Published : Feb 12, 2026, 06:57 AM ISTUpdated : Feb 12, 2026, 10:38 PM IST

Karnataka News Live: ರಿಷಬ್​ ಶೆಟ್ಟಿ ಜೊತೆ ಸೆಲ್ಫಿಗೆ ಹೋದ್ರೆ ಹೀರೋನೇ ಮಾಡ್ಬಿಟ್ರು! 'ದಡ್ಡ ಪ್ರವೀಣ'ನ ರೋಚಕ ಸ್ಟೋರಿ ಕೇಳಿ

ಸಾರಾಂಶ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನಾದ್ಯಂತ ಸಂಚಲನ ಮೂಡಿಸಿದ್ದ ವಸಂತ ನಾಯ್ಕ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಜ್ಯೋತಿಷಿ ಕಮಲಾಕರ ಭಟ್ಟ ಹಾಗೂ ಸುಚಿತ್ರಾ ಸೇರಿದಂತೆ ಒಟ್ಟು ಐವರು ಆರೋಪಿಗಳಿಗೆ ಫೆ. 21ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಬಂಧಿತ 8 ಆರೋಪಿಗಳ ಪೈಕಿ ಈ ಐವರ ನ್ಯಾಯಾಂಗ ಬಂಧನದ ಅವಧಿ ಬುಧವಾರಕ್ಕೆ ಮುಕ್ತಾಯವಾಗಿತ್ತು.

ಬುಧವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಐವರು ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಒಳಪಡಿಸಿದರು. ಬಳಿಕ, ನ್ಯಾಯಾಂಗ ಬಂಧನದ ಅವಧಿಯನ್ನು ಫೆ.21ರವರೆಗೆ ವಿಸ್ತರಿಸಿ, ಆದೇಶ ನೀಡಿದರು. ಉಳಿದ ಮೂವರು ಆರೋಪಿಗಳು ಪೊಲೀಸ್‌ ಕಸ್ಟಡಿಯಲ್ಲಿದ್ದು, ಫೆ.13ಕ್ಕೆ ಅವರ ಪೊಲೀಸ್‌ ಕಸ್ಟಡಿಯ ಅವಧಿ ಮುಕ್ತಾಯವಾಗಲಿದೆ.

10:38 PM (IST) Feb 12

ರಿಷಬ್​ ಶೆಟ್ಟಿ ಜೊತೆ ಸೆಲ್ಫಿಗೆ ಹೋದ್ರೆ ಹೀರೋನೇ ಮಾಡ್ಬಿಟ್ರು! 'ದಡ್ಡ ಪ್ರವೀಣ'ನ ರೋಚಕ ಸ್ಟೋರಿ ಕೇಳಿ

ರಿಷಬ್ ಶೆಟ್ಟಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ರಂಜನ್, ಅನಿರೀಕ್ಷಿತವಾಗಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ನಾಯಕನಾದರು. ನಟನೆಯಲ್ಲಿ ಆಸಕ್ತಿ ಇಲ್ಲದಿದ್ದರೂ, ಒಂದು ಸೆಲ್ಫಿ  ಅದೃಷ್ಟವನ್ನೇ ಬದಲಿಸಿ, 'ದಡ್ಡ ಪ್ರವೀಣ' ಪಾತ್ರದ ಮೂಲಕ ಸಿನಿಮಾ ಹೀರೋ ಆಗಿ ರೂಪಿಸಿತು.

Read Full Story

09:47 PM (IST) Feb 12

Bigg Boss ಗಿಲ್ಲಿ ನಟನ ಜತೆ ಹನಿಮೂನ್​ - ನಾಚುತ್ತಲೇ ವೇದಿಕೆ ಮೇಲೆ ಕಾವ್ಯಾ ಶೈವ ಗುಟ್ಟು ರಿವೀಲ್​!

ಕಲರ್ಸ್ ಕನ್ನಡದ 'ದೊಡ್ಮನೆ ಹಬ್ಬ' ಕಾರ್ಯಕ್ರಮದಲ್ಲಿ ಬಿಗ್​ಬಾಸ್​ 12ರ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಕಾರ್ಯಕ್ರಮದ ಪ್ರೊಮೋವೊಂದರಲ್ಲಿ, ಗಿಲ್ಲಿ ನಟನ ಜೊತೆ ಹನಿಮೂನ್‌ಗೆ ಹೋಗುವ ಬಗ್ಗೆ ಕಾವ್ಯಾ ಶೈವ ಬಾಯ್ತಪ್ಪಿ ಹೇಳಿದ್ದು ವೈರಲ್ ಆಗಿದೆ.
Read Full Story

09:18 PM (IST) Feb 12

Bigg Boss ನನಗೊಂದು ಅಮೂಲ್ಯ ರತ್ನ ಕೊಟ್ಟಿದೆ - ಮೊದಲ ಬಾರಿಗೆ ಬಹಿರಂಗಗೊಳಿಸಿದ ಅಶ್ವಿನಿ ಗೌಡ

ಬಿಗ್​ಬಾಸ್​ 12ರ 2ನೇ ರನ್ನರ್​ ಅಪ್​ ಆದ ಅಶ್ವಿನಿ ಗೌಡ, ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ನೋವಿನ ನಡುವೆಯೂ ಬಿಗ್​ಬಾಸ್​​ ತಮಗೊಂದು ಅಮೂಲ್ಯ ರತ್ನ ನೀಡಿದೆ ಎಂದು ಹೇಳಿದ್ದಾರೆ. ಏನದು ರತ್ನ? 

