ಬೆಂಗಳೂರು: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್ ನುಗ್ಲಿ ವಿರುದ್ಧ ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ವಸಂತ ಕುಮಾರ್ ನೇತೃತ್ವದಲ್ಲಿ ಬಿಜೆಪಿ ನಾಯಕರು ರಾಜ್ಯ ಮುಖ್ಯಚುನಾವಣಾಧಿಕಾರಿ ಕಚೇರಿಗೆ ಬುಧವಾರ ದೂರು ನೀಡಿದ್ದಾರೆ.
ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರದ ವೇಳೆ ಶಾಸಕ ಪ್ರದೀಪ್ ಈಶ್ವರ್ ಅವರು ಬಿಜೆಪಿ ನಾಯಕರ ವಿರುದ್ಧ ಅವಹೇಳನ ಮಾಡಿದ್ದಾರೆ. ಸರ್ಕಾರಿ ನೌಕರ ಚಂದ್ರಶೇಖರ್ ನುಗ್ಲಿ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
10:59 PM (IST) Apr 02
Colors Kannada Pavithra Bandhana Serial: ಪವಿತ್ರ ಬಂಧನ ಧಾರಾವಾಹಿಯಲ್ಲಿ ತಮ್ಮಯ್ಯ ಎಂದೇ ಫೇಮಸ್ ಆಗಿರೋ ತಿಲಕ್ ದೇಶಮುಖ್ ಅಲಿಯಾಸ್ ಯಶಸ್ ಕೃಷ್ಣ ಅವರ ಪಾತ್ರ ಮುಕ್ತಾಯವಾಗಿದೆ. ಇದನ್ನು ವೀಕ್ಷಕರು ನೋಡಿ ಬೇಸರ ಮಾಡಿಕೊಂಡಿದ್ದರು. ಈ ಪಾತ್ರ ಮರಳಿ ಬರಲಿದೆಯಾ?
10:35 PM (IST) Apr 02
Amruthadhaare Kannada Serial Update: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಜೀವನ ಹಾಳು ಮಾಡಬೇಕು ಎಂದುಕೊಂಡಿದ್ದ ಜಯದೇವ್‌ಗೆ ಸಖತ್ ಟ್ವಿಸ್ಟ್ ಸಿಕ್ಕಿದೆ. ಈ KD ಜೇಡಿಯೇ ನಲುಗುವಂಥ ಸುದ್ದಿ ಸಿಕ್ಕಿದೆ. ಅಷ್ಟೇ ಅಲ್ಲದೆ ಅವನಿಗೆ ಒಂದಲ್ಲ, ಎರಡು ಆಘಾತಕಾರಿ ಸುದ್ದಿ ಸಿಕ್ಕಿದೆ.
09:22 PM (IST) Apr 02
ಸಿದ್ದರಾಮಯ್ಯ ಅವರು ರಾಜ್ಯರ ಜನತೆಗೆ ಹಲವು ಭಾಗ್ಯಗಳ ಮೂಲಕ ಕಳೆದ ಮೂರು ವರ್ಷಗಳಿಂದ ಪಂಚ ಗ್ಯಾರಂಟಿ ಯೋಜನೆಗಳಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡಿದ್ದಾರೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.
09:14 PM (IST) Apr 02
08:46 PM (IST) Apr 02
ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಅಂಶವುಳ್ಳ ಕರಡು ನೀತಿ ರೂಪಿಸಿದ್ದು, ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸಿ ಅಂತಿಮ ನೀತಿ ಪ್ರಕಟಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
08:34 PM (IST) Apr 02
ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮವನ್ನು (ಕೆಎಸ್‌ಐಸಿ) ಹಂತ ಹಂತವಾಗಿ ಮುಚ್ಚಲು ರಾಜ್ಯ ಸರ್ಕಾರ ಚಕ್ರವ್ಯೂಹ ರಚಿಸಿದಂತೆ ಕಾಣುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
08:27 PM (IST) Apr 02
Tollywood Directors: ರಾಜಮೌಳಿ, ತ್ರಿವಿಕ್ರಮ್, ಸುಕುಮಾರ್ ಅವರಂತಹ ಟಾಪ್ ಡೈರೆಕ್ಟರ್‌ಗಳ ವೃತ್ತಿಜೀವನದ ಬೆಸ್ಟ್ ಸಿನಿಮಾಗಳ ಬಗ್ಗೆ ಈ ಸ್ಟೋರಿಯಲ್ಲಿದೆ. ಈ ಚಿತ್ರಗಳನ್ನು ಮೀರಿಸುವಂತಹ ಸಿನಿಮಾಗಳನ್ನು ಇವರು ಮತ್ತೆ ನಿರ್ದೇಶಿಸಬಲ್ಲರೇ ಎಂಬ ಚರ್ಚೆ ಅಭಿಮಾನಿಗಳಲ್ಲಿ ಜೋರಾಗಿದೆ.
