LIVE NOW
Published : Mar 02, 2026, 06:34 AM ISTUpdated : Mar 02, 2026, 11:49 PM IST

Karnataka Latest News Live: ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ - ರಥದ ಅಲಂಕಾರದಲ್ಲಿ ರಾಜಕೀಯ - ಶ್ರೇಯಸ್ ಪಟೇಲ್ ವಿರುದ್ಧ JDS ಕಾರ್ಯಕರ್ತರ ಆಕ್ರೋಶ

ಸಾರಾಂಶ

ಅಮೆರಿಕ-ಇಸ್ರೇಲ್‌ ಜಂಟಿ ದಾಳಿಯಲ್ಲಿ ಇರಾನ್‌ ಪರಮೋಚ್ಚ ನಾಯಕ ಅಯತೋಲ್ಲ ಅಲಿ ಖಮೇನಿ ಸಾವನ್ನಪ್ಪಿರುವ ಸುದ್ದಿ ಕೇಳಿ ಜಿಲ್ಲೆಯ ಗೌರಿಬಿದನೂರು ತಾಲೂಕಿನ ‘ಬೇಬಿ ಇರಾನ್‌’ ಅಲೀಪುರ ಗ್ರಾಮದಲ್ಲಿ ಆಕ್ರೋಶ ಭುಗಿಲೆದ್ದಿದ್ದು, 10 ಸಾವಿರಕ್ಕೂ ಅಧಿಕ ಮಂದಿ ಮೆರವಣಿಗೆ ನಡೆಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Lakshminarasimha Swamy Rathotsava in Holenarasipura

11:49 PM (IST) Mar 02

ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ - ರಥದ ಅಲಂಕಾರದಲ್ಲಿ ರಾಜಕೀಯ - ಶ್ರೇಯಸ್ ಪಟೇಲ್ ವಿರುದ್ಧ JDS ಕಾರ್ಯಕರ್ತರ ಆಕ್ರೋಶ

ಹೊಳೇನರಸೀಪುರದ ಲಕ್ಷ್ಮಿ ನರಸಿಂಹ ಸ್ವಾಮಿ ರಥೋತ್ಸವದ ಅಲಂಕಾರ ವಿಚಾರದಲ್ಲಿ ರಾಜಕೀಯ ನುಸುಳಿದೆ. ಸಂಸದ ಶ್ರೇಯಸ್ ಪಟೇಲ್ ನೀಡಿದ ಬಟ್ಟೆ ಬಳಸಿದ್ದಕ್ಕೆ  ರೇವಣ್ಣ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Read Full Story

11:21 PM (IST) Mar 02

ಇರಾನ್ ದಾಳಿಯ ಸಾವಿನ ದವಡೆಯಿಂದ ಪಾರಾಗಿ ಬೆಂಗಳೂರಿಗೆ ಬಂದಿಳಿದ 230 ಕನ್ನಡಿಗರು; ಬಾಂಬ್ ಬೀಳುವ ಅನುಭವ ಬಿಚ್ಚಿಟ್ಟರು!

ಯುಎಇ ಮೇಲೆ ನಡೆದ ಡ್ರೋನ್ ಮತ್ತು ಮಿಸೈಲ್ ದಾಳಿಯ ನಡುವೆ ಸಿಲುಕಿದ್ದ 230 ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ಮರಳಿದ್ದಾರೆ. ದಾಳಿಯ ಭೀಕರತೆಯನ್ನು ವಿವರಿಸಿದ ಅವರು, ಸಂಕಷ್ಟದ ಸಮಯದಲ್ಲಿ ಉಚಿತ ವಸತಿ ಮತ್ತು ಭದ್ರತೆ ಒದಗಿಸಿದ ಯುಎಇ ಸರ್ಕಾರದ ಕಾರ್ಯವನ್ನು ಶ್ಲಾಘಿಸಿದ್ದಾರೆ.
Read Full Story

11:11 PM (IST) Mar 02

ಒಳಗಿರುವ ಪರಮಾತ್ಮ ಆಡಿಸಿದ ಆಟ - ಕಂಠಪೂರ್ತಿ ಕುಡಿದು ಬಾರ್ ಮುಂದೆಯೇ ಮಲಗಿದ ನಾರಿ

Rayabhaga woman's video goes viral: ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು ಎಂಬ ಹಾಡಿನಂತೆ ಇಲ್ಲೊಬ್ಬಳು ಮಹಿಳೆ ತಾನು ಯಾವ ಪುರುಷರಿಗೆ ಕಡಿಮೆ ಇಲ್ಲ ಎಂಬಂತೆ ಬಾರ್ ಮುಂದೆ ಕುಡಿದು ಬಿದ್ದಿದ್ದಾಳೆ.ಆಕೆಯ ವೀಡಿಯೋ ವೈರಲ್ ಆಗಿದೆ.

Read Full Story

09:25 PM (IST) Mar 02

ಸಾಲ ಮರುಪಾವತಿಯಲ್ಲಿ ದೇಶದಲ್ಲಿಯೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಗ್ರಸ್ಥಾನ, ಇದು ಕರಾವಳಿಗರ ಪ್ರಾಮಾಣಿಕತೆ

ಮಂಗಳೂರಿನ ಬೋಳೂರಿನಲ್ಲಿ ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಕಟ್ಟಡ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಕೃಷಿ ಸಾಲ ಮರುಪಾವತಿಯಲ್ಲಿ ಅವಿಭಜಿತ ಕರಾವಳಿ ಜಿಲ್ಲೆ ದೇಶದಲ್ಲೇ ಅಗ್ರಸ್ಥಾನದಲ್ಲಿದೆ  

Read Full Story

08:55 PM (IST) Mar 02

ಗಲೀಜು ಟಾಯ್ಲೆಟ್‌, ಕೆಟ್ಟ ಊಟ, ನೆಲದ ಮೇಲೆ ನಿದ್ರೆ - ತಿಹಾರ್ ಜೈಲಲ್ಲಿ ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಕನ್ನಡ ಸಿನಿಮಾ ನಟಿ!

