Published : Apr 21, 2025, 07:01 AM ISTUpdated : Apr 21, 2025, 10:41 PM IST

Karnataka News Live: ನಾಳೆ ಚಿನ್ನಕ್ಕೆ ಮಹಾ ದಿನ, 1 ಲಕ್ಷದ ಗಡಿ ದಾಟಲಿದೆ 10 ಗ್ರಾಂ ಬಂಗಾರ!

ಸಾರಾಂಶ

ಬೆಂಗಳೂರು: ಜಾತಿಜನಗಣತಿಯ ಮೂಲ ವರದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಪಾದಿಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಬರೆದ ಪತ್ರದ ಪ್ರಕಾರ ಜಾತಿ ಗಣತಿ ವರದಿಯ ಮೂಲ ಪ್ರತಿ ಲಭ್ಯವಾಗಿಲ್ಲ. ಈಗಿರುವುದು ನಕಲಿ ವರದಿ ಎಂದು ಹೇಳಿದರು. ತುಮಕೂರಿನಲ್ಲಿ  ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಬಾವಿಯಲ್ಲಿರುವ ಕಸದಂತೆ ಆಗಿದೆ ಎಂದಿದ್ದಾರೆ.  ಧರ್ಮಾಚರಣೆಗೆ ಯಾರೂ ಅಡ್ಡಿಪಡಿಸುವಂತಿಲ್ಲ. ಹಿರಿಯರು ಮಾಡಿರುವ ಆಚರಣೆಗಳಿಗೆ ಅಡ್ಡಿ ಮಾಡಿದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಸರ್ಕಾರ ಬದ್ಧವಿದೆ. ಆಚರಣೆಗಳನ್ನು ಅನುಸರಿಸಲು ಕಾಂಗ್ರೆಸ್ ಸರ್ಕಾರ ಎಲ್ಲರಿಗೂ ಮುಕ್ತ ಅವಕಾಶ ನೀಡುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ. ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಏ.16 ಮತ್ತು 17ರಂದು ನಡೆದ ಸಿಇಟಿ ಪರೀಕ್ಷೆ ವೇಳೆ ಬೀದರ್ ಹಾಗೂ ಶಿವಮೊಗ್ಗದಲ್ಲಿ ನಡೆದ ರೀತಿಯಲ್ಲಿಯೇ ಧಾರವಾಡದಲ್ಲೂ ವಿದ್ಯಾರ್ಥಿಯೊಬ್ಬನ ಜನಿವಾರ ಕತ್ತರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಇಂದು ನಡೆಯುವ ರಾಜಕೀಯ ಮತ್ತು ರಾಜಕೀಯೇತರ ಸುದ್ದಿಗಳ ಕುರಿತ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ. 

Karnataka News Live: ನಾಳೆ ಚಿನ್ನಕ್ಕೆ ಮಹಾ ದಿನ, 1 ಲಕ್ಷದ ಗಡಿ ದಾಟಲಿದೆ 10 ಗ್ರಾಂ ಬಂಗಾರ!

10:41 PM (IST) Apr 21

ನಾಳೆ ಚಿನ್ನಕ್ಕೆ ಮಹಾ ದಿನ, 1 ಲಕ್ಷದ ಗಡಿ ದಾಟಲಿದೆ 10 ಗ್ರಾಂ ಬಂಗಾರ!

ದುರ್ಬಲ ಡಾಲರ್ ಮೌಲ್ಯ ಮತ್ತು ವ್ಯಾಪಾರ ಯುದ್ಧದ ಬೇಡಿಕೆಯ ಅನಿಶ್ಚಿತತೆಯಿಂದಾಗಿ ಚಿನ್ನದ ಬೆಲೆ 1,650 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 99,800 ರೂ. ತಲುಪಿದ್ದು, ಮಂಗಳವಾರ 1 ಲಕ್ಷ ರೂ. ತಲುಪುವ ನಿರೀಕ್ಷೆಯಿದೆ. ಬೆಳ್ಳಿ ಬೆಲೆಯೂ ಕೆಜಿಗೆ 500 ರೂ. ಏರಿಕೆಯಾಗಿ 98,500 ರೂ.ಗೆ ತಲುಪಿದೆ.

ಪೂರ್ತಿ ಓದಿ

10:11 PM (IST) Apr 21

ಕೆನಡಾ ಹಿಂದೂ ದೇಗುಲದಲ್ಲಿ ಖಲಿಸ್ತಾನಿಗಳಿಂದ ಭಾರತ ವಿರೋಧಿ ಗೀಚುಬರಹ!

ಕೆನಡಾದ ವ್ಯಾಂಕೋವರ್‌ನಲ್ಲಿರುವ ಗುರುದ್ವಾರವನ್ನು ಭಾರತ ಮತ್ತು ಮೋದಿ ವಿರೋಧಿ ಗೀಚುಬರಹಗಳಿಂದ ವಿರೂಪಗೊಳಿಸಲಾಗಿದೆ. ಖಲಿಸ್ತಾನಿ ಪರ ಸಿಖ್ ಪ್ರತ್ಯೇಕತಾವಾದಿಗಳ ಗುಂಪಿನ ಕೈವಾಡ ಇದರ ಹಿಂದಿದೆ ಎಂದು ಖಾಲ್ಸಾ ದಿವಾನ್ ಸೊಸೈಟಿ ಆರೋಪಿಸಿದೆ.

ಪೂರ್ತಿ ಓದಿ

09:43 PM (IST) Apr 21

ಕಾಯಿಲೆ ಹೆಸರಲ್ಲಿ ಓಂಪ್ರಕಾಶ್ ಕೊಂದ ಪತ್ನಿ ಬಚಾವ್ ಆಗ್ತಾರಾ, ಏನಿದು ಸ್ಕಿಜೋಫ್ರೇನಿಯಾ?