Read Full Story

09:02 PM (IST) Feb 12

ದ್ರಾಕ್ಷಿ ಕೃಷಿಯಲ್ಲಿ ವಿಜಯಪುರ ರೈತನ ಕ್ರಾಂತಿ; 4 ಎಕರೆ ಜಮೀನಿನಲ್ಲಿ 40-45 ಲಕ್ಷ ಆದಾಯ

ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ರೈತ ಎತ್ತರದ ಪ್ರದೇಶದಲ್ಲಿ ವೈಜ್ಞಾನಿಕವಾಗಿ ದ್ರಾಕ್ಷಿ ಬೆಳೆದು ಯಶಸ್ಸು ಕಂಡಿದ್ದಾರೆ. ತಮ್ಮ 4 ಎಕರೆ ಜಮೀನಿನಲ್ಲಿ ಸುಮಾರು 40-45 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದು, ಅವರ ಈ ಸಾಧನೆಯನ್ನು ಸಚಿವ ಎಂ.ಬಿ. ಪಾಟೀಲ್ ಶ್ಲಾಘಿಸಿದ್ದಾರೆ.

Read Full Story

08:50 PM (IST) Feb 12

ಬೆಂಗಳೂರಲ್ಲಿ ಪಿಕ್‌ಅಪ್‌ ಕಿರಿಕ್ ಮಾಡಿದ ಡ್ರೈವರ್‌ಗೆ, ಆಂಧ್ರದಲ್ಲಿ ಗೂಂಡಾಗಳನ್ನ ಕರೆಸಿ ಹೊಡೆಸಿದ ಮಹಿಳೆ!

ಬೆಂಗಳೂರಿನಲ್ಲಿ ಬಸ್ ಪಿಕ್‌ಅಪ್ ವಿಚಾರವಾಗಿ ನಡೆದ ಸಣ್ಣ ವಾಗ್ವಾದ, ಆಂಧ್ರಪ್ರದೇಶದಲ್ಲಿ ಹಲ್ಲೆಗೆ ಕಾರಣವಾಗಿದೆ. ತಡವಾಗಿ ಬಂದ ಮಹಿಳಾ ಪ್ರಯಾಣಿಕರೊಬ್ಬರು, ತಿರುಪತಿ ಬಳಿ ತನ್ನ ಸಂಬಂಧಿಕರು ಮತ್ತು ಸ್ಥಳೀಯರಿಂದ ಖಾಸಗಿ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿಸಿದ್ದಾರೆ.

Read Full Story

08:43 PM (IST) Feb 12

ಬೆಂಗಳೂರಲ್ಲಿ ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್ - ದಿಢೀರ್ ಆಗಿ 1.50 ರೂಪಾಯಿ ಇಳಿಕೆಯಾದ ಬೆಲೆ!

ಚಳಿಗಾಲದ ನಂತರ ಬೆಂಗಳೂರಿನಲ್ಲಿ ಮೊಟ್ಟೆಯ ಬೆಲೆಗಳು ಪ್ರತಿ ಮೊಟ್ಟೆಗೆ 1.5 ರೂ.ಗಳಷ್ಟು ಇಳಿಕೆಯಾಗಿವೆ. ಹೆಚ್ಚುತ್ತಿರುವ ತಾಪಮಾನ ಮತ್ತು ಬೇಡಿಕೆ ಕಡಿಮೆಯಾಗಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

Read Full Story

08:30 PM (IST) Feb 12

ಬೆಂಗಳೂರು ದುಬಾರಿ ಬಾಡಿಗೆ - ಕೋರಮಂಗಲದಲ್ಲಿ 2BHK ಫ್ಲ್ಯಾಟ್‌ಗೆ ₹70,000!; ಐಟಿ ಸಿಟಿ ಬೆಲೆಗೆ ವಲಸಿಗರು ಕಂಗಾಲು!

ಬೆಂಗಳೂರಿನ ಕೋರಮಂಗಲದಲ್ಲಿ 2BHK ಫ್ಲ್ಯಾಟ್‌ಗೆ ₹70,000 ಬಾಡಿಗೆ ಕೇಳಿದ್ದಕ್ಕೆ ಯುವತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಕಳಪೆ ಮೂಲಸೌಕರ್ಯಗಳ ಬಗ್ಗೆ ಬೆಟ್ಟು ಮಾಡಿ, ಇಷ್ಟೊಂದು ಬಾಡಿಗೆ ಏಕೆ ಎಂದು ಪ್ರಶ್ನಿಸಿರುವ ಅವರ ಪೋಸ್ಟ್ ವೈರಲ್ ಆಗಿದೆ.

Read Full Story

08:16 PM (IST) Feb 12

ಐಲ್ಯಾಂಡ್ ಮಾದರಿಯಲ್ಲಿ ಶಿವಮೊಗ್ಗದ 15 ಕೆರೆಗಳ 'ಹಸಿರು' ರೂಪಾಂತರ - 43 ಕೋಟಿ ಮೀಸಲು

ಶಿವಮೊಗ್ಗ ನಗರವನ್ನು ಹಸಿರಾಗಿಸುವ ಮತ್ತು ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ, ಸೂಡಾ 43 ಕೋಟಿ ರು. ವೆಚ್ಚದಲ್ಲಿ 15 ಕೆರೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಹೂಳು ತೆಗೆಯುವುದು, ಸುತ್ತಲೂ ಗಿಡಗಳನ್ನು ನೆಡುವುದು ಮತ್ತು ಕೆಲವು ಕೆರೆಗಳನ್ನು ಐಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು ಸೇರಿದೆ. 

Read Full Story

07:46 PM (IST) Feb 12

ಕಲಿಕೇರಿ ಮಣ್ಣಲ್ಲಿ ಅಡಗಿದೆ ಚಾಲುಕ್ಯರ ಕಾಲದ ಚಿನ್ನ! ಲಕ್ಕುಂಡಿ ಬಳಿಕ, ಕೊಪ್ಪಳದಲ್ಲೂ ಉತ್ಖನನಕ್ಕೆ ಹಸಿರು ನಿಶಾನೆ?

