Published : Apr 23, 2026, 06:09 AM ISTUpdated : Apr 23, 2026, 11:17 PM IST

Karnataka News Live: ಸಚಿವ ಡಿ ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ, ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ

ಸಾರಾಂಶ

ಬೆಂಗಳೂರು: ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಗುರುವಾರ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಬೆಳಗ್ಗೆ 9.30ಕ್ಕೆ ಹಮ್ಮಿಕೊಂಡಿರುವ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಶಾಸಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

D Sudhakar

11:17 PM (IST) Apr 23

ಸಚಿವ ಡಿ ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ, ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ

ಸಚಿವ ಡಿ ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ, ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಣಿಪಾಲ್ ಆಸ್ಪತ್ರೆಯಿಂದ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಆರೋಗ್ಯ ಚೇತರಿಕೆ ಕಂಡು ಬಂದಿಲ್ಲ ಎಂದು ವರದಿಯಾಗಿದೆ.

 

Read Full Story

10:39 PM (IST) Apr 23

9 ಇನ್ಸ್‌ಪೆಕ್ಟರ್ ವರ್ಗಾವಣೆ, ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದ ಆದೇಶ

9 ಇನ್ಸ್‌ಪೆಕ್ಟರ್ ವರ್ಗಾವಣೆ, ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದ ಆದೇಶ ಹೊರಡಿಸಲಾಗಿದೆ. ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಯಾವ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ?

Read Full Story

09:53 PM (IST) Apr 23

ಗಣತಿಗೆ ತೆರಳಿದ್ದ ಶಿಕ್ಷಕರಿಗೆ ಅಪಘಾತ, ಕೋಲಾರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸಾವು

ಗಣತಿಗೆ ತೆರಳಿದ್ದ ಶಿಕ್ಷಕರಿಗೆ ಅಪಘಾತ, ಕೋಲಾರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸಾವು, ಬೈಕ್ ಹಾಗೂ ಕಾರು ಅಪಘಾತಕ್ಕೀಡಾಗಿ ದುರಂತ ಸಂಭವಿಸಿದೆ. ಮತ್ತೊರ್ವ ಶಿಕ್ಷಕ ಗಭೀರವಾಗಿ ಗಾಯಗೊಂಡಿದ್ದಾರೆ.

 

Read Full Story

09:34 PM (IST) Apr 23

ಬೆಂಗಳೂರು - ಗಿರಿನಗರ ಇಂಡಿಯನ್ ಬ್ಯಾಂಕ್‌ ನಲ್ಲಿ ಗ್ರಾಹಕರಿಟ್ಟ ಕೋಟಿ ಕೋಟಿ ಮೌಲ್ಯದ ಚಿನ್ನ ಮಾಯ!

ಬೆಂಗಳೂರಿನ ಗಿರಿನಗರದ ಇಂಡಿಯನ್ ಬ್ಯಾಂಕ್‌ನಲ್ಲಿ, ಅಸಿಸ್ಟೆಂಟ್ ಮ್ಯಾನೇಜರ್ ಒಬ್ಬ ಗ್ರಾಹಕರು ಅಡವಿಟ್ಟಿದ್ದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕದ್ದಿದ್ದಾನೆ. ಆನ್‌ಲೈನ್ ಬೆಟ್ಟಿಂಗ್‌ಗಾಗಿ ಈ ಕೃತ್ಯ ಎಸಗಿದ್ದು, ಆರೋಪಿ ಬೇಗನೆ ಜಾಮೀನು ಪಡೆದಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

08:20 PM (IST) Apr 23

Kodagu - ಅನಾಥ ಆಶ್ರಮದಲ್ಲಿ ಮದುವೆ ಸಂಭ್ರಮ - ಪೂವಣ್ಣನೊಂದಿಗೆ ಹಸೆಮಣೆ ಏರಿದ ಮೈನಾ

ಅದೊಂದು ಅನಾಥ ಆಶ್ರಮ, ಇಲ್ಲಿಗೆ ಬರುವವರ ಬದುಕಿನಲ್ಲಿ ಎಲ್ಲವೂ ಮುಗಿದು ಅನಾಥರಾಗಿದ್ದೇವೆ ಎನ್ನುವ ಭಾವವೇ ಸಂಪೂರ್ಣ ತುಂಬಿರುತ್ತದೆ. ಅಂತಹ ಆಶ್ರಮದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು.

Read Full Story

07:59 PM (IST) Apr 23

ತೃತೀಯ ಭಾಷೆಗೆ ಗ್ರೇಡ್, ರಾಜ್ಯ ಸರ್ಕಾರ ತರಾತುರಿ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಲು ಕಾರಣವೇನು?