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದ ನಟಿ ಸಂದೀಪಾ ವಿರ್ಕ್, ಅಲ್ಲಿನ ಕಠೋರ ಜೀವನ, ಅನೈರ್ಮಲ್ಯ ಮತ್ತು ಭ್ರಷ್ಟಾಚಾರದ ಬಗ್ಗೆ ತಮ್ಮ ನೋವಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಜೈಲಿನಲ್ಲಿದ್ದಾಗ ಸಾವನ್ನೇ ಬಯಸಿದ್ದೆ ಎಂದು ಹೇಳಿದ್ದಾರೆ.

Read Full Story

08:31 PM (IST) Mar 02

ಡಿಆರ್‌ಡಿಒ ನೇಮಕಾತಿ 2026 - ರಕ್ಷಣಾ ವಲಯದ ಮಹತ್ವದ ಕರೆ! ಒಟ್ಟು 188 ಹುದ್ದೆಗಳಿಗೆ ಅರ್ಜಿ ಆಹ್ವಾನ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ  2026ನೇ ಸಾಲಿನಲ್ಲಿ 188 ಆಡಳಿತಾಧಿಕಾರಿ ಮತ್ತು ಖಾಸಗಿ ಕಾರ್ಯದರ್ಶಿ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಪದವಿ ಅಥವಾ ಬಿಇ/ಬಿ.ಟೆಕ್ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಮಾರ್ಚ್ 29, 2026ರೊಳಗೆ ನಿಗದಿತ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.

Read Full Story

07:43 PM (IST) Mar 02

ಶಿವಮೊಗ್ಗ - ಬುರ್ಖಾ ಧರಿಸಿ ಪ್ರೇಯಸಿಯನ್ನು ನೋಡಲು ಬಂದ ಪ್ರೇಮಿಗೆ ಮಕ್ಕಳ ಕಳ್ಳನೆಂದು ಭಾವಿಸಿ ಕಂಬಕ್ಕೆ ಕಟ್ಟಿ ಗೂಸಾ!

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ, ಪ್ರೇಯಸಿಯನ್ನು ನೋಡಲು ಬುರ್ಖಾ ಧರಿಸಿ ಬಂದ ಯುವಕನನ್ನು ಮಕ್ಕಳ ಕಳ್ಳನೆಂದು ತಪ್ಪಾಗಿ ಭಾವಿಸಿದ ಸ್ಥಳೀಯರು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ಪೊಲೀಸರ ವಿಚಾರಣೆಯ ನಂತರ, ಆತ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದನೆಂಬ ಸತ್ಯಾಂಶ ಬಯಲಾಗಿದೆ.
Read Full Story

06:51 PM (IST) Mar 02

ಕೋಲಾರದ ಕರುಳು ಹಿಂಡುವ ದುರಂತ - ತಾಯಿಯ ಕಠಿಣ ನಿರ್ಧಾರಕ್ಕೆ ಇಬ್ಬರು ಕಂದಮ್ಮಗಳ ಸಾವು!

ಕೋಲಾರದ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ, ಕೌಟುಂಬಿಕ ಕಲಹದಿಂದ ನೊಂದ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಕುಂಟೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಸ್ಥಳೀಯರು ತಾಯಿಯನ್ನು ರಕ್ಷಿಸಿದ್ದಾರೆ.  

Read Full Story

06:02 PM (IST) Mar 02

ಕರಿದ ಎಣ್ಣೆ ಮರಳಿ ಬಳಸದಂತೆ ಏಮ್ಸ್ ವೈದ್ಯೆ ಎಚ್ಚರಿಕೆ, ಫಾಸ್ಟ್ ಫುಡ್ ಮಳಿಗೆಗಳಲ್ಲಿನ ಪರೀಕ್ಷೆಯ ಶಾಕಿಂಗ್ ಸತ್ಯ!

ಅಡುಗೆ ಎಣ್ಣೆಯನ್ನು ಪದೇಪದೇ ಬಿಸಿ ಮಾಡಿ ಮರುಬಳಕೆ ಮಾಡುವುದು ಸಾಮಾನ್ಯವಾದರೂ, ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.  ಈ ಅಭ್ಯಾಸವು ಕ್ಯಾನ್ಸರ್ ಮತ್ತು ಹೃದಯ ರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ,  ಎಣ್ಣೆಯನ್ನು ಮತ್ತೆ ಬಿಸಿ ಮಾಡಿದಾಗ  ರಾಸಾಯನಿಕಗಳು ಬಿಡುಗಡೆಯಾಗುತ್ತವೆ.

Read Full Story

05:43 PM (IST) Mar 02

Karna Serial Twist - ಡಾ.ನಿಧಿ ಈಗ ಲಾಯರ್​ ನಿಧಿ! Law ಪದವಿ ಬಗ್ಗೆ ಬಿಸಿಬಿಸಿ ಚರ್ಚೆ- ಏನ್ ಹೇಳತ್ತೆ ಕಾನೂನು?

ಕರ್ಣ ಸೀರಿಯಲ್​ನಲ್ಲಿ, ರಮೇಶ್‌ನ ಸಂಚಿನಿಂದ ಕರ್ಣ ಜೈಲಿನಲ್ಲಿದ್ದಾನೆ. ಸರಿಯಾದ ಸಮಯಕ್ಕೆ ಲಾಯರ್ ಕೈಕೊಟ್ಟಾಗ,  ಲಾಯರ್ ಆಗಿ ಕೋರ್ಟ್‌ಗೆ ಪ್ರವೇಶಿಸಿ ಎಲ್ಲರಿಗೂ ಆಘಾತ ನೀಡಿದ್ದಾಳೆ. ಕಾನೂನು ಪದವಿ ಇಲ್ಲದೆ  ವಾದಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಈ ಲೇಖನ ಚರ್ಚಿಸುತ್ತದೆ.