ಕೊಪ್ಪಳ ಜಿಲ್ಲೆಯ ಕಲಿಕೇರಿ ಗ್ರಾಮವು ಶಾತವಾಹನರು, ರಾಷ್ಟ್ರಕೂಟರು ಮತ್ತು ಚಾಲುಕ್ಯರ ಕಾಲದ ಐತಿಹಾಸಿಕ ಕುರುಹುಗಳನ್ನು ಹೊಂದಿದೆ. ಇಲ್ಲಿ ನಾಣ್ಯ ಟಂಕಸಾಲೆ ಇದ್ದ ಕುರುಹುಗಳಿದ್ದು, ಉತ್ಖನನ ನಡೆಸಲು ಕಂದಾಯ ಇಲಾಖೆಯು ಪ್ರಾಚ್ಯ ವಸ್ತು ಇಲಾಖೆಗೆ ಪತ್ರ ಬರೆದಿದೆ.  

Read Full Story

07:43 PM (IST) Feb 12

ಒಬ್ಬರಿಗೆ ಒಂದೇ ಸೀರೆ ಎಂಬ ಕಂಡೀಷನ್ ಇದ್ದರೂ KSIC ಮುಂದೆ ತಪ್ಪದ ಸರತಿ ಸಾಲು; ಮೈಸೂರು ರೇಷ್ಮೆ ಸೀರೆಗೇಕೆ ಇಷ್ಟೊಂದು ಡಿಮ್ಯಾಂಡ್?

Mysore Silk Craze: Why People Queue at 4 AM for ₹2.5 Lakh Saris ಸೆಲ್ರಬ್ರಿಟಿ ಪ್ರಚಾರ ಅಥವಾ ಇನ್‌ಸ್ಟಾಗ್ರಾಮ್ ಟ್ರೆಂಡ್‌ ಹೊರತಾದ ಫ್ಯಾಶನಲ್‌ ಸೈಕಲ್‌ಗಿಂತ ಭಿನ್ನವಾಗಿ ಮೈಸೂರು ಸಿಲ್ಕ್‌ ಸಂಪೂರ್ಣವಾಗಿ ವಿಭಿನ್ನ ವರ್ಗದಲ್ಲಿ ಅಸ್ತಿತ್ವದಲ್ಲಿದೆ.

 

Read Full Story

07:13 PM (IST) Feb 12

ಪ್ರೇಮಿಗಳ ದಿನದ ಮುನ್ನವೇ ಗುಡ್​ನ್ಯೂಸ್​ ಕೊಟ್ಟ Brahmagantu ಜೋಡಿ! ಫ್ಯಾನ್ಸ್​ ಫುಲ್​ ಖುಷ್​

ಬ್ರಹ್ಮಗಂಟು ಸೀರಿಯಲ್‌ನಲ್ಲಿ ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಬಂದಿದ್ದು, ಚಿರು ದೀಪಾಗೆ ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ಇಬ್ಬರೂ ಒಂದಾಗಿದ್ದಾರೆ. ಆದರೆ, ಸೌಂದರ್ಯಳ ಕುತಂತ್ರ ಇನ್ನೂ ಬಯಲಾಗಬೇಕಿದ್ದು, ಹೊಸ ಸೀರಿಯಲ್‌ಗಳ ಪ್ರೊಮೋದಿಂದಾಗಿ ಬ್ರಹ್ಮಗಂಟು ಅಂತ್ಯವಾಗುವ ಸೂಚನೆ ಸಿಕ್ಕಿದೆ.
Read Full Story

07:12 PM (IST) Feb 12

ಪ್ರಜ್ವಲ್ ರೇವಣ್ಣ ಬಳಿಕ ಏರ್ಪೋರ್ಟ್‌ನಲ್ಲೇ ಅರೆಸ್ಟ್ ಆದ ಕರ್ನಾಟಕ ರಾಜಕಾರಣಿ! ಬೈರತಿ ಬಸವರಾಜ್ ವಶಕ್ಕೆ ಪಡೆದ ಸಿಐಡಿ!

'ಬಿಕ್ಲು ಶಿವ' ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಅಹಮದಾಬಾದ್‌ನಿಂದ ಆಗಮಿಸುತ್ತಿದ್ದ ಅವರನ್ನು, ಹತ್ಯೆಯ ಆರೋಪಿಗಳೊಂದಿಗಿನ ನಂಟಿನ ಶಂಕೆಯ ಮೇಲೆ ವಿಚಾರಣೆಗಾಗಿ ಕರೆದೊಯ್ಯಲಾಗಿದೆ.

Read Full Story

07:07 PM (IST) Feb 12

ಜ್ಯೋತಿಷಿ ಮಾತು ಕೇಳಿ ಹೆತ್ತ ತಾಯಿಯನ್ನೇ ಕೊಂದ ಸುಚಿತ್ರಾ! ಗ್ರಾಮಸ್ಥರಿಗೆ ಅನುಮಾನ ಬಂದಿದ್ದೇಗೆ?

ತುಮಕೂರು ಜಿಲ್ಲೆಯ ಅನುಪನಹಳ್ಳಿ ಗ್ರಾಮದಲ್ಲಿ, ಜ್ಯೋತಿಷಿಯೊಬ್ಬನ ಮಾತು ನಂಬಿದ ಮಗಳು ತನ್ನ ತಾಯಿಯನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಅಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದರೂ, ಗ್ರಾಮಸ್ಥರ ಅನುಮಾನದಿಂದಾಗಿ ಪೊಲೀಸರು ಆರೋಪಿಯನ್ನು ಬಂಧಿಸಿ ಸತ್ಯವನ್ನು ಬಯಲಿಗೆಳೆದಿದ್ದಾರೆ.
Read Full Story

06:48 PM (IST) Feb 12

ಸರ್ಕಾರಿ ಸೇವಕನಾಗಿ 'ಜನರ ಧನ ನುಂಗಿದ ಜನಾರ್ಧನ' ₹4.42 ಕೋಟಿ ಒಡೆಯ; ಆದಾಯಕ್ಕಿಂತ 216% ಹೆಚ್ಚು ಆಸ್ತಿ ಪತ್ತೆ!

