Published : Jul 14, 2025, 06:40 AM ISTUpdated : Jul 14, 2025, 11:54 PM IST

Karnataka News Live: ಬೆಂಗಳೂರು ಜನರಿಗೆ ಮತ್ತೊಂದು ಬರೆ, ಆ.1 ರಿಂದ ಆಟೋ ಪ್ರಯಾಣದ ದರ ಹೆಚ್ಚಳ!

ಸಾರಾಂಶ

ಬೆಂಗಳೂರು: ಬೇಕರಿ, ಕಾಂಡಿಮೆಂಟ್ಸ್, ಜ್ಯೂಸ್, ಚಹಾ ಅಂಗಡಿ, ಹಣ್ಣು-ತರಕಾರಿ ಅಂಗಡಿ ಸೇರಿದಂತೆ ವಿವಿಧ ಮಾದರಿಯ ಸಣ್ಣ ಗಾತ್ರದ ವ್ಯಾಪಾರಿಗಳಿಗೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿಎಸ್‌ಟಿ ತೆರಿಗೆ ನೋಟಿಸ್‌ಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಗರ ದಲ್ಲಿನ ಅನೇಕ ವ್ಯಾಪಾರಿಗಳು ಯುಪಿಐ ಮೂಲಕ ಹಣ ಸ್ವೀಕರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅಂಗಡಿಗಳಲ್ಲಿನ ಟೇಬಲ್ ಮೇಲೆ ರಾಜಾರೋಷವಾಗಿ ಕಾಣಿಸುತ್ತಿದ್ದ ಎರಡೂರು ಕ್ಯೂಆರ್ ಕೋಡ್‌ಗಳು ಕಳೆದ ಒಂದೆರೆಡು ದಿನಗಳಿಂದ ಮರೆಯಾಗುತ್ತಿವೆ. ಗೋಡೆಗೆ ಅಂಟಿಸಿದ್ದ ಕ್ಯೂಆರ್ ಕೋಡ್‌ಗಳನ್ನು ವ್ಯಾಪಾರಿಗಳು ಮರೆ ಮಾಡುತ್ತಿದ್ದಾರೆ. ಗ್ರಾಹಕರಿಂದ ನಗದನ್ನು ನಿರೀಕ್ಷೆ ಮಾಡುತ್ತಿದ್ದು, ಯುಪಿಐ ಪೇಮೆಂಟ್ ಮಾಡುತ್ತೇವೆ ಎನ್ನುವವರಿಗೆ ಮಾತ್ರ ಕ್ಯೂಆರ್‌ಕೋಡ್ ನೀಡುತ್ತಿದ್ದಾರೆ.

 

11:35 PM (IST) Jul 14

ಬೆಂಗಳೂರು ಜನರಿಗೆ ಮತ್ತೊಂದು ಬರೆ, ಆ.1 ರಿಂದ ಆಟೋ ಪ್ರಯಾಣದ ದರ ಹೆಚ್ಚಳ!

ಆಗಸ್ಟ್ 1 ರಿಂದ ಬೆಂಗಳೂರಿನಲ್ಲಿ ಆಟೋರಿಕ್ಷಾಗಳ ಕನಿಷ್ಠ ದರ 36 ರೂ.ಗೆ ಏರಿಕೆಯಾಗಲಿದೆ. ಪ್ರತಿ ಕಿ.ಮೀ.ಗೆ 18 ರೂ. ದರ ನಿಗದಿಯಾಗಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ.
Read Full Story

11:10 PM (IST) Jul 14

ಸಿಎಂ ಇಲ್ಲದೆ ಸಿಗಂದೂರು ಸೇತುವೆ ಲೋಕಾರ್ಪಣೆ, ಪ್ರಧಾನಿ ಮೋದಿಗೆ ದೂರು ನೀಡಿದ ಸಿದ್ಧರಾಮಯ್ಯ!

