ಬೆಂಗಳೂರು (ಜು.10): ದಿಲ್ಲಿಯಲ್ಲಿಂದು ರಾಜ್ಯ ಕಾಂಗ್ರೆಸ್ 2 ಮಹತ್ವದ ಸಭೆಗಳು ನಡೆಯಲಿದೆ. ಸರ್ಕಾರದಲ್ಲಿನ ಆಂತರಿಕ ಗೊಂದಲದ ಮಧ್ಯೆ ಸಭಾ ಸರಣಿ ನಡೆಯಲಿದೆ. ಸಿಎಂ, ಡಿಸಿಎಂ, ಸುರ್ಜೇವಾಲಾ ಮಧ್ಯೆ ಮೊದಲನೇ ಸಭೆ ನಡೆಯಲಿದ್ದು, ಪರಿಷತ್, ನಿಗಮ ಮಂಡಳಿ ಬಗ್ಗೆ ಚರ್ಚೆಯಾಗಿದೆ. ಆ ಬಳಿಕ ರಾಹುಲ್ ಗಾಂಧಿ ಜೊತೆ ಸಿಎಂ, ಡಿಸಿಎಂ ಪ್ರತ್ಯೇಕ ಸಭೆ ಸಾಧ್ಯತೆ ಇದ್ದು, ನಾಯಕತ್ವ ಗೊಂದಲದ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್ ಬ್ಲಾಗ್
11:18 PM (IST) Jul 10
ರಾಜ್ಯದಲ್ಲಿ ಹೃದಯಾಘಾತ ಸರಣಿ ಮುಂದುವರಿದಿದೆ. ಇದೀಗ ಬೆಳಗಾವಿಯಲ್ಲಿ 35ರ ಯುವಕ ಹಾಗೂ ಧಾರವಾಡದಲ್ಲಿ 55ರ ಮಹಿಳೆ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
11:01 PM (IST) Jul 10
ಮಾಜಿ ಸಂಸದ ಪ್ರತಾಪ್ ಸಿಂಹ ಅವರೇ ನನ್ನ ಅಪ್ಪನ ಹೆಸರು ಹೇಳಲು ನನಗೆ ಹೆಮ್ಮೆ ಇದೆ. ನಿಮಗೆ ನಿಮ್ಮ ಅಪ್ಪನ ಹೆಸರು ಹೇಳೋದಕ್ಕೆ ಆಗಿಲ್ಲ ಅಂದರೆ ನಾನೇನು ಮಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
10:33 PM (IST) Jul 10
ಪ್ರೇಮ ವೈಫಲ್ಯದಿಂದ ಮನನೊಂದ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಮದಳ್ಳಿಯ ಟೋಲ್‌ನಾಕಾದಲ್ಲಿ ನಡೆದಿದೆ.
10:31 PM (IST) Jul 10
ಶಿವಮೊಗ್ಗದ ಅಂಗನವಾಡಿ ಮಕ್ಕಳಿಗೆ ವಿಟಮಿನ್ ಎ ಡ್ರಾಪ್ ಹಾಕಲಾಗಿದೆ. ಇದರ ಬೆನ್ನಲ್ಲೇ ಒಂದರ ಹಿಂದೆ ಮತ್ತೊಬ್ಬರಂತೆ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡ ಮಕ್ಕಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
09:40 PM (IST) Jul 10
ಮುಂಬೈನ ಪ್ರತಿಷ್ಠಿತ ಮ್ಯಾಗಜೀನ್ ತನ್ನ ಮೊದಲ ಆವೃತ್ತಿಯನ್ನ ಲಾಂಚ್ ಮಾಡಿದೆ. ಸೋಶಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಗ್ಲಾಮರಸ್ ಲುಕ್‌ನೊಂದಿಗೆ ಈವೆಂಟ್‌ಗೆ ಎಂಟ್ರಿಕೊಟ್ಟಿದ್ದರೆ. ಉರ್ಫಿ ಲುಕ್ ಹಲವರ ಆಕರ್ಷಿಸಿದೆ
09:21 PM (IST) Jul 10
ಷೇರು ಮಾರುಕಟ್ಟೆಯ ಏರಿಳಿತಗಳ ನಡುವೆ, ಫಿಕ್ಸೆಡ್ ಡೆಪಾಸಿಟ್‌ಗಳು (ಎಫ್‌ಡಿ) ಹೂಡಿಕೆದಾರರಿಗೆ ಸುರಕ್ಷಿತ ಆಯ್ಕೆಯಾಗಿವೆ. ಹೀಗೆ ಹೂಡಿಕೆ ಮಾಡುವ ಹಣಕ್ಕೆ ಗರಿಷ್ಠ ಬಡ್ಡಿ ನೀಡುವ 6 ಬ್ಯಾಂಕ್ ಇಲ್ಲಿದೆ.