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಧೀಕ್ಷಕ ಅಭಿಯಂತರ ಎಚ್.ಎಂ. ಜನಾರ್ಧನ್ ಅವರ ಮೇಲೆ ನಡೆದ ಲೋಕಾಯುಕ್ತ ದಾಳಿಯಲ್ಲಿ, ಅವರ ಆದಾಯಕ್ಕಿಂತ ಶೇ. 216ರಷ್ಟು ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿದೆ. ಕೋಟ್ಯಂತರ ರೂ. ನಗದು, 34 ಎಕರೆ ಜಮೀನು, ಐಷಾರಾಮಿ ಮನೆಗಳು, ವಾಹನಗಳು ವಶಪಡಿಸಿಕೊಳ್ಳಲಾಗಿದೆ

Read Full Story

06:35 PM (IST) Feb 12

ಬೆಳಗಾವಿ - ಮಲಪ್ರಭಾ ನದಿಯಲ್ಲಿ ಸಿಕ್ಕಿದ್ದು ಹೆಣಗಳಲ್ಲ 3 ಬೈಕ್‌ಗಳು! ಜನರಿಗೆ ಗಾಬರಿ, ಖಾಕಿಗೆ ಇವರ ಮೇಲೆಯೇ ಅನುಮಾನ

ಬೆಳಗಾವಿಯ ಬೈಲಹೊಂಗಲ ಬಳಿ ಮಲಪ್ರಭಾ ನದಿಯಲ್ಲಿ ಮೂರು ಬೈಕ್‌ಗಳು ಅನುಮಾನಾಸ್ಪದವಾಗಿ ಪತ್ತೆಯಾಗಿವೆ. ಸವದತ್ತಿ ಚಿನ್ನದಂಗಡಿ ಕಳ್ಳತನ ಪ್ರಕರಣಕ್ಕೆ ಈ ಬೈಕ್‌ಗಳು ಸಂಬಂಧಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಸಾಕ್ಷ್ಯ ನಾಶಪಡಿಸಲು ನದಿಗೆ ಎಸೆದಿರುವ ಸಾಧ್ಯತೆ ಇದೆ.
Read Full Story

06:26 PM (IST) Feb 12

ಗರ್ಲ್‌ಫ್ರೆಂಡ್‌ಗೆ 'ದುಬಾರಿ' ಅಪ್ಪುಗೆ - ಪ್ರೇಯಸಿಯ ಪ್ರೀತಿಗೆ ಹಾರಿ ಹೋಯ್ತು ಯುವಕನ ಇಡೀ ತಿಂಗಳ ಸಂಬಳ, ಬಳಿಕ ಕಣ್ಣೀರಿಟ್ಟ!

$2,000 Flying Heartbreak: Valentine's Surprise Turns Into Financial Disaster ವ್ಯಾಲಂಟೈನ್ಸ್‌ ಡೇ ದಿನದಂದು ಪ್ರೇಯಸಿಗೆ ಸರ್‌ಪ್ರೈಸ್‌ ನೀಡಲು ಯುವಕನೊಬ್ಬ ತನ್ನ ಒಂದು ತಿಂಗಳ ಸಂಬಳವಾದ ₹1.6 ಲಕ್ಷವನ್ನು ಬಲೂನ್‌ಗಳಿಗೆ ಕಟ್ಟಿ ನೀಡುತ್ತಾನೆ. 

Read Full Story

06:09 PM (IST) Feb 12

ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಈಗಿನ ಸಿದ್ದು ಸರ್ಕಾರದಲ್ಲೇ ಭ್ರಷ್ಟಾಚಾರ ಹೆಚ್ಚು, ಗುತ್ತಿಗೆದಾರರ ಸಂಘದ ಗಂಭೀರ ಆರೋಪ

ಬಿಜೆಪಿ ಸರ್ಕಾರಕ್ಕಿಂತ ಸಿದ್ದರಾಮಯ್ಯ ಸರ್ಕಾರದಲ್ಲಿ ಹೆಚ್ಚು ಭ್ರಷ್ಟಾಚಾರವಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಆರೋಪಿಸಿದ್ದಾರೆ. ರಾಜ್ಯಾದ್ಯಂತ 37 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಹಣ ಬಿಡುಗಡೆ ಮಾಡದ ಸರ್ಕಾರದ ವಿರುದ್ಧ ಮಾರ್ಚ್ 5 ರಂದು ಬೃಹತ್ ಹೋರಾಟ ಎಂದಿದ್ದಾರೆ

Read Full Story

05:25 PM (IST) Feb 12

ಪ್ರೇಮಿಗಳ ದಿನದ ಖುಷಿಯಲ್ಲೇ ಗರ್ಲ್‌ಫ್ರೆಂಡ್‌ ರಿವೀಲ್‌ ಮಾಡಿದ ಯುಟ್ಯೂಬರ್‌ ಸ್ಯಾಮ್‌ ಸಮೀರ್!

Sameer Sm Youtube: ಕನ್ನಡ ಯುಟ್ಯೂಬರ್‌ ಸ್ಯಾಮ್‌ ಸಮೀರ್‌ ಅವರು ಹುಡುಗಿಯ ಜನ್ಮದಿನವನ್ನು ಆಚರಿಸಿದ್ದರು. ಆ ವಿಡಿಯೋವನ್ನು ಅವರು ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದರೂ ಕೂಡ ಮುಖವನ್ನು ತೋರಿಸಿಲ್ಲ. ಇದಕ್ಕೆ ಕಾರಣ ಏನು ಎಂದು ಹೇಳಿದ್ದಾರೆ.

