ದಾವಣಗೆರೆ: ಕಾರು ನಿಯಂತ್ರಣ ತಪ್ಪಿ, ರಸ್ತೆ ಬದಿಯ ಬೇವಿನ ಮರಕ್ಕೆ ಡಿಕ್ಕಿ ಹೊಡೆದು ಪೊಲೀಸ್ ಇನ್‌ಸ್ಪೆಕ್ಟರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ಚಿತ್ರದುರ್ಗ-ಜಗಳೂರು ತಾಲೂಕುಗಳ ಗಡಿ ಗ್ರಾಮ ಕಡಬನಕಟ್ಟೆ ಬಳಿ ಸಂಭವಿಸಿದೆ. ಪೊಲೀಸ್ ಇನ್‌ಸ್ಪೆಕ್ಟರ್ ರಘುನಾಥ ಮೃತರು. ಚಿತ್ರದುರ್ಗ ಜಿಲ್ಲೆ ಆಯಿಕಲ್ ಗ್ರಾಮದಲ್ಲಿದ್ದ ತಮ್ಮ ಪತ್ನಿ ತವರು ಮನಗೆ ಮೂರು ದಿನ ರಜೆ ಹಾಕಿ, ರಘುನಾಥ ಬಂದಿದ್ದರು. ಬುಧವಾರ ಮಧ್ಯಾಹ್ನ ಕಾರಿನಲ್ಲಿ ಹೊಸಪೇಟೆ ಕಡೆ ಹೊರಟಿದ್ದಾಗ ಚಿತ್ರದುರ್ಗ-ಜಗಳೂರು ಗಡಿ ಗ್ರಾಮವಾದ ಕಡಬನಕಟ್ಟೆ ಬಳಿ ರಸ್ತೆ ಬದಿಯ ಬೇವಿನ ಮರಕ್ಕೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

09:42 PM (IST) Apr 16
ಅನೇಕ ಶಾಸಕರು ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದಾರೆ. ಎರಡೂವರೆ ವರ್ಷ ಆಗಿರುವುದರಿಂದ ಸಂಪುಟ ಪುನಾರಚನೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ಶಾಸಕರು ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
08:51 PM (IST) Apr 16
ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಎರಡೂವರೆ ವರ್ಷದ ಮಗುವೊಂದು ಹಾವಿನ ಕಡಿತಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಸಾಗರ ಪಟ್ಟಣದ ಎಸ್‌ಎನ್ ನಗರದಲ್ಲಿ ನಡೆದಿದೆ. ಭವೀನ್ (2.5) ಮೃತಪಟ್ಟ ಬಾಲಕ.
08:31 PM (IST) Apr 16
ಬದಲಾವಣೆಯಾಗಲು ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಮಾನವೀಯತೆ ಗುಣಗಳು ನಮ್ಮಲ್ಲಿ ಇಲ್ಲದಿದ್ದರೆ ಅದು ಜೀವನದ ಶಿಕ್ಷಣವಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
08:03 PM (IST) Apr 16
07:23 PM (IST) Apr 16
06:50 PM (IST) Apr 16
06:29 PM (IST) Apr 16
ಕುಮಾರಸ್ವಾಮಿಯವರು ಮತ್ತೆ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕೆಂದು ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರು ಬೇಡಿಕೆ ಇಟ್ಟಿದ್ದಾರೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
06:20 PM (IST) Apr 16
Bhadra Wildlife Sanctuary tiger sighting: ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ದೈತ್ಯಾಕಾರದ ಹುಲಿಯ ದರ್ಶನವಾಗಿದೆ. ಕೆಮ್ಮಣ್ಣುಗುಂಡಿಯ ಹೆಬ್ಬೆ ಫಾಲ್ಸ್ ರಸ್ತೆಯಲ್ಲಿ ನಿರ್ಭೀತಿಯಿಂದ ಓಡಾಡುತ್ತಿದ್ದ ಹುಲಿ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.