ನಿವೃತ್ತ ಡಿಜಿಪಿ ಓಂಪ್ರಕಾಶ್‌ ರವರನ್ನು ಪತ್ನಿ ಮತ್ತು ಮಗಳು ಹತ್ಯೆ ಮಾಡಿದ್ದು, ಆಸ್ತಿ ವಿವಾದ ಮತ್ತು ಮಾನಸಿಕ ಕಾಯಿಲೆ ಕಾರಣ ಎಂದು ಶಂಕಿಸಲಾಗಿದೆ. ಪತ್ನಿ ಮತ್ತು ಮಗಳು ಸ್ಕಿಜೋಫ್ರೇನಿಯಾ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಪೂರ್ತಿ ಓದಿ

09:05 PM (IST) Apr 21

ಜೆಡಿ ವಾನ್ಸ್‌ ಮಕ್ಕಳಿಗೆ ನವಿಲುಗರಿ ಗಿಫ್ಟ್‌ ನೀಡಿದ ಪ್ರಧಾನಿ ಮೋದಿ!

ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾರತಕ್ಕೆ ನಾಲ್ಕು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ. ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ವ್ಯಾಪಾರ, ಸುಂಕ ವಿವಾದ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದರು. ಅಕ್ಷರಧಾಮ ದೇವಸ್ಥಾನಕ್ಕೂ ಭೇಟಿ ನೀಡಿದರು.

ಪೂರ್ತಿ ಓದಿ

09:03 PM (IST) Apr 21

ಚೀನಾ ಮ್ಯಾರಥಾನ್‌ನಲ್ಲಿ ರೋಬೋಟ್‌ಗಳ ಓಟ, ಬಾಲವಿಲ್ಲದ ಜೆಟ್‌!

ಬೀಜಿಂಗ್‌ನಲ್ಲಿ ನಡೆದ ಹಾಫ್‌ ಮ್ಯಾರಥಾನ್‌ನಲ್ಲಿ ರೋಬೋಟ್‌ಗಳು ಸ್ಪರ್ಧಿಸಿದವು. ಚೀನಾದಲ್ಲಿ 10G ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್‌ ಅನ್ನು ಪರಿಚಯಿಸಲಾಗಿದೆ. ಚೀನಾ ಬಾಲವಿಲ್ಲದ ಜೆಟ್‌ ವಿಮಾನವನ್ನು ಅಭಿವೃದ್ಧಿಪಡಿಸಿದೆ.

ಪೂರ್ತಿ ಓದಿ

08:15 PM (IST) Apr 21

ಮುಸ್ಲಿಂ ಆಯುಕ್ತ ಎಂದ ಬಿಜೆಪಿ ಸಂಸದ ದುಬೆಗೆ ಖುರೇಶಿ ತಿರುಗೇಟು!

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೇಶಿ ಅವರನ್ನು 'ಮುಸ್ಲಿಂ ಆಯುಕ್ತ' ಎಂದು ಕರೆದಿದ್ದಾರೆ. ಖುರೇಶಿ ಅವರು ತಮ್ಮ ಕಾರ್ಯವಧಿಯಲ್ಲಿ ಬಾಂಗ್ಲಾದೇಶಿ ನುಸುಳುಕೋರರಿಗೆ ವೋಟರ್ ಐಡಿಗಳನ್ನು ನೀಡಿದ್ದಾರೆ ಎಂದು ದುಬೆ ಆರೋಪಿಸಿದ್ದಾರೆ. ಖುರೇಶಿ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಪೂರ್ತಿ ಓದಿ

08:06 PM (IST) Apr 21

ನಡುರಸ್ತೆಯಲ್ಲೇ ಬೈಕ್‌ ಸವಾರನ ಮೇಲೆ ವಿಂಗ್‌ ಕಮಾಂಡರ್‌ ದೌರ್ಜನ್ಯ, ಭಾಷಾ ತಾರತಮ್ಯದ ಕಥೆ ಕಟ್ಟಿದ ಹೆಂಡ್ತಿ!

ಬೆಂಗಳೂರಿನಲ್ಲಿ ಡಿಆರ್‌ಡಿಓ ವಿಂಗ್ ಕಮಾಂಡರ್ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಸಿಸಿಟಿವಿ ದೃಶ್ಯಾವಳಿಗಳು ವಿಂಗ್ ಕಮಾಂಡರ್ ಮೊದಲು ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿರುವುದನ್ನು ಬಹಿರಂಗಪಡಿಸಿವೆ, ಆರಂಭಿಕ ವರದಿಗಳಿಗೆ ವಿರುದ್ಧವಾಗಿದೆ.

ಪೂರ್ತಿ ಓದಿ

07:28 PM (IST) Apr 21

ಬೆಂಗಳೂರಿನ ಬಳಿ 3273 ಕೋಟಿ ರೂಪಾಯಿ ವೆಚ್ಚದ ಐಟಿ ಪಾರ್ಕ್‌ ನಿರ್ಮಿಸಲಿರುವ ಟಾಟಾ ರಿಯಾಲ್ಟಿ!

