Karnataka News Live Updates: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈ ಕೋರ್ಟ್ ಗ್ರೀನ್ ಸಿಗ್ನಲ್

ಈದ್ಗಾ ಗ್ರೌಂಡಿನಲ್ಲಿ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್. ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಿಂದ ಆದೇಶ. ಧಾರ್ಮಿಕ ಕಾರ್ಯಕ್ಕೆ ಬರುವ ಅರ್ಜಿಗಳ ಪರಿಗಣಿಸುವ ಅಧಿಕಾರವನ್ನ ಸರ್ಕಾರಕ್ಕೆ ನೀಡಿದ ಹೈಕೋರ್ಟ್. ಸರ್ಕಾರದ ಮನವಿ ಪುರಸ್ಕರಿಸಿದ ಕೋರ್ಟ್. ಆಗಸ್ಟ್ 31 ರಿಂದ ನಿರ್ಧಿಷ್ಟ ಅವಧಿಗೆ ಅವಕಾಶ ನೀಡಲು ಸರ್ಕಾರಕ್ಕೆ ಅನುಮತಿ. ಏಕ ಸದಸ್ಯ ಪೀಠದ ಆದೇಶವನ್ನು ಎತ್ತ ಹಿಡಿದ ಹೈ ಕೋರ್ಟ್ ವಿಭಾಗೀಯ ಪೀಠ

ರಾಜ್ಯದ ಗೃಹ ಸಚಿವರ ವಿರುದ್ದ ಲೋಕಾಯುಕ್ತದಲ್ಲಿ ದೂರು. ದಾಖಲೆ ಸಮೇತ ದೂರು ನೀಡಲು ಮುಂದಾದ ಆಮ್ ಆದ್ಮಿ ಪಾರ್ಟಿ  ರಾಜ್ಯ ವಕ್ತಾರ ಮಥಾಯಿ. ಜಿ ಕೆಟಗರಿ ಸೈಟು ಹಂಚಿಕೆ ನಿಷೇಧಿಸಲಾಗಿತ್ತು. ಬದಲಿ ನಿವೇಶನ ಹಂಚಿಕೆ ಹೆಸರಿನಲ್ಲಿ ಭ್ರಷ್ಟಚಾರ ಮಾಡಲಾಗಿದೆ. ಆದ್ರೆ ವಾಮಮಾರ್ಗದ ಮೂಲಕ ಗೃಹ ಸಚಿವರ ಜೊತೆಗೆ ಇನ್ನಿತರ ಪ್ರಭಾವಿಗಳಿಗೂ ಹಂಚಿಕೆ ಆರೋಪ. ಹಂಚಿಕೆ ಮಾಡಿರುವ ನೀತಿಯನ್ನು ಸರ್ವೋಚ್ಚ ನ್ಯಾಯಾಲಯ ಛೀಮಾರಿ ಹಾಕಿದೆ. ಬಿಡಿಎ ಆಯುಕ್ತರನ್ನು ವರ್ಗಾವಣೆಗೊಳಿಸುವಂತೆ ನ್ಯಾಯಾಲಯ ಮೌಖಿಕ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ಹಲವು ದಾಖಲಾತಿ ಗಳೊಂದಿಗೆ ಲೋಕಾಯಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರಿಗೆ ಸಲ್ಲಿಕೆ.

ಕೊಪ್ಪಳ: ನಗರ ಪ್ರದೇಶದಲ್ಲಿಯೇ ಎರಡು ಚಿರತೆ ಪ್ರತ್ಯಕ್ಷ. ಗಂಗಾವತಿ ನಗರಕ್ಕೆ ಹೊಂದಿಕೊಂಡಿರುವ ಬೆಟ್ಟದಲ್ಲಿ ಎರಡು ಚಿರತೆಗಳು ಪ್ರತ್ಯಕ್ಷ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ. ವಾಯುವಿಹಾರಕ್ಕೆ ತೆರಳಿದ ಸಂಧರ್ಭದಲ್ಲಿ ಜನರ ಕಣ್ಣಿಗೆ ಬಿದ್ದ ಚಿರತೆಗಳು. ಸ್ಥಳೀಯರ ಮೊಬೈಲ್‌ನಲ್ಲಿ ಚಿರತೆಗಳ ದೃಶ್ಯ ಸೆರೆ. ಗಂಗಾವತಿ ನಗರದ ಜಯನಗರದ ಪಕ್ಕದಲ್ಲಿ ಇರೋ ಬೆಟ್ಟ. ಬೆಟ್ಟದ ಕಲ್ಲು ಬಂಡೆ ಮೇಲೆ‌ ಕುಳಿತಿರುವ ಎರಡು ಚಿರತೆಗಳು. ಆತಂಕದಲ್ಲಿ ಗಂಗಾವತಿ ನಗರದ ಜನತೆ.

ಕಾಂಗ್ರೆಸ್‌ಗೆ ಸೇರುವುದಾಗಿ ಅಧಿಕೃತವಾಗಿ ಘೋಷಿಸಿದ್ದ ಮಾಜಿ ಸಚಿವ ಜೆ.ಟಿ.ದೇವೇಗೌಡರು, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬರಲೆಂದೂ ಹೇಳಿಕೆ ನೀಡಿದ್ದರು. ಆದರೆ, ಇದೀಗ ದಳಪತಿಗಳೊಂದಿಗೆ ಮತ್ತೆ ಕೈ ಜೋಡಿಸಿದ್ದು, ಪಕ್ಷದಲ್ಲಿಯೇ ಉಳಿಯುವ ಸೂಚನೆ ನೀಡಿದ್ದಾರೆ.

ಸಚಿವ ಡಾ. ಸುಧಾಕರ್ ಭೇಟಿ ಮಾಡಿದ ಕಾಂಗ್ರೆಸ್ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ. ಬೆಂಗಳೂರಿನ ಸದಾಶಿವನಗರದಲ್ಲಿರುವ ಸುಧಾಕರ್ ಖಾಸಗಿ ನಿವಾಸದಲ್ಲಿ ಇಂದು ಬೆಳಗ್ಗೆ ಭೇಟಿ. ಕುತೂಹಲಕ್ಕೆ ಎಡೆ ಮಾಡಿದ ಸುಧಾಕರ್ ಮತ್ತು ಮುನಿಯಪ್ಪ ಭೇಟಿ. ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಮುನಿಯಪ್ಪ. ಕೋಲಾರದ ರಾಜಕೀಯ ಬೆಳವಣಿಗೆ ಕುರಿತು ಮುನಿಯಪ್ಪ ಅಸಮಾಧಾನಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಕುತೂಹಲ ಮೂಡಿಸಿದ ಮುನಿಯಪ್ಪ ಸುಧಾಕರ್ ಭೇಟಿ. ಮುನಿಯಪ್ಪ ಭೇಟಿ ಮಾಡಿ ತೆರಳಿದ ಬಳಿಕ ಸಿಎಂ ಭೇಟಿಗೆ ತೆರಳಿದ ಸಚಿವ ಸುಧಾಕರ್.

ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ ಮೇಲೆ ಇದೇ ಮೊದಲ ಬಾರಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದು, ವರಿಷ್ಠರನ್ನು ಭೇಟಿಯಾಗುವ ನಿರೀಕ್ಷೆ ಇದೆ. ದೆಹಲಿಗೆ ತೆರಳುವ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ಬಿಎಸ್‌ವೈ, ಇವತ್ತು ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುತ್ತಿದ್ದೇನೆ. ನಂತರ ಅಮಿತ್ ಶಾ ಹಾಗೂ ಜೆಪಿ ನಡ್ದಾ ಅವರನ್ನು ಭೇಟಿಯಾಗುತ್ತಿದ್ದೇನೆ. ರಾಜನಾಥ್ ಸಿಂಗ್ ಸೇರಿದಂತೆ ಕೆಲವು ಕೇಂದ್ರ ಸಚಿವರನ್ನ ಸಹ  ಭೇಟಿಯಾಗುತ್ತೇನೆ. ನಾಳೆ ಸಂಜೆ ವಾಪಸ್ ಬರಬೇಕು ಎಂದುಕೊಂಡಿದ್ದೇನೆ. ಇವತ್ತು ಮತ್ತು ನಾಳೆ ನಾನು ದೆಹಲಿಯಲ್ಲಿ ವಾಸ್ತವ ಹೂಡುತ್ತೇನೆ. ಮುಂದೆ ಏನು ಕೆಲಸ ಮಾಡಬೇಕು ಎಂದು ಅವರ ಸಲಹೆ ಕೇಳುವುದು ನನ್ನ ಕರ್ತವ್ಯ. ದತ್ತಾತ್ರೇಯ ಹೊಸ ಬಾಳೆ ಅವರನ್ನು ಭೇಟಿಯಾಗಲು ಪ್ರಯತ್ನಪಡುತ್ತೇನೆ ಎಂದ ಬಿಎಸ್‌ವೈ.

5:05 PM

ಬಾಗಲಕೋಟೆ : ಮಾರಕಾಸ್ತ್ರಗಳಿಂದ ಹೊಡೆದು ಮಹಿಳೆ ಕೊಲೆ.

ಬಾಗಲಕೋಟೆ : ಮಾರಕಾಸ್ತ್ರಗಳಿಂದ ಹೊಡೆದು ಮಹಿಳೆ ಕೊಲೆ. ಬಾಗಲಕೋಟೆ ಜಿಲ್ಲೆಯ ರಬಕವಿ ಗ್ರಾಮದ ಹೊರವಲಯದಲ್ಲಿ ಘಟನೆ. ಸಂಗೀತಾ ಹರಿಜನ (36) ಎಂಬ ಮಹಿಳೆಯ ಕೊಲೆ. ನಿನ್ನೆ ರಾತ್ರಿ ಬಹಿರ್ದೆಸೆಗೆ ಹೋಗಿದ್ದ ವೇಳೆ ಕೊಲೆ. ತಲೆ ಮತ್ತು ಕುತ್ತಿಗೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ ದುಷ್ಕರ್ಮಿಗಳು. ಅನೈತಿಕ ಸಂಬಂಧ ಹಿನ್ನೆಲೆ ಕೊಲೆ ನಡೆದಿರುವ ಶಂಕೆ. ಶಂಕಿತ ಆರೋಪಿಗಳನ್ನ ವಶಕ್ಕೆ ಪಡೆದಿರುವ ಪೊಲೀಸರು..ಮುಂದುವರೆದ ವಿಚಾರಣೆ. ಸ್ಥಳಕ್ಕೆ ಎಸ್ಪಿ ಜಯಪ್ರಕಾಶ್ ಭೇಟಿ ಪರಿಶೀಲನೆ. ಬೀಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು. 

5:03 PM

ಶಾಲಾ ಮಕ್ಕಳಿಗೆ ಸಾಗಿಸುತ್ತಿದ್ದ ಆಟೋ ಪಲ್ಟಿ ಡ್ರೈವರ್ ಸೇರಿ ನಾಲ್ವರಿಗೆ ಗಾಯ

ಯಾದಗಿರಿ: ಶಾಲಾ ಮಕ್ಕಳಿಗೆ ಸಾಗಿಸುತ್ತಿದ್ದ ಆಟೋ ಪಲ್ಟಿ ಡ್ರೈವರ್ ಸೇರಿ ನಾಲ್ವರಿಗೆ ಗಾಯ. ಯಾದಗಿರಿ ನಗರದ ಹೊರ ಭಾಗದ ವಡಗೇರ ಕ್ರಾಸ್ ಬಳಿ ಘಟನೆ. ಮೂವರು ವಿದ್ಯಾರ್ಥಿಗಳಿಗೆ ಗಾಯ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲು ಚಿಕಿತ್ಸೆ. ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರಸಣಗಿ ಗ್ರಾಮದ ವಿದ್ಯಾರ್ಥಿಗಳು. ಗ್ರಾಮದ ವಡಗೇರ ಕ್ರಾಸ್ ಬಳಿಯ ಅಜೀಮ್ ಪ್ರೇಮ್ ಜೀ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳು. ನಾಯಿಗಳು ಅಡ್ಡ ಬಂದಿರುವ ಕಾರಣಕ್ಕೆ ಸಂಭವಿಸಿರುವ ಘಟನೆ. ಅನೀಲ್, ರುಕ್ಸಾನಾ ಹಾಗೂ ಶೋಭಾ ಗಾಯಗೊಂಡ ವಿದ್ಯಾರ್ಥಿಗಳು. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

4:08 PM

ಹೊಸಕೋಟೆ: ಬಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು

ಹೊಸಕೋಟೆ: ಬಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು. ಚರಂಡಿ ಹಾಗೂ ರಾಜಕಾಲುವೆಗಳು ಇಲ್ಲದ ಕಾರಣ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು. ತಡರಾತ್ರಿ ಸುರಿದ ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಾತ್ರಿಯಿಡೀ ಎಚ್ಚರದಿಂದ ಇದ್ದು ಮನೆಯಿಂದ ನೀರು ಹೊರ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಹೆತ್ತಕ್ಕಿ ಗ್ರಾಮದಲ್ಲಿ ಘಟನೆ. ರಾಜಕಾಲುವೆ ಹಾಗೂ ಚರಂಡಿ ಒತ್ತುವರಿಯಿಂದಾಗಿ ನೀರು ಹರಿಯದೆ ಮನೆಗಳಿಗೆ ನುಗ್ಗಿದ ನೀರು. ಗರ್ಭಿಣಿ ಇರುವ ಮನೆಗೆ ನೀರು ನುಗ್ಗಿ ಭಯಭೀತರಾಗಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಮಳೆಯಿಂದಾಗಿ ಹಾನಿಯಾದ ಸ್ಥಳಗಳಿಗೆ ಪಿಡಿಓ ಸುರೇಶ್, ಅಧ್ಯಕ್ಷ ವೀರಭದ್ರಚಾರಿ ಸದಸ್ಯ ರಾಮೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕೂಡಲೇ ಒತ್ತುವರಿ ಮಾಡಿಕೊಂಡಿರುವ ರಾಜಕಾಲುವೆ ತೆರವುಗೊಳಿಸಲು ಗ್ರಾಮಸ್ಥರ ಆಗ್ರಹ.

