ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಹೊರಬರುವ ಉದ್ದೇಶದೊಂದಿಗೆ ಜಲಮಂಡಳಿಯು ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ನೀರು ಬಳಕೆ ಶುಲ್ಕವನ್ನು ಶೇ.3ರಷ್ಟು ಹೆಚ್ಚಿಸಲಿದೆ. ಪರಿಣಾಮ ಏಪ್ರಿಲ್ ತಿಂಗಳಿನಿಂದ ಗೃಹ ಬಳಕೆದಾರರಿಗೆ ಮಾಸಿಕ ಸರಾಸರಿ 20ರಿಂದ 30 ರು. ಹೆಚ್ಚುವರಿ ನೀರಿನ ಬಿಲ್ ಬರುವ ಸಾಧ್ಯತೆಗಳಿವೆ.
ನೀರಿನ ಸರಬರಾಜು ವೆಚ್ಚ, ನಿರ್ವಹಣಾ ವೆಚ್ಚ, ವಿದ್ಯುತ್ ಮತ್ತು ಮೂಲಸೌಕರ್ಯ ಖರ್ಚಿನಲ್ಲಿನ ಹೆಚ್ಚಳ ಸೇರಿ ಇನ್ನಿತರ ಕಾರಣಗಳಿಂದಾಗಿ ಜಲಮಂಡಳಿ ಆರ್ಥಿಕ ನಷ್ಟದಲ್ಲಿದೆ. ಅದನ್ನು ತಪ್ಪಿಸಲು ಪ್ರತಿವರ್ಷ ಶೇ.3ರಷ್ಟು ನೀರು ಬಳಕೆ ಶುಲ್ಕ ಹೆಚ್ಚಿಸಲು ಜಲಮಂಡಳಿ ನಿರ್ಧರಿಸಿದೆ. ಕಳೆದ ವರ್ಷವೂ ಇದೇ ಮಾದರಿಯಲ್ಲಿ ನೀರು ಬಳಕೆ ಶುಲ್ಕ ಹೆಚ್ಚಿಸಲಾಗಿತ್ತು. ಇದೀಗ ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ಮತ್ತೆ ಶೇ.3ರಷ್ಟು ನೀರಿನ ಬಿಲ್ ಹೆಚ್ಚಳ ಮಾಡಲಾಗುತ್ತಿದೆ.
10:43 PM (IST) Apr 01
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಸತಿ ಬೇಡಿಕೆಯನ್ನು ಪೂರೈಸಲು, ಬಿಡಿಎ 'ವರ್ಟಿಕಲ್ ಗ್ರೋತ್' ಪರಿಕಲ್ಪನೆಯಡಿ 3,200 ಕೋಟಿ ರೂ. ವೆಚ್ಚದಲ್ಲಿ ಆರು ಹೊಸ ವಸತಿ ಯೋಜನೆಗಳನ್ನು ಆರಂಭಿಸಿದೆ. ಕೋಣದಾಸಪುರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ 1BHK ಯಿಂದ 4BHK ವರೆಗಿನ ಫ್ಲಾಟ್‌ಗಳನ್ನು ನಿರ್ಮಿಸಲಾಗುತ್ತಿದೆ.
08:36 PM (IST) Apr 01
ಮಂಗಳೂರಿನ ಫಲ್ಗುಣಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೂವರು ಯುವಕರಿದ್ದ ದೋಣಿ ಮಗುಚಿದ್ದು, ಇಬ್ಬರು ನೀರುಪಾಲಾಗಿದ್ದಾರೆ.. ಈ ದುರಂತದಲ್ಲಿ ಓರ್ವ ಈಜಿ ದಡ ಸೇರಿದ್ದು, ಇನ್ನೊಬ್ಬರ ಮೃತದೇಹ ಪತ್ತೆಯಾಗಿದೆ. ಮತ್ತೊಬ್ಬ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
08:01 PM (IST) Apr 01
ಗಾಂಜಾ, ಅಫೀಮು ಇಂದು ಸಮಾಜಕ್ಕೆ ಪಿಡುಗಾಗಿವೆ. ಚಹಾ ಅಂಗಡಿ ಸೇರಿ ಸಣ್ಣಪುಟ್ಟ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಕಳವಳ ವ್ಯಕ್ತಪಡಿಸಿದರು.
