ಬಳ್ಳಾರಿ/ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಬುಧವಾರ ಕಾಂಗ್ರೆಸಿನ ಐವರು ಶಾಸಕರು ಹಾಗೂ ಬಳ್ಳಾರಿ ಸಂಸದ ಇ. ತುಕಾರಾಂ ಅವರ ನಿವಾಸಗಳ ಮೇಲೆ ದಾಳಿ ನಡೆಸಿ ಭಾರಿ ಶಾಕ್ ನೀಡಿದ್ದಾರೆ. ಬೆಂಗಳೂರಿನ 3, ಬಳ್ಳಾರಿ- ವಿಜಯನಗರ ಜಿಲ್ಲೆಯ 5 ಸೇರಿ ಒಟ್ಟು 8 ಕಡೆ ದಾಳಿ ನಡೆಸಲಾಗಿದೆ. ಬೆಳಗ್ಗೆ 6ಕ್ಕೆ ಆರಂಭವಾದ ದಾಳಿ ಹದಿನೈದೂವರೆ ತಾಸಿನ ಬಳಿಕ ರಾತ್ರಿ 9.30ಕ್ಕೆ ಮುಗಿದಿದೆ. ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ ಬೆಂಗಳೂರಿನ ಕೊಡಿಗೇ ಹಳ್ಳಿ ಸಮೀಪದ ರೈನ್ ಟ್ರಿ ಬುಲೇವಾರ್ಡ್ ಅಪಾರ್ಟ್ ಮೆಂಟ್, ಶಾಸಕರ ಭವನದ 4ನೇ ಮಹಡಿಯ ನಾಗೇಂದ್ರ ಅವರ ಕೊಠಡಿ ಸಂಖ್ಯೆ 360, ಬಳ್ಳಾರಿಯ ನೆಹರು ಕಾಲನಿಯಲ್ಲಿರುವ ನಗರ ಶಾಸಕ ನಾರಾ ಭರತ್ ರೆಡ್ಡಿ ನಿವಾಸ, ಕಂಪ್ಲಿಯ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಶಾಸಕ ಜೆ.ಎನ್. ಗಣೇಶ್ ಅವರ ನಿವಾಸ ಹಾಗೂ ಸಂಡೂರಿನ ಅಶೋಕ ಕಾಲನಿಯಲ್ಲಿರುವ ಬಳ್ಳಾರಿ ಸಂಸದ ಇ. ತುಕಾರಾಂ ಹಾಗೂ ಅವರ ಪತ್ನಿ ಸಂಡೂರು ಶಾಸಕಿ ಇ.ಅನ್ನಪೂರ್ಣ ಅವರ ನಿವಾಸ, ಸಂಸದರ ಬೆಂಗಳೂರಿನ ಜಯನಗರ ನಿವಾಸ, ವಿಜಯನಗರ ಜಿಲ್ಲೆ ಕೂಡ್ಲಿಗಿ ಶಾಸಕ ಡಾ.ಎನ್ .ಟಿ. ಶ್ರೀನಿವಾಸ್ ಅವರ ನರಸಿಂಹನಗಿರಿ ಗ್ರಾಮದ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಈ ಹಿಂದೆ ನಾಗೇಂದ್ರ ಮನೆಯ ಮೇಲೆ ದಾಳಿ ನಡೆಸಿದ್ದ ಇ.ಡಿ., ಅಲ್ಲಿ ದೊರೆತ ಕೆಲವು ದಾಖಲೆಗಳನ್ನು ಆಧರಿಸಿ ಈ ದಾಳಿ ನಡೆಸಿದೆ ಎನ್ನಲಾಗಿದೆ.

12:16 AM (IST) Jun 13
ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯಲಕ್ಷ್ಮಿ ಕಾಲೋನಿಯಲ್ಲಿ ರೌಡಿ ಪುನೀತ್ ಅಲಿಯಾಸ್ ನೇಪಾಳಿ ಪುನೀತ್‌ನ ಕೊಲೆ ಕೇಸ್‌ನಲ್ಲಿ ಆಘಾತಕಾರಿ ಬೆಳವಣಿಗೆ ನಡಿದಿದ್ದು, ಈ ಪ್ರಕರಣದಲ್ಲಿ ಕೊಲೆಗೆ ಯತ್ನಿಸಿದವನೇ ಕೊಲೆಗೀಡಾಗಿದ್ದಾನೆ.