06:15 PM (IST) Apr 16
ಸಂಪುಟ ಪುನಾರಚನೆಯಾಗಿ ಈಗ ಮೂರು ವರ್ಷಗಳಾಗುತ್ತಿದ್ದು, ಶಾಸಕರು ಸಚಿವ ಸ್ಥಾನ ಕೇಳುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
06:03 PM (IST) Apr 16
ಚಾಮರಾಜನಗರದ ಮೂಡಲ ಅಗ್ರಹಾರದ ಮಹದೇವ ಕುಡಿತದ ದಾಸನಾಗಿದ್ದ. ಎರಡು ತಿಂಗಳ ಹಿಂದೆ ಕುಡಿದ ಅಮಲಿನಲ್ಲಿ ತನ್ನ ಪತ್ನಿ ಸುಮತಿಗೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದ. ಸುಟ್ಟಗಾಯಗಳಿಂದ ಸುಮತಿ ಮೃತಪಟ್ಟಿದ್ದಳು.
06:00 PM (IST) Apr 16
Curry Leaves Plant: ಕರಿಬೇವಿನ ಗಿಡ ಸೊಂಪಾಗಿ, ದಟ್ಟವಾಗಿ ಬೆಳೆಯಲು ಸಹಾಯ ಮಾಡುವ 5 ಪ್ರಮುಖ ರಹಸ್ಯ ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ. ನೈಸರ್ಗಿಕ ಗೊಬ್ಬರಗಳು ಮತ್ತು ಸರಿಯಾದ ಆರೈಕೆಯ ವಿಧಾನಗಳು ಇಲ್ಲಿವೆ.
05:52 PM (IST) Apr 16
ಮುಂದಿನ ಲೋಕಸಭೆ ಚುನಾವಣೆಯೊಳಗೆ ಜನಗಣತಿ ಮುಗಿಯುವುದು ಕಷ್ಟವಾಗುತ್ತಿರುವ ಕಾರಣ ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ ಅಭಿಯಾನ ಕಾನೂನಾಗಲಿದೆ ಎಂದು ಮಾಳವಿಕಾ ಅವಿನಾಶ್ ತಿಳಿಸಿದರು.
05:52 PM (IST) Apr 16
05:49 PM (IST) Apr 16
ವರದಿ: ಶಿವಾನಂದ ಗೊಂಬಿ
ಬರೋಬ್ಬರಿ 10 ವರ್ಷಗಳ ಬಳಿಕಯೋಗೇಶಗೌಡ ಹತ್ಯೆ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿ ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ನಡೆದ ಈ ಕೊಲೆಯು ಸಿಬಿಐ ತನಿಖೆಯಿಂದಾಗಿ ತಾರ್ಕಿಕ ಅಂತ್ಯ ಕಂಡಿದೆ.
05:37 PM (IST) Apr 16
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಾಡುತ್ತದೆ. ಯಾಕಂದ್ರೆ, ಅವರು ಹಗಲಿನಲ್ಲಿ ನಿದ್ದೆ ಮಾಡುವುದರಿಂದ ಅಥವಾ ಮನೆಯೊಳಗೆ ಹೆಚ್ಚು ಸಮಯ ಕಳೆಯುವುದರಿಂದ ಸೂರ್ಯನ ಬೆಳಕಿಗೆ ಮೈಯೊಡ್ಡುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
05:36 PM (IST) Apr 16
Personality Test: ನಾವು ಮಾಡುವ ಕೆಲಸಗಳು, ಕೂರುವ ರೀತಿ ನಮ್ಮ ವ್ಯಕ್ತಿತ್ವವನ್ನು ಹೇಳಬಲ್ಲದು. ಇಲ್ಲಿ ನಾವು ಕಾಲು ಕ್ರಾಸ್ ಮಾಡಿ ಕೂರುವವರ ವ್ಯಕ್ತಿತ್ವ ಹೇಗಿರುತ್ತೆ ಅಂತ ತಿಳಿಯೋಣ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
05:20 PM (IST) Apr 16
ರಾತ್ರಿ ಹೊತ್ತು ತಡವಾಗಿ ಊಟ ಮಾಡುವುದು ಮತ್ತು ಸಮಯಕ್ಕೆ ಸರಿಯಾಗಿ ತಿನ್ನದೇ ಇರುವುದು ನಿಮ್ಮ ಲಿವರ್ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಇದರಿಂದ 'ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್' ಕಾಯಿಲೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
04:58 PM (IST) Apr 16
Actor Govinda News: ಬಾಲಿವುಡ್ ನಟ ಗೋವಿಂದ ಮತ್ತು ಅವರ ಅಳಿಯ ಕೃಷ್ಣ ಅಭಿಷೇಕ್ ಕುಟುಂಬದ ನಡುವಿನ ಮುನಿಸು ಕೊನೆಗೂ ಮುಗಿದಿದೆ. ತಮ್ಮ ಅತ್ತೆ ಸುನೀತಾ ಜೊತೆ ಕಾಣಿಸಿಕೊಂಡ ಕೃಷ್ಣ ಮತ್ತು ಪತ್ನಿ ಕಾಶ್ಮೀರಾ, ನಮ್ಮ ವನವಾಸ ಮುಗಿಯಿತು ಎಂದು ಹೇಳಿದ್ದಾರೆ.