09:17 PM (IST) Jul 10
ನಮಗೆ ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಪಕ್ಷವನ್ನು ಕಟ್ಟಿ ಬೆಳಸಿ ಜನರೊಂದಿಗೆ ಇರುವುದು ಮುಖ್ಯ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
08:44 PM (IST) Jul 10
ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಬೇಟಿ ನೀಡಿ ತಿಂಡಿ ಸವಿದಿದ್ದಾರೆ. ದೋಸೆ, ಫಿಲ್ಟರ್ ಕಾಫಿಗೆ ಜ್ಯೋತಿರಾಧಿತ್ಯ ಸಿಂಧಿಯಾ ಮಾರು ಹೋಗಿದ್ದಾರೆ. ಈ ಕುರಿತು ವಿಡಿಯೋ ಹಂಚಿಕೊಂಡ ಸಚಿವ, ಅತ್ಯುತ್ತಮ ಸ್ಥಳ ಎಂದಿದ್ದಾರೆ.
08:10 PM (IST) Jul 10
ಅಮೃತಧಾರೆಯಲ್ಲಿ ಭೂಮಿಕಾ ಮತ್ತು ಗೌತಮ್ ಅಮ್ಮ-ಅಪ್ಪ ಆಗಿದ್ದಾರೆ. ಈ ಖುಷಿಯಲ್ಲಿ ಇಲ್ಲಿಯವರೆಗೆ ಮೌನವಾಗಿದ್ದ ಗೌತಮ್ ಅಮ್ಮ ಭಾಗ್ಯಮ್ಮಾ ಹೇಗೆ ಕುಣಿದು ಕುಪ್ಪಳಿಸಿದ್ದಾಳೆ ನೋಡಿ! ನಟಿಯ ಕಾಲೆಳೆದ ನೆಟ್ಟಿಗರು
07:58 PM (IST) Jul 10
ಮಂಜಿನ ನಗರಿ ಮಡಿಕೇರಿ ಅಂದ್ರೆ ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಳ್ಳುತ್ತೆ. ದೂರದ ಬೆಟ್ಟ ಅಂದರೆ ನುಣ್ಣಗೆ ಎನ್ನುವ ಹಾಗೆ ಹೊರಗಿನಿಂದ ಬರುವ ಪ್ರವಾಸಿಗರಿಗೆ ಮಡಿಕೇರಿ ಅಂದರೆ ಸ್ವರ್ಗ ಎನ್ನುತ್ತಾರೆ.
07:52 PM (IST) Jul 10
ಅತಿ ಸುಲಭದಲ್ಲಿ ಕೊತ್ತಂಬರಿ ಸೊಪ್ಪನ್ನು ಮನೆಯಲ್ಲಿಯೇ ಅದರಲ್ಲಿಯೂ ಕುಂಡದಲ್ಲಿಯೇ ಬೆಳೆಯಬಹುದಾಗಿದೆ. ಅದು ಹೇಗೆ? ವಿಡಿಯೋ ಸಹಿತ ಅದರ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
07:40 PM (IST) Jul 10
ಕಾಮಿಡಿಯನ್ ಕಪಿಲ್ ಶರ್ಮಾ ಇತ್ತೀಚೆಗಷ್ಟೇ ಕೆನಡಾದಲ್ಲಿ ಕ್ಯಾಪ್ಸ್ ಕೆಫೆ ಅದ್ಧೂರಿಯಾಗಿ ಒಪನ್ ಮಾಡಿದ್ದರು. ಆದರೆ ಇದೀಗ ನಿಷೇಧಿ ಖಲಿಸ್ತಾನಿ ಉಗ್ರ ಸಂಘಟನೆ ಕಪಿಲ್ ಕೆಫೆ ಮೇಲೆ ಗುಂಡಿನ ದಾಳಿ ನಡೆಸಿದೆ.