ತೃತೀಯ ಭಾಷೆಗೆ ಗ್ರೇಡ್, ರಾಜ್ಯ ಸರ್ಕಾರ ತರಾತುರಿಗೆ ಹೈಕೋರ್ಟ್ ಬ್ರೇಕ್ ಹಾಕಲು ಕಾರಣವೇನು?, ಪೋಷಕರು, ಶೈಕ್ಷಣಿಕ ತಜ್ಞರು ಹೇಳುತ್ತಿರುವುದೇನು? ಹಿಂದಿ ಭಾಷೆಗೆ ಗ್ರೇಡ್ ಸಿಸ್ಟಮ್ ಸಾಧಕ ಬಾಧಕಗಳೇನು?

 

Read Full Story

07:21 PM (IST) Apr 23

ಅಂಗಡಿ ಪಾಲಾಗುತ್ತಿದ್ದ 400 ಕೆಜಿ ಅನ್ನ ಭಾಗ್ಯದ ಅಕ್ಕಿ ಅಧಿಕಾರಿಗಳಿಂದ ಜಪ್ತಿ

ಚಿಕ್ಕಮಗಳೂರಿನಲ್ಲಿ, ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಆಟೋದಲ್ಲಿ ಸಾಗಿಸುತ್ತಿದ್ದಾಗ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ, ಸುಮಾರು 4 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
Read Full Story

06:51 PM (IST) Apr 23

ಗೆಲ್ತಾರಾ or ಬೇರೋಬ್ರನ್ನ ಗೆಲ್ಲಿಸ್ತಾರಾ? ಏನಾಗಲಿದೆ ನಟ ದಳಪತಿ ವಿಜಯ್ ರಾಜಕೀಯ ಭವಿಷ್ಯ?

ಕೆಲವರು ನನ್ನನ್ನು ಪದೇ ಪದೇ 'ನೀನೊಬ್ಬ ನಟ, ನೀನೊಬ್ಬ ನಟ' ಎಂದು ಹೇಳುತ್ತಿದ್ದಾರೆ. ಹೌದು, ನಾನು ನಟನೇ. ಅದನ್ನು ಅವರು ಹೊಸದಾಗಿ ಕಂಡುಹಿಡಿದಂತಿದೆ. ಆದರೆ ಒಂದು ವಿಷಯ ನೆನಪಿರಲಿ, ನಾನು ರಾಜಕೀಯಕ್ಕೆ ಬಂದ ಮೇಲೆ ನಟಿಸುತ್ತಿಲ್ಲ. ನೀವು ಮಾಡುತ್ತಿರುವುದು ಬೃಹನ್ನಾಟಕ. ನಾನು ಇಲ್ಲಿಗೆ ಬಂದಿರುವುದು ಅಧಿಕಾರಕ್ಕಾಗಿ ಅಲ್ಲ, ಜನರ ಸೇವೆ ಮಾಡಲು..

Read Full Story

06:47 PM (IST) Apr 23

ನಿರೀಕ್ಷಿಸಿದಷ್ಟು ಅಂಕ ಬಂದಿಲ್ಲ ಅಂತ ಫಸ್ಟ್ ಕ್ಲಾಸಲ್ಲಿ ಪಾಸಾದ ಬಾಲಕಿ ಸಾವಿಗೆ ಶರಣು - ಚಿತ್ರದುರ್ಗದಲ್ಲೇ ಫೇಲಾಗಿದ್ದಕ್ಕೆ ಬಾಲಕ ಸಾವು

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬಾರದ ಕಾರಣಕ್ಕೆ ಮೈಸೂರಿನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿನಿ ಹಾಗೂ ಚಿತ್ರದುರ್ಗದಲ್ಲಿ ಒಂದು ಅಂಕದಿಂದ ಫೇಲಾದ ವಿದ್ಯಾರ್ಥಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. 

Read Full Story

06:29 PM (IST) Apr 23

SSLCಯಲ್ಲಿ ಟೈಲರ್ ಮಗಳು ಇಂದು ರಾಜ್ಯಕ್ಕೆ ಟಾಪರ್ - ಕಾಫಿನಾಡಿನ ಬೃಂದಾ ಜಿಲ್ಲೆಗೆ ಮಾತ್ರವಲ್ಲ, ಇಡೀ ರಾಜ್ಯಕ್ಕಿ ಕೀರ್ತಿ!

ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ಚಿಕ್ಕಮಗಳೂರಿನ ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಬೃಂದಾ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿ ಕಾಫಿನಾಡಿಗೆ ಕೀರ್ತಿ ತಂದಿದ್ದಾರೆ.

Read Full Story

06:11 PM (IST) Apr 23

10 ವರ್ಷ ಯಂಗ್ ಆಗಿ ಕಾಣಬೇಕಾ? ಜಪಾನಿಯರ ಈ ಸ್ಕಿನ್‌ಕೇರ್ ಟಿಪ್ಸ್ ನಿಮ್ಮ ಲುಕ್ ಬದಲಿಸುತ್ತೆ!