Read Full Story

05:34 PM (IST) Mar 02

ನಿಜವಾಯ್ತು ಬ್ರಹ್ಮಾಂಡ ಗುರೂಜಿ ಭವಿಷ್ಯ - ಇರಾನ್-ಇಸ್ರೇಲ್ ಯುದ್ಧದ ಮೂಲಕ ಜಗತ್ತಿಗೆ ಶುರುವಾಯ್ತು ಗ್ರಹಣ ಗಂಡಾಂತರ!

2026ರ ಸೂರ್ಯಗ್ರಹಣದ ಬಗ್ಗೆ ಬ್ರಹ್ಮಾಂಡ ಗುರೂಜಿ ನುಡಿದಿದ್ದ ಭವಿಷ್ಯವಾಣಿಗಳು ಸತ್ಯವಾಗುತ್ತಿವೆ. ಮಧ್ಯಪ್ರಾಚ್ಯದಲ್ಲಿ ಯುದ್ಧ, ಜಾಗತಿಕ ಆರ್ಥಿಕ ಕುಸಿತ, ಮತ್ತು ವಿಮಾನ ಹಾಗೂ ಹಡಗು ಪ್ರಯಾಣದಲ್ಲಿನ ಅಪಾಯಗಳ ಬಗ್ಗೆ ಅವರು ನೀಡಿದ್ದ ಎಚ್ಚರಿಕೆಗಳು ಇದೀಗ ನಿಜವಾಗುತ್ತಿವೆ ಎಂದು ಈ ಲೇಖನವು ವಿವರಿಸುತ್ತದೆ.
Read Full Story

05:12 PM (IST) Mar 02

ನಟಿ ಅಮೂಲ್ಯ ಪತಿ ಜಗದೀಶ್‌ ಆರ್‌ ಚಂದ್ರಗೆ ಉತ್ತಮ ಹುದ್ದೆ ಕೊಟ್ಟ BJP ಪಕ್ಷ! ಏನದು?

Actress Amulya Husband: ನಟಿ ಅಮೂಲ್ಯ ಪತಿ ಜಗದೀಶ್‌ ಆರ್‌ ಚಂದ್ರ ಅವರು ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರಿಗೆ ಬಿಜೆಪಿ ಪಕ್ಷವು ಒಳ್ಳೆಯ ಹುದ್ದೆಯನ್ನು ನೀಡಿದೆ. ಅನೇಕರು ಜಗದೀಶ್‌ಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

 

Read Full Story

04:45 PM (IST) Mar 02

ಡಿವೋರ್ಸ್‌ ಕೇಳಿರೋ ದಳಪತಿ ವಿಜಯ್‌ ಹೆಂಡ್ತಿ ಸಂಗೀತಾ ಸಾಮಾನ್ಯದವರಲ್ಲ! ಕೂತು ತಿನ್ನುವಷ್ಟಿದೆ ಅಪ್ಪನ ಆಸ್ತಿ!

ನಟ ದಳಪತಿ ವಿಜಯ್‌ ಪತ್ನಿ ಸಂಗೀತಾ ಅವರು ಡಿವೋರ್ಸ್‌ಗಾಗಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಂದಹಾಗೆ ಸಂಗೀತಾ ಅವರು ಮೊದಲು ವಿಜಯ್‌ ಅಭಿಮಾನಿಯಾಗಿ, ಪ್ರೀತಿಸಿ ಮದುವೆಯಾಗಿದ್ದರು. ವಿಜಯ್‌ ಅವರಿಗೆ ಬೇರೆ ನಟಿಯ ಜೊತೆ ಅನೈತಿಕ ಸಂಬಂಧವಿದೆ ಎಂದು ಸಂಗೀತಾ ಹೇಳಿದ್ದರು. 

Read Full Story

04:30 PM (IST) Mar 02

ಮಂಗಳೂರು - ಉಳ್ಳಾಲ ಮಸೀದಿ ಎದುರು ಬಾಂಬ್ ಸ್ಪೋಟಿಸುವ ಬೆದರಿಕೆ, ಗಂಭೀರವಾಗಿ ಪರಿಗಣಿಸಿದ ಪೊಲೀಸರು

ಉಳ್ಳಾಲ ಮಸೀದಿ ಎದುರು ಬಾಂಬ್ ಸ್ಫೋಟಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ ಪೋಸ್ಟ್ ವೈರಲ್ ಆಗಿದ್ದು, ಇದು ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.
Read Full Story

04:13 PM (IST) Mar 02

Photo - ಇದು 'ರಾಧಾ ರಮಣ' ನಟಿ ಕಾವ್ಯಾ ಗೌಡರ 150 ಕೋಟಿ ಮನೆಯೇ? ಎಂಥ ಅದ್ದೂರಿ ಬಂಗಲೆ ಕಣ್ರೀ..!

Actress Kavya Gowda Home: ಹದಿನೈದು ದಿನಗಳ ಹಿಂದೆ ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ ಅವರ 150 ಕೋಟಿ ರೂಪಾಯಿ ಮನೆ ದೊಡ್ಡ ಚರ್ಚೆಯಾಗಿತ್ತು. ಈಗ ಕಾವ್ಯಾ ಗೌಡ ಅವರು ಪತಿ ಸೋಮಶೇಖರ್‌ ಜೊತೆ ಫೋಟೋಶೂಟ್‌ ಮಾಡಿಸಿರೋದು ಸಿಕ್ಕಾಪಟ್ಟೆ ಮೆಚ್ಚುಗೆ ಗಳಿಸುತ್ತಿದೆ.

