತರ, ಭಾರತವು ಪಾಕಿಸ್ತಾನದ ವಿರುದ್ಧ ಸೇನಾ ಕ್ರಮ ಕೈಗೊಳ್ಳುವ ಬಗ್ಗೆ ಊಹಾಪೋಹಗಳು ಹೆಚ್ಚಾಗುತ್ತಿವೆ. ಪಾಕಿಸ್ತಾನದ ಭದ್ರತಾ ಅಧಿಕಾರಿಗಳು ಭಾರತದಿಂದ ಮಿಲಿಟರಿ ಕ್ರಮದ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ಆದರೆ ಭಾರತದ ಅಧಿಕಾರಿಗಳು ಯಾವುದೇ ಸೇನಾ ಕ್ರಮದ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.
ಪೂರ್ತಿ ಓದಿ08:44 PM (IST) Apr 24
ಡಾ. ರಾಜಕುಮಾರ್ ಹುಟ್ಟುಹಬ್ಬದ ಅಂಗವಾಗಿ ಬಳ್ಳಾರಿಯಲ್ಲಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ. ರಾಜ್‌ರ ಸಾಮಾಜಿಕ ಕಳಕಳಿ ಮತ್ತು ಕನ್ನಡದ ಮೇಲಿನ ಅಪಾರ ಪ್ರೀತಿಯನ್ನು ಸ್ಮರಿಸಲಾಯಿತು.
ಪೂರ್ತಿ ಓದಿ08:37 PM (IST) Apr 24
ಮಕ್ಕಳ ಮೆದುಳಿನ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ 10 ಸೂಪರ್‌ಫುಡ್‌ಗಳನ್ನು ಈ ಲೇಖನ ಒಳಗೊಂಡಿದೆ. ಮೊಟ್ಟೆ, ಬೆರಿಗಳು, ಹಸಿರು ಎಲೆಗಳ ತರಕಾರಿಗಳು, ಮೀನು, ಧಾನ್ಯಗಳು, ಮೊಸರು, ಬೀಜಗಳು, ಆವಕಾಡೊ, ಸಿಟ್ರಸ್ ಹಣ್ಣುಗಳು ಮತ್ತು ಡಾರ್ಕ್ ಚಾಕೊಲೇಟ್ ಮುಂತಾದ ಆಹಾರಗಳನ್ನು ಮಕ್ಕಳಿಗೆ ನೀಡುವ ಮೂಲಕ ಅವರ ಮೆದುಳಿನ ಆರೋಗ್ಯವನ್ನು ಕಾಪಾಡಬಹುದು.
ಪೂರ್ತಿ ಓದಿ08:25 PM (IST) Apr 24
Pahalgam Terror Attack: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಘೋಷಿಸಿದೆ. ಭಾರತೀಯ ನೌಕಾಪಡೆಯು ಅರೇಬಿಯನ್ ಸಮುದ್ರದಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು, ಪಾಕಿಸ್ತಾನದಲ್ಲಿ ಯುದ್ಧದ ಭಯ ಹುಟ್ಟಿಸಿದೆ. ಪಾಕಿಸ್ತಾನದ ಮಾಜಿ ಹೈಕಮಿಷನರ್ ಭಾರತ ಒಂದು ವಾರದಿಂದ ಎರಡು ವಾರಗಳ ಒಳಗೆ ಪಾಕಿಸ್ತಾನದ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.
ಪೂರ್ತಿ ಓದಿ08:03 PM (IST) Apr 24
ಪಹಲ್ಗಾಮ್‌ನಲ್ಲಿ ನಡೆದ 26 ಜನರ ಹತ್ಯಾಕಾಂಡದ ಹಿಂದೆ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ, ಪಾಕಿಸ್ತಾನಿ ಎಲ್‌ಇಟಿ ಕಾರ್ಯಕರ್ತ ಮೂಸಾ ಮತ್ತು ಸ್ಥಳೀಯ ಭಯೋತ್ಪಾದಕ ಆದಿಲ್ ಥೋಕರ್ ಭಾಗಿಯಾಗಿದ್ದಾರೆ.