3:42 PM

ಗಣೇಶ ಹಬ್ಬ ಆಚರಣೆಗೂ ನೂರೆಂಟು ವಿಘ್ನ

ಹಿಂದುತ್ವ ಹೆಸರೇಳಿಕೊಂಡು ಬಂದ ಬಿಜೆಪಿ ಸರ್ಕಾರದಲ್ಲಿ ಹಿಂದೂ ಹಬ್ಬಕ್ಕೆ ಕಂಟಕ. ಗಣೇಶ ಹಬ್ಬ ಆಚರಣೆಗೂ ನೂರೆಂಟು ವಿಘ್ನ . ಹಿಂದೂಗಳ ಹಬ್ಬಕ್ಕೆ ಪೊಲೀಸರಿಂದಲೇ ಕಿರಿಕ್? ಹಬ್ಬಕ್ಕೆ ಡಿಜೆ ಹಾಕಂಗಿಲ್ಲ, ಬಾಡಿಗೆಗೆ ಕೊಡಂಗಿಲ್ಲ. ಹುಬ್ಬಳ್ಳಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಡಿಜೆ ಬಾಡಿಗೆ ಕೊಡೋರಿಗೆ ನೋಟಿಸ್ ನೀಡಿದ ಪೊಲೀಸರು. ಗಣೇಶ ಹಬ್ಬದ ನಿಮಿತ್ತ ಡಿಜೆ ಹಾಕಬಾರದು ಎಂದು ನೋಟಿಸ್ ನೀಡಿರುವ ಪೊಲೀಸರು. ಒಂದು ವೇಳೆ ಹಾಕಿದರೆ ಡಿಜೆ ಹಾಗೂ ವಾಹನವನ್ನ ಜಪ್ತಿ ಮಾಡುವುದಾಗಿ ಸೂಚನೆ. ಇದನ್ನ ಅತೀ ಗಂಭೀರ ಎಂದು ಪರಿಣಣಿಸಿ ಎಂದು ಸೂಚನೆ.

3:22 PM

ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ

ಕಾರವಾರ, ಉತ್ತರಕನ್ನಡ: ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ. KRIDL ಮತ್ತು ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡುವುದು ಬೇಡವೇ ಬೇಡ ಎಂದು ಪ್ರತಿಭಟನೆ. ಕಾರವಾರದಲ್ಲಿ ಜಿಲ್ಲಾಧಿಕಾರಿ ಕಚೇರಿ‌ ಮುಂಭಾಗ ಸಾಮಾಜಿಕ‌ ಹೋರಾಟಗಾರ ಮಾಧವ ನಾಯ್ಕ್ ನೇತೃತ್ವದಲ್ಲಿ ಪ್ರತಿಭಟನೆ. ಕೆಲಸ ಮುಗಿಸಿದ್ರೂ ಬಿಲ್ ಮಾಡಿಲ್ಲ, ಗುತ್ತಿಗೆದಾರರು ಬದುಕೋದು ಹೇಗೆ? ಎಂದು ಪ್ರಶ್ನಿಸಿ ಪ್ರತಿಭಟನೆ. ಕೆಲಸ ತೆಗೆದುಕೊಳ್ಳಬೇಕಾದ್ರೂ ಕಮಿಷನ್, ನಮ್ಮ ಹಣ ಪಡೀಬೇಕಾದ್ರು ಕಮೀಷನ್ ಎಂದು ಆಕ್ರೋಶ. ಕಮಿಷನ್ ಕಾಟ ಮಿತಿಮೀರಿದೆ ಎಂದು ಸರ್ಕಾರದ ವಿರುದ್ಧ ಗುತ್ತಿಗೆದಾರದಿಂದ ಪ್ರತಿಭಟನೆ. ಪ್ರತೀ ಕೆಲಸಕ್ಕೂ ಕಮಿಷನ್ ಪಡೆದರೆ ಗುತ್ತಿಗೆದಾರರು ಕೆಲಸ ಮಾಡುವುದು ಹೇಗೆ? ಕಮಿಷನ್ ಪಡೆಯುವ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ. ಪ್ರತಿಭಟನೆಯಲ್ಲಿ ನೂರಾರು ಗುತ್ತಿಗೆದಾರರು ಭಾಗಿ.

3:17 PM

ವಿಜಯಪುರ: ಭೂ ಕಂಪನ ಅಧ್ಯಯನಕ್ಕೆ ತಂಡ ಆಗಮನ

ವಿಜಯಪುರಛ ಜಿಲ್ಲೆಯಾದ್ಯಂತ ಸರಣಿ ಭೂಕಂಪನ ಹಿನ್ನಲೆಯಲ್ಲಿ ಭೂಕಂಪನ ಆಧ್ಯಯನಕ್ಕಾಗಿ ಆಗಮಿಸಿದ ತಜ್ಞರ ತಂಡ. ವೈಜ್ಞಾನಿಕ ಆಧಿಕಾರಿ ಜಗದೀಶ್ ಹಾಗೂ ಸಹಾಯಕ ವೈಜ್ಞಾನಿಕ ಆಧಿಕಾರಿ ರಮೇಶ್ ತಿಪ್ಪಾಲ ಆಗಮನ. ರಾಜಧಾನಿ ಬೆಂಗಳೂರಿನಿಂದ ಆಧಿಕಾರಿಗಳನ್ನು ಕಳುಹಿಸಿದ ಸರ್ಕಾರ. ಅಧಿಕಾರಿಗಳ ಜೊತೆಗೆ ಉಕ್ಕಲಿ ಗ್ರಾಮದಲ್ಲಿ ಸಭೆ ನಡೆಸಿದ ಜಿಲ್ಲಾಡಳಿತ
ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಭೂವಿಜ್ಞಾನಿಗಳ ಸಭೆ. ಡಿಸಿ ಡಾ ವಿಜಯಮಹಾಂತೇಶ ದಾನಮ್ಮನವರ ಎಸ್ಪಿ ಆನಂದಕುಮಾರ ಸೇರಿದಂತೆ ಇತರರು ಆಧಿಕಾರಿಗಳಿಗೆ ಸಾಥ್. ಜನರಿಗೆ ಭೂಕಂಪನ ಬಗ್ಗೆ ಹಾಗೂ ಮುಂಜಾಗೃತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದ ಆಧಿಕಾರಿಗಳು. ಗ್ರಾಮದಲ್ಲಿ ಸಿಸ್ಮೋ ಮೀಟರ್ ಅಳವಡಿಸಿದ ತಜ್ಞ ಆಧಿಕಾರಿಗಳು. ಗ್ರಾಮದ ವಿವಿಧ ಭಾಗಗಳಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿದ್ದ ಭೂವಿಜ್ಞಾನಿಗಳು. ಭೂಕಂಪನಕ್ಕೆ ವಿವಿಧ ಕಾರಣಗಳನ್ನು ನೀಡಿದ್ದಾರೆ. ಇಲ್ಲಿ ಲಘು ಭೂಕಂಪನ ಆಗುತ್ತಿದೆ, ಯಾರೂ ಭಯಗೊಳ್ಳಬಾರದೆಂದು ಸಲಹೆ. ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ, ಭೂ ಚಲನೆ ವೇಳೆ ನಡೆಯು ಪ್ರಕ್ರಿಯೆಯಾಗಿದೆ. ಯಾರೂ ಆತಂಕಗೊಳ್ಳದೇ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲು ಸೂಚನೆ. ಈಗಾಗುತ್ತಿರೋ ಭೂಕಂಪನದಿಂದ ಯಾವುದೇ ಅಪಾಯವಿಲ್ಲಾ ಯಾರೂ ಭಯಗೊಳ್ಳಬಾರದು. ಜನರಲ್ಲಿ ಮನವಿ ಮಾಡಿದ ಜಿಲ್ಲಾಧಿಕಾರಿ ಡಾ ವಿಜಯಮಹಾಂತೇಶ ದಾನಮ್ಮನವರ. 

2:52 PM

ಕೆಂಪಯ್ಯ ಯಾರು ಅನ್ನೋದೇ ಗೊತ್ತಿಲ್ಲ: ಉಮೇಶ್ ಕತ್ತಿ

ಗದಗಛ ಕೆಂಪಯ್ಯ ಯಾರು ಅನ್ನೋದೇ ಗೊತ್ತಿಲ್ಲ, ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಅಂತಾರೆ. ಗದಗದಲ್ಲಿ ಅರಣ್ಯ ಸಚಿವ ಉಮೇಶ ಕತ್ತಿ ಹೇಳಿಕೆ. ಬಹಳ ಮಂದಿ ಅಸೋಸಿಯೇಷನ್ ಅಧ್ಯಕ್ಷರು ಇದ್ದಾರೆ.. ಅದ್ರಲ್ಲಿ ಕೆಂಪಣ್ಣ ಒಬ್ಬರು. ಪಣ್ಣ, ಸಿದ್ದರಾಮಯ್ಯ ಅವರನ್ನ ಭೇಟಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. 40 ಪರ್ಸೆಂಟೇಜ್ ಭ್ರಷ್ಟಾಚಾರ ನಡೆದಿದ್ದರೆ, ರಾಜ್ಯದ ಜನ ವಿರೋಧ ಪಕ್ಷದ ನಾಯಕರನ್ನ ಸಿಎಂರನ್ನ ಅಡ್ಡಾಡೋದಕ್ಕೆ ಬಿಡುತ್ತಿರಲಿಲ್ಲ. ಸುಳ್ಳು ಹೇಳಿಕೆ ಕೊಡುವುದನ್ನು ಬಂದ್ ಮಾಡಿ. ಮಾಜಿ ಮುಖ್ಯಮಂತ್ರಿಗಳಾಗಿ ನಿಮ್ಮ ಇತಿಮಿತಿಯಲ್ಲಿ ವರ್ತಿಸಿ ಏನೇನಾಗಿದೆ ಅಂತಾ ಚರ್ಚಿಸಿ. ಆದರೆ 40, 50 ಪರ್ಸೆಂಟ್ ಅಂತಾ ಹೇಳಿಕೆ ನೀಡೋದು ಸರಿಯಲ್ಲ. ಭ್ರಷ್ಟಾಚಾರ ನಡೆದಿದ್ದರೆ ಕೆಂಪಣ್ಣ, ಸಿದ್ದರಾಮಯ್ಯ ಕಂಪ್ಲೆಂಟ್ ಕೊಡ್ಲಿ. ಲೋಕಾಯುಕ್ತ, ಸಿಬಿಐ, ಈಡಿ.. ಎಲ್ಲಿ ಕಂಪ್ಲೆಂಟ್ ಕೊಡ್ತೀರಾ ಕೊಡಿ. ಕುಮಾರ್ ಸ್ವಾಮಿಯಾದಿಯಾಗಿ ಯಾರೇ ಆರೋಪ ಮಾಡಿದ್ರೂ ಕಂಪ್ಲೆಂಟ್ ಕೊಡಬೇಕು. ಮಂತ್ರಿ, ಸರ್ಕಾರ, ನನ್ನ ವಿರುದ್ಧ ಆರೋಪ ಇದ್ರೂ ಕಂಪ್ಲೆಂಟ್ ಕೊಡಿ. ಬಾಯಿಗೆ ಬಂದಿದ್ದು ಹೇಳಿದ್ರೆ ಅದೆಲ್ಲಾ ನಿಜ ಆಗುತ್ತಾ?

