ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಅಹಿಂದ ಸಮಾವೇಶದ ಪೂರ್ವ ಸಿದ್ಧತಾ ಸಭೆಯನ್ನು ಡಿ.24ರ ಬೆಳಗ್ಗೆ 11.30ಕ್ಕೆ ಮೈಸೂರಿನ ಹೊಟೇಲ್ ಗುರು ರೆಸಿಡೆನ್ಸಿಯಲ್ಲಿ ಅಹಿಂದ ಮೈಸೂರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ಆಯೋಜಿಸಿದೆ. ಸಿಎಂ ಸಿದ್ದರಾಮಯ್ಯರನ್ನು ಬೆಂಬಲಿಸಿ ಜನವರಿ ಮೂರನೇ ವಾರದಲ್ಲಿ ಮೈಸೂರಿನಲ್ಲಿ ಬೃಹತ್ ಅಹಿಂದ ಸಮಾವೇಶ ಆಯೋಜನೆಗಾಗಿ ಸಮಾವೇಶದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಪೂರ್ವ ಸಿದ್ಧತಾ ಸಭೆಯನ್ನು ಏರ್ಪಡಿಸಲಾಗಿದ್ದು, ಅಹಿಂದ ಮುಖಂಡರು ಪಾಲ್ಗೊಳ್ಳಲಿದ್ದಾರೆ.

02:19 PM (IST) Dec 24
ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ, ತಮ್ಮ ನಿರ್ಮಾಣದ 'ಕೋಣ' ಚಿತ್ರದ ಪೈರಸಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟಾರ್ ನಟರ ಅಭಿಮಾನಿಗಳ ಯುದ್ಧ ಮತ್ತು ಪ್ರಪೋಗಂಡಾದಿಂದ ಚಿತ್ರರಂಗಕ್ಕಾಗುತ್ತಿರುವ ನಷ್ಟದ ಬಗ್ಗೆ ಮಾತನಾಡಿದ್ದಾರೆ
01:36 PM (IST) Dec 24
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಿದ್ದರಾಮಯ್ಯ ಸರ್ಕಾರದ ಎರಡೂವರೆ ವರ್ಷದ ಆಡಳಿತದಲ್ಲಿ ವೀರಪ್ಪನ್‌ಗಿಂತಲೂ ಹೆಚ್ಚು ಆನೆಗಳು (206) ಸಾವನ್ನಪ್ಪಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆನೆಗಳ ಸಾವಿಗೆ ಜಂಗಲ್ ಸಫಾರಿ ನಿಷೇಧಿಸುವುದು ಸರಿಯಲ್ಲ ಎಂದರು.
01:30 PM (IST) Dec 24
ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ತಮಿಳುನಾಡು ಸರ್ಕಾರದ ಯೋಜನೆಗೆ ಕೇಂದ್ರ ಸರ್ಕಾರ ತಡೆಯೊಡ್ಡಿದೆ. ಬೆಂಗಳೂರು ವಿಮಾನ ನಿಲ್ದಾಣದೊಂದಿಗಿನ ಒಪ್ಪಂದದ ಪ್ರಕಾರ, 2033ರವರೆಗೆ 150 ಕಿ.ಮೀ. ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸುವಂತಿಲ್ಲ ಎಂಬ ನಿಯಮವೇ ಮುಖ್ಯ ಕಾರಣವಾಗಿದೆ.
12:52 PM (IST) Dec 24
ಕಿಚ್ಚ ಸುದೀಪ್ ಯುದ್ಧದ ಮಾತು.. ದರ್ಶನ್-ಸುದೀಪ್ ಸ್ನೇಹಿತರಾಗಿದ್ದ ವೇಳೆ ವಿಜಯಲಕ್ಷ್ಮೀ ನಡುವೆನೂ ಒಳ್ಳೆ ಸ್ನೇಹ ಸಲುಗೆ ಇತ್ತು. ಅದ್ರಲ್ಲೂ ಒಂದೊಮ್ಮೆ ದರ್ಶನ್ ಕಷ್ಟದಲ್ಲಿದ್ದ ವೇಳೆ, ಕಿಚ್ಚ ವಿಜಯಲಕ್ಷ್ಮೀ ಜೊತೆ ನಿಂತುಕೊಂಡಿದ್ರು.
12:36 PM (IST) Dec 24
ಹೊಸ ವರ್ಷದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಶಾಸಕ ಅಜಯ್ ಸಿಂಗ್ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
12:31 PM (IST) Dec 24
ಶಬರಿಮಲೆ ದೇಗುಲದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಮಾಲೀಕ ಗೋವರ್ಧನ್ ಅವರನ್ನು ಬಂಧಿಸಲಾಗಿದೆ. ಕೇರಳದ ವಿಶೇಷ ತನಿಖಾ ತಂಡವು ಬಳ್ಳಾರಿಗೆ ಆಗಮಿಸಿ, ಗೋವರ್ಧನ್ ಅವರ ಅಂಗಡಿಯಲ್ಲಿ ಶೋಧ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ.
12:28 PM (IST) Dec 24
ನಮ್ಮ ಸಿನಿಮಾ ಟೀಮ್‌ನಲ್ಲಿ 11 ಮಂದಿ ಇದ್ದಾರೆ, ನಮ್ಮ ಎದುರಾಳಿಗಳು 33 ಮಂದಿ ಇದ್ದಾರೆ. ಆದರೂ ಪೈರಸಿ ವಿರುದ್ಧ ನಮ್ಮ ತೀವ್ರ ಹೋರಾಟ ನಡೆಸಿಯೇ ಸಿದ್ಧ. ಶೇ.80ರಷ್ಟಾದರೂ ಪೈರಸಿ ತಡೆಯುತ್ತೇವೆ ಎಂಬ ಮಾತನ್ನೂ ಸುದೀಪ್ ಹೇಳಿದರು.
12:26 PM (IST) Dec 24
12:18 PM (IST) Dec 24
ರಾಜ್ಯ ಸಾರಿಗೆ ನಿಗಮಗಳ 'ಅಂತರ ನಿಗಮ ವರ್ಗಾವಣೆ'ಗೆ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ. ಜನವರಿ 1 ರಿಂದ 31ರ ವರೆಗೆ ನೌಕರರು ಅರ್ಜಿ ಸಲ್ಲಿಸಬಹುದಾಗಿದೆ. ಇದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯೂಕೆಆರ್‌ಟಿಸಿ ನೌಕರರ ದಶಕದ ಬೇಡಿಕೆಯನ್ನು ಈಡೇರಿಸಿದೆ.
12:06 PM (IST) Dec 24
12:03 PM (IST) Dec 24
ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್ ತಮ್ಮ ಮಗ ಕಾಲೇಜಿನಲ್ಲಿ ಫೇಲ್ ಆದ ಕಾರಣಕ್ಕೆ ಅದ್ಧೂರಿ ಪಾರ್ಟಿ ಆಯೋಜಿಸಿದ್ದಾರೆ. ಈ ಪಾರ್ಟಿಯಲ್ಲಿ ಸೆಲೆಬ್ರಿಟಿಗಳು ಭಾಗವಹಿಸಿದ್ದು, ಇದೇ ವೇಳೆ ಸತೀಶ್ ಅವರು ಬಿಗ್‌ಬಾಸ್ ಮನೆಗೆ ಮತ್ತೆ ಪ್ರವೇಶಿಸುವ ಬಗ್ಗೆ ಸುಳಿವು ನೀಡಿದ್ದಾರೆ.
11:52 AM (IST) Dec 24
ಡಾ। ಆರ್.ಅಹ್ಮದ್ ಅವರ ದಂತ ವೈದ್ಯಕೀಯ ಕ್ಷೇತ್ರದಲ್ಲಿನ ಅಮೋಘ ಸೇವೆಗಾಗಿ 1947ರಲ್ಲಿ ಅಂತಾರಾಷ್ಟ್ರೀಯ ದಂತ ಕಾಲೇಜಿನಿಂದ ಫೆಲೋಶಿಪ್ ನೀಡಲಾಯಿತು ಮತ್ತು ರಾಯಲ್ ಕಾಲೇಜ್ ಆಫ್ ಸರ್ಜನ್ ಇಂಗ್ಲೆಂಡ್ ಇದರ ಫೆಲೋಶಿಪ್ ಕೂಡಾ ನೀಡಲಾಯಿತು.
11:28 AM (IST) Dec 24
ಬೆಂಗಳೂರಿನ ಬಸವೇಶ್ವರ ನಗರದಲ್ಲಿ, ತನ್ನ ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದಕ್ಕೆ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಘಟನೆಯಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
11:16 AM (IST) Dec 24
ರೈಲು, ರೈಲ್ವೆ ನಿಲ್ದಾಣದಲ್ಲಿ ಬ್ಯಾಗ್ ಮರೆತು ಬಂದಿದ್ದರೆ, ಅದನ್ನು ಹುಡುಕಿ ಕಾಪಿಟ್ಟು ಪ್ರಯಾಣಿಕರಿಗೆ ಕೊಡುವ ರೈಲ್ವೆ ಭದ್ರತಾ ಪಡೆಯು 'ಆಪರೇಷನ್ ಅಮಾನತ್' ನಡಿ ಈ ವರ್ಷ 2.25 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಿದೆ.
11:06 AM (IST) Dec 24
ಬೆಂಗಳೂರಿಗೆ 2ನೇ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕನಕಪುರ ರಸ್ತೆಯಿಂದ ಮೈಸೂರು ರಸ್ತೆ ನಡುವಿನ ಚೂಡಹಳ್ಳಿ, ಕನಕಪುರ ರಸ್ತೆಯ ಸೋಮನಹಳ್ಳಿ ಮತ್ತು ನೆಲಮಂಗಲ ಬಳಿಯಲ್ಲಿ ಜಾಗಗಳನ್ನು ಗುರುತಿಸಲಾಗಿತ್ತು.