07:45 PM (IST) Apr 01
ಗುಂಡಿ ಮುಚ್ಚಲು ಯೋಗ್ಯತೆ ಇಲ್ಲದ ಕಾಂಗ್ರೆಸ್‌ನವರು ಧಮ್ಕಿ ಹಾಕಿ ಮತ ಪಡೆಯಲು ಹೊರಟಿದ್ದಾರೆ. ಬಾಗಲಕೋಟೆಯ ಜನ ಅದಕ್ಕೆ ಹೆದರುವುದಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
07:25 PM (IST) Apr 01
ನನ್ನ ಪ್ರಕಾರ ಶಾಸಕ ಬಸನಗೌಡ ಯತ್ನಾಳ ಅವರು ಕಾಂಗ್ರೆಸ್ ಪರ ಕೆಲಸ ಮಾಡಬೇಕು. ಬಿಜೆಪಿಗೆ ಮಾಡಕೂಡದು. ಅವರು ಬಿಜೆಪಿಯಿಂದ ಉಚ್ಚಾಟನೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
07:06 PM (IST) Apr 01
ದುರಾಡಳಿತ ಸರ್ಕಾರದಿಂದ ಅಭಿವೃದ್ಧಿ ಮರೀಚಿಕೆಯಾಗಿದ್ದು ಸಿಎಂ ಸಿದ್ದರಾಮಯ್ಯ ಸಾಲದರಾಮಯ್ಯ ಆಗಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಶೋಕ್ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
06:55 PM (IST) Apr 01
06:40 PM (IST) Apr 01
Tollywood Actor: ಒಂದು ಕಾಲದಲ್ಲಿ ಟಾಲಿವುಡ್‌ನಲ್ಲಿ ಕಾಮಿಡಿ ಚಿತ್ರಗಳಿಂದ ಜನರನ್ನು ನಗಿಸಿದ್ದ ನಟರೊಬ್ಬರು, ಈಗ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆದರೆ, ಅವರು ಮಾಡಿದ ಒಂದು ಸಣ್ಣ ತಪ್ಪಿನಿಂದ ಸಾವಿರಾರು ಕೋಟಿ ರೂಪಾಯಿ ಆಸ್ತಿ ಕಳೆದುಕೊಂಡಿದ್ದಾರೆ.
06:08 PM (IST) Apr 01
ದುಲ್ಕರ್ ಸಲ್ಮಾನ್ ಜೊತೆ 'ಸೀತಾ ರಾಮಂ' ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೂ ಅಚ್ಚುಮೆಚ್ಚಿನ ನಟಿಯಾಗಿರುವ ಮೃಣಾಲ್ ಠಾಕೂರ್, ಇದೀಗ ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳ ಕಷ್ಟವನ್ನು ಹಂಚಿಕೊಂಡಿದ್ದಾರೆ.
05:48 PM (IST) Apr 01
ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಇದೀಗ ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಉಗ್ರಾಯುಧಂ ಸುಮಾರು 500 ವರ್ಷಗಳ ಹಿಂದಿನ ಕಥೆಯನ್ನು ಆಧರಿಸಿದೆ. ಇದೊಂದು ಐತಿಹಾಸಿಕ ಚಿತ್ರ.
05:35 PM (IST) Apr 01
ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುವಲ್ಲಿ ನಮ್ಮ ಆಹಾರ ಪದ್ಧತಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಆಹಾರಗಳಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು, ಫೈಟೊಕೆಮಿಕಲ್‌ಗಳು, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳು ಹೇರಳವಾಗಿವೆ. ಹಾಗಾದರೆ ಅವು ಯಾವುವು?
05:18 PM (IST) Apr 01
ಕಳ್ಳನಿಂದ ಆ ನೋಟು ಇನ್ಯಾರಿಗೋ ಹೋಗುತ್ತದೆ. ಹತ್ತಾರು ಮಂದಿಗೆ ಈ ನೋಟು ದಾಟುತ್ತಾ ಹೋಗುತ್ತದೆ. ಆ ಒಂದು ನೋಟು ಎಷ್ಟು ಜನರ ಬದುಕನ್ನು ಬದಲಿಸುತ್ತದೆ ಎಂಬುದನ್ನು ನಿರ್ದೇಶಕರು ಇಲ್ಲಿ ಹೇಳುತ್ತಾ ಹೋಗುತ್ತಾರೆ.