ಸಿಎಂ ಸಿದ್ಧರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಸೇತುವೆ ಲೋಕಾರ್ಪಣೆಗೊಂಡಿದ್ದು, ಆಹ್ವಾನ ಪತ್ರಿಕೆ ವಿವಾದಕ್ಕೆ ಕಾರಣವಾಗಿದೆ. ಶಿಷ್ಟಾಚಾರ ಉಲ್ಲಂಘನೆ ಆರೋಪಿಸಿ ಸಿಎಂ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಹಕಾರದ ಕೊರತೆ ಎದ್ದು ಕಾಣುತ್ತಿದೆ.
Read Full Story

10:17 PM (IST) Jul 14

ಕಾಂಗ್ರೆಸ್‌ ಆರೋಪಕ್ಕೆ ಭಾರೀ ಹಿನ್ನಡೆ, ಪರಶುಮಾರಮ ಪ್ರತಿಮೆ ಫೈಬರ್‌ನದ್ದಲ್ಲ, ಹಿತ್ತಾಳೆಯದ್ದು!

ಕಾರ್ಕಳದ ಉಮಿಕಲ್ ಬೆಟ್ಟದ ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ಅಕ್ರಮದ ಆರೋಪದಡಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಪ್ರತಿಮೆಯನ್ನು ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

Read Full Story

08:02 PM (IST) Jul 14

Mangaluru - ಎಂಆರ್‌ಪಿಎಲ್‌ ಗ್ಯಾಸ್‌ ಲೀಕ್‌ನಿಂದ ಇಬ್ಬರ ಸಾವು, 6 ಸಿಬ್ಬಂದಿ ಬಂಧನ

ಮಂಗಳೂರಿನ ಎಂಆರ್‌ಪಿಎಲ್ ಕಾರ್ಖಾನೆಯಲ್ಲಿ ಹೈಡ್ರೋಜನ್ ಸಲ್ಫೈಡ್ ಅನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ನಿಯಮಿತ ತಪಾಸಣೆ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಕಾರ್ಖಾನೆ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಾಗಿದೆ.
Read Full Story

07:40 PM (IST) Jul 14

ಮೈಸೂರಿನಲ್ಲಿ 6 ತಿಂಗಳಲ್ಲಿ ಬರೋಬ್ಬರಿ 9,428 ನಾಯಿ ಕಡಿತ ಪ್ರಕರಣ ದಾಖಲು! ರೇಬಿಸ್ ಭೀತಿ

ಮೈಸೂರು ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಜನವರಿಯಿಂದ ಜೂನ್ ವರೆಗೆ 9,428 ಪ್ರಕರಣಗಳು ವರದಿಯಾಗಿದ್ದು, ಮಕ್ಕಳು, ಹದಿಹರೆಯದವರು ಮತ್ತು ವಯಸ್ಕರು ಸೇರಿದಂತೆ ಎಲ್ಲಾ ವಯೋಮಾನದವರೂ ಇದಕ್ಕೆ ತುತ್ತಾಗಿದ್ದಾರೆ.  

Read Full Story

06:49 PM (IST) Jul 14

ಮಗಳ ಆತ್ಮಹತ್ಯೆಯ ನೋವು ಸಹಿಸದೇ ಅಮ್ಮ ಕೂಡ ನೇಣಿಗೆ ಶರಣು, ಒಂದೇ ದಿನ ಮನೆಯಲ್ಲಿ ಎರಡು ಶವ ಕಂಡ ಗಂಡ ಶಾಕ್‌!

ಬೆಂಗಳೂರಿನ ನಾಗಗೊಂಡನಹಳ್ಳಿಯಲ್ಲಿ ಆಂಧ್ರ ಮೂಲದ ಅಮ್ಮ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಬಳಿಕ ತಾಯಿ ಕೂಡ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ವೈಟ್‌ಫೀಲ್ಡ್‌ನಲ್ಲಿ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

04:35 PM (IST) Jul 14

ಸರೋಜಮ್ಮ ಹೋಗಿದ್ದು ಬೇಜಾರು, ಆದ್ರೆ ಸಂಕಷ್ಟಿ ದಿನ ಹೋಗಿದ್ದು ಖುಷಿ ಇದೆ - ಬ್ರಹ್ಮಾಂಡ ಗುರೂಜಿ

ಬಹುಭಾಷಾ ನಟಿ ಬಿ.ಸರೋಜಾ ದೇವಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಚಿತ್ರರಂಗದ ಗಣ್ಯರು, ಆತ್ಮೀಯರು, ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಅವರ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
Read Full Story

04:06 PM (IST) Jul 14

24 ಗಂಟೆಯಲ್ಲಿ ಭಟ್ಕಳ ನಾಶ, ಕಣ್ಣನ್‌ ಹೆಸರಲ್ಲಿಈ-ಮೇಲ್‌ ಕಳಿಸಿದ್ದ ನಿತಿನ್‌ ಶರ್ಮಾ aka ಖಾಲಿದ್‌ ಬಂಧನ!

