Published : Mar 15, 2026, 06:43 AM ISTUpdated : Mar 15, 2026, 11:45 PM IST

Karnataka News Live: ಮಂಡ್ಯ ಜಿಲ್ಲೆಗೆ ಕೈಗಾರಿಕೆಯಲ್ಲಿ ಶಾಶ್ವತ ಕೊಡುಗೆ ನೀಡುವೆ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಸಾರಾಂಶ

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಲೋಟ್ ವಾಚನ್ನು ಧರಿಸಿ ಭಾರಿ ಸುದ್ದಿಯಾಗಿದ್ದರು. ಇದೀಗ ಇಂಥಹ ಸುದ್ದಿಯಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಸಿಲುಕಿದ್ದು, ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಇತ್ತೀಚೆಗೆ ಹಿರೇಬಗನಾಳ ಗ್ರಾಮಕ್ಕೆ ಆಗಮಿಸಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿರೊಂದಿಗೆ ಸುತ್ತಾಡುವಾಗ ಹಿಟ್ನಾಳ ₹18 ಲಕ್ಷ ಮೌಲ್ಯದ ಹುಬ್ಲೋಟ್ ವಾಚ್‌ ಕಟ್ಟಿಕೊಂಡಿದ್ದರು. ಆ ಫೋಟೋ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಶಾಸಕರು ಶನಿವಾರದ ಕಾರ್ಯಕ್ರಮಕ್ಕೆ ಹುಬ್ಲೋಟ್ ಬದಲು ಬೇರೆಯ ವಾಚ್‌ ಕಟ್ಟಿಕೊಂಡಿದ್ದಾರೆ. 

ಮಾಧ್ಯಮದವರು ಕೇಳಿದ್ದಕ್ಕೆ ‘ಯಾಕೆ ಅಂಥ ದುಬಾರಿ ವಾಚ್ ಕಟ್ಟಬಾರದೆ? ಅದು ನನ್ನ ಸಹೋದರನ ವಾಚ್, ಎರಡು ದಿನ ಕಟ್ಟಿಕೊಳ್ಳಲು ಕೊಟ್ಟಿದ್ದರು’ ಎಂದು ಶಾಸಕರು ಸಮರ್ಥಿಸಿಕೊಂಡಿದ್ದಾರೆ.

11:45 PM (IST) Mar 15

ಮಂಡ್ಯ ಜಿಲ್ಲೆಗೆ ಕೈಗಾರಿಕೆಯಲ್ಲಿ ಶಾಶ್ವತ ಕೊಡುಗೆ ನೀಡುವೆ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಆಟೋಮೋಟೀವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ವಾಹನಗಳ ಪರೀಕ್ಷೆ, ಪ್ರಮಾಣೀಕರಣ ಮತ್ತು ತಾಂತ್ರಿಕ ಸಂಶೋಧನೆಗಳನ್ನು ಇಲ್ಲಿಯೇ ನಡೆಸಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

Read Full Story

11:21 PM (IST) Mar 15

ಮಗನ ಮಾನಗೇಡಿ ಕೆಲಸಕ್ಕೆ ಇಡೀ ಕುಟುಂಬಕ್ಕೆ ಬಹಿಷ್ಕಾರ - ಮನನೊಂದು ನದಿಗೆ ಹಾರಿದ ತಾಯಿ

ಮಗ ಮಾಡಿದ ಅವಾಂತರಕ್ಕೆ ಇಲ್ಲಿ ತಾಯಿಯೊಬ್ಬರು ಪ್ರಾಣ ಬಿಟ್ಟಿದ್ದಾರೆ. ಮಗ ಅನೈತಿಕ ಸಂಬಂಧ ಹೊಂದಿರುವುದಕ್ಕೆ ಇಡೀ ಕುಟುಂಬಕ್ಕೆ ಬಹಿಷ್ಕಾರ ಹಾಕಿ ಕಿರುಕುಳ ನೀಡಿದ್ದರಿಂದ ಆ ಯುವಕನ ತಾಯಿ ಮನನೊಂದು ನದಿಗೆ ಹಾರಿ ಸಾವಿಗೆ ಶರಣಾಗಿದ್ದಾರೆ.

Read Full Story

10:37 PM (IST) Mar 15

ಬೀದರ್, ಬೆಳಗಾವಿಯಲ್ಲಿ ಭಾರಿ ಮಳೆ - ಶಿವಮೊಗ್ಗದಲ್ಲಿ ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಜೆ ವೇಳೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಶಿವಮೊಗ್ಗದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡರೆ, ಬೀದರ್ ಮತ್ತು ಬೆಳಗಾವಿಯಲ್ಲಿ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
Read Full Story

10:35 PM (IST) Mar 15

ಯುಗಾದಿ, ರಂಜಾನ್‌ ಹಬ್ಬದ ಹಿನ್ನೆಲೆ ಸಾಲುಸಾಲು ರಜೆ - ಕೆಎಸ್‌ಆರ್‌ಟಿಸಿಯಿಂದ 2 ಸಾವಿರ ಹೆಚ್ಚುವರಿ ಬಸ್‌ ಸಂಚಾರ

ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಕೆಎಸ್ಸಾರ್ಟಿಸಿ 2,000 ಹೆಚ್ಚುವರಿ ವಿಶೇಷ ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ. ಈ ಬಸ್‌ಗಳು ಮಾರ್ಚ್ 18 ರಿಂದ 20 ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ಹಾಗೂ ಹೊರರಾಜ್ಯಗಳಿಗೆ ಸಂಚರಿಸಲಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಮತ್ತು ರಿಯಾಯಿತಿ ಸೌಲಭ್ಯ ಲಭ್ಯವಿದೆ.
Read Full Story