ಬೆಂಗಳೂರು ಬಳಿ 3,273 ಕೋಟಿ ರೂ.ಗಳ ಐಟಿ ಮತ್ತು ಐಟಿಇಎಸ್ ಬ್ಯುಸಿನೆಸ್‌ ಪಾರ್ಕ್‌ ಸ್ಥಾಪಿಸಲು ಟಾಟಾ ರಿಯಾಲ್ಟಿ ಮತ್ತು ಇನ್‌ಫ್ರಾಸ್ಟ್ರಕ್ಚರ್ ಯೋಜನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ಈ ಉದ್ಯಾನವನವು ವೈಟ್‌ಫೀಲ್ಡ್‌ನಲ್ಲಿ ಸ್ಥಾಪಿತವಾಗಲಿದ್ದು, ಸುಮಾರು 5,500 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

ಪೂರ್ತಿ ಓದಿ

07:03 PM (IST) Apr 21

ಸಿ ಸೆಕ್ಷನ್ ನಂತರ ಬೆನ್ನು ಸೊಂಟ ನೋವಿನಿಂದ ಬಳಲುತ್ತಿದ್ದೀರಾ? ಇಲ್ಲಿದೆ ಪರಿಹಾರ

ಸಿ-ಸೆಕ್ಷನ್ ನಂತರ ದೇಹವು ಚೇತರಿಸಿಕೊಳ್ಳಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಬೆನ್ನುನೋವು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಹಲವು ವಾರಗಳಿಂದ ಹಲವು ತಿಂಗಳುಗಳವರೆಗೆ ಇರುತ್ತದೆ. ಬೆನ್ನು ನೋವು ಕಡಿಮೆ ಮಾಡಲು ಏನು ಮಾಡಬೇಕೆಂಬ ಬಗ್ಗೆ ಇಲ್ಲಿ ಮಾಹಿತಿ ಇದೆ.

ಪೂರ್ತಿ ಓದಿ

06:23 PM (IST) Apr 21

ಈಕೆ ವಿಶ್ವದ ಅತೀ ಶ್ರೀಮಂತ ಟಿವಿ ನಿರೂಪಕಿ: ಹಾಲಿವುಡ್ ಟಾಪ್‌ ನಟರು ಈಕೆಯ ಶ್ರೀಮಂತಿಕೆ ಮುಂದೆ ಫ್ಲಾಪು

ಕೆಲವರು ಅಪ್ಪ ಅಜ್ಜ ಮಾಡಿದ ಆಸ್ತಿಯಿಂದಾಗಿ ಶ್ರೀಮಂತಿಕೆ ಹುಟ್ಟಿನಿಂದಲೇ ಬಂದಿದ್ದರೆ ಮತ್ತೆ ಕೆಲವರು ಸ್ವತಃ ದುಡಿದು ಕೋಟ್ಯಾಧಿಪತಿಗಳು, ಬಿಲಿಯನೇರ್‌ಗಳು ಆದವರು. ಅಂತಹ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಜಗತ್ತಿನ ಅತೀ ಶ್ರೀಮಂತ ಟಿವಿ ಶೋ ನಿರೂಪಕಿ

ಪೂರ್ತಿ ಓದಿ

05:58 PM (IST) Apr 21

ರಿಕ್ಕಿ ರೈ ಪ್ರಕರಣ: ವಿದೇಶದಿಂದಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ ಅನುರಾಧಾ!

ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ರಿಕ್ಕಿ ರೈ ಅವರ ಕಾರು ಚಾಲಕ ಜಿ. ಬಸವರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪೂರ್ತಿ ಓದಿ

05:42 PM (IST) Apr 21

ಎಲೋನ್‌ ಮಸ್ಕ್‌ ತಾಯಿ ಜೊತೆ ಸಿದ್ದಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಜಾಕ್ವೆಲಿನ್‌ ಫೆರ್ನಾಂಡಿಜ್‌!

ಎಲೋನ್ ಮಸ್ಕ್ ಅವರು ತಮ್ಮ ತಾಯಿ ಮಾಯ್ ಮಸ್ಕ್ ಅವರ ಹುಟ್ಟುಹಬ್ಬದಂದು ಮುಂಬೈನಲ್ಲಿ ಅಚ್ಚರಿಯ ಉಡುಗೊರೆಯನ್ನು ನೀಡಿದ್ದಾರೆ. ಮಾಯ್ ಮಸ್ಕ್ ಅವರು ಜಾಕ್ವೆಲಿನ್ ಫೆರ್ನಾಂಡೆಜ್ ಅವರೊಂದಿಗೆ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು.

ಪೂರ್ತಿ ಓದಿ

05:21 PM (IST) Apr 21

ಮಹಿಳೆಯ ರಿವರ್‌ ರಾಫ್ಟಿಂಗ್ ವೀಡಿಯೋ ಕೂಡಲೇ ಡಿಲೀಟ್ ಮಾಡಿ: ಫೇಸ್‌ಬುಕ್ ಗೂಗಲ್‌ ಎಕ್ಸ್‌ಗೆ ಹೈಕೋರ್ಟ್ ಆದೇಶ

ಋಷಿಕೇಶದಲ್ಲಿ ರಾಫ್ಟಿಂಗ್ ಮಾಡುವಾಗ ಚಿತ್ರೀಕರಿಸಿದ ವೀಡಿಯೊವನ್ನು ಬೋಧಕರು ಮತ್ತು ಟ್ರಾವೆಲ್ ಏಜೆನ್ಸಿಯು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು,ಇದರಿಂದ  ಮಹಿಳೆಗೆ ಕಿರುಕುಳ ಶುರುವಾಗಿದೆ. 

ಪೂರ್ತಿ ಓದಿ

05:14 PM (IST) Apr 21

ಬ್ಯಾಗ್​ನಲ್ಲಿ ಹೃದಯ ಹೊತ್ತು ಸಾಗುವ ಮಹಿಳೆ! ಹಾರ್ಟೇ ಇಲ್ಲದ ಈಕೆ ವಿಚಿತ್ರ ಸ್ಟೋರಿ ಕೇಳಿ..