ಭಟ್ಕಳದಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ನಿತಿನ್ ಶರ್ಮಾ ಅಲಿಯಾಸ್ ಖಾಲಿದ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ಹಲವು ರಾಜ್ಯಗಳಲ್ಲಿ ಇದೇ ರೀತಿಯ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. 

Read Full Story

03:42 PM (IST) Jul 14

ಹುಟ್ಟಿ ಬೆಳೆದ ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಸರೋಜಾದೇವಿ ಅಂತ್ಯಕ್ರಿಯೆ

ಬಹುಭಾಷಾ ನಟಿ ಡಾ. ಬಿ. ಸರೋಜಾದೇವಿಯವರ ಅಂತ್ಯಕ್ರಿಯೆ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ನೆರವೇರಲಿದೆ. ತಮ್ಮ ತವರೂರಿನಲ್ಲಿ ಮಾವಿನ ತೋಟದ ಪಕ್ಕದಲ್ಲಿರುವ ತಾಯಿಯ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನಡೆಸಲು ಕುಟುಂಬ ಚಿಂತನೆ ನಡೆಸಿದೆ.  

Read Full Story

03:30 PM (IST) Jul 14

ದೇವರು ಕೆಳಗೆ ಬರೋದು ಬೇಡ, ಡಿಕೆಶಿ ಅಧಿಕಾರ ನನಗೆ ಕೊಟ್ಟರೆ 1 ವರ್ಷದಲ್ಲಿ ಬೆಂಗಳೂರು ಸರಿ ಮಾಡ್ತೇನೆ! ತೇಜಸ್ವಿ ಸೂರ್ಯ

ಬೆಂಗಳೂರು ನಗರದ ಅಭಿವೃದ್ಧಿ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ, ಒಂದು ವರ್ಷದಲ್ಲಿ ನಗರವನ್ನು ಅಭಿವೃದ್ಧಿಪಡಿಸುವುದಾಗಿ ಸವಾಲು ಹಾಕಿದ್ದಾರೆ. ಬೆಂಗಳೂರು ಸುರಂಗ ರಸ್ತೆ ಯೋಜನೆಯ ವೆಚ್ಚದ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read Full Story

02:55 PM (IST) Jul 14

ನೀವ್ ಹೇಳೋದ್ ಹೇಳ್ತಾನೆ ಇರಿ, ನಾವ್ ಮಾಡೋದ್ ಮಾಡ್ತಾನೆ ಇರ್ತೀವಿ - ಚಾರ್ಮಾಡಿಯಲ್ಲಿ ಪ್ರವಾಸಿಗರ ಹುಚ್ಚಾಟ

ಚಾರ್ಮಾಡಿ ಘಾಟಿಯ ಜಲಪಾತಗಳ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರು, ಜಾರುವ ಬಂಡೆಗಳ ಮೇಲೆ ಅಪಾಯಕಾರಿಯಾಗಿ ಸಾಹಸ ಮಾಡುತ್ತಿದ್ದಾರೆ. ಪೊಲೀಸರ ಎಚ್ಚರಿಕೆ ನಡುವೆಯೂ ಕೆಲವರು ಪ್ರಾಣವನ್ನೇ ಪಣಕ್ಕಿಟ್ಟು ಮೋಜು ಮಸ್ತಿಯಲ್ಲಿ ತೊಡಗುತ್ತಿರುವುದು ಆತಂಕಕಾರಿ.
Read Full Story

02:54 PM (IST) Jul 14

ಬೆಂಗಳೂರಿನ ಸುರಂಗ ರಸ್ತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಂಬಂಧಿಕರಿಗೆ ಮಾತ್ರ ಉಪಯೋಗ; ತೇಜಸ್ವಿ ಸೂರ್ಯ

ಬೆಂಗಳೂರಿನಲ್ಲಿ 18,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸುರಂಗ ಮಾರ್ಗವು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಈ ಯೋಜನೆಯು ಕೆಲವೇ ಕೋಟ್ಯಧಿಪತಿಗಳಿಗೆ ಮಾತ್ರ ಉಪಯೋಗವಾಗಲಿದ್ದು, ಜನರ ತೆರಿಗೆ ಹಣ ದುರುಪಯೋಗವಾಗುತ್ತಿದೆ

Read Full Story

02:12 PM (IST) Jul 14

Chikmagalur Poultry Scam - ಕೋಳಿ ಕಂಪನಿಯಿಂದ ನೂರಾರು ರೈತರಿಗೆ ಮೋಸ!