Read Full Story

05:09 PM (IST) Feb 12

ಮೈಸೂರು-ಮಾಗಡಿ ರಸ್ತೆ ಸಂಪರ್ಕಿಸುವ 10 ಲೇನ್ ರಸ್ತೆಗೆ ಎಸ್‌.ಎಂ. ಕೃಷ್ಣ ಹೆಸರು; ಮಾರ್ಚ್ ಅಂತ್ಯಕ್ಕೆ ಉದ್ಘಾಟನೆ!

SM Krishna's Name for Mysore-Magadi Road Link (MAR) ಮಾರ್ಚ್ ಅಂತ್ಯದ ವೇಳೆಗೆ MAR ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಇದು PRR-2 ಅನ್ನು ಸಂಪರ್ಕಿಸುತ್ತದೆ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಹೆಸರನ್ನು ಇದಕ್ಕೆ ಇಡುವ ತೀರ್ಮಾನ ಮಾಡಲಾಗಿದೆ.

 

Read Full Story

05:05 PM (IST) Feb 12

ಬೆಂಗಳೂರು - ಬೀದಿನಾಯಿ ರಾಕಿ ಅಲಿಯಾಸ್ ಕರಿಯನನ್ನು ಕಾರು ಹತ್ತಿಸಿ ಕೊಂದ ಚಾಲಕ, ಮಹಿಳೆಯಿಂದ ದೂರು, ಎಫ್‌ಐಆರ್ ದಾಖಲು

ಬೆಂಗಳೂರಿನ ಸಂಜಯನಗರದಲ್ಲಿ, ನಿರ್ಲಕ್ಷ್ಯದ ಚಾಲನೆಯಿಂದ ಕಾರಿನ ಚಕ್ರಕ್ಕೆ ಸಿಲುಕಿ ರಾಕಿ ಅಲಿಯಾಸ್ ಕರಿಯಾ ಎಂಬ ಬೀದಿ ನಾಯಿ ಸಾವನ್ನಪ್ಪಿದೆ. ಈ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ, ಸ್ಥಳೀಯರ ದೂರಿನ ಮೇರೆಗೆ ಕಾರು ಚಾಲಕನ ವಿರುದ್ಧ ಸಂಜಯನಗರ ಸಂಚಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Read Full Story

04:46 PM (IST) Feb 12

ಮಿಥುನ ರಾಶಿಗೆ ಮಂಗಳನ ಪ್ರವೇಶ, ಈ 5 ರಾಶಿಗಳಿಗೆ ಇನ್ಮುಂದೆ ಅದೃಷ್ಟವೋ ಅದೃಷ್ಟ!

ಮಂಗಳ ಸಂಚಾರ: ಮಿಥುನ ರಾಶಿಗೆ ಮಂಗಳನ ಪ್ರವೇಶ ಬಹಳ ಅಪರೂಪದ ಘಟನೆ. ಇದು ಕೆಲವು ರಾಶಿಯವರ ಸಂಪತ್ತು ಮತ್ತು ಸೌಕರ್ಯವನ್ನು ಹೆಚ್ಚಿಸುತ್ತದೆ. ಅದೃಷ್ಟ ದುಪ್ಪಟ್ಟಾಗಲಿದ್ದು, ಆದಾಯವೂ ಹೆಚ್ಚಾಗಲಿದೆ.

 

Read Full Story

04:42 PM (IST) Feb 12

ಲೋಕಾಯುಕ್ತ ದಾಳಿ ಕೈ ಇಟ್ಟಲ್ಲೆಲ್ಲಾ ಕಾಸು - ಎಂಜಿನಿಯರ್ ಜನಾರ್ಧನ ಸ್ನೇಹಿತನ ಪ್ಲಾಟ್‌ನಲ್ಲಿ ₹1.70 ಕೋಟಿ ನಗದು ಪತ್ತೆ!

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಧೀಕ್ಷಕ ಅಭಿಯಂತರ ಎಚ್.ಎಂ. ಜನಾರ್ಧನ್ ಅವರ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಈ ದಾಳಿಯ ವೇಳೆ, ಅವರ ಸ್ನೇಹಿತನ ಮನೆಯಲ್ಲಿ ಬಚ್ಚಿಟ್ಟಿದ್ದ ಸುಮಾರು 1.70 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
Read Full Story

04:36 PM (IST) Feb 12

ದೃಷ್ಟಿ ಮಾತ್ರ ಹಾಕ್ಬೇಡಿ; ಲಕ್ಷ್ಮೀ ಬಾರಮ್ಮ ಧಾರಾವಾಹಿ ರಶ್ಮಿ ಪ್ರಭಾಕರ್‌ ಮಗನಿಗೆ ನಾಮಕರಣದ ಸಂಭ್ರಮ Photos

Actress Rashmi Prabhakar Photos: ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟಿ ರಶ್ಮಿ ಪ್ರಭಾಕರ್‌ ಅವರು ಮಗನಿಗೆ ಹೆಸರು ಇಡುವ ಖುಷಿಯಲ್ಲಿದ್ದಾರೆ. ಮಗನ ಮುದ್ದಾದ ಫೋಟೋಗಳನ್ನು ಕೂಡ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Read Full Story

04:11 PM (IST) Feb 12

ಬೆಂಗಳೂರು - ಬೈಕ್ ವ್ಲೀಲಿಂಗ್ ಮಾಡಿ ವೈರಲ್ ಆದ ಹೀರೋ, ಪೊಲೀಸರು ಅರೆಸ್ಟ್ ಮಾಡಿ ಕಳಿಸಿದರು ಜೀರೋ!

ಬೆಂಗಳೂರಿನಲ್ಲಿ ಬೈಕ್ ವ್ಹೀಲಿಂಗ್ ಮಾಡಿ, ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲು ಯತ್ನಿಸಿದ ಯುವಕನನ್ನು ರಾಜಾಜಿನಗರ ಸಂಚಾರ ಪೊಲೀಸರು ಬಂಧಿಸಿದ್ದಾರೆ. ಈತನನ್ನು ಸ್ಥಳೀಯರು ಸನ್ಮಾನಿಸಿದ್ದರು, ಆದರೆ ವಿಡಿಯೋ ಆಧರಿಸಿ ಪೊಲೀಸರು ಆತನನ್ನು ಬಂಧಿಸಿ ಬೈಕ್ ವಶಪಡಿಸಿಕೊಂಡಿದ್ದಾರೆ.