ಲಂಡನ್​ನ ಈ ಮಹಿಳೆಗೆ ಹೃದಯವೇ ಇಲ್ಲ. ಬ್ಯಾಗ್​ನಲ್ಲಿ ಇರುವ ಕೃತಕ ಹೃದಯದಿಂದಲೇ ಈಕೆ ಕಾರ್ಯ ನಿರ್ವಹಿಸುತ್ತಾಳೆ. ಅಬ್ಬಬ್ಬಾ ಎನ್ನುವ ಸ್ಟೋರಿ ಕೇಳಿ... 
 

ಪೂರ್ತಿ ಓದಿ

04:36 PM (IST) Apr 21

ಒಂದು ಸಿನಿಮಾಗೆ 200 ಕೋಟಿ: ದಕ್ಷಿಣ ಭಾರತದ ಇವರು ದೇಶದ ಅತೀ ದುಬಾರಿ ನಿರ್ದೇಶಕ

ನಿರ್ದೇಶಕರ ಸಂಭಾವನೆಯ ಬಗ್ಗೆ ಚರ್ಚೆಯಾಗುವುದು ಬಹಳ ಕಡಿಮೆ ಆದರೆ ಈಗ ನಾವು ಭಾರತದ ಅತೀಹೆಚ್ಚು ಸಂಭಾವನೆ ಪಡೆಯುವ ನಿರ್ದೇಶನ ಬಗ್ಗೆ ಹೇಳ ಹೊರಟಿದ್ದೇವೆ. ಈ ನಿರ್ದೇಶಕ ತಾವು ನಿರ್ದೇಶಿಸುವ ಪ್ರತಿ ಸಿನಿಮಾಗೆ ಸುಮಾರು 200 ಕೋಟಿ ಚಾರ್ಜ್ ಮಾಡುತ್ತಾರೆ.

ಪೂರ್ತಿ ಓದಿ

04:35 PM (IST) Apr 21

ಬೆಂಗಳೂರಿನಲ್ಲಿ ಲಾ & ಆರ್ಡರ್‌ಗೆ ಕ್ಯಾರೇ ಇಲ್ಲ, ನಡು ರಸ್ತೆಯಲ್ಲೇ ವಿಂಗ್‌ ಕಮಾಂಡರ್‌ ಮೇಲೆ ಬೈಕ್‌ ಸವಾರನ ಹಲ್ಲೆ!

ಬೆಂಗಳೂರಿನಲ್ಲಿ ವಾಯುಪಡೆಯ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್‌ ಅವರ ಮೇಲೆ ಬೈಕ್ ಸವಾರನೊಬ್ಬ ಹಲ್ಲೆ ನಡೆಸಿದ್ದಾನೆ. ಏರ್ಪೋರ್ಟ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಕಾರ್ ಡೋರ್ ಬೈಕ್‌ಗೆ ತಾಕಿದ್ದೇ ಗಲಾಟೆಗೆ ಕಾರಣ ಎನ್ನಲಾಗಿದೆ.

ಪೂರ್ತಿ ಓದಿ

04:04 PM (IST) Apr 21

ಇನ್ಸುಲಿನ್​, ಮಾತ್ರೆ ಇಲ್ಲದೇ ಮಧುಮೇಹದಿಂದ ಮುಕ್ತಿ ಪಡೆದ ಸಚಿವ ಅಮಿತ್​ ಶಾ ಮಾತು ಕೇಳಿ

 ಇನ್ಸುಲಿನ್​, ಮಾತ್ರೆ ಇಲ್ಲದೇ ಮಧುಮೇಹದಿಂದ ಮುಕ್ತಿ ಪಡೆದಿರುವುದೂ ಅಲ್ಲದೇ, 20 ಕೆ.ಜಿ. ತೂಕ ಇಳಿಸಿಕೊಂಡಿರುವ ಬಗ್ಗೆ ಕೇಂದ್ರ ಗೃಹ  ಸಚಿವ ಅಮಿತ್​ ಶಾ ಮಾತನಾಡಿದ್ದಾರೆ ಕೇಳಿ.
 

ಪೂರ್ತಿ ಓದಿ

03:59 PM (IST) Apr 21

ಕನ್ನಡ ರಾಜ್ಯ ರಮಾರಮಣ ಶ್ರೀಕೃಷ್ಣದೇವರಾಯನ ಸಮಾಧಿಯ ಮೇಲೆ ಮಾಂಸ ಕತ್ತರಿಸಿದ ಸ್ಥಳೀಯರು!

ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀಕೃಷ್ಣದೇವರಾಯರ ಸಮಾಧಿಯ ಮೇಲೆ ಮಾಂಸ ಕಟ್‌ ಮಾಡಿ ಅಪಚಾರ ಎಸಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ನಡೆದಿದೆ. ಈ ಬಗ್ಗೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಟ್ವೀಟ್‌ ಮಾಡಿ ಘಟನೆಯನ್ನು ಖಂಡಿಸಿದ್ದಾರೆ.

ಪೂರ್ತಿ ಓದಿ

03:28 PM (IST) Apr 21

ಪೋಪ್ ಫ್ರಾನ್ಸಿಸ್ ನಿಧನ: ಕ್ರೈಸ್ತರ ಮುಂದಿನ ಪರಮೋಚ್ಛ ಗುರುವಿನ ನೇಮಕ ಹೇಗಿರುತ್ತದೆ?

12 ವರ್ಷಗಳ ಕಾಲ ರೋಮನ್ ಕ್ಯಾಥೋಲಿಕ್ ಚರ್ಚ್ ಮುನ್ನಡೆಸಿದ್ದ ಪೋಪ್ ಫ್ರಾನ್ಸಿಸ್ ನಿಧನರಾಗಿದ್ದಾರೆ. ಕಾರ್ಡಿನಲ್‌ಗಳ ಸಮಾವೇಶವು ಹೊಸ ಪೋಪ್ ಆಯ್ಕೆಗೆ ಶತಮಾನಗಳಷ್ಟು ಹಳೆಯ ಸಂಪ್ರದಾಯ ಮತ್ತು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸುತ್ತದೆ.