10:24 PM (IST) Mar 15

ಯುಗಾದಿ ಸಂಭ್ರಮದಲ್ಲಿ ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ! ಬೆಂಗಳೂರು-ಮಂಗಳೂರು-ಗೋವಾ ಈ ದಿನದಂದು ವಿಶೇಷ ರೈಲು

ಯುಗಾದಿ ಹಬ್ಬದ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ಕರಾವಳಿ ಮಾರ್ಗವಾಗಿ ಗೋವಾದ ಮಡಗಾಂವ್‌ಗೆ ವಿಶೇಷ ರೈಲು ಸೇವೆಯನ್ನು ಘೋಷಿಸಿದೆ. ಈ ರೈಲು (06267/06268) ಮಾರ್ಚ್ 18 ಮತ್ತು 19 ರಂದು ಸಂಚರಿಸಲಿದ್ದು, ಮಂಗಳೂರು, ಉಡುಪಿ, ಕುಂದಾಪುರ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
Read Full Story

09:29 PM (IST) Mar 15

ಹೊನ್ನಾವರ - KSRTC ಬಸ್ - ಓಮ್ನಿ ನಡುವೆ ಭೀಕರ ಅಪಘಾತ - ಓಮ್ನಿ ಚಾಲಕ ಆಸ್ಪತ್ರೆಗೆ ಸಾಗಿಸುವಾಗ ಸಾವು

KSRTC bus accident Honnavar: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೆರಂಗಡಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಓಮ್ನಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓಮ್ನಿ ಚಾಲಕ ಮೃತಪಟ್ಟಿದ್ದಾರೆ. 

Read Full Story

09:19 PM (IST) Mar 15

ಬೆಂಗಳೂರಿನಲ್ಲಿ ಟೆಕ್ಕಿಯ ಕನಸಿನ ಉದ್ಯೋಗ, 1.5 ಲಕ್ಷ ರೂ ಸಂಬಳ, ಉಳಿತಾಯ ಮಾತ್ರ 15 ಸಾವಿರ, ಮಿಕ್ಕಿದೆಲ್ಲ ಇತರ ಖರ್ಚು!

ಬೆಂಗಳೂರಿನಲ್ಲಿ ತಿಂಗಳಿಗೆ ₹1.5 ಲಕ್ಷ ಸಂಬಳ ಪಡೆಯುವ ಯುವ ಸಾಫ್ಟ್‌ವೇರ್ ಡೆವಲಪರ್, ನಗರದ ದುಬಾರಿ ಜೀವನ ವೆಚ್ಚದಿಂದಾಗಿ ನಿರೀಕ್ಷಿತ ಉಳಿತಾಯ ಮಾಡಲು ವಿಫಲರಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಪೋಸ್ಟ್, ಹೆಚ್ಚಿನ ಸಂಬಳದ ಹೊರತಾಗಿಯೂ ಬಾಡಿಗೆ, ಆಹಾರ, ಮತ್ತು ಪ್ರಯಾಣದಂತಹ ಖರ್ಚುಗಳು ಹೇಗೆ ಆದಾಯವನ್ನು ಕಬಳಿಸುತ್ತವೆ ಎಂಬುದನ್ನು ವಿವರಿಸುತ್ತದೆ.  

Read Full Story

08:31 PM (IST) Mar 15

ಪತ್ನಿ ಅನಾರೋಗ್ಯ, ಮಾವ ಶಿವರಾಜ್‌ಕುಮಾರ್‌ ಬಗ್ಗೆ ಡಾ ದಿಲೀಪ್‌ ಹೇಳಿದ್ದೇನು? - ಫಸ್ಟ್‌ ಇಂಟರ್‌ವ್ಯೂ

Actor Shiva Rajkumar Son in Law Dileep: ನಟ ಶಿವರಾಜ್‌ಕುಮಾರ್‌ ಅವರ ಮೊದಲ ಮಗಳು ನಿರುಪಮಾ ಕೂಡ ಟಾಕ್ಟರ್‌, ಅವರ ಪತಿ ದಿಲೀಪ್‌ ಕೂಡ ಡಾಕ್ಟರ್.‌ ರ್ಯಾಪಿಡ್‌ ರಶ್ಮಿ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ದಿಲೀಪ್‌ ಅವರು ಪತ್ನಿ, ಮಾವ ಶಿವರಾಜ್‌ಕುಮಾರ್‌ ಬಗ್ಗೆ ಮಾತನಾಡಿದ್ದಾರೆ.

 

Read Full Story

08:05 PM (IST) Mar 15

ಬೆಂಗಳೂರಿನಲ್ಲಿ ಇಂಟರ್ನ್ ಜೀವನ, ತಿಂಗಳಿಗೆ ₹26000 ವೆಚ್ಚ, ಪಿಜಿ ಊಟವೂ ನರಕ ವೈರಲ್ ಆಯ್ತು ಪೋಸ್ಟ್!

ಬೆಂಗಳೂರಿನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿರುವ ಯುವತಿಯೊಬ್ಬಳು ತನ್ನ ಮಾಸಿಕ ₹26,000 ವೆಚ್ಚದ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ವಸತಿ ಮತ್ತು ಆಹಾರಕ್ಕೆ ಹೆಚ್ಚಿನ ಹಣ ಖರ್ಚಾಗುವುದನ್ನು ಈ ಪೋಸ್ಟ್ ಬಹಿರಂಗಪಡಿಸಿದ್ದು, ಇದು ನಗರದ ಜೀವನ ವೆಚ್ಚದ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

07:52 PM (IST) Mar 15

ಉಪ ಚುನಾವಣೆ ಘೋಷಣೆ - ಬಾಗಲಕೋಟೆಯಲ್ಲಿ ರಾಜಕಾರಣಿಗಳ ಫ್ಲೆಕ್ಸ್, ಸರ್ಕಾರಿ ಜಾಹೀರಾತು ಫಲಕ ಬ್ಯಾನರ್‌ಗಳ ತೆರವು

ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ, ಬಾಗಲಕೋಟೆ ನಗರದಲ್ಲಿ ರಾಜಕೀಯ ನಾಯಕರ ಬ್ಯಾನರ್‌ಗಳು ಮತ್ತು ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗುತ್ತಿದೆ.ಎಚ್‌ ವೈ ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಈ ಉಪಚುನಾವಣೆಗಳು ನಡೆಯುತ್ತಿವೆ.

Read Full Story

07:41 PM (IST) Mar 15

Dhurandhar 3 - ಧುರಂಧರ್ 2 ರಿಲೀಸ್‌ಗೂ ಮುನ್ನವೇ 3ನೇ ಭಾಗದ ಸಿದ್ಧತೆ? ಬಂತು ಬಿಗ್ ಅಪ್‌ಡೇಟ್

ಮಾರುಕಟ್ಟೆಯಲ್ಲಿ 'ಧುರಂಧರ್ 2' ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಈ ಸಿನಿಮಾ ಮಾರ್ಚ್ 19 ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಇದಕ್ಕೂ ಮುನ್ನ ಮಾರ್ಚ್ 18 ರಂದು ಪೇಯ್ಡ್ ಪ್ರಿವ್ಯೂ ಶೋ ಇರಲಿದೆ. ಈ ಎಲ್ಲದರ ನಡುವೆ ಒಂದು ದೊಡ್ಡ ಬ್ರೇಕಿಂಗ್ ನ್ಯೂಸ್ ಬಂದಿದೆ. ಅದೇನು ಅಂತ ನೋಡಿ..

Read Full Story

07:35 PM (IST) Mar 15

Karna Serial - ಕರ್ಣ ಧಾರಾವಾಹಿ ಮುಖ್ಯ ಪಾತ್ರವೇ ಮುಗೀತಾ? ವೀಕ್ಷಕರಿಗೆ ಸಿಕ್ಕ ಸುಳಿವೇನು?

Karna Kannada Serial Episode: ಕರ್ಣ ಧಾರಾವಾಹಿಯಲ್ಲಿ ಕರ್ಣ, ನಿಧಿ, ನಿತ್ಯಾ ಸುತ್ತವೇ ಕಥೆ ಸಾಗುತ್ತಿದೆ. ಕರ್ಣ ಯಾರನ್ನು ಮದುವೆ ಆಗ್ತಾನೆ? ನಿತ್ಯಾ ಕಥೆ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಹೀಗಿರುವಾಗ ಒಂದು ಪಾತ್ರ ಅಂತ್ಯ ಆಗಲಿದೆಯಾ ಎಂಬ ಪ್ರಶ್ನೆ ಶುರುವಾಗಿದೆ.

 

Read Full Story

06:30 PM (IST) Mar 15

ಕೊನೆಗೂ ಓಪನ್​ ಅಯ್ತು ಉಪೇಂದ್ರರ ಸೀಕ್ರೆಟ್​ ಲಿಂಕ್​ - ನೀವು ಓಪನ್​ ಮಾಡಿದ್ರೆ ಕೂಡ್ಲೇ ಡಿಲೀಟ್​ ಮಾಡಿಬಿಡಿ!

ನಟ ಉಪೇಂದ್ರ ಅವರು ಸೋಷಿಯಲ್ ಮೀಡಿಯಾದಲ್ಲಿ ಸೀಕ್ರೆಟ್ ಲಿಂಕ್ ಹಂಚಿಕೊಳ್ಳುವುದಾಗಿ ಹೇಳಿ ಕುತೂಹಲ ಮೂಡಿಸಿದ್ದರು. ಆದರೆ, ಆ ಲಿಂಕ್ ತೆರೆದಾಗ ಅದರಲ್ಲಿ ಖಾಲಿ ಸಿಲಿಂಡರ್ ಚಿತ್ರವಿದ್ದು, ಇದು ಸದ್ಯದ ಎಲ್‌ಪಿಜಿ ಕೊರತೆ ಮತ್ತು ಕಾಳಸಂತೆಯ ಸಮಸ್ಯೆಯನ್ನು ಬಿಂಬಿಸಿತ್ತು.
Read Full Story

06:14 PM (IST) Mar 15

Chikkamagaluru - ಮಳೆಗಾಗಿ ಪೂಜೆ ಮುಗಿಯುತ್ತಿದ್ದಂತೆಯೇ ಮಲೆನಾಡಿನಲ್ಲಿ ಧಾರಾಕಾರ ಮಳೆ

ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸಿದ್ದು, ಮಲೆನಾಡಿಗರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮಳೆಗಾಗಿ ನಡೆದ ವಿಶೇಷ ಪೂಜೆ ಮುಗಿಯುವಷ್ಟರಲ್ಲೇ ಭಾರೀ ಮಳೆ ಸುರಿದ ಘಟನೆ ಭಕ್ತರಲ್ಲಿ ಸಂತಸ ಮೂಡಿಸಿದೆ.