Read Full Story

04:08 PM (IST) Feb 12

ಮೆಟ್ರೋ ಹಂತ 3 ಎ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನಿರಾಕರಣೆ - ಬಿಎಂಆರ್‌ಸಿಎಲ್ ಪ್ರತಿಕ್ರಿಯೆ

ಸರ್ಜಾಪುರದಿಂದ ಹೆಬ್ಬಾಳವರೆಗಿನ ಮೆಟ್ರೋ ರೆಡ್ ಲೈನ್ (ಹಂತ–3 ‘ಎ’) ಯೋಜನೆಗೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ತಾಂತ್ರಿಕ ಮತ್ತು ಆರ್ಥಿಕ ಅಂಶಗಳ ಕುರಿತು ಮರು ಅಧ್ಯಯನ ನಡೆಸುವಂತೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಪರಿಷ್ಕೃತ ವರದಿ ಸಿದ್ಧಪಡಿಸುತ್ತಿದೆ.
Read Full Story

03:47 PM (IST) Feb 12

ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರದ ತಡೆ, ಪ್ರಧಾನಿಗೆ ಸ್ವತಃ ನಾನೇ ತೋರಿಸಿದ್ದೇನೆ, ಅವರಿಗೆಲ್ಲಾ ಗೊತ್ತಿದೆ - ಡಿಕೆಶಿ

ಹೆಬ್ಬಾಳ-ಸರ್ಜಾಪುರ ಮೆಟ್ರೋ ಮತ್ತು ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಗೆ ಕೇಂದ್ರ ಅನುಮತಿ ನಿರಾಕರಿಸಿದೆ ಎಂಬ ವರದಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಯೋಜನೆಯನ್ನು ಕೇಂದ್ರವೇ ಪ್ರಸ್ತಾಪಿಸಿದ್ದು, ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಇದು ಅತ್ಯಗತ್ಯವಾಗಿದೆ.

Read Full Story

03:43 PM (IST) Feb 12

ಜಗತ್ತಿನಲ್ಲಿ ಬಿಯರ್‌ ಬೇಡಿಕೆ ಕುಸಿತ, ವಿಶ್ವದ 2ನೇ ಅತಿದೊಡ್ಡ ಬಿಯರ್‌ ಕಂಪನಿಯಿಂದ 6 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್‌!

Heineken Layoffs 2026: World’s No. 2 Brewer to Cut 6,000 Jobs ಜಾಗತಿಕ ಬ್ರೂವರ್ ಕಂಪನಿಯಾದ ಹೈನೆಕೆನ್, ವಿಶ್ವಾದ್ಯಂತ 6,000 ಉದ್ಯೋಗ ಕಡಿತವನ್ನು ಘೋಷಿಸಿದೆ. 2026ರಲ್ಲಿ ಕಂಪನಿಯ ಲಾಭದಲ್ಲಿ ಇಳಿಮುಖವಾಗಬಹುದು ಎನ್ನುವ ಮುನ್ಸೂಚನೆಯ ಬೆನ್ನಲ್ಲಿಯೇ ಈ ಕ್ರಮ ಕೈಗೊಳ್ಳಲಾಗಿದೆ.

 

Read Full Story

03:35 PM (IST) Feb 12

ಪ್ರೇಯಸಿಯೊಂದಿಗೆ ವ್ಯಾಲೆಂಟೈನ್ಸ್‌ ಡೇ ಶಾಪಿಂಗ್ ಹೋಗಿದ್ದ ಗಂಡ - ಹೆಂಡತಿ ಕೈಗೆ ಸಿಕ್ಕಿಬಿದ್ದು, ದಿಕ್ಕಾಪಾಲಾಗಿ ಓಡಿದ!

ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಪ್ರೇಯಸಿಯೊಂದಿಗೆ ಶಾಪಿಂಗ್ ಮಾಲ್‌ಗೆ ಬಂದಿದ್ದ ಪತಿಯನ್ನ ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಈ ಘಟನೆಯಲ್ಲಿ, ಪತ್ನಿಯ ಆಕ್ರೋಶಕ್ಕೆ ಹೆದರಿದ ಪತಿರಾಯ, ಪ್ರೇಯಸಿಯನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

02:57 PM (IST) Feb 12

ನಿದ್ದೆಗೆಟ್ಟು ಸಾಕಿದ್ದ ರೇಷ್ಮೆ ಹುಳುಗಳಿಗೆ ವಿಷ ಹಾಕಿ ವಯೋವೃದ್ಧ ರೈತ ಮಹಿಳೆ ಬದುಕಿಗೆ ಕೊಳ್ಳಿ ಇಟ್ಟ ದುರುಳರು!

ಹಾವೇರಿ ಜಿಲ್ಲೆಯ ಬಸನಕಟ್ಟಿ ಗ್ರಾಮದಲ್ಲಿ, ರೇಷ್ಮೆ ಸಾಕಾಣಿಕೆ ಮಾಡುತ್ತಿದ್ದ ಹನುಮವ್ವ ಪಾಟೀಲ್ ಎಂಬ ವಯೋವೃದ್ಧ ರೈತ ಮಹಿಳೆಯ ಲಕ್ಷಾಂತರ ಮೌಲ್ಯದ ರೇಷ್ಮೆ ಹುಳುಗಳಿಗೆ ದುಷ್ಕರ್ಮಿಗಳು ವಿಷವಿಕ್ಕಿದ್ದಾರೆ. ಗೂಡು ಕಟ್ಟುವ ಹಂತದಲ್ಲಿದ್ದ ಹುಳುಗಳು ವಿಷಪೂರಿತ ಸೊಪ್ಪು ತಿಂದು ಸಾವನ್ನಪ್ಪಿದೆ.