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೋಳಿ ಕಂಪನಿಯೊಂದು ರೈತರಿಂದ ಕೋಳಿ ಖರೀದಿಸಿ ಹಣ ಪಾವತಿಸದೆ ಕೋಟ್ಯಂತರ ರೂಪಾಯಿ ವಂಚಿಸಿದೆ. ನೂರಕ್ಕೂ ಹೆಚ್ಚು ರೈತರು 2 ಕೋಟಿ ರೂ.ಗಳಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡಲಾಗಿದೆ.
Read Full Story

01:38 PM (IST) Jul 14

ಶಕ್ತಿ ಯೋಜನೆ 500ನೇ ಕೋಟಿ ಮಹಿಳಾ ಪ್ರಯಾಣಿಕರಿಗೆ ಪಿಂಕ್ ಟಿಕೆಟ್ ಕೊಟ್ಟ ಸಿಎಂ ಸಿದ್ದರಾಮಯ್ಯ! ಇಲ್ಲಿದ್ದಾರೆ ನೋಡಿ ಮಹಿಳೆ!

ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯು 500 ಕೋಟಿ ಮಹಿಳಾ ಪ್ರಯಾಣಿಕರ ಮೈಲಿಗಲ್ಲನ್ನು ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 500ನೇ ಕೋಟಿ ಪ್ರಯಾಣಿಕರಿಗೆ ಸ್ವತಃ ಟಿಕೆಟ್ ನೀಡಿ ಸನ್ಮಾನಿಸಿದರು. ಈ ಯೋಜನೆಯು ಮಹಿಳೆಯರ ಸಬಲೀಕರಣಕ್ಕೆ ಕಾರಣವಾಗಿದೆ.
Read Full Story

12:24 PM (IST) Jul 14

ತಮಿಳುನಾಡಿನಲ್ಲಿ ನಟಿ ಬಿ.ಸರೋಜಾದೇವಿ ವಯ್ಯಾರದ ಗುಟ್ಟು ಬಿಚ್ಚಿಟ್ಟ ನವರಸನಾಯಕ ಜಗ್ಗೇಶ್!

ನಟಿ ಬಿ.ಸರೋಜಾ ದೇವಿ ಅವರ ನಿಧನಕ್ಕೆ ಜಗ್ಗೇಶ್‌ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಟಿ ಸರೋಜಾ ದೇವಿ ಕನ್ನಡ ಚಿತ್ರರಂಗಕ್ಕಿಂತ ತಮಿಳು ಸಿನಿಮಾದಲ್ಲಿಯೇ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಆದರೆ, ತಮಿಳುನಾಡಿನಲ್ಲಿ ಸರೋಜಾದೇವಿಯ ವೈಯ್ಯಾರದ ಬಗ್ಗೆ ಜನರ ಅಭಿಪ್ರಾಯ ಏನಿದೆ ಎಂಬುದನ್ನು ನಟ ಜಗ್ಗೇಶ್ ಹೇಳಿದ್ದಾರೆ.

Read Full Story

11:58 AM (IST) Jul 14

ದೇಶದ ವಿಷಯ ಕೇಳಿದ್ರೆ ಉತ್ರ ಕೊಡಲ್ಲ, ಬಿಜೆಪಿಯವರಿಗೆ ಲೆಕ್ಕ-ಬುಕ್ಕ ಏನೂ ಇಲ್ಲ - ಸಂತೋಷ್ ಲಾಡ್ ಕಿಡಿ

ಕುಂದಗೋಳ ತಾಲೂಕಿನಲ್ಲಿ ಇಬ್ಬರು ರೈತರ ಆತ್ಮಹತ್ಯೆಗೆ ಸಚಿವ ಸಂತೋಷ ಲಾಡ್ ಕಳವಳ ವ್ಯಕ್ತಪಡಿಸಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಶಾಸಕರ ಖರೀದಿ ಬಿಜೆಪಿಯ ಟ್ರಿಕ್ಸ್ ಎಂದು ಆರೋಪಿಸಿದ್ದಾರೆ. ನರೇಗಾ ಯೋಜನೆಯನ್ನು ಮುಗಿಸುವುದೇ ಬಿಜೆಪಿಯ ಉದ್ದೇಶ ಎಂದು ಲಾಡ್ ಟೀಕಿಸಿದ್ದಾರೆ.
Read Full Story