05:02 PM (IST) Apr 01
ಖ್ಯಾತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಜತೆ ಕೈ ಜೋಡಿಸಿದ ರಿಷಬ್ ಶೆಟ್ಟಿ ಫಿಲಂಸ್. ಜೈ ಹನುಮಾನ್ ಸಿನಿಮಾ ನಿರ್ಮಾಣಕ್ಕೆ ರಿಷಬ್ ದಂಪತಿ ಸಾಥ್. ಚಿತ್ರದ ನಿರ್ಮಾಪಕಿಯಾಗಿ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಮುಂದಾಳತ್ವ.
04:56 PM (IST) Apr 01
Body Count Meaning in Kannada With Example: ಇತ್ತೀಚೆಗೆ Body Count ಎಂಬ ಪದದ ಬಗ್ಗೆ ಚರ್ಚೆಯಾಗುತ್ತಿದೆ. ಇದರ ಅರ್ಥ ಏನು ಎಂದು ಗೂಗಲ್‌ನಲ್ಲಿ ಹುಡುಕಿದರೆ, ಎಷ್ಟು ಜನರನ್ನು ಕೊಂ*ದಿದ್ದೇವೆ ಎಂದು ಲೆಕ್ಕ ಹಾಕುವುದು ಎಂದು ಸಿಗುವುದು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಇದರ ಅರ್ಥ ಬೇರೆಯೇ ಇದೆ.
04:46 PM (IST) Apr 01
04:41 PM (IST) Apr 01
ಬಿಗ್ ಬಾಸ್ ವಿಜೇತ ಪ್ರಥಮ್ ಅವರ 'ಫಸ್ಟ್ ನೈಟ್ ವಿತ್ ದೆವ್ವ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದೇ ವೇಳೆ ನಟ ಶ್ರೀನಿವಾಸಮೂರ್ತಿ ಪ್ರಥಮ್ ಅಪ್ಪನಾಗುತ್ತಿರುವ ಸುದ್ದಿ ಬಹಿರಂಗಪಡಿಸಿದ್ದಾರೆ. ಪ್ರಚಾರದಿಂದ ದೂರವಿರುವ ಪ್ರಥಮ್, ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ
04:30 PM (IST) Apr 01
Nee Iralu Jotheyalli Kannada Serial: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ನೀ ಇರಲು ಜೊತೆಯಲ್ಲಿ ಧಾರಾವಾಹಿಯಲ್ಲಿ ನಾಯಕಿ ಬದಲಾವಣೆ ಆಗಿದೆ ಎನ್ನಲಾಗಿದೆ. ಹೌದು, ಹೊಸ ನಟಿಯ ಆಗಮನ ಆಗಿದೆಯಂತೆ. ಹಾಗಾದರೆ ಯಾರದು?
04:23 PM (IST) Apr 01
ಮೈಸೂರು ಲ್ಯಾಂಪ್ಸ್ ಪ್ರದೇಶದಲ್ಲಿ ಕನ್‌ವೆನ್‌ಷನ್ ಸೆಂಟರ್ ನಿರ್ಮಾಣಕ್ಕಾಗಿ ನಗರ ತನ್ನ ಪ್ರಮುಖ ಅರಣ್ಯಪ್ರದೇಶವನ್ನೇ ಕಳೆದುಕೊಳ್ಳುವ ಸಾಧ್ಯತೆಯ ಕುರಿತು ಪ್ರತಿಭಟನೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.
02:17 PM (IST) Apr 01
Sam Sameer Girlfriend Name: ಕನ್ನಡದಲ್ಲಿ Vlog ಮಾಡಿ ಗಮನಸೆಳೆದ ಸ್ಯಾಮ್ ಸಮೀರ್ ಈಗ ಮದುವೆಯಾಗಲು ರೆಡಿ ಆಗಿದ್ದಾರೆ. ಹುಡುಗಿ ಫಿಕ್ಸ್ ಮಾಡುವ ಶಾಸ್ತ್ರದ ವಿಡಿಯೋವನ್ನು ಕೂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಹಾಗಾದರೆ ಆ ಹುಡುಗಿ ಯಾರು?