08:20 PM (IST) Apr 02
ನಂದಮೂರಿ ಬಾಲಕೃಷ್ಣ ಇಂದಿಗೂ ಸ್ಟಾರ್ ಹೀರೋ ಆಗಿ ಸತತ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರ ವೃತ್ತಿಜೀವನದಲ್ಲಿ ದ್ವಿಪಾತ್ರಗಳಲ್ಲಿ ನಟಿಸಿದ ಹಲವು ಚಿತ್ರಗಳಿವೆ. 'ಚೆನ್ನಕೇಶವ ರೆಡ್ಡಿ' ಕೂಡಾ ಅಂತಹದ್ದೇ ಒಂದು ಸಿನಿಮಾ.
08:12 PM (IST) Apr 02
Actress Rashmika Mandanna: ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಇತ್ತೀಚೆಗೆ ಮದುವೆ ಆಗಿದ್ದಾರೆ. ಈಗ ಅವರು “ನಾವು ಈಗ ಇಬ್ಬರಲ್ಲ, ಮೂವರು” ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ಈಗ ಭಾರೀ ವೈರಲ್ ಆಗ್ತಿದೆ. ಹಾಗಾದರೆ ಸತ್ಯ ಏನು?
06:53 PM (IST) Apr 02
ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪತ್ನಿ, ಫಿಲ್ಮ್ಸ್ ಮತ್ತು ಫೌಂಡೇಷನ್ ಖಾತೆಗಳನ್ನು ಹೊರತುಪಡಿಸಿ ಎಲ್ಲರನ್ನೂ ಅನ್‌ಫಾಲೋ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಅವರ ಆಪ್ತಮಿತ್ರ ಪ್ರಮೋದ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
06:32 PM (IST) Apr 02
ಈ ಪ್ರಾಜೆಕ್ಟ್ ಅನ್ನು ದೊಡ್ಡ ಬಜೆಟ್ ಮತ್ತು ಭವ್ಯವಾದ ಸೆಟ್‌ಗಳೊಂದಿಗೆ ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಈ ಹಿಂದೆ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿರುವ ಅಟ್ಲಿ ನಿರ್ದೇಶಿಸುತ್ತಿದ್ದಾರೆ.
05:15 PM (IST) Apr 02
'ಜೊತೆ ಜೊತೆಯಲಿ' ಖ್ಯಾತಿಯ ನಟಿ ಮಾನಸ ಮನೋಹರ್ ಮತ್ತು ಅವರ ಪತಿ, ಫುಟ್‌ಬಾಲ್ ಆಟಗಾರ ಪ್ರೀತಂ ಚಂದ್ರ ಅವರು ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಮಾರ್ಚ್ 20, 2026 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಈ ಸಿಹಿ ಸುದ್ದಿಯನ್ನು ನಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
04:48 PM (IST) Apr 02
ಡಾಲಿ ಧನಂಜಯ ನಟನೆ, ನಿರ್ಮಾಣದ ಹೊಸ ಸಿನಿಮಾ ಹೆಸರು ‘ಮದರ್ ಪ್ರಾಮಿಸ್’. ಈ ಚಿತ್ರದ ಟ್ಯಾಗ್‌ಲೈನ್ ‘ಫಾದರ್ ಆಫ್ ಆಲ್ ಪ್ರಾಮಿಸಸ್’. ವಿಶೇಷ ಎಂದರೆ ಈ ಸಿನಿಮಾ ಮೂಲಕ ನಟ ಪೂರ್ಣಚಂದ್ರ ಮೈಸೂರು ಅವರು ನಿರ್ದೇಶಕನಾಗುತ್ತಿದ್ದಾರೆ.
