ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಜಾತಿಗಣತಿ ತೀವ್ರ ಸಂಚಲನವನ್ನು ಸೃಷ್ಟಿಸಿದೆ. ‘ಜಾತಿವಾರು ಸಮೀಕ್ಷಾ ವರದಿಯನ್ನು ನಾನು ಇನ್ನೂ ನೋಡಿಲ್ಲ. ಈ ವಿಚಾರದಲ್ಲಿ ಆತುರದ ನಿರ್ಧಾರ ಮಾಡುವುದಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಕೇವಲ ಒಂದು ಸಮುದಾಯಕ್ಕೆ ಅಲ್ಲ, ಎಲ್ಲರಿಗೂ ನ್ಯಾಯ ಕೊಡಿಸಬೇಕಿರುವುದು ನನ್ನ ಹೊಣೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ‘ರಾಜ್ಯದಲ್ಲಿ ಮುಸ್ಲಿಮರೇ ಅತಿದೊಡ್ಡ ಜಾತಿ ಎಂದು ಜಾತಿಗಣತಿ ವರದಿ ನೀಡುವ ಹಿಂದೆ ಕುತಂತ್ರ ಅಡಗಿದೆ. ಮುಸ್ಲಿಂ ಎಂಬುದು ಒಂದು ಧರ್ಮ. ಆ ಧರ್ಮದಲ್ಲಿ ಬೇರೆ ಬೇರೆ ಜಾತಿ ಇದ್ದರೂ ಅವರನ್ನು ಯಾಕೆ ವಿಭಜಿಸಿಲ್ಲ?’ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹರಿಹಾಯ್ದಿದ್ದಾರೆ. ಜಾತಿಗಣತಿ ಬಗ್ಗೆ ಆತುರದಲ್ಲಿ ಏನನ್ನೂ ಹೇಳಲ್ಲ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ, ಮುಖ್ಯಮಂತ್ರಿಗೆ ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದು ಕಾಂಗ್ರೆಸ್ ನ ಲಿಂಗಾಯತ ಸಚಿವರು, ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ.

11:39 PM (IST) Apr 14
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಫೋಟೋ ಮೂಲಕ ಭಾರಿ ಖ್ಯಾತಿ ಗಳಿಸಿದ ಪಾಕಿಸ್ತಾನದ ಚಾಯ್‌ವಾಲ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ. ಲಂಡನ್‌ನಲ್ಲೂ ಚಾಯ್‌ವಾಲ ಶಾಪ್ ಶಾಖೆ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಆದರೆ ಶ್ರೀಮಂತ ಉದ್ಯಮಿಯಾಗಿರುವ ಈ ಚಾಯ್‌ವಾಲಾನ ಗಡೀಪಾರು ಮಾಡಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.
ಪೂರ್ತಿ ಓದಿ11:36 PM (IST) Apr 14
ಹಳೆಯ ಪ್ರೀತಿಯ ನೆನಪುಗಳು ಮದುವೆಯ ನಂತರವೂ ಕಾಡುತ್ತಿದ್ದರೆ, ಅದರಿಂದ ಹೊರಬರಲು ಕೆಲವು ಸಲಹೆಗಳಿವೆ. ಸತ್ಯವನ್ನು ಒಪ್ಪಿಕೊಳ್ಳುವುದು, ವರ್ತಮಾನದಲ್ಲಿ ಬದುಕುವುದು ಮತ್ತು ನಂಬಿಕೆಯನ್ನು ಬೆಳೆಸಿಕೊಳ್ಳುವುದು ಮುಖ್ಯ.
ಪೂರ್ತಿ ಓದಿ11:11 PM (IST) Apr 14
ಹಿರಿಯ ಪತ್ರಕರ್ತ, ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್ ಮಾಜಿ ಸಂಪಾದಕ, ಡಿಜಿಟಲ್ ಸುದಿ ಮಾಧ್ಯಮದ ದಿಗ್ಗಜ ಎಂದೇ ಗುರುತಿಸಿಕೊಂಡಿದ್ದ ಎಸ್‌ಕೆ ಶ್ಯಾಮ ಸುಂದರ್ ನಿಧನರಾಗಿದ್ದಾರೆ.