ಪೂರ್ತಿ ಓದಿ

02:28 PM (IST) Apr 21

ಆಟೋ ಚಾಲಕನಿಗೆ ಹಿಂದಿ ಮಾತನಾಡುವಂತೆ ಧಮ್ಕಿ ಹಾಕಿದ ಉತ್ತರ ಭಾರತೀಯನಿಂದ ಕನ್ನಡದಲ್ಲಿ ಕ್ಷಮೆ

ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಹಿಂದಿ ಮಾತನಾಡುವಂತೆ ಧಮ್ಕಿ ಹಾಕಿದ್ದ ಉತ್ತರ ಭಾರತ ಮೂಲದ ವ್ಯಕ್ತಿ ವೀಡಿಯೋ ವೈರಲ್ ಆದ ನಂತರ ಕ್ಷಮೆ ಕೇಳಿದ್ದಾನೆ. ಈತ ಬೆಂಗಳೂರಿನಲ್ಲಿ 9 ವರ್ಷಗಳಿಂದ ವಾಸವಾಗಿದ್ದು, ನಗರದ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾನೆ.

ಪೂರ್ತಿ ಓದಿ

01:54 PM (IST) Apr 21

ಮಾಜಿ ಐಜಿಪಿ ಹತ್ಯೆ: ಕೊಲೆ ಬಳಿಕ ಬಾರ್‌ ನಲ್ಲಿ ಕುಡಿತಾ ಕುಳಿತಿದ್ದ ಮಗಳು!

ಮಾಜಿ ಡಿಜಿ ಐಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣದಲ್ಲಿ ಪುತ್ರಿ ಕೃತಿ ತಲೆನೋವಾಗಿದ್ದಾಳೆ. ಮದ್ಯಪಾನ ಮಾಡುತ್ತಿದ್ದ ಕೃತಿಯನ್ನು ಪೊಲೀಸರು ಬಂಧಿಸಿದ್ದು, ಮೆಡಿಕಲ್ ಚೆಕ್ ಅಪ್ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾಳೆ. ತಾಯಿ ಪಲ್ಲವಿ ಮಗಳನ್ನು ಪಾರು ಮಾಡಲು ಯತ್ನಿಸುತ್ತಿದ್ದಾರೆ.

ಪೂರ್ತಿ ಓದಿ

01:42 PM (IST) Apr 21

ಕ್ರೈಸ್ತ ಧರ್ಮದ ಪರೋಚ್ಛ ನಾಯಕ ಪೋಪ್ ಫ್ರಾನ್ಸಿಸ್‌ ನಿಧನ

88 ವರ್ಷದ ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ಸೋಮವಾರ ವ್ಯಾಟಿಕನ್‌ನಲ್ಲಿ ನಿಧನರಾಗಿದ್ದಾರೆ. ವ್ಯಾಟಿಕನ್ ನ್ಯೂಸ್ ಈ ಸುದ್ದಿಯನ್ನು ಖಚಿತಪಡಿಸಿದೆ.

ಪೂರ್ತಿ ಓದಿ

01:27 PM (IST) Apr 21

'ಮಿಸ್ಟರ್ ಜಮೀರ್ ರಾಜ್ಯ ನಿಮ್ಮಪ್ಪನ ಮನೆ ಆಸ್ತಿಯೇನು?' ಜನಾಕ್ರೋಶ ಯಾತ್ರೆಯಲ್ಲಿ ರೇಣುಕಾಚಾರ್ಯ ಆಕ್ರೋಶ!

ದಾವಣಗೆರೆಯ ಜನಾಕ್ರೋಶ ಯಾತ್ರೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 'ಪಂಚ ಭರವಸೆ'ಗಳನ್ನು ಸುಳ್ಳಿನ ಕಂತೆ ಎಂದು ಕರೆದರು, ಜೊತೆಗೆ ರಾಹುಲ್ ಗಾಂಧಿ ಮತ್ತು ಜಮೀರ್ ಅಹ್ಮದ್ ಖಾನ್ ವಿರುದ್ಧವೂ ಕಿಡಿಕಾರಿದರು.

ಪೂರ್ತಿ ಓದಿ

01:08 PM (IST) Apr 21

ಮಾಜಿ ಡಿಜಿಪಿ ಭೀಕರ ಹತ್ಯೆ, ಮಗಳನ್ನು ಬಚಾವ್ ಮಾಡೋಕೆ ತಾಯಿ ಮಹಾ ಫ್ಲ್ಯಾನ್!

36 ವರ್ಷಗಳ ಕಾಲ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌ (68) ಅವರನ್ನು ಪತ್ನಿ ಮತ್ತು ಪುತ್ರಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಆಸ್ತಿ ವಿಚಾರ ಸಂಬಂಧ ಕೊಲೆ ನಡೆದಿದೆ ಎಂದು ಶಂಕಿಸಲಾಗಿದ್ದು, ಪತ್ನಿಗೆ ಮಾನಸಿಕ ಕಾಯಿಲೆ ಇದೆ ಎನ್ನಲಾಗಿದೆ.

ಪೂರ್ತಿ ಓದಿ

01:00 PM (IST) Apr 21

ಜಾತಿಗಣತಿ ಸಭೇಲಿ ಗಲಾಟೆ ಮಾಡಿದ್ದು ಸಚಿವರಲ್ಲ, ಮೈಕ್‌ಸೆಟ್‌!