Read Full Story

05:39 PM (IST) Mar 15

ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ - ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿಗೆ ಸರಕಾರ ಬಳಿ ಹಣವಿಲ್ಲ ಎಂದು ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ನಮ್ಮ ಸರಕಾರ ಗ್ಯಾರಂಟಿ ಹಾಗೂ ಅಭಿವೃದ್ಧಿಯನ್ನು ಸಮಾನ ಆದ್ಯತೆ ನೀಡುತ್ತಿದೆ.

Read Full Story

05:21 PM (IST) Mar 15

ಬೆಂಗಳೂರು ಬೆಚ್ಚಿದ ತ್ರಿವಳಿ ಕೊಲೆಗಾರರಿಗೆ ಜೀವಾವಧಿ - ಐಐಎಸ್‌ ಪ್ರಾಧ್ಯಾಪಕ ಸೇರಿ ಇಡೀ ಕುಟುಂಬ ಕೊಂದ ಕೆಲಸದಾಳುಗಳು!

17 ವರ್ಷಗಳ ಹಿಂದೆ ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಆರ್‌ಟಿ ನಗರದ ತ್ರಿವಳಿ ಕೊಲೆ ಪ್ರಕರಣದಲ್ಲಿ, ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಲಾಲ್ ಸಚ್‌ದೇವ್, ಅವರ ಪತ್ನಿ ಮತ್ತು ಪುತ್ರನನ್ನು ಹತ್ಯೆಗೈದಿದ್ದ ನಾಲ್ವರು ವಲಸೆ ಕಾರ್ಮಿಕರಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಸೆಷನ್ಸ್ ನ್ಯಾಯಾಲಯದ ಖುಲಾಸೆ ಆದೇಶವನ್ನು ರದ್ದುಗೊಳಿಸಿದೆ.
Read Full Story

04:20 PM (IST) Mar 15

ಪಾರಂಪರಿಕ ಕಲಾ ಉತ್ಪನ್ನಗಳಿಗೆ ಬೆಂಗಳೂರಿನಲ್ಲಿ ಹೊಸ ಮಾರುಕಟ್ಟೆ - ಸಚಿವ ಶಿವಾನಂದ ಪಾಟೀಲ

ಪಾರಂಪರಿಕ ಕಲೆಯ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಯಶವಂತಪುರದಲ್ಲಿರುವ ಇಲಾಖೆಯ ಒಂದೂವರೆ ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

Read Full Story

02:44 PM (IST) Mar 15

ಭಾರತೀಯ ಸೇನೆ 2026 - ಯುವಕರಿಗೆ ದೇಶಸೇವೆಯ ಕರೆ, ನರ್ಸಿಂಗ್ ಮತ್ತು ಸಿಪಾಯಿ ಫಾರ್ಮಾ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಸೇನೆಯು 2026ನೇ ಸಾಲಿನ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಅಸಿಸ್ಟೆಂಟ್ ಮತ್ತು ಸಿಪಾಯಿ ಫಾರ್ಮಾ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಪ್ರಕ್ರಿಯೆ ಫೆಬ್ರವರಿ 13 ರಿಂದ ಏಪ್ರಿಲ್ 1, 2026ರವರೆಗೆ ನಡೆಯಲಿದೆ. ದೇಶಸೇವೆಯ ಆಸಕ್ತಿ ಹೊಂದಿರುವ ಯುವಕರಿಗೆ ಇದು ಉತ್ತಮ ವೃತ್ತಿ ಅವಕಾಶವಾಗಿದೆ.
Read Full Story

02:41 PM (IST) Mar 15

ಒಂದು ವೋಟಿಗೆ ₹5 ಕೋಟಿ ಆಫರ್; 'ಆಪರೇಷನ್ ಕಮಲ' ಆಟ, ಕಾಂಗ್ರೆಸ್‌ಗೆ ಶಾಸಕರ ರಕ್ಷಣೆಯದ್ದೇ ಪರದಾಟ!

ಒಡಿಶಾ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿ 'ಆಪರೇಷನ್ ಕಮಲ'ದ ಮೂಲಕ ಶಾಸಕರಿಗೆ ತಲಾ 5 ಕೋಟಿ ರೂ. ಹಾಗೂ ಬ್ಲ್ಯಾಂಕ್ ಚೆಕ್ ಆಮಿಷವೊಡ್ಡಿದೆ ಎಂದು ಕಾಂಗ್ರೆಸ್ ಸಂಸದ ಸಪ್ತಗಿರಿ ಉಲಾಖ ಆರೋಪಿಸಿದ್ದಾರೆ. ಬಿಡದಿಯ ರೆಸಾರ್ಟ್‌ನಲ್ಲಿ ಕುದುರೆ ವ್ಯಾಪಾರ ಯತ್ನದ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

Read Full Story

01:58 PM (IST) Mar 15

ಕೈಯಲ್ಲಿ ಒಂದು ಫೋನ್ ಇದ್ರೆ ಸಾಕು, ನೀವೂ ಲಕ್ಷಾಧಿಪತಿ! AI ಬಳಸಿ ಹಣ ಗಳಿಸಲು ಸೂಪರ್ ಮಾರ್ಗಗಳು!

Monetize AI ಕೃತಕ ಬುದ್ಧಿಮತ್ತೆ (AI) ಬಳಸಿ ಮನೆಯಿಂದಲೇ ಹಣ ಗಳಿಸುವುದು ಹೇಗೆ? ಆರಂಭಿಕರಿಗಾಗಿ ಇಲ್ಲಿದೆ ಸಂಪೂರ್ಣ ಮಾಹಿತಿ. ಹಣ ಗಳಿಸಲು 5 ಅತ್ಯುತ್ತಮ ಮಾರ್ಗಗಳನ್ನು ಇಲ್ಲಿ ವಿವರಿಸಲಾಗಿದೆ.