ಪೂರ್ತಿ ಓದಿ07:53 PM (IST) Apr 24
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕೊಂಗಣದಲ್ಲಿ ಹೈಸೆಕ್ಯೂರಿಟಿ ಒಂಟಿ ಮನೆಯಲ್ಲಿ ಯುವಕನ ಕೊಲೆಯಾಗಿದೆ. ಮನೆಯ ಮಾಲೀಕ ಪ್ರದೀಪ್ ಕೊಯಿಲಿಯನ್ನು ದುಷ್ಕರ್ಮಿಗಳು ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಈ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಪೂರ್ತಿ ಓದಿ07:35 PM (IST) Apr 24
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯನ್ನು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಖಂಡಿಸಿದ್ದಾರೆ. ಮೃತ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಪೂರ್ತಿ ಓದಿ07:22 PM (IST) Apr 24
ಭಯೋತ್ಪಾದಕ ದಾಳಿಯಲ್ಲಿ ಹರಿಯಾಣದ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಸಾವನ್ನಪ್ಪಿದ್ದು, ಅವರ ಹೆಸರಿನಲ್ಲಿ ಬೇರೆ ವಿಡಿಯೋ ವೈರಲ್ ಆಗುತ್ತಿದೆ. ಅದಕ್ಕೆ ಪತ್ನಿ ಹೇಳಿದ್ದೇನು?
07:08 PM (IST) Apr 24
ಕಾಶ್ಮೀರದಲ್ಲಿ ನಡೆದ ಭಯಾನಕ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಮತ್ತಷ್ಟು ಹದಗೆಟ್ಟಿವೆ. ಪಾಕಿಸ್ತಾನವು ಹಲವಾರು ಪ್ರತಿಕ್ರಿಯಾತ್ಮಕ ಕ್ರಮಗಳನ್ನು ಘೋಷಿಸಿದೆ, ವಾಯುಪ್ರದೇಶವನ್ನು ಮುಚ್ಚುವುದು, ವ್ಯಾಪಾರವನ್ನು ಸ್ಥಗಿತಗೊಳಿಸುವುದು ಮತ್ತು ಭಾರತೀಯ ಅಧಿಕಾರಿಗಳನ್ನು ಹೊರಹಾಕುವುದು ಸೇರಿದಂತೆ.
ಪೂರ್ತಿ ಓದಿ07:05 PM (IST) Apr 24
ಹೆಣ್ಣು ನಾಯಿಯನ್ನು ಕರೆದುಕೊಂಡು ಟಾಯ್ಲೆಟ್ ಒಳಗೆ ಹೋದ ಅಜ್ಜನೊಬ್ಬ ಪ್ರಾಣಿ ದಯಾ ಸಂಘದವರ ಕೈಯಲ್ಲಿ ಸಿಕ್ಕಿಬಿದಿದ್ದಾನೆ. ವಿಡಿಯೋ ವೈರಲ್ ಆಗಿದೆ.
06:58 PM (IST) Apr 24
ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಸಾಯಿ ಪಲ್ಲವಿ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಬೆಂಬಲ ವ್ಯಕ್ತಪಡಿಸಿದರೆ, ಇತರರು ಅವರ ಹಿಂದಿನ ವಿವಾದಾತ್ಮಕ ಹೇಳಿಕೆಗಳನ್ನು ನೆನಪಿಸಿಕೊಂಡು ಟೀಕಿಸಿದ್ದಾರೆ. ಇದರಿಂದಾಗಿ #BoycottSaiPallavi ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.
ಪೂರ್ತಿ ಓದಿ06:56 PM (IST) Apr 24
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಕುರಿತು ವಿವಾದ ಮತ್ತು ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಉಗ್ರರು ಧರ್ಮ ಕೇಳಿ ಗುಂಡು ಹಾರಿಸಿಲ್ಲ ಎಂದು ಹೇಳಿದ್ದಾರೆ. ಆದರೆ, ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರು ಮತ್ತು ಪ್ರತ್ಯಕ್ಷದರ್ಶಿಗಳು ಭಿನ್ನ ಮಾಹಿತಿ ನೀಡಿದ್ದಾರೆ.