1:59 PM

ಮಾಂಸ ತಿನ್ನಬಾರದು, ದೇವಸ್ಥಾನಕ್ಕೆ ಹೊಗಬಾರದು ಅಂತೆ ಎಲ್ಲಿದೆ?: ಉಗ್ರಪ್ಪ

ಬಳ್ಳಾರಿ: ಬಳ್ಳಾರಿಯಲ್ಲಿ ಮಾಜಿ ಸಂಸದ ಎಂದರೆ ಉಗ್ರಪ್ಪ ಹೇಳಿಕೆ, ಕೆಂಪಣ್ಣ ಮಾಡಿದ 40 ಪರ್ಸೆಂಟ್ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡಬೇಕು. ನಿಷ್ಪಕ್ಷಪಾತ ತನಿಖೆಯಾದ್ರೇ ಬಹುತೇಕ‌ ಸಚಿವರು ಜೈಲಿಗೆ ಹೋಗ್ತಾರೆ. ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ರೆ ನಮ್ಮಲ್ಲಿರುವ ದಾಖಲೆ ಕೊಡ್ತೇವೆ..ವ್ಯವಸ್ಥಿತ ಸಂಚು ರಾಜ್ಯದಲ್ಲಿ ನಡೆಯುತ್ತಿದೆ. ಇಂತಹ ವಿಚಾರಗಳ ಬಗ್ಗೆ ಮಾತಾಡಿದ್ರೆ, ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರು ಅದು ಇದು ಅಂತಾ ದಾರಿ ತಪ್ಪಿಸ್ತಾರೆ. ಮಾಂಸ ತಿನ್ನಬಾರದು, ದೇವಸ್ಥಾನಕ್ಕೆ ಹೊಗಬಾರದು ಅಂತಾ ಎಲ್ಲಿ ಇದೆ? ಬಿಜೆಪಿಯವರು ಅಧುನಿಕ ರಾಮ ಭಕ್ತರು. ಭಾರಧ್ವಜರ ಆಶ್ರಮಕ್ಕೆ ರಾಮ ಹೋದಾಗ ರಾಮನಿಗೆ ಭಾರಧ್ವಜರು ರಾಮನಿಗೆ ಮಾಂಸಹಾರ ವ್ಯವಸ್ಥೆ ಮಾಡ್ತಿನಿ ಎಂದಿದ್ದರು. ಸೀತಾ ಮಾತೆ ಗಂಗಾ ನದಿ ದಾಟ ಬೇಕಾದ್ರೆ ತಾಯಿ ನೀನು ಜಗನ್ಮಾತೆ, ರಕ್ಷಣೆ ಕೊಡು, ನಾನು ವಾಪಸ್ ಬಂದ ಮೇಲೆ ನಿನಗೆ ತೃಪ್ತಿಯಾಗೊ ವಷ್ಟು ಮಾಂಸದ‌ ನೈವೇದ್ಯ, ಹೆಂಡದ ನೈವೇದ್ಯ ಕೊಡ್ತೇವೆ ಎಂದಿದ್ದರು. ಬಿಜೆಪಿ ಹಾಗೂ ಆರ್ ಎಸ್ ಎಸ್ ನವರಿಗೆ ತಾಕತ್ತಿದ್ದರೇ, ಧಮ್ ಇದ್ರೇ,,, ಮಾಂಸ ತಿನ್ನೋರು, ಮೊಟ್ಟೆ ತಿನ್ನೋರು, ಮೀನ್ ತಿನ್ನೋರು ಶಾಖೆಗೆ ಬರ್ಬಾದು ಎನ್ನಲಿ. ಮಾಂಸ ತಿನ್ನೋರು, ಮೊಟ್ಟೆ ತಿನ್ನೋರು, ಮೀನ್ ತಿನ್ನೋರ ಓಟ್ ಬೇಕಾಗಿಲ್ಲ ಅಂತಾ ಹೇಳಲಿ.

1:50 PM

ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೇಯೇ ಇಲ್ಲ: ಮುನಿಯಪ್ಪ

ಮುನಿಯಪ್ಪ ಹೇಳಿಕೆ, ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೇಯೇ ಇಲ್ಲ. ಪಕ್ಷದಲ್ಲಿ ಸಕ್ರಿಯವಾಗಿಯೇ ಇದ್ದೇನೆ. ಡಿಕೆಶಿವಕುಮಾರ್ ಪಕ್ಷದ ಅಧ್ಯಕ್ಷರು ಹರಿಪ್ರಸಾದ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಒಟ್ಟಿಗೆ ಬಂದು ಒಂದು ಗಂಟೆ ಕಾಲ ಚರ್ಚೆ ಮಾಡಿದ್ದಾರೆ. ಪಕ್ಷದ ಸಕ್ರಿಯ ಕಾರ್ಯಕ್ರಮಗಳಲ್ಲಿ ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಎಲ್ಲವೂ ಊಹಾಪೋಹಗಳು ಅಷ್ಟೇ. ಕೆಲವು ಬಾರಿ ಹೈಕಮಾಂಡ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಅಸಮಾಧಾನ ಇದ್ದರೂ ಒಪ್ಪಿಕೊಳ್ಳಬೇಕಾಗುತ್ತದೆ. ಹೈಕಮಾಂಡ್ ಗೆ ಎಲ್ಲವೂ ಕೂಡ ಗೊತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತದೆ. ಸುರ್ಜೆವಾಲಾ ಕೂಡ ನನ್ನ ಜೊತೆಗೆ ಮಾತನಾಡಿದ್ದಾರೆ. ಸುಧಾಕರ್ ತಂದೆ ಜೊತೆಗೆ 40 ವರ್ಷದ ಒಡನಾಟ ಇದೆ. ಸುಧಾಕರ್ ಜೊತೆಗೂ ಕೂಡ ಒಡನಾಟವಿದೆ, ಅದು ರಾಜಕೀಯ ವಿಚಾರವಲ್ಲ, ಎಂದಿದ್ದಾರೆ.

1:36 PM

ಮತದಾರರ ತೀರ್ಮಾನದ ಮೇಲೆ ರಾಜಕೀಯ ಬೆಳವಣಿಗೆ: ಎಚ್ಡಿಕೆ

ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಅಂದುಕೊಂಡಿದ್ದಾರೆ. ಆಸೆ ಪಡುವುದು ತಪ್ಪಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ. ವಿಧಿಯಾಟ, ದೇವರ ಆಶೀರ್ವಾದ, ನಿಮ್ಮ ತೀರ್ಮಾನ ಏನು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಮತದಾರರ ತೀರ್ಮಾನದ ಮೇಲೆ ರಾಜಕೀಯ ಬೆಳವಣಿಗೆಗಳು ಆಗುತ್ತವೆ. ಎಲ್ಲ ಸಮುದಾಯಗಳನ್ನೂ ಒಕ್ಕಲಿಗ ಸಮುದಾಯ ಸಮಾನವಾಗಿ ಕಂಡಿದೆ. ಸಮುದಾಯದ ಹಿತದೃಷ್ಟಿಯಿಂದ ನೀವು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಿದೆ, ಎಂದ ಮಾಜಿ ಸಿಎಂ. 

1:14 PM

ಬಳ್ಳಾರಿ ಜಿಲ್ಲೆಯಲ್ಲಿ 35 ಮೆಟ್ರಿಕ್ ಟನ್ ತನಕ ಗಣಿಗಾರಿಕೆ ನಡೆಸಲು ಅನುಮತಿ

ಕರ್ನಾಟಕ ಅದಿರು ಗಣಿಗಾರಿಕೆ ಪ್ರಕರಣ. ಬಳ್ಳಾರಿ ಜಿಲ್ಲೆಯಲ್ಲಿ 35 ಮೆಟ್ರಿಕ್ ಟನ್ ತನಕ ಗಣಿಗಾರಿಕೆ ನಡೆಸಲು ಅನುಮತಿ. ಹಾಲಿ ಇರುವ 28 ಮೆಟ್ರಿಕ್ ಟನ್ ನಿಂದ 35 ಮೆಟ್ರಿಕ್ ಟನ್ ಗಣಿಗಾರಿಕೆಗೆ ಅವಕಾಶ. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠದಿಂದ ಆದೇಶ. ಗಣಿಗಾರಿಕೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಲು ಏರಿದ್ದ  ಎಸ್. ಆರ್. ಹಿರೇಮಠ. ಎಸ್. ಆರ್. ಹಿರೇಮಠ, ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ. ಸಮಾಜ ಪರಿವರ್ತನಾ ಸಮುದಾಯದಿಂದ ಅರ್ಜಿ ಸಲ್ಲಿಸಲಾಗಿತ್ತು. ಅತಿಯಾದ ಗಣಿಗಾರಿಕೆ ನಡೆಸಬಾರದು, ಸಮತೋಲನ ಕಾಯ್ದುಕೊಳ್ಳಲು ಸೂಚನೆ. ಸಿಇಸಿ ಶಿಫಾರಸ್ಸಿನಂತೆ ಅದಿರು ಗಣಿಗಾರಿಕೆ ಮಿತಿಯನ್ನು ಪೂರ್ಣವಾಗಿ ತೆಗೆದು ಹಾಕಲು ನಿರಾಕರಿಸಿದ ಸುಪ್ರೀಂಕೋರ್ಟ್. ಇಂದಿನ ಆದೇಶದಲ್ಲಿ ಗಣಿಗಾರಿಕೆಗೆ ಮಿತಿ ವಿಧಿಸಿದೆ.

12:59 PM

ಮುನಿಸು ಮರೆತು ಒಂದಾದ ದಳಪತಿಗಳು.

ಮುನಿಸು ಮರೆತು ಒಂದಾದ ದಳಪತಿಗಳು. ಪರಸ್ಪರ ಕೈ ಕೈ ಕುಲುಕಿ ಮಾತುಕತೆ. ಒಂದೇ ವೇದಿಕೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಶಾಸಕ ಜಿಟಿ.ದೇವೇಗೌಡ. ಹುಣಸೂರು ಒಕ್ಕಲಿಗರ ಸಂಘದಿಂದ ಕೆಂಪೇಗೌಡರ ಜಯಂತಿ. ವೇದಿಕೆಗೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ. ಹುಣಸೂರಿನ ಮುನೇಶ್ವರ ಕಾವಲು ಮೈದಾನದಲ್ಲಿ ನಡೆಯುತ್ತಿರುವ ಕೆಂಪೇಗೌಡ ಜಯಂತಿ.
ಆದಿಚುಂಚನಗಿರಿ ಪೀಠಾಧ್ಯಕ್ಷರು ನಿರ್ಮಲಾನಂದ ಸ್ವಾಮೀಜಿ ದಿವ್ಯಸಾನಿದ್ಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ಹೆಚ್.ಡಿ.ಕೆ ಪಕ್ಕದಲ್ಲೆ ಕುಳಿತಿರುವ ಶಾಸಕ ಜಿ.ಟಿ.ದೇವೇಗೌಡ. ಶಾಸಕ ಸಾ.ರಾ.ಮಹೇಶ್, ಎಂಎಲ್ಸಿ ಹೆಚ್.ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮದಲ್ಲಿ ಭಾಗಿ.

12:36 PM

ಪ್ರಿಯಾಂಕ್ ಖರ್ಗೆ ಮಂಚದ ಹೇಳಿಕೆ: ಬಿಜೆಪಿ ಮಹಿಳಾ ಮೋರ್ಚಾ

ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಮಾಜಿ ಉಪಮಹಾಪೌರರಾದ ಹರೀಶ್‌ ಸುದ್ದಿಗೋಷ್ಟಿಯಲ್ಲಿ ಭಾಗಿ. ಗೀತಾ ವಿವೇಕಾನಂದ ಹೇಳಿಕೆ. ಮಾಜಿ ಸಚಿವ ಪ್ರಿಯಾಂಕ್ ಖರ್ಗೆಯವರ ಸರ್ಕಾರ ಲಂಚ ಮಂಚ ಹೇಳಿಕೆಯನ್ನು ನಾವು ಖಂಡಿಸಿದ್ದೇವೆ. ರಾಜ್ಯದ 12 ಕಡೆ ಪ್ರತಿಭಟನೆ ನಡೆಸಿ ಕ್ಷಮೆ ಕೇಳಬೇಕು ಎಂದು ಆಗ್ರಹ ಮಾಡಿದ್ವಿ. ಇಲ್ಲಿಯವರೆಗೂ ಕೂಡ ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಿಲ್ಲ. ಕಾಂಗ್ರೆಸ್‌ ಅತಿರಂಜನ್ ಚೌದರಿ ರಾಷ್ಟ್ರಪತಿಗೆ ರಾಷ್ಟ್ರಪತ್ನಿ ಎಂದು ಹೇಳಿ ಅಪಮಾನ ಮಾಡಿದ್ರು. ಪ್ರಿಯಾಂಕ್ ಖರ್ಗೆ ಉದ್ಯೋಗಸ್ಥ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಗೌರವಸ್ಥ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಕ್ಷಮಾಪಣೆ ಕೋರದಿದ್ದರೆ ಚಿತ್ತಾಪುರ ಚಲೋ ನಡೆಸುತ್ತೇವೆ.ಕ್ಷಮೆ ಕೋರಿಲ್ಲದಿದ್ದರೆ ಮಹಿಳಾ ಮೋರ್ಚದವರು ಚಿತ್ತಾಪುರ ಚಲೋ ಮಾಡಿ ಪ್ರಿಯಾಂಕ್ ಖರ್ಗೆ ಮನೆ, ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ, ಎಂದಿದ್ದಾರೆ  ಗೀತಾ ವಿವೇಕಾನಂದ.