Read Full Story

02:44 PM (IST) Feb 12

ಎಷ್ಟೇ ಬ್ಯುಸಿಯಾಗಿದ್ರೂ ಬಿಡಲಿಲ್ಲ ಹಠ; ಕಿಸ್ ಬೆಡಗಿ ಶ್ರೀಲೀಲಾ ಈಗ ಡಾಕ್ಟರ್​ ಲೀಲಾ!

ಕಿಸ್' ಚಿತ್ರದ ಖ್ಯಾತಿಯ ನಟಿ ಶ್ರೀಲೀಲಾ ತಮ್ಮ ನಟನಾ ವೃತ್ತಿಯ ಜೊತೆಗೆ ವೈದ್ಯಕೀಯ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅಮ್ಮನಂತೆ ಡಾಕ್ಟರ್ ಆಗಬೇಕೆಂಬ ತನ್ನ ಬಾಲ್ಯದ ಕನಸನ್ನು, ಎಷ್ಟೇ ಬ್ಯುಸಿಯಾಗಿದ್ದರೂ ಛಲ ಬಿಡದೆ ಎಂಬಿಬಿಎಸ್ ಪದವಿ ಪಡೆಯುವ ಮೂಲಕ ನನಸಾಗಿಸಿಕೊಂಡಿದ್ದಾರೆ.
Read Full Story

02:40 PM (IST) Feb 12

ಸೀರಿಯಲ್‌ನಲ್ಲಿ ಪತ್ನಿ, ತಾಯಿ, ಅಜ್ಜಿ; ರಿಯಲ್‌ ಆಗಿ ಸಂಸಾರವೇ ಬೇಡ ಎಂದು ಸಿಂಗಲ್‌ ಆಗಿ ಉಳಿದ ಕನ್ನಡ ನಟಿಯರು!

Unmarried Kannada actresses: ಕನ್ನಡ ಧಾರಾವಾಹಿ, ಸಿನಿಮಾಗಳಲ್ಲಿ ಅತ್ತೆ, ತಾಯಿ, ಅಜ್ಜಿ ಪಾತ್ರಕ್ಕೆ ಬಣ್ಣ ಹಚ್ಚಿರೋ ನಟಿಯರು, ರಿಯಲ್‌ ಆಗಿ ಮದುವೆಯಾಗಿಲ್ಲ. ಅವರು ಹಾಗೆಯೇ ಸಿಂಗಲ್‌ ಆಗಿ ಉಳಿದುಕೊಂಡಿದ್ದಾರೆ. ಹಾಗಾದರೆ ಅವರು ಯಾರು? ಯಾರು?

 

Read Full Story

02:14 PM (IST) Feb 12

ಒಂದೇ ತಿಂಗಳಲ್ಲಿ ಹಸಿರು ನೆಲ ಬರಡು ಭೂಮಿ ಆಯ್ತು - ಬೆಂಗಳೂರು ಜೆಪಿ ನಗರದ ಫೋಟೋ ವೈರಲ್

ಬೆಂಗಳೂರಿನ ಜೆಪಿ ನಗರದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಹಚ್ಚ ಹಸಿರಿನಿಂದ ಕೂಡಿದ್ದ ಪ್ರದೇಶವನ್ನು ಬೋಳು ಮಾಡಲಾಗಿದೆ. ಈ ಘಟನೆಯ ಡ್ರೋನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಅಭಿವೃದ್ಧಿಯೋ ಅಥವಾ ವಿನಾಶವೋ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

01:43 PM (IST) Feb 12

ಭಾರತ್ ಬಂದ್ ಪ್ರತಿಭಟನಾಕಾರರ ಕರೆದೊಯ್ಯಲು ದಾರೀಲಿ ಹೋಗ್ತಿದ್ದ 'ಬಿಎಂಟಿಸಿ ಬಸ್ ಪ್ರಯಾಣಿಕರನ್ನ ಕೆಳಗಿಳಿಸಿದ' ಪೊಲೀಸರು!

ಬೆಂಗಳೂರಿನ ಟೌನ್ ಹಾಲ್ ಬಳಿ ನಡೆದ ಭಾರತ್ ಬಂದ್ ಪ್ರತಿಭಟನೆಯು ಪೊಲೀಸ್ ಮತ್ತು ಪ್ರತಿಭಟನಾಕಾರರ ಸಂಘರ್ಷಕ್ಕೆ ಕಾರಣವಾಯಿತು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಪೊಲೀಸರು ಪ್ರಯಾಣಿಕರಿದ್ದ ಬಿಎಂಟಿಸಿ ಬಸ್ಸನ್ನು ಬಳಸಿಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

Read Full Story

01:19 PM (IST) Feb 12

Karna Serial ಸೆಟ್ ಹೇಗಿರತ್ತೆ? ಶೂಟಿಂಗ್​ನಲ್ಲಿ ಏನೇನಾಗತ್ತೆ? ತೆರೆಯ ಹಿಂದಿನ ರೋಚಕ ವಿಡಿಯೋ ಇಲ್ಲಿದೆ

ಜೀ ಕನ್ನಡದ ಜನಪ್ರಿಯ 'ಕರ್ಣ' ಸೀರಿಯಲ್ ಟಿಆರ್‌ಪಿಯಲ್ಲಿ ಮುಂಚೂಣಿಯಲ್ಲಿದೆ.   ಈ ಲೇಖನವು ಸೀರಿಯಲ್‌ನ ಶೂಟಿಂಗ್ ಸೆಟ್‌ನಲ್ಲಿ ಒಂದು ದಿನ ಹೇಗೆ ಕಳೆಯುತ್ತದೆ ಮತ್ತು ತೆರೆಮರೆಯಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದರ ಕುತೂಹಲಕಾರಿ ನೋಟವನ್ನು ನೀಡುತ್ತದೆ.

