- Home
- Entertainment
- Cine World
- Actress Avika: ಬಾಯ್ ಫ್ರೆಂಡ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕೇರ್ ಆಫ್ ಫುಟ್ ಪಾತ್' ನಟಿ
Actress Avika: ಬಾಯ್ ಫ್ರೆಂಡ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕೇರ್ ಆಫ್ ಫುಟ್ ಪಾತ್' ನಟಿ
ಹಿಂದಿ ಕಿರುತೆರೆ ಹಾಗೂ ಹಿರಿ ತೆರೆ ನಟಿ ಅವಿಕಾ ಗೋರ್ ತಮ್ಮ ಬಹುಕಾಲದ ಗೆಳೆಯ ಮಿಲಿಂದ್ ಚಂದ್ವಾನಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅವಿಕಾ ಈ ಶುಭ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.
- FB
- TW
- Linkdin
Follow Us
)
ಜನಪ್ರಿಯ ಟಿವಿ ಸೀರಿಯಲ್ 'ಬಾಲಿಕಾ ವಧು'ವಿನಲ್ಲಿ (Balika Vadhu) ಬಾಲಕಿ ಆನಂದಿ ಪಾತ್ರದಲ್ಲಿ ನಟಿಸುವ ಮೂಲಕ ಜನಪ್ರಿಯ ಪಡೆದಿದ್ದ ನಟಿ ಅವಿಕಾ ಗೋರ್ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಟಿ ತಮ್ಮ ಬಹುಕಾಲದ ಗೆಳೆಯ ಮಿಲಿಂದ್ ಚಂದ್ವಾನಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅವಿಕಾ ಈ ಶುಭ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಅವಿಕಾ ಗೋರ್ (Avika Gor) ಮಿಲಿಂದ್ ಚಂದ್ವಾನಿ ಜೊತೆ ಆತ್ಮೀಯ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅವರ ವಿಶೇಷ ದಿನದಂದು, ಅವಿಕಾ ತಿಳಿ ಗುಲಾಬಿ ಬಣ್ಣದ ಪ್ರಿಂಟೆಡ್ ಸೀರೆಯನ್ನು ಧರಿಸಿ, ಸ್ಲೀವ್ ಲೆಸ್ ಬ್ಲೌಸ್ ನಲ್ಲಿ ಮಿಂಚುತ್ತಿದ್ದರು. ಅದರ ಜೊತೆ ಸಿಂಪಲ್ ಆಭರಣ ಧರಿಸಿ, ಓಪನ್ ಹೇರ್ ಬಿಟ್ಕೊಂಡು ಸುಂದರವಾಗಿ ಕಾಣಿಸಿಕೊಂಡರೆ, ಮಿಲಿಂದ್ ಚಂದ್ವಾನಿ ಬೀಜ್ ಬಣ್ಣದ ಶೆರ್ವಾನಿ ಧರಿಸಿ ಅದ್ಭುತವಾಗಿ ಕಾಣುತ್ತಿದ್ದರು.
ಮಿಲಿಂದ್ ಚಾಂದ್ವಾನಿ (Milind Chandwani) ಒಬ್ಬ ಸೋಶಿಯಲ್ ವರ್ಕರ್ ಮತ್ತು ಉದ್ಯಮಿ. ಅವರು ಕ್ಯಾಂಪ್ ಡೈರೀಸ್ ಎಂಬ ಸರ್ಕಾರೇತರ ಸಂಸ್ಥೆಯ ಸ್ಥಾಪಕರು ಕೂಡ ಹೌದು. ಈ ಸಂಸ್ಥೆಯು ಹಿಂದುಳಿದ ಮಕ್ಕಳಿಗೆ ಸಬಲೀಕರಣ ನೀಡುತ್ತದೆ. ಮಿಲಿಂದ್ ಅವರ ಶಿಕ್ಷಣದ ಬಗ್ಗೆ ಹೇಳುವುದಾದರೆ, ಅವರು ಐಐಎಂ ಅಹಮದಾಬಾದ್‌ನಿಂದ ಎಂಬಿಎ ಮಾಡಿದ್ದಾರೆ.
ಮಿಲಿಂದ್ ಇನ್ಫೋಸಿಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ (Software Engineer) ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವಿಕಾ ಗೌರ್ ಅವರ ವರ ಮಿಲಿಂದ್ ಚಂದ್ವಾನಿ 2019 ರಲ್ಲಿ ಎಂಟಿವಿ ರೋಡೀಸ್ ರಿಯಲ್ ಹೀರೋಸ್‌ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ, ಅವರು ಶಾಲೆಯಲ್ಲಿ ಸಹಾಯಕ ಪ್ರಾಂಶುಪಾಲರಾಗಿಯೂ ಕೆಲಸ ಮಾಡಿದ್ದಾರೆ.
ಅವಿಕಾ ಗೋರ್ ತಮ್ಮ ನಿಶ್ಚಿತಾರ್ಥದ ಸುಂದರ ಫೋಟೊಗಳನ್ನು ಹಂಚಿಕೊಂಡು, He asked.. I smiled, I cried (in that order)and screamed the easiest YES of my life! ಎಂದು ಬರೆದುಕೊಂಡಿದ್ದಾರೆ. ಜೊತೆಗೆ ನಾನು ಸಂಪೂರ್ಣವಾಗಿ ಸಿನಿಮಾ ಪ್ರಿಯ, ಹಿನ್ನೆಲೆ ಸಂಗೀತ, ನಿಧಾನಗತಿಯ ಕನಸುಗಳು, ಕಾಜಲ್ ಹಚ್ಚಿಕೊಳ್ಳುವುದು ಮತ್ತು ಎಲ್ಲವನ್ನೂ ಹೊಂದಿದ್ದೇನೆ. ಅವರು ತಾರ್ಕಿಕ, ಶಾಂತ ವ್ಯಕ್ತಿ ಎಂದು ಬರೆದುಕೊಂಡಿದ್ದಾರೆ.
ಅವಿಕಾ ಗೋರ್ ಹಿಂದಿ ಕಿರುತೆರೆಯಲ್ಲಿ ಬಾಲಿಕಾ ವಧು, ಸಸುರಾಲ್ ಸಿಮರ್ ಕಾ ಸೀರಿಯಲ್ ಗಳಲ್ಲಿ ಮಿಂಚಿದ್ದರೂ ಸಹ, ಇವರು ಹಿರಿತೆರೆಗೆ ಎಂಟ್ರಿ ಕೊಟ್ಟದ್ದು ತೆಲುಗು ಸಿನಿಮಾ ಮೂಲಕ. ಅವಿಕಾ ಕನ್ನಡದಲ್ಲಿ ಕೇರ್ ಆಫ್ ಫುಟ್ ಪಾತ್ 2 (Care of Footpath 2) ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ ನಟ ಸಾರ್ವಭೌಮ ಸಿನಿಮಾದಲ್ಲಿ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ತೆಲುಗಿನಲ್ಲಿ ಖ್ಯಾತಿ ಪಡೆದಿರುವ ಅವಿಕಾ ಗೋರ್ ಉಯ್ಯಾಲ ಚಂಪಾಲ, ಲಕ್ಷ್ಮೀ ರಾವೆ ಮಾ ಇಂಟಿಕಿ, ತಾನು ನೇನು, ರಾಜುಗಾರಿ ಗಾಧಿ 3, 10 th ಕ್ಲಾಸ್ ಡೈರೀಸ್, ಥ್ಯಾಂಕ್ಯೂ, ನೆಟ್ ವರ್ಕ್, ಪಾಪ್ ಕಾರ್ನ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.