ವರದಿಗಾರರು ಸಚಿವ ಎಚ್‌.ಕೆ. ಪಾಟೀಲ್ ಅವರ ಬಳಿ, ಏನ್‌ ಸಾರ್‌ ಅಷ್ಟು ಶಾಂತಿಯುತವಾಗಿ ಸಭೆ ನಡೆದಿದೆ ಅಂತೀದ್ದೀರಿ. ಆದರೆ ಸಚಿವರು ಜೋರಾಗಿ ಕಿರುಚಾಡಿದ ಶಬ್ದ ಬಂದಂತೆ ಇತ್ತಲ್ಲ ಎಂದರೆ..., ‘ಹೌದಾ..? ಸಚಿವರು ಮಾಮೂಲಾಗಿಯೇ ಮಾತಾಡ್ತಿದ್ದರು. ಮೈಕ್‌ಗಳು ಒಳ್ಳೆಯವಿದ್ದವು. ಹೀಗಾಗಿ ಸೌಂಡ್‌ ಜಾಸ್ತಿ ಬಂದಿದೆಯಷ್ಟೇ’ ಎಂದು ಬಿಡುವುದೇ!

ಪೂರ್ತಿ ಓದಿ

12:50 PM (IST) Apr 21

BCCI ನೂತನ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪ್ರಕಟ; ಈ ಕ್ರಿಕೆಟಿಗರಿಗೆ ಜಾಕ್‌ಪಾಟ್!

2024-25ನೇ ಸಾಲಿನ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪ್ರಕಟವಾಗಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ 'ಎ+' ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಶುಭ್‌ಮನ್ ಗಿಲ್, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ ಮತ್ತು ರಿಷಭ್ ಪಂತ್ 'ಎ' ಗ್ರೇಡ್‌ನಲ್ಲಿದ್ದಾರೆ.

ಪೂರ್ತಿ ಓದಿ

12:45 PM (IST) Apr 21

ಆಸ್ಪತ್ರೆಯೇ ಇಲ್ಲದ ದೇಶವಿದ್ದು, ಇಲ್ಲಿ 96 ವರ್ಷಗಳಲ್ಲಿ ಒಬ್ಬರೂ ಜನಿಸಿಲ್ಲ...

ಇದು ಒಂದೇ ಒಂದು ಆಸ್ಪತ್ರೆಯೂ ಇಲ್ಲದ ಜಗತ್ತಿನ ದೇಶ, ಇಲ್ಲಿ ಕಳೆದ 96 ವರ್ಷಗಳಿಂದ ಒಂದೇ ಒಂದು ಮಗು ಜನಿಸಿಲ್ಲ, ಅಚ್ಚರಿ ಎನಿಸುತ್ತೆ ಅಲ್ವಾ, ಆಸ್ಪತ್ರೆಯೇ ಇಲ್ಲದೇ ಹೋದರೆ ಜನ ಹುಷಾರು ತಪ್ಪಿದರೆ ಏನ್ ಮಾಡ್ತಾರೆ ಎಂಬ ಕುತೂಹಲವೂ ನಿಮ್ಮನ್ನು ಕಾಡಬಹುದು. ಆದರೂ ಈ ದೇಶದಲ್ಲಿ ಆಸ್ಪತ್ರೆಯೇ ಇಲ್ಲ ಎಂಬುದು ಅಷ್ಟೇ ಸತ್ಯ. ಹಾಗಿದ್ದರೆ ಆ ದೇಶ ಯಾವುದು ಅಂತ ಈಗ ನೋಡೋಣ.

ಪೂರ್ತಿ ಓದಿ

12:29 PM (IST) Apr 21

ಸಿದ್ದರಾಮಯ್ಯ ಬಗ್ಗೆ ಸತ್ಯ ಹೇಳಿದರೆ ಹೊಗಳಿಕೆ ಹೇಗಾಗುತ್ತೆ?: ಗೃಹ ಸಚಿವ ಪರಮೇಶ್ವರ್ ಸಮರ್ಥನೆ

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಸಿದ್ದರಾಮಯ್ಯ ಅವರನ್ನು ಶ್ರೇಷ್ಠ ಆರ್ಥಿಕ ತಜ್ಞ ಎಂದು ಹೊಗಳಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಸತ್ಯ ಹೇಳಿದರೆ ಹೊಗಳಿಕೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರು 16 ಬಜೆಟ್ ಮಂಡಿಸಿರುವುದು ಮತ್ತು ಅವರ ಆರ್ಥಿಕ ಪರಿಣತಿಯನ್ನು ಉಲ್ಲೇಖಿಸಿದ್ದಾರೆ.

ಪೂರ್ತಿ ಓದಿ

12:05 PM (IST) Apr 21

ಭಾರತಕ್ಕೆ ಆಗಮಿಸಿದ ಅಮೆರಿಕಾ ಉಪಾಧ್ಯಕ್ಷ: ಭಾರತೀಯ ಧಿರಿಸಿನಲ್ಲಿ ಕಂಗೊಳಿಸಿದ ಜೆಡಿ ವ್ಯಾನ್ಸ್‌ ಮಕ್ಕಳು

ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಅವರು ತಮ್ಮ ಪತ್ನಿ ಉಷಾ ವ್ಯಾನ್ಸ್ ಮತ್ತು ಮೂವರು ಮಕ್ಕಳೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ.

ಪೂರ್ತಿ ಓದಿ

12:02 PM (IST) Apr 21

ಮುಸ್ಲಿಂ ಮಹಿಳೆಯರು ಪರಪುರುಷರಿಂದ ಮೆಹಂದಿ ಹಚ್ಚಿಕೊಳ್ಳುವುದು ಹರಾಮ್, : ಯುಪಿ ಮೌಲಾನಾ ವಿವಾದಾತ್ಮಕ ಹೇಳಿಕೆ ವೈರಲ್!