Read Full Story

01:45 PM (IST) Mar 15

Bengaluru - ರಿಲೇಶನ್‌ಶಿಪ್ ಬೆಳೆಸುವಂತೆ ಯುವತಿಗೆ ಕಿರುಕುಳ; ಹಾಸ್ಟೆಲ್‌ನಲ್ಲಿ ಯುವಕನ ಗಲಾಟೆ

ಬೆಂಗಳೂರಿನ ಇಂದಿರಾನಗರದ ಹಾಸ್ಟೆಲ್‌ನಲ್ಲಿ ವಾಸವಿದ್ದ ಯುವತಿಗೆ, ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯುವಕನೊಬ್ಬ ನಿರಂತರವಾಗಿ ಕಿರುಕುಳ ನೀಡಿದ್ದಾನೆ. ಮಾರ್ಚ್ 11 ರಂದು ಯುವತಿ ಮತ್ತು ಆಕೆಯ ಸ್ನೇಹಿತೆಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದು, ಈ ಸಂಬಂಧ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Read Full Story

01:23 PM (IST) Mar 15

ಬದುಕು ಮತ್ತು ಕಲೆ ಬೇರೆಯಲ್ಲ - 'ಸ್ವರ್ಣಕಮಲಂ' ಸೌಂದರ್ಯ ಬಿಚ್ಚಿಟ್ಟ ಶತಾವಧಾನಿ ಡಾ. ಆರ್. ಗಣೇಶ್

ಪರಮ್ ಫೌಂಡೇಶನ್ ಆಯೋಜಿಸಿದ್ದ ಕಲಾ ಸಂವಾದದಲ್ಲಿ ತೆಲುಗಿನ ಶ್ರೇಷ್ಠ ನಿರ್ದೇಶಕ ಕೆ. ವಿಶ್ವನಾಥ್ ಅವರ 'ಸ್ವರ್ಣಕಮಲಂ' ಚಿತ್ರದ ಬಗ್ಗೆ ಶತಾವಧಾನಿ ಡಾ. ಆರ್. ಗಣೇಶ್ ಅವರ ಮಾತುಗಳಲ್ಲಿ  ರಸದರ್ಶನ

Read Full Story

01:19 PM (IST) Mar 15

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಲ್ದೀಪ್ ಯಾದವ್ - ಮದುವೆ ಆಲ್ಭಂ 10 ಬ್ಯೂಟಿಫುಲ್ ಫೋಟೋಗಳು ಔಟ್

ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ ತಮ್ಮ ಜೀವನದ ಅತಿ ಮುಖ್ಯ ಇನ್ನಿಂಗ್ಸ್ ಆರಂಭಿಸಿದ್ದಾರೆ.  ಕುಲ್ದೀಪ್ ಮನೆಗೆ ಬಂದಿರುವ ವಂಶಿಕಾ ಚಡ್ಡಾ, ಇನ್ಮುಂದೆ ಅವರ ಪ್ರತಿಯೊಂದು ಸುಖ-ದುಃಖದಲ್ಲಿ ಜೊತೆಯಾಗಿರಲಿದ್ದಾರೆ.

Read Full Story

01:10 PM (IST) Mar 15

'ಸಪ್ತ ಸಾಗರದಾಚೆ ಎಲ್ಲೋ' ಲವ್​ ಸ್ಟೋರಿ Rakshit shetty ರಿಯಲ್​ ಕಥೆನಾ? ನಟ ಏನಂದ್ರು ಕೇಳಿ

ರಶ್ಮಿಕಾ ಮಂದಣ್ಣ ಅವರ ಮದುವೆ ಸುದ್ದಿಯ ಬಳಿಕ, ರಕ್ಷಿತ್ ಶೆಟ್ಟಿ ಅಭಿನಯದ 'ಸಪ್ತಸಾಗರದಾಚೆ ಎಲ್ಲೋ' ಚಿತ್ರದ ಪ್ರೇಮ ವೈಫಲ್ಯದ ಕಥೆಯು ಅವರ ನಿಜ ಜೀವನದ ಕಥೆಯೇ ಎಂಬ ಚರ್ಚೆ ಶುರುವಾಗಿದೆ.  ತಮಗೆ ಒಂದಲ್ಲ ಹಲವು ಬ್ರೇಕಪ್‌ಗಳಾಗಿವೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದು, ಸಿನಿಮಾ ಬಗ್ಗೆ ಏನಂದ್ರು?

Read Full Story

01:09 PM (IST) Mar 15

ಚಿತ್ರದುರ್ಗ ಹಣ ಡಬ್ಲಿಂಗ್ ದಂಧೆ - ಪೊಲೀಸರಿಗೆ ದರ್ಪ ತೋರಿದ್ದ ಮಾಜಿ ಕಾರ್ಪೋರೇಟರ್ ಕೊನೆಗೂ ಜೈಲುಪಾಲು!