11:24 PM (IST) Jun 12
ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಗೆ ನಂಬರ್ 12 ಮೇಲೆ ಎಲ್ಲಿಲ್ಲದ ಮೋಹ. ತಮ್ಮ ಎಲ್ಲಾ ವಾಹನಗಳ ನಂಬರ್ 12 ಇರಲೇ ಬೇಕು. ದುರಂತ ಅಂದರೆ ಇದೇ 12 ನಂಬರ್ ಯಾತ್ರೆ ತಮ್ಮ ಕೊನೆಯ ಯಾತ್ರೆಯಾಗಲಿದೆ ಅನ್ನೋ ಸುಳಿವು ಇರಲಿಲ್ಲ.
10:42 PM (IST) Jun 12
10:00 PM (IST) Jun 12
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಇಬ್ಬರು ಪೈಲೆಟ್, ಸಿಬ್ಬಂದಿಗಳು ಪ್ರಯಾಣಿಕರು ಸೇರಿದಂತೆ 241 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಕೋ ಪೈಲೆಟ್ ಕ್ಲೈವ್ ಕುಂದರ್ ಬಾಲಿವುಡ್ ನಟ ವಿಕ್ರಾಂತಿ ಮಾಸ್ಸೆ ಸಂಬಂಧಿ. ಘಟನೆ ನನೆದು ವಿಕ್ರಾಂತ ಮಾಸ್ಸೆ ಕಣ್ಣೀರಿಟ್ಟಿದ್ದಾರೆ.
09:14 PM (IST) Jun 12
08:39 PM (IST) Jun 12
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದ ಪ್ರಯಾಣಿಕರ ಕುಟುಂಬಕ್ಕೆ ಟಾಟಾ ಸಮೂಹ ತಲಾ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಾಳು ಚಿಕಿತ್ಸಾ ವೆಚ್ಚ, ಹಾಸ್ಟೆಲ್ ಮರು ನಿರ್ಮಾಣ ಸೇರಿದಂತೆ ಪ್ರಮುಖ ಭರವಸೆ ನೀಡಿದೆ.
08:03 PM (IST) Jun 12
07:55 PM (IST) Jun 12
ಅಹಮ್ಮದಾಬಾದ್ ಏರ್ ಇಂಡಿಯಾ ವಿಮಾನ ದುರಂತಕ್ಕೂ ಕೆಲವೇ ಕ್ಷಣಗಳ ಮುನ್ನ ಬ್ರಿಟಿಷ್ ಪ್ರಯಾಣಿಕ ತೆಗೆದ ಕೊನೆಯ ವಿಡಿಯೋ ಪತ್ತೆಯಾಗಿದೆ. ಗುಡ್ ಬೈ ಟು ಇಂಡಿಯಾ ಎಂದಿರುವ ಈ ವಿಡಿಯೋ ಹಲವರ ಕಣ್ಣಾಲಿ ತೇವಗೊಳಿಸಿದೆ.
07:34 PM (IST) Jun 12
ಅಹಮ್ಮದಾಬಾದ್ ಏರ್ ಇಂಡಿಯಾ ವಿಮಾನ ಪತದಲ್ಲಿ 242 ಪ್ರಯಾಣಿಕರ ಪೈಕಿ 241 ಮಂದಿ ನಿಧನರಾಗಿದ್ದಾರೆ. ಆದರೆ ಒರ್ವ ಪ್ರಯಾಣಿಕ ಪವಾಡ ಸದಶ್ಯವಾಗಿ ಪಾರಾಗಿದ್ದಾರೆ.