10:50 PM (IST) Apr 14
ದೆಹಲಿ ಮೆಟ್ರೋದಲ್ಲಿ ನಿದ್ದೆ ಮಾಡುತ್ತಿದ್ದ ಯುವಕನಿಗೆ ಮಹಿಳೆಯೊಬ್ಬರು ಆಸರೆಯಾಗಿದ್ದು, ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಸಮ್ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಪೂರ್ತಿ ಓದಿ09:43 PM (IST) Apr 14
ಬಂಗಾರದ ಬೆಲೆ ಭವಿಷ್ಯ: ಅಮೆರಿಕ-ಚೀನಾ ನಡುವಿನ ವ್ಯಾಪಾರ ಸಮರದಿಂದ ಬಂಗಾರದ ಬೆಲೆ ಏರಬಹುದು. ಗೋಲ್ಡ್‌ಮನ್ ಸ್ಯಾಕ್ಸ್ ಈ ರೀತಿ ಅಂದಾಜಿಸಿದೆ. ಪರಿಸ್ಥಿತಿ ಕೈಮೀರಿದ್ರೆ, ಬಂಗಾರದ ಬೆಲೆ 10 ಗ್ರಾಂಗೆ 1.30 ಲಕ್ಷ ರೂಪಾಯಿ ತಲುಪಬಹುದು.
ಪೂರ್ತಿ ಓದಿ09:21 PM (IST) Apr 14
ಖ್ಯಾತ ಗಾಯಕ ಶಾನ್, ಪುಣೆಯ ಪ್ರಭಾಚಿವಾಡಿಯಲ್ಲಿ ಪತ್ನಿ ರಾಧಿಕಾ ಮುಖರ್ಜಿ ಜೊತೆಗೂಡಿ ₹ 10 ಕೋಟಿಗೆ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ. ಈ ಆಸ್ತಿಯು 0.4 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, 5,500 ಚದರ ಅಡಿ ನಿರ್ಮಾಣ ಪ್ರದೇಶವನ್ನು ಒಳಗೊಂಡಿದೆ.
ಪೂರ್ತಿ ಓದಿ09:12 PM (IST) Apr 14
ಸೈಕೋ ಗಂಡನಿಂದ ತಪ್ಪಿಸಿಕೊಳ್ಳಲು ಹೋದ ಜಾಹ್ನವಿ ಮತ್ತೆ ಅವನ ಕೈಗೆ ಸಿಕ್ಕಿಬಿದ್ದಿದ್ದಾಳೆ. ತವರುಮನೆಗೆ ಬಂದರೂ ಜಯಂತ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದೆ ಆಕೆಯ ಜೀವನ ಹೇಗಿರಲಿದೆ?
ಪೂರ್ತಿ ಓದಿ08:54 PM (IST) Apr 14
ನಟಿ ಸುನೀತಾ ಅಹುಜಾ ಫ್ಯಾಷನ್ ಶೋನಲ್ಲಿ ಗೋವಿಂದ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ. ವಿಚ್ಛೇದನದ ವದಂತಿಗಳ ನಡುವೆ, ಸುನಿತಾ ಅವರ ಪ್ರತಿಕ್ರಿಯೆ ಕುತೂಹಲ ಮೂಡಿಸಿದೆ.
ಪೂರ್ತಿ ಓದಿ08:49 PM (IST) Apr 14
ಶ್ರೀಗನರದ ತುಲಿಪ್ ಗಾರ್ಡನ್ ಏಷ್ಯಾದ ಅತೀ ದೊಡ್ಡ ತುಲಿಪ್ ಹೂವುಗಳ ಗಾರ್ಡನ್ ಅನ್ನೋ ಖ್ಯಾತಿಗೆ ಪಾತ್ರವಾಗಿದೆ. ಇದೀಗ ಇದೇ ಗಾರ್ಡನ್‌ನಲ್ಲಿ 17 ಲಕ್ಷ ತುಲಿಪ್ ಹೂವು ಅರಳುವ ಮೂಲಕ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ.
ಪೂರ್ತಿ ಓದಿ07:48 PM (IST) Apr 14
ಪಕ್ಕದ ಮನೆಯವನ ಜೊತೆ ಹಾಸಿಗೆಯಲ್ಲಿರುವಾಗಲೇ ಗಂಡ ಮನೆಗೆ ಎಂಟ್ರಿಕೊಟ್ಟಿದ್ದಾನೆ. ಈ ದೃಶ್ಯ ನೋಡಿ ಪತಿಯ ಪಿತ್ತ ನೆತ್ತಿಗೇರಿದೆ. ಪತಿಯ ಆಕ್ರೋಶಕ್ಕೆ ಇದೀಗ ಪಕ್ಕದ ಮನೆಯವನಿಗೆ ಅದೇ ಇಲ್ಲದಂತಾಗಿದೆ.