11:57 AM (IST) Jul 14

ಕರ್ನಾಟಕದಲ್ಲಿ ಮತ್ತೆ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸುವ ಚಿಂತನೆ, ರಾಹುಲ್ ಗಾಂಧಿ ಪತ್ರ

33 ವರ್ಷಗಳ ಬಳಿಕ ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ಪುನಃ ಆರಂಭಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ರಾಹುಲ್ ಗಾಂಧಿ ಅವರ ಪತ್ರದ ಹಿನ್ನೆಲೆಯಲ್ಲಿ ಈ ವಿಷಯ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
Read Full Story

11:43 AM (IST) Jul 14

2025ರಲ್ಲಿ ಹೆಂಡತಿ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ; ರಾಜಿ ಪಂಚಾಯಿತಿ ಬೆನ್ನಲ್ಲೇ ಶಾಕಿಂಗ್ ನಿರ್ಧಾರ!

ರಾಯಚೂರಿನಲ್ಲಿ ಪತ್ನಿಯಿಂದ ನದಿಗೆ ತಳ್ಳಲ್ಪಟ್ಟ ಗಂಡ ತಾತಪ್ಪ, ಸ್ಥಳೀಯರ ಸಹಕಾರದಿಂದ ಪ್ರಾಣ ಉಳಿಸಿಕೊಂಡು ಬದುಕಿ ಬಂದಿದ್ದಾನೆ. ಇದೀಗ ಆತನನ್ನು 2025ರಲ್ಲಿ ಹೆಂಡತಿಯ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ ಎಂದು ಕರೆಯಲಾಗುತ್ತಿದೆ. ಹೆಂಡತಿಯ ಸಂಬಂಧದ ಕುರಿತು ದಿಟ್ಟ ನಿರ್ಧಾರ ಕೈಗೊಂಡಿದ್ದಾನೆ.

Read Full Story

10:58 AM (IST) Jul 14

ಸ್ಟಾರ್ ನಟಿಯಾಗಿದ್ದಾಗಲೇ ಮದುವೆಯಾದ ಸರೋಜಾದೇವಿ, ವೈಯಕ್ತಿಕ ಜೀವನದ ದುಃಖದ ಸ್ಟೋರಿ

ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ. ಬಿ. ಸರೋಜಾದೇವಿ ಅವರ ಜೀವನದಲ್ಲಿ ಯಶಸ್ಸಿನ ಜೊತೆಗೆ ಕಷ್ಟಗಳೂ ಇದ್ದವು. ಪತಿಯ ಅಗಲಿಕೆಯ ನಂತರ ಅವರು ಸಮಾಜದಿಂದ ಅನೇಕ ರೀತಿಯಲ್ಲಿ ಅತೃಪ್ತಿ ಅನುಭವಿಸಿದರು. ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ಅವರ ಬೆಂಬಲವನ್ನು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.
Read Full Story

10:02 AM (IST) Jul 14

ಖ್ಯಾತ ಬಹುಭಾಷ ನಟಿ ಬಿ ಸರೋಜಾ ದೇವಿ ಇನ್ನಿಲ್ಲ

ಕನ್ನಡದ ಹಿರಿಯ ನಟಿ ಬಿ ಸರೋಜಾ ದೇವಿ ಇನ್ನಿಲ್ಲ. ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ 87 ವರ್ಷ ವಯಸ್ಸಾಗಿತ್ತು.

Read Full Story

09:51 AM (IST) Jul 14

ಶಿರಾಡಿಘಾಟ್‌ನಲ್ಲಿ ಜಲಪಾತಕ್ಕೆ ಬಿದ್ದ  ಕಾರು, ಬೆಂಗಳೂರು ಮೂಲದ ಪ್ರವಾಸಿಗರು ಬಚಾವ್

ಶಿರಾಡಿಘಾಟ್‌ನಲ್ಲಿ ಪ್ರವಾಸಿಗರ ಕಾರು ಜಲಪಾತಕ್ಕೆ ಉರುಳಿ ಬಿದ್ದ ಘಟನೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಜಲಪಾತಕ್ಕೆ ಬಿದ್ದಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Full Story

09:45 AM (IST) Jul 14

ಚಿಕ್ಕಮಗಳೂರು - ರಸ್ತೆಗಾಗಿ ಪ್ರಧಾನಿ ಮೋದಿ ವಿದ್ಯಾರ್ಥಿನಿ ಪತ್ರ, ಪತ್ರದಲ್ಲೇನಿದೆ?