ಪೂರ್ತಿ ಓದಿ06:43 PM (IST) Apr 24
ತೂಕ ಇಳಿಸಿಕೊಳ್ಳುವ ಟಿಪ್ಸ್: ವ್ಯಾಯಾಮವಿಲ್ಲದೆ, ಮ್ಯಾಜಿಕಲ್ ಡ್ರಿಂಕ್, ಮನೆ ಊಟ ಮತ್ತು ವಾಕಿಂಗ್ ಮೂಲಕ ಅಂಜು ತೂಕ ಇಳಿಸಿಕೊಂಡರು. ಸೋಂಪು, ಜೀರಿಗೆ, ಅಜ್ವೈನ್ ಮತ್ತು ಚಕ್ಕೆಯಿಂದ ತಯಾರಿಸಿದ ತೂಕ ಇಳಿಸುವ ಪಾನೀಯದ ಪಾಕವಿಧಾನ ಮತ್ತು ಪರಿಣಾಮ ತಿಳಿಯಿರಿ.
ಪೂರ್ತಿ ಓದಿ06:21 PM (IST) Apr 24
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ತೀವ್ರವಾಗಿ ಖಂಡಿಸಿದ್ದಾರೆ. ಭಾರತ ಪ್ರಗತಿ ಸಾಧಿಸುತ್ತಿದೆ ಎಂದು ಪಾಕಿಸ್ತಾನ ಭಾವಿಸಿದಾಗಲೆಲ್ಲಾ ಭಯೋತ್ಪಾದನೆ ಮಾಡುತ್ತದೆ ಎಂದು ಆರೋಪಿಸಿದ್ದಾರೆ. ಭಯೋತ್ಪಾದನೆಯಿಂದ ಏನೂ ಸಾಧನೆಯಾಗುವುದಿಲ್ಲ ಮತ್ತು ಭಾರತ ತನ್ನ ಜನರ ವಿರುದ್ಧ ಯಾವುದೇ ಭಯೋತ್ಪಾದನಾ ಕೃತ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಪೂರ್ತಿ ಓದಿ06:07 PM (IST) Apr 24
ಎಂಗೇಜ್ಮೆಂಟ್ ಮಾಡಿಕೊಳ್ಳುವವರೆಗೆ ಸುಮ್ಮನಿದ್ದು, ಆಮೇಲೆ ಮದ್ವೆ ಬೇಡ ಎಂದು ಭಾವಿ ಗಂಡನ ಮುಗಿಸಲು ಸುಪಾರಿ ಕೊಡೋದಾ? ಮುಂದೇನಾಯ್ತು ನೋಡಿ...
05:50 PM (IST) Apr 24
ಪಂಜಾಬ್ ಗಡಿಯಲ್ಲಿ ಆಕಸ್ಮಿಕವಾಗಿ ಪಾಕ್ ಪ್ರದೇಶ ಪ್ರವೇಶಿಸಿದ ಬಿಎಸ್‌ಎಫ್ ಯೋಧನನ್ನು ಪಾಕ್ ರೇಂಜರ್ಸ್ ಬಂಧಿಸಿದ್ದಾರೆ. ಯೋಧನ ಬಿಡುಗಡೆಗೆ ಬಿಎಸ್‌ಎಫ್ ಮತ್ತು ಪಾಕ್ ರೇಂಜರ್ಸ್ ನಡುವೆ ಮಾತುಕತೆ ನಡೆಯುತ್ತಿದೆ.
ಪೂರ್ತಿ ಓದಿ05:39 PM (IST) Apr 24
ಪಹಲ್ಗಾಮ್ ದಾಳಿಯ ನಂತರ ಭಾರತದ ಕ್ರಮಗಳಿಗೆ ಪ್ರತಿಯಾಗಿ ಪಾಕಿಸ್ತಾನ ಶಿಮ್ಲಾ ಒಪ್ಪಂದ ಸೇರಿದಂತೆ ದ್ವಿಪಕ್ಷೀಯ ಒಪ್ಪಂದಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ಈ ಒಪ್ಪಂದದ ಮಹತ್ವ ಮತ್ತು ಪರಿಣಾಮಗಳನ್ನು ಈ ಲೇಖನ ವಿವರಿಸುತ್ತದೆ.