ಈಗಿನ ಕಾಲದಲ್ಲಿ ಗ್ಲೋಯಿಂಗ್ ಮತ್ತು ಯಂಗ್ ಸ್ಕಿನ್ ಯಾರಿಗೆ ತಾನೇ ಬೇಡ ಹೇಳಿ? ಆದ್ರೆ, ಎಷ್ಟೇ ಪ್ರಾಡಕ್ಟ್ಸ್ ಬಳಸಿದ್ರೂ ಅಂದುಕೊಂಡ ರಿಸಲ್ಟ್ ಸಿಗೋದಿಲ್ಲ. ಇಂಥ ಟೈಮ್‌ನಲ್ಲಿ ಜಪಾನೀಸ್ ಸ್ಕಿನ್‌ಕೇರ್ ರೂಟಿನ್ ಒಂದು ಒಳ್ಳೆ ಆಪ್ಷನ್.

Read Full Story

05:56 PM (IST) Apr 23

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಸಮಗ್ರ ಅಭಿವೃದ್ಧಿ ಯೋಜನೆ - 340 ಕೋಟಿ ರೂ ಬದಲು 95 ಕೋಟಿ ರೂಗೆ ಇಳಿಕೆ!

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ಸಮಗ್ರ ಅಭಿವೃದ್ಧಿ ಯೋಜನೆಯ ವೆಚ್ಚವನ್ನು 340 ಕೋಟಿಯಿಂದ 95 ಕೋಟಿ ರೂಪಾಯಿಗಳಿಗೆ ಕಡಿತಗೊಳಿಸಲಾಗಿದೆ. ಈ ಹೊಸ ಯೋಜನೆಯಡಿ ಲಿಫ್ಟ್‌, ಎಸ್ಕಲೇಟರ್‌ ಹಾಗೂ ಪಾರ್ಕಿಂಗ್ ಸೌಲಭ್ಯಗಳನ್ನು ಒದಗಿಸಲಾಗುವುದು. ಇದಲ್ಲದೆ, ನಗರದ ಇತರ ರೈಲ್ವೆ ಕಾಮಗಾರಿಗಳು ಮತ್ತು ಅಮೃತ್ ಭಾರತ್ ಯೋಜನೆಯಡಿ ಮಂಗಳೂರು ಜಂಕ್ಷನ್ ಅಭಿವೃದ್ಧಿ ಕೂಡ ಪೂರ್ಣಗೊಂಡಿದೆ.
Read Full Story

05:45 PM (IST) Apr 23

ಯಾರೋ ಬರುತ್ತಾರೆ ಅಂತ ನೆಚ್ಚಿಕೊಂಡು ಜೆಡಿಎಸ್‌ ಪಕ್ಷ ಉಳಿದಿಲ್ಲ - ನಿಖಿಲ್‌ ಕುಮಾರಸ್ವಾಮಿ

ಯಾರೋ ಬರುತ್ತಾರೆ ಅಂತ ನೆಚ್ಚಿಕೊಂಡು ಜೆಡಿಎಸ್‌ ಪಕ್ಷ ಉಳಿದಿಲ್ಲ. ಮುಂದೆಯೂ ಅಂತಹ ಸನ್ನಿವೇಶ ಸೃಷ್ಟಿಯಾಗುವುದಿಲ್ಲ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

Read Full Story

05:33 PM (IST) Apr 23

ಇಂಡಿಯಾ ಕೂಟದ ನಡೆಯಿಂದ ಸಂಸದರ ಸ್ಥಾನ ಕುಸಿಯುವ ಸಾಧ್ಯತೆ - ಸಂಸದ ಡಾ.ಸಿ.ಎನ್.ಮಂಜುನಾಥ್

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಗೊಂಡಿದ್ದರೆ ದಕ್ಷಿಣ ರಾಜ್ಯಗಳ ಸಂಸತ್ ಸ್ಥಾನಗಳ ಸಂಖ್ಯೆ 129 ರಿಂದ 195ಕ್ಕೆ ಹೆಚ್ಚಳವಾಗುತ್ತಿತ್ತು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹರಿಹಾಯ್ದರು.

Read Full Story

05:27 PM (IST) Apr 23

ರಾಜ್ಯದಲ್ಲಿ ಇಂಧನ ಬಿಕ್ಕಟ್ಟು ಬಗ್ಗೆ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಸ್ಟೇಟ್ ಕೋ-ಆರ್ಡಿನೇಟರ್ ಸ್ಪಷ್ಟನೆ

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಕೊರತೆಯಿದೆ ಎಂಬ ವದಂತಿಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್ ತಳ್ಳಿಹಾಕಿದೆ. ರಾಜ್ಯದಲ್ಲಿ ಸಾಕಷ್ಟು ಇಂಧನ ಲಭ್ಯವಿದ್ದು, ಪೂರೈಕೆ ಸರಪಳಿ ಸುಗಮವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವದಂತಿಗಳಿಂದ ಉಂಟಾಗಿದ್ದ ಪ್ಯಾನಿಕ್ ಬುಕ್ಕಿಂಗ್ ಇದೀಗ ನಿಯಂತ್ರಣಕ್ಕೆ ಬಂದಿದೆ.
Read Full Story