12:02 PM

ಲೋಕಾಯಕ್ತರು ಏನು ಸ್ವರ್ಗದಿಂದ ಇಳಿದು ಬರ್ತಾರಾ?: ಎಚ್ಡಿಕೆ

ಲೋಕಾಯಕ್ತರು ಏನು ಸ್ವರ್ಗದಿಂದ ಇಳಿದು ಬರ್ತಾರಾ? ಅವರೂ ಈ ವ್ಯವಸ್ಥೆಯಿಂದಲೇ ಬರುವವರು. ಲೋಕಾಯುಕ್ತಕ್ಕೆ ಅಧಿಕಾರವಿದ್ದಾಗಲೂ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದ ಎಲ್ಲರಿಗೂ ಶಿಕ್ಷೆಯಾಗಿಲ್ಲ. ಲೋಕಾಯುಕ್ತರು ದಾಳಿ ಮಾಡಿ ಕೋಟಿಗಟ್ಟಲೆ ಹಣ, ಕೆಜಿಗಟ್ಟಲೆ ಚಿನ್ನ ವಶಪಡಿಸಿಕೊಂಡಿದ್ದನ್ನು ಮಾಧ್ಯಮಗಳೇ ತೋರಿಸಿವೆ. ಆನಂತರ ಅಧಿಕಾರಿಗಳು ಆರೋಪ‌ ಮುಕ್ತರಾಗಿದ್ದು ಹೇಗೆ? ನಾನು ಇಬ್ಬರು ಖಡಕ್ ಅಧಿಕಾರಿಗಳನ್ನ ಬಳ್ಳಾರಿಗೆ ವರ್ಗಾವಣೆ ಮಾಡಿದ್ದಕ್ಕೆ ಬಿಜೆಪಿ ಪಕ್ಷದ ಪರಿಷತ್ ಸದಸ್ಯ ನನ್ನ ವಿರುದ್ಧವೇ 150 ಕೋಟಿ ಲಂಚದ ಆರೋಪ ಮಾಡಿದ್ರು. ಆಗ ನಾನು ತನಿಖೆಗೆ ಆದೇಶ ಮಾಡಿದ್ಧರಿಂದಲೇ ಕೆಲವರು ಜೈಲಿಗೆ ಹೋಗಿದ್ರು. ವ್ಯವಸ್ಥೆಯೇ ಹಾಳಾಗಿರೋದ್ರಿಂದ ಭ್ರಷ್ಟಾಚಾರ ಈ ಹಂತ ತಲುಪಿದೆ. ಮೈಸೂರಿನಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ.

10:49 AM

ಕೆಂಪಣ್ಣ ಇಂದ್ರ, ಚಂದ್ರ ಅಲ್ಲ: ಸಿ.ಸಿ.ಪಾಟೀಲ್

ಕೆಂಪಣ್ಣ ಇಂದ್ರನೂ ಅಲ್ಲ, ಚಂದ್ರನೂ ಅಲ್ಲ. ಅವನೇನೂ ಸತ್ಯ ಹರಿಶ್ಚಂದ್ರನೂ ಅಲ್ಲ. ಅವನ ಮೇಲೆ ಸಾಕಷ್ಟು ಆರೋಪಗಳಿವೆ. ಸಮಯ ಬಂದಾಗ ಬಿಚ್ಚಿಡ್ತೇ‌ನೆ. ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಈತ ಎಲ್ಲಿ ಕಾಂಟ್ರಾಕ್ಟ್ ಮಾಡಿದ್ದಾನೆ? ಆ ಸಂಘಟನೆಗೆ ಚುನಾವಣೆ ಆಗಿದೆಯಾ? ವಯಸ್ಸಾಗಿದೆ. ಆ ವಯಸ್ಸಿಗೆ ಗೌರವ ಕೊಡ್ತೇ‌ನೆ ಅಷ್ಟೇ. ಇವನು ಕೆಂಪಣ್ಣ ಅಲಿಯಾಸ್ ಸತ್ಯ ಹರಿಶ್ಚಂದ್ರ ಎಂದು ಬೋರ್ಡ್ ಹಾಕಿಕೊಳ್ಳಲಿ. ಸಿದ್ದರಾಮಯ್ಯ ಕಾಂಗ್ರೆಸ್ ಏನು ಹೇಳತ್ತೊ ಅದನ್ನು ಮಾಡುತ್ತಾನೆ ಕೆಂಪಣ್ಣ. ಕೆಂಪಣ್ಣ ಮೇಲೆ ಹಿಗ್ಗಾ ಮುಗ್ಗಾ ಹರಿಹಾಯ್ದ ಸಿಸಿ ಪಾಟೀಲ್. 

10:45 AM

ಶಿವಮೊಗ್ಗ: ಮರಕ್ಕೆ ಡಿಕ್ಕಿ ಹೊಡೆದ ಬಸ್, ಹಲವರಿಗೆ ಗಾಯ

ರಸ್ತೆಯ ಬದಿಯ ಮರಕ್ಕೆ ಡಿಕ್ಕಿ ಹೊಡೆದ  ಬಸ್. ಶಿವಮೊಗ್ಗ ತಾಲೂಕಿನ ಆಯನೂರು ಬಳಿ ಬಸ್ ಅಪಘಾತ. ಹಲವರಿಗೆ ಗಂಭೀರ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಮೇನಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಮಂಜುನಾಥ್ ಬಸ್.  ವಾಹನವೊಂದಕ್ಕೆ ಸೈಡ್ ಹೊಡೆಯಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್. ಅಪಘಾತದಲ್ಲಿ ಚಾನೇನಹಳ್ಳಿಯ ಶಿಲ್ಪ  (33), ಕೀರ್ತಿ (21) ಭೂಮಿಕಾ (19) ಕಾರ್ಯ (21) ಗಾಯಗಳಾಗಿವೆ. ಶಿವಮೊಗ್ಗದ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳಾಗಿರುವ  ಕೀರ್ತಿ, ಭೂಮಿಕಾ ಮತ್ತು ಕಾವ್ಯ. ಕುಂಸಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ.

10:11 AM

ಬೆಳಗಾವಿ: 22ನೇ ದಿನಕ್ಕೆ ಕಾಲಿಟ್ಟ ಚಿರತೆ ಶೋಧ ಕಾರ್ಯಾಚರಣೆ

ಬೆಳಗಾವಿಯ ಗಾಲ್ಫ್ ಮೈದಾನದಲ್ಲೇ ಚಿರತೆ ಕಣ್ಣಾ ಮುಚ್ಚಾಲೆ. ಇಂದು ಮತ್ತೆ ಗಾಲ್ಫ್ ಮೈದಾನದ ಗೇಟ್ ನಂಬರ್ 4ರಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ. ಇಂದು ಮತ್ತೆ ಟ್ರ್ಯಾಪ್ ಕ್ಯಾಮರಾ ಸಂಖ್ಯೆ 3ರಲ್ಲೂ ಚಿರತೆ ಚಿತ್ರ ಸೆರೆ. ಅರಣ್ಯ ಸಿಬ್ಬಂದಿ ಕಣ್ಣಿಗೆ ಬಿದ್ದರೂ ಬಲೆಗೆ ಬೀಳದ ಚಾಣಾಕ್ಷ ಚಿರತೆ. ಮೂರನೇ ದಿನಕ್ಕೆ ಕಾಲಿಟ್ಟ 'ಆಪರೇಷನ್ ಗಜಪಡೆ'. ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಆನೆ ಬಿಡಾರದಿಂದ ಬಂದಿರುವ ಆಲೆ, ಅರ್ಜುನ ಹೆಸರಿನ ಎರಡು ಆನೆಗಳು. 'ಆಪರೇಷನ್ ಗಜಪಡೆ' ವೇಳೆ ಕಣ್ಣಿಗೆ ಪ್ರತ್ಯಕ್ಷವಾಗಿ ಮಿಂಚಂತೆ ಮರೆಯಾಗುತ್ತಿರುವ ಚಿರತೆ. ಆಪರೇಷನ್ ಗಜಪಡೆಗೆ ಹುಕ್ಕೇರಿಯ ಹಂದಿ ಹಿಡಿಯುವ ತಂಡದ ಸದಸ್ಯರು ಸಾಥ್. 5 ಜೆಸಿಬಿಗಳ ಸಹಾಯದಿಂದ ದಟ್ಟವಾಗಿ ಬೆಳೆದ ಗಿಡಗಂಟೆಗಳ ತೆರವು ಮಾಡಿ ಶೋಧ ಕಾರ್ಯ. ಅರವಳಿಕೆ ಮದ್ದು ನೀಡುವ ಗನ್‌ಗಳ ಜೊತೆ 8 ಅರವಳಿಕೆ ತಜ್ಞರು ಭಾಗಿ. ಅರಣ್ಯ, ಪೊಲೀಸ್ ಇಲಾಖೆಯ 200ಕ್ಕೂ ಹೆಚ್ಚು ಸಿಬ್ಬಂದಿ ಚಿರತೆ ಶೋಧಕಾರ್ಯಾಚರಣೆಯಲ್ಲಿ ಭಾಗಿ. ಗಾಲ್ಫ್ ಮೈದಾನದ ಒಂದು ಕಿಮೀ ವ್ಯಾಪ್ತಿಯ 22 ಶಾಲೆಗಳಿಗೆ ರಜೆ ಮುಂದುವರಿಕೆ.

9:52 AM

ಮಂಗಳೂರು-ಕೇರಳ ಮಧ್ಯೆ ರೈಲು ಹಳಿ ತಪ್ಪಿಸಲು ನಡೆದಿದ್ಯಾ ಮಹಾ ಸಂಚು?

ಮಂಗಳೂರು ಗಡಿ ಭಾಗದಲ್ಲಿ ವಿಧ್ವಂಸಕ ‌ಕೃತ್ಯಕ್ಕೆ ಭಾರೀ ಸಂಚಿನ ಶಂಕೆ ವ್ಯಕ್ತವಾಗಿದ್ದು, ಮಂಗಳೂರು ಗಡಿ ಭಾಗದ ಕಾಸರಗೋಡಿನ ಹಲವೆಡೆ ರೈಲು ಹಳಿ ತಪ್ಪಿಸಲು ಯತ್ನಿಸಿರುವ ಘಟನೆ ನಡೆದಿದೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

9:27 AM

ಬೆಂಗಳೂರು ಸವಾರರ ಜೀವ ಹಿಂಡ್ತಿವೆ ನಗರದ ರಸ್ತೆಗುಂಡಿಗಳು

ಮುಖ್ಯ ರಸ್ತೆಯಲ್ಲೇ ರಸ್ತೆಗುಂಡಿಗಳಿಂದ ಸವಾರರಿಗೆ ಕಿರಿಕಿರಿ. ಗುಂಡಿ ತಪ್ಪಿಸಲು ಹೋಗಿ ಸ್ಕಿಡ್ ಆಗಿ ಬಿದ್ದ ಮಹಿಳೆ. ಸ್ವಲ್ಪ ಯಾಮಾರಿದ್ರೂ ಹಿಂದಿನ ಗಾಡಿಯಿಂದ ಅಪಘಾತವಾಗ್ತಿತ್ತು. ಕಸ್ತೂರಿ ನಗರದ ಫ್ಲೈಓವರ್ ಮೇಲೆ ಎರಡು ದಿನಗಳಿಂದೆ ನಡೆದಿರೋ ಘಟನೆ. ಬೈಕ್ ಹಿಂದೆ ಬರ್ತಿದ್ದ ಕಾರು ಚಾಲಕನ ಸಮಯ ಪ್ರಜ್ಞೆಯಿಂದ ಬಚಾವಾದ ಮಹಿಳೆ. ಮಹಿಳೆ ಸ್ಕಿಡ್ ಆಗಿ ಬೀಳ್ತಿರೋದನ್ನ ಕಾರ್ ಕ್ಯಾಮರಾದಲ್ಲಿ ಸೆರೆ. ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ ಬಿಬಿಎಂಪಿ ವಿರುದ್ದ ಅಸಮಧಾನ ವ್ಯಕ್ತಪಡಿಸಿರೋ ವ್ಯಕ್ತಿ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಮಹಿಳೆ‌ ಬಿದ್ದಿರೋ ದೃಶ್ಯ. 