Read Full Story

03:34 PM (IST) Mar 02

Bhagyalakshmi Serial - ಭಾಗ್ಯ ಸಾವಿನೊಂದಿಗೆ ಧಾರಾವಾಹಿ ಮುಗಿಸ್ತಾರಾ? ಜ್ಯೋತಿಷಿ ಹೇಳಿದಂತೆ ನಡೀತಿದೆ!

Bhagyalakshmi Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಯಾರ ಜೊತೆ ಬದುಕುತ್ತಾಳೆ ಎನ್ನೋದು ದೊಡ್ಡ ಪ್ರಶ್ನೆ ಆಗಿದೆ. ಹೀಗಿರುವಾಗ ಅವಳ ಪ್ರಾಣಕ್ಕೆ ಅಪಾಯ ಬಂದಿದೆ. ಹೌದು, ತಾಂಡವ್‌ ತನ್ನ ಜೊತೆಗಿಲ್ಲ ಎಂದು ಶ್ರೇಷ್ಠ ಅವಳನ್ನು ಕೊಲ್ಲಲು ನೋಡುತ್ತಿದ್ದಾಳೆ.

 

Read Full Story

03:27 PM (IST) Mar 02

ಅಪಾಯಕಾರಿ ಬೆಂಗಳೂರು ವೀಲಿಂಗ್, ಮಾನ್ಯತಾ ಟೆಕ್ ಪಾರ್ಕ್ ಬಳಿ ಬುರ್ಕಾ ಧರಿಸಿದ ಯುವ ಜೋಡಿಯ ಅಪಾಯಕಾರಿ ಹುಚ್ಚಾಟ!

ಬೆಂಗಳೂರಿನಲ್ಲಿ ವೀಲಿಂಗ್ ಪುಂಡರ ಹಾವಳಿ ಹೆಚ್ಚಾಗಿದ್ದು, ಇತ್ತೀಚೆಗೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಯುವಕನೊಬ್ಬ ಯುವತಿಯೊಂದಿಗೆ ಅತ್ಯಂತ ಅಪಾಯಕಾರಿ ಬೈಕ್ ಸ್ಟಂಟ್ ಮಾಡಿದ್ದಾನೆ. ಹೆಲ್ಮೆಟ್ ಇಲ್ಲದೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಿ ನಡೆಸಿದ ಈ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

03:07 PM (IST) Mar 02

Amruthadhaare ಮಲ್ಲಿ-ಸುನಿ ಎಂಗೇಜ್​ಮೆಂಟ್​ ಶೂಟಿಂಗ್​ನಲ್ಲಿ ಗಾಢ ನಿದ್ದೆಯಲ್ಲಿ ಅಪ್ಪಿ - ಏನೆಲ್ಲಾ ಆಯ್ತು ನೋಡಿ

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಮತ್ತು ಸುನಿಲ್ ನಿಶ್ಚಿತಾರ್ಥ ನಡೆದಿದೆ. ಆದರೆ, ಜೈದೇವನ ಕುತಂತ್ರದಿಂದ ಈ ಮದುವೆ ನಡೆಯುತ್ತಿದ್ದು, ಈ ಸತ್ಯ ಸುನಿಲ್‌ಗೆ ತಿಳಿದಿದೆ. ಇದರ ನಡುವೆ, ನಟಿ ಅನ್ವಿತಾ ಸಾಗರ್ ನಿಶ್ಚಿತಾರ್ಥದ ಶೂಟಿಂಗ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Read Full Story

03:04 PM (IST) Mar 02

ತಳ್ಳು ತಳ್ಳು ಐಸ್ಸಾ.. ಇನ್ನು ಸ್ವಲ್ಪ ತಳ್ಳಣ್ಣ; ರೈಲ್ವೆ ಹಳಿ ಮೇಲೆಯೇ ಕೆಟ್ಟು ನಿಂತ ಬಿಎಂಟಿಸಿ ಬಸ್

ಬೆಂಗಳೂರು ಹೊರವಲಯದ ಆನೇಕಲ್-ಅತ್ತಿಬೆಲೆ ರಸ್ತೆಯ ರೈಲ್ವೆ ಹಳಿ ಮೇಲೆ ಬಿಎಂಟಿಸಿ ಬಸ್ ಕೆಟ್ಟು ನಿಂತು ಆತಂಕ ಸೃಷ್ಟಿಸಿತ್ತು. ಸುಮಾರು 30 ನಿಮಿಷಗಳ ಕಾಲ ರೈಲು ಮತ್ತು ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ನಂತರ ಸ್ಥಳೀಯರು ಬಸ್ ತಳ್ಳಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Read Full Story

02:58 PM (IST) Mar 02

ಮದ್ದೂರು ನಗರಸಭೆಗೆ ಗ್ರಾಮಗಳ ವಿಲೀನಕ್ಕೆ ಹೆಚ್.ಡಿ.ಕುಮಾರಸ್ವಾಮಿ ವಿರೋಧ - 4 ಗ್ರಾ.ಪಂ. ಹೊರಗಿಡಲು ಸರ್ಕಾರಕ್ಕ ಪತ್ರ!

ಮದ್ದೂರು ತಾಲ್ಲೂಕಿನ 4 ಗ್ರಾಮ ಪಂಚಾಯಿತಿಗಳನ್ನು ನಗರಸಭೆಗೆ ಸೇರಿಸುವ ಸರ್ಕಾರದ ನಿರ್ಧಾರವನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರೋಧಿಸಿದ್ದಾರೆ. ಈ 'ಜನವಿರೋಧಿ' ಕ್ರಮ ಹಿಂಪಡೆಯುವಂತೆ ಸಿದ್ದರಾಮಯ್ಯನವರಿಗೆ ಪತ್ರ ಬರೆದು, 70 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ

Read Full Story

02:58 PM (IST) Mar 02

Bhagyalakshmi Serial - ಭಾಗ್ಯ ಯಾರ ಜೊತೆ ಸಂಸಾರ ಮಾಡ್ಬೇಕು? ಜ್ಯೋತಿಷಿ ಮಾತು ಕೇಳಿ ಕುಸುಮಾಗೆ ದಿಗ್ಭ್ರಮೆ!