ಲೋಕನಾಥಪುರದ ಸರ್ಕಾರಿ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿನಿ ಸಿಂಧೂರ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ತುಳುವಿನಕೊಪ್ಪ ಗ್ರಾಮ ಪಂಚಾಯಿತಿಯ ಮಲಗಾರು ಗ್ರಾಮದ ರಸ್ತೆಯ ಅವ್ಯವಸ್ಥೆ ಬಗ್ಗೆ ವಿವರಿಸಿದ್ದಾಳೆ.

Read Full Story

08:43 AM (IST) Jul 14

Report Diary - ಅರಣ್ಯನಾಶವನ್ನು ಖರ್ಗೆ ಬೊಕ್ಕತಲೆಗೆ ಹೋಲಿಸಿದ್ದೇಕೆ?

ಉಪೇಂದ್ರ ಸಿನಿಮಾ ರೀತಿ ರಾಜ್ಯ ಬಿಜೆಪಿ ನಾಯಕರು ಜೂನಿಯರ್‌ ಖರ್ಗೆಗೆ ‘ಐ ಲವ್‌ ಯು’ ಅಂತಿದ್ದಾರಂತೆ

Read Full Story

08:25 AM (IST) Jul 14

ಕಪ್ಪತಗುಡ್ಡದಲ್ಲಿ ಕಾಡು ಪ್ರಾಣಿಗಳ ನಿಗೂಢ ಸಾವು; ಅರಣ್ಯ ಇಲಾಖೆಗೆ ಮಾಹಿತಿಯೇ ಇಲ್ಲ!

ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಧಾಮದಲ್ಲಿ ಕಾಡುಬೆಕ್ಕುಗಳು ಸೇರಿದಂತೆ ಹಲವು ಪ್ರಾಣಿಗಳು ನಿಗೂಢವಾಗಿ ಸಾವನ್ನಪ್ಪಿವೆ. ರಾಸಾಯನಿಕ ಗೊಬ್ಬರ ಅಥವಾ ಇಲಿ ಪಾಷಾಣ ಸೇವನೆಯಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಅರಣ್ಯ ಇಲಾಖೆಗೆ ಈ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
Read Full Story

08:07 AM (IST) Jul 14

Namma Metro - ಹಳದಿ ಮಾರ್ಗ ಸಂಚಾರಕ್ಕೆ ರೆಡಿ ಆದ್ರೆ ಓಡಿಸೊಕೆ ರೈಲೇ ಇಲ್ಲ!

ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಹಳದಿ ಮಾರ್ಗದ ರೈಲು ಸಂಚಾರ ಆಗಸ್ಟ್‌ನಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಕಡಿಮೆ ರೈಲುಗಳ ಸಂಖ್ಯೆಯಿಂದಾಗಿ ಸಮಯ ಹಾಗೂ ವೇಳಾಪಟ್ಟಿ ರೂಪಿಸುವುದು ಬಿಎಂಆರ್‌ಸಿಎಲ್‌ಗೆ ಸವಾಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಮಾರ್ಗಸೂಚಿಗಳನ್ನು ರೂಪಿಸಲಾಗುತ್ತಿದೆ.
Read Full Story

07:17 AM (IST) Jul 14

ಡ್ರಗ್ಸ್ ಸಾಗಾಣಿಕೆ ಕೇಸ್‌ನಲ್ಲಿ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರೆಸ್ಟ್!

ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರನ್ನು ಮಾದಕ ದ್ರವ್ಯ ಸಾಗಣಿಕೆ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. 120ಕ್ಕೂ ಹೆಚ್ಚು ನಿಷೇಧಿತ ಎನ್‌ ರೆಕ್ಸ್ ಬಾಟಲ್‌ಗಳನ್ನು ಸಾಗಿಸುತ್ತಿದ್ದಾಗ ಬಂಧನಕ್ಕೊಳಗಾಗಿದ್ದಾರೆ. ಈ ಘಟನೆ ಕಲಬುರಗಿ ಭಾರೀ ಸಂಚಲನ ಮೂಡಿಸಿದೆ.

Read Full Story

More Trending News