04:56 PM (IST) Apr 16
ಅನೇಕರಿಗೆ ಹುಣಸೇಹಣ್ಣಿನಿಂದ ಕೇವಲ ಸಾಂಬಾರ್ ಮಾಡುವುದು ಮಾತ್ರ ತಿಳಿದಿದೆ. ಆದರೆ, ಅತ್ಯಂತ ಸರಳವಾಗಿ ಮತ್ತು ಬೇಗನೆ ಮಾಡಬಹುದಾದ 'ಹುಣಸೇಹುಳಿ' (ಒಂದು ರೀತಿಯ ರಸಂ ರೆಸಿಪಿ) ರುಚಿಯೇ ಬೇರೆ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ. ಇದು ಅರ್ಜೆಂಟ್ ಅಡುಗೆ ಮಾತ್ರವಲ್ಲ, ವಾರಗಟ್ಟಲೆ ಉಪಯೋಗಿಸಬಹುದು.
04:52 PM (IST) Apr 16
04:42 PM (IST) Apr 16
ಕರಾವಳಿ ಕನ್ನಡದ ಸೊಗಡಿನ ಭಾಷೆಯೊಂದಿಗೆ, ಹೊಸತನದ ಕಥಾವಸ್ತುವಿನೊಂದಿಗೆ, ವಿಭಿನ್ನ ನಿರೂಪಣೆ ಹೊಂದಿರುವ ವಿವಿಎಂ ಕನ್ನಡ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಏಪ್ರಿಲ್ 18ರಿಂದ ಪ್ರಾರಂಭಗೊಂಡು ಏಪ್ರಿಲ್ 30ಕ್ಕೆ ಪೂರ್ಣಗೊಳ್ಳಲಿದೆ.
04:24 PM (IST) Apr 16
Youtuber Varun Aradya: ಇತ್ತೀಚೆಗೆ ಯುಟ್ಯೂಬರ್ ಸ್ಯಾಮ್ ಸಮೀರ್ ಅವರು ಹುಡುಗಿ ಫಿಕ್ಸ್ ಎಂದು ಫೋಟೋ, ವಿಡಿಯೋಗಳನ್ನು ಹಂಚಿಕೊಂಡರು. ಈಗ ಬೃಂದಾವನ ಧಾರಾವಾಹಿ ನಟ, ಯುಟ್ಯೂಬರ್ ವರುಣ್ ಆರಾಧ್ಯ ಅವರು ಕೂಡ ಹುಡುಗಿ ಇರೋದನ್ನು ಅಧಿಕೃತಪಡಿಸಿದ್ದಾರೆ.
04:23 PM (IST) Apr 16
‘ರಾಮಾಯಣ 1’ ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿರುವಂತೆ ಯಶ್ ಸಿನಿಮಾದ ಬಗ್ಗೆ ಒಂದೊಂದೇ ಗುಟ್ಟು ಬಿಟ್ಟುಕೊಡಲು ಶುರು ಮಾಡಿದ್ದಾರೆ. ಅವರು ಅಮೆರಿಕಾದ ಲಾಸ್ ವೇಗಾಸ್‌ನ ಸಿನಿಮಾಕಾನ್ 2026ನಲ್ಲಿ ಕಾಣಿಸಿಕೊಂಡಿದ್ದಾರೆ.
04:12 PM (IST) Apr 16
03:47 PM (IST) Apr 16
ನಮ್ಮ ಅಡುಗೆಮನೆಯಲ್ಲಿ ಟೊಮ್ಯಾಟೋ (Tomato) ಇಲ್ಲದ ಅಡುಗೆಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅದು ಸಾಂಬಾರ್ ಇರಲಿ, ರಸಂ ಇರಲಿ ಅಥವಾ ಸಲಾಡ್ ಇರಲಿ, ಟೊಮ್ಯಾಟೋ ಇರಲೇಬೇಕು. ಆದರೆ, ದಿನವೂ ಅದೇ ಸಾಂಬಾರ್, ರಸಂ ತಿಂದು ಬೇಸರವಾಗಿದೆಯೇ? ಹಾಗಿದ್ದರೆ ಹೀಗೆ ಮಾಡಿ..