05:21 PM (IST) Apr 23

ಸಾರಿಗೆ ನಿಗಮಗಳ ಈಗಿನ ಸ್ಥಿತಿಗೆ ಬಿಜೆಪಿಯೇ ಕಾರಣ - ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ

ಸಾರಿಗೆ ನಿಗಮಗಳ ಈಗಿನ ಸ್ಥಿತಿಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಅದಕ್ಷ ಆಡಳಿತವೇ ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

04:50 PM (IST) Apr 23

ಪವಿತ್ರಾ ಗೌಡ ಅಲ್ಲ, ರೇಣುಕಾಸ್ವಾಮಿನೂ ಅಲ್ಲ; ಸತ್ಯ ಹೇಳ್ಬೇಕು ಅಂದ್ರೆ- ದರ್ಶನ್ ದುಸ್ಥಿತಿಗೆ ಅಸಲಿ ಕಾರಣ ಇವರು?

ಸಂಗೊಳ್ಳಿ ರಾಯಣ್ಣ, ಬುಲ್ ಬುಲ್ ಸಮಯದಲ್ಲಿ ದರ್ಶನ್ ಸ್ನೇಹಿತರಾಗಿದ್ದವರು, ಮುಂದೆಯೂ ದಾಸನ ಜೊತೆಗಿದ್ದುಬಿಟ್ಟಿದ್ರೆ ದರ್ಶನ್ ಇಂಥಾ ತಪ್ಪು ಮಾಡ್ತಾ ಇರಲಿಲ್ಲ. ಅವರನ್ನ ಕಳೆದುಕೊಂಡಿದ್ದೇ ದಾಸನ ಇವತ್ತಿನ ಸ್ಥಿತಿಗೆ ಕಾರಣ ಅಂತಾರೆ ದರ್ಶನ್ ಅವರನ್ನು ಹತ್ತಿರದಿಂದ ಬಲ್ಲವರು.

Read Full Story

04:27 PM (IST) Apr 23

ಸಾಹಸಕ್ಕೆ ಹೊಸ ಅರ್ಥ ಕೊಟ್ಟ ಯಶ್‌ - ‘ಟಾಕ್ಸಿಕ್‌’ನಲ್ಲಿ ಗನ್‌ಫೂ ಆ್ಯಕ್ಷನ್‌ ಹೈಲೈಟ್‌

ಆ್ಯಕ್ಷನ್‌ ಅದ್ಭುತವಾಗಿ ಬರಬೇಕು ಅನ್ನುವುದು ನನ್ನ ಆಸೆಯಾಗಿತ್ತು. ಜೆ.ಜೆ ಪೆರ್ರಿ ಎಂಬ ಅದ್ಭುತ ಆ್ಯಕ್ಷನ್‌ ಡೈರೆಕ್ಟರ್‌ ಅನ್ನು ಭೇಟಿ ಮಾಡಿ ಅವರೊಂದಿಗೆ ಸಮಯ ಕಳೆದೆ ಎಂದು ರಾಕಿಂಗ್ ಸ್ಟಾರ್ ಯಶ್‌ ಹೇಳಿದರು.

Read Full Story

03:40 PM (IST) Apr 23

ಬಣ್ಣ ಬಣ್ಣದ ಬಲೂನ್‌ ಮಾರಿ ಬದುಕುತ್ತಿರುವವನ ಮಗಳಿಗೆ 623 ಅಂಕ! ಗ್ಯಾರೇಜ್‌ನಲ್ಲಿ ಕೆಲಸ ಮಾಡುವವನ ಮಗನಿಗೆ 98%!

ಮಧುಗಿರಿ ಪಟ್ಟಣದ ವಿದ್ಯಾರ್ಥಿನಿ ಹಿತಾಶ್ರೀ ಡಿ., ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಲೂನ್ ಮಾರಾಟ ಮಾಡಿ ಜೀವನ ಸಾಗಿಸುವ ತಂದೆಯ ಮಗಳಾದ ಇವರು, ಆರ್ಥಿಕ ಸಂಕಷ್ಟಗಳ ನಡುವೆಯೂ ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.
Read Full Story

03:36 PM (IST) Apr 23

9ನೇ ತಿಂಗಳಲ್ಲಿ ಅಮೆರಿಕಾಗೆ ಬಂದು ಮಗು ಹೆರುತ್ತಾರೆ - ಭಾರತ, ಚೀನಾ ವಲಸಿಗರ ವಿರುದ್ಧ ಟ್ರಂಪ್ ಮತ್ತೆ ಆಕ್ರೋಶ

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ರಾಜಕೀಯ ವಿಶ್ಲೇಷಕ ಮೈಕಲ್ ಸ್ಯಾವೇಜ್ ಅವರ ವಿವಾದಿತ ಪಾಡ್‌ಕಾಸ್ಟ್‌ ವೀಡಿಯೋವನ್ನು ಮರುಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ, ಸ್ಯಾವೇಜ್ ಭಾರತ ಮತ್ತು ಚೀನಾವನ್ನು 'ನರಕದ ಹೊಂಡ' ಎಂದು ಕರೆದಿದ್ದು, ಅಮೆರಿಕದ ಜನ್ಮಸಿದ್ಧ ಪೌರತ್ವ ಕಾನೂನನ್ನು ಟೀಕಿಸಿದ್ದಾರೆ.

