ಮಳೆ ಅಭಾವ: ಫಲಕ್ಕೆ ಬಂದ ಅಡಕೆ ಗಿಡಗಳನ್ನ ಕಡಿದುಹಾಕಿದ ರೈತ

By Ravi Janekal  |  First Published May 13, 2024, 6:01 PM IST

ಮಳೆ ಕೈಕೊಟ್ಟ ಹಿನ್ನೆಲೆ ರೈತನೋರ್ವ ಫಲಕ್ಕೆ ಬಂದಿದ್ದ ಅಡಿಕೆ ಗಿಡಗಳನ್ನ ಕಡಿದುಹಾಕಿದ ಘಟನೆ ದಾವಣಗೆರೆ ಜಿಲ್ಲೆಯ ಮಾಯಕೊಂಡ ಹೋಬಳಿಯ ಹೊನ್ನಾಯಕನಹಳ್ಳಿಯಲ್ಲಿ ನಡೆದಿದೆ.


ದಾವಣಗೆರೆ (ಮೇ.13): ಈ ಬಾರಿ ರಾಜ್ಯದಲ್ಲಿ ಕಂಡುಕೇಳರಿದ ಭೀಕರ ಬರಗಾಲದಿಂದ ಕುಡಿಯಲು ನೀರಿಲ್ಲ, ಬೆಳೆಗಳಿಗೂ ನೀರಿಲ್ಲದಂತಾಗಿದೆ. ಮಳೆ ಅಭಾವದಿಂದ ದಾವಣಗೆರೆ ರೈತರು ಬೆಳೆ ಉಳಿಸಿಕೊಳ್ಳಲಾಗದೆ ಕಂಗಾಲಾಗಿದ್ದಾರೆ.

ಮಳೆ ಕೈಕೊಟ್ಟ ಹಿನ್ನೆಲೆ ರೈತನೋರ್ವ ಫಲಕ್ಕೆ ಬಂದಿದ್ದ ಅಡಿಕೆ ಗಿಡಗಳನ್ನ ಕಡಿದುಹಾಕಿದ ಘಟನೆ ದಾವಣಗೆರೆ ಜಿಲ್ಲೆಯ ಮಾಯಕೊಂಡ ಹೋಬಳಿಯ ಹೊನ್ನಾಯಕನಹಳ್ಳಿಯಲ್ಲಿ ನಡೆದಿದೆ.

Latest Videos

undefined

ತುಮಕೂರು: ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ!

ಬಸವರಾಜಪ್ಪ ಎಂಬ ರೈತ ಜಮೀನಿನಲ್ಲಿ ಅಡಕೆ ಬೆಳೆ ಬೆಳೆದಿದ್ದ. ಆದರೆ ಈ ಬಾರಿ ಬರಗಾಲ ಆವರಿಸಿ ಅಡಕೆ ಬೆಳೆಗಳಿಗೆ ನೀರು ಒದಗಿಸಲಾಗದೆ ಪರದಾಡುತ್ತಿದ್ದ ಬಸವರಾಜಪ್ಪ. ಸರಿಯಾದ ಸಮಯಕ್ಕೆ ಮಳೆ ಬಂದಿದ್ದಾರೆ ಇನ್ನೊಂದೇ ವರ್ಷದಲ್ಲಿ ಅಡಿಕೆ ತೋಟ ಫಲ ನೀಡಬೇಕಿತ್ತು. ಆದರೆ ಮಳೆಯ ಅಭಾವ ಜೊತೆಗೆ ಅಂತರ್ಜಲ ಕುಸಿತದ ಹಿನ್ನೆಲೆ ಲಕ್ಷಾಂತರ ರೂ. ಖರ್ಚು ಮಾಡಿ ಜಮೀನಿನಲ್ಲಿ 10ಕ್ಕೂ ಹೆಚ್ಚು ಬೋರ್‌ವೆಲ್ ಕೊರೆಸಿದರೂ ಹನಿ ನೀರು ಕಾಣದೇ ನಷ್ಟ ಅನುಭವಿಸಿದ್ದ ರೈತ ಬಸವರಾಜಪ್ಪ. ಇದರಿಂದ ರೋಸಿಹೋಗಿ ಕೊನೆಗೆ ತಾನೇ ಶ್ರಮದಿಂದ ಬೆಳೆದ ಅಡಿಕೆ ಗಿಡಗಳನ್ನು ಕಡಿದು ಹಾಕಿರುವ ರೈತ, ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ತವರು ಜಿಲ್ಲೆಯಲ್ಲೇ ಹರಿವು ನಿಲ್ಲಿಸಿದ ಕಾವೇರಿ; ದುಬಾರೆ ಸಾಕಾನೆಗಳಿಗೆ ಕುಡಿಯಲು, ಸ್ನಾನಕ್ಕೂ ನೀರಿಲ್ಲ!

ಒಂದೆಡೆ ಮಳೆ ಕೊರತೆ, ನೀರಿನ ಅಭಾವದಿಂದ ರೈತರ ಕಂಗಾಲಾಗಿ ಶ್ರಮವಹಿಸಿ ಬೆಳೆ ಬೆಳೆಗಳನ್ನು ನಾಶ ಮಾಡುವ ಪರಿಸ್ಥಿತಿ ರೈತರಿಗೆ ಬಂದಿದೆ. ಇನ್ನೊಂದೆಡೆ ಸರಕಾರದಿಂದ ಯಾವುದೇ ಪರಿಹಾರ ಸಿಗದಿರುವುದು ದುರ್ದೈವ. ಬರ ಪರಿಹಾರ ಘೋಷಣೆಯಾಗಿದ್ದಷ್ಟೆ ಬಂತು, ರೈತರಿಗೆ ಈವರೆಗೆ ಯಾವುದೇ ಪರಿಹಾರ ತಲುಪಿಲ್ಲ. ರಾಜ್ಯ-ಕೇಂದ್ರದ ನಡುವಿನ ಮುಸುಕಿನ ಗುದ್ದಾಟದಲ್ಲಿ ರೈತರ ಬದುಕು ಮೂರಾಬಟ್ಟೆಯಾಗಿರುವುದಂತೂ ಹೌದು. 
 

click me!