Bhagyalakshmi Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ ಹಾಗೂ ಆದಿ ಮಧ್ಯೆ ಭಾಗ್ಯ ಆಯ್ಕೆ ಯಾವುದು ಎಂಬ ಪ್ರಶ್ನೆ ಎದ್ದಿದೆ. ಈ ವೇಳೆ ಜ್ಯೋತಿಷಿ ಭವಿಷ್ಯ ಕೂಡ ಸಾಕಷ್ಟು ಕುತೂಹಲ ಮೂಡಿಸಿದೆ.

Read Full Story

02:45 PM (IST) Mar 02

ಭಾರತೀಯ ಸೇನೆಯ ಬಲಿಷ್ಠ ಯುದ್ಧ ಟ್ಯಾಂಕ್‌ಗಳ ಕಾರ್ಯಕ್ಷಮತೆ ಹೆಚ್ಚಿಸಿದ ಬೆಂಗಳೂರಿನ ಆಲ್ಫಾ-ಎಲ್ಸೆಕ್‌ ಸಂಸ್ಥೆ!

ಬೆಂಗಳೂರು ಮೂಲದ ಆಲ್ಫಾ-ಎಲ್ಸೆಕ್ ಸಂಸ್ಥೆಯು ಭಾರತೀಯ ಸೇನೆಯ 96 ಟಿ-72 ಯುದ್ಧ ಟ್ಯಾಂಕ್‌ಗಳಿಗೆ 'ಥರ್ಮಲ್ ಇಮೇಜಿಂಗ್ ಫೈರ್ ಕಂಟ್ರೋಲ್ ಸಿಸ್ಟಮ್' ಅನ್ನು ಯಶಸ್ವಿಯಾಗಿ ಅಳವಡಿಸಿದೆ. ಈ ತಂತ್ರಜ್ಞಾನವು, ರಾತ್ರಿಯ ಸಮಯದಲ್ಲಿಯೂ ಚಲಿಸುವ ಗುರಿಗಳನ್ನು ಪತ್ತೆಹಚ್ಚಿ ನಿಖರವಾಗಿ ದಾಳಿ ಮಾಡುವ ಸಾಮರ್ಥ್ಯ ನೀಡುತ್ತದೆ.

Read Full Story

02:26 PM (IST) Mar 02

ಮನೆಯಲ್ಲೊಬ್ಬ, ಮನದಲ್ಲೊಬ್ಬ.. ನಟಿಯ ತ್ರಿಕೋನ ರಕ್ತಸಿಕ್ತ ಪ್ರೇಮಕಥೆ - ಬೆತ್ತಲಾಗಿ ಕುಳಿತವನ ಹಿಂಭಾಗಕ್ಕೆ ಚಾಕು!

ಬೆಂಗಳೂರಿನಲ್ಲಿ ತ್ರಿಕೋನ ಪ್ರೇಮಕಥೆಯೊಂದು ಕೊಲೆಯಲ್ಲಿ ಅಂತ್ಯಗೊಂಡಿದೆ. ನಟಿ ಹಾಗೂ ಸಹ ನಿರ್ದೇಶಕಿ ಬಿಂದು, ತನ್ನ ಹೊಸ ಪ್ರಿಯಕರನೊಂದಿಗೆ ಸೇರಿ ಹಳೆಯ ಗೆಳೆಯ ಮೋಹನ್ ಕೃಷ್ಣರಾವ್‌ನನ್ನು ಕೊಲೆ ಮಾಡಿದ್ದಾಳೆ. ಈ ಸಂಬಂಧ ಬಾಗಲಗುಂಟೆ ಪೊಲೀಸರು ನಟಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Read Full Story

02:22 PM (IST) Mar 02

'ಉಗ್ರ ಕಸಬ್ ನೇಣು ಹಾಕಿದ ನಿಮಗೆ ಬಿಡೋದಿಲ್ಲ' ಬೆಂಗಳೂರು ಪಾಸ್‌ಪೋರ್ಟ್ ಕಚೇರಿಗೆ ಇ-ಮೇಲ್ ಬಾಂಬ್ ಬೆದರಿಕೆ!

ಬೆಂಗಳೂರಿನ ಪಾಸ್‌ಪೋರ್ಟ್ ಪ್ರಾದೇಶಿಕ ಕಚೇರಿಗೆ ತಮಿಳು ಭಾಷೆಯಲ್ಲಿ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಕೆಲಕಾಲ ಆತಂಕ ಸೃಷ್ಟಿಸಿತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳವು ತಪಾಸಣೆ ನಡೆಸಿ, ಇದೊಂದು ಹುಸಿ ಬೆದರಿಕೆ ಎಂದು ದೃಢಪಡಿಸಿದ್ದಾರೆ. 

Read Full Story

01:37 PM (IST) Mar 02

ರಕ್ತಚಂದ್ರನ ಮಾಯೆ - ನಾಳೆ ರಾಜ್ಯದ ಹಲವು ದೇಗುಲದಲ್ಲಿ ದರ್ಶನ ಸಮಯ ಬದಲಾವಣೆ, ಹೋಳಿ ಹಬ್ಬಕ್ಕೆ ಯಾವುದೇ ತೊಂದರೆ ಇಲ್ಲ

ಮಾ.3ರಂದು ರಾಜ್ಯಾದ್ಯಂತ ಕೇತುಗ್ರಸ್ತ ಚಂದ್ರಗ್ರಹಣ ಹಿನ್ನೆಲೆಯಲ್ಲಿ, ಬೆಂಗಳೂರು, ಮೈಸೂರು, ಉಡುಪಿ ಸೇರಿದಂತೆ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಗ್ರಹಣದ ವೇಳೆ ಗರ್ಭಗುಡಿಗಳನ್ನು ಮುಚ್ಚಲಾಗುತ್ತಿದ್ದು, ನಂತರ ಶುದ್ಧೀಕರಣ ಕಾರ್ಯ ನಡೆಸಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ.