07:30 PM (IST) Jun 12
ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI171 ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿ, 241 ಮಂದಿ ಮೃತಪಟ್ಟಿದ್ದಾರೆ. ವಿಮಾನವು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ಗೆ ಡಿಕ್ಕಿ ಹೊಡೆದಿದ್ದು, ಹಲವಾರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
06:46 PM (IST) Jun 12
ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮೃತಪಟ್ಟಿರುವುದು ಖಚಿತವಾಗಿದೆ. ರೂಪಾನಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
06:36 PM (IST) Jun 12
ಮದುವೆಗೂ ಮುನ್ನ ಗರ್ಭಿಣಿಯಾಗಿರುವ ವಿಷಯ ಗಂಡನ ಮನೆಯವರಿಗೆ ತಿಳಿಯುತ್ತಲೇ ಮಹಿಳೆಯೇ ಟಾರ್ಚರ್ ಕೊಟ್ಟು ಪತಿಯ ಸಾವಿಗೆ ಕಾರಣಳಾಗಿದ್ದಾಳೆ! ಮಹಿಳಾ ಪರ ಕಾನೂನುಗಳ ದುರ್ಬಳಕೆಯ ಆರೋಪದ ಬೆನ್ನಲ್ಲೇ, ಈ ಘಟನೆ ನಡೆದಿದೆ...
06:35 PM (IST) Jun 12
ಪದ್ಮಗಂಧಿಯ ಹಾಡುಗಳೆಲ್ಲವೂ ತಯಾರಾಗಿವೆ. ಅವುಗಳ ಒಂದಷ್ಟು ಝಲಕ್ಕುಗಳನ್ನು ಮಾಧ್ಯಮದವರ ಮುಂದೆ ಪ್ರದರ್ಶಿಸಲಾಗಿದೆ. ಈ ಮೂಲಕ ಪದ್ಮಗಂಧಿಯ ಹಾಡುಗಳ ಸಣ್ಣ ಪರಿಚಯವನ್ನು ಪ್ರೇಕ್ಷಕರತ್ತ ತಲುಪಿಸುವ ಪ್ರಯತ್ನವೂ ನಡೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪದ್ಮಗಂಧಿಯ ಹಾಡುಗಳು ಪ್ರೇಕ್ಷಕರ ಮುಂದೆ ಬರಲಿವೆ.
06:34 PM (IST) Jun 12
06:31 PM (IST) Jun 12
ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ದುರಂತವಾಗಿದೆ. ಅವರ ರಾಜಕೀಯ ಜೀವನ, ಸಾಧನೆಗಳು, ಮತ್ತು ವಿವಾದಗಳನ್ನು ಒಳಗೊಂಡ ಸಂಕ್ಷಿಪ್ತ ವಿವರಣೆ. ಬರ್ಮಾದಿಂದ ಗುಜರಾತ್‌ಗೆ ವಲಸೆ ಬಂದ ರೂಪಾನಿ, ವಿದ್ಯಾರ್ಥಿ ರಾಜಕಾರಣ ಪ್ರಯಾಣವನ್ನು ಈ ಲೇಖನ ಒಳಗೊಂಡಿದೆ.
06:08 PM (IST) Jun 12
ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ರನ್‌ವೇ 23 ರಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಆದರೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಈ ದುರಂತಕ್ಕೆ ಕಾರಣವೇನು?
05:57 PM (IST) Jun 12
ಅಹಮ್ಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದವರ ಸಂಖ್ಯೆ ಸ್ಪಷ್ಟವಾಗಿಲ್ಲಿ. ಸದ್ಯ ಈ ಘಟನೆಯಲ್ಲಿ 133 ಮಂದಿ ಮೃತಪಟ್ಟಿದ್ದಾರೆ. ವಿಮಾನ ದುರಂತದಲ್ಲಿ ಮಡಿದರೆ ಪರಿಹಾರ ಮೊತ್ತ ಕೊಡುವ ಜವಾಬ್ದಾರಿ ಯಾರದ್ದು? ಮಡಿದ ಪ್ರಯಾಣಿಕರ ಕುಟುಂಬಕ್ಕೆ ಸಿಗುವ ಪರಿಹಾರ ಮೊತ್ತವೆಷ್ಟು?