04:28 PM (IST) Apr 02
ದೊಡ್ಡ ಹೊಟೆಲ್ ಅದಕ್ಕಿಂತ ಸೂಪರ್ ಹೆಸರು ನೋಡಿ ಆರ್ಡರ್ ಮಾಡಿದ ಬೆಂಗಳೂರಿಗನಿಗೆ ಕೊಟ್ಟಿದ್ದು ಇದು, ಬೆಂಗಳೂರಿನ ಪ್ರತಿಷ್ಠಿತ ರೆಸ್ಟೋರೆಂಟ್‌ನಲ್ಲಿ ಹೇಳಿದ ತಿಂಡಿ ಬಂದಾಗ ಅಚ್ಚರಿಯಾಗಿತ್ತು.
04:21 PM (IST) Apr 02
ಕೃತಕ ಬುದ್ಧಿಮತ್ತೆ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆಯ ಪರಿಚಯದಿಂದ ಚಿಕಿತ್ಸಾ ಗುಣಮಟ್ಟ ಮತ್ತು ರೋಗಿ ಸುರಕ್ಷತೆ ಮತ್ತಷ್ಟು ಬಲವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
04:01 PM (IST) Apr 02
Actress Padmaja Rao: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕುಸುಮಾ ಪಾತ್ರದಿಂದ ಜನರ ಮನಸ್ಸು ಗೆದ್ದಿರುವ ನಟಿ ಪದ್ಮಜಾ ರಾವ್ ಅವರು ರ್ಯಾಪಿಡ್ ರಶ್ಮಿ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮೊದಲ ಮದುವೆ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಮೊದಲ ಮದುವೆ ಯಾಕೆ ಮುರಿಯಿತು?
03:56 PM (IST) Apr 02
03:39 PM (IST) Apr 02
ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ನಿಧನರಾದರು. ನಾಸ್ತಿಕರಾದ ಪ್ರಕಾಶ್ ರಾಜ್, ತಾಯಿಯ ಅಂತ್ಯಕ್ರಿಯೆಯನ್ನು ಅವರ ನಂಬಿಕೆಯಂತೆ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ನಡೆಸಿದ್ದಕ್ಕೆ ಟ್ರೋಲ್‌ಗೆ ಒಳಗಾದರು.
02:59 PM (IST) Apr 02
02:40 PM (IST) Apr 02
02:15 PM (IST) Apr 02
01:33 PM (IST) Apr 02
01:29 PM (IST) Apr 02
ವರದಿ: ಆತ್ಮಭೂಷಣ್
ನೈಋತ್ಯ ರೈಲ್ವೆಯು ಬೆಂಗಳೂರು-ಕೋಯಿಕ್ಕೋಡ್ ಎಕ್ಸ್‌ಪ್ರೆಸ್ ರೈಲಿನ ಸಮಯವನ್ನು ವಿಳಂಬಗೊಳಿಸಲು ಪ್ರಸ್ತಾಪಿಸಿದೆ, ಇದು ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ. ಈ ಬದಲಾವಣೆಗೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರೈಲಿನ ಸಮಯ ಬದಲಾಯಿಸುವುದೇ ಸೂಕ್ತ ಎಂದಿದೆ.