Read Full Story

02:18 PM (IST) Apr 23

ಎಸ್‌ಎಸ್‌ಎಲ್‌ಸಿ ಫಲಿತಾಂಶ - 625 ಕ್ಕೆ 625 ಪಡೆದ ವಿದ್ಯಾರ್ಥಿಗಳಿವರು, 620ಕ್ಕಿಂತ ಹೆಚ್ಚು ಪಡೆದವರೆಷ್ಟು?

ಕರ್ನಾಟಕ ಎಸ್‌ಎಸ್‌ಎಲ್‌ಸಿ 2025-26ರ ಫಲಿತಾಂಶ ಪ್ರಕಟವಾಗಿದ್ದು, ದಾಖಲೆಯ ಶೇ.94.10 ಫಲಿತಾಂಶ ಬಂದಿದೆ. ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದಿದ್ದು, ಒಟ್ಟು 7 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಲೇಖನವು ಟಾಪರ್‌ಗಳ ಪಟ್ಟಿ ಮತ್ತು ಅಂಕಗಳ ವಿಶ್ಲೇಷಣೆಯನ್ನು ಒದಗಿಸುತ್ತದೆ.
Read Full Story

01:41 PM (IST) Apr 23

ಎಸ್‌ಎಸ್‌ಎಲ್‌ಸಿ ಅನುತ್ತೀರ್ಣರಾದವರಿಗೆ ಶುಲ್ಕ ರಹಿತ ಮರುಪರೀಕ್ಷೆ, ದಿನಾಂಕ ಪ್ರಕಟಿಸಿದ ಇಲಾಖೆ

2025–26ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರ್ನಾಟಕವು ಶೇ. 94.10ರಷ್ಟು ದಾಖಲೆಯ ಉತ್ತೀರ್ಣತೆ ಸಾಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶುಲ್ಕ ರಹಿತ ಮರುಪರೀಕ್ಷೆಯ ಅವಕಾಶವನ್ನು ಕಲ್ಪಿಸಲಾಗಿದೆ.
Read Full Story

01:06 PM (IST) Apr 23

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸುಧಾರಣೆಯಾದ್ರೂ ಕೊನೆ ಸ್ಥಾನದಲ್ಲಿಯೇ ಉಳಿದ ಕಲಬುರಗಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದರೂ ಕಳೆದ ವರ್ಷಕ್ಕಿಂತ ಶೇ.28.17ರಷ್ಟು ಫಲಿತಾಂಶದಲ್ಲಿ ಏರಿಕೆ ಕಂಡಿದೆ. ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳಿಗೆ ಸರ್ಕಾರವು ಶುಲ್ಕ ರಹಿತ ಮರುಪರೀಕ್ಷೆಯನ್ನು ಘೋಷಿಸಿದೆ.
Read Full Story

01:06 PM (IST) Apr 23

ಎಸ್ಸೆಸ್ಸೆಲ್ಸಿ ಫಲಿತಾಂಶ - ಕರಾವಳಿ ಜಿಲ್ಲೆಗಳ ಕಮಾಲ್, ಕಲಬುರಗಿ ಕೊನೆ ಸ್ಥಾನ, ನಿಮ್ಮ ಜಿಲ್ಲೆಗೆ ಎಷ್ಟನೇ ಸ್ಥಾನ?

2026ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 94.1ರಷ್ಟು ಉತ್ತೀರ್ಣ ಪ್ರಮಾಣ ದಾಖಲಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ, ಕಲಬುರಗಿ ಜಿಲ್ಲೆಯು ಸತತವಾಗಿ ಕಳಪೆ ಪ್ರದರ್ಶನ ನೀಡಿ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ.
Read Full Story

12:15 PM (IST) Apr 23

Annamalai - ಚುನಾವಣಾ ಆಯೋಗದ ಮೇಲೆ ಗರಂ, ಆದ್ರೂ ಎಲ್ಲರೂ ವೋಟ್ ಮಾಡಿ ಎಂದ ಅಣ್ಣಾಮಲೈ!