05:55 PM (IST) Jun 12
05:53 PM (IST) Jun 12
05:45 PM (IST) Jun 12
ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ಸಂಭವಿಸಿರುವ ಭೀಕರ ವಿಮಾನ ಅಪಘಾತದಲ್ಲಿ 242 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಇದಕ್ಕೆ ಕಾರಣ ಇದುವರೆಗೆ ತಿಳಿದುಬಂದಿಲ್ಲ. ಆದರೆ ಇದರ ನಡುವೆಯೇ ಖ್ಯಾತ ಜ್ಯೋತಿಷಿ ಶರ್ಮಿಷ್ಠಾ ಅವರು ನೀಡಿದ್ದ ಎಚ್ಚರಿಕೆ ಬೆಳಕಿಗೆ ಬಂದಿದೆ.
05:20 PM (IST) Jun 12
05:13 PM (IST) Jun 12
ಉತ್ತರ ಭಾರತದ ಪ್ರಸಿದ್ಧ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಮಲ್ ಕೌರ್ ಅವರ ಶವ ಬಠಿಂಡಾದಲ್ಲಿ ಕಾರಿನೊಳಗೆ ಪತ್ತೆಯಾಗಿದೆ. ಭಯೋತ್ಪಾದಕನೊಬ್ಬ ಕೊಲೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
04:59 PM (IST) Jun 12
ಅಹಮ್ಮದಾಬಾದ್ ವಿಮಾನ ದುರಂತದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದ. ಕಾರಣ ಈ ವಿಮಾನ ಪತನಗೊಂಡಿದ್ದು ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆ. ವಿದ್ಯಾರ್ಥಿಗಳು ಊಟ ಮಾಡುತ್ತಿರುವಾಗ ಹಾಸ್ಟೆಲ್ ಮೇಲೆ ಪತನಗೊಂಡಿದೆ. ಈ ಘಟನೆಯಲ್ಲಿ ಹಲವು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ.
04:53 PM (IST) Jun 12
04:49 PM (IST) Jun 12
04:19 PM (IST) Jun 12
ಏರ್ ಇಂಡಿಯಾ ವಿಮಾನ ಪತನ ದುರಂತ ದೇಶವನ್ನೇ ಬೆಚ್ಚಿ ಬೀಳಿಸಿದೆ. 242 ಮಂದಿ ಹೊತ್ತು ಪ್ರಯಾಣಿಸಿದ ವಿಮಾನ ಪತನಕ್ಕೂ ಕೆಲವೇ ಕ್ಷಣ ಮುನ್ನ ಪೈಲೆಟ್, ಏರ್ ಟ್ರಾಫಿಕ್ ಕಂಟ್ರೋಲ್ ರೂಂಗೆ ಮೇಡೇ ಸಂದೇಶ ಕಳುಹಿಸಿದ್ದಾರೆ. ಪೈಲೆಟ್ ಕೊನೆಯದಾಗಿ ಕಳುಹಿಸಿದ ಮೇಡೇ ಸಂದೇಶವೇನು?
04:18 PM (IST) Jun 12
04:06 PM (IST) Jun 12
03:55 PM (IST) Jun 12
03:50 PM (IST) Jun 12
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳು ತಮ್ಮನ್ನು ವಿಲನ್ ಮಾಡಿವೆ ಎಂದು ಆರೋಪಿಸಿದ್ದಾರೆ. ಜಾತಿಗಣತಿ ವರದಿ ಬಗ್ಗೆ ಚರ್ಚೆ ನಡೆದಿದ್ದು, ಕಾನೂನಿನಲ್ಲಿ ಏನು ಮಾಡಬೇಕೋ ಅದನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
03:49 PM (IST) Jun 12
ಕರಣ್ ಜೋಹರ್ ಅವರ ಹೊಸ ಶೋ 'ದ ಟ್ರೈಟರ್ಸ್' ಒಟಿಟಿಯಲ್ಲಿ ಶುರುವಾಗ್ತಿದೆ. ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ, ಯಾವಾಗ, ಏನ್ ಸಮಯಕ್ಕೆ ಮತ್ತು ಎಷ್ಟು ಜನ ಸ್ಪರ್ಧಿಗಳು ಭಾಗವಹಿಸ್ತಾರೆ ಅನ್ನೋದನ್ನ ತಿಳ್ಕೊಳ್ಳೋಣ.