01:25 PM (IST) Apr 02
ಮಗು ಪದೇ ಪದೇ ಕಿರಿಕಿರಿ ಮಾಡುತ್ತಿದೆಯಾ ಅಥವಾ ಆರೋಗ್ಯ ಕೆಡುತ್ತಿದೆಯಾ? ಹಾಗಿದ್ರೆ ದೃಷ್ಟಿ ಆಗಿರಬಹುದು. ಕೆಲವೊಮ್ಮೆ ದೊಡ್ಡವರಿಗೂ ಏನಾದರೊಂದು ಸಮಸ್ಯೆ ಆಗುತ್ತದೆ, ಇನ್ನೊಮ್ಮೆ ಅಂದುಕೊಂಡ ಕೆಲಸ ಆಗದೆ ಇರಬಹುದು. ಬಿಹಾರದಲ್ಲಿ ಇಂದಿಗೂ ಮಕ್ಕಳ ದೃಷ್ಟಿ ತೆಗೆಯಲು ಬಳಸುವ ಹಳೆಯ ಕಾಲದ ಸುಲಭ ಮನೆಮದ್ದುಗಳಿವು.
12:57 PM (IST) Apr 02
12:53 PM (IST) Apr 02
12:52 PM (IST) Apr 02
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು, ಸುಮಾರು 70 ಗೋಧಿ ಮೂಟೆಗಳನ್ನು ಶಾಲಾ ಆವರಣದಲ್ಲಿ 10 ಅಡಿ ಆಳದಲ್ಲಿ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಸಾರ್ವಜನಿಕರ ದೂರಿನ ಮೇರೆಗೆ ಜೆಸಿಬಿ ಮೂಲಕ ಭೂಮಿ ಅಗೆದಾಗ ಮೂಟೆಗಳು ಸಿಕ್ಕಿವೆ.
12:41 PM (IST) Apr 02
ಸಚಿವ ಎಂ.ಬಿ. ಪಾಟೀಲ್ ಅವರ ಸವಾಲಿಗೆ ತಿರುಗೇಟು ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಾನು ಮುಖ್ಯಮಂತ್ರಿಯಾದರೆ ಉತ್ತರ ಪ್ರದೇಶದ ಯೋಗಿ ಮಾದರಿ ಆಡಳಿತ ನೀಡುವುದಾಗಿ ಹೇಳಿದ್ದಾರೆ. ತಮ್ಮ ಮೊದಲ ಸಂಪುಟ ಸಭೆಯಲ್ಲೇ ಮುಸ್ಲಿಮರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ತೆಗೆದುಹಾಕುವುದಾಗಿ ಸ್ಫೋಟಕ ಹೇಳಿಕೆ
12:30 PM (IST) Apr 02
'ಬುದ್ಧಿವಂತರ ದಿನ'ದಂದು ಉಪ್ಪಿ ಬಿಡುಗಡೆ ಮಾಡಿರುವ ಈ ಹೊಸ ಆ್ಯಪ್ ಸ್ಯಾಂಡಲ್‌ವುಡ್ ಮತ್ತು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ರಿಯಲ್ ಸ್ಟಾರ್‌ನ ಈ 'ರಿಯಲ್ ಪ್ರಜಾಕೀಯ' ಆ್ಯಪ್ ಜನಸಾಮಾನ್ಯರ ಬದುಕಿನಲ್ಲಿ ಎಂತಹ ಬದಲಾವಣೆ ತರಲಿದೆ ಎಂಬುದನ್ನು ಕಾದು ನೋಡಬೇಕು.
11:52 AM (IST) Apr 02
Actor Jaggesh On Mutt: ಇತ್ತೀಚೆಗೆ ನವರಸನಾಯಕ ಜಗ್ಗೇಶ್ ಅವರು ಮಂತ್ರಾಲಯದಲ್ಲಿ ಕಸ ಗುಡಿಸಿದರು. ಈ ವಿಡಿಯೋ ವೈರಲ್ ಆಗಿದ್ದು, ಕೆಲವರು ನೆಗೆಟಿವ್ ಮಾತನಾಡಿದರು. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ, ಲೇಖನ ಓದಿ.
11:35 AM (IST) Apr 02
ಬೆಂಗಳೂರಿನಲ್ಲಿಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (APSRTC) ಸೇರಿದ ಬಸ್‌ವೊಂದು ಶಿವಾನಂದ ಸರ್ಕಲ್ ಬಳಿ ಅಪಘಾತಕ್ಕೀಡಾಗಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.