Caught in my dashcam. This happened day before yesterday on kasturi nagar orr flyover. The biker skidded due to a pothole. Luckily the women escaped with minor injuries. Hope BBMP takes some action in filling up the potholes. pic.twitter.com/00Yg1PDoza

— rijesh (@rijesh_kp)

9:24 AM

​​​​​​​ಗೌರಿ ಗಣೇಶ ಹಬ್ಬಕ್ಕೆ ಕೆಎಸ್ಸಾರ್ಟಿಸಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ

ಗೌರಿ ಗಣೇಶ ಹಬ್ಬದ ಹಿನ್ನಲೆಯಲ್ಲಿ ಕೆಎಸ್ಸಾರ್ಟಿಸಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ದಿನಾಂಕ 30 ಹಾಗೂ 31ರಂದು ಗೌರಿ ಗಣೇಶ ಹಬ್ಬದ ಹಿನ್ನಲೆ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ಸಾರಿಗೆ. ಕೆಎಸ್ಸಾರ್ಟಿಸಿಯಿಂದ 500 ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ. ಮೆಜೆಸ್ಟಿಕ್‌ನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕುಂದಾಪುರ, ತಿರುಪತಿ, ಹೈದರಾಬಾದ್ ಸೇರಿದಂತೆ ಹಲವೆಡೆಗೆ ಬಸ್ ಸೌಲಭ್ಯ ಕಲ್ಪಿಸಲಾಗುವುದು. ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ವಿರಾಜಪೇಟೆ, ಕುಶಾಲನಗರಕ್ಕೆ, ಶಾಂತಿನಗರ ನಿಲ್ದಾಣದಿಂದ ತಮಿಳುನಾಡು ಮತ್ತು ಕೇರಳ ಕಡೆಗೆ ಬಸ್ ಕಾರ್ಯಾಚರಣೆ ನಡೆಸಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಆನ್‌ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡಲು ಅವಕಾಶವಿರುತ್ತೆ. 5ಕ್ಕೂ ಹೆಚ್ವು ಪ್ರಯಾಣಿಕರು ಮುಂಗಡ ಟಿಕೆಟ್ ಬುಕಿಂಗ್ ಮಾಡಿದಲ್ಲಿ 5% ರಿಯಾಯಿತಿ. ಹೋಗುವ ಹಾಗೂ ಬರುವ ಟಿಕೆಟ್ ಒಟ್ಟಿಗೆ ಖರೀದಿಸಿದಲ್ಲಿ 10% ರಿಯಾಯಿತಿ ನೀಡಲಾಗುವುದು. ರಾಜ್ಯದ ಹಾಗೂ ಅಂತರಾಜ್ಯದ ವಿವಿಧ ಸ್ಥಳಗಳಿಂದ ದಿನಾಂಕ 31ರಂದು ಆಗಮಿಸುವ ಪ್ರಯಾಣಿಕರಿಗೂ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

9:20 AM

ರೌಡಿಗಳ ಮನೆ ಮೇಲೆ ಉತ್ತರ ವಿಭಾಗ ಪೊಲೀಸರ ದಾಳಿ

ರೌಡಿಗಳ ಮನೆಗಳ ಮೇಲೆ ಪೊಲೀಸರ ದಾಳಿ. ಉತ್ತರ ವಿಭಾಗ ಪೊಲೀಸರಿಂದ ದಾಳಿ. ಕಳೆದ ಎರಡು ದಿನಗಳ ಹಿಂದೆ ಪಶ್ಚಿಮ ವಿಭಾಗದ ಪೊಲೀಸರು ದಾಳಿ ಮಾಡಿದ್ದರು‌. ನಂದಿನಿಲೇಔಟ್, ಯಶಂವತಪುರ, ಆರ್‌ಟಿ ನಗರ, ಜೆ.ಸಿ ನಗರ, ರಾಜ ಗೋಪಾಲ ನಗರ, ಮಹಾಲಕ್ಷ್ಮೀ ಲೇಔಟ್, ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಗಣಪತಿ ಹಬ್ಬ, ಬಿಬಿಎಂಪಿ ಎಲೆಕ್ಷನ್ ಸನಿಹದಲ್ಲಿದೆ. ಇದ್ರಿಂದ  ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಇರಬೇಕು‌. ಕಾನೂನು ಸುವ್ಯವಸ್ಥೆ ಹಾಳಾಗಬಾರದು. ಈ ಬಗ್ಗೆ ರೌಡಿ ಶೀಟರ್ಸ್‌ಗಳಿಗೆ ಎಚ್ಚರಿಕೆ ನೀಡಿರುವ ಪೊಲೀಸರು. ಪೀಣ್ಯ ಪೊಲೀಸರು ತಲೆಮರೆಸಿಕೊಂಡಿದ್ದ ರೌಡಿಗಳ ಮನೆ ಮೇಲೆ ದಾಳಿ. ಒಬ್ಬೊಬ್ಬ ಸಬ್ ಇನ್ಸ್ ಪೆಕ್ಟರ್‌ಗೆ ನಾಲ್ಕು ಮಂದಿ ಸಿಬ್ಬಂದಿಯಂತೆ ಟೀಮ್ ರಚನೆ. ವಾರೆಂಟ್ ಕಾನ್ಸ್ ಟೇಬಲ್ ಜೊತೆ ರೈಡ್. ಎರಡು ಮೂರು ರೋಡ್‌ಗಳನ್ನು ಒಬೊಬ್ಬ ಪಿಎಸ್‌ಐ ಕವರ್ ಮಾಡಲು ಸೂಚನೆ. ಪೀಣ್ಯ ಠಾಣಾ ವ್ಯಾಪ್ತಿಯ 16  ಮಂದಿ ರೌಡಿಗಳ ಮನೆ ಮೇಲೆ ದಾಳಿ. ಪೂರ್ವಾಪರ ಪರಿಶೀಲನೆ ನಡೆಸುತ್ತಿರುವ ಪೊಲೀಸರು. ದಾಳಿ ವೇಳೆ ಕೆಲವರ ಮನೆಯಲ್ಲಿ ಮಾರಾಕಾಸ್ತ್ರ ವಶ.

9:16 AM

ವಿದ್ಯಾನಿಧಿ ಯೋಜನೆ ಆಟೋ ರಿಕ್ಷಾ ಚಾಲಕರ ಮಕ್ಕಳಿಗೂ ವಿಸ್ತರಣೆ

ವಿದ್ಯಾನಿಧಿ ಯೋಜನೆ ಟ್ಯಾಕ್ಸಿ ಚಾಲಕರ ಮಕ್ಕಳ ಜೊತೆಗೆ ಆಟೋ ರಿಕ್ಷಾ ಚಾಲಕರ ಮಕ್ಕಳಿಗೂ ವಿಸ್ತರಣೆ. ಮೆಟ್ರಿಕ್ ನಂತರದ ವಿದ್ಯಾಭ್ಯಾಸಕ್ಕಾಗಿ ಉತ್ತೇಸಲು ರಾಜ್ಯ ಸರ್ಕಾರ ವಿದ್ಯಾ ನಿಧಿ ಯೋಜನೆ ತಂದಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಕ್ಯಾಬ್ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಅನುಷ್ಠಾನ. ಇದ್ರ ಜೊತೆ ಆಟೋ ರಿಕ್ಷಾ ಚಾಲಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ. ವಿದ್ಯಾನಿಧಿ ಯೋಜನೆ ಜೊತೆಗೆ ಆರೋಗ್ಯ ವಿಶೇಷ ಸೌಲಭ್ಯಕ್ಕೂ ಸಹಮತಿ ನೀಡಿ ರಾಜ್ಯ ಸರ್ಕಾರ ಅದೇಶ.

5:05 PM IST:

ಬಾಗಲಕೋಟೆ : ಮಾರಕಾಸ್ತ್ರಗಳಿಂದ ಹೊಡೆದು ಮಹಿಳೆ ಕೊಲೆ. ಬಾಗಲಕೋಟೆ ಜಿಲ್ಲೆಯ ರಬಕವಿ ಗ್ರಾಮದ ಹೊರವಲಯದಲ್ಲಿ ಘಟನೆ. ಸಂಗೀತಾ ಹರಿಜನ (36) ಎಂಬ ಮಹಿಳೆಯ ಕೊಲೆ. ನಿನ್ನೆ ರಾತ್ರಿ ಬಹಿರ್ದೆಸೆಗೆ ಹೋಗಿದ್ದ ವೇಳೆ ಕೊಲೆ. ತಲೆ ಮತ್ತು ಕುತ್ತಿಗೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ ದುಷ್ಕರ್ಮಿಗಳು. ಅನೈತಿಕ ಸಂಬಂಧ ಹಿನ್ನೆಲೆ ಕೊಲೆ ನಡೆದಿರುವ ಶಂಕೆ. ಶಂಕಿತ ಆರೋಪಿಗಳನ್ನ ವಶಕ್ಕೆ ಪಡೆದಿರುವ ಪೊಲೀಸರು..ಮುಂದುವರೆದ ವಿಚಾರಣೆ. ಸ್ಥಳಕ್ಕೆ ಎಸ್ಪಿ ಜಯಪ್ರಕಾಶ್ ಭೇಟಿ ಪರಿಶೀಲನೆ. ಬೀಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು. 

5:03 PM IST:

ಯಾದಗಿರಿ: ಶಾಲಾ ಮಕ್ಕಳಿಗೆ ಸಾಗಿಸುತ್ತಿದ್ದ ಆಟೋ ಪಲ್ಟಿ ಡ್ರೈವರ್ ಸೇರಿ ನಾಲ್ವರಿಗೆ ಗಾಯ. ಯಾದಗಿರಿ ನಗರದ ಹೊರ ಭಾಗದ ವಡಗೇರ ಕ್ರಾಸ್ ಬಳಿ ಘಟನೆ. ಮೂವರು ವಿದ್ಯಾರ್ಥಿಗಳಿಗೆ ಗಾಯ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲು ಚಿಕಿತ್ಸೆ. ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರಸಣಗಿ ಗ್ರಾಮದ ವಿದ್ಯಾರ್ಥಿಗಳು. ಗ್ರಾಮದ ವಡಗೇರ ಕ್ರಾಸ್ ಬಳಿಯ ಅಜೀಮ್ ಪ್ರೇಮ್ ಜೀ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳು. ನಾಯಿಗಳು ಅಡ್ಡ ಬಂದಿರುವ ಕಾರಣಕ್ಕೆ ಸಂಭವಿಸಿರುವ ಘಟನೆ. ಅನೀಲ್, ರುಕ್ಸಾನಾ ಹಾಗೂ ಶೋಭಾ ಗಾಯಗೊಂಡ ವಿದ್ಯಾರ್ಥಿಗಳು. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

4:08 PM IST:

ಹೊಸಕೋಟೆ: ಬಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು. ಚರಂಡಿ ಹಾಗೂ ರಾಜಕಾಲುವೆಗಳು ಇಲ್ಲದ ಕಾರಣ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು. ತಡರಾತ್ರಿ ಸುರಿದ ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಾತ್ರಿಯಿಡೀ ಎಚ್ಚರದಿಂದ ಇದ್ದು ಮನೆಯಿಂದ ನೀರು ಹೊರ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಹೆತ್ತಕ್ಕಿ ಗ್ರಾಮದಲ್ಲಿ ಘಟನೆ. ರಾಜಕಾಲುವೆ ಹಾಗೂ ಚರಂಡಿ ಒತ್ತುವರಿಯಿಂದಾಗಿ ನೀರು ಹರಿಯದೆ ಮನೆಗಳಿಗೆ ನುಗ್ಗಿದ ನೀರು. ಗರ್ಭಿಣಿ ಇರುವ ಮನೆಗೆ ನೀರು ನುಗ್ಗಿ ಭಯಭೀತರಾಗಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಮಳೆಯಿಂದಾಗಿ ಹಾನಿಯಾದ ಸ್ಥಳಗಳಿಗೆ ಪಿಡಿಓ ಸುರೇಶ್, ಅಧ್ಯಕ್ಷ ವೀರಭದ್ರಚಾರಿ ಸದಸ್ಯ ರಾಮೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕೂಡಲೇ ಒತ್ತುವರಿ ಮಾಡಿಕೊಂಡಿರುವ ರಾಜಕಾಲುವೆ ತೆರವುಗೊಳಿಸಲು ಗ್ರಾಮಸ್ಥರ ಆಗ್ರಹ.

3:42 PM IST:

ಹಿಂದುತ್ವ ಹೆಸರೇಳಿಕೊಂಡು ಬಂದ ಬಿಜೆಪಿ ಸರ್ಕಾರದಲ್ಲಿ ಹಿಂದೂ ಹಬ್ಬಕ್ಕೆ ಕಂಟಕ. ಗಣೇಶ ಹಬ್ಬ ಆಚರಣೆಗೂ ನೂರೆಂಟು ವಿಘ್ನ . ಹಿಂದೂಗಳ ಹಬ್ಬಕ್ಕೆ ಪೊಲೀಸರಿಂದಲೇ ಕಿರಿಕ್? ಹಬ್ಬಕ್ಕೆ ಡಿಜೆ ಹಾಕಂಗಿಲ್ಲ, ಬಾಡಿಗೆಗೆ ಕೊಡಂಗಿಲ್ಲ. ಹುಬ್ಬಳ್ಳಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಡಿಜೆ ಬಾಡಿಗೆ ಕೊಡೋರಿಗೆ ನೋಟಿಸ್ ನೀಡಿದ ಪೊಲೀಸರು. ಗಣೇಶ ಹಬ್ಬದ ನಿಮಿತ್ತ ಡಿಜೆ ಹಾಕಬಾರದು ಎಂದು ನೋಟಿಸ್ ನೀಡಿರುವ ಪೊಲೀಸರು. ಒಂದು ವೇಳೆ ಹಾಕಿದರೆ ಡಿಜೆ ಹಾಗೂ ವಾಹನವನ್ನ ಜಪ್ತಿ ಮಾಡುವುದಾಗಿ ಸೂಚನೆ. ಇದನ್ನ ಅತೀ ಗಂಭೀರ ಎಂದು ಪರಿಣಣಿಸಿ ಎಂದು ಸೂಚನೆ.

