LIVE NOW
Published : Oct 24, 2026, 06:48 AM ISTUpdated : Oct 24, 2026, 08:46 AM IST

Karnataka News Live: ಪ್ರತಿಯೊಬ್ಬ ಕನ್ನಡಿಗ ಓದಲೇಬೇಕು; ನಿಮ್ಮ ಮಾತೃಭಾಷೆ ಕನ್ನಡನಾ? ಹಾಗಾದ್ರೆ ರೆಸ್ಯೂಂ ಕಸದ ಬುಟ್ಟಿಗೆ! ಯುವತಿಯ ಶಾಕಿಂಗ್ ವಿಡಿಯೋ ವೈರಲ್!

ಸಾರಾಂಶ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್‌ ಆಪರೇಷನ್‌ ಷಡ್ಯಂತ್ರದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರೇ ನೇರ ಶಾಮೀಲಾಗಿದ್ದಾರೆ. ಈ ಸಿಂಡಿಕೇಟ್‌ನಲ್ಲಿ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇದ್ದು, ಅಂಗೈ ಹುಣ್ಣಿಗೆ ಕನ್ನಡಿ ಹುಡುಕುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.

ಶುಕ್ರವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿರುವ ಸ್ಟಿಂಗ್‌ ಅನ್ನು ಜೆಡಿಎಸ್‌ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಹೈಕಮಾಂಡ್‌ಗೆ ವರದಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಸ್ಟಿಂಗ್‌ ಮಾಡಿದ್ದು ಯಾರು, ಅದರ ಮಾಸ್ಟರ್‌ ಮೈಂಡ್‌ ಯಾರು, ಅದರ ಕಿಂಗ್‌ಪಿನ್‌ ಯಾರು, ಶೂಟಿಂಗ್‌ ಮಾಡುವಾಗ ಖಾಸಗಿ ಸುದ್ದಿವಾಹಿನಿಯ ಮುಖ್ಯಸ್ಥನಿಗೆ ಸಹಕರಿಸಿದ ಕಾಂಗ್ರೆಸ್‌ ಪಕ್ಷದ ಮಹಿಳಾಮಣಿ ಯಾರು ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. 

ಇನ್ನು ಯಾವ ಮುಖ ಇಟ್ಟುಕೊಂಡು ಮುಖ್ಯಮಂತ್ರಿ ದಿಲ್ಲಿ ನಾಯಕರಿಗೆ ವರದಿ ನೀಡುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು.ಈ ಬಗ್ಗೆ ಅಗತ್ಯವಿದ್ದರೆ ಸಿದ್ದರಾಮಯ್ಯರನ್ನು ಭೇಟಿ ಮಾಡಲು ತಯಾರಿದ್ದೇನೆ. ಅವರು ನಮ್ಮ ಪಕ್ಷದಲ್ಲಿದ್ದವರು. ಅವರನ್ನು ಭೇಟಿ ಮಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಪ್ರಶೆಯೊಂದಕ್ಕೆ ಉತ್ತರಿಸಿದರು.

08:46 AM (IST) Oct 24

ಪ್ರತಿಯೊಬ್ಬ ಕನ್ನಡಿಗ ಓದಲೇಬೇಕು; ನಿಮ್ಮ ಮಾತೃಭಾಷೆ ಕನ್ನಡನಾ? ಹಾಗಾದ್ರೆ ರೆಸ್ಯೂಂ ಕಸದ ಬುಟ್ಟಿಗೆ! ಯುವತಿಯ ಶಾಕಿಂಗ್ ವಿಡಿಯೋ ವೈರಲ್!

ರಾಜ್ಯದ ಖಾಸಗಿ ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನಿರಾಕರಿಸಲಾಗುತ್ತಿದೆ ಎಂಬ ಗಂಭೀರ ಆರೋಪದ ವಿಡಿಯೋವೊಂದು ವೈರಲ್ ಆಗಿದೆ. ರೆಸ್ಯೂಮ್‌ನಲ್ಲಿ ಮಾತೃಭಾಷೆ 'ಕನ್ನಡ' ಎಂದು ಬರೆದರೆ ಕೆಲಸ ನೀಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ಯುವತಿಯೊಬ್ಬಳು ಆರೋಪಿಸಿದ್ದಾಳೆ.

Read Full Story

08:15 AM (IST) Oct 24

ಹಾಸನಾಂಬಾ ಜಾತ್ರೆಗೆ ಹಾಸನಕ್ಕೆ ಬೆಂಗಳೂರು-ಅರಸೀಕೆರೆಯಿಂದ ವಿಶೇಷ ರೈಲುಗಳ ಸಂಚಾರ ಆರಂಭ

ಹಾಸನಾಂಬಾ ದೇವಿ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಬೆಂಗಳೂರು ಮತ್ತು ಅರಸೀಕೆರೆಯಿಂದ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್, ಹೆಲ್ಪ್ ಡೆಸ್ಕ್ ಹಾಗೂ ಉಚಿತ ವೈಫೈ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
Read Full Story

08:14 AM (IST) Oct 24

ಜ್ವರ ಎಂದು ವಾಣಿ ವಿಲಾಸ ಆಸ್ಪತ್ರೆಗೆ ದಾಖಲಾದ ಮಗುವಿನ ಕಾಲುಬೆರಳು ಕಟ್! ಅಸಲಿಗೆ ಆಗಿದ್ದೇನು?

ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ 57 ದಿನದ ಮಗು ಕಾಲಿನ ಬೆರಳು ಕಳೆದುಕೊಂಡಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ, ಮಗುವಿಗೆ ಮೊದಲೇ ನಂಜಾಗಿತ್ತು ಮತ್ತು ರಕ್ತ ಹೆಪ್ಪುಗಟ್ಟಿತ್ತು, ನಾವು ಮಗುವಿನ ಪ್ರಾಣ ಉಳಿಸಿದ್ದೇವೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಆರೋಪ ನಿರಾಕರಿಸಿದೆ.

Read Full Story

08:01 AM (IST) Oct 24

ರಾಜ್ಯದಲ್ಲಿ ಹಿಂಗಾರು ಮಳೆ - ಇಂದು ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ವರುಣನ ಅಬ್ಬರ,

ರಾಜ್ಯದಲ್ಲಿ ಹಿಂಗಾರು ಮಳೆ ಚುರುಕಾಗಿದ್ದು, 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಸಿಡಿಲು ಬಡಿದು ಒಬ್ಬರು ಮೃತಪಟ್ಟಿದ್ದು, ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಮುಂದಿನ ಕೆಲವು ದಿನಗಳ ಕಾಲ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.
Read Full Story

07:38 AM (IST) Oct 24

BDA ನಿರ್ಮಿಸುತ್ತಿರೋ ಹೈಟೆಕ್ ಅಪಾರ್ಟ್‌ಮೆಂಟ್ ಶೀಘ್ರ ಖರೀದಿಗೆ ಲಭ್ಯ - ಬೆಲೆ ಎಷ್ಟು?

ಬೆಂಗಳೂರಿನ ಕೋನದಾಸಪುರದಲ್ಲಿ ಬಿಡಿಎ ನಿರ್ಮಿಸುತ್ತಿರುವ ಬೃಹತ್ ವಸತಿ ಯೋಜನೆಯ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಖರೀದಿಗೆ ಲಭ್ಯವಾಗಲಿದೆ. ಅತ್ಯಾಧುನಿಕ ಸೌಲಭ್ಯಗಳಿರುವ 1,928 ಫ್ಲ್ಯಾಟ್‌ಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.

Read Full Story

07:34 AM (IST) Oct 24

Bengaluru earthquake - ಬೆಂಗಳೂರು ಸಮೀಪ ಬೆಳ್ಳಂಬೆಳಗ್ಗೆ ಲಘು ಭೂಕಂಪ!

earthquake in Bengaluru rural: ಬೆಂಗಳೂರಿನಿಂದ 50 ಕಿ.ಮೀ. ದೂರದಲ್ಲಿರುವ ದೊಡ್ಡಬಳ್ಳಾಪುರ ತಾಲೂಕಿನ ತಿಮ್ಮೋಜನಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ದಿಢೀರ್ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3ರ ತೀವ್ರತೆ ದಾಲಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. .

Read Full Story

07:16 AM (IST) Oct 24

ಕೋಲಾರದಲ್ಲಿ 80 ಕೋಟಿ ರೂಪಾಯಿ ಹೂಡಿಕೆ - ಪೋಲೆಂಡ್‌ಗೆ ಸಿಎಂ ಡಿಕೆ ಶಿವಕುಮಾರ್ ಆಹ್ವಾನ

ಬೆಂಗಳೂರಿನಲ್ಲಿ ನಡೆದ ಭಾರತ-ಪೋಲೆಂಡ್‌ ಬ್ಯುಸಿನೆಸ್‌ ಮೀಟಿಂಗ್‌ನಲ್ಲಿ ಡಿ.ಕೆ.ಶಿವಕುಮಾರ್ ಅವರು 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೋಲೆಂಡ್‌ ಅನ್ನು ಆಹ್ವಾನಿಸಿದ್ದಾರೆ. ತಂತ್ರಜ್ಞಾನ ಮತ್ತು ಹಸಿರು ಇಂಧನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರದ ಬಗ್ಗೆಯೂ ಚರ್ಚಿಸಲಾಯಿತು.

Read Full Story

07:14 AM (IST) Oct 24

ಮಳೆಗಾಲ ಮುಗಿತು ಅಂದ್ಕೊಂಡ್ರಾ ಎಚ್ಚರ..! ಇನ್ನೆರಡು ದಿನ ಅಪ್ಪಳಿಸಲಿದೆ ಚಂಡಮಾರುತ!

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಅಕ್ಟೋಬರ್ 26ರ ವೇಳೆಗೆ ಭಾರಿ ಚಂಡಮಾರುತ ಸೃಷ್ಟಿಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರ ಪ್ರಭಾವದಿಂದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

Read Full Story

07:02 AM (IST) Oct 24

Gadag - 40 ದಿನಗಳ ಬಳಿಕ ಮುಂಬೈನಲ್ಲಿ ಪತ್ತೆಯಾದ KRIDL AEE ಫರ್ವೇಜ್; ಜೀವಭಯ ಇತ್ತೇ?

ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಡೆತ್‌ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಕೆಆರ್‌ಐಡಿಎಲ್‌ ಎಇಇ ಫರ್ವೇಜ್ ಧಾರವಾಡ 40 ದಿನಗಳ ಬಳಿಕ ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಗದಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ನಾಪತ್ತೆಯ ಹಿಂದಿನ ನಿಖರ ಕಾರಣ ತಿಳಿಯಲು ತೀವ್ರ ವಿಚಾರಣೆ ನಡೆಸಲಿದ್ದಾರೆ.

Read Full Story

More Trending News