ಚಿತ್ರದುರ್ಗದ ಹಣ ಡಬ್ಲಿಂಗ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ನಗರಸಭೆಯ ಮಾಜಿ ಸದಸ್ಯ ಚಂದ್ರಶೇಖರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಗೆ ಅಡ್ಡಿಪಡಿಸಿದ ಆರೋಪದ ಮೇಲೆಯೂ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಿದೆ.
Read Full Story

01:00 PM (IST) Mar 15

Nandagokula Serial ಚಿತ್ರೀಕರಣದ ವೇಳೆ ಕಣ್ಣೀರಿಟ್ಟ ನಂದಗೋಕುಲದ ಸೊಸೆ ನಟಿ ಊರ್ಜಿತಾ

ಕಲರ್ಸ್ ಕನ್ನಡದ ಜನಪ್ರಿಯ 'ನಂದಗೋಕುಲ' ಧಾರಾವಾಹಿ ಚಿತ್ರೀಕರಣದ ವೇಳೆ ನಡೆದ ಘಟನೆಯೊಂದು ವೈರಲ್ ಆಗಿದೆ. ಭಾವುಕ ದೃಶ್ಯವೊಂದರಲ್ಲಿ ನಟಿಸುವಾಗ ನಿರ್ದೇಶಕರ ಮಾತಿಗೆ ನಟಿ ಊರ್ಜಿತಾ ವಾಲ್ತಾಜೆ (ಅಮೂಲ್ಯ) ನಿಜವಾಗಿಯೂ ಕಣ್ಣೀರು ಹಾಕಿದ್ದಾರೆ. ಈ ಕ್ಷಣವನ್ನು ಸಹನಟ ಅಭಿಷೇಕ್ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

Read Full Story

12:49 PM (IST) Mar 15

ತಡವಾಗಿ ಬಂದ ಸಣ್ಣ ಮಕ್ಕಳಿಗೆ 2 ತಾಸು ಬಿಸಿಲಲ್ಲಿ ನಿಲ್ಲುವ ಶಿಕ್ಷೆ! ಪ್ರಶ್ನಿಸಿದ ಪೋಷಕರಿಗೂ ಇಂಗ್ಲಿಷ್‌ನಲ್ಲಿ ಉಡಾಫೆ ಮಾತು

ಯಲಹಂಕದ ಖಾಸಗಿ ಶಾಲೆಯೊಂದರಲ್ಲಿ 2 ನಿಮಿಷ ತಡವಾಗಿ ಬಂದ ಒಂದನೇ ತರಗತಿ ಮಕ್ಕಳಿಗೆ ಪ್ರಾಂಶುಪಾಲರು 2 ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದ್ದಾರೆ. ಈ ಅಮಾನವೀಯ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪ್ರಶ್ನಿಸಿದ ಪೋಷಕರಿಗೆ ಪ್ರಾಂಶುಪಾಲೆ ಉಡಾಫೆ ಉತ್ತರ ನೀಡಿದ್ದಾರೆ.

Read Full Story

12:25 PM (IST) Mar 15

Hamas - ಅಕ್ಕಪಕ್ಕದ ದೇಶಗಳ ಮೇಲೆ ದಾಳಿ ಮಾಡಬೇಡಿ; ಇರಾನ್‌ಗೆ ಹಮಾಸ್‌ ಮನವಿ

ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಹಮಾಸ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದೆ. ಅಮೆರಿಕ-ಇಸ್ರೇಲ್ ದಾಳಿಗೆ ಪ್ರತಿಯಾಗಿ ದಾಳಿ ಮಾಡುವ ಹಕ್ಕು ಇರಾನ್‌ಗೆ ಇದೆ, ಆದರೆ ಅಕ್ಕಪಕ್ಕದ ದೇಶಗಳನ್ನು ಟಾರ್ಗೆಟ್ ಮಾಡಬಾರದು ಎಂದು ಹಮಾಸ್ ಮನವಿ ಮಾಡಿದೆ. ಈ ಯುದ್ಧವನ್ನು ತಕ್ಷಣ ನಿಲ್ಲಿಸುವಂತೆ ಎಲ್ಲ ದೇಶಗಳಿಗೂ ಮನವಿ 

Read Full Story

12:12 PM (IST) Mar 15

Kamal Haasan Controversy - 'ಆ ನಟಿಗೆ ಯಾಕೆ ಅಷ್ಟು ಸ್ಕೋಪ್?'; ಕಮಲ್ ಸಿನಿಮಾ ಬಿಡಲು ಕಾರಣ 30 ವರ್ಷಗಳ ನಂತರ ಬಯಲು!

ಕಮಲ್ ಹಾಸನ್ ಹೀರೋ ಆಗಿದ್ದ 'ಕಂಡೇನ್ ಸೀತೆಯೈ' ಸಿನಿಮಾ 10 ದಿನ ಶೂಟಿಂಗ್ ಆದ್ಮೇಲೆ ಯಾಕೆ ನಿಂತುಹೋಯ್ತು? 30 ವರ್ಷಗಳ ನಂತರ ಮಲಯಾಳಂ ನಿರ್ದೇಶಕ ಬಾಲಚಂದ್ರ ಮೆನನ್ ಅಸಲಿ ಕಾರಣ ಬಿಚ್ಚಿಟ್ಟಿದ್ದಾರೆ.
Read Full Story

12:02 PM (IST) Mar 15

ನನ್ನ ಜಗತ್ತನ್ನ ನಾನೇ ಸೃಷ್ಟಿಸಿಕೊಳ್ಳುವೆ - ನಟಿ ಮೇಘನಾ ರಾಜ್ ಬದುಕಿನ ಹೊಸ ನಿರ್ಧಾರ

ನಟಿ ಮೇಘನಾ ರಾಜ್ ತಮ್ಮ ಹೊಸ ಫೋಟೋಶೂಟ್ ಚಿತ್ರಗಳನ್ನು ಹಂಚಿಕೊಂಡು, ತಮ್ಮದೇ ಜಗತ್ತನ್ನು ಸೃಷ್ಟಿಸಿಕೊಳ್ಳುವ ಬಗ್ಗೆ ಬರೆದುಕೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಮಗನ ಆರೈಕೆ ಮತ್ತು ಎರಡನೇ ಮದುವೆಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
Read Full Story