ಪೂರ್ತಿ ಓದಿ07:47 PM (IST) Apr 14
ಹಾರ್ದಿಕ್ ಪಾಂಡ್ಯ ಅವರ ಗೆಳತಿ ಜಾಸ್ಮಿನ್ ವಾಲಿಯಾ ದೆಹಲಿಯಲ್ಲಿ ಕಾಣಿಸಿಕೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ ಚೀಯರ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಜಾಸ್ಮಿನ್ ಹಾರ್ದಿಕ್‌ಗೆ ಸಪೋರ್ಟ್ ಮಾಡುತ್ತಿದ್ದರು.
ಪೂರ್ತಿ ಓದಿ07:02 PM (IST) Apr 14
ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರ ಅಂತಿಮ ದರ್ಶನದಲ್ಲಿ ಮಾತನಾಡಿದ ಟೆನ್ನಿಸ್ ಕೃಷ್ಣ, ಹಿರಿಯ ಕಲಾವಿದರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಬ್ಯಾಂಕ್ ಜನಾರ್ಧನ್ ಅವರ ನಿಧನಕ್ಕೆ ಅನೇಕ ಕಲಾವಿದರು ಸಂತಾಪ ಸೂಚಿಸಿದರು.
ಪೂರ್ತಿ ಓದಿ06:09 PM (IST) Apr 14
IT layoff 2025: ಮತ್ತೊಂದು ಹಂತದ ಲೇಆಫ್ ಶುರುವಾಗಿದೆ. ಈಗಾಗಲೇ ಸಾಕಷ್ಟು ಕಂಪೆನಿಗಳು ಉದ್ಯೋಗಿಗಳನ್ನು ಹೊರಗಡೆ ಕಳಿಸಿದ್ದು, ಈಗ ಇನ್ನೊಂದು ಹಂತ ಶುರುವಾಗಿದೆ.
ಪೂರ್ತಿ ಓದಿ06:09 PM (IST) Apr 14
ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಕ್ಕೆ ಸಂಪರ್ಕಿಸುವ ನಮ್ಮ ಮೆಟ್ರೋದ ನೀಲಿ ಮಾರ್ಗದ ಮೊದಲ ಹಂತವು 2026 ರ ಮಧ್ಯಭಾಗದಲ್ಲಿ ಉದ್ಘಾಟನೆಯಾಗಲಿದೆ. 18 ಕಿಲೋಮೀಟರ್ ಉದ್ದದ ಈ ಮಾರ್ಗವು ಹೊರ ವರ್ತುಲ ರಸ್ತೆ ಮತ್ತು ಪ್ರಮುಖ ಐಟಿ ಕಾರಿಡಾರ್‌ಗಳಲ್ಲಿ ಹಾದುಹೋಗುತ್ತದೆ.
ಪೂರ್ತಿ ಓದಿ06:07 PM (IST) Apr 14
ಪ್ರಧಾನಿ ಮೋದಿಗಾಗಿ ರಾಂಪಾಲ್ ಕಶ್ಯಪ್ ಶಪಥ ಮಾಡಿದ್ದರು. ಇದರಂತೆ ಕಳೆದ 14 ವರ್ಷದಿಂದ ಚಪ್ಪಲಿ ಧರಿಸದೆ ಬರಿಗಾಲಲ್ಲೇ ಓಡಾಡುತ್ತಿದ್ದ ಕಶ್ಯಪ್ ಭೇಟಿಯಾದ ಮೋದಿ ಹೊಸ ಶೂ ಕೊಡಿಸಿದ್ದಾರೆ. ಈ ಮೂಲಕ ಕಶ್ಯಪ್ ಶಪಥ ಅಂತ್ಯಗೊಳಿಸಿದ್ದಾರೆ. ಪ್ರಧಾನಿಯೊಬ್ಬರು ಸಾಮಾನ್ಯ ವ್ಯಕ್ತಿಗೆ ಶೂ ಕೊಟ್ಟ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಪೂರ್ತಿ ಓದಿ06:04 PM (IST) Apr 14
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿ ದರಗಳನ್ನು ಕಡಿಮೆ ಮಾಡಿದೆ. ಪರಿಷ್ಕರಿಸಿದ ದರಗಳು ಏಪ್ರಿಲ್ 15 ರಿಂದ ಜಾರಿಗೆ ಬರಲಿದ್ದು, ಒಂದು ವರ್ಷದಿಂದ ಮೂರು ವರ್ಷಗಳವರೆಗಿನ ಆಯ್ದ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಲಾಗಿದೆ.