ಪೂರ್ತಿ ಓದಿ05:38 PM (IST) Apr 24
ಇಸ್ರೇಲ್‌ನ ಭಾರತದ ರಾಯಭಾರಿ ರುವೆನ್ ಅಜರ್ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು 2023ರ ಇಸ್ರೇಲ್‌ನಲ್ಲಿ ನಡೆದ ಹಮಾಸ್ ದಾಳಿಗೆ ಹೋಲಿಸಿದ್ದಾರೆ. ಜಾಗತಿಕ ಭಯೋತ್ಪಾದಕ ಗುಂಪುಗಳ ನಡುವಿನ ಸಮನ್ವಯತೆಯ ಬಗ್ಗೆಯೂ ಅವರು ಎಚ್ಚರಿಸಿದ್ದಾರೆ.
ಪೂರ್ತಿ ಓದಿ05:27 PM (IST) Apr 24
ದೇವಯಾನಿ ಇಂಟರ್ನ್ಯಾಷನಲ್ ₹419.6 ಕೋಟಿಗೆ ಸ್ಕೈ ಗೇಟ್ ಹಾಸ್ಪಿಟಾಲಿಟಿಯ 80.72% ಪಾಲನ್ನು ಸ್ವಾಧೀನಪಡಿಸಿಕೊಂಡಿದೆ. ಈ ಮೂಲಕ 'ಬಿರಿಯಾನಿ ಬೈ ಕಿಲೋ', 'ಗೋಯಿಲಾ ಬಟರ್ ಚಿಕನ್' ಮತ್ತು 'ದಿ ಭೋಜನ್' ಬ್ರ್ಯಾಂಡ್‌ಗಳು ಡಿಐಎಲ್‌ನ ಒಡೆತನಕ್ಕೆ ಬಂದಿವೆ.
ಪೂರ್ತಿ ಓದಿ05:22 PM (IST) Apr 24
ಕಾಶ್ಮೀರದಲ್ಲಿ ಹಿಂದೂ ಪ್ರವಾಸಿಗರ ಮೇಲಿನ ಉಗ್ರರ ದಾಳಿಯಿಂದ ದೇಶ ಶೋಕದಲ್ಲಿರುವಾಗ, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಮಹಿಳಾ ದಿನಾಚರಣೆಯ ಸಂಭ್ರಮದಲ್ಲಿ ತೊಡಗಿದ್ದಾರೆ. ಸಾವಿರಾರು ಮಹಿಳೆಯರಿಗೆ ಸೀರೆ ಹಂಚುವ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ, ಓರ್ವ ಮಹಿಳೆ ಕೈ ಮುರಿದುಕೊಂಡು ಗಾಯಾಳುವಾಗಿದ್ದಾರೆ.
ಪೂರ್ತಿ ಓದಿ05:11 PM (IST) Apr 24
ಬೇಸಿಗೆಯಲ್ಲಿ ಮನೆಯಲ್ಲಿ ಹಲ್ಲಿಗಳ ಕಾಟ ಹೆಚ್ಚಾಗಿರುತ್ತದೆ. ಕರಿಮೆಣಸು, ಈರುಳ್ಳಿ-ಬೆಳ್ಳುಳ್ಳಿ, ವಿನೆಗರ್ ಮತ್ತು ಮೊಟ್ಟೆಯ ಚಿಪ್ಪುಗಳನ್ನು ಬಳಸಿ ಹಲ್ಲಿಗಳನ್ನು ಓಡಿಸುವ ಸುಲಭ ವಿಧಾನಗಳನ್ನು ಈ ಲೇಖನ ತಿಳಿಸುತ್ತದೆ.
ಪೂರ್ತಿ ಓದಿ05:10 PM (IST) Apr 24
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಳಿಕ ಕಾಶ್ಮೀರದಲ್ಲಿ ನಡೆದ ಕ್ಯಾಂಡಲ್ಲೈಟ್ ಮಾರ್ಚ್ನ ವಿಡಿಯೋ ವೈರಲ್ ಆಗಿದ್ದು, ಇದರ ಬಗ್ಗೆ ಪರ-ವಿರೋಧ ನಿಲುವು ವ್ಯಕ್ತವಾಗುತ್ತಿದೆ. ಏನಿದು?