Read Full Story

01:00 PM (IST) Feb 12

ಕಮಲಾಕರ್‌ ಭಟ್‌ನಿಂದ ನನಗೆ ಮಾರಕ ಕಾಯಿಲೆ ಬಂತು, ಇನ್ನು ಸುಚಿತ್ರಾ ಕಥೆ ಏನೋ! ಬುರ್ಕಾದಾರಿ ಮಹಿಳೆ ಅಳಲು

Astrologer Kamalakar Bhat: ಜ್ಯೋತಿಷಿ ಕಮಲಾಕರ್‌ ಭಟ್‌ ಅವರಿಂದ ನನಗೆ ಮಾರಕ ರೋಗ ಬಂದಿದೆ ಎಂದು ಸಂತ್ರಸ್ತೆಯೋರ್ವರು ಮಾಧ್ಯಮದ ಮುಂದೆ ಬಂದು ಹೇಳಿದ್ದಾರೆ. ನನಗೆ ಕಮಲಾಕರ್‌ ಭಟ್‌ ಅವರು ತಾಳಿ ಕಟ್ಟಿದ್ದಾರೆ ಎಂದು ಆ ಮಹಿಳೆ ಆರೋಪ ಮಾಡಿದ್ದಾರೆ.

Read Full Story

12:46 PM (IST) Feb 12

ಬಿಕ್ಲು ಶಿವ ಕೊಲೆ ಪ್ರಕರಣ - ಶಾಸಕ ಬೈರತಿ ಬಸವರಾಜ್‌ಗೆ ಮತ್ತೆ ಶಾಕ್, ಸಿಐಡಿ ಮುಂದೆ ಸರೆಂಡರ್ ಆಗಲು ಸುಪ್ರೀಂ ಸೂಚನೆ

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಶಾಸಕ ಬೈರತಿ ಬಸವರಾಜ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿಯೂ ನಿರಾಸೆಯಾಗಿದೆ. ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ನ್ಯಾಯಾಲಯ, ತಕ್ಷಣವೇ ಸಿಐಡಿ ತನಿಖೆಗೆ ಹಾಜರಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
Read Full Story

12:12 PM (IST) Feb 12

5 ವರ್ಷದ ಹಿಂದೆಯೇ ಮದುವೆಯಾಗಿರೋ Nanda Gokula Serial ಪ್ರಿಯಾ; ರಿಯಲ್‌ ಪತಿ ಯಾರು?

Nanda Gokula Kannada Serial Priya: ನಂದಗೋಕುಲ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದಿಂದ ಇಡೀ ಮನೆಗೆ ಸಮಸ್ಯೆ ಆಗುವ ಎಲ್ಲ ಲಕ್ಷಣ ಕಾಣುತ್ತಿದೆ. ನಂದಕುಮಾರ್‌ ಆರಿಸಿದ ಈ ಸೊಸೆಯು ಮನೆಗೆ ಕೊಳ್ಳಿ ಇಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಪ್ರಿಯಾ ಪಾತ್ರಧಾರಿ ಯಾರು?

Read Full Story

11:59 AM (IST) Feb 12

ರಾಜ್ಯಕ್ಕೆ ಬಿಗ್ ಶಾಕ್ ಕೊಟ್ಟ ಕೇಂದ್ರ, ಡಬ್ಬಲ್ ಡೆಕ್ಕರ್ ಫ್ಲೈಓವರ್, ಹೆಬ್ಬಾಳ–ಸರ್ಜಾಪುರ ಮೆಟ್ರೋ ಯೋಜನೆಗೆ ಬ್ರೇಕ್!

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಹೆಬ್ಬಾಳ–ಸರ್ಜಾಪುರ ಮೆಟ್ರೋ (ರೆಡ್ ಲೈನ್)ಯೋಜನೆಗೆ ಕೇಂದ್ರ  ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣದಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವ ಕಾರಣ ನೀಡಿ, ₹28,405 ಕೋಟಿ ವೆಚ್ಚದ ಡಿಪಿಆರ್ ಅನ್ನು ಮರುಪರಿಶೀಲನೆಗೆ ಕಳುಹಿಸಿದೆ.

Read Full Story

11:56 AM (IST) Feb 12

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯ ಆಯೋಜನೆ ಬಗ್ಗೆ ಹೈವೋಲ್ಟೇಜ್ ಸಭೆ! RCB ಫ್ಯಾನ್ಸ್‌ಗೆ ಶುಭ ಸುದ್ದಿನಾ?

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ಕುರಿತು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಸುರಕ್ಷತಾ ಕ್ರಮಗಳು ಮತ್ತು ಸಂಭಾವ್ಯ ಕಾನೂನು ಸವಾಲುಗಳ ಬಗ್ಗೆ ಚರ್ಚೆ. ಸಂಜೆ ನಡೆಯಲಿರುವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ?

Read Full Story

11:47 AM (IST) Feb 12

ಅಂದು ಹೇಳಿದಂತೆ ನಡೆದುಕೊಂಡ ನಟ ಉಪೇಂದ್ರ ಮಗ ಆಯುಷ್;‌ ಇದಪ್ಪಾ ಮಾತು ಅಂದ್ರೆ!

Ayush Upendra Movie: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರ ಪುತ್ರ ಆಯುಷ್ ಉಪೇಂದ್ರ ನಾಯಕನಾಗಿ ನಟಿಸುತ್ತಿರುವ ಚಿತ್ರ ಸದ್ದಿಲ್ಲದೆ ಪ್ರಾರಂಭವಾಗಿದೆ. ಈ ಮೂಲಕ ಆಯಷ್ ಉಪೇಂದ್ರ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

 

Read Full Story

More Trending News