ಪೂರ್ತಿ ಓದಿ05:44 PM (IST) Apr 14
ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದವರೆಲ್ಲಾ ಶೂದ್ರರು. ಶೂದ್ರರು ಓಂ ನಮಃ ಶಿವಾಯ ಎಂದು ಹೇಳಿದರೆ ನಾಲಿಗೆ ಕತ್ತರಿಸುತ್ತಿದ್ದರು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಪೂರ್ತಿ ಓದಿ05:29 PM (IST) Apr 14
ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಕ್ಫ್ ಆಸ್ತಿ ದುರುಪಯೋಗದ ಆರೋಪ ಮಾಡಿದ್ದಾರೆ. ಇದರಿಂದ ಮುಸ್ಲಿಂ ಯುವಕರು ಸಣ್ಣ ಕೆಲಸಗಳಿಗೆ ಸೀಮಿತವಾಗುವಂತಾಗಿದೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸಿದ್ದಾರೆ.
ಪೂರ್ತಿ ಓದಿ05:24 PM (IST) Apr 14
ಜನಪ್ರಿಯ ಬಿಗ್ ಬಾಗ್ ಶೋಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ 2025ರ ಶೋ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಭಾರತದಲ್ಲಿ ಮೊದಲು ಹಿಂದಿಯಲ್ಲೇ ಆರಂಭಗೊಂಡ ಬಿಗ್ ಬಾಸ್ ಇದೀಗ ಹಿಂದಿಯಿಂದಲೇ ಅಂತ್ಯಗೊಳ್ಳುತ್ತಾ.
05:17 PM (IST) Apr 14
ಉತ್ತರಾಖಂಡ್‌ನಲ್ಲಿ ಹೆಣ್ಣು ಮಗು ಜನಿಸಿದ ಕಾರಣಕ್ಕೆ ಪತ್ನಿಯ ಮೇಲೆ ಗಂಡ ಸ್ಕ್ರೂಡ್ರೈವರ್‌ನಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವರದಕ್ಷಿಣೆ ಕಿರುಕುಳದ ಆರೋಪವೂ ಕೇಳಿಬಂದಿದೆ.
ಪೂರ್ತಿ ಓದಿ04:56 PM (IST) Apr 14
ಬೀದರ್‌ನಲ್ಲಿ ಮದುವೆ ಕಾರ್ಡ್ ಕೊಡಲು ಹೋದ ಯುವಕನಿಗೆ ವಿಳಾಸ ಸಿಗದೆ ಮಕ್ಕಳ ಬಳಿ ವಿಚಾರಿಸಿದ್ದಕ್ಕೆ ಮಕ್ಕಳ ಕಳ್ಳನೆಂದು ದೂರು ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಮದುವೆ ಕಾರ್ಡ್ ಕೊಡಲು ಬಂದಿದ್ದು ಎಂದು ತಿಳಿದುಬಂದಿದೆ.
ಪೂರ್ತಿ ಓದಿ04:15 PM (IST) Apr 14
ಮೈಸೂರಿನಲ್ಲಿ ರಸ್ತೆ ಅಗಲೀಕರಣಕ್ಕಾಗಿ 50 ವರ್ಷಗಳಿಗಿಂತ ಹಳೆಯದಾದ 45 ಮರಗಳನ್ನು ಕಡಿದು ಹಾಕಲಾಗಿದೆ. ಈ ಕ್ರಮವು ಪರಿಸರವಾದಿಗಳು ಮತ್ತು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ, ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶವಾಗುತ್ತಿದೆ ಎಂದು ಟೀಕಿಸಿದ್ದಾರೆ.