3:22 PM IST:

ಕಾರವಾರ, ಉತ್ತರಕನ್ನಡ: ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ. KRIDL ಮತ್ತು ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡುವುದು ಬೇಡವೇ ಬೇಡ ಎಂದು ಪ್ರತಿಭಟನೆ. ಕಾರವಾರದಲ್ಲಿ ಜಿಲ್ಲಾಧಿಕಾರಿ ಕಚೇರಿ‌ ಮುಂಭಾಗ ಸಾಮಾಜಿಕ‌ ಹೋರಾಟಗಾರ ಮಾಧವ ನಾಯ್ಕ್ ನೇತೃತ್ವದಲ್ಲಿ ಪ್ರತಿಭಟನೆ. ಕೆಲಸ ಮುಗಿಸಿದ್ರೂ ಬಿಲ್ ಮಾಡಿಲ್ಲ, ಗುತ್ತಿಗೆದಾರರು ಬದುಕೋದು ಹೇಗೆ? ಎಂದು ಪ್ರಶ್ನಿಸಿ ಪ್ರತಿಭಟನೆ. ಕೆಲಸ ತೆಗೆದುಕೊಳ್ಳಬೇಕಾದ್ರೂ ಕಮಿಷನ್, ನಮ್ಮ ಹಣ ಪಡೀಬೇಕಾದ್ರು ಕಮೀಷನ್ ಎಂದು ಆಕ್ರೋಶ. ಕಮಿಷನ್ ಕಾಟ ಮಿತಿಮೀರಿದೆ ಎಂದು ಸರ್ಕಾರದ ವಿರುದ್ಧ ಗುತ್ತಿಗೆದಾರದಿಂದ ಪ್ರತಿಭಟನೆ. ಪ್ರತೀ ಕೆಲಸಕ್ಕೂ ಕಮಿಷನ್ ಪಡೆದರೆ ಗುತ್ತಿಗೆದಾರರು ಕೆಲಸ ಮಾಡುವುದು ಹೇಗೆ? ಕಮಿಷನ್ ಪಡೆಯುವ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ. ಪ್ರತಿಭಟನೆಯಲ್ಲಿ ನೂರಾರು ಗುತ್ತಿಗೆದಾರರು ಭಾಗಿ.

3:17 PM IST:

ವಿಜಯಪುರಛ ಜಿಲ್ಲೆಯಾದ್ಯಂತ ಸರಣಿ ಭೂಕಂಪನ ಹಿನ್ನಲೆಯಲ್ಲಿ ಭೂಕಂಪನ ಆಧ್ಯಯನಕ್ಕಾಗಿ ಆಗಮಿಸಿದ ತಜ್ಞರ ತಂಡ. ವೈಜ್ಞಾನಿಕ ಆಧಿಕಾರಿ ಜಗದೀಶ್ ಹಾಗೂ ಸಹಾಯಕ ವೈಜ್ಞಾನಿಕ ಆಧಿಕಾರಿ ರಮೇಶ್ ತಿಪ್ಪಾಲ ಆಗಮನ. ರಾಜಧಾನಿ ಬೆಂಗಳೂರಿನಿಂದ ಆಧಿಕಾರಿಗಳನ್ನು ಕಳುಹಿಸಿದ ಸರ್ಕಾರ. ಅಧಿಕಾರಿಗಳ ಜೊತೆಗೆ ಉಕ್ಕಲಿ ಗ್ರಾಮದಲ್ಲಿ ಸಭೆ ನಡೆಸಿದ ಜಿಲ್ಲಾಡಳಿತ
ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಭೂವಿಜ್ಞಾನಿಗಳ ಸಭೆ. ಡಿಸಿ ಡಾ ವಿಜಯಮಹಾಂತೇಶ ದಾನಮ್ಮನವರ ಎಸ್ಪಿ ಆನಂದಕುಮಾರ ಸೇರಿದಂತೆ ಇತರರು ಆಧಿಕಾರಿಗಳಿಗೆ ಸಾಥ್. ಜನರಿಗೆ ಭೂಕಂಪನ ಬಗ್ಗೆ ಹಾಗೂ ಮುಂಜಾಗೃತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದ ಆಧಿಕಾರಿಗಳು. ಗ್ರಾಮದಲ್ಲಿ ಸಿಸ್ಮೋ ಮೀಟರ್ ಅಳವಡಿಸಿದ ತಜ್ಞ ಆಧಿಕಾರಿಗಳು. ಗ್ರಾಮದ ವಿವಿಧ ಭಾಗಗಳಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿದ್ದ ಭೂವಿಜ್ಞಾನಿಗಳು. ಭೂಕಂಪನಕ್ಕೆ ವಿವಿಧ ಕಾರಣಗಳನ್ನು ನೀಡಿದ್ದಾರೆ. ಇಲ್ಲಿ ಲಘು ಭೂಕಂಪನ ಆಗುತ್ತಿದೆ, ಯಾರೂ ಭಯಗೊಳ್ಳಬಾರದೆಂದು ಸಲಹೆ. ಭೂಮಿಯಲ್ಲಿ ತೇವಾಂಶ ಹೆಚ್ಚಾದಾಗ, ಭೂ ಚಲನೆ ವೇಳೆ ನಡೆಯು ಪ್ರಕ್ರಿಯೆಯಾಗಿದೆ. ಯಾರೂ ಆತಂಕಗೊಳ್ಳದೇ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲು ಸೂಚನೆ. ಈಗಾಗುತ್ತಿರೋ ಭೂಕಂಪನದಿಂದ ಯಾವುದೇ ಅಪಾಯವಿಲ್ಲಾ ಯಾರೂ ಭಯಗೊಳ್ಳಬಾರದು. ಜನರಲ್ಲಿ ಮನವಿ ಮಾಡಿದ ಜಿಲ್ಲಾಧಿಕಾರಿ ಡಾ ವಿಜಯಮಹಾಂತೇಶ ದಾನಮ್ಮನವರ. 

2:52 PM IST:

ಗದಗಛ ಕೆಂಪಯ್ಯ ಯಾರು ಅನ್ನೋದೇ ಗೊತ್ತಿಲ್ಲ, ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಅಂತಾರೆ. ಗದಗದಲ್ಲಿ ಅರಣ್ಯ ಸಚಿವ ಉಮೇಶ ಕತ್ತಿ ಹೇಳಿಕೆ. ಬಹಳ ಮಂದಿ ಅಸೋಸಿಯೇಷನ್ ಅಧ್ಯಕ್ಷರು ಇದ್ದಾರೆ.. ಅದ್ರಲ್ಲಿ ಕೆಂಪಣ್ಣ ಒಬ್ಬರು. ಪಣ್ಣ, ಸಿದ್ದರಾಮಯ್ಯ ಅವರನ್ನ ಭೇಟಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. 40 ಪರ್ಸೆಂಟೇಜ್ ಭ್ರಷ್ಟಾಚಾರ ನಡೆದಿದ್ದರೆ, ರಾಜ್ಯದ ಜನ ವಿರೋಧ ಪಕ್ಷದ ನಾಯಕರನ್ನ ಸಿಎಂರನ್ನ ಅಡ್ಡಾಡೋದಕ್ಕೆ ಬಿಡುತ್ತಿರಲಿಲ್ಲ. ಸುಳ್ಳು ಹೇಳಿಕೆ ಕೊಡುವುದನ್ನು ಬಂದ್ ಮಾಡಿ. ಮಾಜಿ ಮುಖ್ಯಮಂತ್ರಿಗಳಾಗಿ ನಿಮ್ಮ ಇತಿಮಿತಿಯಲ್ಲಿ ವರ್ತಿಸಿ ಏನೇನಾಗಿದೆ ಅಂತಾ ಚರ್ಚಿಸಿ. ಆದರೆ 40, 50 ಪರ್ಸೆಂಟ್ ಅಂತಾ ಹೇಳಿಕೆ ನೀಡೋದು ಸರಿಯಲ್ಲ. ಭ್ರಷ್ಟಾಚಾರ ನಡೆದಿದ್ದರೆ ಕೆಂಪಣ್ಣ, ಸಿದ್ದರಾಮಯ್ಯ ಕಂಪ್ಲೆಂಟ್ ಕೊಡ್ಲಿ. ಲೋಕಾಯುಕ್ತ, ಸಿಬಿಐ, ಈಡಿ.. ಎಲ್ಲಿ ಕಂಪ್ಲೆಂಟ್ ಕೊಡ್ತೀರಾ ಕೊಡಿ. ಕುಮಾರ್ ಸ್ವಾಮಿಯಾದಿಯಾಗಿ ಯಾರೇ ಆರೋಪ ಮಾಡಿದ್ರೂ ಕಂಪ್ಲೆಂಟ್ ಕೊಡಬೇಕು. ಮಂತ್ರಿ, ಸರ್ಕಾರ, ನನ್ನ ವಿರುದ್ಧ ಆರೋಪ ಇದ್ರೂ ಕಂಪ್ಲೆಂಟ್ ಕೊಡಿ. ಬಾಯಿಗೆ ಬಂದಿದ್ದು ಹೇಳಿದ್ರೆ ಅದೆಲ್ಲಾ ನಿಜ ಆಗುತ್ತಾ?

1:59 PM IST:

ಬಳ್ಳಾರಿ: ಬಳ್ಳಾರಿಯಲ್ಲಿ ಮಾಜಿ ಸಂಸದ ಎಂದರೆ ಉಗ್ರಪ್ಪ ಹೇಳಿಕೆ, ಕೆಂಪಣ್ಣ ಮಾಡಿದ 40 ಪರ್ಸೆಂಟ್ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡಬೇಕು. ನಿಷ್ಪಕ್ಷಪಾತ ತನಿಖೆಯಾದ್ರೇ ಬಹುತೇಕ‌ ಸಚಿವರು ಜೈಲಿಗೆ ಹೋಗ್ತಾರೆ. ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ರೆ ನಮ್ಮಲ್ಲಿರುವ ದಾಖಲೆ ಕೊಡ್ತೇವೆ..ವ್ಯವಸ್ಥಿತ ಸಂಚು ರಾಜ್ಯದಲ್ಲಿ ನಡೆಯುತ್ತಿದೆ. ಇಂತಹ ವಿಚಾರಗಳ ಬಗ್ಗೆ ಮಾತಾಡಿದ್ರೆ, ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರು ಅದು ಇದು ಅಂತಾ ದಾರಿ ತಪ್ಪಿಸ್ತಾರೆ. ಮಾಂಸ ತಿನ್ನಬಾರದು, ದೇವಸ್ಥಾನಕ್ಕೆ ಹೊಗಬಾರದು ಅಂತಾ ಎಲ್ಲಿ ಇದೆ? ಬಿಜೆಪಿಯವರು ಅಧುನಿಕ ರಾಮ ಭಕ್ತರು. ಭಾರಧ್ವಜರ ಆಶ್ರಮಕ್ಕೆ ರಾಮ ಹೋದಾಗ ರಾಮನಿಗೆ ಭಾರಧ್ವಜರು ರಾಮನಿಗೆ ಮಾಂಸಹಾರ ವ್ಯವಸ್ಥೆ ಮಾಡ್ತಿನಿ ಎಂದಿದ್ದರು. ಸೀತಾ ಮಾತೆ ಗಂಗಾ ನದಿ ದಾಟ ಬೇಕಾದ್ರೆ ತಾಯಿ ನೀನು ಜಗನ್ಮಾತೆ, ರಕ್ಷಣೆ ಕೊಡು, ನಾನು ವಾಪಸ್ ಬಂದ ಮೇಲೆ ನಿನಗೆ ತೃಪ್ತಿಯಾಗೊ ವಷ್ಟು ಮಾಂಸದ‌ ನೈವೇದ್ಯ, ಹೆಂಡದ ನೈವೇದ್ಯ ಕೊಡ್ತೇವೆ ಎಂದಿದ್ದರು. ಬಿಜೆಪಿ ಹಾಗೂ ಆರ್ ಎಸ್ ಎಸ್ ನವರಿಗೆ ತಾಕತ್ತಿದ್ದರೇ, ಧಮ್ ಇದ್ರೇ,,, ಮಾಂಸ ತಿನ್ನೋರು, ಮೊಟ್ಟೆ ತಿನ್ನೋರು, ಮೀನ್ ತಿನ್ನೋರು ಶಾಖೆಗೆ ಬರ್ಬಾದು ಎನ್ನಲಿ. ಮಾಂಸ ತಿನ್ನೋರು, ಮೊಟ್ಟೆ ತಿನ್ನೋರು, ಮೀನ್ ತಿನ್ನೋರ ಓಟ್ ಬೇಕಾಗಿಲ್ಲ ಅಂತಾ ಹೇಳಲಿ.