11:50 AM (IST) Mar 15

ಆಸ್ತಿಗಾಗಿ ಮಗನಿಂದಲೇ ತಾಯಿ ಮೇಲೆ ಮಾರಣಾಂತಿಕ ಹಲ್ಲೆ! ಹೆತ್ತ ತಪ್ಪಿಗೆ ಸಾವು-ಬದುಕಿನ ನಡುವೆ ಹೋರಾಟ

ಬೆಂಗಳೂರಿನಲ್ಲಿ ಆಸ್ತಿ ವಿಚಾರವಾಗಿ ನಡೆದ ಜಗಳದಲ್ಲಿ, ಹಿರಿಯ ಮಗ ಪ್ರಕಾಶ್ ತನ್ನ ವೃದ್ಧ ತಾಯಿ ಲಕ್ಷ್ಮೀ ಅವರ ಮೇಲೆ ವಾಕಿಂಗ್ ಸ್ಟಿಕ್‌ನಿಂದ ಮಾರಣಾಂತಿಕ ಹಲ್ಲೆ.. ಗಂಭೀರವಾಗಿ ಗಾಯಗೊಂಡ ತಾಯಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಈ ಸಂಬಂಧ ತಿಲಕನಗರ ಪೊಲೀಸರು ಆರೋಪಿ ಮಗ ಪೊಲೀಸರ ವಶಕ್ಕೆ

Read Full Story

11:44 AM (IST) Mar 15

ಬೆಂಗಳೂರಲ್ಲಿ 2BHK ಮನೆಗೆ ತಿಂಗಳಿಗೆ 60 ಸಾವಿರ ಬಾಡಿಗೆ, ವಿಡಿಯೋ ಮಾಡಿ ಕಾರಣ ಬಹಿರಂಗಪಡಿಸಿದ ಜೋಡಿ

ಬೆಂಗಳೂರಲ್ಲಿ 2BHK ಮನೆಗೆ ತಿಂಗಳಿಗೆ 60 ಸಾವಿರ ಬಾಡಿಗೆ, ವಿಡಿಯೋ ಮಾಡಿ ಕಾರಣ ಬಹಿರಂಗಪಡಿಸಿದ ಜೋಡಿ, ಬೆಂಗಳೂರಿನ ದುಬಾರಿ ಬಾಡಿಗೆ ಪ್ರತಿ ಬಾರಿ ಸದ್ದು ಮಾಡುತ್ತೆ. ಆದರೆ ಈ ಬಾರಿ ಈ ಮನೆಗೆ ಇಷ್ಟು ಕೊಡುವುದು ಸರಿಯಾಗಿದೆ ಎಂದಿದ್ದಾರೆ.

 

Read Full Story

11:00 AM (IST) Mar 15

'ಚುಂಚುಶ್ರೀ ಎಲ್ಲೆಲ್ಲೋ ದಾರಿ ತಪ್ಪುತ್ತಿದ್ದಾರೆ...' ವಿವಾದ ಸೃಷ್ಟಿಸಿದ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಹೆಚ್‌ಡಿಕೆ ಹೇಳಿದ್ದೇನು?

ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳ ಸಮ್ಮುಖದಲ್ಲೇ 'ಸ್ವಾಮೀಜಿ ದಾರಿ ತಪ್ಪುತ್ತಿದ್ದಾರೆ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಬೇಸರ

Read Full Story

09:52 AM (IST) Mar 15

ಭೀಕರ ಅಪಘಾತದಲ್ಲಿ ಮೂವರು ಸಬ್ ಇನ್‌ಸ್ಪೆಕ್ಟರ್‌ ಸಾವು, ಇಬ್ಬರು ಎಸ್‌ಐಗಳಿಗೆ ಗಂಭೀರ ಗಾಯ

ಚಿತ್ರದುರ್ಗದ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ರಿಸರ್ವ್ ಸಬ್ ಇನ್‌ಸ್ಪೆಕ್ಟರ್‌ಗಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇದಲ್ಲದೆ, ಚಾಮರಾಜನಗರ ಮತ್ತು ಕುಮಟಾದಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಓರ್ವ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Read Full Story

09:11 AM (IST) Mar 15

Bengaluru - 6.5 KM ಹೋಗೋಕೆ 1 ಗಂಟೆ! ಇದೇನ್ ಗುರು ಟ್ರಾಫಿಕ್? ಯುವಕನ ವಿಡಿಯೋ ವೈರಲ್

ಬೆಂಗಳೂರಿನ ನಿವಾಸಿಯೊಬ್ಬರು ತಮ್ಮ 6.5 ಕಿಲೋಮೀಟರ್ ಆಫೀಸ್ ಪ್ರಯಾಣಕ್ಕೆ ಒಂದು ಗಂಟೆಗಿಂತ ಹೆಚ್ಚು ಸಮಯ ತೆಗೆದುಕೊಂಡ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ.