01:40 PM (IST) Apr 01
Jodi No 1 Season 3 Show: ಜೀ ಕನ್ನಡ ವಾಹಿನಿಯಲ್ಲಿ ಜೋಡಿ ನಂ 1 ಶೋ ಶುರುವಾಗಲಿದೆ. ಹಿರಿತೆರೆ, ಕಿರುತೆರೆಯಲ್ಲಿ ಮಿಂಚಿರುವ ರಿಯಲ್ ಜೋಡಿಗಳು ತೆರೆಯ ಹಿಂದೆ ಹೇಗೆ ಇರ್ತಾರೆ, ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡ್ಕೊಂಡಿದ್ದಾರೆ ಎಂಬುದನ್ನು ಜನರಿಗೆ ಈ ರಿಯಾಲಿಟಿ ಶೋ ಮೂಲಕ ಜನರ ಮುಂದಿಡಲಿದೆ.
01:32 PM (IST) Apr 01
01:19 PM (IST) Apr 01
ಕನ್ನಡ ಮಾತ್ರ ಬಲ್ಲ ತರಕಾರಿ ವ್ಯಾಪಾರಿ ಅಜ್ಜಿಯೊಬ್ಬರು, ಭಾಷೆ ಬಾರದ ಗ್ರಾಹಕರೊಂದಿಗೆ ವ್ಯಾಪಾರ ಮಾಡುವ ವಿಡಿಯೋ ವೈರಲ್ ಆಗಿದೆ. ಅಜ್ಜಿಯ ಈ ಜಾಣ್ಮೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
01:13 PM (IST) Apr 01
ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಡಾ.ಶಿವಕುಮಾರ ಸ್ವಾಮಿಗಳ ಜಯಂತೋತ್ಸವದಲ್ಲಿ ಆಸನ ವ್ಯವಸ್ಥೆಯ ಶಿಷ್ಟಾಚಾರವು ದೊಡ್ಡ ಗೊಂದಲಕ್ಕೆ ಕಾರಣವಾಯಿತು. ರಾಷ್ಟ್ರಪತಿಗಳ ಭದ್ರತಾ ಸಿಬ್ಬಂದಿಗೆ ಕೇಂದ್ರ ಸಚಿವರ ಮನವಿ ಬಳಿಕವೂ ಮಠದ ಸಿದ್ದಲಿಂಗ ಶ್ರೀಗಳ ಆಸನದ ಕೊನೆಯಲ್ಲಿ ಕುಳಿತುಕೊಳ್ಳಬೇಕಾಯಿತು.
12:57 PM (IST) Apr 01
ನಟ, ಸಂಗೀತ ನಿರ್ದೇಶಕ ಹಾಗೂ ಗಾಯಕ ಚಂದನ್ ಶೆಟ್ಟಿ ನಟನೆಯ ʻಎಲ್ರ ಕಾಲೆಳಿಯತ್ತೆ ಕಾಲʼ ಚಿತ್ರವು ಇದೇ ತಿಂಗಳು, ಅಂದರೆ 17 ಏಪ್ರಿಲ್ 2026ರಂದು ಬಿಡುಗಡೆ ಆಗಲಿದೆ. ನಟ ಸುಜಯ್ ಶಾಸ್ತ್ರಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಮೇಲೆ ಸ್ವತಃ ಚಂದನ್ ಶೇಟ್ಟಿ ಹಾಗೂ ಅವರ ಅಭಿಮಾನಿಗಳು ಬಹಳಷ್ಟು ಭರವಸೆ ಇಟ್ಟಿದ್ದಾರೆ.
11:59 AM (IST) Apr 01
11:38 AM (IST) Apr 01
ಕೋಲಾರದ ಬೇತಮಂಗಲದಲ್ಲಿ 116ನೇ ವರ್ಷದ ಐತಿಹಾಸಿಕ ಒನಕೆ ಕರಗವು ಸಡಗರದಿಂದ ಜರುಗಿತು. ಇದರೊಂದಿಗೆ, ದಾವಣಗೆರೆಯ ಹೆಮ್ಮನಬೇತೂರಿನಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ಮತ್ತು ವೇಮಗಲ್‌ನಲ್ಲಿ ದೊಡ್ಡ ದ್ಯಾವರ ಜಾತ್ರೆಯು ಭಕ್ತಿಭಾವದಿಂದ ನೆರವೇರಿತು.