Read Full Story

01:12 PM (IST) Mar 02

4 ಮಹತ್ವದ ಕಾರಣಕ್ಕೆ ಮದುವೆಯಾಗ್ತಿದ್ದಂತೆ ಹಳ್ಳೀಲಿ ಸತ್ಯನಾರಾಯಣ ಪೂಜೆ ಮಾಡಿದ ರಶ್ಮಿಕಾ ಮಂದಣ್ಣ ದಂಪತಿ!

ಉದಯಪುರದಲ್ಲಿ ಖಾಸಗಿಯಾಗಿ ಮದುವೆಯಾದ ನಟ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಆ ಬಳಿಕ ತಿರುಪತಿ ತಿರುಮಲ ದೇವಸ್ಥಾನದ ದರ್ಶನ ಪಡೆದಿದ್ದಾರೆ. ಈಗ ವಿಜಯ್‌ ದೇವರಕೊಂಡ ಅವರ ಹಳ್ಳಿಗೆ ಬಂದು, ಅಲ್ಲಿ ಸತ್ಯನಾರಾಯಣ ಪೂಜೆಯನ್ನು ಮಾಡಿದ್ದಾರೆ.

 

Read Full Story

01:10 PM (IST) Mar 02

ಜಗ್ಗೇಶ್ ಸಿನಿಮಾ ದೃಶ್ಯ ರೀಕ್ರಿಯೇಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ನಂದಗೋಕುಲ ಸೀರಿಯಲ್

'ನಂದಗೋಕುಲ' ಧಾರಾವಾಹಿಯಲ್ಲಿ ಜಗ್ಗೇಶ್ ಅಭಿನಯದ 'ಬೊಂಬಾಟ್ ಹುಡುಗ' ಚಿತ್ರದ ದೃಶ್ಯವನ್ನು ಮರುಸೃಷ್ಟಿಸಲಾಗಿದೆ. ಗಿರಿಜಾ ತನ್ನ ತಾಯಿಯೊಂದಿಗೆ ರಹಸ್ಯವಾಗಿ ಮಾತನಾಡುವ ಈ ದೃಶ್ಯವನ್ನು ಚಿತ್ರೀಕರಿಸುವಾಗ ಸೀರಿಯಲ್ ತಂಡ ಎಡವಟ್ಟು ಮಾಡಿಕೊಂಡಿದೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.

Read Full Story

12:57 PM (IST) Mar 02

ಪೆರೋಲ್ ಮೇಲೆ ಬಂದು ಉದ್ಯಮಿ ಮನೆ ದರೋಡೆ, ಶೂಟಿಂಗ್ ನೆಪ ಹೇಳಿ ಶಿವಾಜಿನಗರದಿಂದ ಪೊಲೀಸ್ ಸಮವಸ್ತ್ರ ಖರೀದಿ, ಕದ್ದ ಬಳಿಕ ದಾವಣಗೆರೆಗೆ ಟ್ರಿಪ್!

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ರಿಯಲ್ ಎಸ್ಟೇಟ್ ಏಜೆಂಟ್ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಈ ಕೃತ್ಯದ ಸಂಚನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಯೊಬ್ಬ ಪೆರೋಲ್ ಮೇಲೆ ಹೊರಬಂದಾಗ ರೂಪಿಸಿದ್ದಾರೆ.

Read Full Story

12:25 PM (IST) Mar 02

24 ದಿನ ಶೂಟಿಂಗ್‌ ಮಾಡಿ 30 ಕೋಟಿ ಗಳಿಸಿದ ಸಿನಿಮಾ ಬಗ್ಗೆ ಹೇಳಿದ ನಿರ್ದೇಶಕ ಎಸ್‌.ನಾರಾಯಣ್

2007ರಲ್ಲಿ ಬಿಡುಗಡೆಯಾದ  ಸಿನಿಮಾ ಪ್ರೀತಿಗೆ ಹೊಸ ಭಾಷ್ಯ ಬರೆದಿತ್ತು. ಎಸ್. ನಾರಾಯಣ್ ನಿರ್ದೇಶನದ ಈ ಚಿತ್ರವು ಕೇವಲ 24 ದಿನಗಳಲ್ಲಿ ಚಿತ್ರೀಕರಣಗೊಂಡಿತ್ತು ಎಂಬ ಸ್ವಾರಸ್ಯಕರ ವಿಷಯವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಈ ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ.

Read Full Story

12:03 PM (IST) Mar 02

ಬೆಂಗಳೂರಿನ ಟ್ರಾಫಿಕ್ ಬಗ್ಗೆ ವಿದೇಶಿ ಮಹಿಳೆ ಲೇವಡಿ, ಕ್ಯಾಬ್‌ ನಲ್ಲೇ ಕೂತು ವಿಡಿಯೋ ಮಾಡಿದ ಯೂಟ್ಯೂಬರ್!