10:53 AM (IST) Dec 24
ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಪ್ರದೇಶಾಭಿವೃದ್ಧಿ ಮಂಡಳಿ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಈ ಭಾಗಕ್ಕೆ ವಿವಿಧ ಇಲಾಖೆಗಳು ನೂರಾರು, ಸಾವಿರಾರು ಕೋಟ್ಯಂತರ ರುಪಾಯಿ ಹಣ ಬಿಡುಗಡೆ ಮಾಡುತ್ತವೆ.
10:52 AM (IST) Dec 24
ಬೆಂಗಳೂರಿನ ಜ್ಞಾನಜ್ಯೋತಿನಗರದಲ್ಲಿ, ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಯನ್ನು ಪ್ರೀತಿಸುವಂತೆ ಪೀಡಿಸಿ, ನಡುರಸ್ತೆಯಲ್ಲಿ ಆಕೆಯ ಬಟ್ಟೆ ಎಳೆದು ದೌರ್ಜನ್ಯ ಎಸಗಿದ್ದಾನೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.
10:44 AM (IST) Dec 24
ಪೈರಸಿ ದೊಡ್ಡ ಪಿಡುಗು. ಅದನ್ನು ಎಷ್ಟೇ ನಿಲ್ಲಿಸಲು ಪ್ರಯತ್ನಿಸಿದರೂ ಮತ್ತೆ ಹುಟ್ಟಿಕೊಳ್ಳುತ್ತಿದೆ. ಹಾಗಂತ, ಪೈರಸಿಯನ್ನು ಯುದ್ಧ ಮಾಡಿ ನಿಲ್ಲಿಸಲಾಗದು ಎಂದು ಚಲನಚಿತ್ರ ನಟ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ತಿಳಿಸಿದರು.
10:31 AM (IST) Dec 24
ಜನವರಿ ತಿಂಗಳಲ್ಲಿ ಮತ್ತೆ ನಾಲ್ಕು ದಿನ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತೇನೆ. ಇದು ಯೂನಿವರ್ಸಲ್ ಕಂಟೆಂಟ್ ಸಿನಿಮಾ. ನಿರ್ದೇಶಕ ನೆಲ್ಸನ್ ಅವರು ರಜನಿಕಾಂತ್ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಶಿವಣ್ಣ ಹೇಳಿದರು.
10:11 AM (IST) Dec 24
ಪಂಜಾಬಿ ಮೂಲ ನನ್ನದು. ಮಾಡೆಲಿಂಗ್ ಮಾಡಿಕೊಂಡಿದ್ದೆ. ಕನ್ನಡ ಚಿತ್ರರಂಗ ಇದೆ ಎನ್ನುವುದೇ ನನಗೆ ಗೊತ್ತಿರಲಿಲ್ಲ. ಆಗ ಸಿಕ್ಕಿದ್ದೇ ‘ಹೋಳಿ’ ಚಿತ್ರ. ಇದು ನಾನು ನಟಿಸಿದ ಮೊದಲ ಚಿತ್ರ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದರು.
09:57 AM (IST) Dec 24
ರಾಜ್ಯದಲ್ಲಿನ ಮತಗಳ್ಳತನಕ್ಕೆ ಕೆಪಿಸಿಸಿ ಹಾಗೂ ಬೂತ್ ಮಟ್ಟದ ಏಜೆಂಟ್ (ಬಿಎಲ್‌ಎ)ಗಳ ಲೋಪವೇ ಕಾರಣ ಎಂದು ಆರೋಪಿಸಿ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರಿಗೆ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಪತ್ರ ಬರೆದಿದ್ದಾರೆ.
09:49 AM (IST) Dec 24
ಫಾರಂ 57ಲ್ಲಿ 13970 ಅರ್ಜಿಗಳು ಬಾಕಿ ಇವೆ. ಬಗರ್ ಹುಕುಂ ಸಮಿತಿ ಸಭೆಯಲ್ಲಿ ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದು ಆದಷ್ಟು ಬೇಗ ಅರ್ಹರ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
07:33 AM (IST) Dec 24
Rakshitha Shetty mother in Bigg Boss: ಬಿಗ್‌ಬಾಸ್ ಸೀಸನ್ 12ರ ಫ್ಯಾಮಿಲಿ ವೀಕ್‌ನಲ್ಲಿ ರಕ್ಷಿತಾ ಶೆಟ್ಟಿಯವರ ತಾಯಿ ಮನೆಗೆ ಆಗಮಿಸಿದ್ದಾರೆ. ಈ ತಾಯಿ-ಮಗಳ ಬಾಂಧವ್ಯದ ಜೊತೆಗೆ, ರಕ್ಷಿತಾ ತನ್ನ ತಾಯಿಯೊಂದಿಗೆ ವ್ಲಾಗ್ ಮಾಡುವ ಅವಕಾಶವನ್ನೂ ಪಡೆದರು.