11:19 AM (IST) Apr 01
ಜೈಪುರ: ಭಾರತೀಯ ಕ್ರಿಕೆಟ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ರಾಜಸ್ಥಾನ ರಾಯಲ್ಸ್ ತಂಡದ ಡೈರೆಕ್ಟರ್ ಝುಬಿನ್ ಬರೂಚಾ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್ ಹರಾಜಿನಲ್ಲಿ ವೈಭವ್ ಖರೀದಿಸಲು ರಾಜಸ್ಥಾನ ಫ್ರಾಂಚೈಸಿ ಬರೋಬ್ಬರಿ 10 ಕೋಟಿ ರೂಪಾಯಿ ವರೆಗೆ ಮೀಸಲಿಟ್ಟಿತ್ತು ಎಂದಿದ್ದಾರೆ.
11:07 AM (IST) Apr 01
ಹಿರಿಯ ಕಲಾವಿದ ರಾಜು ತಾಳಿಕೋಟಿ ಅವರ ಪುತ್ರ ಭರತ್, ತಮ್ಮ ನಾಟಕ ಕಂಪನಿ ಬಾದಾಮಿ ಜಾತ್ರೆಯಲ್ಲಿ 30 ದಿನಗಳಲ್ಲಿ 1 ಕೋಟಿ ರೂ.ಗೂ ಹೆಚ್ಚು ಗಳಿಸಿದೆ ಎಂದು ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ, ಸಿನಿಮಾ-ಸೀರಿಯಲ್‌ಗಳಿಗಿಂತ ರಂಗಭೂಮಿಯಲ್ಲಿ ಹೆಚ್ಚು ಸಂಭಾವನೆ ಇದೆ ಎಂದಿದ್ದಾರೆ.
10:57 AM (IST) Apr 01
ಕಳೆದ ಐದು ವರ್ಷಗಳಲ್ಲಿ ರಾಜ್ಯಾದ್ಯಂತ 468 ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ಬೆಂಗಳೂರು ನಗರ ಅತಿ ಹೆಚ್ಚು ಪ್ರಕರಣಗಳನ್ನು ಕಂಡಿದೆ. ಈ ಕರೆಗಳು ಸಾರ್ವಜನಿಕರಲ್ಲಿ ಮತ್ತು ಪೊಲೀಸರಲ್ಲಿ ತೀವ್ರ ಆತಂಕ ಸೃಷ್ಟಿಸಿದರೂ, ಬೆರಳೆಣಿಕೆಯಷ್ಟು ಆರೋಪಿಗಳನ್ನು ಮಾತ್ರ ಬಂಧಿಸಿ ಶಿಕ್ಷೆಗೆ ಗುರಿಪಡಿಸಲಾಗಿದೆ
10:48 AM (IST) Apr 01
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ನಂದಗೋಕುಲ ಧಾರಾವಾಹಿಯಲ್ಲಿ ಮಾಧವನ ಪಾತ್ರದಲ್ಲಿ ನಟಿಸುತ್ತಿದ್ದ ವಿಜಯ್ ಚಂದ್ರ ಅವರು ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಇದಕ್ಕೆ ಕಾರಣ ಏನು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
10:42 AM (IST) Apr 01
ಪ್ರಪಂಚದಲ್ಲಿ ಎಲ್ಲಿಯೇ ಯುದ್ಧ ಶುರುವಾದರೂ ಶಸ್ತ್ರಾಸ್ತ್ರ, ಆಹಾರ, ಔಷಧಿಗಳ ಜೊತೆಗೆ ಕೆಲವು ಸಾಮಾನ್ಯ ವಸ್ತುಗಳಿಗೂ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಈ ಪಟ್ಟಿಯಲ್ಲಿ ಕಾಂಡೋಮ್‌ಗಳೂ ಇವೆ. ಅಂದಹಾಗೆ, ಯುದ್ಧದ ಸಮಯದಲ್ಲಿ ಇವುಗಳಿಗೆ ಯಾಕೆ ಬೇಡಿಕೆ ಹೆಚ್ಚಾಗುತ್ತೆ ಎಂಬುದರ ಮಾಹಿತಿ ಇಲ್ಲಿದೆ.
10:34 AM (IST) Apr 01
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತೆರಿಗೆ ಭಯೋತ್ಪಾದನೆ ಶುರುವಾಗಿದ್ದು, ₹60000 ಕೋಟಿ ಹೊಸ ತೆರಿಗೆ ವಿಧಿಸಲಾಗಿದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಉಪ ಚುನಾವಣೆ ಬಳಿಕ ಕಾಂಗ್ರೆಸ್‌ನ ಅಧಃಪತನ ಆರಂಭವಾಗಲಿದೆ
10:11 AM (IST) Apr 01
ಬಿಬಿಎಂಪಿ ಪ್ರತಿಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು, ವಿಧಾನಸೌಧ, ವಿಕಾಸಸೌಧ, ರಾಜಭವನ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡಗಳು ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿವೆ ಎಂದು ಆರೋಪಿಸಿದ್ದಾರೆ. ಈ
09:32 AM (IST) Apr 01
ಪೊಲೀಸರು ನೋಟಿಸ್ ಅಥವಾ ಎಫ್‌ಐಆರ್ ಪ್ರತಿಯನ್ನು ವಾಟ್ಸ್ಆ್ಯಪ್ ಅಥವಾ ಇತರೆ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ನೀಡುವಂತಿಲ್ಲ, ಬದಲಾಗಿ ಭೌತಿಕವಾಗಿಯೇ ನೀಡಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದರೆ ಈ ಕೇಳಗಿನ ಸಂದರ್ಭದಲ್ಲಿ ಆರೋಪಿಗೆ ವಾಟ್ಸಪ್ ನೋಟಿಸ್ ನೀಡಬಹುದು ಎಂದಿದೆ.
09:32 AM (IST) Apr 01
ಚಿನ್ನದ ಬೆಲೆ ಏರಿಕೆಯಿಂದಾಗಿ ಐತಿಹಾಸಿಕ ನಾಣ್ಯಗಳ ಮೇಲೆ ಆಸಕ್ತಿ ಬೆಳೆಸಿಕೊಂಡ ಲೇಖಕರು, ಆನ್‌ಲೈನ್ ಹರಾಜಿನಲ್ಲಿ ವಿಜಯನಗರ ಸಾಮ್ರಾಜ್ಯದ ಅಪರೂಪದ ನಾಣ್ಯಗಳನ್ನು ಹುಡುಕಲು ಆರಂಭಿಸುತ್ತಾರೆ.
09:12 AM (IST) Apr 01
08:57 AM (IST) Apr 01
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿ ಮಹೋತ್ಸವವನ್ನು ವೈಭವೋಪೇತವಾಗಿ ಆಚರಿಸಲಾಗುತ್ತಿದೆ. ಈ ಗುರುವಂದನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದು, ಲಕ್ಷಾಂತರ ಭಕ್ತರಿಗಾಗಿ ದಾಸೋಹದ ವ್ಯವಸ್ಥೆ ಮಾಡಲಾಗಿದೆ.
08:53 AM (IST) Apr 01
ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್‌ನ ರಿಜಿಸ್ಟ್ರಾರ್ ಮಲ್ಲು ಎಂಬಾತ ತನ್ನದೇ ಕಚೇರಿಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಸಂತ್ರಸ್ತೆ ದೂರಿನ ಅನ್ವಯ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ಅಧಿಕಾರಿಯು ತಲೆಮರೆಸಿಕೊಂಡಿದ್ದಾನೆ.
07:57 AM (IST) Apr 01
ಶಿವಮೊಗ್ಗದಲ್ಲಿ ಇತ್ತೀಚೆಗೆ ಕೊಲೆಯಾಗಿದ್ದ ಬಾಲಕ ಸಂಕೇತ್ ಸಮಾಧಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಪ್ರತಿ ಬುಧವಾರ ಪೂಜೆ ಸಲ್ಲಿಸುತ್ತಿದ್ದ ಕುಟುಂಬಸ್ಥರು, ಮಗನ ಸಮಾಧಿ ಧ್ವಂಸಗೊಂಡಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
07:51 AM (IST) Apr 01