11:26 AM (IST) Apr 02
ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ಬಿಸಿಲಿನ ತೀವ್ರತೆ ಹೆಚ್ಚಿರುವ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬದಲಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
11:17 AM (IST) Apr 02
ಬೆಂಗಳೂರಿನ ಚಂದ್ರಲೇಔಟ್‌ನಲ್ಲಿ 11 ತಿಂಗಳ ಮಗು ಆಕಸ್ಮಿಕವಾಗಿ ಬಕೆಟ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಇದರಿಂದ ತೀವ್ರವಾಗಿ ನೊಂದ ಟೆಕ್ಕಿ ತಾಯಿ, ಮಗುವಿನ ಸಾವಿಗೆ ನಾನೇ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ.
10:51 AM (IST) Apr 02
Ramayana Movie: ರಣಬೀರ್ ಕಪೂರ್ ನಟನೆಯ 'ರಾಮಾಯಣ' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಶ್ರೀರಾಮನ ಪಾತ್ರದಲ್ಲಿ ರಣಬೀರ್ ಲುಕ್ ನೋಡಿ ಫ್ಯಾನ್ಸ್ 'ದೈವಿಕ ಅನುಭವ' ಎಂದಿದ್ದಾರೆ. ಅದ್ಭುತ ವಿಶ್ಯುವಲ್ಸ್, ಅಂತಾರಾಷ್ಟ್ರೀಯ ಮಟ್ಟದ VFX ಜೊತೆಗೆ ಈ ಸಿನಿಮಾ ಭಾರತೀಯ ಚಿತ್ರರಂಗದ ಅತಿದೊಡ್ಡ ಪ್ರಾಜೆಕ್ಟ್ ಆಗಲಿದೆ.
10:28 AM (IST) Apr 02
ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಗಳ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಿಜಿಎಸ್ ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದು, ಈ ಭೇಟಿಯು ರಾಜಕೀಯ ವಲಯದಲ್ಲಿ ಕುತೂಹಲ.
10:09 AM (IST) Apr 02
Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ, ಆದಿ ಮದುವೆ ಆಗ್ತಾರೆ ಎನ್ನುವಾಗಲೇ ಇನ್ನೊಂದು ಟ್ವಿಸ್ಟ್ ಸಿಕ್ಕಿದೆ. ಇವರಿಬ್ಬರು ಮದುವೆ ಆಗೋದು ಅನೇಕರಿಗೆ ಇಷ್ಟವೇ ಇಲ್ಲ. ಹೀಗಾಗಿ ಒಂದಾದ ಮೇಲೆ ಒಂದರಂತೆ ಸಮಸ್ಯೆ ಬರುತ್ತಿದೆ.
10:01 AM (IST) Apr 02
ದಾವಣಗೆರೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮೇ ತಿಂಗಳಲ್ಲಿ ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಮತ್ತೆ ಜಂಗಿ ಕುಸ್ತಿ ಶುರುವಾಗಲಿದೆ ಎಂದು ಭವಿಷ್ಯ ನುಡಿದರು. ಸಾಲ ಮಾಡುವುದರಲ್ಲಿ ಸಿದ್ದರಾಮಯ್ಯ ದಾಖಲೆ ವೀರ, ತಮ್ಮ ಹಾಗೂ ಸಿದ್ದರಾಮಯ್ಯ ಕಾಲದ ಸಾಲದ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು..
09:55 AM (IST) Apr 02
08:59 AM (IST) Apr 02
08:46 AM (IST) Apr 02
ದಶಕಗಳ ಹೋರಾಟದ ನಂತರ ರಾಜ್ಯ ಸಾರಿಗೆ ನೌಕರರ ವೇತನ ಹೆಚ್ಚಳದ ಬೇಡಿಕೆ ಈಡೇರುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಚರ್ಚಿಸಲು ಏಪ್ರಿಲ್ 6 ರಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ನೌಕರರ ಸಂಘಟನೆಗಳೊಂದಿಗೆ ಮಹತ್ವದ ಸಭೆ ಕರೆದಿದ್ದು, ಅಂದೇ ವೇತನ ಹೆಚ್ಚಳ ಮತ್ತು ಹಿಂಬಾಕಿನಿರ್ಧಾರ?