04:50 PM (IST) Apr 24
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ನಂತರ ಭಾರತವು ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸುವ ನಿರ್ಧಾರವನ್ನು ಪ್ರಕಟಿಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸುವುದು, ವಾಘಾ ಗಡಿಯನ್ನು ಮುಚ್ಚುವುದು ಸೇರಿದಂತೆ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದೆ.
ಪೂರ್ತಿ ಓದಿ04:46 PM (IST) Apr 24
ಮೇ 24 ರಂದು ಬೆಂಗಳೂರಿನಲ್ಲಿ ನಡೆಯಲಿರುವ ನೀರಜ್ ಚೋಪ್ರಾ ಕ್ಲ್ಯಾಸಿಕ್ ಜಾವೆಲಿನ್ ಥ್ರೋ ಕೂಟದಲ್ಲಿ ಪಾಲ್ಗೊಳ್ಳುವಂತೆ ನೀರಜ್ ಚೋಪ್ರಾ ಅವರು ಪಾಕಿಸ್ತಾನದ ನದೀಂ ಅರ್ಶದ್‌ಗೆ ಆಹ್ವಾನ ನೀಡಿದ್ದರು. ಆದರೆ ಏಷ್ಯನ್ ಅಥ್ಲೆಟಿಕ್ಸ್‌ಗಾಗಿ ಕೊರಿಯಾಗೆ ತೆರಳುವ ಕಾರಣ ಅರ್ಶದ್ ಈ ಆಹ್ವಾನವನ್ನು ತಿರಸ್ಕರಿಸಿದ್ದಾರೆ.
ಪೂರ್ತಿ ಓದಿ04:44 PM (IST) Apr 24
ಕಾರಿನಲ್ಲಿ ಸಾಗುತ್ತಿದ್ದ ನಾಲ್ಕು ಜನರಿದ್ದ ಕುಟುಂಬವೊಂದು ಪವಾಡಸದೃಶವಾಗಿ ಸಾವಿನದವಡೆಯಿಂದ ಪಾರಾದಂತಹ ಘಟನೆ ಬೆಂಗಳೂರು ಪುಣೆ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೋಡುಗರನ್ನು ಭಯಪಡಿಸುತ್ತಿದೆ.
ಪೂರ್ತಿ ಓದಿ04:34 PM (IST) Apr 24
ಕಾಶ್ಮೀರದಲ್ಲಿ ಉಗ್ರರು ಹಿಂದೂ ಪುರುಷರನ್ನು ಸಾಯಿಸುವ ಮುನ್ನ ಧರ್ಮ ಕೇಳಿದ್ದೇ ಸುಳ್ಳು ಎಂದಿದ್ದಾಳೆ ಈಕೆ. ಇವಳಾರು ನೋಡಿ!
04:17 PM (IST) Apr 24
ಯಾವುದೇ ವೇದಿಕೆ ಇರ್ಲಿ, ಅಂತಾರಾಷ್ಟ್ರೀಯ ವೇದಿಕೆ ಇರಲಿ ಮೋದಿ ಹಿಂದಿಯಲ್ಲೇ ಮಾತನಾಡುತ್ತಾರೆ. ಆದರೆ ಉಗ್ರರಿಗೆ ಎಚ್ಚರಿಕೆ ನೀಡುವಾಗ ಪ್ರಧಾನಿ ಮೋದಿ ತಮ್ಮ ಮಾತನ್ನು ಇಂಗ್ಲಿಷ್‌ಗೆ ಬದಲಾಯಿಸಿದ್ದರೆ. ಈ ಮೂಲಕ ಎಚ್ಚರಿಕೆಯನ್ನು ಜಗತ್ತಿಗೆ ತಿಳಿಯುವಂತೆ ಹೇಳಿದ್ದರೆ.