ಪೂರ್ತಿ ಓದಿ04:14 PM (IST) Apr 14
ನಿಮ್ಮ ಏಕಾಗ್ರತೆ, ಗಮನ ಮತ್ತು ಮಾನಸಿಕ ಸ್ಥಿರತೆಯನ್ನು ಹೆಚ್ಚಿಸಲು 7 ಪ್ರಾಚೀನ ತಂತ್ರಗಳನ್ನು ಇಲ್ಲಿ ನೀಡಲಾಗಿದೆ. ತ್ರಾಟಕ, ಪ್ರಾಣಾಯಾಮ, ಧಾರಣ, ಜಪ, ಯೋಗ ನಿದ್ರೆ, ಅಭ್ಯಾಸ ಮತ್ತು ನಾದ ಯೋಗದಂತಹ ತಂತ್ರಗಳು ನಿಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತವೆ.
ಪೂರ್ತಿ ಓದಿ04:03 PM (IST) Apr 14
ಮೆಟ್ರೋ ದರ ಏರಿಕೆಯಿಂದ ದೂರ ಸರಿದಿದ್ದ ಪ್ರಯಾಣಿಕರು ಮತ್ತೆ ಮೆಟ್ರೋಗೆ ಮರಳಿದ್ದಾರೆ. ಅಂಬೇಡ್ಕರ್ ಜಯಂತಿ ರಜೆಯಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಬಿಎಂಆರ್‌ಸಿಎಲ್ 4 ಹೆಚ್ಚುವರಿ ರೈಲು ಸೇವೆ ಒದಗಿಸಿದೆ.
ಪೂರ್ತಿ ಓದಿ03:46 PM (IST) Apr 14
ಜೈಪುರದಲ್ಲಿ ನಡೆದ ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ಪಂದ್ಯದ ವೇಳೆ ಕೊಹ್ಲಿ ಮತ್ತು ದ್ರಾವಿಡ್ ಭೇಟಿಯಾದರು. ಈ ವೇಳೆ ಕೊಹ್ಲಿ, ದ್ರಾವಿಡ್ ಅವರ ಯೋಗಕ್ಷೇಮ ವಿಚಾರಿಸಿದರು. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ 100 ಅರ್ಧಶತಕ ಬಾರಿಸಿದ ಸಾಧನೆ ಮಾಡಿದರು.
ಪೂರ್ತಿ ಓದಿ03:38 PM (IST) Apr 14
ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ಅಧಿಕಾರಕ್ಕಾಗಿ ಬಳಸುತ್ತಿದೆ ಎಂದು ಟೀಕಿಸಿದ್ದಾರೆ. ಕರ್ನಾಟಕದಲ್ಲಿ ಎಸ್‌ಸಿ/ಎಸ್‌ಟಿ, ಒಬಿಸಿಗೆ ಅನ್ಯಾಯ ಮಾಡಿ ಮುಸ್ಲಿಮರಿಗೆ ಮೀಸಲಾತಿ ನೀಡಿದೆ ಎಂದು ಆರೋಪಿಸಿದ್ದಾರೆ.
ಪೂರ್ತಿ ಓದಿ03:27 PM (IST) Apr 14
ಯುಎಸ್ ಡಿಫೆನ್ಸ್ ಸೆಕ್ರೆಟರಿ ಪೀಟ್ ಹೆಗ್ಸೆತ್ ಆದೇಶದ ಪ್ರಕಾರ, ಕೆಲ ಕಂಪೆನಿಗಳ ಜೊತೆಗಿನ ಒಪ್ಪಂದವನ್ನು ಕಡಿತಗೊಳಿಸಲಿದ್ದು, ಒಂದಷ್ಟು ಕಂಪೆನಿಗಳ ಲೇಆಫ್ ಆಗಲಿದೆಯಾ?
ಪೂರ್ತಿ ಓದಿ03:12 PM (IST) Apr 14
ವಿದೇಶಿ ರಾಯಭಾರಿ ಜೊತೆ ಅಫೇರ್ ಇಟ್ಟುಕೊಂಡ ಮಾಡೆಲ್ ಮೆಘ್ನಾ ಅರೆಸ್ಟ್ ಆಗಿದ್ದಾರೆ. ಮದುವೆಯಾಗಿರುವ ರಾಯಭಾರಿ ಜೊತಗಿನ ಸಂಬಂಧವನ್ನು ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸದ್ದೇ ಮೆಘ್ನಾಗೆ ಮುಳುವಾಗಿದೆ.