ಜರ್ಮನ್ ಯೂಟ್ಯೂಬರ್ ಲಿಜ್ ಅವರು ಬೆಂಗಳೂರಿನ ಟ್ರಾಫಿಕ್ ಬಗ್ಗೆ ಮಾಡಿದ ವ್ಯಂಗ್ಯಾತ್ಮಕ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಊಟ-ತಿಂಡಿ, ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮುಗಿಸಿಕೊಳ್ಳಿ ಎಂಬ ಆಕೆಯ ಸಲಹೆ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

11:44 AM (IST) Mar 02

ಧಾರ್ಮಿಕ ಶಾಲೆಯ ದಡ್ಡ ವಿದ್ಯಾರ್ಥಿ, ಮುಂಗೋಪಿ ಇಸ್ಲಾಮಿಕ್‌ ದೇಶ ಕಟ್ಟಿದ

ಆಯತೊಲ್ಲಾ ಅಲಿ ಖಮೇನಿ ಸಾವಿನೊಂದಿಗೆ, ಪ್ರಗತಿಪರ ಚಿಂತನೆಯ ದೇಶವನ್ನು ಧಾರ್ಮಿಕ ಮೂಲಭೂತವಾದ ತೆಕ್ಕೆಗೆ ತಳ್ಳಿದ್ದ ವ್ಯಕ್ತಿತ್ವವೊಂದು ಇರಾನ್‌ನ ಇತಿಹಾಸದ ಪುಟ ಸೇರಿದಂತಾಗಿದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ದೇಶದ ಒಳಗೂ, ಹೊರಗೂ ದ್ವೇಷಕಟ್ಟಿಕೊಂಡ ಖಮೇನಿಯ ಜೀವನವೇ ಒಂದು ರೋಚಕ ಅಧ್ಯಾಯ.

Read Full Story

11:27 AM (IST) Mar 02

ಪೆಹಲ್ಗಾಮ್​ನಲ್ಲಿ ನಮ್ಮವರು ಸತ್ತಾಗ ಕಪ್ಪು ಬಟ್ಟೆ ಎಲ್ಲಿತ್ತು? ಪಾಕ್​ ವಿರುದ್ಧ ಘೋಷಣೆ ಬರಲೇ ಇಲ್ಲ - ನಟ ಪ್ರಥಮ್​ ಕಿಡಿ

ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿ ಹ*ತ್ಯೆಯಾಗಿದ್ದು, ಇದಕ್ಕೆ ಕರ್ನಾಟಕದ ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಈ ಬಗ್ಗೆ ನಟ ಪ್ರಥಮ್, ನಮ್ಮ ಯೋಧರು ಸತ್ತಾಗ ಈ ಕಾಳಜಿ ಎಲ್ಲಿರುತ್ತದೆ ಎಂದು ಪ್ರಶ್ನಿಸಿದ್ದಾರೆ.

Read Full Story

10:55 AM (IST) Mar 02

25ರ ಹುಡುಗಿ ಶುಗರ್‌ಬೇಬಿ, 45ರ ಅಂಕಲ್ ಶುಗರ್‌ಡ್ಯಾಡಿ - ಬೆಂಗ್ಳೂರಿನ ವಿಲ್ಲಾ ಪಾರ್ಟಿಯ ರಹಸ್ಯ!

ಬೆಂಗಳೂರಿನ ಅಮೃತಹಳ್ಳಿ ಗ್ಯಾಂಗ್‌ರೇ*ಪ್ ಪ್ರಕರಣದಲ್ಲಿ ಆರೋಪಿ ನಿಖಿಲ್‌ನನ್ನು ಬಂಧಿಸಲಾಗಿದೆ. 'ಶುಗರ್ ಡ್ಯಾಡಿ' ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಈತನಿಂದ ಯುವತಿಯರಿಗೆ ಬ್ಲ್ಯಾಕ್‌ಮೇಲ್ ನಡೆಯುತ್ತಿತ್ತು. ಇದೀಗ ಪೊಲೀಸರು ಪಾರ್ಟಿಯಲ್ಲಿ ಭಾಗವಹಿಸಿದ ಪ್ರಭಾವಿಗಳ ಪಟ್ಟಿಯನ್ನು ತನಿಖೆ ಮಾಡುತ್ತಿದ್ದಾರೆ.

Read Full Story

10:04 AM (IST) Mar 02

ಅದೊಂದು ಟಿಪ್ಸ್‌ ಫಾಲೋ ಮಾಡಿ, ತಳ ಸೀದು ಹೋದ ಕುಕ್ಕರ್‌, ಕಾಫಿ ಪಾತ್ರೆ ಕ್ಷಣಾರ್ಧದಲ್ಲೆ ಕ್ಲೀನ್‌ ಆಗುತ್ತೆ!

ಸಾಮಾನ್ಯವಾಗಿ ಮನೆಯಲ್ಲಿ ಬಳಕೆ ಮಾಡುವ ಕುಕ್ಕರ್‌, ಟೀ-ಕಾಫಿ ಮಾಡಿದ ಪಾತ್ರೆ ಕತ್ತು ಹೋಗಿದ್ಯಾ? ತಳ ಸೀದು ಹೋಗಿದ್ಯಾ? ಜಿಡ್ಡು ಹೋಗ್ತಿಲ್ವಾ? ಇದಕ್ಕೆ ಸಿಂಪಲ್‌ ವಿಧಾನ ಇದೆ. ಹಾಗಾದರೆ ಏನು? ಏನೇನು ಹಾಕಬೇಕು? ಉಜ್ಜದೆ, ತಿಕ್ಕದೆ ಹೇಗೆ ತೊಳೆಯಬಹುದು?

 

Read Full Story

09:38 AM (IST) Mar 02

ತೆಲುಗು ನಿರ್ದೇಶಕನ ಕನ್ನಡ ಸಿನಿಮಾದಲ್ಲಿ ಸುದೀಪ್; ಸದ್ದಿಲ್ಲದೆ ಮತ್ತೊಂದು ಸಿನಿಮಾ ಶುರು?

ನಟ ಸುದೀಪ್ ಅವರು ತಮ್ಮ ಮಾಸ್ ಇಮೇಜ್‌ನಿಂದ ಹೊರಬಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಸಹಾಯಕ ನಿರ್ದೇಶಕರೊಬ್ಬರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದು, 'ಬಿಲ್ಲ ರಂಗ ಬಾಷ' ಚಿತ್ರಕ್ಕೂ ಮುನ್ನವೇ ಈ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.