07:22 PM (IST) Jul 10
ಮೆಗಾಸ್ಟಾರ್ ಚಿರಂಜೀವಿ ಅವರನ್ನ ಆಗಾಗ ಟೀಕಿಸೋರಲ್ಲಿ ಸೀನಿಯರ್ ನಟ ರಾಜಶೇಖರ್ ಕೂಡ ಒಬ್ಬರು. ರಾಜಶೇಖರ್ ಮತ್ತು ಚಿರಂಜೀವಿ ಕುಟುಂಬಗಳ ನಡುವೆ ಬಹಳ ವರ್ಷಗಳಿಂದಲೂ ಭಿನ್ನಾಭಿಪ್ರಾಯಗಳಿವೆ.
07:02 PM (IST) Jul 10
ಒಂಟಿ ಕುಟುಂಬಗಳಲ್ಲಿ ಮಗುವಿನ ಆರೈಕೆ ಕಷ್ಟವಾಗಬಹುದು. ಸ್ವಯಂಚಾಲಿತ ತೊಟ್ಟಿಲುಗಳು ಈ ಸಮಸ್ಯೆಗೆ ಪರಿಹಾರವಾಗಿವೆ. ಫ್ಲಿಪ್‌ಕಾರ್ಟ್‌ನಲ್ಲಿ ವಿವಿಧ ಬಗೆಯ ಸ್ವಯಂಚಾಲಿತ ತೊಟ್ಟಿಲುಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ.
07:00 PM (IST) Jul 10
ಟೆನಿಸ್ ಪಟು ರಾಧಿಕಾ ಯಾದವ್ ದೇಹಕ್ಕೆ 3 ಗುಂಡುಗಳು ಹೊಕ್ಕಿವೆ. ಸ್ವಂತ ತಂದಯೇ ಮಗಳ ಮೇಲೆ 5 ಸುತ್ತಿನ ಗುಂಡು ಹಾರಿಸಿದ್ದಾರೆ. ರಾಧಿಕಾ ಸ್ಥಳದಲ್ಲೆ ಮೃತಪಟ್ಟರೆ, ತಂದೆ ಅರೆಸ್ಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಕಾರಣವೂ ಬಹಿರಂಗವಾಗಿದೆ.
06:17 PM (IST) Jul 10
06:07 PM (IST) Jul 10
05:54 PM (IST) Jul 10
ಮನೆಗೆಲಸದಾಕೆ ಇಂಗ್ಲೀಷ್‌ನಲ್ಲಿ ಮನೆ ಮಾಲಕಿಗೆ ಮೆಸೇಜ್ ಮಾಡಿದ್ದಾರೆ. ವ್ಯಾಟ್ಸಾಪ್ ಮೆಸೇಜ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಕೆಲಸದಾಕೆಯ ಇಂಗ್ಲೀಷ್ ನೋಡಿ ಹಲವರು ಅಚ್ಚರಿಗೊಂಡಿದ್ದಾರೆ.ಅಷ್ಟಕ್ಕೂ ಕೆಲಸದಾಕೆ ಸೆಂಡ್ ಮಾಡಿದ ಮೆಸೇಜ್ ಏನು?
05:36 PM (IST) Jul 10
05:17 PM (IST) Jul 10
ಕೇರಳದ ವೃದ್ಧ ಜೋಡಿಯೊಂದು ವೃದ್ಧಾಶ್ರಮದಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. 79 ವರ್ಷದ ವಿಜಯರಾಘವನ್ ಹಾಗೂ 75 ವರ್ಷದ ಸುಲೋಚನಾ ಅವರು ಕೇರಳದಲ್ಲಿ ಸರ್ಕಾರಿ ಪ್ರಯೋಜಕತ್ವದ ವೃದ್ಧಾಶ್ರಮವೊಂದರಲ್ಲಿ ವಾಸ ಮಾಡುತ್ತಿದ್ದರು
05:02 PM (IST) Jul 10
ಕನ್ನಡದಿಂದ ತೆಲುಗು ಚಿತ್ರರಂಗಕ್ಕೆ ಹಾರಿ ಭಾರೀ ಯಶಸ್ಸು ಗಳಿಸಿದ್ದ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಬಹುತೇಕ ಸಿನಿಮಾ ಸೋತು ಮಕಾಡೆ ಮಲಗಿವೆ. ತೆಲುಗಿನಲ್ಲಿ ಆಫರ್ ಕಡಮೆಯಾಗಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರೆ, ಧನುಷ್ ಸಿನಿಮಾದಿಂದ ಸುಖಾ ಸುಮ್ಮನೆ ಕೈಬಿಡಲಾಗಿದೆಯಂತೆ. ಕನ್ನಡಕ್ಕೆ ಬರ್ತಾರಾ ಕಾದು ನೋಡಬೇಕಿದೆ.