ಕೊಯಮತ್ತೂರು ದಕ್ಷಿಣ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ಸರಿಯಾಗಿಲ್ಲ ಎಂದು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಆಯೋಗದ ಪೂರ್ವಸಿದ್ಧತೆ ಬಗ್ಗೆ ಟೀಕೆ ಮಾಡಿದರೂ, ತಮಿಳುನಾಡು ಚುನಾವಣೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
Read Full Story

12:07 PM (IST) Apr 23

Breaking ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟ, ಸಚಿವರ ಸುದ್ದಿಗೋಷ್ಠಿ ಅಷ್ಟೇ ಬಾಕಿ

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ನಿಗದಿಗಿಂತ ಒಂದು ದಿನ ಮುಂಚಿತವಾಗಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌, ಮೊಬೈಲ್ ಆ್ಯಪ್, ಹಾಗೂ SMS ಮೂಲಕ ಪರಿಶೀಲಿಸಬಹುದು. ಈ ವರ್ಷ ಮೊದಲ ಬಾರಿಗೆ ಡಿಜಿಲಾಕರ್ ಮೂಲಕ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
Read Full Story

12:00 PM (IST) Apr 23

ಬುರ್ಖಾ ಧರಿಸಿ ನಾವೆಲ್ಲಾ ಹೋಗಬೇಕಿತ್ತು - ಆತಂಕದ ದಿನಗಳ ನೆನೆದ ಹಿರಿಯ ನಟಿ ತಾರಾ ಅನುರಾಧಾ

ಹಿರಿಯ ನಟಿ ತಾರಾ ಅನುರಾಧಾ ಅವರು ತಮ್ಮ ಕಾಲದಲ್ಲಿ ನಟಿಯರು ಎದುರಿಸುತ್ತಿದ್ದ ಸವಾಲುಗಳನ್ನು ಹಂಚಿಕೊಂಡಿದ್ದಾರೆ. ತಾವು ಬುರ್ಖಾ ಧರಿಸಿ ಚಿತ್ರಮಂದಿರಕ್ಕೆ ಹೋಗುತ್ತಿದ್ದ ಘಟನೆಯನ್ನು ನೆನಪಿಸಿಕೊಂಡ ಅವರು, ಇಂದಿನ ಡಿಜಿಟಲ್ ಯುಗದಲ್ಲಿ ಪ್ರಚಾರ ಸುಲಭವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Read Full Story

12:00 PM (IST) Apr 23

ಚಿಕ್ಕಮಗಳೂರು - ಸಿಇಟಿ ಪರೀಕ್ಷೆ ಬರೆಯಲು ಬಂದವರಿಗೆ ಶಾಕ್, ಮೂಗುತಿ ತೆಗೆಯಲಾಗದ ವಿದ್ಯಾರ್ಥಿನಿಯರಿಗೆ ಗಮ್ ಟೇಪ್ ಅಂಟಿಸಿದ ಸಿಬ್ಬಂದಿ!

ಚಿಕ್ಕಮಗಳೂರಿನ MES ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ, ಮೂಗುತಿ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಸಿಬ್ಬಂದಿ ಗಮ್ ಟೇಪ್ ಅಂಟಿಸಿ ಒಳಗೆ ಕಳುಹಿಸಿದ್ದಾರೆ. ಪರೀಕ್ಷಾ ಅಕ್ರಮ ತಡೆಯುವ ಕಟ್ಟುನಿಟ್ಟಿನ ಕ್ರಮಗಳ ಭಾಗವಾಗಿ ಈ ಘಟನೆ ನಡೆದಿದೆ.
Read Full Story

11:45 AM (IST) Apr 23

ತೀವ್ರ ವಿರೋಧದ ಬೆನ್ನಲ್ಲೇ ಧಾರವಾಡ ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗ ಸ್ಥಳಾಂತರ ಮತ್ತೆ ರದ್ದು

Dharwad Akashvani center ಪ್ರಸಾರ ಭಾರತಿಯು ಏ.17ರಂದು ಮಾಡಿದ್ದ ಸ್ಥಳಾಂತರದ ಆದೇಶವನ್ನು ಹಿಂಪಡೆದಿದೆ. ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಜೋಶಿ ಧನ್ಯವಾದ ತಿಳಿಸಿದ್ದಾರೆ.

Read Full Story

11:05 AM (IST) Apr 23

ಬೆಂಗಳೂರಿನ ಮೊದಲ ಡಬಲ್‌ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ , ಸಿಲ್ಕ್ ಬೋರ್ಡ್‌ನ ಟ್ರಾಫಿಕ್ ಕಥೆಗೆ ಹೊಸ ತಿರುವು!

ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ನಿರ್ಮಿಸಲಾದ ಬಹುನಿರೀಕ್ಷಿತ ಡಬಲ್ ಡೆಕ್ಕರ್ ಫ್ಲೈಓವರ್ ಈಗ ಸಂಪೂರ್ಣ ಸಂಚಾರಕ್ಕೆ ಮುಕ್ತವಾಗಿದೆ. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ವರೆಗೆ ವ್ಯಾಪಿಸಿರುವ ಈ ಮೇಲ್ಸೇತುವೆಯು ವಾಹನ ಸಂಚಾರಕ್ಕೆ ಕೆಳಮಟ್ಟದ ಡೆಕ್ ಮತ್ತು ಮೆಟ್ರೋ ರೈಲಿಗೆ ಮೇಲ್ಮಟ್ಟದ ಡೆಕ್ ಹೊಂದಿದ್ದು, ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
Read Full Story

10:08 AM (IST) Apr 23

Netanyahu War Plan - 3 ಅಧ್ಯಕ್ಷರು ತಿರಸ್ಕರಿಸಿದ್ದ ಯುದ್ಧದ ಪ್ಲಾನ್‌ಗೆ ಟ್ರಂಪ್ ಒಪ್ಪಿದ್ದೇಕೆ? ಸತ್ಯ ಬಿಚ್ಚಿಟ್ಟ ಜಾನ್ ಕೆರಿ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ಮೇಲೆ ಯುದ್ಧ ಮಾಡುವ ಪ್ಲಾನ್ ಒಂದನ್ನು ಮುಂದಿಟ್ಟಿದ್ದರು. ಈ ಪ್ಲಾನ್‌ ಅನ್ನು ಬರಾಕ್ ಒಬಾಮ, ಜಾರ್ಜ್ ಬುಷ್ ಮತ್ತು ಜೋ ಬೈಡನ್ ತಿರಸ್ಕರಿಸಿದ್ದರು.

Read Full Story

09:08 AM (IST) Apr 23

ಬಿಡಿಎ ಸ್ವತ್ತಿನ ಮೇಲೆ ಅನಧಿಕೃತ ರಸ್ತೆ - ಗಂಭೀರ ಆರೋಪ, ಆಯುಕ್ತರಿಗೆ NR ರಮೇಶ್‌ ಪತ್ರ

ಬೆಂಗಳೂರಿನ ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಬಿಡಿಎಗೆ ಸೇರಿದ ನಿವೇಶನ, ಉದ್ಯಾನ ಹಾಗೂ ರಾಜಕಾಲುವೆ ಮೇಲೆ ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲು ಅನಧಿಕೃತ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ. 

Read Full Story

08:20 AM (IST) Apr 23

ಕೊಪ್ಪಳದ ಸಾಮೂಹಿಕ ವಿವಾಹದಲ್ಲಿ ನಕಲಿ ದಾಖಲೆ ನೀಡಿ ಅಪ್ರಾಪ್ತೆಗೆ ಮದುವೆ ಮಾಡಲು ಯತ್ನ!

ಕೊಪ್ಪಳ ಜಿಲ್ಲೆಯ ತಾಳಕೇರಿಯಲ್ಲಿ, ಸಾಮೂಹಿಕ ವಿವಾಹದಲ್ಲಿ ನಕಲಿ ಶಾಲಾ ದೃಢೀಕರಣ ಪತ್ರ ಬಳಸಿ ಅಪ್ರಾಪ್ತೆಗೆ ಮದುವೆ ಮಾಡಲು ಯತ್ನಿಸಲಾಗಿತ್ತು. ಸಹಾಯವಾಣಿಗೆ ಬಂದ ಕರೆ ಆಧರಿಸಿ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ದಾಖಲೆ ಪರಿಶೀಲಿಸಿ ಬಾಲ್ಯವಿವಾಹ ತಡೆದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ.

Read Full Story

08:07 AM (IST) Apr 23

MLC ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ - 2ನೇ ಆರೋಪಿಯಿಂದ ಅಚ್ಚರಿಯ ನಡೆ!

ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, ಎರಡನೇ ಆರೋಪಿ ಶಿವಕುಮಾರ್ ಮಾಫಿ ಸಾಕ್ಷಿಯಾಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂರಜ್ ರೇವಣ್ಣ ಪರ ವಕೀಲರಿಗೆ ಸೂಚಿಸಿದ ನ್ಯಾಯಾಲಯ, ವಿಚಾರಣೆಯನ್ನು ಮುಂದೂಡಿದೆ.
Read Full Story

08:04 AM (IST) Apr 23

'ಮಗ ವಾಪಸ್ ಬರದಿದ್ರೂ ಉಗ್ರರ ಮೇಲೆ ಪ್ರಧಾನಿ ಮೋದಿ ತೆಗೆದುಕೊಂಡ ಆ ಪ್ರತಿಕಾರ ಸಮಾಧಾನ ತಂದಿದೆ, ಮೃತ ಮಂಜುನಾಥ ತಾಯಿಯ ಮನಕಲುಕುವ ಮಾತು

ಪಹಲ್ಗಾಂನಲ್ಲಿ ಮೃತಪಟ್ಟ ಮಂಜುನಾಥ್ ರಾವ್ ಅವರ ತಾಯಿ ಸುಮತಿ, ಮಗನ ಸಾವಿನ ದುಃಖದ ನಡುವೆಯೂ ಭಯೋತ್ಪಾದಕರ ವಿರುದ್ಧ ಪ್ರಧಾನಿ ಮೋದಿ ಪ್ರತೀಕಾರ ತೀರಿಸಿದ್ದು ಅಲ್ಪ ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.