03:34 PM (IST) Apr 16
03:25 PM (IST) Apr 16
Anupama Gowda Weight Loss: ಕನ್ನಡದ ಧಾರಾವಾಹಿಗಳಲ್ಲಿ ನಟಿಸಿ, ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡುತ್ತಿರುವ ಅನುಪಮಾ ಗೌಡ ಅವರು ಇಂದು ಬಳುಕುವ ಬಳ್ಳಿಯ ಥರ ಕಾಣುತ್ತಿದ್ದಾರೆ. ಆದರೆ ಈ ಹಿಂದೆ ಅವರು ದಪ್ಪಗಿದ್ದರಂತೆ, ಹೇಗೆ ಸಣ್ಣಗಾದೆ ಎಂದು ಹೇಳಿಕೊಂಡಿದ್ದಾರೆ.
03:15 PM (IST) Apr 16
Delhi High Court : ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸೈನಿಕನ ಸ್ಪರ್ಮ್ ತೆಗೆದು ಪತ್ನಿಯ ಆಸೆಯಂತೆ ಐವಿಎಫ್ ಚಿಕಿತ್ಸೆ ಮುಂದುವರೆಸಲು ಒಪ್ಪಿಗೆ ನೀಡಿದೆ. ಅಷ್ಟಕ್ಕೂ ಏನು ಈ ಪ್ರಕರಣ? ವಿವರ ಇಲ್ಲಿದೆ.
03:13 PM (IST) Apr 16
02:17 PM (IST) Apr 16
Hindu culture: ಗಂಡ ತೀರಿಕೊಂಡ ಮೇಲೆ ಮಹಿಳೆಯರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಅದರಲ್ಲೂ ತಲೆಗೆ ಹೂವು ಮುಡಿಯುವುದನ್ನು ನಿಲ್ಲಿಸಿಬಿಡುತ್ತಾರೆ. ಈ ನಂಬಿಕೆ ಸರಿಯೇ? ನಿಜವಾಗಿಯೂ ಹೂವು ಮುಡಿಯಬಾರದಾ?
01:57 PM (IST) Apr 16
"ಯಾರ ದೃಷ್ಟಿಯೂ ಬೀಳದಿರಲಿ, ನಮ್ಮ ನೆಚ್ಚಿನ ನಟಿ ದೇವಲೋಕದ ಅಪ್ಸರೆಯಂತೆ ಕಾಣುತ್ತಿದ್ದಾರೆ" ಎಂದು ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಹಾರ್ಟ್ ಎಮೋಜಿಗಳ ಸುರಿಮಳೆಗೈಯುತ್ತಿದ್ದಾರೆ. ರಚಿತಾ ಅವರ ಈ ಹೊಸ ಲುಕ್ ಸ್ಯಾಂಡಲ್‌ವುಡ್‌ನ ಗ್ಲಾಮರ್ ಅಖಾಡದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
01:34 PM (IST) Apr 16
ಸಂವಿಧಾನದ 131ನೇ ತಿದ್ದುಪಡಿ ಮಸೂದೆಯು ಸಂಯುಕ್ತ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರೋಧ. ದಕ್ಷಿಣ ಭಾರತದ ಮೇಲೆ ಹಿಡಿತ ಸಾಧಿಸುವುದು ಮತ್ತು ಶಾಸಕಾಂಗದಲ್ಲಿ ಒಬಿಸಿಗಳ ಪ್ರಾತಿನಿಧ್ಯ ಇಲ್ಲವಾಗಿಸುವುದೇ ಈ ಮಸೂದೆಯ ಮುಖ್ಯ ಗುರಿ ಎಂದು ಅವರು ಆರೋಪಿಸಿದ್ದಾರೆ.
01:31 PM (IST) Apr 16
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟಿ ಹೆಚ್.ಎಸ್. ನಾಗರಾಜ ಅವರು, ವಚನಾನಂದ ಶ್ರೀಗಳು ಮಾಜಿ ಸಚಿವ ಮುರುಗೇಶ ನಿರಾಣಿಯಿಂದ 2 ಕೋಟಿ ರೂ. ಪಡೆದು ದುರ್ಬಳಕೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಶ್ರೀಗಳು ಮಠದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿರುವ ಆರೋಪ.
01:23 PM (IST) Apr 16
ಗಿಚ್ಚಿಗಿಲಿಗಿಲಿ ರಿಯಾಲಿಟಿ ಷೋನಲ್ಲಿ, ಬಿಗ್ಬಾಸ್ ಖ್ಯಾತಿಯ ಕಾವ್ಯಾ ಶೈವಗೆ 'ಗಿಲ್ಲಿ ನಟ'ನನ್ನು ಮದುವೆಯಾಗುತ್ತೀರಾ ಎಂದು ಪುಟಾಣಿ ಬಾಲಕಿಯೊಬ್ಬಳು ಕೇಳಿದ್ದು ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಾಸ್ಯದ ಹೆಸರಿನಲ್ಲಿ ಮಕ್ಕಳ ಬಾಯಲ್ಲಿ ಇಂಥ ವಿಷ್ಯ ಹೇಳಿಸುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದೆ.
01:17 PM (IST) Apr 16
12:57 PM (IST) Apr 16
12:56 PM (IST) Apr 16
Bigg Boss Dhanushree: ಬಿಗ್ ಬಾಸ್ ಕನ್ನಡ ಸೀಸನ್ 8 ಖ್ಯಾತಿಯ ಧನುಶ್ರೀ ಅವರ ಶಾಪ್‌ನಲ್ಲಿ ಕಳ್ಳತನ ಆಗಿದೆ. ಮಂತ್ರಿ ಮಾಲ್‌ನಲ್ಲಿ ಅವರು ನೇಲ್ ಶಾಪ್ ಹಾಕಿದ್ದರು. ಒಟ್ಟೂ 80000 ರೂಪಾಯಿ ಮೌಲ್ಯದ ವಸ್ತು ಕಳ್ಳತನ ಆಗಿದೆ. ಪೊಲೀಸರಿಗೆ ದೂರು ಕೊಟ್ಟಿದ್ದೇವೆ ಎಂದು ಧನುಶ್ರೀ ಹೇಳಿದ್ದರು.
12:52 PM (IST) Apr 16
'ಪ್ರೇಮಬರಹ ಸಿನಿಮಾದಿಂದ ಅವ್ರ ನಡುವೆ ವೈಮನಸ್ಸು ಮೂಡಿದೆ ಅನ್ನೋದು ಗೊತ್ತಿಲ್ಲ.. ನಾನು ದರ್ಶನ್ ಸರ್ ಅವ್ರ ಒಂದು ರೂಪಾಯಿ ಖರ್ಚ್ ಮಾಡಿಲ್ಲ.. ನಾನು ಹಣ ದುರ್ಬಳಕೆ ಮಾಡಿದ್ದೀನಿ ಅಂತ ದರ್ಶನ್ ಸರ್ ಹೇಳಿಲ್ಲ.. ಯಾರ್ಯಾರೋ ಅಂತಹ ಸುಳ್ಳು ಸುದ್ದಿ ಹರಡಿಸಿದ್ರು..' ಎಂದಿರುವ ಮಲ್ಲಿಕಾರ್ಜುನ್ ಇನ್ನೂ ಏನಂದ್ರು ನೋಡಿ..
12:31 PM (IST) Apr 16
ಮನೆಯ ಸುತ್ತಮುತ್ತ ಹಾವುಗಳು ಬರದಂತೆ ತಡೆಯಲು ಮನೆಯಲ್ಲೇ ಔಷಧ ತಯಾರಿಸಬಹುದು. ಈ ಮಿಶ್ರಣವನ್ನು ಮನೆಯ ಸುತ್ತ ಸಿಂಪಡಿಸಿದರೆ, ಅದರ ಕಡು ವಾಸನೆಗೆ ಹಾವುಗಳು ಮನೆಯ ಹತ್ತಿರ ಸುಳಿಯುವುದಿಲ್ಲ. ಗ್ರಾಮೀಣ ಭಾಗದಲ್ಲಿ ಈ ಉಪಾಯವನ್ನು ಹೆಚ್ಚಾಗಿ ಬಳಸಲಾಗುತ್ತದೆ.
11:55 AM (IST) Apr 16