Read Full Story

09:27 AM (IST) Mar 02

ಪಂಕಾ ಮಸೀದಿ, ಮುಸ್ಲಿಮರಿಗೆ ಸೇರಿದ ಅಂಗಡಿಗಳು ಕಾಣದಂತೆ ಬೃಹತ್ ಪರದೆ ಹಾಕಿ RSS ಶೋಭಾಯಾತ್ರೆ

ಇತ್ತೀಚಿನ ಉದ್ವಿಗ್ನತೆಯ ನಂತರ ಬಾಗಲಕೋಟೆಯಲ್ಲಿ ಆರ್‌ಎಸ್‌ಎಸ್‌ ಬೃಹತ್ ಕೇಸರಿ ಶಕ್ತಿ ಪ್ರದರ್ಶನ ನಡೆಸಿತು. ಪಂಕಾ ಮಸೀದಿ ಮುಂದೆ ಬೃಹತ್ ಪರದೆ ಹಾಕಿ, ಬಿಗಿ ಪೊಲೀಸ್ ಭದ್ರತೆಯೊಂದಿಗೆ ನಡೆದ ಶೋಭಾಯಾತ್ರೆಯು ಯಾವುದೇ ಅಹಿತಕರ ಘಟನೆಯಿಲ್ಲದೆ ಯಶಸ್ವಿಯಾಗಿ ಜರುಗಿತು. 

Read Full Story

09:09 AM (IST) Mar 02

Red Chutney - ಮಸಾಲೆ ದೋಸೆ ಮೇಲೆ ಸವರುವ ಕೆಂಪು ಚಟ್ನಿ ಮಾಡೋದು ಹೇಗೆ? ಇದು ನಾರ್ಮಲ್‌ ಚಟ್ನಿ ಥರ ಅಲ್ಲ!

Red Chutney For Masala Dosa: ಮಸಾಲದೋಸೆ ಮೇಲೆ ಸವರುವ ಚಟ್ನಿ ತುಂಬ ಚೆನ್ನಾಗಿ ಇರುವುದು. ನಾರ್ಮಲ್‌ ಚಟ್ನಿ ಮಾಡೋ ಥರ ಇದನ್ನು ಮಾಡೋದೆಲ್ಲ. ಇಲ್ಲೊಂದು ಸಿಂಪಲ್‌ ಟ್ರಿಕ್‌ ಇದೆ. ಹಾಗಾದರೆ ಏನೇನು ಹಾಕಬೇಕು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

08:40 AM (IST) Mar 02

ಕುಕ್ಕರ್‌ ಅನ್ನ ಮುದ್ದೆ ಮುದ್ದೆ ಆಗ್ತಿದ್ಯಾ? ಮಂಡಕ್ಕಿ ಥರ ಉದುರು ಉದುರು ಆಗಲು ಈ ಪದಾರ್ಥ ಹಾಕ್ಬೇಕು!

Cooker rice recipes indian style: ಕುಕ್ಕರ್‌ನಲ್ಲಿ ಅನ್ನ ಮಾಡೋದು ಸಹಜ. ಇದು ಬಹಳ ಬೇಗ ಕೂಡ ಆಗುವುದು. ಆದರೆ ಕುಕ್ಕರ್‌ ಅನ್ನ ಮುದ್ದೆ ಮುದ್ದೆ ಆಗುತ್ತೆ ಎಂದು ಅನೇಕರು ಬೇಸರ ಮಾಡಿಕೊಳ್ಳೋದುಂಟು. ಇದಕ್ಕೂ ಪರಿಹಾರ ಇದೆ.

 

Read Full Story

08:38 AM (IST) Mar 02

ಕಲರ್ಸ್ ಜನಮೆಚ್ಚಿದ ಮಂಥರೆ ಇದೀಗ ಜೀ ಕನ್ನಡ ವಾಹಿನಿಯ ಲಕ್ಷ್ಮೀನಿವಾಸ ಸೀರಿಯಲ್‌ಗೆ ಖಳನಾಯಕಿ

ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ನೀಲು ಪಾತ್ರಕ್ಕೆ ಬದಲಾವಣೆಯಾಗಿದೆ. ಗರ್ಭಿಣಿ ಮಾನಸ ಮನೋಹರ್ ಪಾತ್ರದಿಂದ ಹೊರನಡೆದಿದ್ದು, ಅವರ ಜಾಗಕ್ಕೆ 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟಿ ಬಂದಿದ್ದಾರೆ.

Read Full Story

08:00 AM (IST) Mar 02

ಪಾದಗಳ ಅತಿಯಾದ ಉರಿಯಿಂದ ಬಳಲುತ್ತಿದ್ದೀರಾ? ಇಲ್ಲಿವೆ ನೋಡಿ ಹಳ್ಳಿ ಶೈಲಿಯ ಸೂಪರ್ ಮನೆಮದ್ದುಗಳು!

ಬೇಸಿಗೆಯಲ್ಲಿ ಹೆಚ್ಚಾಗುವ ಪಾದಗಳ ಉರಿ ಸಮಸ್ಯೆಗೆ ಹಾರ್ಮೋನ್ ಬದಲಾವಣೆ ಮತ್ತು ವಿಟಮಿನ್ ಕೊರತೆ ಕಾರಣವಾಗಿರಬಹುದು. ಈ ಲೇಖನದಲ್ಲಿ ಪುದೀನಾ ಎಣ್ಣೆ, ಅರಿಶಿನ, ವಿನೇಗರ್ ಬಳಕೆ ಹಾಗೂ ಕಾಲುಗಳನ್ನು ಎತ್ತರದಲ್ಲಿಡುವಂತಹ ಐದು ಸರಳ ಮನೆಮದ್ದುಗಳನ್ನು ವಿವರಿಸಲಾಗಿದೆ.
Read Full Story

More Trending News