ಪೂರ್ತಿ ಓದಿ03:05 PM (IST) Apr 14
ಉತ್ತರ ಪ್ರದೇಶದ ಮೀರತ್‌ನಲ್ಲಿ ನಿದ್ದೆಯಲ್ಲಿದ್ದ ಯುವಕನಿಗೆ ಹಾವು ಕಚ್ಚಿ ಸಾವನ್ನಪ್ಪಿದ್ದಾನೆ. ದೇಹದ ಮೇಲೆ 10 ಕಡೆ ಹಾವು ಕಚ್ಚಿದ ಗುರುತುಗಳಿದ್ದು, ಕುಟುಂಬಸ್ಥರು ಆಘಾತಗೊಂಡಿದ್ದಾರೆ.
ಪೂರ್ತಿ ಓದಿ03:03 PM (IST) Apr 14
ಟಾಟಾ ಮೋಟಾರ್ಸ್ ಜಾಗ್ವಾರ್ ಅನ್ನು ಚೀನಾದ ಗೀಲಿಗೆ ಮಾರಾಟ ಮಾಡಿದೆ ಎಂಬ ವರದಿ ಸುಳ್ಳು ಎಂದು ಟಾಟಾ ಮೋಟಾರ್ಸ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ದೃಢಪಡಿಸಿವೆ. 2008 ರಲ್ಲಿ ಟಾಟಾ ಮೋಟಾರ್ಸ್ ಫೋರ್ಡ್ ನಿಂದ ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಸ್ವಾಧೀನಪಡಿಸಿಕೊಂಡಿತು.
ಪೂರ್ತಿ ಓದಿ02:47 PM (IST) Apr 14
ಐಪಿಎಲ್ ಮತ್ತು ಪಿಎಸ್‌ಎಲ್ ಟೂರ್ನಿಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಐಪಿಎಲ್‌ನಲ್ಲಿ ಆಟಗಾರರಿಗೆ ದುಡ್ಡಿನ ಮಳೆಯೇ ಸುರಿಯುತ್ತದೆ, ಆದರೆ ಪಿಎಸ್‌ಎಲ್‌ನಲ್ಲಿ ಶತಕ ಬಾರಿಸಿದವರಿಗೆ ಹೇರ್ ಡ್ರೈಯರ್ ಗಿಫ್ಟ್ ನೀಡುತ್ತಾರೆ. ಐಪಿಎಲ್ ಚಾಂಪಿಯನ್ ತಂಡಕ್ಕೆ 20 ಕೋಟಿ ಬಹುಮಾನ ಸಿಕ್ಕರೆ, ಪಿಎಸ್‌ಎಲ್ ಚಾಂಪಿಯನ್ ತಂಡಕ್ಕೆ ಕೇವಲ 4.30 ಕೋಟಿ ಸಿಗುತ್ತದೆ.
ಪೂರ್ತಿ ಓದಿ01:39 PM (IST) Apr 14
ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಕೊಲೆ ಪ್ರಕರಣವು ತೀವ್ರ ಆಘಾತವನ್ನುಂಟು ಮಾಡಿದೆ. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ, ಆರೋಪಿ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ.
ಪೂರ್ತಿ ಓದಿ01:18 PM (IST) Apr 14
2025ರ ಅಮರನಾಥ ಯಾತ್ರೆಗೆ ಏಪ್ರಿಲ್ 14ರಿಂದ ನೋಂದಣಿ ಆರಂಭವಾಗಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ನೋಂದಣಿ ವಿಧಾನಗಳು, ಕಡ್ಡಾಯ ಆರೋಗ್ಯ ತಪಾಸಣೆ, ಪಾಲಿಸಬೇಕಾದ ನಿಯಮಗಳು ಮತ್ತು ಸಲಹೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪೂರ್ತಿ ಓದಿ01:07 PM (IST) Apr 14
ಉತ್ತರ ಪ್ರದೇಶದಲ್ಲಿ ಸಬ್‌ಇನ್ಸ್‌ಪೆಕ್ಟರ್ ಒಬ್ಬರು ಕಳ್ಳತನದ ಆರೋಪಿಯ ಮನೆ ಶೋಧಿಸುವ ಬದಲು, ಹಾಲಿ ಜಡ್ಜ್ ಅವರ ಮನೆಯನ್ನೇ ಶೋಧಿಸಿ ಎಡವಟ್ಟು ಮಾಡಿದ್ದಾರೆ. ಈ ಘಟನೆ ಬಾರ್ ಅಸೋಸಿಯೇಷನ್‌ನ ಆಕ್ರೋಶಕ್ಕೆ ಕಾರಣವಾಗಿದ್ದು, ಸಬ್‌ಇನ್ಸ್‌ಪೆಕ್ಟರ್ ಮೇಲೆ ಶಿಸ್ತುಕ್ರಮ ಜರುಗಿಸಲಾಗಿದೆ.