04:46 PM (IST) Jul 10
ಮಲೇಷಿಯಾದಲ್ಲಿನ ದೇಗುಲದ ಅರ್ಚನಕ ಆಶೀರ್ವಾದ, ದೇವರ ಕೃಪೆ ಎಂದು ಕರೆದೊಯ್ಡು ಏನೆಲ್ಲಾ ಮಾಡಿದ್ದ ಅನ್ನೋದನ್ನು ನಟಿ ಬಹಿರಂಗಪಡಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದೀಗ ಪ್ರಕರಣ ದಾಖಲಾಗಿದೆ.
04:36 PM (IST) Jul 10
04:19 PM (IST) Jul 10
ಗುರುಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ಕುಸಿದು ಟ್ರಕ್ ಒಂದು ಕಂದಕಕ್ಕೆ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
04:07 PM (IST) Jul 10
03:35 PM (IST) Jul 10
ಸರ್ಕಾರಿ ಉದ್ಯೋಗಿಗಳು, ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್. ಕಾರಣ ಸ್ಯಾಲರಿ ಶೇಕಡಾ 30 ರಿಂದ 34 ರಷ್ಟು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. 9ನೇ ವೇತನ ಆಯೋಗ ಜಾರಿಗೊಳಿಸಲು ಸರ್ಕಾರ ಸಜ್ಜಾಗಿದೆ.
03:23 PM (IST) Jul 10
ಸಾನಿಯಾ ವಿಂಬಲ್ಡನ್ ಹೈಲೈಟ್ಸ್: ಟೆನಿಸ್ ಕ್ವೀನ್ ಸಾನಿಯಾ ವಿಂಬಲ್ಡನ್‌ನಲ್ಲಿ ಭಾರತದ ಹೆಸರು ಮಿಂಚುವಂತೆ ಮಾಡಿದ್ದರು. ಅವರ ಕೆರಿಯರ್ ಹೈಲೈಟ್ಸ್ ಇಲ್ಲಿವೆ…
03:21 PM (IST) Jul 10
ಸೆಪ್ಟೆಂಬರ್ ಅಂತ್ಯದಲ್ಲಿ ಆಚರಿಸಲಾಗುವ ಮೈಸೂರು ದಸರಾದ ಸಮಯದಲ್ಲಿ ಒಂದು ಸಿಗ್ನೇಚರ್ ಕಾರ್ಯಕ್ರಮವಾಗಿ ಮಾರ್ಪಟ್ಟಿರುವ ಏರ್ ಶೋ ನಡೆಸುವ ಬಗ್ಗೆ ಚರ್ಚಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.
03:16 PM (IST) Jul 10
03:08 PM (IST) Jul 10
02:40 PM (IST) Jul 10
ಮಹೀಂದ್ರ ಬಿಡುಗಡೆ ಮಾಡಿರುವ ಹೊಸ ವೇರಿಯೆಂಟ್ XUV 3XO REVX ಕಾರು ಈಗಾಗಲೇ ಡೀಲರ್ ಬಳಿ ತಲುಪಿದೆ. ಕೈಗೆಟುಕುವ ದರದಲ್ಲಿ ಕಾರು ಬಿಡುಗಡೆಯಾಗಿದೆ.ಇದರ ಬೆಲೆ ಪಟ್ಟಿ, ಆಫರ್ ಮಾಹಿತಿ ಇಲ್ಲಿದೆ.
01:29 PM (IST) Jul 10
01:28 PM (IST) Jul 10
01:24 PM (IST) Jul 10
01:23 PM (IST) Jul 10
01:13 PM (IST) Jul 10
ಜನರೊಂದಿಗೆ ಮಾತನಾಡಲು ಇಷ್ಟಪಡದ ಯುವಕನೊಬ್ಬ ತನ್ನ ಮನೆಗೆ ಭೇಟಿ ನೀಡುವವರ ಮೇಲೆ ಇಟ್ಟಿಗೆ ಎಸೆಯಲು ತನ್ನ ನಾಯಿಗೆ ತರಬೇತಿ ನೀಡಿದ್ದಾನೆ. ಈ ಬಗ್ಗೆ ಯುವಕನ ನೆರೆಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಆತನ ಬಂಧನವಾಗಿದೆ.
01:10 PM (IST) Jul 10
12:38 PM (IST) Jul 10
12:29 PM (IST) Jul 10
12:20 PM (IST) Jul 10