ಪೂರ್ತಿ ಓದಿ04:13 PM (IST) Apr 24
ಪಹಲ್ಗಾಮ್ ಘಟನೆಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಭಾರತವು ಕ್ಷಿಪಣಿ ಪರೀಕ್ಷೆ ನಡೆಸಿದ್ದು, ಪಾಕಿಸ್ತಾನದ ನೌಕಾಭ್ಯಾಸಕ್ಕೆ ಎಚ್ಚರಿಕೆ ನೀಡಿದೆ. ಸರ್ವಪಕ್ಷಗಳ ಸಭೆ ಕರೆಯಲಾಗಿದ್ದು, ಪಾಕಿಸ್ತಾನದ ಎಕ್ಸ್ ಹ್ಯಾಂಡಲ್ ನಿಷೇಧಿಸಲಾಗಿದೆ.
ಪೂರ್ತಿ ಓದಿ03:53 PM (IST) Apr 24
ಪಹಲ್ಗಾಮ್ ದುರಂತದಲ್ಲಿ ದುರಂತದಲ್ಲಿ ಪತಿಯನ್ನು ಕಳೆದುಕೊಂಡು ಪತಿಯ ಪಾರ್ಥಿವ ಶರೀರದ ಜೊತೆ ಪುಟ್ಟ ಮಗುವಿನೊಂದಿಗೆ ಬೆಂಗಳೂರಿಗೆ ವಾಪಸಾದ ಭರತ್ ಭೂಷಣ್ ಅವರ ಪತ್ನಿ ಸುಜಾತಾ ಭೂಷಣ್ ಅವರು ಮಂಗಳವಾರ ಕಣ್ಣೆದುರೇ ನಡೆದ ಕರಾಳ ಘಟನೆಯನ್ನು ನೆನಪು ಮಾಡಿಕೊಂಡಿದ್ದು ಹೀಗೆ..
ಪೂರ್ತಿ ಓದಿ03:28 PM (IST) Apr 24
ರಾಹುಲ್ ಗಾಂಧಿ ವಿದೇಶ ಪ್ರವಾಸದ ವೇಳೆ ಕಾಶ್ಮೀರದಲ್ಲಿ ಉಗ್ರದಾಳಿ ನಡೆಯುತ್ತದೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಕಾಂಗ್ರೆಸ್ ಕಾನೂನು ಕ್ರಮಕ್ಕೆ ಮುಂದಾಗಿದೆ. ಈ ಪೋಸ್ಟ್ ಸಮಾಜದಲ್ಲಿ ಶಾಂತಿಗೆ ಭಂಗ ತರುವ ಹಾಗೂ ಗುಂಪುಗಳ ನಡುವೆ ದ್ವೇಷ ಬಿತ್ತುವ ಉದ್ದೇಶದಿಂದ ಮಾಡಲ್ಪಟ್ಟಿದೆ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿ.ಎಂ. ಧನಂಜಯ್ ಪೊಲೀಸರಿಗೆ ದೂರು ನೀಡಿದ್ದಾರೆ.
ಪೂರ್ತಿ ಓದಿ03:03 PM (IST) Apr 24
ಪಾಕ್ ಜೊತೆ ಸಿಂಧೂ ಜಲ ಒಪ್ಪಂದ ಮುರಿದು, ಪಾಕಿಸ್ತಾನಿ ಹೈಕಮಿಷನ್‌ನಿಂದ ಎಲ್ಲಾ ರಕ್ಷಣಾ, ನೌಕಾ ಮತ್ತು ವಾಯು ಸಲಹೆಗಾರರನ್ನು ಹೊರಹಾಕಿದ ಬಳಿಕ ಈಗ ಡಿಜಿಟಲ್ ಆಘಾತ ನೀಡಿದೆ ಭಾರತ. ಏನದು?
02:39 PM (IST) Apr 24
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಸಾರ್ಕ್ ವೀಸಾ ವಿನಾಯಿತಿ ಯೋಜನೆಯಡಿ ಪಾಕಿಸ್ತಾನಿ ಪ್ರಜೆಗಳ ಭಾರತ ಪ್ರವೇಶವನ್ನು ನಿಷೇಧಿಸಿದೆ. ಈಗಾಗಲೇ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳಿಗೆ 48 ಗಂಟೆಗಳಲ್ಲಿ ದೇಶ ತೊರೆಯಲು ಸೂಚಿಸಲಾಗಿದೆ.
ಪೂರ್ತಿ ಓದಿ