ದೇವಬಂದ್‌ನ ಹಿರಿಯ ಧರ್ಮಗುರು ಮೌಲಾನಾ ಖಾರಿ ಇಶಾಕ್ ಗೋರಾ, ಮುಸ್ಲಿಂ ಮಹಿಳೆಯರು ಮಹ್ರಮ್ ಅಲ್ಲದ ಪುರುಷರಿಂದ ಮೆಹಂದಿ ಹಚ್ಚಿಸಿಕೊಳ್ಳುವುದು ಶರಿಯಾ ವಿರುದ್ಧ ಎಂದು ಹೇಳಿದ್ದಾರೆ. ದಾರುಲ್ ಉಲೂಮ್ ದೇವಬಂದ್‌ನ ಫತ್ವಾವನ್ನು ಉಲ್ಲೇಖಿಸಿ, ಈ ಪದ್ಧತಿಯನ್ನು ನಿಲ್ಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ಪೂರ್ತಿ ಓದಿ

11:54 AM (IST) Apr 21

ಮೈದಾನದಲ್ಲೇ ಕೊಹ್ಲಿ, ಶ್ರೇಯಸ್ ಅಯ್ಯರ್‌ಗೆ ಟ್ರೋಲ್ ಮಾಡಿದ್ದೇಕೆ? ಕೊನೆಗೂ ಬಯಲಾಯ್ತು ಸತ್ಯ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಅವರದ್ದೇ ಮೈದಾನದಲ್ಲಿ ಸೋಲಿಸಿದೆ. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಶತಕದ ಜತೆಯಾಟವು ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೊಹ್ಲಿ, ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಟ್ರೋಲ್ ಮಾಡಿದ್ದಾರೆ.

ಪೂರ್ತಿ ಓದಿ

11:27 AM (IST) Apr 21

ಹಿಜಾಬ್‌ನಲ್ಲಿ ಏನಾದ್ರೂ ಬಚ್ಚಿಡಬಹುದು, ಆದ್ರೆ ಜನಿವಾರ, ಶಿವದಾರ, ತಾಳಿ, ಓಲೆ ಹೇಗೆ ಕಾಪಿ ಹೊಡೆಯಲು ಸಾಧ್ಯ? ಆರ್ ಅಶೋಕ್ ಕಿಡಿ

ವಿವಿಧ ಪರೀಕ್ಷೆಗಳಲ್ಲಿ ಹೆಣ್ಣು ಮಕ್ಕಳ ತಾಳಿ, ಓಲೆ ತೆಗೆಸಿದ ಪ್ರಕರಣವನ್ನು ವಿರೋಧಿಸಿ ಆರ್. ಅಶೋಕ್ ಅವರು ಕೇಂದ್ರದ ಮಹಿಳಾ ಆಯೋಗಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಜನಿವಾರ, ಶಿವದಾರ ಕತ್ತರಿಸಿ ಹಿಜಾಬ್‌ಗೆ ಮಾತ್ರ ಅವಕಾಶ ನೀಡಿರುವುದನ್ನು ಖಂಡಿಸಿದ ಅವರು, ಸರ್ಕಾರ ಹಿಂದೂಗಳನ್ನು ಧಮನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪೂರ್ತಿ ಓದಿ

11:19 AM (IST) Apr 21

ಎರಡೇ ಎರಡೇ ಪುಡಿ- ಬಿಳಿಗೂದಲು ಫುಲ್​ ಮಾಯ: ಪ್ರಖ್ಯಾತ ಆಯುರ್ವೇದ ವೈದ್ಯರ ಸಲಹೆ ಕೇಳಿ

ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಹೇರ್​ಡೈ ಬಳಸಿ ಆರೋಗ್ಯಕ್ಕೆ ಇನ್ನಿಲ್ಲದ ಕುತ್ತು ತಂದುಕೊಳ್ಳುವ ಬದಲು ಈ ಎರಡು ಪೌಡರ್​ ಬಳಸಿ ನೋಡಿ ಎಂದಿದ್ದಾರೆ  ಪ್ರಖ್ಯಾತ ಆಯುರ್ವೇದ ವೈದ್ಯರು. 
 

ಪೂರ್ತಿ ಓದಿ

11:03 AM (IST) Apr 21

ಫ್ಯಾಷನ್ ಡ್ರೆಸ್ ಬಿಟ್ಟು, ಅಪ್ಪಟ ಗ್ರಾಮೀಣ ಸೊಗಡಿನ ಕುರಿಗಾಹಿ ವೇಷದಲ್ಲಿ ವಧ-ವರರ ಪ್ರೀ ವೆಡ್ಡಿಂಗ್ ಶೂಟ್ ವೈರಲ್!

ಯಾದಗಿರಿ ಜಿಲ್ಲೆಯ ವಧು-ವರರು ಗ್ರಾಮೀಣ ಸೊಗಡಿನ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಿಕೊಂಡಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಚಿತ್ರೀಕರಣ ನಡೆದಿದೆ. ಈ ಶೂಟ್ ಗ್ರಾಮೀಣ ಯುವ ಜೋಡಿಗಳಿಗೆ ಹೊಸ ಒಲವಿನ ಸಂಕೇತವಾಗಿದೆ.

ಪೂರ್ತಿ ಓದಿ

10:42 AM (IST) Apr 21

ಕೆಲಸ ಕೊಡಿಸೋದಾಗಿ ನಂಬಿಸಿ ಯುವತಿಗೆ ₹2.70 ಲಕ್ಷ ವಂಚನೆ, ಹಣ ವಾಪಸ್ ಕೇಳಿದ್ರೆ ಬೆದರಿಕೆ!

ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯಿಂದ ₹2.70 ಲಕ್ಷ ಪಡೆದು ವಂಚಿಸಿದ ಇಬ್ಬರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕುತ್ತಿದ್ದ ಯುವತಿಗೆ ವಂಚಕರು ಬಲೆ ಬೀಸಿದ್ದಾರೆ.