03:38 PM (IST) Jun 12
ಅಹಮ್ಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಪತನದಲ್ಲಿ ಸಾವಿನ ಸಂಖ್ಯೆ ಇದೀಗ 110ಕ್ಕೆ ಏರಿಕೆಯಾಗಿದೆ. 242 ಪ್ರಯಾಣಿಕರಿದ್ದ ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ಪತನಗೊಂಡಿದೆ. ಈ ಪೈಕಿ 132 ಮಂದಿಗೆ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
03:36 PM (IST) Jun 12
ಜಾನ್ ಅಬ್ರಹಾಂ ಮುಂಬೈನಲ್ಲಿ ಮೂರು ಆಸ್ತಿಗಳನ್ನು ಬಾಡಿಗೆಗೆ ನೀಡಿದ್ದಾರೆ, ಇದರಿಂದ ಅವರಿಗೆ ಕೋಟಿಗಟ್ಟಲೆ ಗಳಿಕೆ ಆಗಲಿದೆ. ಬಾಂದ್ರಾ ವೆಸ್ಟ್‌ನಲ್ಲಿರುವ ಈ ಆಸ್ತಿಗಳ ಮಾಸಿಕ ಬಾಡಿಗೆ ಲಕ್ಷಾಂತರ ರೂಪಾಯಿ!
03:17 PM (IST) Jun 12
242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತ ಏರ್ ಇಂಡಿಯಾ ವಿಮಾನ 171, ಭಾರತದ ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ಹೊರಟ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದೆ. ವಿಮಾನವು ನಗರದ ಮೇಘಾನಿ ಪ್ರದೇಶದಲ್ಲಿ ಪತನಗೊಂಡಿದೆ.
03:13 PM (IST) Jun 12
ಗುಜರಾತಿನ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನದ ಘಟನೆ ಬೆನ್ನಲ್ಲಿಯೇ ಕಳೆದ 15 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ವಿಮಾನ ದುರಂತದ ಕ್ಷಣಗಳು ಮುನ್ನೆಲೆಗೆ ಬಂದಿವೆ. ಮಂಗಳೂರಿನ ವಿಮಾನ ಪತನು ಘಟನೆಯಲ್ಲಿ 158 ಜನರು ಸಾವನ್ನಪ್ಪಿದ್ದರು.
02:50 PM (IST) Jun 12
Ahmedabad Aircraft Crash Live Updates: ಮೇಘನಿನಗರ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ವ್ಯಾಪಕ ಭೀತಿ ಮತ್ತು ಅವ್ಯವಸ್ಥೆ ಉಂಟಾಗಿದೆ. ಅಗ್ನಿಶಾಮಕ ದಳ ಸೇರಿದಂತೆ ತುರ್ತು ಸೇವೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.
02:40 PM (IST) Jun 12
ಬೆಂಗಳೂರಿನಲ್ಲಿ ಗ್ರಾಹಕನ ಮನೆಗೆ ಫುಡ್ ಆರ್ಡರ್ ಬಂದಿದೆ. ಆಗ ಅವರ ರೆಸ್ಯೂಮ್ ನೋಡಿ ಆರ್ಡರ್ ಮಾಡಿದ ವ್ಯಕ್ತಿಯೇ ಹೆದರಿದ್ದಾರೆ.
02:39 PM (IST) Jun 12
ಹಿಂದಿ ಕಿರುತೆರೆ ಹಾಗೂ ಹಿರಿ ತೆರೆ ನಟಿ ಅವಿಕಾ ಗೋರ್ ತಮ್ಮ ಬಹುಕಾಲದ ಗೆಳೆಯ ಮಿಲಿಂದ್ ಚಂದ್ವಾನಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅವಿಕಾ ಈ ಶುಭ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.
02:27 PM (IST) Jun 12
02:11 PM (IST) Jun 12
ಅಹಮ್ಮದಾಬಾದ್ ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ.ಮೇಘನಿ ನಗರ ಪ್ರದೇಶದಲ್ಲಿ ಸುಮಾರು 200 ಜನರನ್ನು ಹೊತ್ತ ವಿಮಾನ ಟೇಕ್ ಆಫ್ ವೇಳೆ ಪತನಗೊಡಿದೆ. ಸ್ಥಳದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.