Read Full Story

07:46 AM (IST) Apr 23

ವಾಣಿಜ್ಯ ತೆರಿಗೆ ಇಲಾಖೆಗೆ 410 ಕೋಟಿ ಜಿಎಸ್‌ಟಿ ವಂಚನೆ; ಬೆಂಗಳೂರಿನಲ್ಲಿ ಓರ್ವನ ಬಂಧನ

ವಾಣಿಜ್ಯ ತೆರಿಗೆ ಇಲಾಖೆಯು ಬೆಂಗಳೂರಿನಲ್ಲಿ 410 ಕೋಟಿ ರೂಪಾಯಿಗಳ ಬೃಹತ್ ಜಿಎಸ್‌ಟಿ ವಂಚನೆ ಜಾಲವನ್ನು ಪತ್ತೆಹಚ್ಚಿದೆ. ಈ ಸಂಬಂಧ, ನಕಲಿ ಕಂಪನಿಗಳನ್ನು ಸೃಷ್ಟಿಸಿ ಸುಳ್ಳು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ನೀಡುತ್ತಿದ್ದ ಆರೋಪದ ಮೇಲೆ ಮೊಹಮ್ಮದ್ ತೌಕೀರ್ ಎಂಬಾತನನ್ನು ಬಂಧಿಸಲಾಗಿದೆ. 

Read Full Story

07:39 AM (IST) Apr 23

₹23 ಕೋಟಿ ಬೆಲೆಬಾಳುವ ಜಾಗಕ್ಕೆ ₹17 ಲಕ್ಷ ಪಾವತಿ ಆರೋಪ, ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಜಾಗ ನೀಡಿದ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ತುಮಕೂರು ನಗರದ ಹೊರವಲಯದಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನಿಯಮಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 

Read Full Story

07:29 AM (IST) Apr 23

ಮತ್ತೆ ಗಂಟೆಗಟ್ಟಲೇ ಸುತ್ತಾಡಿದ ಫ್ಲೈ-91; ಇದೇ ಅವಧಿ ಲ್ಯಾಂಡ್‌-ಟೇಕಾಫ್‌ ಆದ ಇಂಡಿಗೋ ಪ್ಲೇನ್

ಮಂಗಳವಾರ ರಾತ್ರಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಫ್ಲೈ-91 ವಿಮಾನವು ಹವಾಮಾನ ವೈಪರೀತ್ಯದ ಕಾರಣ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಆಗಸದಲ್ಲೇ ಸುತ್ತಾಡಿದೆ. ಐದು ದಿನಗಳಲ್ಲಿ ಇದು ಎರಡನೇ ಬಾರಿಯಾಗಿದ್ದು, ಇದೇ ಸಮಯದಲ್ಲಿ ಇಂಡಿಗೋ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

Read Full Story

07:22 AM (IST) Apr 23

ಅಮೆರಿಕದೊಂದಿಗೆ ಭಾರತ ವ್ಯಾಪಾರ ಒಪ್ಪಂದ, ಮೋದಿ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ - ಸಲೀಂ

ಬೆಂಗಳೂರಿನಲ್ಲಿ ನಡೆದ 'ಕಿಸಾನ್ ನ್ಯಾಯ ಸತ್ಯಾಗ್ರಹ'ದಲ್ಲಿ, ವಿಧಾನಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹ್ಮದ್ ಅವರು ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ತೀವ್ರವಾಗಿ ವಿರೋಧಿಸಿದರು. ಪ್ರಧಾನಿ ಮೋದಿ ಅವರು ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತೀಯ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.

Read Full Story

07:08 AM (IST) Apr 23

Kalaburagi - ಮಗ ಬಂಗಾರ ಪದಕ ಪಡೆಯುವುದನ್ನುನೋಡಬೇಕಿದ್ದ ತಂದೆ ಅಪಘಾತಕ್ಕೆ ಬಲಿ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಸ್ವೀಕರಿಸಬೇಕಿದ್ದ ವಿದ್ಯಾರ್ಥಿಯ ತಂದೆ, ಸಮಾರಂಭಕ್ಕೆ ಬರುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದಿಂದ ಮಗನ ಸಂಭ್ರಮ ಕಣ್ತುಂಬಿಕೊಳ್ಳಲು ಬಂದಿದ್ದ ತಂದೆಯ ದುರಂತ ಸಾವು, ಪದಕ ವಿಜೇತ ವಿದ್ಯಾರ್ಥಿಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
Read Full Story

More Trending News