Read Full Story

08:50 AM (IST) Mar 15

Bengaluru - 3000 ಮೆಟ್ರಿಕ್ ಟನ್ ಹಸಿ ಕಸದಿಂದ ಬಯೋಗ್ಯಾಸ್ ಉತ್ಪಾದನೆಗೆ ಕ್ರಮ - ಮಹೇಶ್ವರ್ ರಾವ್

Bengaluru: ಹಸಿ ಕಸದಿಂದ ಜೈವಿಕ ಅನಿಲ ಉತ್ಪಾದಿಸುವ ಬೃಹತ್ ಯೋಜನೆಗೆ ಚಾಲನೆ ನೀಡಲಾಗಿದ್ದು, ಕೋರಮಂಗಲ, ಕನ್ನಹಳ್ಳಿಗಳಲ್ಲಿ ಹೊಸ ಘಟಕಗಳು ಸ್ಥಾಪನೆಯಾಗುತ್ತಿದ್ದು, ಉತ್ಪಾದನೆಯಾದ ಗ್ಯಾಸ್ ಅನ್ನು ಬಯೋ ಸಿಎನ್‌ಜಿ ರೂಪದಲ್ಲಿ ಮಾರಾಟ ಮಾಡಿ, ಮನೆಗಳಿಗೆ ತಲುಪಿಸುವ ಯೋಜನೆಯೂ ಇದೆ.

Read Full Story

08:38 AM (IST) Mar 15

ಕಾರ್ಕಳ, ಬೆಳ್ತಂಗಡಿಯಲ್ಲಿ ಗುಡುಗು ಸಹಿತ ಅಕಾಲಿಕ ಮಳೆ; ಉರಿ ಬಿಸಿಲಿನಿಂದ ಬೇಸತ್ತಿದ್ದ ತಂಪೆರೆದ ವರುಣ

ಕಾರ್ಕಳ ಮತ್ತು ಬೆಳ್ತಂಗಡಿ ತಾಲೂಕಿನ ಹಲವೆಡೆ ಶನಿವಾರ ಗುಡುಗು ಸಹಿತ ಅಕಾಲಿಕ ಮಳೆ ಸುರಿದಿದೆ. ಕಳೆದ ಕೆಲವು ದಿನಗಳ ಉರಿ ಬಿಸಿಲಿನಿಂದ ಬಳಲಿದ್ದ ಜನರಿಗೆ ಈ ಮಳೆಯು ತಂಪೆರೆದಿದ್ದು, ವಾತಾವರಣವನ್ನು ತಂಪಾಗಿಸಿದೆ. 

Read Full Story

08:18 AM (IST) Mar 15

ಏರ್‌ಪೋರ್ಟ್‌ಗೆ ತಡವಾಗಿ ಬಂದ, ಮಾತಿನ ಭರದಲ್ಲಿ 'ಬಾಂಬ್ ಇದ್ರೆ..' ಅಂದ, ಖ್ಯಾತ ಗಾಯಕ ಅರೆಸ್ಟ್!

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದ ಪಶ್ಚಿಮ ಬಂಗಾಳ ಮೂಲದ ಗಾಯಕ ರಜತೇಶ್ ಬೇರಾ ಅವರಿಗೆ ಬೋರ್ಡಿಂಗ್ ನಿರಾಕರಿಸಲಾಯಿತು. ಇದರಿಂದ ಸಿಟ್ಟಿಗೆದ್ದ ಅವರು ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದು 'ಬಾಂಬ್' ಎಂಬ ಪದ ಬಳಸಿದ್ದರಿಂದ, ಪೊಲೀಸರು ಅವರನ್ನು ಬಂಧಿಸಿ ಎಫ್‌ಐಆರ್ ದಾಖಲಿಸಿದ್ದಾರೆ.
Read Full Story

08:18 AM (IST) Mar 15

ಇತಿಹಾಸ ಪುಟ ಸೇರಲಿದೆ ಬೆಳ್ತಂಗಡಿ ಸೋಮಾವತಿ ಸೇತುವೆ; 70 ವರ್ಷವಾದರೂ ಶಿಥಿಲವಾಗಿಲ್ಲ

ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ, ಸೋಮಾವತಿ ನದಿಗೆ ಅಡ್ಡಲಾಗಿರುವ 70 ವರ್ಷ ಹಳೆಯ ಬೆಳ್ತಂಗಡಿ ಸೇತುವೆಯನ್ನು ತೆರವುಗೊಳಿಸಲಾಗುತ್ತಿದೆ. ಹೊಸ ಸರ್ವಿಸ್ ರಸ್ತೆ ಸೇತುವೆ ನಿರ್ಮಾಣಕ್ಕಾಗಿ ಈ ಐತಿಹಾಸಿಕ ಸೇತುವೆಯನ್ನು ಕೆಡವಲಾಗುತ್ತಿದೆ.

Read Full Story

08:00 AM (IST) Mar 15

Bengaluru - ನಿದ್ರೆಗೆ ಜಾರಿದ ಪ್ರಯಾಣಿಕನ ದೋಚಿ ಮಾರ್ಗ ಮಧ್ಯೆಯೇ ಇಳಿಸಿ ಕ್ಯಾಬ್‌ ಚಾಲಕ ಪರಾರಿ!

ಬೆಂಗಳೂರಿನಲ್ಲಿ ಪಾರ್ಟಿ ಮುಗಿಸಿ ಉಬರ್ ಕ್ಯಾಬ್‌ನಲ್ಲಿ ಮನೆಗೆ ಮರಳುತ್ತಿದ್ದ ಪ್ರಯಾಣಿಕ ನಿದ್ರೆಗೆ ಜಾರಿದ್ದಾರೆ. ಇದೇ ಸಮಯ ಸಾಧಿಸಿದ ಚಾಲಕ, ಪ್ರಯಾಣಿಕನ ಚಿನ್ನಾಭರಣ ಹಾಗೂ ಐಪೋನ್ ದೋಚಿ, ಮಾರ್ಗ ಮಧ್ಯದಲ್ಲೇ ಇಳಿಸಿ ಪರಾರಿಯಾಗಿದ್ದಾನೆ. 

Read Full Story

More Trending News