1:50 PM IST:

ಮುನಿಯಪ್ಪ ಹೇಳಿಕೆ, ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೇಯೇ ಇಲ್ಲ. ಪಕ್ಷದಲ್ಲಿ ಸಕ್ರಿಯವಾಗಿಯೇ ಇದ್ದೇನೆ. ಡಿಕೆಶಿವಕುಮಾರ್ ಪಕ್ಷದ ಅಧ್ಯಕ್ಷರು ಹರಿಪ್ರಸಾದ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಒಟ್ಟಿಗೆ ಬಂದು ಒಂದು ಗಂಟೆ ಕಾಲ ಚರ್ಚೆ ಮಾಡಿದ್ದಾರೆ. ಪಕ್ಷದ ಸಕ್ರಿಯ ಕಾರ್ಯಕ್ರಮಗಳಲ್ಲಿ ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಎಲ್ಲವೂ ಊಹಾಪೋಹಗಳು ಅಷ್ಟೇ. ಕೆಲವು ಬಾರಿ ಹೈಕಮಾಂಡ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಅಸಮಾಧಾನ ಇದ್ದರೂ ಒಪ್ಪಿಕೊಳ್ಳಬೇಕಾಗುತ್ತದೆ. ಹೈಕಮಾಂಡ್ ಗೆ ಎಲ್ಲವೂ ಕೂಡ ಗೊತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತದೆ. ಸುರ್ಜೆವಾಲಾ ಕೂಡ ನನ್ನ ಜೊತೆಗೆ ಮಾತನಾಡಿದ್ದಾರೆ. ಸುಧಾಕರ್ ತಂದೆ ಜೊತೆಗೆ 40 ವರ್ಷದ ಒಡನಾಟ ಇದೆ. ಸುಧಾಕರ್ ಜೊತೆಗೂ ಕೂಡ ಒಡನಾಟವಿದೆ, ಅದು ರಾಜಕೀಯ ವಿಚಾರವಲ್ಲ, ಎಂದಿದ್ದಾರೆ.

1:36 PM IST:

ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಅಂದುಕೊಂಡಿದ್ದಾರೆ. ಆಸೆ ಪಡುವುದು ತಪ್ಪಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ. ವಿಧಿಯಾಟ, ದೇವರ ಆಶೀರ್ವಾದ, ನಿಮ್ಮ ತೀರ್ಮಾನ ಏನು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಮತದಾರರ ತೀರ್ಮಾನದ ಮೇಲೆ ರಾಜಕೀಯ ಬೆಳವಣಿಗೆಗಳು ಆಗುತ್ತವೆ. ಎಲ್ಲ ಸಮುದಾಯಗಳನ್ನೂ ಒಕ್ಕಲಿಗ ಸಮುದಾಯ ಸಮಾನವಾಗಿ ಕಂಡಿದೆ. ಸಮುದಾಯದ ಹಿತದೃಷ್ಟಿಯಿಂದ ನೀವು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಿದೆ, ಎಂದ ಮಾಜಿ ಸಿಎಂ. 

1:14 PM IST:

ಕರ್ನಾಟಕ ಅದಿರು ಗಣಿಗಾರಿಕೆ ಪ್ರಕರಣ. ಬಳ್ಳಾರಿ ಜಿಲ್ಲೆಯಲ್ಲಿ 35 ಮೆಟ್ರಿಕ್ ಟನ್ ತನಕ ಗಣಿಗಾರಿಕೆ ನಡೆಸಲು ಅನುಮತಿ. ಹಾಲಿ ಇರುವ 28 ಮೆಟ್ರಿಕ್ ಟನ್ ನಿಂದ 35 ಮೆಟ್ರಿಕ್ ಟನ್ ಗಣಿಗಾರಿಕೆಗೆ ಅವಕಾಶ. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠದಿಂದ ಆದೇಶ. ಗಣಿಗಾರಿಕೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಲು ಏರಿದ್ದ  ಎಸ್. ಆರ್. ಹಿರೇಮಠ. ಎಸ್. ಆರ್. ಹಿರೇಮಠ, ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ. ಸಮಾಜ ಪರಿವರ್ತನಾ ಸಮುದಾಯದಿಂದ ಅರ್ಜಿ ಸಲ್ಲಿಸಲಾಗಿತ್ತು. ಅತಿಯಾದ ಗಣಿಗಾರಿಕೆ ನಡೆಸಬಾರದು, ಸಮತೋಲನ ಕಾಯ್ದುಕೊಳ್ಳಲು ಸೂಚನೆ. ಸಿಇಸಿ ಶಿಫಾರಸ್ಸಿನಂತೆ ಅದಿರು ಗಣಿಗಾರಿಕೆ ಮಿತಿಯನ್ನು ಪೂರ್ಣವಾಗಿ ತೆಗೆದು ಹಾಕಲು ನಿರಾಕರಿಸಿದ ಸುಪ್ರೀಂಕೋರ್ಟ್. ಇಂದಿನ ಆದೇಶದಲ್ಲಿ ಗಣಿಗಾರಿಕೆಗೆ ಮಿತಿ ವಿಧಿಸಿದೆ.

12:59 PM IST:

ಮುನಿಸು ಮರೆತು ಒಂದಾದ ದಳಪತಿಗಳು. ಪರಸ್ಪರ ಕೈ ಕೈ ಕುಲುಕಿ ಮಾತುಕತೆ. ಒಂದೇ ವೇದಿಕೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಶಾಸಕ ಜಿಟಿ.ದೇವೇಗೌಡ. ಹುಣಸೂರು ಒಕ್ಕಲಿಗರ ಸಂಘದಿಂದ ಕೆಂಪೇಗೌಡರ ಜಯಂತಿ. ವೇದಿಕೆಗೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ. ಹುಣಸೂರಿನ ಮುನೇಶ್ವರ ಕಾವಲು ಮೈದಾನದಲ್ಲಿ ನಡೆಯುತ್ತಿರುವ ಕೆಂಪೇಗೌಡ ಜಯಂತಿ.
ಆದಿಚುಂಚನಗಿರಿ ಪೀಠಾಧ್ಯಕ್ಷರು ನಿರ್ಮಲಾನಂದ ಸ್ವಾಮೀಜಿ ದಿವ್ಯಸಾನಿದ್ಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ಹೆಚ್.ಡಿ.ಕೆ ಪಕ್ಕದಲ್ಲೆ ಕುಳಿತಿರುವ ಶಾಸಕ ಜಿ.ಟಿ.ದೇವೇಗೌಡ. ಶಾಸಕ ಸಾ.ರಾ.ಮಹೇಶ್, ಎಂಎಲ್ಸಿ ಹೆಚ್.ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮದಲ್ಲಿ ಭಾಗಿ.

12:36 PM IST:

ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಮಾಜಿ ಉಪಮಹಾಪೌರರಾದ ಹರೀಶ್‌ ಸುದ್ದಿಗೋಷ್ಟಿಯಲ್ಲಿ ಭಾಗಿ. ಗೀತಾ ವಿವೇಕಾನಂದ ಹೇಳಿಕೆ. ಮಾಜಿ ಸಚಿವ ಪ್ರಿಯಾಂಕ್ ಖರ್ಗೆಯವರ ಸರ್ಕಾರ ಲಂಚ ಮಂಚ ಹೇಳಿಕೆಯನ್ನು ನಾವು ಖಂಡಿಸಿದ್ದೇವೆ. ರಾಜ್ಯದ 12 ಕಡೆ ಪ್ರತಿಭಟನೆ ನಡೆಸಿ ಕ್ಷಮೆ ಕೇಳಬೇಕು ಎಂದು ಆಗ್ರಹ ಮಾಡಿದ್ವಿ. ಇಲ್ಲಿಯವರೆಗೂ ಕೂಡ ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಿಲ್ಲ. ಕಾಂಗ್ರೆಸ್‌ ಅತಿರಂಜನ್ ಚೌದರಿ ರಾಷ್ಟ್ರಪತಿಗೆ ರಾಷ್ಟ್ರಪತ್ನಿ ಎಂದು ಹೇಳಿ ಅಪಮಾನ ಮಾಡಿದ್ರು. ಪ್ರಿಯಾಂಕ್ ಖರ್ಗೆ ಉದ್ಯೋಗಸ್ಥ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಗೌರವಸ್ಥ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಕ್ಷಮಾಪಣೆ ಕೋರದಿದ್ದರೆ ಚಿತ್ತಾಪುರ ಚಲೋ ನಡೆಸುತ್ತೇವೆ.ಕ್ಷಮೆ ಕೋರಿಲ್ಲದಿದ್ದರೆ ಮಹಿಳಾ ಮೋರ್ಚದವರು ಚಿತ್ತಾಪುರ ಚಲೋ ಮಾಡಿ ಪ್ರಿಯಾಂಕ್ ಖರ್ಗೆ ಮನೆ, ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ, ಎಂದಿದ್ದಾರೆ  ಗೀತಾ ವಿವೇಕಾನಂದ.

12:02 PM IST:

ಲೋಕಾಯಕ್ತರು ಏನು ಸ್ವರ್ಗದಿಂದ ಇಳಿದು ಬರ್ತಾರಾ? ಅವರೂ ಈ ವ್ಯವಸ್ಥೆಯಿಂದಲೇ ಬರುವವರು. ಲೋಕಾಯುಕ್ತಕ್ಕೆ ಅಧಿಕಾರವಿದ್ದಾಗಲೂ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದ ಎಲ್ಲರಿಗೂ ಶಿಕ್ಷೆಯಾಗಿಲ್ಲ. ಲೋಕಾಯುಕ್ತರು ದಾಳಿ ಮಾಡಿ ಕೋಟಿಗಟ್ಟಲೆ ಹಣ, ಕೆಜಿಗಟ್ಟಲೆ ಚಿನ್ನ ವಶಪಡಿಸಿಕೊಂಡಿದ್ದನ್ನು ಮಾಧ್ಯಮಗಳೇ ತೋರಿಸಿವೆ. ಆನಂತರ ಅಧಿಕಾರಿಗಳು ಆರೋಪ‌ ಮುಕ್ತರಾಗಿದ್ದು ಹೇಗೆ? ನಾನು ಇಬ್ಬರು ಖಡಕ್ ಅಧಿಕಾರಿಗಳನ್ನ ಬಳ್ಳಾರಿಗೆ ವರ್ಗಾವಣೆ ಮಾಡಿದ್ದಕ್ಕೆ ಬಿಜೆಪಿ ಪಕ್ಷದ ಪರಿಷತ್ ಸದಸ್ಯ ನನ್ನ ವಿರುದ್ಧವೇ 150 ಕೋಟಿ ಲಂಚದ ಆರೋಪ ಮಾಡಿದ್ರು. ಆಗ ನಾನು ತನಿಖೆಗೆ ಆದೇಶ ಮಾಡಿದ್ಧರಿಂದಲೇ ಕೆಲವರು ಜೈಲಿಗೆ ಹೋಗಿದ್ರು. ವ್ಯವಸ್ಥೆಯೇ ಹಾಳಾಗಿರೋದ್ರಿಂದ ಭ್ರಷ್ಟಾಚಾರ ಈ ಹಂತ ತಲುಪಿದೆ. ಮೈಸೂರಿನಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ.

10:49 AM IST:

ಕೆಂಪಣ್ಣ ಇಂದ್ರನೂ ಅಲ್ಲ, ಚಂದ್ರನೂ ಅಲ್ಲ. ಅವನೇನೂ ಸತ್ಯ ಹರಿಶ್ಚಂದ್ರನೂ ಅಲ್ಲ. ಅವನ ಮೇಲೆ ಸಾಕಷ್ಟು ಆರೋಪಗಳಿವೆ. ಸಮಯ ಬಂದಾಗ ಬಿಚ್ಚಿಡ್ತೇ‌ನೆ. ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಈತ ಎಲ್ಲಿ ಕಾಂಟ್ರಾಕ್ಟ್ ಮಾಡಿದ್ದಾನೆ? ಆ ಸಂಘಟನೆಗೆ ಚುನಾವಣೆ ಆಗಿದೆಯಾ? ವಯಸ್ಸಾಗಿದೆ. ಆ ವಯಸ್ಸಿಗೆ ಗೌರವ ಕೊಡ್ತೇ‌ನೆ ಅಷ್ಟೇ. ಇವನು ಕೆಂಪಣ್ಣ ಅಲಿಯಾಸ್ ಸತ್ಯ ಹರಿಶ್ಚಂದ್ರ ಎಂದು ಬೋರ್ಡ್ ಹಾಕಿಕೊಳ್ಳಲಿ. ಸಿದ್ದರಾಮಯ್ಯ ಕಾಂಗ್ರೆಸ್ ಏನು ಹೇಳತ್ತೊ ಅದನ್ನು ಮಾಡುತ್ತಾನೆ ಕೆಂಪಣ್ಣ. ಕೆಂಪಣ್ಣ ಮೇಲೆ ಹಿಗ್ಗಾ ಮುಗ್ಗಾ ಹರಿಹಾಯ್ದ ಸಿಸಿ ಪಾಟೀಲ್. 