ಪೂರ್ತಿ ಓದಿ01:05 PM (IST) Apr 14
ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೆ ಕೊಲೆ ಬೆದರಿಕೆ ಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬ ಕಾರಿನಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ ಹಾಕಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಕೂಡ ಸಲ್ಮಾನ್ ಖಾನ್‌ಗೆ ಹಲವು ಬಾರಿ ಬೆದರಿಕೆ ಕರೆಗಳು ಬಂದಿದ್ದವು.
ಪೂರ್ತಿ ಓದಿ01:04 PM (IST) Apr 14
ರಾಮ ಜಗದೀಶ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾದ ಬಜೆಟ್ 5 ರಿಂದ 10 ಕೋಟಿ ಎನ್ನಲಾಗಿದೆ. ಆದರೆ ಈ ಚಿತ್ರ ಅಪಾರ ಜನಮನ್ನಣೆ ಗಳಿಸಿದ್ದು, ಚಿತ್ರಮಂದಿರದಲ್ಲಿಯೇ 60ಕ್ಕೂ ಹೆಚ್ಚು ಕೋಟಿ ಗಳಿಸಿರುವುದಾಗಿ ವರದಿಯಾಗಿದೆ.
12:33 PM (IST) Apr 14
ವಿದ್ಯಾರ್ಥಿಗಳ ಕೊರತೆಯಿಂದ ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೆ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಮಾತ್ರ ಬಹುಬೇಡಿಕೆಯ ವಿವಿ ಎನಿಸಿದೆ. ವಿದ್ಯಾರ್ಥಿಗಳಿಗೇನೂ ಕೊರತೆಯಿಲ್ಲ.
ಪೂರ್ತಿ ಓದಿ12:27 PM (IST) Apr 14
ಮಹಾರಾಷ್ಟ್ರದಲ್ಲಿ ರೈತರಿಗೆ ಉಚಿತ ವಿದ್ಯುತ್ ನೀಡಲು ಸರ್ಕಾರ ನಿರ್ಧರಿಸಿದೆ. ಡಿಸೆಂಬರ್ 2026 ರ ವೇಳೆಗೆ, ರಾಜ್ಯದ 80% ರೈತರಿಗೆ ಪ್ರತಿದಿನ 12 ಗಂಟೆಗಳ ಉಚಿತ ವಿದ್ಯುತ್ ಸಿಗಲಿದೆ ಎಂದು ಫಡ್ನವೀಸ್ ಹೇಳಿದ್ದಾರೆ.
ಪೂರ್ತಿ ಓದಿ12:24 PM (IST) Apr 14
ಕೌಟುಂಬಿಕ ಕಲಹದಿಂದ ಮನನೊಂದು ಸಾಫ್ಟ್‌ವೇರ್ ಇಂಜಿನಿಯರ್ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಭವನದ ಬಳಿ ನಡೆದಿದೆ. ಹೆಬ್ಬಾಳ ನಿವಾಸಿ ಜುಹೈಲ್ ಅಹಮದ್ (26) ಆತ್ಮಹತ್ಯೆಗೆ ಯತ್ನಿಸಿದವರು.
ಪೂರ್ತಿ ಓದಿ11:57 AM (IST) Apr 14
ಇಲ್ಲಿ ಪ್ರಶಸ್ತಿ ಸ್ವೀಕರಿಸಿದ ಒಬ್ಬೊಬ್ಬ ಸಾಧಕರನ್ನು ನೋಡಿದರೆ ನೀರಿನ ಹರಿವಿನ ವಿರುದ್ಧ ಈಜಿದವರದ್ದೇ ಜಗತ್ತು ಎನಿಸುತ್ತಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಪ್ರಶಂಸೆ ವ್ಯಕ್ತಪಡಿಸಿದರು.