ಪೂರ್ತಿ ಓದಿ

10:11 AM (IST) Apr 21

ಕಡೇಚೂರು ವಿಷಗಾಳಿ: ಸಾಲಾಗಿ ಸಾಯ್ತಿದ್ದಾರೆ, ಯಾಕಂತ ಗೊತ್ತಾಗ್ತಿಲ್ಲ!

ಯಾದಗಿರಿ ಜಿಲ್ಲೆಯ ಸಂಗ್ವಾರ ಗ್ರಾಮದಲ್ಲಿ ಕಳೆದ ಒಂದು ವರ್ಷದಲ್ಲಿ ಹಲವಾರು ಜನರು ಕಿಡ್ನಿ, ಲಿವರ್ ಮತ್ತು ಉಸಿರಾಟದ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ. ಕೈಗಾರಿಕಾ ಪ್ರದೇಶದಿಂದ ಹೊರಹೊಮ್ಮುವ ತ್ಯಾಜ್ಯ ಮತ್ತು ದುರ್ನಾತದಿಂದ ಈ ಸಾವುಗಳಿಗೆ ಕಾರಣ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪೂರ್ತಿ ಓದಿ

10:08 AM (IST) Apr 21

ಹಾಲಿ ಚಾಂಪಿಯನ್‌ ಕೆಕೆಆರ್‌ಗೆ ಬಲಿಷ್ಠ ಗುಜರಾತ್ ಟೈಟಾನ್ಸ್ ಚಾಲೆಂಜ್!

ಕೋಲ್ಕತಾ ತಂಡವು ಪಂಜಾಬ್ ವಿರುದ್ಧದ ಸೋಲಿನಿಂದ ಚೇತರಿಸಿಕೊಳ್ಳಲು ಯತ್ನಿಸುತ್ತಿದ್ದು, ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ. ಬ್ಯಾಟಿಂಗ್ ವಿಭಾಗದಲ್ಲಿ ಲಯ ಕಳೆದುಕೊಂಡಿರುವುದು ತಂಡಕ್ಕೆ ತಲೆನೋವು ತಂದಿದ್ದು, ಗೆಲುವಿಗೆ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಬೇಕಿದೆ.

ಪೂರ್ತಿ ಓದಿ

09:42 AM (IST) Apr 21

ವಾಯುಭಾರ ಕುಸಿತ; ರಾಜ್ಯದಲ್ಲಿ ಮುಂದಿನ 5 ದಿನ ಗುಡುಗು, ಮಿಂಚು, ಬಿರುಗಾಳಿ ಸಹಿತ ಆಲಿಕಲ್ಲು ಮಳೆ!

Karnataka Rain Alert: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ಹಲವೆಡೆ ಐದು ದಿನ ಗುಡುಗು, ಮಿಂಚು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ. 24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ.

ಪೂರ್ತಿ ಓದಿ

09:02 AM (IST) Apr 21

ಗಬ್ಬದ ಹಸು ಕಡಿದ ಪ್ರಕರಣ: ಎರಡೇ ದಿನದಲ್ಲಿ ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು

ಭಟ್ಕಳದ ವೆಂಕಟಾಪುರದಲ್ಲಿ ಗರ್ಭಿಣಿ ಹಸುವನ್ನು ಕಡಿದು ಮಾಂಸ ಮಾಡಿ, ಭ್ರೂಣವನ್ನು ಬಿಸಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹನೀಫಾಬಾದ್ ನಿವಾಸಿ ಮೊಹಮ್ಮದ್ ಇಬ್ರಾಹಿಂ ಹವ್ವಾ ಎಂದು ಗುರುತಿಸಲಾದ ಆರೋಪಿಯನ್ನು ಎರಡೇ ದಿನಗಳಲ್ಲಿ ಪತ್ತೆ ಹಚ್ಚಲಾಗಿದೆ. ಈ ಘಟನೆ ಹಿಂದೂ ಸಂಘಟನೆಗಳು ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಪೂರ್ತಿ ಓದಿ

08:49 AM (IST) Apr 21

ಬಡವರ ಬದಲು ಶ್ರೀಮಂತರ ಮೇಲೆ ಶೇ.40 ರಿಂದ 50ರಷ್ಟು ತೆರಿಗೆ ಹಾಕಿ: ಚಿತ್ರನಟ ಚೇತನ್

ಸರ್ಕಾರ ಬಡವರ ಮೇಲೆ ತೆರಿಗೆ ಹಾಕುವ ಬದಲು ಶ್ರೀಮಂತರ ಮೇಲೆ ಶೇ.40 ರಿಂದ 50ರಷ್ಟು ಪ್ರಗತಿಪರ ತೆರಿಗೆ ಹಾಕಿ ಜನಸಾಮಾನ್ಯರಿಗೆ ಮರುಹಂಚಿಕೆ ಮಾಡಬೇಕೆಂದು ಚಿತ್ರನಟ ಚೇತನ್ ಪಾಂಡವಪುರದಲ್ಲಿ ಹೇಳಿದರು. ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ಈ ಹೇಳಿಕೆ ನೀಡಿದ ಅವರು, ಸರ್ಕಾರಗಳು ಉತ್ತಮ ಶಿಕ್ಷಣ, ಆರೋಗ್ಯ ನೀಡಲು ಸಾಧ್ಯವಿಲ್ಲ, ಶೋಷಿತ ಸಮುದಾಯಗಳು ಸಂಘಟಿತರಾಗಿ ರಾಜಕೀಯ ಪ್ರಜ್ಞೆ ಮೂಡಿಸಿಕೊಳ್ಳಬೇಕು ಎಂದರು.

ಪೂರ್ತಿ ಓದಿ

More Trending News