10:45 AM IST:

ರಸ್ತೆಯ ಬದಿಯ ಮರಕ್ಕೆ ಡಿಕ್ಕಿ ಹೊಡೆದ  ಬಸ್. ಶಿವಮೊಗ್ಗ ತಾಲೂಕಿನ ಆಯನೂರು ಬಳಿ ಬಸ್ ಅಪಘಾತ. ಹಲವರಿಗೆ ಗಂಭೀರ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಮೇನಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಮಂಜುನಾಥ್ ಬಸ್.  ವಾಹನವೊಂದಕ್ಕೆ ಸೈಡ್ ಹೊಡೆಯಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಬಸ್. ಅಪಘಾತದಲ್ಲಿ ಚಾನೇನಹಳ್ಳಿಯ ಶಿಲ್ಪ  (33), ಕೀರ್ತಿ (21) ಭೂಮಿಕಾ (19) ಕಾರ್ಯ (21) ಗಾಯಗಳಾಗಿವೆ. ಶಿವಮೊಗ್ಗದ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳಾಗಿರುವ  ಕೀರ್ತಿ, ಭೂಮಿಕಾ ಮತ್ತು ಕಾವ್ಯ. ಕುಂಸಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ.

10:11 AM IST:

ಬೆಳಗಾವಿಯ ಗಾಲ್ಫ್ ಮೈದಾನದಲ್ಲೇ ಚಿರತೆ ಕಣ್ಣಾ ಮುಚ್ಚಾಲೆ. ಇಂದು ಮತ್ತೆ ಗಾಲ್ಫ್ ಮೈದಾನದ ಗೇಟ್ ನಂಬರ್ 4ರಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ. ಇಂದು ಮತ್ತೆ ಟ್ರ್ಯಾಪ್ ಕ್ಯಾಮರಾ ಸಂಖ್ಯೆ 3ರಲ್ಲೂ ಚಿರತೆ ಚಿತ್ರ ಸೆರೆ. ಅರಣ್ಯ ಸಿಬ್ಬಂದಿ ಕಣ್ಣಿಗೆ ಬಿದ್ದರೂ ಬಲೆಗೆ ಬೀಳದ ಚಾಣಾಕ್ಷ ಚಿರತೆ. ಮೂರನೇ ದಿನಕ್ಕೆ ಕಾಲಿಟ್ಟ 'ಆಪರೇಷನ್ ಗಜಪಡೆ'. ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಆನೆ ಬಿಡಾರದಿಂದ ಬಂದಿರುವ ಆಲೆ, ಅರ್ಜುನ ಹೆಸರಿನ ಎರಡು ಆನೆಗಳು. 'ಆಪರೇಷನ್ ಗಜಪಡೆ' ವೇಳೆ ಕಣ್ಣಿಗೆ ಪ್ರತ್ಯಕ್ಷವಾಗಿ ಮಿಂಚಂತೆ ಮರೆಯಾಗುತ್ತಿರುವ ಚಿರತೆ. ಆಪರೇಷನ್ ಗಜಪಡೆಗೆ ಹುಕ್ಕೇರಿಯ ಹಂದಿ ಹಿಡಿಯುವ ತಂಡದ ಸದಸ್ಯರು ಸಾಥ್. 5 ಜೆಸಿಬಿಗಳ ಸಹಾಯದಿಂದ ದಟ್ಟವಾಗಿ ಬೆಳೆದ ಗಿಡಗಂಟೆಗಳ ತೆರವು ಮಾಡಿ ಶೋಧ ಕಾರ್ಯ. ಅರವಳಿಕೆ ಮದ್ದು ನೀಡುವ ಗನ್‌ಗಳ ಜೊತೆ 8 ಅರವಳಿಕೆ ತಜ್ಞರು ಭಾಗಿ. ಅರಣ್ಯ, ಪೊಲೀಸ್ ಇಲಾಖೆಯ 200ಕ್ಕೂ ಹೆಚ್ಚು ಸಿಬ್ಬಂದಿ ಚಿರತೆ ಶೋಧಕಾರ್ಯಾಚರಣೆಯಲ್ಲಿ ಭಾಗಿ. ಗಾಲ್ಫ್ ಮೈದಾನದ ಒಂದು ಕಿಮೀ ವ್ಯಾಪ್ತಿಯ 22 ಶಾಲೆಗಳಿಗೆ ರಜೆ ಮುಂದುವರಿಕೆ.

9:52 AM IST:

ಮಂಗಳೂರು ಗಡಿ ಭಾಗದಲ್ಲಿ ವಿಧ್ವಂಸಕ ‌ಕೃತ್ಯಕ್ಕೆ ಭಾರೀ ಸಂಚಿನ ಶಂಕೆ ವ್ಯಕ್ತವಾಗಿದ್ದು, ಮಂಗಳೂರು ಗಡಿ ಭಾಗದ ಕಾಸರಗೋಡಿನ ಹಲವೆಡೆ ರೈಲು ಹಳಿ ತಪ್ಪಿಸಲು ಯತ್ನಿಸಿರುವ ಘಟನೆ ನಡೆದಿದೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

9:27 AM IST:

ಮುಖ್ಯ ರಸ್ತೆಯಲ್ಲೇ ರಸ್ತೆಗುಂಡಿಗಳಿಂದ ಸವಾರರಿಗೆ ಕಿರಿಕಿರಿ. ಗುಂಡಿ ತಪ್ಪಿಸಲು ಹೋಗಿ ಸ್ಕಿಡ್ ಆಗಿ ಬಿದ್ದ ಮಹಿಳೆ. ಸ್ವಲ್ಪ ಯಾಮಾರಿದ್ರೂ ಹಿಂದಿನ ಗಾಡಿಯಿಂದ ಅಪಘಾತವಾಗ್ತಿತ್ತು. ಕಸ್ತೂರಿ ನಗರದ ಫ್ಲೈಓವರ್ ಮೇಲೆ ಎರಡು ದಿನಗಳಿಂದೆ ನಡೆದಿರೋ ಘಟನೆ. ಬೈಕ್ ಹಿಂದೆ ಬರ್ತಿದ್ದ ಕಾರು ಚಾಲಕನ ಸಮಯ ಪ್ರಜ್ಞೆಯಿಂದ ಬಚಾವಾದ ಮಹಿಳೆ. ಮಹಿಳೆ ಸ್ಕಿಡ್ ಆಗಿ ಬೀಳ್ತಿರೋದನ್ನ ಕಾರ್ ಕ್ಯಾಮರಾದಲ್ಲಿ ಸೆರೆ. ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ ಬಿಬಿಎಂಪಿ ವಿರುದ್ದ ಅಸಮಧಾನ ವ್ಯಕ್ತಪಡಿಸಿರೋ ವ್ಯಕ್ತಿ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಮಹಿಳೆ‌ ಬಿದ್ದಿರೋ ದೃಶ್ಯ. 

Caught in my dashcam. This happened day before yesterday on kasturi nagar orr flyover. The biker skidded due to a pothole. Luckily the women escaped with minor injuries. Hope BBMP takes some action in filling up the potholes. pic.twitter.com/00Yg1PDoza

— rijesh (@rijesh_kp)

9:24 AM IST:

ಗೌರಿ ಗಣೇಶ ಹಬ್ಬದ ಹಿನ್ನಲೆಯಲ್ಲಿ ಕೆಎಸ್ಸಾರ್ಟಿಸಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ದಿನಾಂಕ 30 ಹಾಗೂ 31ರಂದು ಗೌರಿ ಗಣೇಶ ಹಬ್ಬದ ಹಿನ್ನಲೆ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ಸಾರಿಗೆ. ಕೆಎಸ್ಸಾರ್ಟಿಸಿಯಿಂದ 500 ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ. ಮೆಜೆಸ್ಟಿಕ್‌ನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕುಂದಾಪುರ, ತಿರುಪತಿ, ಹೈದರಾಬಾದ್ ಸೇರಿದಂತೆ ಹಲವೆಡೆಗೆ ಬಸ್ ಸೌಲಭ್ಯ ಕಲ್ಪಿಸಲಾಗುವುದು. ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ವಿರಾಜಪೇಟೆ, ಕುಶಾಲನಗರಕ್ಕೆ, ಶಾಂತಿನಗರ ನಿಲ್ದಾಣದಿಂದ ತಮಿಳುನಾಡು ಮತ್ತು ಕೇರಳ ಕಡೆಗೆ ಬಸ್ ಕಾರ್ಯಾಚರಣೆ ನಡೆಸಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಆನ್‌ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡಲು ಅವಕಾಶವಿರುತ್ತೆ. 5ಕ್ಕೂ ಹೆಚ್ವು ಪ್ರಯಾಣಿಕರು ಮುಂಗಡ ಟಿಕೆಟ್ ಬುಕಿಂಗ್ ಮಾಡಿದಲ್ಲಿ 5% ರಿಯಾಯಿತಿ. ಹೋಗುವ ಹಾಗೂ ಬರುವ ಟಿಕೆಟ್ ಒಟ್ಟಿಗೆ ಖರೀದಿಸಿದಲ್ಲಿ 10% ರಿಯಾಯಿತಿ ನೀಡಲಾಗುವುದು. ರಾಜ್ಯದ ಹಾಗೂ ಅಂತರಾಜ್ಯದ ವಿವಿಧ ಸ್ಥಳಗಳಿಂದ ದಿನಾಂಕ 31ರಂದು ಆಗಮಿಸುವ ಪ್ರಯಾಣಿಕರಿಗೂ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

9:21 AM IST:

ರೌಡಿಗಳ ಮನೆಗಳ ಮೇಲೆ ಪೊಲೀಸರ ದಾಳಿ. ಉತ್ತರ ವಿಭಾಗ ಪೊಲೀಸರಿಂದ ದಾಳಿ. ಕಳೆದ ಎರಡು ದಿನಗಳ ಹಿಂದೆ ಪಶ್ಚಿಮ ವಿಭಾಗದ ಪೊಲೀಸರು ದಾಳಿ ಮಾಡಿದ್ದರು‌. ನಂದಿನಿಲೇಔಟ್, ಯಶಂವತಪುರ, ಆರ್‌ಟಿ ನಗರ, ಜೆ.ಸಿ ನಗರ, ರಾಜ ಗೋಪಾಲ ನಗರ, ಮಹಾಲಕ್ಷ್ಮೀ ಲೇಔಟ್, ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಗಣಪತಿ ಹಬ್ಬ, ಬಿಬಿಎಂಪಿ ಎಲೆಕ್ಷನ್ ಸನಿಹದಲ್ಲಿದೆ. ಇದ್ರಿಂದ  ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಇರಬೇಕು‌. ಕಾನೂನು ಸುವ್ಯವಸ್ಥೆ ಹಾಳಾಗಬಾರದು. ಈ ಬಗ್ಗೆ ರೌಡಿ ಶೀಟರ್ಸ್‌ಗಳಿಗೆ ಎಚ್ಚರಿಕೆ ನೀಡಿರುವ ಪೊಲೀಸರು. ಪೀಣ್ಯ ಪೊಲೀಸರು ತಲೆಮರೆಸಿಕೊಂಡಿದ್ದ ರೌಡಿಗಳ ಮನೆ ಮೇಲೆ ದಾಳಿ. ಒಬ್ಬೊಬ್ಬ ಸಬ್ ಇನ್ಸ್ ಪೆಕ್ಟರ್‌ಗೆ ನಾಲ್ಕು ಮಂದಿ ಸಿಬ್ಬಂದಿಯಂತೆ ಟೀಮ್ ರಚನೆ. ವಾರೆಂಟ್ ಕಾನ್ಸ್ ಟೇಬಲ್ ಜೊತೆ ರೈಡ್. ಎರಡು ಮೂರು ರೋಡ್‌ಗಳನ್ನು ಒಬೊಬ್ಬ ಪಿಎಸ್‌ಐ ಕವರ್ ಮಾಡಲು ಸೂಚನೆ. ಪೀಣ್ಯ ಠಾಣಾ ವ್ಯಾಪ್ತಿಯ 16  ಮಂದಿ ರೌಡಿಗಳ ಮನೆ ಮೇಲೆ ದಾಳಿ. ಪೂರ್ವಾಪರ ಪರಿಶೀಲನೆ ನಡೆಸುತ್ತಿರುವ ಪೊಲೀಸರು. ದಾಳಿ ವೇಳೆ ಕೆಲವರ ಮನೆಯಲ್ಲಿ ಮಾರಾಕಾಸ್ತ್ರ ವಶ.

9:16 AM IST: