Published : Apr 24, 2026, 06:39 AM ISTUpdated : Apr 24, 2026, 08:12 PM IST

Karnataka News Live: ಬಿಜೆಪಿ ಶುದ್ಧೀಕರಣವಾಗಲೆಂದು ಹೊರ ಬಂದೆ, ಇನ್ನೂ ಶುದ್ಧೀಕರಣವಾಗಿಲ್ಲ - ಕೆ.ಎಸ್.ಈಶ್ವರಪ್ಪ

ಸಾರಾಂಶ

ಬೆಂಗಳೂರು: ಪಂಚ ರಾಜ್ಯ ಹಾಗೂ ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆಗಳ ಫಲಿತಾಂಶ ಬಳಿಕ ರಾಜ್ಯದಲ್ಲಿ ಬಿರುಸಿನ ರಾಜಕೀಯ ಬೆಳವಣಿಗೆಯ ನಿರೀಕ್ಷೆ ಯಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಉಭಯ ಬಣಗಳಲ್ಲಿ ಮುಗುಂ ಆಗಿ ಚಟುವಟಿಕೆ ಆರಂಭಗೊಂಡಿದೆ. ಮುಖ್ಯವಾಗಿ ಬುಧವಾರ ಸಂಜೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ದೆಹಲಿಗೆ ಭೇಟಿ ನೀಡಿದ್ದಾರೆ. 'ನಾನು ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದೇನೆ. ಆದರೆ ಅವರು ಯಾರು ಎಂದು ಹೇಳುವುದಿಲ್ಲ. ದೆಹಲಿಗೆ ನಾನು ಗಾಳಿ ಕುಡಿಯಲು ಬಂದಿಲ್ಲ. ಬಿಸಿಲು ಇದೆ, ನೀರು ಕುಡಿಯಬೇಕಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಅಸ್ಸಾಂ ಹಾಗೂ ತಮಿಳುನಾಡು ವಿಧಾನಸಭೆ ಕುರಿತು ವರಿಷ್ಠರಿಗೆ ಮಾಹಿತಿ ನೀಡಬೇಕಿದೆ. ಹಾಗೆಯೇ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಬೇಕಾಗಿದೆ. ರಾಜ್ಯದಲ್ಲಿನ ಬೆಳವಣಿಗೆಗಳ ಕುರಿತು ಮಾಧ್ಯಮಗಳ ಎದುರು ಮಾತನಾಡುವುದಿಲ್ಲ ಎಂದರು.

ಮತ್ತೊಂದೆಡೆ ಈ ವಿಚಾರವಾಗಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಬುಧವಾರ ಸಂಜೆ ನಡೆದ ಸಚಿವರ ಸಭೆಯಲ್ಲಿ ಅಷ್ಟೇನೂ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗಿಲ್ಲ. ಅದು ಸರ್ಜರಿ ಅಲ್ಲ ಜನರಲ್ ಚೆಕಪ್ ಅಷ್ಟೇ ಎಂದರು.

08:12 PM (IST) Apr 24

ಬಿಜೆಪಿ ಶುದ್ಧೀಕರಣವಾಗಲೆಂದು ಹೊರ ಬಂದೆ, ಇನ್ನೂ ಶುದ್ಧೀಕರಣವಾಗಿಲ್ಲ - ಕೆ.ಎಸ್.ಈಶ್ವರಪ್ಪ

ಬಿಜೆಪಿ ಶುದ್ಧೀಕರಣ ಆಗಬೇಕು ಎಂದು ಪಕ್ಷದಿಂದ ಹೊರಗೆ ಬಂದೆ. ಆದರೆ, ಇನ್ನೂ ಶುದ್ಧೀಕರಣವಾಗಿಲ್ಲ. ನಾನು ಯಾವ ಪಕ್ಷಕ್ಕೂ ಹೋಗಲ್ಲ. ಹೊಸ ಪಕ್ಷ ಕಟ್ಟಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

Read Full Story

08:00 PM (IST) Apr 24

ಬಿಪಿಸಿಎಲ್ ನೇಮಕಾತಿ - ಆಯ್ಕೆಯಾದವರಿಗೆ ಭರ್ಜರಿ ಜಾಕ್‌ಪಾಟ್‌ , ತಿಂಗಳಿಗೆ ₹1.40 ಲಕ್ಷ ಸಂಬಳ!

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) 250ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಅಸೋಸಿಯೇಟ್ ಎಕ್ಸಿಕ್ಯೂಟಿವ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿದ್ದು, ಆಯ್ಕೆಯಾದವರಿಗೆ ಗರಿಷ್ಠ ₹1.40 ಲಕ್ಷದವರೆಗೆ ಆಕರ್ಷಕ ವೇತನ ದೊರೆಯಲಿದೆ. ವಿವಿಧ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
Read Full Story

07:46 PM (IST) Apr 24

ಸಿಇಟಿ ಪರೀಕ್ಷಾ ವಿವಾದ - ಸಿದ್ದರಾಮಯ್ಯಗೆ ನಾಮ, ಜನಿವಾರ, ಕಂಡ್ರೆ ಆಗಲ್ಲ, ಆರ್.ಅಶೋಕ್ ತೀವ್ರ ಆಕ್ರೋಶ

ಕರ್ನಾಟಕ ಸಿಇಟಿ ಪರೀಕ್ಷೆಯ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಗೆ ವಿಪಕ್ಷ ನಾಯಕ ವ್ಯಕ್ತಪಡಿಸಿದ್ದಾರೆ. ಇದು ಹಿಂದೂ ಧಾರ್ಮಿಕ ಭಾವನೆಗಳಿಗೆ ಮಾಡಿದ ಅವಮಾನ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Read Full Story

07:39 PM (IST) Apr 24

ಕೋಲ್ಡ್ ಡ್ರಿಂಕ್ಸ್ ಕ್ಯಾನ್‌ ಬಿಸಾಡಬೇಡಿ, ಈ ಟ್ರಿಕ್ಸ್ ಬಳಸಿ ಮನೆಯಲ್ಲೇ ಅದರಿಂದ ಈ ಉಪಯೋಗ ಪಡೆದುಕೊಳ್ಳಿ!

ಬೇಸಿಗೆಯಲ್ಲಿ ಬಳಸಿದ ಕೋಲ್ಡ್ ಡ್ರಿಂಕ್ ಕ್ಯಾನ್‌ಗಳನ್ನು ಎಸೆಯುವ ಬದಲು, ಮನೆಯಲ್ಲಿಯೇ 4 ಉಪಯುಕ್ತ ವಸ್ತುಗಳನ್ನು ತಯಾರಿಸಿ. ಪ್ಲಾಸ್ಟಿಕ್ ಮತ್ತು ಮೆಟಲ್ ತ್ಯಾಜ್ಯವನ್ನು ಮರುಬಳಕೆ ಮಾಡಲು ಸುಲಭವಾದ DIY ಐಡಿಯಾಗಳನ್ನು ತಿಳಿಯಿರಿ.

Read Full Story

07:27 PM (IST) Apr 24

ಯಶ್ 'ಟಾಕ್ಸಿಕ್' ಬಳಗ ಸೇರಿದ ಹಾಲಿವುಡ್ ಸಾಹಸ ನಿರ್ದೇಶಕ - ರಾಕಿಂಗ್ ಸ್ಟಾರ್ ಗಡ್ಡದ ಬಗ್ಗೆ ಹೇಳಿದ್ದೇನು?

ಯಶ್ ನಟನೆಯ 'ಟಾಕ್ಸಿಕ್' ಚಿತ್ರತಂಡಕ್ಕೆ ಸೇರ್ಪಡೆಯಾಗಿರುವ ಹಾಲಿವುಡ್ ಆ್ಯಕ್ಷನ್ ಡೈರೆಕ್ಟರ್ ಜೆಜೆ ಪೆರ್ರಿ, ಇಡೀ ತಂಡದ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 

Read Full Story

07:14 PM (IST) Apr 24

SBI Report - ಈ UPI ಯುಗದಲ್ಲೂ ಭಾರತೀಯರು ಹೆಚ್ಚು 'ಕ್ಯಾಶ್' ಇಟ್ಟುಕೊಳ್ಳಲು ಕಾರಣವೇನು? ಈ ಸೀಕ್ರೆಟ್ ರಿವೀಲ್ ಆಯ್ತು!

ಭಾರತದಲ್ಲಿ ಯುಪಿಐ ಬಳಕೆ ಗಣನೀಯವಾಗಿ ಹೆಚ್ಚಾಗಿದ್ದರೂ, ಜನರು ಕೈಯಲ್ಲಿ ನಗದು ಇಟ್ಟುಕೊಳ್ಳುವುದು ಕೂಡ ಹೆಚ್ಚಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬಿಡುಗಡೆ ಮಾಡಿದ ಇತ್ತೀಚಿನ ವರದಿ ಹೇಳಿದೆ.SBI Report Reveals Why Indians Prefer Cash Despite UPI Boom to know here.

Read Full Story

07:12 PM (IST) Apr 24

ಬೆಂಗಳೂರು ಉದ್ಯಮಿಗೆ ₹1.81 ಕೋಟಿ ವಂಚಿಸಿದ ಸಿಎ! ನಕಲಿ ಚಲನ್‌ಗಳನ್ನು ಸೃಷ್ಟಿಸಿ ಹಣ ದೋಚಿದ

ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಅವರ ಚಾರ್ಟರ್ಡ್ ಅಕೌಂಟೆಂಟ್ ₹1.81 ಕೋಟಿಗೂ ಅಧಿಕ ಹಣ ವಂಚಿಸಿದ್ದಾರೆ. ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿ ಹೆಸರಿನಲ್ಲಿ ನಕಲಿ ಚಲನ್‌ಗಳನ್ನು ಸೃಷ್ಟಿಸಿ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story

07:06 PM (IST) Apr 24

ನಿಜವಾದ ಪ್ರೀತಿ ಎಂದ್ರೆ ಇದೇನೆ ಎನ್ನುತ್ತಲೇ ಭಾವಿ ಪತ್ನಿ ಬಗ್ಗೆ Chandan Shetty ರಿವೀಲ್​

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರಿಂದ ವಿಚ್ಛೇದನ ಪಡೆದ ನಂತರ ಇದೀಗ ತಮ್ಮ ಎರಡನೇ ಮದುವೆ ಹಾಗೂ ನಿಜವಾದ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಮುಂದಿನ ವರ್ಷ ಮದುವೆಯಾಗುವ ಯೋಜನೆ ಇದ್ದು, ಈ ಬಾರಿ ತರಾತುರಿ ಮಾಡದೆ, ಪೋಷಕರ ಒಪ್ಪಿಗೆಯೊಂದಿಗೆ ಹೊಸ ಜೀವನ ಆರಂಭಿಸುವುದಾಗಿ ತಿಳಿಸಿದ್ದಾರೆ.
Read Full Story

06:53 PM (IST) Apr 24

Dr Raj Bday - 3 ಇಡ್ಲಿ ಕೊಡ್ತಾರೆಂದು ಚಿತ್ರ ಒಪ್ಪಿಕೊಂಡಿದ್ದ ಡಾ.ರಾಜ್​ - ಅ ಘಟನೆ ನೆನೆದ ನಟ ರಾಘವೇಂದ್ರ

ವರನಟ ಡಾ.ರಾಜ್‌ಕುಮಾರ್ ಅವರ 97ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಮಗ ರಾಘವೇಂದ್ರ ರಾಜ್‌ಕುಮಾರ್ ಒಂದು ನೋವಿನ ಘಟನೆಯನ್ನು ಹಂಚಿಕೊಂಡಿದ್ದಾರೆ. ಅಣ್ಣಾವ್ರು ತಮ್ಮ ಕಡುಬಡತನದ ದಿನಗಳಲ್ಲಿ ಕೇವಲ ಒಂದು ಹೆಚ್ಚುವರಿ ಇಡ್ಲಿಗಾಗಿ ಸಿನಿಮಾ ಒಪ್ಪಿಕೊಂಡಿದ್ದರು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
Read Full Story

06:43 PM (IST) Apr 24

ಹಾವೇರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡದಿರುವುದರಿಂದ ನಿರಾಸೆಯಾಗಿದೆ - ಸಂಸದ ಬೊಮ್ಮಾಯಿ

ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಆಗ ಸಕಾರಾತ್ಮವಾಗಿ ಸ್ಪಂದನೆ ಮಾಡಿದ್ದ ಅವರು, ಬಜೆಟ್‌ನಲ್ಲಿ ಘೋಷಣೆ ಮಾಡದ್ದಕ್ಕೆ ನಿರಾಸೆಯಾಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು.

Read Full Story

06:04 PM (IST) Apr 24

ಬೀದರ್‌ನಲ್ಲಿ ಅಚ್ಚರಿ - ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ, ಅಮ್ಮನಿಗಿದು ಎರಡನೇ ಹೆರಿಗೆ

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಬಸಮ್ಮ ಎಂಬ ಮಹಿಳೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಬಾರಿಗೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಮ್ಮ ಎರಡನೇ ಹೆರಿಗೆಯಲ್ಲಿ ಎರಡು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಸದ್ಯ ನವಜಾತ ಶಿಶುಗಳನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Read Full Story

05:38 PM (IST) Apr 24

ಝಿರೋಧಾ ನಿರ್ಧಾರಕ್ಕೆ ಬೆಚ್ಚಿಬಿದ್ದ ಜನ, ಝಿರೋ1 ಕಂಪನಿ ಮುಚ್ಚಿದ ಕಾಮತ್ ಬ್ರದರ್ಸ್

ಝಿರೋಧಾ ನಿರ್ಧಾರಕ್ಕೆ ಬೆಚ್ಚಿಬಿದ್ದ ಜನ, ಝಿರೋ1 ಕಂಪನಿ ಮುಚ್ಚಿದ ಕಾಮತ್ ಬ್ರದರ್ಸ್, ಷೇರುಮಾರುಕಟ್ಟೆಯ ಬ್ರೋಕರೇಜ್ ಕಂಪನಿ ಮೂಲಕ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಕಾಮತ್ ಸಹೋದರರು ಇದೀಗ ಝೀರೋ1 ಕಂಪನಿ ಸ್ಥಗಿತಗೊಳಿಸಿದ್ದಾರೆ.

Read Full Story

05:23 PM (IST) Apr 24

ಧ್ರುವ ಸರ್ಜಾ 'ಕೆಡಿ' ಸಿನಿಮಾದ ನಿಜವಾದ ಹೀರೋ ಕೆವಿಎನ್ - ಜೋಗಿ ಪ್ರೇಮ್‌ ಹೇಳಿದ್ದೇನು?

ಪ್ರತಿಯೊಬ್ಬ ನಿರ್ಮಾಪಕರು ಸಿನಿಮಾ ಮಾಡುವಾಗ ಇಂತಿಷ್ಟು ಸಮಯ, ಬಜೆಟ್ ಇಟ್ಟಿರುತ್ತಾರೆ. ಆದರೆ ಈ ಚಿತ್ರಕ್ಕೆ ಎಲ್ಲವೂ ಮೀರಿ ಹೋಗಿದೆ. ಈ ಸಿನಿಮಾದ ನಿಜವಾದ ಹೀರೋ ನಿರ್ಮಾಪಕರಾದ ಕೆ. ವೆಂಕಟ್‌ ನಾರಾಯಣ್‌ ಹೀಗೆ ಹೇಳಿದ್ದು ಜೋಗಿ ಪ್ರೇಮ್‌.

Read Full Story

05:10 PM (IST) Apr 24

ಯುವ ರಾಜ್‌ಕುಮಾರ್‌ ಜನ್ಮದಿನದಂದೇ ಶ್ರೀದೇವಿ ಕಟುನುಡಿ - ಮಹಿಳಾ ಹಕ್ಕುಗಳ ಬಗ್ಗೆ ಗಟ್ಟಿಯಾದ ಮಾತು

ಯುವ ರಾಜ್‌ಕುಮಾರ್‌ ಜನ್ಮದಿನದಂದೇ ಅವರ ಪತ್ನಿ ಶ್ರೀದೇವಿ ಭೈರಪ್ಪ ಮೌನ ಮುರಿದಿದ್ದಾರೆ. ಯುವ ಜೊತೆಗಿನ ಆಪ್ತ ಕ್ಷಣಗಳ ಫೋಟೋ ಹಂಚಿಕೊಂಡು ಅವರಿಗೆ ಟಾಂಗ್‌ ಕೊಡುವಂತೆ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ..

Read Full Story

05:02 PM (IST) Apr 24

ಪುತ್ತೂರು ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ಮಗು ಪ್ರಕರಣ, ಆರೋಪಿ ತಿಂಗಳಿಗೆ 75,000 ರೂ ಪರಿಹಾರ ನೀಡಲು ಹೈಕೋರ್ಟ್ ಆದೇಶ

ಪುತ್ತೂರಿನಲ್ಲಿ ಯುವತಿಯನ್ನು ಪ್ರೀತಿಸಿ ವಂಚಿಸಿದ ಪ್ರಕರಣದಲ್ಲಿ, ಕರ್ನಾಟಕ ಹೈಕೋರ್ಟ್ ಆರೋಪಿ ಕೃಷ್ಣ ಜೆ. ರಾವ್‌ಗೆ ತಿಂಗಳಿಗೆ 75 ಸಾವಿರ ರೂಪಾಯಿ ಮಾಸಿಕ ಪರಿಹಾರ ಪಾವತಿಸಲು ಆದೇಶಿಸಿದೆ. ನ್ಯಾಯಾಲಯವು ಪ್ರಕರಣವನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರಾಕರಿಸಿದ್ದು, ಸಂತ್ರಸ್ತೆ ಮತ್ತು ಮಗುವಿನ ಹಿತದೃಷ್ಟಿಯಿಂದ ಷರತ್ತುಬದ್ಧ ಮಧ್ಯಂತರ ತಡೆ ನೀಡಿದೆ.
Read Full Story

04:49 PM (IST) Apr 24

ಶೀಘ್ರದಲ್ಲೇ ಪಶ್ಚಿಮ ಬೆಂಗಳೂರಿನಲ್ಲಿ ಜಯದೇವ 100 ಹಾಸಿಗೆ ಕಾರ್ಡಿಯಾಕ್ ಹಬ್ ಘಟಕ ಉದ್ಘಾಟನೆ

ಶುಕ್ರವಾರ ಪಶ್ಚಿಮ ಬೆಂಗಳೂರಿನ ಗೋವಿಂದರಾಜನಗರದಲ್ಲಿ 100 ಹಾಸಿಗೆಗಳ ಜಯದೇವ ಘಟಕವನ್ನು ಸ್ಥಾಪಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಜೊತೆ ವಿಕಾಸ ಸೌಧದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

Read Full Story

04:17 PM (IST) Apr 24

ವರನಟ ಡಾ.ರಾಜ್‌ಕುಮಾರ್‌ ವ್ಯಕ್ತಿತ್ವ, ಚಿತ್ರಗಳಿಂದ ಕಲಿಯಬಹುದಾದ 10 ಪಾಠಗಳು

ಅಣ್ಣಾವ್ರು ಡಾ.ರಾಜ್‌ಕುಮಾರ್‌ ಅವರ 97ನೇ ಹುಟ್ಟುಹಬ್ಬ ಇಂದು. (ಏಪ್ರಿಲ್ 24) ಈ ಸಂದರ್ಭದಲ್ಲಿ ಅವರ ವ್ಯಕ್ತಿತ್ವ, ಸಿನಿಮಾಗಳಿಂದ ಈ ಪೀಳಿಗೆಯ ಚಿತ್ರರಂಗ ಏನೇನು ಕಲಿಯಬಹುದು ಎಂಬುದನ್ನು ನೋಡೋಣ.

Read Full Story

03:20 PM (IST) Apr 24

TCS 10K ಓಟ - ಮೆಟ್ರೋ ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿ, ಭಾನುವಾರ ಬೆಳಗ್ಗೆ 3 ಗಂಟೆಯಿಂದಲೇ ರೈಲು ಸಂಚಾರ

ಬೆಂಗಳೂರಿನಲ್ಲಿ ನಡೆಯಲಿರುವ TCS World 10K ಓಟದ ಪ್ರಯುಕ್ತ, ಭಾನುವಾರ ಮೆಟ್ರೋ ಸೇವೆಯನ್ನು ಮುಂಜಾನೆ 3 ಗಂಟೆಯಿಂದಲೇ ಆರಂಭಿಸಲು BMRCL ನಿರ್ಧರಿಸಿದೆ. ನಗರದ ನಾಲ್ಕೂ ದಿಕ್ಕುಗಳಿಂದ ಓಟಗಾರರ ಅನುಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಆರಂಭದಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸಲಿವೆ.
Read Full Story

02:41 PM (IST) Apr 24

ಪೋಷಕರಿಗೆ ಸಜೆಯಾದ ಬೇಸಿಗೆ ರಜೆ - ಆಟವಾಡುತ್ತಿದ್ದಾಗ ಜೋಕಾಲಿ ಕುಣಿಕೆ ಬಿಗಿದು ಬಾಲಕಿ ಸಾವು

ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ, ಬೇಸಿಗೆ ರಜೆ ಕಳೆಯಲು ಚಿಕ್ಕಮ್ಮನ ಮನೆಗೆ ಹೋಗಿದ್ದ 9 ವರ್ಷದ ಬಾಲಕಿ ಪ್ರಣಮ್ಯ, ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಕುಣಿಕೆ ಬಿಗಿದು ಸಾವನ್ನಪ್ಪಿದ್ದಾಳೆ. ರೂಮಿನ ಬಾಗಿಲು ಹಾಕಿಕೊಂಡು ಆಡುತ್ತಿದ್ದಾಗ ಈ ದುರಂತ ಸಂಭವಿಸಿದೆ.

Read Full Story

01:38 PM (IST) Apr 24

ಕರ್ನಾಟಕದಲ್ಲಿ ಮೇ 5ರ ನಂತರ ಕಾಂಗ್ರೆಸ್‌ ಸರ್ಕಾರ ಪತನ, 'ರಾಷ್ಟ್ರಪತಿ ಆಳ್ವಿಕೆ' ಜಾರಿ; ಶಾಸಕ ಸುರೇಶ್ ಗೌಡ ಹೊಸ ಬಾಂಬ್!

ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಅವರು ಮೇ 5ರ ನಂತರ ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಕ್ರಾಂತಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಂತರಿಕ ಕಚ್ಚಾಟದಿಂದ ಪತನಗೊಂಡು, ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆಯಿದೆ ಎಂದು ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
Read Full Story

01:31 PM (IST) Apr 24

ಪ್ರೀ ಫೈರ್ ಗೇಮ್ ಚಟ - ಅಮ್ಮ ಗೇಮ್ ಆಡೋಕೆ ಫೋನ್ ಕೊಟ್ಟಿಲ್ಲ ಅಂತ ಅಮ್ಮನ ಸೀರೆಯಲ್ಲೇ ನೇಣಿಗೆ ಶರಣಾದ ಬಾಲಕ

ಹುಬ್ಬಳ್ಳಿಯಲ್ಲಿ, ಪ್ರೀ ಫೈರ್ ಗೇಮ್ ಚಟಕ್ಕೆ ಬಿದ್ದಿದ್ದ 14 ವರ್ಷದ ಬಾಲಕನೊಬ್ಬ, ತಾಯಿ ಗೇಮ್ ಆಡೋಕೆ ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯು ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಚಟದ ಅಪಾಯವನ್ನು ಸೂಚಿಸುತ್ತಿದೆ.

Read Full Story

01:05 PM (IST) Apr 24

ಬಳ್ಳಾರಿ - ಏರುತ್ತಿರುವ ಬಿಸಿಲ ತಾಪದ ನಡುವೆ - ರಸ್ತೆ ಅಗಲೀಕರಣಕ್ಕಾಗಿ 30ಕ್ಕೂ ಹೆಚ್ಚು ಮರಗಳಿಗೆ ಕೊಡಲಿ ಏಟು

ಬಿಸಿಲ ನಾಡು ಬಳ್ಳಾರಿಯಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಗುತ್ತಿಗೆದಾರನೊಬ್ಬ 234 ಮರಗಳನ್ನು ಕಡಿಯಲು ಮುಂದಾಗಿದ್ದಾನೆ. ಅರಣ್ಯ ಇಲಾಖೆ ಅನುಮತಿ ನಿರಾಕರಿಸಿದರೂ ಮರಗಳ ಕಡಿದಿದ್ದು ತಡೆಯಲು ಬಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

Read Full Story

12:51 PM (IST) Apr 24

ಅಮೆರಿಕಾದಲ್ಲಿ 'ಎಂದೆಂದೂ ನಿನ್ನನು ಮರೆತು ಬದುಕಿರಲಾರೆ' ಎಂದ ನಟ ಮೋಹನ್‌ಲಾಲ್

ಮೋಹನ್‌ಲಾಲ್ ಅವರು  ಮಲಯಾಳಂನ ಮತ್ತೊಬ್ಬ ದಿಗ್ಗಜ ನಟ ಮಮ್ಮುಟ್ಟಿ ಅವರೊಂದಿಗೆ ನಟಿಸಿರುವ 'ಪೆಟ್ರಿಯಾಟ್' ಸಿನಿಮಾ ಮೇ 1ರಂದು ತೆರೆಗೆ ಬರಲು ಸಜ್ಜಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಇಡೀ ಭಾರತೀಯ ಚಿತ್ರರಂಗವೇ ಕಾಯುತ್ತಿರುವ 'ದೃಶ್ಯಂ- 3' ಸಿನಿಮಾದ ಅಪ್‌ಡೇಟ್ ಸಿಕ್ಕಿದ್ದು, ಮೇ 21ರಂದು ಈ ಬಹುನಿರೀಕ್ಷಿತ ಚಿತ್ರ ಬಿಡುಗಡೆ ಆಗುವ ಸಾಧ್ಯತೆಯಿದೆ.

Read Full Story

12:19 PM (IST) Apr 24

ಸ್ನೇಹಿತರ ಜೊತೆ ಪ್ರವಾಸ ಹೋಗಿ ಬರುವ ವೇಳೆ ರೈಲಿನಿಂದ ಬಿದ್ದು ಯುವಕ ನಿಗೂಢ ಸಾವು

ಸ್ನೇಹಿತರ ಜೊತೆ ಟ್ರಿಪ್ ಹೋಗಿ ವಾಪಸ್ ಆಗ್ತಿದ್ದ ವೇಳೆ ಟ್ರೈನ್ ನಿಂದ ಬಿದ್ದು ಯುವಕ ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾ. ಸಾಸಲಮರಿ ಬ್ರಿಡ್ಜ್ ಬಳಿ ನಡೆದಿದೆ. 18 ವರ್ಷದ ಸುಮಂತ್ ಕುಮಾರ್ ಮೃತಪಟ್ಟ ಯುವಕ.

Read Full Story

11:35 AM (IST) Apr 24

ಶಿವಮೊಗ್ಗ - ನೀರು ಕೇಳಿ ಬಂದ ಅಪರಿಚಿತರಿಂದ ವೃದ್ಧೆಯ ಮನೆ ದರೋಡೆ - 18 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ, ಮನೆಯಲ್ಲಿ ಒಂಟಿಯಾಗಿದ್ದ 74 ವರ್ಷದ ವೃದ್ಧೆಯ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಸುಮಾರು 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದರೋಡೆ ಮಾಡಲಾಗಿದೆ. ಕುಡಿಯಲು ನೀರು ಕೇಳುವ ನೆಪದಲ್ಲಿ ಬಂದ ಮೂವರು ಅಪರಿಚಿತರು ಈ ಕೃತ್ಯ ಎಸಗಿದ್ದಾರೆ.
Read Full Story

10:58 AM (IST) Apr 24

ಕಾಫಿನಾಡಲ್ಲಿ ಅರಳಿದ ಅಪರೂಪದ ಪ್ರೇಮ ಕಾವ್ಯ - ಜಾತಿ ಸಂಕೋಲೆ ಮೀರಿ ದಲಿತ ಹುಡುಗಿ ಕೈ ಹಿಡಿದ ಬ್ರಾಹ್ಮಣ ಸಮುದಾಯದ ಯುವಕ

ಚಿಕ್ಕಮಗಳೂರಿನಲ್ಲಿ, ಬ್ರಾಹ್ಮಣ ಸಮುದಾಯದ ಯುವಕ ಸಚಿನ್ ಮತ್ತು ಪರಿಶಿಷ್ಟ ಸಮುದಾಯದ ಯುವತಿ ಸಾವಿತ್ರಿ ಜಾತಿ ಸಂಕೋಲೆ ಮೀರಿ ಪ್ರೀತಿಸಿ ವಿವಾಹವಾಗಿದ್ದಾರೆ. ಬೌದ್ಧ ಸಂಘಟನೆಯು ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
Read Full Story

10:53 AM (IST) Apr 24

ಸಚಿವರ ಸಭೆ ಜನರಲ್ ಚೆಕಪ್ ಎಂದ ಸತೀಶ್ ಜಾರಕಿಹೊಳಿ ಸಂಪುಟ ಪುನರ್‌ ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೇಳಿದ್ದೇನು?

ಸಚಿವ ಸತೀಶ್ ಜಾರಕಿಹೊಳಿ ಅವರು ಇತ್ತೀಚಿನ ಸಚಿವರ ಸಭೆಯನ್ನು 'ಜನರಲ್‌ ಚೆಕಪ್‌' ಎಂದು ಬಣ್ಣಿಸಿದ್ದು, ಇದೊಂದು ಸರ್ಜರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಂಪುಟ ಪುನರ್‌ ರಚನೆ, ಅಹಿಂದ ಒಗ್ಗೂಡಿಸುವಿಕೆ ಹಾಗೂ ಒಳ ಮೀಸಲಾತಿ ಬಗ್ಗೆ ಏನು ಹೇಳಿದರು?

Read Full Story

10:11 AM (IST) Apr 24

Kalpakkam Fast Breeder Reactor - ಕಲ್ಪಕಂ ಯೋಜನೆ ಮುಗಿಸಲು ನಡೆದಿತ್ತು ವಿದೇಶಿ ಷಡ್ಯಂತ್ರ!

ಭಾರತದ ಇಂಧನ ಭದ್ರತೆಯ ಕನಸಾದ ಕಲ್ಪಕಂ ರಿಯಾಕ್ಟರ್ ಯೋಜನೆಗೆ ಅಡ್ಡಿಯಾದ ವಿದೇಶಿ ಷಡ್ಯಂತ್ರ ಮತ್ತು 'ಆರ್ಥಿಕ ಉಗ್ರವಾದ'ದ ಕರಾಳ ಸತ್ಯವನ್ನು ತಿಳಿಯಿರಿ. ಈ ಸವಾಲುಗಳನ್ನು ಭಾರತ ಮೆಟ್ಟಿನಿಂತದ್ದು ಹೇಗೆ? ಪೂರ್ತಿ ಓದಿ.

Read Full Story

10:07 AM (IST) Apr 24

ವಿಜಯಪುರ - ಸಂಬಂಧಿಕರಿಂದಲೇ ಗ್ರಾ.ಪಂ ಮಾಜಿ ಸದಸ್ಯನ ಭೀಕರ ಹತ್ಯೆ - ಆರು ಹಂತಕರ ಬಂಧನ

ವಿಜಯಪುರದಲ್ಲಿ ನಡೆದ ಗ್ರಾ.ಪಂ ಮಾಜಿ ಸದಸ್ಯ ರಾಜು ಖರೆ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸಂಬಂಧಿಕರೇ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
Read Full Story

10:02 AM (IST) Apr 24

ಜಿಯೋ, ಏರ್‌ಟೆಲ್‌ಗೆ ಬಿಗ್ ಶಾಕ್! BSNLನಿಂದ ಬಂತು ಬೊಂಬಾಟ್ ಆಫರ್, ದಿನಕ್ಕೆ 3GB ಡೇಟಾ!

ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ ಮತ್ತು ಏರ್‌ಟೆಲ್‌ಗೆ ಶಾಕ್ ನೀಡಲು ಸರ್ಕಾರಿ ಸ್ವಾಮ್ಯದ BSNL ಹೊಸ ಪ್ಲ್ಯಾನ್ ಒಂದನ್ನು ಪರಿಚಯಿಸಿದೆ. ಕೇವಲ ₹599 ಕ್ಕೆ 70 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 3GB ಡೇಟಾ ಮತ್ತು ಅನಿಯಮಿತ ಕರೆಗಳನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ.
Read Full Story

09:36 AM (IST) Apr 24

ಏ.27ಕ್ಕೆ ಲೆಕ್ಕ ಕೊಡುತ್ತೇವೆ ಬನ್ನಿ - ವಚನಶ್ರೀಗೆ ಮಠದ ಟ್ರಸ್ಟ್‌ ಆಹ್ವಾನ!

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠವು ಏಪ್ರಿಲ್ 27 ರಂದು 2008 ರಿಂದ 2025 ರವರೆಗಿನ ಎಲ್ಲಾ ಲೆಕ್ಕಪತ್ರಗಳನ್ನು ಬಹಿರಂಗಪಡಿಸುವುದಾಗಿ ಘೋಷಿಸಿದೆ. ಉಚ್ಚಾಟಿತ ವಚನಾನಂದ ಸ್ವಾಮೀಜಿ ಮತ್ತು ಲೆಕ್ಕ ಕೇಳಿದವರು ಹಾಜರಿರಬೇಕೆಂದು ತಿಳಿಸಿರುವ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ.

Read Full Story

09:27 AM (IST) Apr 24

ಬಿಎಂಟಿಸಿ ಸ್ಮಾರ್ಟ್‌ ಟಿಕೆಟಿಂಗ್‌ ವ್ಯವಸ್ಥೆ ನಿಗಾಕ್ಕೆ ಸ್ವತಂತ್ರ ಸಂಸ್ಥೆಯ ನೇಮಕ

ಬಿಎಂಟಿಸಿ ತನ್ನ ಹೊಸ ಡಿಜಿಟಲ್‌ ಟಿಕೆಟಿಂಗ್‌ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು ಮುಂದಾಗಿದೆ. ಈ ವ್ಯವಸ್ಥೆಯ ಮೇಲೆ ನಿಗಾ ಇಡಲು, ದತ್ತಾಂಶ ಸುರಕ್ಷತೆ ಖಚಿತಪಡಿಸಲು ಮತ್ತು ಆದಾಯ ಸೋರಿಕೆ ತಡೆಯಲು ಸ್ವತಂತ್ರ ಬಾಹ್ಯ ಮೇಲ್ವಿಚಾರಣಾ ಸಂಸ್ಥೆಯನ್ನು ನೇಮಿಸಲು ನಿಗಮ ನಿರ್ಧರಿಸಿದೆ.
Read Full Story

08:52 AM (IST) Apr 24

ಇಂಡಿಯನ್ ಬ್ಯಾಂಕ್‌ನಲ್ಲಿದ್ದ ₹4 ಕೋಟಿ ಚಿನ್ನ ಕಳವು! ಅಸಿಸ್ಟೆಂಟ್ ಮ್ಯಾನೇಜರ್‌ನ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಗ್ರಾಹಕರು ಕಂಗಾಲು!

ಗಿರಿನಗರ ಇಂಡಿಯನ್ ಬ್ಯಾಂಕ್‌ನಲ್ಲಿ ಸುಮಾರು ನಾಲ್ಕು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣದ ತನಿಖೆ ವಿಳಂಬವಾಗಿದ್ದಕ್ಕೆ ಗ್ರಾಹಕರು ಪ್ರತಿಭಟನೆ ನಡೆಸಿದ್ದಾರೆ. ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್, ಗ್ರಾಹಕರ ಚಿನ್ನವನ್ನು ಕದ್ದು ಆನ್‌ಲೈನ್ ಬೆಟ್ಟಿಂಗ್‌ಗೆ ಬಳಸಿದ್ದ ಭೂಪ.

Read Full Story

08:12 AM (IST) Apr 24

ತಮಿಳುನಾಡಲ್ಲಿ ತ್ರಿಕೋನ ಸಮರ - ದಾಖಲೆಯ ಶೇ.85ರಷ್ಟು ಮತದಾನ

ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ.85ರಷ್ಟು ದಾಖಲೆಯ ಮತದಾನವಾಗಿದೆ. ಆಡಳಿತಾರೂಢ ಡಿಎಂಕೆ, ಎಐಎಡಿಎಂಕೆ-ಬಿಜೆಪಿ ಮತ್ತು ನಟ ವಿಜಯ್ ಅವರ ಟಿವಿಕೆ ನಡುವಿನ ತ್ರಿಕೋನ ಸ್ಪರ್ಧೆಯ ಫಲಿತಾಂಶವು ಇವಿಎಂನಲ್ಲಿ ಭದ್ರವಾಗಿದೆ.

Read Full Story

07:53 AM (IST) Apr 24

SSLC Results 2026 - ಆ್ಯಂಬುಲೆನ್ಸ್‌ನಲ್ಲಿ ಬಂದು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಫಸ್ಟ್‌ಕ್ಲಾಸ್ ಪಾಸ್

ಅಪಘಾತದಿಂದ ಗಾಯಗೊಂಡಿದ್ದರೂ, ಕೋಲಾರದ ವಿದ್ಯಾರ್ಥಿನಿ ಕುಸುಮಾ ಆ್ಯಂಬುಲೆನ್ಸ್‌ನಲ್ಲಿ ಬಂದು ಸ್ಟ್ರೆಚರ್‌ನಲ್ಲಿ ಮಲಗಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಳು. ಇದೀಗ ಆಕೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದು, ಚಿಕಿತ್ಸೆ ಪಡೆಯುತ್ತಲೇ ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾಳೆ.
Read Full Story

07:33 AM (IST) Apr 24

ಯುವಕನೊಂದಿಗೆ ಸುತ್ತಾಡಿ ಗರ್ಭಿಣಿ, ಫಾಕ್ಸ್‌ಕಾನ್ ಕಂಪನಿಯ ಟಾಯ್ಲೆಟ್‌ನಲ್ಲೇ ಮಗು ಹಡೆದು ಭಯದಿಂದ ಶಿಶುವಿನ ಕತ್ತು ಕುಯ್ದು ಎಸೆದು ಹೋದ ತಾಯಿ!

ದೇವನಹಳ್ಳಿಯ ಫಾಕ್ಸ್‌ಕಾನ್‌ ಕಂಪನಿಯಲ್ಲಿ ಯುವತಿಯೊಬ್ಬಳು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ, ಭಯದಿಂದ ನವಜಾತ ಶಿಶುವಿನ ಕತ್ತು ಸೀಳಿ ಹತ್ಯೆಗೈದು ಎಸೆದಿದ್ದಾಳೆ. ಈ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದ್ದು, ವಿಶ್ವನಾಥಪುರ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
Read Full Story

07:00 AM (IST) Apr 24

SSLC Results 2026 - ಶೇ.94.1ರಷ್ಟು ಮಕ್ಕಳು ಪಾಸ್, ದಕ್ಷಿಣ ಕನ್ನಡ ಪ್ರಥಮ, ಕಲಬುರಗಿ ಲಾಸ್ಟ್!

2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ರಾಜ್ಯವು ಶೇ.88.73ರಷ್ಟು ಐತಿಹಾಸಿಕ ಫಲಿತಾಂಶ ದಾಖಲಿಸಿದೆ. ಈ ಬಾರಿ ಯಾವುದೇ ಗ್ರೇಸ್ ಅಂಕಗಳನ್ನು ನೀಡದೆ, ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದು, ಸರ್ಕಾರಿ ಶಾಲೆಗಳ ಪ್ರದರ್ಶನದಲ್ಲಿಯೂ ಭಾರೀ ಸುಧಾರಣೆ ಕಂಡುಬಂದಿದೆ.
Read Full Story

More Trending News